Tuesday, 26 February 2013

ವಿಜ್ಞಾನದ ಗೊಬ್ಬರ - ದೇವಕಣದಿಂದ ಜಗತ್ತು ನಾಶ.
ದಿನಾಂಕ ೨೬-೦೨-೨೦೧೩ರ ವಿಜಯವಾಣಿ ಮುಖಪುಟದ ಪ್ರಧಾನ ಸುದ್ದಿ ಇದು. ಪ್ರಳಯದ ಭೀತಿಯ ಮೌಢ್ಯದಲ್ಲಿ ಮೂರು ಕಾಸಿನ ಪ್ರಚಾರ ಸಿಗದ ಕಾರಣ ವಿಜ್ಞಾನಿಗಳು ಈಗ ದೇವ ಕಣದ ಸುನಾಮಿ ಎಂಬ ನಾಟಕ ಶುರು ಮಾಡಿದ್ದಾರೆ. ರೀ ಸ್ವಾಮಿ ನೀವೇನು ವಿಜ್ಞಾನಿಗಳಾ ಅಥವಾ ಜ್ಯೋತಿಷಿಗಳಾ? ಜನರಿಗೆ ನಯಾ ಪೈಸದ ಉಪಯುಕ್ತ ಕೆಲಸ ಮಾಡಿಕೊಡಲು ಆಗದಿದ್ದರೂ ಪರವಾಗಿಲ್ಲ, ಸುಮ್‍ಸುಮ್ನೆ ಗಾಳಿಸುದ್ದಿ ಏಕೆ ಹಬ್ಬಿಸುತ್ತೀರಾ? ಇದೇ ಹೇಳಿಕೆಯನ್ನು ಯಾವುದಾದರೂ ಜ್ಯೋತಿಷಿ ನೀಡಿದ್ದರೆ, ಎಲ್ಲ ಮಾಧ್ಯಮ ಅವರ ಹಿಂದೆನೇ ಸುಳಿದಾಡುತ್ತಾ ತಮ್ಮ ಚಾನೆಲ್‍ನ ಬೊಕ್ಕಸ ತುಂಬಿಸಿಕೊಳ್ಳುತ್ತಾ ಪ್ರಜೆಗಳ ಸಮಯ ಹಾಳು ಮಾಡುತ್ತಿದ್ದರು.

ಓ ಶಾಲೆಯಲ್ಲಿ ವಿಜ್ಞಾನ ಕಲಿಸುವ ಮಾಸ್ಟರ್/ಮೇಡಂಗಳೇ ಈಗಿನ ಈ ವಿಜ್ಞಾನ ಎಂಬುದು ವಿಧ ವಿಧದ ಕುರುಡು ಆವರಿಸಿರುವ ಅಜ್ಞಾನ. ಇದೊಂದು ದೊಡ್ಡ ಸಂಶೋಧನೆ ಎಂಬಂತೆ ಮಕ್ಕಳಿಗೆ ಬೋಧಿಸಬೇಡಿ. ಸಾಧ್ಯವಿದ್ದರೆ ಭಾರತೀಯ ಋಷಿ-ಮುನಿಗಳು ಸಂಶೋಧಿಸಿ ಇದಮಿತ್ಥಂ ಎಂದು ನಿರ್ಣಯಿಸಲ್ಪಟ್ಟ ವೈಧಿಕ ಭೌತಶಾಸ್ತ್ರವನ್ನು ಅಧ್ಯಯನ ಮಾಡಿ ಕೆಲ ವಿಚಾರಗಳನ್ನಾದರೂ ಬೋಧಿಸಿರಿ. ನೀವು ಪ್ರೌಢಶಾಲೆಯಾಗಲಿ, ಪದವಿಪೂರ್ವ ಕಾಲೇಜಿಗಾಗಲಿ ಮಾಡುತ್ತಿರುವ ಪಾಠದಲ್ಲಿನ ಎಷ್ಟೋ ಸಿದ್ಧಾಂತಗಳು ನೆಲಕಚ್ಚಿ ದಶಕಗಳೇ ಸಂದಿವೆ. ಒಬ್ಬೊಬ್ಬ ವಿಜ್ಞಾನಿಗೆ ಒಂದೊಂದು ದಿನ ಪಿತ್ತ ನೆತ್ತಿಗೇರಿದಾಗಲೆಲ್ಲ ಹೊಸ ಹೊಸ ಹೇಳಿಕೆ ನೀಡುತ್ತಾರೆ. ಅದನ್ನು ಪ್ರಕಟಿಸಿ ತಮ್ಮ ಇಂಪ್ಯಾಕ್ಟ್ ಫ್ಯಾಕ್ಟರ್‌, ಬೇರೆ ಬೇರೆ ಇಂಡೆಕ್ಸಿಂಗ್‍ಗಳಿಂದ ಪ್ರಚಾರಪ್ರಿಯತೆ ಹಾಗೂ ಲಾಭಾಂಶ ಹೆಚ್ಚಳಕ್ಕಾಗಿಯೇ ತೋಳದಂತೆ ಕಾಯ್ದು ಕೂತ ಪ್ರತಿಷ್ಠಿತ ಜರ್ನಲ್‍ಗಳೆಂಬ ಭ್ರಷ್ಟ ವ್ಯವಸ್ಥೆಯ ನಂಬದಿರಿ! 

ಈ ಅಣುವಿಧ್ಯೆ ಎಂಬುದು ಕಪಿಲ ಮುನಿ ಪ್ರಣೀತ ವೇದಾಂತರ್ಗತ ವಿಧ್ಯೆ. ವಿಜ್ಞಾನಿಗಳು ಇದರ ಎಂಟರಲ್ಲೊಂದು ಕುಂಟೆಯನ್ನೂ ಅರಿತಿಲ್ಲ. ಕಪಿಲರೇ ಹೇಳುವಂತೆ ಜನರು ಅಣುವಿನ ಸಂಶೋಧನೆಯು ಸ್ಫೋಟಕವೆಂದೇ ಸುಳ್ಳು ನಂಬಿಕೆಯಲ್ಲಿರುತ್ತಾರೆ. ಆದರೆ ನೈಜತೆಯನ್ನು ಸತತ ಸಾಧನೆ, ತಪಸ್ಸಿನಿಂದ ಮಾತ್ರ ತಿಳಿಯಲು ಸಾಧ್ಯ -

ಅಂದಿನಾ ಸಂಶೋಧನೆಯು ಮುಂದಿನಾ ಪರಿಣಾಮವೆಲ್ಲವ
ಇಂದು ಕಪಿಲನ ಮಾತಿನಲಿ ಪೇಳುವೆನು ಕೇಳಿರೀ ವಿಬುಧರೇ
ಚಂದದಿಂ ಅರ್ಥ ಮಾಡಿಕೊಂಡರೆ ನೀವು ಕಪಿಲರಾಗುವಿರಿ ಸಾಧಕರು ಸಿದ್ಧರು ನೀವಾಗಿರೆಂಬೇ |
ಅಂದು ಹಲವು ಮುನಿಗಳ ಕೂಡಿ ಅರ್ಜಿಸಿದ ಶಕ್ತಿಯದು ಚೇತನಮೂಲ
ವಿಂದು ಅದು ಅಣುವೆಂದು ಅದರ ಮಾತೃಕೆಯ ನಂತರದಿ ಗೋಚರಿಸಿ
ಎಂದೆದೂ ಅಪಾಯಕಾರಿ ಎಂದೆಂಬ ಸುಳ್ಳು ನಂಬಿಕೆಯಲಿಹುದು ಜನರೆಲ್ಲ ಅದುವೆ ಚೈತನ್ಯ ಶಕ್ತಿ ಕಾಣೋ ||

ಘಾಟಕವು ಘೋಟಕವು ಸ್ಫೋಟಕವು ಅದು ಕಾಣು ವ್ಯವಸ್ಥೆಯ
ಘಾಟಿ ತಪ್ಪಲು ಪ್ರಪಾತಕೆಳಸುವುದು ಸತ್ಯವು ಆದರದುಪಕಾರಿ
ಘಂಟಾಘೋಷವಾಗಿಯೆ ಪೇಳ್ವೆ ಮೂಲ ಚೇತನ ಬೀಜ ಸಹಜವು ಸಾತ್ವಿಕವು ಉಪಕಾರಿಯೂ |
ಘಾಟಕದ ನೀತಿಯನು ಅರಿತು ನಡೆಯಲು ಪ್ರಪಂಚದುನ್ನತಿ
ಘೋಟಕದ ಪರಿಯರಿತು ನಡೆಯಲು ಪ್ರಪಂಚದನ್ನವು ಕೇಳಿ
ಸ್ಫೋಟಕವಗೊಳಿಸಿದರೆ ಪ್ರಪಂಚನಾಶಕರವದು ಮನುಜ ಕೇಳ್ ಸ್ಫೋಟಗೊಳಿಸಬೇಡಾ ||

ಅರ್ಥವಾಯಿತೇ? ಮೊದಲಾಗಿ ಹ್ಯಾಡ್ರನ್ ಕೊಲೈಡರ್ ಪ್ರಯೋಗವೇ ಒಂದು ಕಣ್ಕಟ್ಟು ಎಂಬುದು ಕೆಲ ನಿಷ್ಠಾವಂತ ವಿಜ್ಞಾನಿಗಳಿಗೆ ತಿಳಿದಿದೆ. ಮತ್ತಿನ್ನು ದೇವಕಣ ಕಂಡುಹಿಡಿದದ್ದು ತಮ್ಮ ಹೂಡಿಕೆಧಾರರ ಕಣ್ಣೊರೆಸುವ ನಾಟಕ. ಬೇಕಾದರೆ ಬರೆದು ಇಟ್ಟುಕೊಳ್ಳಿ, ಇನ್ನು ಕೆಲ ವರ್ಷದ ನಂತರ ಹಿಗ್ಸ್ ಬೋಸಾನ್ ಎಂಬುದರ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿ ಮತ್ತೊಂದು ಕಣ, ಮಗದೊಂದು ಕಣ, ಅದು ಸಿಕ್ಕಿತು ಇದು ಸಿಕ್ಕಿತು ಎಂಬ ಹೇಳಿಕೆಗಳು ಬರುತ್ತವೆ. ಆದರೆ ಅವೆಷ್ಟು ಸತ್ಯ? ಎಷ್ಟು ಪರಿಪೂರ್ಣ? 

ಕಪಿಲರಾದರೋ ಇನ್ನು ವಿಭಜಿಸಲು ಸಾಧ್ಯವೇ ಇಲ್ಲದಷ್ಟು ಆಳದಲ್ಲಿ ಉಧ್ವಾಸನೆಯ ಮಾಡಿ ಮೂಲ ಚೇತನ ಬೀಜವನ್ನು ಗೋಚರಿಸಿಕೊಂಡು ಎಷ್ಟೆಷ್ಟೋ ಪ್ರಯೋಗ, ಫಲಿತಾಂಶಗಳಿಂದ ದೃಢ ಪಡಿಸಿಕೊಂಡು ಅದು ಮೂಲತಃ ಸಾತ್ವಿಕ ಶಕ್ತಿ, ಅದು ನಿಜವಾದ ದೇವಕಣ, ಅದು ಸ್ಫೋಟಕಾರಿಯಲ್ಲ, ಉಪಕಾರಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಪ್ರಾಕೃತಿಕ ನಿಯಮಬದ್ಧತೆ ಎಂಬುದು ಏನೆಂದೇ ತಿಳಿಯದ ವಿಜ್ಞಾನಿಗಳು ಕೇವಲ ಕಣದ ವ್ಯವಹಾರದಿಂದ ಲೆಕ್ಕಿಸಿ ಇಷ್ಟು ವರ್ಷಗಳ ನಂತರ ಹೀಗೀಗೆ ವಿದಳನವಾಗುತ್ತದೆ, ಹೀಗೆ ಸಂಗ್ರಹವಾಗುತ್ತದೆ, ಹೀಗೆ ಮಿತಿಮೀರಿ ಸ್ಫೋಟವಾಗುತ್ತದೆ ಎಂದೆಲ್ಲ ಲೆಕ್ಕಿಸಿದ್ದಾರೆ. ಇದೆಲ್ಲಾ ಭವಿಷ್ಯಾವಧಾನ ಗಣಿತವೇ ಹೊರತು ಸತ್ಯವಾಗಬೇಕಿಲ್ಲ. ಅಲ್ಲಿ ಪ್ರಾಕೃತಿಕ ನಿಯಮ ಬದ್ಧತೆ ಎಂಬ ಮೂಲಪ್ರಕೃತಿಯ ಸೂತ್ರವನ್ನು ವೇದ ಮುಖೇನ ಅಧ್ಯಯನ ಮಾಡಿದವರಿಗೆ ತಿಳಿದ ವಿಚಾರವೆಂದರೆ, ಕಣವೂ ಸ್ವತಂತ್ರವಲ್ಲ, ಅದು ಪ್ರಕೃತಿಯೊಂದಿಗೆ ವ್ಯವಹರಿಸುತ್ತದೆ. ಪ್ರಕೃತಿಯ ಪ್ರಧಾನ ಜೀವಪ್ರಭೇದ ಎಂದರೆ ಮಾನವ ವರ್ಗ. ಅದರಾದಿಯಾಗಿ ೮೪ ಲಕ್ಷ ಪ್ರಭೇದಗಳ ವ್ಯವಹಾರ ಎಂಬ ವೈಧಿಕ ಭೌತಶಾಸ್ತ್ರದ ಅಗೋಚರ, ಪರಿಣಾಮ ಗೋಚರ, ಪ್ರವರ್ತನಾ ಗೋಚರ, ಗುಣಗೋಚರಗಳೆಂಬ ನಾಲ್ಕನ್ನು ಬಿಟ್ಟು ಕೇವಲ ದೃಗ್ಗೋಚರ ಎಂಬ ಒಂದು ಭಾಗದಿಂದ ಅಣುವಿನ ಮೂಲವನ್ನು ಕೆಣಕಲು ಸಾಧ್ಯವೇ ಇಲ್ಲ.

ಈ ಕಣದ ವಿಧ್ಯೆಯನ್ನು ಬೇಕಾಬಿಟ್ಟಿ ಬಳಸುವುದಲ್ಲ. ಅದಕ್ಕೆ ಅದರದ್ದಾದ ಮಾಪನವಿದೆ, ಬಳಸುವವರಿಗೆ ಪಾತ್ರತೆ ಇದೆ. ಅದಕ್ಕಾಗಿ ಮೊದಲು ಮಾನವನಾಗಬೇಕು, ನಂತರ ಸಾಧನೆಯ ಮಾರ್ಗವನ್ನು ಹೇಳುತ್ತದೆ- 

ಮೊದಲು ವೇದಗಳ್ ನಾಲ್ಕು ಅದರಲಿಹ ಆರಾರು ಶ್ರುತಿಸ್ಮೃತಿಗಳಾದಿ
ಆದಿದೇವನ ಹೊಳಹ ಪೇಳುವ ವೇದಪುರಾಣ ಇತಿಹಾಸದಜ್ಞತೆಯು
ಮೊದಲರಿತವನು ಒಂದನೆಯ ಹಂತದರಿವು ಪಡೆಯಲರ್ಹನಪ್ಪನು ಅವನು ವೇದಾಂತಿಯಹುದು ||

ಹೀಗೆ ಹಂತಹಂತವಾಗಿ ಕಣದ ವಿಧ್ಯೆ ಸಾಧಿಸುತ್ತಾ ಹೋದರೆ -

ಉತ್ಪಾತಗಳ ತಡೆವ ಉತ್ಪಾತ ಸೃಷ್ಟಿಸುವ ಉತ್ಪಾತದರಿವ
ಉತ್ಪಾತಗಳು ನಡೆದರೂ ಆಪತ್ತುಗಳ ದೂರೀಕರಿಸಿ ಜಗಕೆ
ಉತ್ಪಾತದಂಕೆಯನು ಬೋಧಿಸುವ ಭೇದಿಸುವ ಉತ್ಪಾತರಹಸ್ಯಗಳ ವಿಧ್ಯೆಯಿದರೊಳಗಿದೆ ||

ಬಂದದ್ದೆಲ್ಲ ಬರಲಿ ಭಗವಂ ದಯೆಇರಲಿ ಎಂಬುದು ಭಾರತೀ ನಂಬಿಕೆ. ಅದನ್ನೇ ಪುಷ್ಟೀಕರಿಸಲೋ ಎಂಬಂತೆ ಶ್ರೀಕೃಷ್ಣನು

ಯದಾ ಯದಾಹಿ ರ್ಮಸ್ಯ ಗ್ಲಾನಿರ್ಭವತಿ ಭಾರತಃ
ಅಭ್ಯುತ್ಥಾರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||

ಅಂದರೆ ಭೂಮಿ ನಾಶವಾದಾಗ ಬರುತ್ತೇನೆ ಎನ್ನಲಿಲ್ಲ. ಧರ್ಮ ಗ್ಲಾನಿಯಾದಾಗ ಬಂದು ಕಾಪಾಡುತ್ತೇನೆ ಎಂದು ವಾಗ್ದಾನ ಮಾಡಿಯಾಗಿದೆ. ಆ ಗ್ಲಾನಿಯು ದೇವಕಣದಿಂದಾಗಲಿ, ದೆವ್ವಕಣದಿಂದಾಗಲಿ, ಪ್ರಳಯಕಾರಣಗಳಿಂದಾಗಲೀ, ರಕ್ಷಿಸಿಯೇ ತೀರುತ್ತಾನೆ. ಇದು ಆಧ್ಯಾತ್ಮಿಕದ ಕಠೋರ ಸತ್ಯ. ಒಂದು ವೇಳೆ ಏನೋ ಉತ್ಪಾತವಾಗಿ ನಾವು ಸತ್ತರೆ ಏನು ಚಿಂತೆ? ನಾವು ನಂಬಿರುವುದು ಪುನರಪಿ ಜನನಂ ಪುನರಪಿ ಮರಣಂ ಎಂಬ ನಿತ್ಯ ಸತ್ಯವನ್ನಲ್ಲವೇ?

|| ಲೋಕಾ ಸಮಸ್ತಾ ಸುಖಿನೋ ಭವಂತು ||

2 comments:

 1. My dear Hemant Kumar,

  Your posting clearly shows that you have neither understood the import
  of the posting on the 'god particle' nor do you know the fundamentals
  of Vignaana (Science). You have not read the artilcle completely; and
  have posted only out of prujudice; and such postings do more harm to
  Hindutva than furthering the cause of Hindutva. Better Read
  Manusmrithi and Maharshi Dayanand Saraswathi on the life of this
  Universe (present Brahman).

  You must know that all our Vedic Rishis (not merely one KaNaada) upto
  Shankara were scientists. Shankara explains the Cosmos, as expounded
  by Vedas, in his compendium named Panchikaranam.
  You must know that this Brahman has a balance of life span of
  1.55295E+14 years; that is, approximately 155 trillion years. Indeed,
  we should be proud that the Modern Scientists are coming close to
  Manusmrithi and Vedas on the life of this universe. Instead of
  highlighting the positive side of it, Condemnation for sake of
  condemnation is purposeless; and mean; and is not becoming a person of
  your stature, or a staunch Hindu, who stands for TRUTH.

  And please take precautions that you do not commit mistakes in your
  blog. For example, you have repeatedly committed mistakes in writing
  of vidye as ವಿಧ್ಯೆ (vidhye). We should not throw stones, while living
  in glass houses.

  So project the correct position in your blogs; instead of tweeting
  something ad hoc.

  Yours fraternally,
  s.r.krishna murthy.

  ReplyDelete
  Replies
  1. Namaste,

   Thank you for constantly identifying my ignorance from your point of view & making me to become more strong towards our path of knowledge.

   I am clearly aware of useful & useless parts of the the texts quoted by you. For your kind information, I am not prejudiced but accurately programmed with the rigorous preachings of "Prachya Vidhyaa Praakaara" of Rishi-Munis.

   Original Tarka & Meemansa doesn't hide anything. Its followers will propose their arguments without any fear. This may make some people to feel it as bitter; but it's the real taste of the TRUTH. [ವಿಜ್ಞಾನ ವಲಯದಲ್ಲಿ ಕಟುವೆನಿಸಿದರೂ ಸತ್ಯವನ್ನು ಹೇಳಲೇಬೇಕಾಗುತ್ತದ, ಅದು ಹಲವು ವಿದ್ವಾಂಸರಿಗೆ ಅಪ್ರಿಯವಾದರೂ ಚಿಂತೆಯಿಲ್ಲ ವೇದಮಾನ್ಯವಾಗಿರಬೇಕು]

   I didn't said that Shankara or any other Saiddhantikaas weren't scientists! Just knowing to count zillions of years doesn't qualify the so said scientists are approaching towards Vedas. [ವಿದೇಶೀಯ ಮತ್ತು ಬಂಡವಾಳಶಾಹಿ ವ್ಯವಸ್ಥೆಗಾಗಿಯೇ ಮಣೆ ಹಾಕಿಕೊಡುವ ದಾಸ್ಯತ್ವವದ ವ್ಯವಹಾರವನ್ನು ಬಿಡಬೇಕು.] I wrote the present article as a common public, not as a great scholar. It is due to the fact that the one which couldn't be seen by the sun could be seen by the poet. [ರವಿ ಕಾಣದ್ದನ್ನು ಕವಿ ಕಾಣುತ್ತಾನೆ]. All the common people can witness the fraud of these scientific community. Just gave hype to Pralaya, now the fear of God Particle. Vaidhika Raajya Shaastra clearly condemns this as fear causing statements shouldn't be allowed to propagate. It will create lots of gossips, posterior reactions and increases the inferiority complex of the society.

   We have our own methods of observations, experimentation & analysis. If it doesn't match with the method followed by others, it will be called as "difference" not "ignorant"!!

   We have a strong stand of using Vidhya with Mahaapraana Dha as it is in Brahmi as well as original Vedic literature. It has its own explanations!
   E.g., A sample of the same is as follows -

   ಬಾಲವಿಲ್ಲದ ವಿದ್ಯೆಯು ಕೃತಕವು, ಪ್ರಾಪಂಚಿಕವು, ಬಾಲಿಷವು, ಮೌಢ್ಯವೂ |
   ಬಾಲವುಳ್ಳದ್ದು ವಿವಿಧತೆಯಿಂದ ಕೂಡಿದ ಎಲ್ಲವನ್ನೂ ಏಕತೆಯಲ್ಲಿ ಧ್ಯಾಯಕವಾಗುವಂತೆ ಮಾಡುವ ಮೂಲ ವಿಧ್ಯೆಯು]

   Most of the posts are written in our Ashrama which is in between nature & blessings of Gomaatas in Goshaala; not in the delicate glass houses! Base of Vaidhika Bhauta Shaastra is so strong that throwing stones or even a nuclear weapon can't touch its foot.

   ಕೆಲ ಪದ್ಯಗಳು -

   [ ವಿಶ್ವವೇ ಕೂಗುತಿದೆ ವಿಜ್ಞಾನವೆಂದು ಆದರೇನ್ ವೈಜ್ಞಾನಿಕತೆಯು ಹೇಗೆ ಹುಟ್ಟಿತು
   ಶಾಶ್ತವನರಿಯದಾ ಈ ಜನರು ಅಸ್ಥಿರದ ವಿಜ್ಞಾನದೊಲವಿನಲಿ ತಮ್ಮಜೀವನವಿಂದು
   ನಶ್ವರವೆಂದರಿಯದೆ ವ್ಯರ್ಥ ಹೋರಾಡುವರು, ಕೂಗಾಡುವರು, ಪ್ರಮಾಣಕ್ಕೆ ಪ್ರತ್ಯಕ್ಷವೇ ಎಂದು ಸುಳ್ಳು ಪೇಳುವರೂ |
   ವಿಶ್ವವೇ ಮಾಯೆ ಮಾಯೆಯಲಿ ಜೀವಸೃಷ್ಟಿ ಮಾಯೆಯಿಂದಲಿ ಜೀವನವು
   ಶಾಶ್ವತದ ಹಂಬಲವೇ ಮಾಯೆ ಕಣ್ಣಿಗೆ ಗೋಚರಿಪುದೆಲ್ಲ ಅಶಾಶ್ವತ ಮಾಯೆಯಾ ಆಟ
   ವಿಶ್ವದೆಲ್ಲೆಡೆ ವ್ಯಾಪಿಸಿದೆ ದೃಗ್ಗೋಚರವು ಸತ್ಯವೆಂಬಾ ಪರಮ ಸುಳ್ಳಿನ ಮಾಯೆಯದು ಗೋಚರವೆಲ್ಲ ಅಸತ್ಯವಯ್ಯಾ ||

   ಪಂಚಬ್ರಹ್ಮಾತ್ಮಕವು ಸರ್ವವು ಅದನೆ ಅಗೋಚರ, ದೃಗ್ಗೋಚರ, ಪರಿಣಾಮ,
   ಪ್ರವರ್ತನಾ, ಗುಣ ಗೋಚರಗಳೆಂಬರು ಇದರೊಳಗೊರಗಿನೆಲ್ಲ ತಿರುಳನು ವೇದದ
   ಮೂಲವಿಧ್ಯೆಯಿಂ ಅಧ್ಯಯನ ಗೈಯಲು ಅರಿವಾಗುವುದು ಆತ್ಮ-ಪರಮಾತ್ಮಗಳು ಇದಮಿತ್ಥಂ ಎಂದು |
   ಋಷಿವರೇಣ್ಯರಿಂದ ನಿರ್ಣಯಿಸಲ್ಪಟ್ಟ ಸೂತ್ರಗಳಿವು ಭೌತವು ಅತೀ ಅಗಾಧವು
   ಭೂಪ್ರಕೃತಿಯಿಂದ ಖಗೋಳದವರೆಗಿನ ಎಲ್ಲಶಾಸ್ತ್ರಗಳಿಹವು ವಿರಳರಲ್ಲೀಗ ಲಭ್ಯವು ಸಾರುತಿದೆ
   ವಿಜ್ಞಾನಗೊಬ್ಬರದಿಂ ಸುಜ್ಞಾನ ಬೆಳೆಯೋಣ ಜಜ್ಞಾನದಿಂ ನಾವೆಲ್ಲರೊಂದಾಗಿ ಬ್ರಹ್ಮರಾಗೋಣ ಎಂಬುದನು ಅರಿತುಕೋ || ]

   ಒಂದು ಪರಂಪರಾಗತ ತಂತ್ರಸಾರದ ಪ್ರಸಕ್ತ ಕಾಲದ ಪಾಠದ ಪೀಠಿಕೆಯಲ್ಲಿ ಈ ರೀತಿ ಒಂದು ವಾಕ್ಯವಿದೆ -
   "ಅಗಾಧ ಪ್ರಮಾಣದ ಗ್ರಂಥ ಭಂಡಾರ ವಿಧ್ಯಾ ಸಮೂಹ ನಮ್ಮ ಭಾರತೀಯರದ್ದು. ಇಂತಹಾ ಆಧ್ಯಾತ್ಮಿಕ ಸಾಹಿತ್ಯ ಜ್ಞಾನ ಪರಂಪರೆಯನ್ನು ಹೊಂದಿದ ಭಾರತೀಯ ಜ್ಞಾನದ ಸೂರ್ಯನ ಮುಂದೆ ಮಿಣುಕು ಹುಳದಷ್ಟೂ ಇಲ್ಲದ ವಿದೇಶೀ ತಂತ್ರಜ್ಞಾನದ ಎಂಜಲಿಗೆ ಕೈ ಹಾಕುತ್ತಿರುವ ಭಾರತೀಯರೇ ಏಳಿ ಎದ್ದೇಳಿ, ನಿಮ್ಮ ಸ್ವಂತತೆಯ ಚಿಂತನೆ ಮಾಡಿರಿ. ನೀವು ಈಗಲೂ ಎದ್ದು ಎಚ್ಚೆತ್ತು ಕ್ರಿಯಾಶೀಲರಗದಿದ್ದರೆ ಮತ್ತೊಮ್ಮೆ ದಾಸ್ಯತ್ವ ಬಂದೀತು, ಇನ್ನೊಂದು ಸುನಾಮಿ ಬಂದೀತು ಎಚ್ಚರ, ಎಚ್ಚರ."

   Yours faithfully,
   Hemanth Kumar G

   Delete