Skip to main content

Posts

Showing posts from February, 2013

ವಿಜ್ಞಾನದ ಗೊಬ್ಬರ - ದೇವಕಣದಿಂದ ಜಗತ್ತು ನಾಶ.

ದಿನಾಂಕ ೨೬-೦೨-೨೦೧೩ರ ವಿಜಯವಾಣಿ ಮುಖಪುಟದ ಪ್ರಧಾನ ಸುದ್ದಿ ಇದು. ಪ್ರಳಯದ ಭೀತಿಯ ಮೌಢ್ಯದಲ್ಲಿ ಮೂರು ಕಾಸಿನ ಪ್ರಚಾರ ಸಿಗದ ಕಾರಣ ವಿಜ್ಞಾನಿಗಳು ಈಗ ದೇವ ಕಣದ ಸುನಾಮಿ ಎಂಬ ನಾಟಕ ಶುರು ಮಾಡಿದ್ದಾರೆ. ರೀ ಸ್ವಾಮಿ ನೀವೇನು ವಿಜ್ಞಾನಿಗಳಾ ಅಥವಾ ಜ್ಯೋತಿಷಿಗಳಾ? ಜನರಿಗೆ ನಯಾ ಪೈಸದ ಉಪಯುಕ್ತ ಕೆಲಸ ಮಾಡಿಕೊಡಲು ಆಗದಿದ್ದರೂ ಪರವಾಗಿಲ್ಲ, ಸುಮ್‍ಸುಮ್ನೆ ಗಾಳಿಸುದ್ದಿ ಏಕೆ ಹಬ್ಬಿಸುತ್ತೀರಾ? ಇದೇ ಹೇಳಿಕೆಯನ್ನು ಯಾವುದಾದರೂ ಜ್ಯೋತಿಷಿ ನೀಡಿದ್ದರೆ, ಎಲ್ಲ ಮಾಧ್ಯಮಗಳೂ ಅವರ ಹಿಂದೆನೇ ಸುಳಿದಾಡುತ್ತಾ ತಮ್ಮ ಚಾನೆಲ್‍ನ ಬೊಕ್ಕಸ ತುಂಬಿಸಿಕೊಳ್ಳುತ್ತಾ ಪ್ರಜೆಗಳ ಸಮಯ ಹಾಳು ಮಾಡುತ್ತಿದ್ದರು.
ಓ ಶಾಲೆಯಲ್ಲಿ ವಿಜ್ಞಾನ ಕಲಿಸುವ ಮಾಸ್ಟರ್/ಮೇಡಂಗಳೇ ಈಗಿನ ಈ ವಿಜ್ಞಾನ ಎಂಬುದು ವಿಧ ವಿಧದ ಕುರುಡು ಆವರಿಸಿರುವ ಅಜ್ಞಾನ. ಇದೊಂದು ದೊಡ್ಡ ಸಂಶೋಧನೆ ಎಂಬಂತೆ ಮಕ್ಕಳಿಗೆ ಬೋಧಿಸಬೇಡಿ. ಸಾಧ್ಯವಿದ್ದರೆ ಭಾರತೀಯ ಋಷಿ-ಮುನಿಗಳು ಸಂಶೋಧಿಸಿ ಇದಮಿತ್ಥಂ ಎಂದು ನಿರ್ಣಯಿಸಲ್ಪಟ್ಟ ವೈಧಿಕ ಭೌತಶಾಸ್ತ್ರವನ್ನು ಅಧ್ಯಯನ ಮಾಡಿ ಕೆಲ ವಿಚಾರಗಳನ್ನಾದರೂ ಬೋಧಿಸಿರಿ. ನೀವು ಪ್ರೌಢಶಾಲೆಯಾಗಲಿ, ಪದವಿಪೂರ್ವ ಕಾಲೇಜಿಗಾಗಲಿ ಮಾಡುತ್ತಿರುವ ಪಾಠದಲ್ಲಿನ ಎಷ್ಟೋ ಸಿದ್ಧಾಂತಗಳು ನೆಲಕಚ್ಚಿ ದಶಕಗಳೇ ಸಂದಿವೆ. ಒಬ್ಬೊಬ್ಬ ವಿಜ್ಞಾನಿಗೆ ಒಂದೊಂದು ದಿನ ಪಿತ್ತ ನೆತ್ತಿಗೇರಿದಾಗಲೆಲ್ಲ ಹೊಸ ಹೊಸ ಹೇಳಿಕೆ ನೀಡುತ್ತಾರೆ. ಅದನ್ನು ಪ್ರಕಟಿಸಿ ತಮ್ಮ ಇಂಪ್ಯಾಕ್ಟ್ ಫ್ಯಾಕ್ಟರ್‌, ಬೇ…

ದೇಶ ಆಳಲು ಏನು ಬೇಕು?

ಸರಕಾರದ ಕರ್ತವ್ಯವೇನು ಎಂಬ ಲೇಖನದಲ್ಲಿ ಹೇಗೆ ಸರಕಾರವು ಮಾಡಬಾರದನ್ನೆಲ್ಲಾ ಮಾಡಿ, ಆಗಬಾರದ ರೀತಿಯ ಆಗುಹೋಗುಗಳಿಗೆ ಕಾರಣವಾಗಿದೆ, ಅದನ್ನು ಜ್ಞಾಪಿಸಲೆಂದೇ ಅದರ ಕರ್ತವ್ಯಗಳನ್ನು ವಿಶ್ಲೇಷಿಸಲಾಗಿತ್ತು. ಇಂತಹಾ ದುರಂತ ಪರಿಸ್ಥಿತಿಯಲ್ಲಿ ಅಯೋಮಯರಾಗಿರುವಾಗ, ದೇಶ ಆಳಲು ಏನು ಬೇಕು ಎಂಬುದರ ಚಿಂತನೆಯನ್ನು ನಮ್ಮ ಪುರಾತನ ಇತಿಹಾಸ, ಪುರಾಣ, ರಾಜ್ಯಶಾಸ್ತ್ರಗಳ ಆಧಾರದಲ್ಲಿ ಚಿಂತಿಸೋಣ. ಪುರಾಣದ ಬಗ್ಗೆ ಚಿಂತಿಸುವುದಿದ್ದರೆ ಅಂಬರೀಷ, ಸಗರ, ನಹುಷ, ಪೃಥು, ಹರಿಶ್ಚಂದ್ರ, ನಳ, ಸತ್ಯವ್ರತ, ದೇವವ್ರತ, ರಾಮ, ಯಯಾತಿ, ದಶರಥ, ಅಜ, ಯದು, ಇಕ್ಷ್ವಾಕು, ಮಾಂಧಾತ ಹೀಗೆ ಹೆಸರಿಸುತ್ತಾ ಹೋದಲ್ಲಿ ಚಕ್ರವರ್ತಿಗಳ ಪಟ್ಟಿಯೇ ಸಿಗುತ್ತದೆ. ಅವರೆಲ್ಲಾ ಈ ಸಮಗ್ರ ಭಾರತವನ್ನು ಆಳಿದವರು. ಹೇಗೆಂದರೆ ತಮ್ಮ ಧರ್ಮಬುದ್ಧಿ, ಸನ್ನಡತೆ, ಸತ್ಯಪರಿಪಾಲನೆಯಿಂದ ಇಡೀ ಪ್ರಪಂಚದ ಭೂಭಾಗವನ್ನೆಲ್ಲಾ ಆಳಿ ಬೆಳಗಿದವರು ಇವರು. ದೇಶದಲ್ಲಿ ಇವರ ಕಾಲದಲ್ಲಿ ತುಡುಗು, ಕಳ್ಳತನ, ವಂಚನೆ ಮೋಸಗಳೆಲ್ಲಾ ಅಡಗಿ ಕುಳಿತಿದ್ದವು. ದುಷ್ಟರೆಂಬ ರಾಕ್ಷಸರೆಲ್ಲಾ ಪಾತಾಳ ಸೇರಿದ್ದರು. ಸತ್ಯ, ಪ್ರಾಮಾಣಿಕತೆ, ಸಜ್ಜನಿಕೆಯಿಂದ ಮಾನವರೇ ಎಲ್ಲೆಲ್ಲೂ ತುಂಬಿದ್ದರು. 
ಇನ್ನು ಇತಿಹಾಸ ಚಿಂತನೆ ಮಾಡಿದರೆ ನವನಂದರದ ನಂತರ ಚಂದ್ರಗುಪ್ತ, ಅಶೋಕ, ಶ್ರೀಹರ್ಷ, ಸಮುದ್ರಗುಪ್ತ, ಮಗಧೇಶ, ಉತ್ತಮೋಜಸ, ಪುಲಕೇಶಿ, ವಿಕ್ರಮಾದಿತ್ಯ, ಕೃಷ್ಣದೇವರಾಯ, ವಿಷ್ಣುವರ್ಧನಾದಿ ಅರಸರ ಹೆಸರೇನು ಕಡಿಮೆಯೆ? ಅವರೆಲ್ಲಾ ಈ ವಿಶಾಲ ಸಾಮ್ರ…

Interpretation of the word "Ludhiana"

Whatever exists in this world has some meaning behind it. Even every word that we use has a history of its own. It may be that not many are aware of that meaning. But that does not mean that there is no meaning in it.
There are so many things in the world the meaning of which is not known to many. Take for instance the name of this town, "Ludhiana". Not many are aware of what the word means. But it does have a meaning. In the Vedic language there was a word lodhra, which is the name of a flower. The women of those ancient times would use the pollen of this flower as their face-powder. There was also in the Vedic language a word dha'nya, meaning any green vegetation. This land had lodhra-dha'nya in abundance, and the local dialect of the land, about 3500 years ago, was Paesha'cii Pra'krta. The original Vedic Sanskrit "Lodhra-Dha'nya" became corrupted by Paesha'cii Pra'krta to "Lodhdha Ha'nna". Then 2500 years ago, that word b…

ಸರಕಾರದ ಕರ್ತವ್ಯವೇನು?

ಅನ್ನ, ವಿಧ್ಯೆ, ಬಟ್ಟೆ, ರಕ್ಷಣೆಇವು ಮಾತ್ರ ಸರಕಾರದ ಕರ್ತವ್ಯ. ಅದು ಬಿಟ್ಟು ಬೇರಾವುದರಲ್ಲಿಯೂ ಸರಕಾರದ ಮೇಲುಸ್ತುವಾರಿ ಮಾತ್ರವಾಗಿರಬೇಕು. ಅದರಲ್ಲಿಯೇ ಸರಕಾರ ತೊಡಗಿಕೊಂಡಲ್ಲಿ ಮೊದಲಿನ ನಾಲ್ಕು ಭಾಗದಲ್ಲಿ ಸೋಲು ಖಂಡಿತ. ಸದ್ಯದಲ್ಲಿ ಸರಕಾರ ಅದನ್ನು ಮಾಡುತ್ತಿದೆಯೆ? ಇಲ್ಲ. ರಕ್ಷಣೆಮಾಡಬೇಕಾದವರದ್ದೇ ಹತ್ಯೆಯಾಗುತ್ತಿದೆ. ವಿಧ್ಯೆಮಾರಾಟವಾಗುತ್ತಿದೆ. ಬಟ್ಟೆ ಇಲ್ಲವೇ ಇಲ್ಲ. ಬಟ್ಟೆ ಎಂದರೆ ಬರೇ ಮೈಮುಚ್ಚುವ ವಸ್ತ್ರವಲ್ಲ ಮಾನ ಗೌರವ ಕಾಪಾಡುವುದು. ಅನ್ನದೇವರಿಗೇ ಪ್ರೀತಿ. ರೇಷನ್‍ಗಾಗಿಯೇ ಒಂದಿಲಾಖೆ ನಿರಂತರ ಹೋರಾಡುತ್ತಿದ್ದರೂ ಸರಿಪಡಿಸಲಾಗುತ್ತಿಲ್ಲ. ಅನ್ನ ಹಂಚಿಕೆ ಸರಿ ತೂಗಿಸಲು ಸಾಧ್ಯವೇ ಆಗಿಲ್ಲ. ಇಲ್ಲಿಯವರೆಗೆ ಬರೇ ರೇಷನ್ ಕಾರ್ಡ್ ಮಾಡಿಸಲೇ ಸರಕಾರಕ್ಕೆ ಆಗಿಲ್ಲ. ಆದರೆ ಅಭಾವ, ಬರಗಾಲ ಕಾಲದಲ್ಲಿ ಮಾತ್ರಾ ರೇಷನ್ ಪದ್ಧತಿ ಇಅರಬೇಕು. ಉಳಿಕೆ ಕಾಲದಲ್ಲಿ ಮುಕ್ತ ಆಹಾರ ಪದ್ಧತಿ ಇರಬೇಕು ಎಂಬ ಸತ್ಯ ಸರಕಾರಕ್ಕೆ ಹೇಳುವವರಾರು? ಸದಾಕಾಲ ರೇಷನ್ ಮೂಲಕ ಆಹಾರ ಒದಗಿಸುವ ಪದ್ಧತಿ ಎಷ್ಟು ನಿಕೃಷ್ಟವೆಂಬುದಾದರೂ ಅರಿವಿದೆಯೇ?

          ಎಲ್ಲಿಯವರೆಗೆ ಮುಕ್ತ ಆಹಾರ ಬರುವುದಿಲ್ಲ ಅಲ್ಲಿಯವರೆಗೆ ಜನರಲ್ಲಿ ಅಪರಾಧೀ ಪ್ರವೃತ್ತಿ ಬೆಳೆಯುತ್ತಲೇ ಹೋಗುತ್ತದೆ. ಅದಕ್ಕೆ ಹಸಿವು ಎಂಬ ಕಾರಣದ ಧರ್ಮರಕ್ಷಣೆ ಇದೆ. ಅಭಾವವಿದ್ದಾಗ ಕೊರತೆಯಾದಾಗ ಜನರಲ್ಲಿ ಕಿತ್ತು ತಿನ್ನುವ ಪ್ರವೃತ್ತಿಯ ಸಮತೋಲನಕ್ಕಾಗಿ ಮಾತ್ರಾ ರೇಷನ್ ಪದ್ಧತಿ ಬೇಕೇ ವಿನಃ ನಿರಂತರವಲ್ಲ. ಬರಗಾಲ…