Saturday, 8 December 2012

Vedic lifestyle is an ideal oneವೇದದ ಬದುಕುವ ಆದರ್ಶ ಮಾರ್ಗವೇನೆಂದು ವಿವರಿಸುತ್ತೇನೆ ಗಮನಿಸಿ.

ನವೋ ನವೋ ಭವತಿ ಜಾಯಮಾನೋಹ್ನಾಂ ಕೇತುರುಷಸಾಮೇತ್ಯಗ್ರಮ್ |
ಭಾಗಂ ದೇವೇಭ್ಯೋ ವಿದಧಾತ್ಯಾಯನ್ ಪ್ರಚಂದ್ರಮಾಸ್ತಿರತೇ ದೀರ್ಘಮಾಯುಃ ||

ಸದಾ ಸರ್ವದಾ ನವ ನವೀನತೆಯನ್ನು ಕಾಣುತ್ತಾ ಸದಾ ಉತ್ಕರ್ಷದತ್ತ ನಮ್ಮ ಪ್ರಯಾಣವಿರಬೇಕು. ಆದರೆ ಅದು ಸ್ಥಿರವೂ, ಶಾಶ್ವತವೂ, ಸುಭದ್ರವೂ ಆಗಿರಬೇಕು. ನಮ್ಮ ಬಾಳಿನ ಹಾದಿಯ ಕುರುಹು ತಿರುಗಿ ನೋಡುವಂತಿರಬೇಕು. ನೋಡಿದರೆ ಜನ ಮೆಚ್ಚುವಂತಿರಬೇಕು. ಅಗ್ರಜೀವನ ಎಂದರೇನೆಂದು ಸಮಾಜ ಅರಿತು ನಮ್ಮನ್ನು ಅನುಕರಣೆ ಮಾಡುವಂತಿರಬೇಕು. ಲೋಕ ದೇವಮಾನವನೆಂಬಂತೆ ಗುರುತಿಸಲ್ಪಡಬೇಕು. ಆ ಸ್ಥಿರತೆ, ಆದರ್ಶ, ಶಾಶ್ವತವಾದ ದೀರ್ಘ ಆಯುಸ್ಸನ್ನು ನೀಡುತ್ತದೆ. ಬದುಕಿನಲ್ಲಿ ವಿವಿಧತೆ ಇದೆ. ಆಕರ್ಷಣೆ ಇದೆ. ಸುಖವಿದೆ. ಆನಂದವಿದೆ. ಮೋಕ್ಷವೂ ಇದೆ. ಅದೇ “ದೀರ್ಘಾಯುಷ್ಯ”.

ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಂ |
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||

ಮಾನವ ಸಂಘಜೀವಿಯಾಗಬೇಕು. ಪರಸ್ಪರ ಸ್ನೇಹಭಾವದಿಂದ ಹೊಂದಾಣಿಕೆಯಿಂದ ಬದುಕಬೇಕು. ಆದರೆ ಅದರಲ್ಲಿ ಸ್ನೇಹಭಾವವಿರಬೇಕೇ ವಿನಃ ಅನಿವಾರ್ಯತೆ ಇರಬಾರದು. ತೀರಾ ಇತ್ತೀಚಿನವರೆಗೆ ಮದುವೆ ಇತ್ಯಾದಿ ಸಮಾರಂಭಗಳಲ್ಲಿ “ಮುಯ್ಯಿ” ಎಂಬ ಒಂದು ಉಡುಗೊರೆ ಪದ್ಧತಿ ಇತ್ತು. ಅದರ ಆದರ್ಶದಂತಿರಬೇಕು. ಮೂಲವಾಗಿ ಪರಸ್ಪರ ಸಹಕಾರವೆಂಬ ಅರ್ಥದಲ್ಲಿ ಆ ಶಬ್ದ ಬಳಕೆಯಲ್ಲಿ ಬಂದಿದೆ. ಒಂದು ಸಮಾರಂಭಕ್ಕೆ ಎಲ್ಲರ ಸಹಕಾರವೆಂಬ ರೀತಿಯಲ್ಲಿ ಅದು ಬಳಕೆಯಲ್ಲಿತ್ತು. ಹಾಗೆ ಯಾವುದೇ ಸಮಾರಂಭವಾಗಲಿ ಎಲ್ಲರ ಸಹಕಾರದೊಂದಿಗೇ ನಡೆಯುತ್ತಿತ್ತು. ಅದು ಪರಸ್ಪರಾವಲಂಬನೆಯ ಆದರ್ಶವಾಗಿತ್ತು. ನಂತರ ಅದರ ಉದ್ದೇಶ ಕೆಟ್ಟು ಹಾಳಾಗಿ ಹೋಗಿದೆ ಬಿಡಿ. ಅದಕ್ಕೆ ಕಾರಣ ವಿದೇಶೀ “ಗಿಫ್ಟ್” ಬಳಕೆಗೆ ಬಂದದ್ದರಿಂದಾಗಿ.

“ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತ ಮೇಷಾಮ್ | ಸಮಾನಂ ಮಂತ್ರ ಮಭಿಮಂತ್ರಯೇವಃ ಸಮಾನೇನ ವೋ ಹವಿಷಾ ಜುಹೋಮಿ || ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ” ||
ಈ ದೇಶದಲ್ಲಿ ಹುಟ್ಟಿದ ಮಾನವರೆಲ್ಲಾ ಸಮಾನರು. ಸಮಾನ ಮನಸ್ಕರು. ಸಮಾನ ನೀತಿವಂತರು. ಸಮಾನ ಉದ್ದೇಶ ಉಳ್ಳವರು. ಲೋಕದ ಚರಾಚರಗಳೂ ಒಂದಲ್ಲಾ ಒಂದು ಕಾರಣಕ್ಕೆ ನಮಗೆ ಬಂಧು ಸಮಾನರು. ಅವರೆಲ್ಲರ ಬದುಕು ಸುಖ, ಸಹಜ, ನೆಮ್ಮದಿಯಾಗಿರುವತ್ತ ನಮ್ಮ ಜೀವನವಿರಲಿ ಎಂದು ಹಾರೈಸುವ ಬದುಕು ವೇದ ಹೇಳುತ್ತದೆ. ಅದನ್ನೇ

“ವಾಸ್ತೋಷ್ಪತೇ ಪ್ರತಿಜಾನೀಹ್ಯಸ್ಯಾನ್ ತ್ಸ್ವಾವೇಶೋ ಅನಮೀವೋ ಭವಾ ನಃ | ಯತ್ತ್ವೇಮಹೇ ಪ್ರತಿ ತನ್ನೋ ಜುಷಸ್ವ ಶಂ ನೋ ಭವ ದ್ವಿಪದೇ ಶಂ ಚತುಷ್ಪದೇ || ೧ ||
ವಾಸ್ತೋಷ್ಪತೇ ಪ್ರತರಣೋ ನ ಏಧಿ ಗಯಸ್ಫಾನೋ ಗೋಭಿರಶ್ವೇಭಿರಿಂದೋ | ಅಜರಾಸಸ್ತೇ ಸಖ್ಯೇ ಸ್ಯಾಮ ಪಿತೇವ ಪುತ್ರಾನ್ ಪ್ರತಿ ನೋ ಜುಷಸ್ವ || ೨ ||
ವಾಸ್ತೋಷ್ಪತೇ ಶಗ್ಮಯಾ ಸಂಸದಾತೇ ಸಕ್ಷೀಮಹಿ ರಣ್ವಯಾ ಗಾತು ಮತ್ಯಾ | ಪಾಹಿ ಕ್ಷೇಮ ಉತ ಯೋಗೇ ವರಂ ನೋ ಯೂಯಂ ಪಾತ ಸ್ವಸ್ತಿಭಿಃ ಸದಾ ನಃ “ || ೩ ||
ಸಕಲ ಚರಾಚರಗಳೂ ಹೇಗೆ ಹೊಂದಾಣಿಕೆಯಿಂದ ಬಾಳ್ವೆ ಮಾಡಬಹುದು ಎಂಬ ಆದರ್ಶ ಬಿಂಬಿಸಲ್ಪಟ್ಟಿದೆ. ದ್ವಿಪದಿಗಳೂ, ಚತುಷ್ಪದಿಗಳೂ ಜೀವಿಗಳೇ. ಒಟ್ಟಾರೆ ಬದುಕಿನಲ್ಲಿ ಸಮಾನರು. ಅಸ್ತಿತ್ವದಲ್ಲಿ, ರೂಪದಲ್ಲಿ ಬೇರೆ ಬೇರೆಯಾಗಿರಬಹುದು ಎಂದು ಆದರ್ಶ.

“ರಾತ್ರಿಂ ರಾತ್ರಿಮಪ್ರಯಾತಂ ಭರಂತೋಽಶ್ವಾಯೇವ ತಿಷ್ಠತೇ ಘಾಸಮಸ್ಮೈ | ರಾಯಸ್ಪೋಷೇಣ ಸಮಿಷಾ ಮದಂತೋ ಮಾ ತೇ ಅಗ್ನೇ ಪ್ರತಿವೇಶಾ ರಿಷಾಮ” || ೧ || ಅ.ಕಾ. ೧೯. ಸೂ.೫೫.ಮಂ.೧||
ಹಗಲು ರಾತ್ರಿಗಳ ಭೇದವಿಲ್ಲದೆ ಈ ಪ್ರಕೃತಿಯಲ್ಲಿ ಒಂದಲ್ಲಾ ಒಂದು ಜೀವಿ ಅನ್ನ ತಿನ್ನುತ್ತಲೇ ಇರುತ್ತದೆ. ಅನ್ನ ಎಂದರೆ ಆಹಾರ. ಜೀವಭೇದದಿಂದ ಹಗಲು ರಾತ್ರಿಗಳ ವ್ಯತ್ಯಾಸವಿರಬಹುದು. ಕೆಲವು ಹಗಲಿನಲ್ಲಿಯೂ, ಕೆಲವು ರಾತ್ರಿಯಲ್ಲಿಯೂ ಆಹಾರ ತಿನ್ನುತ್ತವೆ. ಅದು ನಿರಂತರ ಅನ್ನ ಪೂರೈಕೆಯೆಂಬ ಒಂದು ಭಾಗ. ಇನ್ನು ಎರಡನೆಯದಾಗಿ ತನ್ನ ಅಸ್ತಿತ್ವಕ್ಕಾಗಿ, ಗೌರವಕ್ಕಾಗಿ, ಉಳಿವಿಗಾಗಿ ಹೋರಾಡುತ್ತಲೇ ಇರುತ್ತವೆ. ಅದೇ ಬಟ್ಟೆ ಅಥವಾ ದಾರಿ. ಇವೆರಡನ್ನು ಹೊರತುಪಡಿಸಿದ ಇನ್ನೊಂದು ಜೀವನಮಾರ್ಗವೆಂಬುದು ಲೋಕದಲ್ಲಿಲ್ಲ. ಯಾವ ವಿದೇಶೀ ಪದ್ಧತಿ ಬಂದರೂ ಅದು ಇವೆರಡರಲ್ಲಿಯೂ ಲೀನವಾಗಿದೆ. ಆದರೆ ಅದನ್ನು ಅರ್ಥ ಮಾಡಿಕೊಂಡು ಸರಳ ಸುಖಮಯ ಸ್ನೇಹಶೀಲ ದಯಾಪೂರ್ಣ ಜೀವನ ಆಯ್ಕೆ ಮಾಡಿಕೊಂಡರೆ ಸಕಲಜೀವಿಗಳಿಗೂ ಕೊರತೆಯಿಲ್ಲದ ಸುಖದಾಯಕ ಜೀವನ ಪ್ರಾಪ್ತಿ ಖಂಡಿತ. ಆದರೆ ಕಿತ್ತು ತಿನ್ನುವ ಪ್ರವೃತ್ತಿ ಬಿಟ್ಟು ತನ್ನದ್ದು ಮಾತ್ರಾ ತನಗೆ ಸಾಕೆಂಬ ಭಾವ ಬೇಕಷ್ಟೆ.

“ವಿಷಾಸಹಿಂ ಸಹಮಾನಂ ಸಾಸಹಾನಂ ಸಹೀಯಾಂಸಮ್ | ಸಹಮಾನಂ ಸಹೋಜಿತಂ ಸ್ವರ್ಜಿತಂ ಗೋಜಿತಂ ಸಂಧನಾಜಿತಮ್ | ಈಡ್ಯಂ ನಾಮ ಹ್ವ ಇಂದ್ರಮಾಯುಷ್ಮಾನ್ ಭೂಯಾಸಮ್ || ೧ ||
ವಿಷಾಸಹಿಂ ಸಹಮಾನಂ ಸಾಸಹಾನಂ ಸಹೀಯಾಂಸಮ್ | ಸಹಮಾನಂ ಸಹೋಜಿತಂ ಸ್ವರ್ಜಿತಂ ಗೋಜಿತಂ ಸಂಧನಾಜಿತಮ್ | ಈಡ್ಯಂ ನಾಮ ಹ್ವ ಇಂದ್ರಂ ಪ್ರಿಯೋ ದೇವಾನಾಂ ಭೂಯಾಸಮ್ || ೨ ||

ವಿಷಾಸಹಿಂ ಸಹಮಾನಂ ಸಾಸಹಾನಂ ಸಹೀಯಾಂಸಮ್ | ಸಹಮಾನಂ ಸಹೋಜಿತಂ ಸ್ವರ್ಜಿತಂ ಗೋಜಿತಂ ಸಂಧನಾಜಿತಮ್ | ಈಡ್ಯಂ ನಾಮ ಹ್ವ ಇಂದ್ರಂ ಪ್ರಿಯಃ ಪ್ರಜಾನಾಂ ಭೂಯಾಸಮ್ || ೩ ||

ವಿಷಾಸಹಿಂ ಸಹಮಾನಂ ಸಾಸಹಾನಂ ಸಹೀಯಾಂಸಮ್ | ಸಹಮಾನಂ ಸಹೋಜಿತಂ ಸ್ವರ್ಜಿತಂ ಗೋಜಿತಂ ಸಂಧನಾಜಿತಮ್ | ಈಡ್ಯಂ ನಾಮ ಹ್ವ ಇಂದ್ರಂ ಪ್ರಿಯಃ ಪಶೂನಾಂ ಭೂಯಾಸಮ್ || ೪ ||

ವಿಷಾಸಹಿಂ ಸಹಮಾನಂ ಸಾಸಹಾನಂ ಸಹೀಯಾಂಸಮ್ | ಸಹಮಾನಂ ಸಹೋಜಿತಂ ಸ್ವರ್ಜಿತಂ ಗೋಜಿತಂ ಸಂಧನಾಜಿತಮ್ | ಈಡ್ಯಂ ನಾಮ ಹ್ವ ಇಂದ್ರಂ ಪ್ರಿಯಃ ಸಮಾನಾನಾಂ ಭೂಯಾಸಮ್ || ೫ ||

ಉದಿಹ್ಯುದಿಹಿ ಸೂರ್ಯ ವರ್ಚಸಾ ಮಾಭ್ಯುದಿಹಿ | ದ್ವಿಷಂಶ್ಚ ಮಹ್ಯಂ ರಧ್ಯತು ಮಾ ಚಾಹಂ ದ್ವಿಷತೇ ರಧಂ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೬ ||

ಉದಿಹ್ಯುದಿಹಿ ಸೂರ್ಯ ವರ್ಚಸಾ ಮಾಭ್ಯುದಿಹಿ | ಯಾಂಶ್ಚ ಪಶ್ಯಾಮಿ ಯಾಂಶ್ಚ ನ ತೇಷು ಮಾ ಸುಮತಿಂ ಕೃಧಿ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೭ ||

ಮಾತ್ವಾ ದಭನ್ತ್ಸಲಿಲೇ ಅಪ್ಸ್ವಾ೧೦ತರ್ಯೇ ಪಾಶಿನ ಉಪತಿಷ್ಠನ್‍ತ್ಯತ್ರ | ಹಿತ್ವಾಶಸ್ತಿಂ ದಿವಮಾರುಕ್ಷ ಏತಾಂ ಸ ನೋ ಮೃಡ ಸುಮತೌ ತೇ ಸ್ಯಾಮ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೮ ||

ತ್ವಂ ನ ಇಂದ್ರ ಮಹತೇ ಸೌಭಗಾಯಾದಬ್ಧೇಭಿಃ ಪರಿಪಾಹ್ಯಕ್ತುಭಿಸ್ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೯ ||

ತ್ವಂ ನ ಇಂದ್ರೋತಿಭಿಃ ಶಿವಾಭಿಃ ಶಂತಮೋ ಭವ | ಆರೋಹಂಸ್ತ್ರಿದಿವಂ ದಿವೋ ಗೃಣಾನಃ ಸೋಮಪೀತಯೇ ಪ್ರಿಯಧಾಮ ಸ್ವಸ್ತಯೇ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೦ ||

ತ್ವಮಿಂದ್ರಾಸಿ ವಿಶ್ವಜಿತ್ ಸರ್ವವಿತ್ ಪುರುಹೂತಸ್ತ್ವಮಿಂದ್ರ | ತ್ವಮಿಂದ್ರೇಮಂ ಸುಹವಂ ಸ್ತೋಮಮೇರಯಸ್ವ ಸ ನೋ ಮೃಡ ಸುಮತೌ ತೇ ಸ್ಯಾಮ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೧ ||

ಅದಬ್ಧೋ ದಿವಿ ಪೃಥಿವ್ಯಾಮುತಾಸಿ ನ ತ ಆಪುರ್ಮಹಿಮಾನಮಂತರಿಕ್ಷೇ | ಅದಬ್ಧೇನ ಬ್ರಹ್ಮಣಾ ವಾವೃಧಾನಃ ಸ ತ್ವಂ ನ ಇಂದ್ರ ದಿವಿಷಂಛರ್ಮ ಯಚ್ಛ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೨ ||

ಯಾ ತ ಇಂದ್ರ ತನೂರಪ್ಸು ಯಾ ಪೃಥಿವ್ಯಾಂ ಯಾಂತರಗ್ನೌ ಯಾ ತ ಇಂದ್ರ ಪವಮಾನೇ ಸ್ವರ್ವಿದಿ | ಯಯೇಂದ್ರ ತನ್ವಾ೩೦ತರಿಕ್ಷಂ ವ್ಯಾಪಿಥ ತಯಾ ನ ಇಂದ್ರ ತನ್ವಾ೩ ಶರ್ಮ ಯಚ್ಛ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೩ ||

ತ್ವಾಮಿಂದ್ರ ಬ್ರಹ್ಮಣಾ ವರ್ಧಯಂತಃ ಸತ್ರಂ ನಿಷೇದುರ್‌ಋಷಯೋ ನಾಧಮಾನಾಸ್ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೪ ||

ತ್ವಂ ತೃತಂ ತ್ವಂ ಪರ್ಯೇಷ್ಯುತ್ಸಂ ಸಹಸ್ರಧಾರಂ ವಿದಥಂ ಸ್ವರ್ವಿದಂ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೫ ||

ತ್ವಂ ರಕ್ಷಸೇ ಪ್ರದಿಶಶ್ಚತಸ್ರಸ್ತ್ವಂ ಶೋಚಿಷಾ ನಭಸೀ ವಿಭಾಸಿ | ತ್ವಮಿಮಾ ವಿಶ್ವಾ ಭುವನಾನು ತಿಷ್ಠಸ ಋತಸ್ಯ ಪಂಥಾಮನ್ವೇಷಿ ವಿದ್ವಾಂಸ್ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೬ ||

ಪಂಚಭಿಃ ಪರಾಙ್ ತಪಸ್ಯೇಕಯಾರ್ವಾಙಶಸ್ತಿಮೇಷಿ ಸುದಿನೇ ಬಾಧಮಾನಸ್ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೭ ||

ತ್ವಮಿಂದ್ರಸ್ತ್ವಂ ಮಹೇಂದ್ರಸ್ತ್ವಂ ಲೋಕಸ್ತ್ವಂ ಪ್ರಜಾಪತಿಃ | ತುಭ್ಯಂ ಯಜ್ಞೋ ವಿತಾಯತೇ ತುಭ್ಯಂ ಜುಹ್ವತಿ ಜುಹ್ವತಸ್ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೮ ||

ಅಸತಿ ಸತ್ ಪ್ರತಿಷ್ಠಿತಂ ಸತಿ ಭೂತಂ ಪ್ರತಿಷ್ಠಿತಮ್ | ಭೂತಂ ಹ ಭವ್ಯ ಆಹಿತಂ ಭವ್ಯಂ ಭೂತೇ ಪ್ರತಿಷ್ಠಿತಂ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೧೯ ||

ಶುಕ್ರೋಽಸಿ ಭ್ರಾಜೋಸಿ | ಸ ಯಥಾ ತ್ವಂ ಭ್ರಾಜತಾ ಭ್ರಾಜೋಽ ಸ್ಯೇವಾಹಂ ಭ್ರಾಜತಾ ಭ್ರಾಜ್ಯಾಸಮ್ || ೨೦ ||

ರುಚಿರಸಿ ರೋಚೋಽಸಿ | ಸ ಯಥಾ ತ್ವಂ ರುಚ್ಯಾ ರೋಚೋಽ ಸ್ಯೇವಾಹಂ ಬ್ರಾಹ್ಮಣವರ್ಚಸೇನ ಚ ರುಚಿಷೀಯ || ೨೧ ||

ಉದ್ಯತೇ ನಮ ಉದಾಯತೇ ನಮ ಉದಿತಾಯ ನಮಃ | ವಿರಾಜೇ ನಮಃ ಸ್ವರಾಜೇ ನಮಃ ಸಮ್ರಾಜೇ ನಮಃ || ೨೨ ||

ಅಸ್ತಂ ಯತೇ ನಮೋಽಸ್ತಮೇಷ್ಯತೇ ನಮೋಽಸ್ತಮಿತಾಯ ನಮಃ | ವಿರಾಜೇ ನಮಃ ಸ್ವರಾಜೇ ನಮಃ ಸಮ್ರಾಜೇ ನಮಃ || ೨೩ ||

ಉದಗಾದಯಮಾದಿತ್ಯೋ ವಿಶ್ವೇನ ತಪಸಾ ಸಹ | ಸಪತ್ನಾನ್ ಮಹ್ಯಂ ರಂಧಯನ್ ಮಾ ಚಾಹಂ ದ್ವಿಷತೇ ರಧಂ ತವೇದ್ವಿಷ್ಣೋ ಬಹುಧಾ ವೀರ್ಯಾಣಿ | ತ್ವಂ ನಃ ಪೃಣೀಹಿ ಪಶುಭಿರ್ವಿಶ್ವ ರೂಪೈಃ ಸುಧಾಯಾಂ ಮಾ ಧೇಹಿ ಪರಮೇ ವ್ಯೋಮನ್ || ೨೪ |

ಆದಿತ್ಯನಾವಮಾರುಕ್ಷಃ ಶತಾರಿತ್ರಾಂ ಸ್ವಸ್ತಯೇ | ಅಹರ್ಮಾತ್ಯಪೀಪರೋ ರಾತ್ರಿಂ ಸತ್ರಾತಿ ಪಾರಯ || ೨೫ ||

ಸೂರ್ಯನಾವಮಾರುಕ್ಷಃ ಶತಾರಿತ್ರಾಂ ಸ್ವಸ್ತಯೇ | ರಾತ್ರಿಂ ಮಾತ್ಯಪೀಪರೋಽಹಃ ಸತ್ರಾತಿ ಪಾರಯ || ೨೬ ||

ಪ್ರಜಾಪತೇರಾವೃತೋ ಬ್ರಹ್ಮಣಾ ವರ್ಮಣಾಹಂ ಕಶ್ಯಪಸ್ಯ ಜ್ಯೋತಿಷಾ ವರ್ಚಸಾ ಚ | ಜರದಷ್ಟಿಃ ಕೃತವೀರ್ಯೋ ವಿಹಾಯಾಃ ಸಹಸ್ರಾಯುಃ ಸುಕೃತಶ್ಚರೇಯಮ್ || ೨೭ ||

ಪರೀವೃತೋ ಬ್ರಹ್ಮಣಾ ವರ್ಮಣಾಹಂ ಕಶ್ಯಪಸ್ಯ ಜ್ಯೋತಿಷಾ ವರ್ಚಸಾ ಚ | ಮಾಮಾ ಪ್ರಾಪನ್ನಿಷವೋ ದೈವ್ಯಾ ಯಾ ಮಾ ಮಾನುಷೀ ರವಸೃಷ್ಟಾ ವಧಾಯ || ೨೮ ||

ಋತೇನ ಗುಪ್ತ ಋತುಭಿಶ್ಚ ಸರ್ವೈರ್ಭೂತೇನ ಗುಪ್ತೋ ಭವ್ಯೇನ ಚಾಹಮ್ | ಮಾ ಮಾ ಪ್ರಾಪತ್ ಪಾಪ್ಮಾ ಮೋತ ಮೃತ್ಯುರಂತರ್ದಧೇಽಹಂ ಸಲಿಲೇನ ವಾಚಃ || ೨೯ ||

ಅಗ್ನಿರ್ಮಾ ಗೋಪ್ತಾ ಪರಿ ಪಾತು ವಿಶ್ವತ ಉದ್ಯನ್ತ್ಸೂರ್ಯೋ ನುದತಾಂ ಮೃತ್ಯುಪಾಶಾನ್ | ವ್ಯುಚ್ಛಂತೀರುಷಸಃ ಪರ್ವತಾ ಧ್ರುವಾಃ ಸಹಸ್ರಂ ಪ್ರಾಣಾ ಮಯ್ಯಾ ಯತಂತಾಮ್ “ || ೩೦ ||

ಈ ಮಂತ್ರಗಳ ಒಟ್ಟು ಸಾರಂಶ ಎಂದರೆ ಮಾನವ ಜೀವಿಗಳಾದ ನಾವು ನಮ್ಮ ಬುದ್ಧಿಮತ್ತತೆಯಿಂದ ಸಕಲ ಜೀವಲೋಕದಲ್ಲಿ ಅತ್ಯಂತ ಬಲಶಾಲಿಗಳೂ, ಸದೃಢರೂ, ಇಡೀ ಜೀವಜಗತ್ತನ್ನು ಜಯಿಸಿದವರೂ ಆಗಿರುತ್ತೇವೆ. ಆ ಕಾರಣದಿಂದಾಗಿ ನಾವು ಸಹಜ ಸ್ವಾಭಾವಿಕ ದಯಾಪರರಾಗಬೇಕಿದೆ. ನಮ್ಮೆಲ್ಲಾ ಶಕ್ತಿ, ಯುಕ್ತಿ, ಸಂಪತ್ತು, ವಸ್ತು, ಧನ, ಅನ್ನಭೋಗಗಳೂ ನಮ್ಮ ಸಹಜೀವಿಗಳಿಗೆ ವಿನಿಯೋಗಿಸುತ್ತಾ ಅವುಗಳ ಏಳ್ಗೆಗೆ ದುಡಿಯಬೇಕಿದೆ. ಅದಕ್ಕಾಗಿ ನಮಗೆ ದೀರ್ಘಾಯುಷ್ಯ ಬೇಕಿದೆ. ಅದನ್ನೂ ಸಾಧಿಸಿಕೊಳ್ಳಬಲ್ಲೆವು. ಸರ್ವಸಮಾನತೆಯನ್ನು ಲೋಕಮುಖಕ್ಕೆ ಬಿಂಬಿಸುತ್ತಾ ದಯಾಪರನಾಗಿ ಎಲ್ಲಾ ಜೀವಿಗಳಲ್ಲೂ ಆನಂದದಲ್ಲಿ ಪರಮಾನಂದ ರೂಪಿಯಾದ ಭಗವಂತನನ್ನು ಕಾಣುತ್ತಾ ಸಕಲ ಲೋಕಪ್ರಿಯನಾಗಿ ವಿಶ್ವಾಮಿತ್ರರಾಗಬೇಕಿದೆ. ಅದಕ್ಕಾಗಿ ನಮಗೆ ಇನ್ನೂ ಹೆಚ್ಚಿನ ಬಲ, ಶಕ್ತಿ, ಬುದ್ಧಿತೀಕ್ಷ್ಣತೆ, ವಿಚಕ್ಷಣಜ್ಞಾನ, ಪರಮಾತ್ಮ ಪ್ರೀತಿ, ಐಶ್ವರ್ಯ, ತೇಜಸ್ಸು, ಓಜಸ್ಸು ಪಡೆದು ಪ್ರಜಾಪ್ರಿಯನಾದ ಪ್ರಜಾಪತಿಯಾಗುತ್ತೇನೆ. ಸಕಲ ಲೋಕದ ದ್ವಿಪದಿ, ಚತುಷ್ಪದ್ಯಾದಿ ಸಹಸ್ರಪದಿಯವರೆಗೆ ಎಲ್ಲಾ ಜೀವಿ ಕ್ರಿಮಿಕೀಟಗಳಿಗೂ ನಾನು ಪ್ರಿಯನಾಗಲಿ. ಅವುಗಳ ಹೃದಯದಲ್ಲಿ ನನಗೆ ಪ್ರೇಮ ಪೂರ್ವಕ ಸ್ಥಾನ ಸಿಗಲಿ. ಅದಕ್ಕಾಗಿ ನನ್ನ ಈ ಮಾನವ ಜೀವನದ ಬುದ್ಧಿ, ಬಲ, ಓಜ, ತೇಜಗಳನ್ನು ವಿನಿಯೋಗಿಸುತ್ತೇನೆ. ಇದು “ಬದುಕು”.

ವಿದೇಶೀ ಬಂಡವಾಳಶಾಹಿ ವಿದ್ಯೆ ನರಕಸದೃಶ. “ಪ್ರೀತಿ, ಪ್ರೇಮ, ವಿಶ್ವಾಸ, ದಯೆ, ಕ್ಷಮೆ, ದಾನ, ಔದಾರ್ಯ, ಸಹಿಷ್ಣುತೆ, ಪಾಪ-ಪುಣ್ಯಗಳ ಪರಿಚಯವಿಲ್ಲದ ವಿದ್ಯೆ ವಿಧ್ಯೆಯೇ ಅಲ್ಲ. ಅದನ್ನು ಅರಿಯದ ಜೀವನವು ಜೀವನವೇ ಅಲ್ಲ. ಬದುಕು ಬದುಕೇ ಅಲ್ಲ. ವೇದ ಹೇಳಿದ ಇಂತಹಾ ಮಾನವೀಯ ಬದುಕಿನಲ್ಲಿ ಮಾತ್ರಾ ಸುಖವಿದೆ, ಆನಂದವಿದೆ, ಜೀವನದರಿವಿದೆ. ಅರಿವು ಆತ್ಮಜ್ಞಾನವನ್ನು ಹುಟ್ಟಿಸಬಲ್ಲದು. ಆತ್ಮಜ್ಞಾನವೇ ಬ್ರಹ್ಮದರಿವು, ಆ ಬ್ರಹ್ಮವೇ ಸತ್ಯ, ಈ ಲೋಕವೆಲ್ಲಾ ಮಿಥ್ಯ, ನಶ್ವರ”. “ಇದು ವೇದಮಾರ್ಗ”.

ಇಂತಹಾ ವೇದಾದರ್ಶ ಹೊಂದಿದ ನಮ್ಮ ಪುರಾತನ ಕುಟುಂಬ ಪದ್ಧತಿಯನ್ನು ನಾಶಪಡಿಸಿದವರೇ ಬ್ರಿಟಿಷರು. ನಮ್ಮಲ್ಲಿ ಅಜ್ಞಾನ ತುಂಬಿ ಶಿಕ್ಷಣ ನೀತಿ ಕೆಡಿಸಿ ರಸಹೀನ ಬದುಕೇ, ಅರ್ಥವಿಲ್ಲದ ಬದುಕೇ, ಬದುಕಿಯೂ ಆದರ್ಶವೆಂದೂ ಬಿಂಬಿಸಿ ಭಾರತೀಯರನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಅಯ್ಯಾ ಭಾರತೀಯರೇ! ಈ ವಿದೇಶಿ ಸಂಸ್ಕೃತಿಯ, ಭ್ರಷ್ಟರಾಜಕಾರಣಿಗಳ ಮೋಸಕ್ಕೆ ಬಲಿಯಾಗಬೇಡಿ.

3 comments:

 1. Replies
  1. I will try, but it takes lot of time. Lots of articles will be written in future. So I recommend to learn Kannada. Learning a new language allows us to explore its culture, people, habits & knowledge.

   Delete
  2. Other way is to use Translate button at the right top of the blog. Even though its is alpha testing stage, hope google will provide near to satisfactory translations in the future.

   Delete