Monday, 22 April 2013

ವೈಧಿಕ ಭೌತಶಾಸ್ತ್ರೋಕ್ತ ಜಗತ್ ಸೃಷ್ಟಿಯ ನಿಯಮಗಳು - ೨

 • ಹಿಂದಿನ ಲೇಖನದಲ್ಲಿ ಪಂಚಭೂತಾತ್ಮಕ ಸೃಷ್ಟಿ ಎನ್ನುವ ಒಂದು ಭಾಗದ ವಿವರಣೆಯನ್ನು ಯಾಗಮುಖದಲ್ಲಿ ಮಹಾನ್ ಋಷಿವರೇಣ್ಯರಿಂದ ಉದ್ಘಾಟಿಸಲಾಯಿತು. ಇದೊಂದು ಭಾಗ, ಇನ್ನೂ ೩ ಭಾಗದ ಜಗತ್ ಸೃಷ್ಟಿಯ ನಿಯಮಗಳನ್ನು ವೇದ ಹೇಳುತ್ತದೆ. ವಿಚಾರ ಒಂದೇಯಾದರೂ, ಬೇರೆ ಬೇರೆ ಕೋನಗಳಲ್ಲಿ ಚಿಂತಿಸಲಾಗಿದೆ. ಪ್ರಸಕ್ತ ವಿಜ್ಞಾನದ ಹೆಸರಿನಲ್ಲಿ ಮನಸ್ಸಿಗೆ ತೋಚಿದಂತೆಲ್ಲ ವ್ಯಾಖ್ಯಾನಿಸಿರುವ ಸಿದ್ಧಾಂತಗಳು ವಿಜ್ಞಾನ ಗೊಬ್ಬರವೆಂಬುದು ಸತ್ಯ. ಸುಜ್ಞಾನ ಬೆಳೆಯಲು ಗೊಬ್ಬರ ಸ್ವಲ್ಪವಾದರೂ ಬೇಕು. ಆದರೆ ಗೊಬ್ಬರವೇ ಸತ್ಯವಲ್ಲ.
 • ಸಾಮಾನ್ಯವಾಗಿ ಪೃಥ್ವಿ, ಆಪ್, ತೇಜ, ವಾಯು ಎಂಬ ೪ ಭೂತಗಳ ಪರಿಚಯ ಮಾತ್ರ ನಮಗಿರುವುದು, ೫ನೇಯದರ ಪರಿಚಯ ನಮಗಿರುವುದಿಲ್ಲ. ಇದೆ ಎಂಬ ಕಲ್ಪನೆ ಮಾತ್ರ ಇರುವಂತಹದ್ದು. ಆಕಾಶದ ಕಲ್ಪನೆಯಿದೆ ಬಿಟ್ಟರೆ ಅದರ ವ್ಯಾಪ್ತಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲ.
 • ಆಕಾಶ ವ್ಯಾಪ್ತಿಯಾದಂತಹಾ ಯಾವುದೋ ಒಂದು ಮೂಲ ಚೈತನ್ಯಕ್ಕೊಂದು ಇಚ್ಛೆ/ಅಪೇಕ್ಷೆ/ಕುತೂಹಲ/ಬೇಕು/ಪ್ರಶ್ನೆ ಹುಟ್ಟುತ್ತದೆ.
 • ಈ ರೀತಿಯಾದ ಇಚ್ಛೆ ಉತ್ಪತ್ತಿಯಾದಾಗ, ಮೂಲ ವಸ್ತು ಮತ್ತು ಉತ್ಪತ್ತಿಯೊಂದಿಗಾಗುವ ಘರ್ಷಣೆಯಿಂದ ಒಂದು ರೀತಿಯ ಋಣಾತ್ಮಕ ಶಕ್ತಿ ಬಿಡುಗಡೆಯಾಗುತ್ತದೆ.
 • ಆ ಶಕ್ತಿಯ ಪ್ರವಹನೆಯೇ ವಾಯು.
 • ವಾಯುವಿನ ಚಲನೆಯು ಶಾಖ ಉತ್ಪನ್ನಕ್ಕೆ ಕಾರಣವಾಯಿತು.
 • ಹಾಗಾಗಿ ಅಗ್ನಿ ಉತ್ಪನ್ನವಾಯಿತು.
 • ಅಗ್ನಿಯ ದಹ್ಯ ಶಕ್ತಿಯಿಂದಾಗಿ ನೀರು ಹುಟ್ಟುತ್ತದೆ.
 • ನೀರಿನಲ್ಲಿದ್ದ ಶ್ಲೇಷ್ಮಾಂಶ ಎಂಬ ಮತ್ಸ್ವಗಳು ಪೃಥ್ವಿಯಾಗುತ್ತದೆ.
 • ಇದು ವೇದೋಕ್ತ ಪಂಚಭೂತಗಳ ಸೃಷ್ಟಿಯ ಮೂಲ ಸೂತ್ರ.
 • ಮತ್ಸ್ವಗಳಿಗಿರುವ ಒಂದು ಗುಣವೆಂದರೆ ತನ್ನತನವನ್ನು ಕಾಯ್ದುಕೊಳ್ಳುವುದು.
 • ನೀರನ್ನು ಎಷ್ಟೇ ಶುದ್ಧಗೊಳಿಸಿದರೂ ಅದರಲ್ಲಿ ಶ್ಲೇಷ್ಮವು ಇದ್ದೇ ಇರುತ್ತದೆ.
 • ಮತ್ಸ್ವಗಳಿಗೆ ಸದಾ ಪ್ರವಹನಶೀಲ ಶಕ್ತಿ ಇರುತ್ತದೆ.
 • ಅದರಿಂದ ಯಾವುದೊಂದನ್ನೋ ಹಿಡಿದುಕೊಳ್ಳುತ್ತದೆ, ತನ್ಮೂಲಕ ಬೆಳೆಯುತ್ತಾ ಹೋಗಿ ರೂಪ ಪಡೆಯುತ್ತದೆ.
 • ಆಗ ಪೃಥ್ವಿಯನ್ನು ಬಂದು ಸೇರುತ್ತಾ ಹೋಗುತ್ತವೆ.
 • ಆದರೆ ಪೃಥ್ವಿಯಲ್ಲಿ ಆಕಾಶದ ಅವಕಾಶವಿಲ್ಲ.
 • ಆಕಾಶವಿಲ್ಲದ ಕಾರಣ ಪೃಥ್ವಿಯು ಮತ್ಸ್ವದಿಂದಾದ ರೂಪಗಳನ್ನು ಪ್ರತ್ಯೇಕವಾಗಿ ಇಡುತ್ತಾ ಬರುತ್ತದೆ.
 • ಹಾಗಾಗಿ ಪೃಥ್ವಿಯಲ್ಲಿರತಕ್ಕ ಎಲ್ಲವೂ ಅಣು-ಅಣುವಾಗಿ ಬೇರೆಯಾಗಿಯೇ ಇವೆಯೇ ಹೊರತು ಒಂದಾಗಿಲ್ಲ.
 • ನೋಡಲಿಕ್ಕೆ ಒಂದು ಬೃಹತ್ ಬಂಡೆಯಾದರೂ ಅದು ಅಣುಗಳ ಸಂಯೋಗವೇ ಆಗಿರುತ್ತದೆ.
 • ಯಾವುದೂ ಒಂದನ್ನೊಂದು ಸೇರುವುದಿಲ್ಲ, ಅದು ಪೃಥ್ವಿಯ ಗುಣ.
 • ಹಾಗೆ ಸೇರದೆ ಪ್ರತ್ಯೇಕವಾಗಿ ಉಳಿದ ತುಣುಕುಗಳಿಗೆ ಕೊನೆಯಲ್ಲಿ, ಆಕಾಶ ತತ್ವದಲ್ಲಿ ಉಂಟಾಗಿದ್ದ ಮೂಲ ಋಣಾಂಶವು ಆರೋಪಿಸಲ್ಪಡುತ್ತದೆ.
 • ಹಾಗಾಗಿ ಅದನ್ನು ಜೀವ ಎಂದರು. ಆದ್ದರಿಂದ ಮೂಲ ಋಣವೇ ಜೀವ.
 • ಪ್ರತ್ಯೇಕವಾದ ಅಂಶಗಳಲ್ಲಿ ಸೇರಿದಂತಹಾ ಬೀಜವಾದ ಜೀವವೇ ಅಣು.
 • ಅದರಲ್ಲಿರುವ ಚಾಲನಾ ಶಕ್ತಿಯೇ ಮೂಲಚೈತನ್ಯ.
 • ಅದು ಆರಂಭಿಕ ಪ್ರಕೃತಿಯಲ್ಲಿ ಸಹಜ ವ್ಯವಹಾರದಲ್ಲಿದ್ದಾಗ ಭಿನ್ನ-ಭಿನ್ನ ರೂಪಗಳಾಗಿ ಬರುತ್ತದೆ.
 • ರೂಪಕ್ಕಾಧರಿಸಿ ವ್ಯವಹಾರಗಳು ಉಂಟಾಗುತ್ತವೆ.
 • ಅದರಲ್ಲಾದ ಋಣವು ವ್ಯವಹಾರಕ್ಕೆ ಕಾರಣೀಭೂತವಾಗುತ್ತಲೇ, ಅದಕ್ಕಾಧರಿಸಿದ ಕರ್ಮವು ಸೃಷ್ಟಿಯಾಗುತ್ತದೆ.
 • ಯಾವುದೇ ಒಂದ ಕೆಲಸವಾದರೆ ಒಂದು ಫಲ ಎಂಬುದು ಬರುತ್ತದೆ.
 • ಒಂದು ವಸ್ತುವು ಒಂದು ಪ್ರದೇಶದಲ್ಲಿ ಹರಿಯುತ್ತಿದ್ದರೆ, ಅಲ್ಲೊಂದು ದಾರಿ ನಿರ್ಮಾಣವಾಗುತ್ತದೆ. ಅದನ್ನೇ ಕರ್ಮ ಎಂದರು.
 • ಕರ್ಮ ಸೃಷ್ಟಿಯಾದಾಗ ಅದಕ್ಕೊಂದು ಭೋಕ್ತೃ ಬೇಕು. ಅದಕ್ಕಾಗಿ ಜೀವ ಸೃಷ್ಟಿಯಾಗುತ್ತದೆ.
 • ಅಂದರೆ ಜೀವವು ಆ ಕರ್ಮವನ್ನು ಅನುಭವಿಸುವುದಕ್ಕಾಗಿ ಸೃಷ್ಟಿಯಾಗುವುದು.
 • ಆ ಕರ್ಮವನ್ನು ಅನುಭವಿಸುವುದರಿಂದಾಗಿ ಅನುಭವ ಕಾಲದಲ್ಲಿ ಮಾಡತಕ್ಕಂತಹಾ ಸಂಚಿತಗಳೇನಿವೆಯೋ ಅವು ವೃದ್ಧಿಸುತ್ತವೆ.
 • ಈ ರೀತಿ ಸಂಚಿತ ಭಾಗದ ಕರ್ಮಗಳ ಪ್ರಾಬಲ್ಯವು ಹೆಚ್ಚಿದಂತೆ ಹಲವು ಭಿನ್ನ-ಭಿನ್ನ ರೀತಿಯ ಜೀವಿಗಳ ಸೃಷ್ಟಿಯಾಗುತ್ತದೆ. ಅದರಲ್ಲಿ ಒಂದು ರೂಪ ಮನುಷ್ಯ!
 • ಮನುಷ್ಯ ರೂಪ ಬಂದಾಗ ಒಂದಿಷ್ಟು ವಿಶೇಷ ಗುಣಗಳನ್ನು ಸಂಯೋಜಿಸುತ್ತದೆ.
 • ಕರ್ಮವನ್ನಾಧರಿಸಿ ಜೀವನ ನಡೆಸಲು ಬೌದ್ಧಿಕತೆ. ಅಂದರೆ ಬುದ್ಧಿಯನ್ನು ಕೊಟ್ಟು ಕರ್ಮ ಸ್ವಾತಂತ್ರ್ಯ ಇಡುತ್ತದೆ.
 • ಪ್ರಪಂಚದ ಇತರೆ ಯಾವುದೇ ಜೀವಿಗಳಿಗೂ ಕರ್ಮದ ಸ್ವಾತಂತ್ರ್ಯವಿಲ್ಲ, ಮನುಷ್ಯ ಮಾತ್ರ ಕರ್ಮವನ್ನು ತನ್ನ ಬೌದ್ಧಿಕತೆಯಿಂದ ಬೇಕಾದಂತೆ ಬಳಸಿ ಪ್ರಪಂಚದಲ್ಲಿ ಬೆಳೆಯಬಹುದು.
 • ಅದು ಉತ್ತಮ ಮಾರ್ಗದಲ್ಲಾದರೆ ದೇವತ್ವಕ್ಕೆ ಏರುತ್ತಾನೆ, ಪುನಃ ಮೂಲ ಚೈತನ್ಯದಲ್ಲಿ ಹೋಗಿ ಸೇರುತ್ತಾರೆ.
 • ಕೆಟ್ಟ ಮಾರ್ಗದಲ್ಲಿ ಹೋದರೆ ರಾಕ್ಷಸತ್ವಕ್ಕೆ ಇಳಿದು, ಈ ಭೂಮಿಯಲ್ಲಿ ನಿರಂತರತೆಯನ್ನು ಕಾಯ್ದುಕೊಂಡು ಬರುತ್ತಾರೆ.
 • ಇದು ಮನುಷ್ಯ ಗುಣದ ಒಂದು ವ್ಯವಸ್ಥೆ.

2 comments:

 1. Not familiar with Kannada script. Is there a translation available?

  ReplyDelete