Friday, 7 December 2012

ಕಾವೇರಿ ನೀರಿನ ಚಿಂತನೆ - ೨


"ನೀರು ಬಿಡಿ ನಮ್ಮ ಹಕ್ಕಿನದು" ಇದು ತಮಿಳುನಾಡಿನ ವಾದ. ಆದರೆ "ನೀರಿಲ್ಲ ಬಿಡಲಾಗದು" ಇದು ಕರ್ನಾಟಕದ ವಾದ. ವಿಚಾರದ ಜಗಳ ಕೇಂದ್ರ ಸರ್ಕಾರಕ್ಕೆ, ಸುಪ್ರೀಂಕೋರ್ಟಿಗೆ ತಲುಪಿತು. ನೀರು ಬಿಡಿ ಎಂದು ಕೇಂದ್ರ ಸರ್ಕಾರ ಆದೇಶಿಸಿತು. ಸುಪ್ರೀಂಕೋರ್ಟ್ ಆದೇಶ ಪಾಲಿಸಿ! ಎಂದಿತು. ಕರ್ನಾಟಕ ಸರ್ಕಾರ ನೀರು ಬಿಟ್ಟಿತು. ಹೊತ್ತಿ ಉರಿಯಿತು ಕರ್ನಾಟಕ. ರೈತರು ದೊಂಬಿ, ಗಲಾಟೆ, ದಂಗೆಯೆದ್ದರು. ಸಂಬಂಧಿ ಬಂದೋಬಸ್ತು ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ ಇತ್ಯಾದಿಗಳಲ್ಲಿಯೇ ಕಾಲ ಕಳೆಯಿತು ಸರ್ಕಾರ. ಒಟ್ಟಾರೆ ಅಭಿವೃದ್ಧಿ ಕೆಲಸಗಳೆಲ್ಲಾ ನಿಂತು ಹೋಯ್ತು. ಈಗ್ಗೆ ವರ್ಷದಿಂದ ಸರ್ಕಾರದ ಗಲಾಟೆ, ವಿರೋಧಪಕ್ಷದ ಗಲಾಟೆ, ಪಕ್ಷದೊಗಿನ ಗಲಾಟೆ, ನಾನಾ ಕುತಂತ್ರ, ಭಿನ್ನತೆ, ಕುಹಕ, ಅಧಿಕಾರ ಹಸ್ತಾಂತರ, ಬದಲಾವಣೆ, ವಿಚಾರಗಳಿಗಾಗಿಯೇ ವ್ಯಯವಾದ ಕಾಲ ಹೆಚ್ಚು. ಬರೇ ಆಡಳಿತ ನಾಟಕವಾಯ್ತಷ್ಟೆ. ಉಪಯೋಗವಿಲ್ಲ.

ಮೊದಲಾಗಿ ಅಂತರರಾಜ್ಯ ವಿವಾದಗಳು ಹೇಗೆ ಹುಟ್ಟಿದವು ಚಿಂತಿಸೋಣ. ಮೊದಲಾಗಿ ವಿವಾದ ಸ್ವಾತಂತ್ರ್ಯ ಪೂರ್ವದ್ದು. ಬ್ರಿಟಿಷರ ದಬ್ಬಾಳಿಕೆಯ ಒಪ್ಪಂದಗಳು, ಇಲ್ಲಿನ ಸ್ಥಾನಿಕ ಅರಸರ ಮೇಲೆ ಹಿಡಿತವಿಡುವ ಉದ್ದೇಶದ, ಒಪ್ಪಂದ ಮುರಿದಲ್ಲಿ ಅರಸೊತ್ತಿಗೆಯನ್ನೇ ಸ್ವಾಧೀನಪಡಿಸಿಕೊಳ್ಳುವ ಹುನ್ನಾರದ ಒಪ್ಪಂದ. ಈಗಲೂ ಚಾಲ್ತಿಯಿಡುವುದರಲ್ಲಿ ಏನಿದೆ ಸಾರ್ಥಕತೆ? ಬ್ರಿಟಿಷರಿಗೆ ಅದು ಕಾಲದಲ್ಲಿ ಬೇಕಿತ್ತು. ಆದರೆ ಈಗಿನ ಸ್ವತಂತ್ರ ಭಾರತದ ಸರ್ಕಾರಕ್ಕೆ ಅದು ಅನಿವಾರ್ಯವೆ? ಭಾಷಾವಾರು ಪ್ರಾಂತ್ಯ ವಿಂಗಡಣೆ ಮಾಡುವಾಗಲೇ ಭೌಗೋಳಿಕ ಲಕ್ಷಣ ಆಧರಿಸಿಯೇ ರಾಜ್ಯ ವಿಂಗಡಣೆ ಮಾಡಬಹುದಿತ್ತು. ಆದರೆ ಈಗ ವಿಂಗಡಿಸಲ್ಪಟ್ಟ ರಾಜ್ಯಭಾಗದಲ್ಲಿ ಇರುವ ಖನಿಜ, ಬೆಳೆ, ಅರಣ್ಯೋತ್ಪಾದನೆ, ಮಳೆ, ಗಾಳಿ, ವ್ಯವಹಾರ ಎಲ್ಲವೂ ಅಲ್ಲಿಯ ಪ್ರಜೆಗಳ ಬಳಕೆಗೇ ಆದ್ಯತೆಯಲ್ಲವೆ? ಅದು ಬಿಟ್ಟು ಒಂದು ರಾಜ್ಯದಲ್ಲಿರುವ ಖನಿಜದ ಮೇಲೆ ಇನ್ನೊಂದು ರಾಜ್ಯಕ್ಕೆ ಹಕ್ಕು ಎಂದಾದರೆ, ಒಂದು ರಾಜ್ಯದಲ್ಲಿ ಬೀಳುವ ಮಳೆಗೆ ಇನ್ನೊಂದು ರಾಜ್ಯಕ್ಕೆ ಹಕ್ಕು ಎಂದಾದರೆ ರಾಜ್ಯದ ಜನತೆ ಏನು ಮಾಡಬೇಕು? ಮಳೆ ಸುಮ್ಮನೆ ನೀರು ತಂದು ಸುರಿಯುವುದಿಲ್ಲ. ಅದು ಕೆಲವು ನಷ್ಟಕಷ್ಟಗಳನ್ನುಂಟು ಮಾಡುತ್ತದೆ. ಹಾಗೇ ಅದಕ್ಕೆ ಬೇಕಾದ ಪರಿಸರವನ್ನೂ ಒದಗಿಸಬೇಕಾಗುತ್ತದೆ. ಇವೆಲ್ಲಾ ಇದ್ದಲ್ಲಿ ಮಳೆ. ಇದೆಲ್ಲವುದಕ್ಕೂ ಕರ್ನಾಟಕದ ಪ್ರಜೆ ಜವಾಬ್ದಾರ. ಆದರೆ ನೀರಿಗೆ ಮಾತ್ರಾ ತಮಿಳುನಾಡು ಹಕ್ಕುದಾರವೆನ್ನುವುದು ನ್ಯಾಯವೇ? ಮಳೆ ಇರಲಿ, ಬಿಡಲಿ ತಮಿಳುನಾಡಿಗೆ ಇಷ್ಟು ನೀರು ಬಿಡಿ ಎಂಬ ವಾದವು ಎಷ್ಟು ಸಮಂಜಸ ಅರ್ಥ ಮಾಡಿಕೊಳ್ಳಿರಿ.

ಒಂದು ವಿಚಾರ ಮುಖ್ಯವಾಗಿ ಗಮನಿಸಿ. ಒಂದು ಮಳೆಗಾಲ ಆರಂಭವಾದಾಗ ಜಡಿಮಳೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನೂ ಮಾಡಲಾಗದ ಸಂತ್ರಸ್ತರು ಕನ್ನಡಿಗರು. ಮಳೆಯಿಂದಾದ ನೆರೆ, ನಷ್ಟ, ಕಷ್ಟ, ಜೀವಹಾನಿ, ಆಸ್ತಿ-ಪಾಸ್ತಿ ನಷ್ಟ ಕನ್ನಡಿಗರದ್ದು. ಮಳೆ ಬರಲು ಸಹಕರಿಸುವ ಮಳೆಕಾಡು ನಿರ್ಮಾಣ, ಅದರ ಸಂರಕ್ಷಣೆ ಕನ್ನಡಿಗರದ್ದು. ಮನೆ, ಸೇತುವೆ, ರಸ್ತೆ ಇತ್ಯಾದಿ ಮಳೆ ಕಾರಣದಿಂದಾಗಿ ಹಾಳಾದರೆ ಅದು ಕನ್ನಡಿಗರ ತೆರಿಗೆಯನ್ನವಲಂಬಿಸಿಯೇ ಪರಿಹಾರ. ಆದರೆ ಮಳೆಯಿಂದಾಗಿ ನದಿಯಲ್ಲಿ ನಂತರ ಹರಿಯುವ ನೀರು ತಮಿಳುನಾಡಿನದ್ದು, ಎಂದಾದರೆ ಕನ್ನಡಿಗರಿಗೆ ಏನು? ಉತ್ತರ ಕೊಡುವವರು ಯಾರು? ಮೇಲ್ಕಂಡ ನಷ್ಟಗಳನ್ನೂ ಅದೇ ನೀರನ್ನು ಬಳಸಿ ಬೆಳೆ ತೆಗೆದು ಸಮತೋಲನ ಮಾಡಿಕೊಳ್ಳಲು ಕನ್ನಡಿಗರಿಗೆ ಅವಕಾಶವಿಲ್ಲವೆಂತಾದರೆ ಯಾವ ನ್ಯಾಯ

ಹಂಚಿ ತಿನ್ನುವ ಸೂತ್ರ ಒಳ್ಳೆಯದೆ. ಆದರೆ ಇರಲಿ ಇಲ್ಲದಿರಲಿ ಅವರಿಗಷ್ಟು ಕೊಡಿ. ನಂತರ ಇದ್ದರೆ ನೀವು ಬಳಸಿ ಎಂಬ ಸೂತ್ರ ಖಂಡಿತಾ ನ್ಯಾಯಪರವಲ್ಲ. ಇದು ಕನ್ನಡಿಗರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ದ್ರೋಹವೇ ಸರಿ. ಆಯಾಯ ವರ್ಷಕ್ಕೆ ಆ ವರ್ಷದ ಮಳೆ ಆಧರಿಸಿ, ಇಲ್ಲಿನ ನೀರಿನ ಪ್ರಮಾಣ ಆಧರಿಸಿ ಪ್ರತೀ ವರ್ಷವೂ ಸ್ವಲ್ಪ ಪ್ರಮಾಣದ ನೀರನ್ನು ತಮಿಳ್ನಾಡಿಗೆ ಬಿಡಲು ಕೇಂದ್ರ ಸರ್ಕಾರ ಆದೇಶಿಸಬೇಕೇ ವಿನಃ ಈ ರೀತಿಯ ಬ್ರಿಟಿಷರ ದಬ್ಬಾಳಿಕೆಯ ಕಾನೂನು ಸರಿಯಲ್ಲ. ಇಂತಹಾ ಎಷ್ಟೋ ಕಾನೂನುಗಳು ಈಗಲೂ ಬ್ರಿಟಿಷರ ಆಡಳಿತದ ಕುರುಹಾಗಿ ಉಳಿದು ಹೋಗಿದೆ. ಅದರಿಂದಾಗಿ ಈಗ ಭಾರತದ ಪ್ರಜೆ ವಿದೇಶದಲ್ಲೇ ಬದುಕಲು ಆಶಿಸುತ್ತಿದ್ದಾನೆ. ಹಾಗಾದರೆ ಮುಂದಿನ ಸ್ಥಿತಿ ಏನಾಗಬಹುದು ಚಿಂತಿಸಿದ್ದೀರಾ ಅರ್ಥಶಾಸ್ತ್ರಜ್ಞರೇ? ಆ ಬಗ್ಗೆ ಕೆಲ ಉದಾಹರಣೆ ಗಮನಿಸಿ.

ಮೊದಲಾಗಿ ರಾಜ್ಯ ವಿಂಗಡಣೆ ಪೂರ್ವದ ವಿಚಾರ. ದಕ್ಷಿಣ ಭಾರತದಲ್ಲಿ ಹಲವು ತುಂಡರಸರಿದ್ದರು. ಬ್ರಿಟಿಷರಿಗೆ ಕಪ್ಪ ಕಟ್ಟಿಕೊಂಡು ಸ್ವತಂತ್ರವಾಗಿಯೇ ಆಳುತ್ತಿದ್ದರು. ಅವರ ರಾಜ್ಯವನ್ನು ಬ್ರಿಟಿಷರು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಮತ್ತು ಹೇಳಿಕೊಳ್ಳುವಂತಹಾ ಲಾಭದಾಯಕವೂ ಅಲ್ಲ. ಹಾಗಾಗಿ ಬ್ರಿಟಿಷರು ಕೃತಕವಾಗಿ ಭಾರತೀಯತೆಯನ್ನು ಗೌರವಿಸುತ್ತೇವೆ ಎಂಬ ನಾಟಕ ಮಾಡಿ ಕೆಲ ವಿಶಿಷ್ಟ ಒಪ್ಪಂದವನ್ನು ಆಳರಸರಲ್ಲಿ ಮಾಡಿಕೊಂಡು ಒಂದು ರೀತಿಯ ಗುಲಾಮರಂತೆ ನಡೆಸಿಕೊಳ್ಳುತ್ತಾ ಆಳಿದರು. ಅದರಲ್ಲಿ ಮೈಸೂರು ಸಂಸ್ಥಾನವೂ ಒಂದು. ಅದರ ಸೀಮೆಯ ಸುತ್ತೆಲ್ಲಾ ಬ್ರಿಟಿಷ್ ಆಳ್ವಿಕೆ. ತೀರಾ ಆಗಿನ ಕಾಲದ ಬರಡು ಭೂಮಿಯೇ ಹೆಚ್ಚಾದ ಪ್ರದೇಶವನ್ನು ಹೊಂದಿದ ಭಾಗ ಮೈಸೂರು. ಇಡೀ ರಾಜ್ಯದಲ್ಲಿ ಕಾವೇರಿ ಹರಿಯುತ್ತಿದ್ದರೂ ಅಂತಹಾ ವಿಶೇಷ ನೀರಾವರಿ ಸೌಲಭ್ಯವಿಲ್ಲ. ಹೆಚ್ಚು ಭಾಗ ಗುಡ್ಡಗಾಡು ಪ್ರದೇಶದಲ್ಲಿಯೇ ಹರಿಯುತ್ತದೆ ಕಾವೇರಿ. ಆದರೆ ಯೋಜಿತ ನೀರಾವರಿ ಅಭಿವೃದ್ಧಿ ಪಡಿಸಿದಲ್ಲಿ ಉತ್ತಮಭೂಮಿ. ಆದರೆ ಅದಕ್ಕೆ ಬ್ರಿಟಿಷರ ಅನುಮೋದನೆ ಬೇಕು. ಬ್ರಿಟಿಷರು ತುಂಡುರಾಜರನ್ನು ಬಗ್ಗು ಬಡಿಯುವುದಕ್ಕೆ ಬಳಸುತ್ತಿದ್ದ ಅಸ್ತ್ರಗಳಿವು. ಆಗಿನ ಕಾಲದಲ್ಲಿ ವಿಶ್ವೇಶ್ವರಯ್ಯನವರು ಕೆ.ಆರ್.ಎಸ್ ಯೋಜನೆಯ ಅನುಮೋದನೆಯನ್ನು ಪಡೆಯಲು ಹೋರಾಡಿದ್ದು ಸ್ವಲ್ಪವಲ್ಲ. ಆದರೂ ಕೊನೆಗೂ ಸಿಕ್ಕಿದ್ದು ಎಲ್ಲೋ ಸ್ವಲ್ಪ ನೀರಿನ ಬಳಕೆಯ ಹಕ್ಕು. 

ಆದರೆ ಆ ಕಾಲದಲ್ಲಿ ವಿಪುಲ ಮಳೆ ಇದ್ದ ಕಾರಣ ಕೊರತೆ ಇರಲಿಲ್ಲ. ಆದರೆ ಈಗ ಮಳೆ ಪ್ರಮಾಣ ಕಡಿಮೆಯಾಗಿದೆ. ಹಿಂದಿನ ಒಪ್ಪಂದದಂತಾದರೆ ಕನ್ನಡನಾಡಿಗೆ ದ್ರೋಹವಲ್ಲವೆ? ಅಂದಿನ ಮದ್ರಾಸ್ ಸರ್ಕಾರದ ಬ್ರಿಟಿಷರ ಸೌಲಭ್ಯಕ್ಕೆ ಕನ್ನಂಬಾಡಿಯಲ್ಲಿ ಕಟ್ಟೆ ಕಟ್ಟಲು ಅನುಮತಿ ದೊರೆಯಿತೇ ವಿನಃ ಮೈಸೂರು ರಾಜ್ಯದ ಕನ್ನಡಿಗರಿಗೆ ಸಿಕ್ಕಿದ್ದು ಅಷ್ಟೆ ಆದರೂ ಮೈಸೂರಿನ ಜನ ಸಂಭಾವಿತರು ಅಷ್ಟರಲ್ಲೇ ತೃಪ್ತರಾದರು. ಆದರೆ ಈಗ ಮಳೆ ಕಡಿಮೆಯಾದಾಗಲೂ ಆ ಕಾನೂನೇ ಚಾಲ್ತಿಯಲ್ಲಿರಬೇಕೆಂದರೆ ಯಾವ ನ್ಯಾಯ? ಪ್ರತೀವರ್ಷ ಆ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆ ಎಷ್ಟು? ನದಿಯಿಂದ ಹರಿದು ಹೋಗುವ ನೀರೆಷ್ಟು? ಅದರಲ್ಲಿ ಕರ್ನಾಟಕಕ್ಕೆ ಎಷ್ಟು? ಕೇರಳಕ್ಕೆ ಎಷ್ಟು? ತಮಿಳ್ನಾಡಿಗೆ ಎಷ್ಟು? ಪುದುಚೆರಿಗೆ ಎಷ್ಟು? ಮಳೆ ಆಧರಿಸಿ ನಿರ್ಣಯಿಸಬೇಕೇ ವಿನಃ ಪ್ರತೀವರ್ಷ ಇಷ್ಟು ನೀರು ಬಿಡಬೇಕೆಂದು ಒಂದು ಪ್ರಮಾಣ ನಿಗದಿಗೊಳಿಸುವುದು ಸೂಕ್ತವಲ್ಲ

ಹಾಗೇ ಮಳೆ ಪ್ರದೇಶ ಮುಂಗಾರು ಕೇರಳ ಮತ್ತು ಕರ್ನಾಟಕ ಈ ರಾಜ್ಯಗಳಿಗೆ ಬಿದ್ದ ಮಳೆಯಲ್ಲಿ ಅದರ ಕುಡಿಯುವ ನೀರು ಇತ್ಯಾದಿ ಆದ್ಯತೆ ಗಮನಿಸಿ ಅನುಸರಿಸಿ ನಂತರ ಹರಿಯುವ ನೀರಿನ ಪ್ರಮಾಣ ನಿರ್ಧರಿಸಬೇಕು. ರೈತಾಪಿ ವರ್ಗಕ್ಕೆ ಕನ್ನಡನಾಡಿನಲ್ಲಿ ಕೇರಳದಲ್ಲಿ ಹಿಂಗಾರು ಮಳೆ ತೀರಾ ಕಡಿಮೆ. ಆದರೆ ತಮಿಳ್ನಾಡು ಪುದುಚೆರಿಗಳಿಗೆ ಹಿಂಗಾರು ಮಳೆಯೂ ಇದೆ. ಹಾಗಾಗಿ ಕರ್ನಾಟಕ + ಕೇರಳಕ್ಕೆ ಪ್ರಥಮ ಆದ್ಯತೆ ಇಟ್ಟು ತೀರ್ಮಾನ ಕೈಗೊಳ್ಳಬೇಕೇ ವಿನಃ ಒಟ್ಟಾರೆಯಲ್ಲ. ಇದನ್ನು ಇನ್ನಾದರೂ ಕೇಂದ್ರ ಸರ್ಕಾರ ಅರಿತು ಸೂಕ್ತ ಪರಿಹಾರ ರೂಪಿಸಿದಲ್ಲಿ ಸಾರ್ಥಕವಾದೀತೆಂದು ಅಭಿಪ್ರಾಯ. ಇನ್ನು ವೇದ ಏನು ಹೇಳುತ್ತದೆ ನೋಡೋಣ.


ಈ ದೇಶದಲ್ಲಿ ಹುಟ್ಟಿದ ಮಾನವರೆಲ್ಲಾ ಸಮಾನರು. ಸಮಾನ ಮನಸ್ಕರು. ಸಮಾನ ನೀತಿವಂತರು. ಸಮಾನ ಉದ್ದೇಶ ಉಳ್ಳವರು. ಲೋಕದ ಚರಾಚರಗಳೂ ಒಂದಲ್ಲಾ ಒಂದು ಕಾರಣಕ್ಕೆ ನಮಗೆ ಬಂಧು ಸಮಾನರು. ಅವರೆಲ್ಲರ ಬದುಕು ಸುಖ, ಸಹಜ, ನೆಮ್ಮದಿಯಾಗಿರುವತ್ತ ನಮ್ಮ ಜೀವನವಿರಲಿ ಎಂದು ಹಾರೈಸುವ ಬದುಕು ವೇದ ಹೇಳುತ್ತದೆ.

ಮಾನವ ಜೀವಿಗಳಾದ ನಾವು ನಮ್ಮ ಬುದ್ಧಿಮತ್ತತೆಯಿಂದ ಸಕಲ ಜೀವಲೋಕದಲ್ಲಿ ಅತ್ಯಂತ ಬಲಶಾಲಿಗಳೂ, ಸದೃಢರೂ, ಇಡೀ ಜೀವಜಗತ್ತನ್ನು ಜಯಿಸಿದವರೂ ಆಗಿರುತ್ತೇವೆ. ಆ ಕಾರಣದಿಂದಾಗಿ ನಾವು ಸಹಜ ಸ್ವಾಭಾವಿಕ ದಯಾಪರರಾಗಬೇಕಿದೆ. ನಮ್ಮೆಲ್ಲಾ ಶಕ್ತಿ, ಯುಕ್ತಿ, ಸಂಪತ್ತು, ವಸ್ತು, ಧನ, ಅನ್ನಭೋಗಗಳೂ ನಮ್ಮ ಸಹಜೀವಿಗಳಿಗೆ ವಿನಿಯೋಗಿಸುತ್ತಾ ಅವುಗಳ ಏಳ್ಗೆಗೆ ದುಡಿಯಬೇಕಿದೆ. ಅದಕ್ಕಾಗಿ ನಮಗೆ ದೀರ್ಘಾಯುಷ್ಯ ಬೇಕಿದೆ. ಅದನ್ನೂ ಸಾಧಿಸಿಕೊಳ್ಳಬಲ್ಲೆವು. ಸರ್ವಸಮಾನತೆಯನ್ನು ಲೋಕಮುಖಕ್ಕೆ ಬಿಂಬಿಸುತ್ತಾ ದಯಾಪರನಾಗಿ ಎಲ್ಲಾ ಜೀವಿಗಳಲ್ಲೂ ಆನಂದದಲ್ಲಿ ಪರಮಾನಂದ ರೂಪಿಯಾದ ಭಗವಂತನನ್ನು ಕಾಣುತ್ತಾ ಸಕಲ ಲೋಕಪ್ರಿಯನಾಗಿ ವಿಶ್ವಾಮಿತ್ರರಾಗಬೇಕಿದೆ. ಅದಕ್ಕಾಗಿ ನಮಗೆ ಇನ್ನೂ ಹೆಚ್ಚಿನ ಬಲ, ಶಕ್ತಿ, ಬುದ್ಧಿತೀಕ್ಷ್ಣತೆ, ವಿಚಕ್ಷಣಜ್ಞಾನ, ಪರಮಾತ್ಮ ಪ್ರೀತಿ, ಐಶ್ವರ್ಯ, ತೇಜಸ್ಸು, ಓಜಸ್ಸು ಪಡೆದು ಪ್ರಜಾಪ್ರಿಯನಾದ ಪ್ರಜಾಪತಿಯಾಗುತ್ತೇನೆ. ಸಕಲ ಲೋಕದ ದ್ವಿಪದಿ, ಚತುಷ್ಪದ್ಯಾದಿ ಸಹಸ್ರಪದಿಯವರೆಗೆ ಎಲ್ಲಾ ಜೀವಿ ಕ್ರಿಮಿಕೀಟಗಳಿಗೂ ನಾನು ಪ್ರಿಯನಾಗಲಿ. ಅವುಗಳ ಹೃದಯದಲ್ಲಿ ನನಗೆ ಪ್ರೇಮ ಪೂರ್ವಕ ಸ್ಥಾನ ಸಿಗಲಿ. ಅದಕ್ಕಾಗಿ ನನ್ನ ಈ ಮಾನವ ಜೀವನದ ಬಿದ್ಧಿ, ಬಲ, ಓಜ, ತೇಜಗಳನ್ನು ವಿನಿಯೋಗಿಸುತ್ತೇನೆ. ಇದು “ಬದುಕು”. ಇಂತಹಾ ಬದುಕನ್ನು ಕಲಿಸುವ ವೇದವಿಧ್ಯೆ ಕಡೆಗಣಿಸಲ್ಪಟ್ಟಿದೆ.

ವಿದೇಶೀ ಬಂಡವಾಳಶಾಹಿ ವಿದ್ಯೆ ನರಕಸದೃಶ. “ಪ್ರೀತಿ, ಪ್ರೇಮ, ವಿಶ್ವಾಸ, ದಯೆ, ಕ್ಷಮೆ, ದಾನ, ಔದಾರ್ಯ, ಸಹಿಷ್ಣುತೆ, ಪಾಪ-ಪುಣ್ಯಗಳ ಪರಿಚಯವಿಲ್ಲದ ವಿದ್ಯೆ ವಿಧ್ಯೆಯೇ ಅಲ್ಲ. ಅದನ್ನು ಅರಿಯದ ಜೀವನವು ಜೀವನವೇ ಅಲ್ಲ. ಬದುಕು ಬದುಕೇ ಅಲ್ಲ. ವೇದ ಹೇಳಿದ ಇಂತಹಾ ಮಾನವೀಯ ಬದುಕಿನಲ್ಲಿ ಮಾತ್ರಾ ಸುಖವಿದೆ, ಆನಂದವಿದೆ, ಜೀವನದರಿವಿದೆ. ಅರಿವು ಆತ್ಮಜ್ಞಾನವನ್ನು ಹುಟ್ಟಿಸಬಲ್ಲದು. ಆತ್ಮಜ್ಞಾನವೇ ಬ್ರಹ್ಮದರಿವು, ಆ ಬ್ರಹ್ಮವೇ ಸತ್ಯ, ಈ ಲೋಕವೆಲ್ಲಾ ಮಿಥ್ಯ, ನಶ್ವರ”. “ಇದು ವೇದಮಾರ್ಗ”.

ಇಂತಹಾ ವೇದಾದರ್ಶ ಹೊಂದಿದ ನಮ್ಮ ಪುರಾತನ ಕುಟುಂಬ ಪದ್ಧತಿಯನ್ನು ನಾಶಪಡಿಸಿದವರೇ ಬ್ರಿಟಿಷರು. ನಮ್ಮಲ್ಲಿ ಅಜ್ಞಾನ ತುಂಬಿ ಶಿಕ್ಷಣ ನೀತಿ ಕೆಡಿಸಿ ರಸಹೀನ ಬದುಕೇ, ಅರ್ಥವಿಲ್ಲದ ಬದುಕೇ, ಬದುಕಿಯೂ ಆದರ್ಶವೆಂದೂ ಬಿಂಬಿಸಿ ಭಾರತೀಯರನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಹಾಗಾಗಿಯೇ ನಮ್ಮಲ್ಲಿ ಹುಟ್ಟುತ್ತಿದೆ ಈ ನೀರಿನ ಜಗಳ, ಹೊಡೆದಾಟ, ನಾವು ಕನ್ನಡಿಗರು, ತಮಿಳರು, ಆಂಧ್ರರು, ಕೇರಳೀಯರೆಂಬ ಭೇದ ಭಾವ. ನಾವೆಲ್ಲ ಭಾರತೀಯರು. ಈ ಭಾರತದೇಶದಲ್ಲಿ ಎಲ್ಲಿಯೇ ಅನ್ನ ಬೆಳೆದರೆ ಅದು ಅನ್ನವೇ, ಜ್ಞಾನವೇ, ಜೀವಿಗೆ ಆಹಾರವೇ ಎಂಬ ಸತ್ಯದರಿವು ಮುಚ್ಚಿ ಭಾಷಾನೀತಿಯೆಂಬ ಗೋಣಿ ತಾಟಿನಲ್ಲಿ ಮರೆ ಮಾಡಿದೆ ರಾಜಕಾರಣ. ಅಯ್ಯಾ ಭಾರತೀಯರೇ! ಈ ಭ್ರಷ್ಟರಾಜಕಾರಣಿಗಳ ಮೋಸಕ್ಕೆ ಬಲಿಯಾಗಬೇಡಿ. ಮಳೆ, ಬೆಳೆ, ಕೇಂದ್ರ ಸರ್ಕಾರವೋ, ಸುಪ್ರೀಂಕೋರ್ಟೋ ಕೊಡುವುದಿಲ್ಲ. “ದೇವರು ಕೊಡುವುದು”. ಆ ವಿಚಾರವಾಗಿ ರಾಜ್ಯದ ಗಡಿ ಬಿಟ್ಟು ಅನ್ನ ಬೆಳೆಯುವ ನೀವು ಒಂದಾಗಿ ತೀರ್ಮಾನ ಮಾಡಿಕೊಳ್ಳಿ, ಅನ್ನ ಬೆಳೆಯಿರಿ. ಲೋಕದ ತಂದೆಯಾಗಿರೆಂದು ಈ ಮೂಲಕ ಕಳಕಳಿಯ ಪ್ರಾರ್ಥನೆ ಮಾಡುತ್ತೇನೆ.
ಇಂತು
ಕೆ. ಎಸ್. ನಿತ್ಯಾನಂದ

2 comments:

 1. that the british gave a hard time to indian rulers undertaking good development projects, and, did not allow the old mysore region to make use of more of the water in the rivers and collected in the dams was new info to me (not well said in textbooks), but it is historical fact. however, now karnataka can think of new irrigation river projects to alleviate the water scarcity, and, even undertake joint projects with neighboring states. also, the water released from dams can be sold for a fee to tamil nadu, like any other commodity, then there will be no dispute.

  ReplyDelete
  Replies
  1. The Bauthashaastric study of rivers goes in a very different way. At present state one may find merging streams of Netravati or Hemavati in Kaveri. But it will have adverse effects in the future. For this one has to know the heart beat of River. So Nadi Sukta says that सितासिते सरिते यत्र संगते तत्राप्लुतासो दिवमुत्पतंति | In the future whether the combination of the reasons named streams be fruitful? How to study the future of rivers? Isn't it dependent on the rainfall which is by its Abhimaana Devata Varuna.

   The present method of merging streams is not at all useful in future. It will surely reduce water level in the Hemavati & Netravati. What about the farmers & people dependent on these streams? Now the Manas of Kaveri has become sensitive. Any wrong steps will barren the Kaveri. Can any of the Engineers assure that there won't be any side effects for Kaveri, Hemavati or Netravati may be after 1000 years? Rishis think thousands of years ahead & execute only plans which won't produce ill effects.

   Did the Engineers know about the original Itihaasa of Karnataka long ago when it was a Desert? How the Rishi Varenyaas struggled to make it green by creating several rivers with Kaveri as one of the main ones? Why the Kaveri is recited among Sapta Nadis? What is the importance of Kaveri's water, its flow, its several Bhautika, Daivika, Adhyatmika, Raasayanika Gunaas? How many thousands of Narasimha, Agasteswara, and many more Shakti Kendras were developed just because of Kaveri? Has they measured the Kutsitaamsha being added in nearly 30 years? Lots of questions has to be answered before touching a river project. Its not just an Engineering design!

   In the decisions of Engineering, the calculations and understanding of elders who have real concern towards welfare of the Country has to be considered.

   River doesn't emerge by itself. Vaikhari is main factor for rainfall according to Vedas. Annaajjayate Parjanyah | Anna is 4 types for 4 Indriyas. So we have to talk good words, see good things, listen good naadas, grow & eat good food. Then it will create the necessary atmosphere to initiate Varuna bala. How greenery enriched & how it supports the rainfall? All are discussed in Varuna Chakra. Formation of Nadi & its sustenance is a very complicated process.

   So the river is formed & sustained due to regional practices. It emerges from & for that region. Excess water only can be allowed to be given to others!!

   Delete