Skip to main content

Posts

Showing posts from April, 2013

ವೈಧಿಕ ಭೌತಶಾಸ್ತ್ರೋಕ್ತ ಜಗತ್ ಸೃಷ್ಟಿಯ ನಿಯಮಗಳು - ೨

ಹಿಂದಿನ ಲೇಖನದಲ್ಲಿ ಪಂಚಭೂತಾತ್ಮಕ ಸೃಷ್ಟಿ ಎನ್ನುವ ಒಂದು ಭಾಗದ ವಿವರಣೆಯನ್ನು ಯಾಗಮುಖದಲ್ಲಿ ಮಹಾನ್ ಋಷಿವರೇಣ್ಯರಿಂದ ಉದ್ಘಾಟಿಸಲಾಯಿತು. ಇದೊಂದು ಭಾಗ, ಇನ್ನೂ ೩ ಭಾಗದ ಜಗತ್ ಸೃಷ್ಟಿಯ ನಿಯಮಗಳನ್ನು ವೇದ ಹೇಳುತ್ತದೆ. ವಿಚಾರ ಒಂದೇಯಾದರೂ, ಬೇರೆ ಬೇರೆ ಕೋನಗಳಲ್ಲಿ ಚಿಂತಿಸಲಾಗಿದೆ. ಪ್ರಸಕ್ತ ವಿಜ್ಞಾನದ ಹೆಸರಿನಲ್ಲಿ ಮನಸ್ಸಿಗೆ ತೋಚಿದಂತೆಲ್ಲ ವ್ಯಾಖ್ಯಾನಿಸಿರುವ ಸಿದ್ಧಾಂತಗಳು ವಿಜ್ಞಾನ ಗೊಬ್ಬರವೆಂಬುದು ಸತ್ಯ. ಸುಜ್ಞಾನ ಬೆಳೆಯಲು ಗೊಬ್ಬರ ಸ್ವಲ್ಪವಾದರೂ ಬೇಕು. ಆದರೆ ಗೊಬ್ಬರವೇ ಸತ್ಯವಲ್ಲ.
ಸಾಮಾನ್ಯವಾಗಿ ಪೃಥ್ವಿ, ಆಪ್, ತೇಜ, ವಾಯು ಎಂಬ ೪ ಭೂತಗಳ ಪರಿಚಯ ಮಾತ್ರ ನಮಗಿರುವುದು, ೫ನೇಯದರ ಪರಿಚಯ ನಮಗಿರುವುದಿಲ್ಲ. ಇದೆ ಎಂಬ ಕಲ್ಪನೆ ಮಾತ್ರ ಇರುವಂತಹದ್ದು. ಆಕಾಶದ ಕಲ್ಪನೆಯಿದೆ ಬಿಟ್ಟರೆ ಅದರ ವ್ಯಾಪ್ತಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲ.
ಆಕಾಶ ವ್ಯಾಪ್ತಿಯಾದಂತಹಾ ಯಾವುದೋ ಒಂದು ಮೂಲ ಚೈತನ್ಯಕ್ಕೊಂದು ಇಚ್ಛೆ/ಅಪೇಕ್ಷೆ/ಕುತೂಹಲ/ಬೇಕು/ಪ್ರಶ್ನೆ ಹುಟ್ಟುತ್ತದೆ.
ಈ ರೀತಿಯಾದ ಇಚ್ಛೆ ಉತ್ಪತ್ತಿಯಾದಾಗ, ಮೂಲ ವಸ್ತು ಮತ್ತು ಉತ್ಪತ್ತಿಯೊಂದಿಗಾಗುವ ಘರ್ಷಣೆಯಿಂದ ಒಂದು ರೀತಿಯ ಋಣಾತ್ಮಕ ಶಕ್ತಿ ಬಿಡುಗಡೆಯಾಗುತ್ತದೆ.
ಆ ಶಕ್ತಿಯ ಪ್ರವಹನೆಯೇ ವಾಯು.
ವಾಯುವಿನ ಚಲನೆಯು ಶಾಖ ಉತ್ಪನ್ನಕ್ಕೆ ಕಾರಣವಾಯಿತು.
ಹಾಗಾಗಿ ಅಗ್ನಿ ಉತ್ಪನ್ನವಾಯಿತು.
ಅಗ್ನಿಯ ದಹ್ಯ ಶಕ್ತಿಯಿಂದಾಗಿ ನೀರುಹುಟ್ಟುತ್ತದೆ.
ನೀರಿನಲ್ಲಿದ್ದ ಶ್ಲೇಷ್ಮಾಂಶ ಎಂಬ ಮತ್ಸ್ವಗಳು ಪೃಥ್ವಿಯಾಗುತ್ತದೆ.
ಇ…

ನಾಭ ಋಷಿ ಪ್ರೋಕ್ತ ಜಗತ್ ಸೃಷ್ಟಿಯ ನಿಯಮಗಳು

ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರ ಪಂಚವಾರ್ಷಿಕ ಅಗ್ನ್ಯಾ ವೈಷ್ಣವೀ ಯಾಗದಲ್ಲಿ ಅಗ್ನಿ ಮುಖೇನ ಉದ್ಘಾಟಿತ ನಾಭಾ (ನೇದಿಷ್ಠೋ ಮಾನವಃ) ಋಷಿವರ್ಯರ ಸತ್ಯ ವಿಚಾರಗಳಲ್ಲಿ ಜಗತ್ ಸೃಷ್ಟಿಯ ನಿಯಮಗಳ ಕೆಲ ಆಯ್ದ ಪದ್ಯಗಳು–
ಉದಯಕಾಲಕೆ ಮುನ್ನ ಮರುದಿನವೆದ್ದು ಶಿಷ್ಯರು ಸ್ನಾನ ಸಂಧ್ಯಾ ವಂದನೆಯ ಮುಗಿಸುತ ಬಂದು ಗುರುವಿನ ಬಳಿಯಲಿ ಕೇಳಿದರು ತಂದೆ ಕೇಳೈ ನೀವು ಪೇಳಿದಿರಿ ಈ ಅಜಾಂಡದ ರೂಪ ಸ್ವರೂಪವೇ ಮಾನವ ದೇಹವೆಂದಿರಿ ಅದರರ್ಥವೇನು || ಚಂದವಾಯಿತು ಮಕ್ಕಳೇ ಕೇಳಿ ನೀವ್ ಈ ಅಜಾಂಡದ ರಹಸ್ಯ ವಿಂದು ಪೇಳುವೆ ಕೇಳಿ ಹಿಂದೆ ಜಲಮಯವಾಗಿತ್ತು ಇಲ್ಲಿನಾ ಆ ನಂದ ಪೃಥ್ವಿಯು ಉದಿಸಲೋಸುಗ ಹರಿಯ ಕರ್ಣ ಶ್ಲೇಷ್ಮ ಉದುರಿಸಿದ ಬೊಮ್ಮನಾಗಲು ಜನಿಸಿದರೀರ್ವರೂ ||
ಇಬ್ಬರೆಂದರೆ ಮಾನವರಲ್ಲ ರಾಕ್ಷಸರು ಅಂದರೆ ವಿಕೃತಿ, ವಿಕಾರ ಒಬ್ಬಗೆಯ ರೂಪವಿಲ್ಲದ ಮೆತ್ತನೆಯ ಮಾಂಸಲ ಮುದ್ದೆಯೊಂದು ಇ ನ್ನೊಬ್ಬ ಕಠಿಣತೆಯಲಿ ಶಿಲೆಯಲ್ಲಿ ವಜ್ರವಲ್ಲವು ಶಂಖಾದಿ ಪಾಷಾಣಗಳ ಪರ್ವತವು ರೂಪವಿಲ್ಲದೆ ಉದಿಸಿರಲೂ || ಶಬುದಕೇನಾಕಾರ ವಿಭುಧರಿಲ್ಲವು ಆಕಾರ ನಿರ್ದೇಶನಕೆ ವಿಪುಲ ಜಲದಲಿ ಅರ್ಬುದ ಹಲವಾರು ಕಾಲ ತೇಲುತಿರೆ ಒಂದಿನ ಬೊಮ್ಮ ಚಿಂತಿಸಿದ ಇದರಲಿ ಕಬ್ಬವನು ಸೃಷ್ಟಿಸಲು ಪೃಥ್ವಿಯಪ್ಪುದು ಎಂದು ಮೈದೋರಿ ಕರ್ಷಣೆಗೆ ಅನುವಾಗಿ ವ್ಯರ್ಥವಾಗಲು ಕರೆದ ಹರಿಯನ್ನೂ ||
ಹರಿಯೆ ಕೇಳ್ ಪೃಥ್ವಿಯಾ ಸೃಷ್ಟಿಯಲಿ ಎರಡು ಭೂತಗಳಿಹವು ಒಂದು ಮೃದು ಸಿರಿಯೊಳಗಾಧವದು ಆದರಿನ್ನೊಂದು ಕಠಿಣವು ವಿಪುಲ ಗಾತ್ರವು ನಿನ್ನೊಳಿಹ ಬರಿಯ ಶ್ಲೇಷ್ಮದ ಕ…