Tuesday, 25 June 2013

ಥೋರಿಯಂ ಹಗರಣಪರ್ಯಾಯ ಇಂಧನ ಮೂಲಗಳ ಸಂಶೋಧನೆಯಲ್ಲಿ ತೊಡಗಿದ್ದ ನನಗೆ ಇತ್ತೀಚೆಗೆ ಚರ್ಚಾ ವಿಷಯವಾಗಿರುವ ಥೋರಿಯಂ ಧಾತುವಿನ ಬಗ್ಗೆ ತಿಳಿದುಬಂದಿತು. ಥೋರಿಯಂ ಎಂಬುದು ಪ್ರಾಕೃತಿಕವಾಗಿ ಲಭ್ಯವಿರುವ ಸಣ್ಣ ಪ್ರಮಾಣದಲ್ಲಿ ವಿಕಿರಣಪಟುತ್ವ ಹೊಂದಿರುವ ಲೋಹ. ಇದನ್ನು 1828ರಲ್ಲಿ ನಾರ್ವೀಜಿಯನ್ ಖನಿಜ ತಜ್ಞ ಮಾರ್ಟನ್ ಥ್ರೇನ್ ಎಸ್ಮಾರ್ಕ್ ಕಂಡುಹಿಡಿದು, ಸ್ವೀಡಿಶ್ ರಸಾಯನ ತಜ್ಞ ಜಾನ್ಸ್ ಜಾಕೋಬ್ ಬೆರ್ಜಿಲಿಯಸ್ ಅದರ ಗುಣಾವಗುಣಗಳನ್ನು ಗುರುತಿಸಿ, ಇಂಗ್ಲೀಷ್ ಹುಟ್ಟುವ ಎಷ್ಟೋ ಕಾಲ ಹಿಂದಿನಿಂದ ಜನಪದೀಯವಾಗಿ ಬಳಕೆಯಲ್ಲಿದ್ದ ಜರ್ಮನಿಯ ನಾರ್ಸ್ ಮಿಥ್ಯಾವಾದದಲ್ಲಿ (ಮೈಥಾಲಜಿ) ಬರುವ ಥಾರ್ ಎಂಬ ದೇವರ ಪ್ರತೀಕವಾಗಿ ಥೋರಿಯಂ ಎಂದು ನಾಮಕರಣ ಮಾಡಲಾಯಿತು. ಈ ಥಾರ್ ಎನ್ನುವ ದೇವ ಸುತ್ತಿಗೆ ಹಿಡಿದು ಗುಡುಗು, ಮಿಂಚು, ಸಿಡಿಲು, ಬಲ, ಮಾನವ ರಕ್ಷಣೆ, ಪೌರುಷ ಪ್ರಧಾತ, ಆರೋಗ್ಯದಾಯಕ ಎಂದು ನಂಬಿಕೆ. ವಿಕಿರಣಪಟುತ್ವ ಎಂದರೆ ಒಂದು ಧಾತುವಿನ ಅಸ್ಥಿರ ಪರಮಾಣುವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ವಿಕಿರಣವನ್ನು ಹೊರಸೂಸುವ ಪ್ರಕ್ರಿಯೆ. ಇದರಲ್ಲಿ ಹಲವು ಬಗೆ ಇವೆ. ಪ್ರಾಕೃತಿಕವಾಗಿ ಥೋರಿಯಂ ಲೋಹದ ಒಂದು ಐಸೋಟೋಪು, ಥೋರಿಯಮ್-232 ಆಗಿ ಲಭ್ಯವಿದ್ದು, 14.056 ಬಿಲಿಯನ್ ವರ್ಷ ಹಾಫ್ ಲೈಪ್ ಉಳ್ಳದ್ದಾಗಿ ಆಲ್ಫಾ ಸವಕಳಿ ಹೊಂದುತ್ತದೆ ಎನ್ನಲಾಗಿದೆ. ಒಂದು ಬಿಲಿಯನ್ ಎಂದರೆ 109. ಹಾಫ್ ಲೈಫ್ ಎನ್ನುವುದು ಒಂದು ವಸ್ತುವು ಸವಕಳಿ ಹೊಂದುತ್ತಾ ತನ್ನ ಅರ್ಧಾಂಶಕ್ಕೆ ಇಳಿಯಲು ಬೇಕಾಗುವ ಸರಾಸರಿ ಸಮಯ. ಆ ಸಮಯವನ್ನು 14.056 ಬಿಲಿಯನ್ ವರ್ಷ ಎಂದರು. ಅಂದರೆ ಇದು ಅರ್ಧಾಂಶಕ್ಕೆ ಅಣುಗಳು ಸವೆದು ಇಳಿಯಲು ಬೇಕಾಗುವ ಸಮಯ ಎಂದರ್ಥ. ಹಾಗಾದರೆ ಅದು ಸಂಪೂರ್ಣ ಸವೆತ ಹೊಂದಲು ದುಪ್ಪಟ್ಟು ವರ್ಷ ಬೇಕಾಗುವುದೇನೋ! ಇದೆಲ್ಲ ಗಣಿತ ಸೂತ್ರಗಳಿಗೆ ಬೆಲೆ ತುಂಬಿ ಲೆಕ್ಕಿಸಿದ ವಿಚಾರಗಳೇ ಹೊರತು ಯಾವುದೇ ಆಧಾರವಿಲ್ಲ. ಏಕೆಂದರೆ ಇಲ್ಲೊಂದು ಚೋದ್ಯ ಕಂಡುಬರುತ್ತದೆ -
1015 ಸೆಕೆಂಡ್‍ಗಳು = 1 ಪೀಟಾ ಸೆಕೆಂಡ್ = 32 ಮಿಲಿಯನ್ (106) ವರ್ಷಗಳು. ವಿಜ್ಞಾನದ ಪ್ರಕಾರ ಥೋರಿಯಂ-232 ಧಾತುವಿನ ಹಾಫ್ ಲೈಫ್ 443.6 ಪೀಟಾ ಸೆಕೆಂಡ್ಸ್. ವೈಜ್ಞಾನಿಕರೇ ಹೇಳುವಂತೆ ಭೂಮಿಯ ವಯಸ್ಸು 143 ಪೀಟಾ ಸೆಕೆಂಡ್, ಸೌರಮಂಡಲ ಮತ್ತು ಸೂರ್ಯನ ವಯಸ್ಸು 144 ಪೀಟಾ ಸೆಕೆಂಡ್, ವಿಶ್ವದ ವಯಸ್ಸು 430 ಪೀಟಾ ಸೆಕೆಂಡ್. ಅಂದರೆ ಅರ್ಧಾಂಶಕ್ಕೆ ಸವೆದ ಥೋರಿಯಂ ಲೋಹವು ವಿಶ್ವದ ವಯಸ್ಸಿಗಿಂತ (443.6-430) 13.6 ಪೀಟಾ ಸೆಕೆಂಡಿನಷ್ಟು ಹಳೆಯದಾ? ಭೂಮಿಯೇ ಇಲ್ಲದಿದ್ದಾಗ ಈ ಲೋಹಗಳೆಲ್ಲಿತ್ತು? ಎಲ್ಲ ಗೋಜಲುಮಯ.
ನಮ್ಮಲ್ಲಿ 109 ಎಂಬ ಸಂಖ್ಯೆಯನ್ನು ಶತಕೋಟಿ, ಅಬ್ಜ, ಮಹಾರ್ಬುದ ಎಂದೆಲ್ಲ ಹೆಸರಿಸಿ ಬಳಸಿದ್ದಾರೆ. 1021 ಜೆಟ್ಟಾಸೆಕೆಂಡ್ (32 ಟ್ರಿಲಿಯನ್ ವರ್ಷಗಳು) ಎಂದರೆ ಉತ್ಸಂಗಃ ಸಂಖ್ಯೆ ಎಂದು. ನಮ್ಮಲ್ಲಿ ಒಂದು ಬ್ರಹ್ಮನ ಆಯಸ್ಸು 9.8 ಉತ್ಸಂಗ (ಜೆಟ್ಟಾಸೆಕೆಂಡ್) ಎಂದು ನಿರ್ಧರಿಸಿ ಇಟ್ಟಿದ್ದಾರೆ. ಪೌರಾಣಿಕ ವಿಚಾರ ಬಂದಾಗ ಆಧಾರ ರಹಿತ ಎಂದು ಕೂಗುವ ಭಂಡರು ತಮ್ಮ ಲೆಕ್ಕಾಚಾರದಲ್ಲಿ ಸ್ವಲ್ಪವೂ ಸಾಮ್ಯತೆಯಾಗಲೀ, ಆಧಾರಗಳನ್ನಾಗಲೀ ನೀಡಲಶಕ್ಯರಾಗಿದ್ದಾರೆ. ವೇದಗಳಲ್ಲಿ ಹೇಳಿಕೊಟ್ಟರೂ ಕಲಿಯಲಾಗದ ಗಣಕ-ಗುಣಕದ ಸೂತ್ರಗಳಿವೆ. 
ಕ್ರಿ.ಪೂ. 100ಕ್ಕೂ ಹಿಂದೆ 1053 ರವರೆಗೆ ಸಂಖ್ಯೆಗಳನ್ನು ಹೆಸರಿಸಿ ಬಳಸಿದ್ದಾರೆ; ನಮ್ಮ ಭಾರತೀಯ ಗಣಿತಶಾಸ್ತ್ರಜ್ಞರು –
ಏಕಮ್ – 100, ದಶಕಮ್ – 101, ಶತಮ್ – 102, ಸಹಸ್ರಮ್ – 103, ದಶಸಹಸ್ರಮ್ – 104, ಲಕ್ಷ – 105, ದಶ ಲಕ್ಷ – 106, ಕೋಟಿ – 107, ಅಯುತಮ್ – 109, ನಿಯುತಮ್ – 1011, ಕಂಕರಮ್ – 1013, ವಿವರಮ್ – 1016, ಪರಾರ್ಧಃ – 1017, ನಿವಹತ – 1019, ಉತ್ಸಂಗಃ – 1021, ಬಹುಲಮ್ – 1023, ನಾಗ್ಬಾಲಃ – 1025, ತಿತ್ಲಂಬಮ್ – 1027, ವ್ಯವಸ್ಥಾನಪ್ರಜ್ಞಾಪ್ತಿಃ – 1029, ಹೇತುಹೇಳ್ಳಮ್ – 1031, ಕರಹುಃ – 1033, ಹೇತ್ವಿಂದ್ರೀಯಮ್ – 1035, ಸಂಪಾತ ಲಂಭಃ – 1037, ಗಣನಾಗತಿಃ – 1039, ನಿರವದ್ಯಮ್ -  1041, ಮುದ್ರಾಬಲಮ್ – 1043, ಸರಾಬಲಮ್ – 1045, ವಿಷಮಜ್ಞಗತಿಃ – 1047, ಸರ್ವಜ್ಞಃ – 1049, ವಿಭೂತಂಗಾಮ – 1051, ತಲ್ಲಕ್ಷಣಾಮ್ – 1053.

ವಿದೇಶಿಯರು ನಮೆಗೆ ತಿಳಿಯದ ಹಾಗೆ ಲೆಕ್ಕಗಳನ್ನು ಕದ್ದು ತಮ್ಮಯ ಹೊಸ ನಾಮಕರಣ ಮಾಡಿದರೆ ನಮಗೆ ಅರ್ಥವಾಗುವುದಿಲ್ಲ ಎಂದು ತಿಳಿದಿದ್ದಾರೆ. ಅಂತಹ ಒಂದು ಮೋಜೆಂದರೆ ಈ ವಿಶ್ವದ ವಯಸ್ಸು 13.7 x 109 ವರ್ಷಗಳು ಎಂದು ಹೇಳಿದ್ದಾರೆ. ಇದನ್ನು ಸೆಕೆಂಡುಗಳಿಗೆ ಪರಿವರ್ತಿಸಿದರೆ 432043200 x 109 = 432.0432 x 1015 432 ಪೀಟಾ ಸೆಕೆಂಡ್. 432 ನಮ್ಮ ವಿಷ್ಣು ಸಂಖ್ಯೆ ಎಂದು ಹಿಂದೆ ಬಹಳ ಪ್ರಚಾರದಲ್ಲಿತ್ತು. ಅದನ್ನೇ ಯುಗ ಗಣಿತದಲ್ಲೂ ಬಳಸಿದ್ದರು. ಇದನ್ನೇ ಕದ್ದು 430 ಪೀಟಾ ಸೆಕೆಂಡ್ ಅಂತ ತೋರಿಸಿದ್ದಾರೆ. ಆದರೆ ನಮ್ಮಲ್ಲಿ ಒಂದು ಮಹಾಯುಗವೇ ಹೆಚ್ಚೆಂದರೆ 43,20,000 ವರ್ಷದಷ್ಟು ವಿಸ್ತಾರ ಹೊಂದಬಹುದು. ಒಂದು ಕಲ್ಪವೆಂದರೆ 1000 ಮಹಾಯುಗಗಳು. 71 ಮಹಾಯುಗಗಳಿಗೆ ಒಂದು ಮನ್ವಂತರ. ಒಂದು ಕಲ್ಪದಲ್ಲಿ ಅಂತಹಾ 14 ಮನ್ವಂತರಗಳು, ಅದರಲ್ಲಿ ಈಗ 7ನೇ ವೈವಸ್ವತ ಮನ್ವಂತರದಲ್ಲಿದ್ದೇವೆ. ಪ್ರಸಕ್ತ ಕಲ್ಪದಲ್ಲಿ ಅಂತಹಾ 27 ಮಹಾಯುಗಗಳು ಕಳೆದು ಈಗ 28ನೇ ಮಹಾಯುಗದಲ್ಲಿ ಇದ್ದೇವೆ. ಬ್ರಹ್ಮನ ಒಂದು ಹಗಲು + ಒಂದು ರಾತ್ರಿ = 2 ಕಲ್ಪಗಳು. 360 ದಿನವುಳ್ಳ ವರ್ಷ ಗಣನೆಯಂತೆ ಬ್ರಹ್ಮನು 100 ವರ್ಷ ಅಂದರೆ 72,000 ಕಲ್ಪಗಳನ್ನು ಆಳುತ್ತಾನೆ. 100 ಬ್ರಹ್ಮರ ಕಾಲದಲ್ಲಿ ಒಬ್ಬ ವಿಷ್ಣುವಿನ ಆಡಳಿತ. ಅಂತಹಾ 60 ವಿಷ್ಣುಗಳ ಕಾಲದಲ್ಲಿ ಒಬ್ಬ ಶಿವನ ಆಡಳಿತ. ಇಂತಹಾ ಘನ ಗಣಿತದ ಮುಂದೆ ಆಧುನಿಕ ವಿಜ್ಞಾನದ ಲೆಕ್ಕಾಚಾರ ಎಷ್ಟು ಕ್ಷುಲ್ಲಕ ಎಂದು ಇಲ್ಲೇ ತಿಳಿದುಬರುತ್ತದೆ.

ಯಾವುದೇ ಮೂಲವಸ್ತುವನ್ನು ಅದರ ದ್ರವ್ಯ, ಕಾಲ, ಕ್ಷೇತ್ರ ಮತ್ತು ಭಾವಗಳಿಂದ ಪ್ರಮಾಣೀಕರಿಸಬೇಕು. ಅದಕ್ಕೆ ಅದರದ್ದೇ ಆದ ಭಾಷೆ ಮತ್ತು ಗಣಿತ ಉಂಟು. ಥೋರಿಯಂಗೆ ಸಂಸ್ಕೃತ ಮತ್ತು ನಮ್ಮ ಶಾಸ್ತ್ರಗಳಲ್ಲಿ ಏನು ಹೆಸರೆಂದು ಭಾರತೀಯ ವಿದ್ಯಾ ಪರಿಷತ್ ಎಂದು ನಾಮಫಲಕ ಹಾಕಿಕೊಂಡಿದ್ದ ಅಂತರ್ಜಾಲದಲ್ಲಿದ್ದ ವಿದ್ವಾಂಸರನ್ನು ಪ್ರಶ್ನಿಸಲಾಗಿ, ಈ ಪ್ರಶ್ನೆಯೇ ಅಸಂಬದ್ಧ, ಪ್ರಶ್ನೆ ಕೇಳಿದ್ದೇ ತಪ್ಪು ಎಂಬಂತೆ ವರ್ತಿಸಿದರು. ವೈಧಿಕ ಭೌತಶಾಸ್ತ್ರವು 187 ಮೂಲಧಾತುಗಳನ್ನು ಗುರುತಿಸಿದೆ. ಅದರಲ್ಲಿ ಈಗ ಹೆಸರಿಸಿರುವ ಥೋರಿಯಂ ಎನ್ನುವ ಧಾತುವಿನ ಅಣುಸೂತ್ರ ಮತ್ತು ವಿನ್ಯಾಸದ ಆಧಾರದಲ್ಲಿ ಚಿಂತಿಸಿದರೆ ಅದನ್ನು “ದೇವ ಜಲ” ಎಂದು ಹೆಸರಿಸಿದ್ದಾರೆ ಎಂದು ಬ್ರಹ್ಮರ್ಷಿಗಳು ಉತ್ತರಿಸಿದರು. ಅದಕ್ಕೆ ವೇದದಲ್ಲಿ “ದೇವಾ ವೈ ವಾರುಣಿಃ” ಎಂದಿದೆ ಅಂತ ತಿಳಿಸಿದ್ದಾರೆ. ಅದು ಮೂಲದಲ್ಲಿ ರಸ ಸ್ವರೂಪದಲ್ಲಿದ್ದು ಅದಿರಾಗುವಾಗ ಇತರೆ ಘಟಕಗಳೊಂದಿಗೆ ಸೇರಿ ಘನವಾಗಿ ದೊರಕುತ್ತದೆ. ಈ ಧಾತುವು ಸೂರ್ಯನಲ್ಲೂ ಇದೆ, ಭೂಮಿಯಲ್ಲಿ ಬೀಜಾಂಕುರ, ಪ್ರತಿಫಲನ ಇತ್ಯಾದಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಧಾತುವಿದು. ಹಾಗಾಗಿ ಗಾಜು, ಬಲ್ಬು, ಕೆಲ ರಾಸಾಯನಿಕಗಳಲ್ಲೂ ಬಳಕೆ ಇದ್ದಿತು. ವಿದ್ವಾಂಸರಲ್ಲಿ ಕೇಳಿದ ಪ್ರಶ್ನೆಗೆ ಗುರು ಮುಖೇನ ತಿಳಿದು ನಾನೇ ಉತ್ತರಿಸಿದಾಗ, ತಮ್ಮ ಅಲ್ಪಜ್ಞತೆಯನ್ನು ಸಹಿಸಲಾಗದೆ, ಕೊನೆಗೆ ಅವರ ಗುಂಪಿನಲ್ಲಿ ಏನನ್ನೂ ಬರೆಯದ ಹಾಗೆ ಜಾಲದ ಅನುಮತಿಯನ್ನು ನಿರ್ಬಂಧಿಸಿದರು. ಸಗಣಿಯೊಂದೆಗೆ ಸರಸಕ್ಕಿಂತ ಗಂಧದೊಂದೆಗೆ ಜಗಳ ಲೇಸೆಂಬ ಗಾದೆ ಮಾತಿನಂತೆ ಆ ಗುಂಪಿನಿಂದ ಸ್ವತಃ ಹೊರಬಂದೆ. 

ಆಧುನಿಕರಂತೋ ಅದು ರಸ ಸ್ವರೂಪದಲ್ಲಿಲ್ಲ ಎಂದೇ ತಿಳಿದಿದ್ದಾರೆ. ವೇದವು ವಿಚಾರಗಳ ಮೂಲದಿಂದಲೇ ಚಿಂತಿಸುತ್ತದೆ ಹೊರತು ಕಣ್ಣಿಗೆ ಕಂಡದ್ದನ್ನೇ ಪ್ರಮಾಣೀಕರಿಸುವುದಿಲ್ಲ. ಆಧುನಿಕರು ಸ್ಫೋಟಕ ವಿಧಾನದಿಂದ ವಿದಳನ ಮಾಡುವ ಪ್ರಕ್ರಿಯೆಗೆ ಪೂರಕ ಎಂದಿದ್ದಾರೆ. ಘಾಟಕ+ಘೋಟಕಗಳೆಂಬ ಸೃಜನೆ+ಪಾಲನೆಯತ್ತ ಚಿಂತನೆಯೇ ಇಲ್ಲದಂತೆ ಕೇವಲ ಸ್ಫೋಟಕ ಚಿಂತನೆಯಲ್ಲೇ ತೊಡಗಿದ್ದಾರೆ. ಆದರೆ ಇದು ಸ್ಫೋಟಕವಲ್ಲ, ವಿಕಿರಣ ಹೊರಸೂಸುವುದಿಲ್ಲ ಎಂದೆಲ್ಲ ನಾಟಕೀಯ ಉತ್ತರಗಳಿಂದ ಸಮರ್ಥಿಸಿಕೊಂಡು ಅಣು-ಸ್ಥಾವರ ಸ್ಥಾಪಿಸ ಹೊರಟಿದ್ದಾರೆ. ದೇವ ಜಲದ ನಿಯಮಿತ ಬಳಕೆ ಬಿಟ್ಟು ಅದನ್ನು ಯುರೇನಿಯಂ ವಿಘಟನೆಯಲ್ಲಿ ಪೂರಕವಾಗುವಂತೆ, ತನ್ನ ಅಸ್ಥಿತ್ವವನ್ನು ಕಳೆದುಕೊಂಡು ತಾನೂ ಯುರೇನಿಯಂನಂತೆ ವ್ಯವಹರಿಸುವಂತೆ ಮಾಡಿ ಶಕ್ತಿ ಸಂಚಯನಗೊಳಿಸುವುದೇ ಇವರ ಉದ್ದೇಶ. ತನ್ನ ಅವಶ್ಯಕತೆ ಪೂರೈಸಿಕೊಳ್ಳಲು ಮಾನವ ಯುರೇನಿಯಮ್‍ನ ಅತೀ ಬಳಕೆ ಮಾಡುತ್ತಾ ಬಂದಿದ್ದಾಗ್ಯೂ, ಈಗ ಥೋರಿಯಂನ ನಾಶಕ್ಕೆ ಪಣ ತೊಟ್ಟಂತಿದೆ.

ಭೌತಶಾಸ್ತ್ರದ ಮಿತ್ರಾಧ್ಯಾಯದ ಪ್ರಕಾರ ಚಿಂತಿಸಿದರೆ ಥೋರಿಯಂನ ಅಸಹಜ ಬಳಕೆಯಾಗುತ್ತಾ ಬಂದು ಮುಂದಿನ ಪೀಳಿಗೆಗಳಲ್ಲಿ ಕಣ್ಣಿನ ದೃಷ್ಟಿ ಶಕ್ತಿಯೂ ಬಹಳ ಕ್ಷೀಣಿಸಬಹುದು, ಅದು ಅಂಧಕಾರವೆಂಬಂತಹಾ ಮಹೋತ್ಪಾತವನ್ನು ಸೃಷ್ಟಿಸಲೂ ಶಕ್ಯ. ಬೀಜವೇ ಮೊಳಕೆ ಹೊಡೆಯಲು ಕಷ್ಟ ಉಂಟಾಗುವ ಪರಿಸ್ಥಿತಿಯೂ ಬರಬಹುದು. ಆಗ ನೀವು ತಿಂದದ್ದು ಜೀರ್ಣವಾಗಲು ಸಾಧ್ಯವೇ? ಕಂಡದ್ದು ಸತ್ಯವಾಗಿರಲು ಸಾಧ್ಯವೇ? ಗಾಜಿನ ತಂತ್ರಜ್ಞಾನವೇ 2020ರಲ್ಲಿ ರಾರಾಜಿಸುತ್ತದೆ ಎಂದು ಗುರಿ ಇಟ್ಟಿರುವ ತಂತ್ರಜ್ಞಾನವು ಮತ್ತೊಂದೆಡೆ ದೇವ ಜಲದ ನಾಶ ಮಾಡುತ್ತಿರೆ ಎಲ್ಲವನ್ನೂ ಅಯೋಮಯವಾಗಿ ತೋರಿಸುವ ಮಾಯಾ ಪ್ರಪಂಚ ಸೃಷ್ಟಿಗೆ ಕಾರಣವಾಗಬಹುದು. ಆಡು ಭಾಷೆಯಲ್ಲಿ ಹೇಳಿದರೆ ಎಲ್ಲರೂ ಸುರೇ ಕುಡಿದ ಮಂಗನಂತೆ ಆಡಲು ಉಪಕ್ರಮಿಸಬಹುದು!

ಇದರಿಂದ ಗತಿ, ಇಂದ್ರಿಯ, ಕಾಯ, ಯೋಗ, ವೇದ, ಕಷಾಯ, ಜ್ಞಾನ, ಸಂಯಮ, ದರ್ಶನ, ಲೇಶ್ಯಾ, ಭವ್ಯ, ಸಮ್ಯಕ್ತ್ವ, ಸಂಜ್ಞಿ, ಆಹಾರಗಳೆಂಬ 14 ಮುಖ್ಯವಾದ ಮಾರ್ಗ ಉಳ್ಳ ಗಣಗಳಲ್ಲಿ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಗತಿಯಲ್ಲಿ ತಿರ್ಯಕ್, ದೇವ, ನಾರಕ, ಮನುಷ್ಯ, ಸಿದ್ಧ, ಸರ್ವಜೀವಗಳೆಂದು ಪರಿಣಾಮ. ಅದೇ ದರ್ಶನ ಗಣದಲ್ಲಿ ಅಚಕ್ಷು, ಚಕ್ಷು, ಅವಧಿ, ಕೇವಲ, ಸರ್ವಜೀವ ಎಂಬ ವಿಭಾಗಗಳಲ್ಲಿ ಪ್ರತಿಫಲನಾ ಪರಿಣಾಮವನ್ನು ಚತುಷಷ್ಟಿ ಅಂಶದವರೆಗೂ ಗಣಿಸಿ ತೋರಿಸಬಹುದು. ಅದೇ ಲೇಶ್ಯಗಳಲ್ಲಾದರೆ ಕಿರಣ ವಿಭಾಗದಂತೆ ಕೃಷ್ಣ, ನೀಲ, ಕಪೋತ, ಪೀತ, ಪದ್ಮ, ಶುಕ್ಲ, ಅಲೇಶ್ಯ, ಸರ್ವಜೀವ ಎಂಬುದರಲ್ಲಿ ಆಧರಿತ ಜೀವಗಳು ಕ್ರಮವಾಗಿ ಷೋಡಂಶಾಂಶ ಗಣಿತದಲ್ಲಿ 76, 67, 65, 8, 6, 2, 32, 16 ಇದ್ದು, ದೇವ ಜಲ ವ್ಯತ್ಯಾಸದಿಂದ ಹೇಗೆ ವ್ಯತ್ಯಾಸ ಹೊಂದುತ್ತದೆ ಎಂದು 94 ಗಣಿತ ಸೂತ್ರಗಳಿಂದ ಪ್ರಾಯೋಗಿಕವಾಗಿ ಲೆಕ್ಕಿಸಬಹುದು.

ಭಾರತದ ಭವಿಷ್ಯವನ್ನೇ ಬದಲಿಸುವ ಶಕ್ತಿ ಇರುವ ಥೋರಿಯಂ ಒಂದು ದುರ್ಲಭ ಧಾತು ಎಂದು ಪಟ್ಟಿ ಮಾಡಲಾಗಿದೆ. ಇದರ ವಿಚಾರವಾಗಿ ಡಾ|| ಸುಬ್ರಮಣಿಯನ್ ಸ್ವಾಮಿಯವರನ್ನು ಬಿಟ್ಟು ಭಾರತದ ಇನ್ಯಾವುದೇ ನೇತಾರರ ಧ್ಯಾನವು ಥೋರಿಯಂನ ನಿಯಮಿತ ಗಣಿಗಾರಿಕೆಯ ಮೇಲೆ ಬಿದ್ದಂತೆ ಕಾಣುವುದಿಲ್ಲ. ಇಲ್ಲಿಯವರೆಗಿನ ಸಮೀಕ್ಷೆಯ ಪ್ರಕಾರ ಭಾರತೀಯ ಥೋರಿಯಂ ಭಂಡಾರಗಳಿಂದ 400 ಲಕ್ಷ ಮೆಗಾವಾಟ್ ವಿದ್ಯುತ್ತನ್ನು 180 ವರ್ಷಗಳ ತನಕ ಉತ್ಪಾದಿಸಬಹುದು. ಇದರಿಂದ ತಯಾರಿಸಿದ ವಿದ್ಯುತ್ತು ಬಹಳ ಕಡೆಮೆ ದರ ಉಳ್ಳದ್ದಾಗಿರುತ್ತದೆ (ಎಂಬ ಆಶಯ). ಏಕೆಂದರೆ ಇದರ ಘಟಕವನ್ನು ಭಾರತವೇ ಸ್ವಯಂ ವಿನ್ಯಾಸ ಮಾಡಬಹುದು (ಎಂಬ ಆಶಯ). ಭಾರತದ ಸ್ವಾಭಿಮಾನೀ ವೈಜ್ಞಾನಿಕ ಬಾಬಾ ಒಬ್ಬರು ಪೂರಾ ರೂಪು ರೇಷೆಗಳನ್ನು ಮಾಡಿದ್ದರು. ಆದರೆ ಇದರ ಮೇಲೆ ದುಷ್ಟ ವಂಶಜರ ದೃಷ್ಟಿ ಬಿದ್ದು, ಇಂದಿಗೂ ಅದರ ಕೆಲಸವು ತಡೆಹಿಡಿಯಲ್ಪಟ್ಟಿದೆ.

ಕೆಲ ಭ್ರಷ್ಟಾಚಾರಿಗಳು, ಸರ್ಕಾರಿ ಅಧಿಕಾರಿಗಳು ಸೇರಿ ಭಾರತೀಯ ಮಾರುಕಟ್ಟೆಯ ಲೆಕ್ಕದಂತೆ 44 ಲಕ್ಷ ಕೋಟಿ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಲೆಕ್ಕದಂತೆ 250 ಲಕ್ಷ ಕೋಟಿ ಮೌಲ್ಯದ ಥೋರಿಯಮ್ ಅನ್ನು ಅಮೇರಿಕಾ ಸಹಿತ ಯೂರೋಪೀಯ ದೇಶಗಳಿಗೆ ಮಾರಾಟ ಮಾಡಿದ್ದಾರೆ. ಚೋದ್ಯವೆಂದರೆ ಇದರಿಂದ ಒಂದು ಪೈಸೆಯೂ ಭಾರತ ಸರ್ಕಾರದ ಖಾತೆಗೆ ಬಂದಿರುವುದಿಲ್ಲ. ಇದೇ ದುಷ್ಟರು ಅಲ್ಲಿ ಹೋಗಿ ಭಾರತ ಒಂದು ದರಿದ್ರ ದೇಶ ಎಂದು ಪ್ರಚಾರ ಮಾಡುತ್ತಾರೆ. ಭಾರತದ 15 ವರ್ಷಗಳ ಬಡ್ಜೆಟ್ಟಿನ ಹಣವು ಇದೇ ಮೋನಾಜಾಯಿಟ್ (ಥೋರಿಯಂ)ನ ಅಧಿಕೃತ ಬಳಕೆಯಿಂದ ಬರುತ್ತದೆ. ಈ ಹಗರಣದ ಮುಂದೆ ಬಾಬಾ ರಾಮ್ ದೇವ್‍ಜೀಯವರ ಮೇಲೆ ಆರೋಪಿಸಲಾದ ಕೆಲ ಕೋಟಿಯ ಭೂಸಂಪತ್ತಿನ ನಾಟಕವೂ ಅಂತಹಾ ಪ್ರಮುಖವಲ್ಲ ಎಂದೆನಿಸುತ್ತದೆ. ಏಕೆಂದರೆ ಅಮೇರಿಕಾ, ಚೀನಾ ಸಹಿತ ಬಹಳ ದೇಶಗಳು ಈಗ ಮಾರಣಾಂತಿಕ ಯುರೇನಿಯಮ್ ಬಿಟ್ಟು ಸುರಕ್ಷಿತ ಥೋರಿಯಂನಿಂದ ವಿದ್ಯುತ್ ತಯಾರಿಸುವ ದೊಡ್ಡ ದೊಡ್ಡ ಯೋಜನೆಗಳನ್ನು ಪ್ರಾರಂಭಿಸಿ ಆಗಿದೆ. ಆದರೆ ಭಾರತವು ಈಗಲೂ ಯುರೇನಿಯಂನಿಂದ ಕಮಿಷನ್ ಪಡೆಯಲಿಕ್ಕೇ ಕಾಯುತ್ತಾ ಕುಳಿತಿದೆ.

ಥೋರಿಯಂ, ಭಯೋತ್ಪಾದನೆ, ಕಪ್ಪುಹಣ ಇಂತಹಾ ಭ್ರಷ್ಟಾಚಾರಗಳು, ಭಾರತ ದೇಶದಲ್ಲಿ ಪಕ್ಷ, ವಂಶ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುವ ಭಂಡರು ಶುದ್ಧವಾದಾಗ ಮಾತ್ರ ತೊಲಗಲು ಸಾಧ್ಯ. ಇದರೊಂದಿಗೆ ಪ್ರಸಾರ ಮಾಧ್ಯಮಗಳು ತಮ್ಮ ಸ್ವೇಚ್ಛೆಯನ್ನು ಬಿಟ್ಟು ರಾಷ್ಟ್ರವಾದಿಗಳಿಗೆ ಸಹಕಾರ ನೀಡಬೇಕು. ಡಾ|| ಸುಬ್ರಮನಿಯನ್ ಸ್ವಾಮಿಯವರ ಅಧ್ಯಕ್ಷತೆಯ ಎ.ಸಿ.ಎ.ಸಿ.ಐ (ಎಕ್ಷನ್ ಕಮಿಟೀ ಎಗೆನೆಸ್ಟ್ ಕರಪ್ಶನ್ ಇನ್ ಇಂಡಿಯಾ) ಇದರ ಸಹಯೋಗದಲ್ಲಿ ಸಾವಿರಾರು ಜನರು ಹಗಲು-ರಾತ್ರಿ ಎನ್ನತೆ ಭಾರತದ ಲೂಟಿಯನ್ನು ಪತ್ತೆ ಹಚ್ಚಿ, ಅದನ್ನು ತಡೆಯಲು ಬೇಕಾದ ನೀತಿಗಳನ್ನು ರೂಪಿಸುವುದರಲ್ಲಿ ತೊಡಗಿದ್ದಾರೆ. ಭಾರತದ ದೇಶ ಭಕ್ತ ಯುವಕರು ಹಿಂಜರಿಕೆ ಬಿಟ್ಟು ಸ್ವತಂತ್ರವಾಗಿ ಇಂತಹವರೊಂದಿಗೆ ಕೈ ಜೋಡಿಸಿಬೇಕು. ಆಗಲೇ ಆಶಾತೀತ ಪರಿಣಾಮ ದೊರಕುವುದು.

ಹಿಂದಿನ ದಶಕದಲ್ಲಿ ತಮಿಳು ನಾಡಿನ ಒಂದು ಕೈಗಾರಿಕೆಯು 96,120 ಕೋಟಿ ಮೌಲ್ಯದ ಹೇರಳ ಪರಮಾಣು ಖನಿಜಗಳನ್ನು ಲೂಟಿ ಮಾಡಿದೆ ಎಂಬ ಸುದ್ದಿ ಪ್ರಚಾರದಲ್ಲಿದೆ. ಈ ಮೊತ್ತವನ್ನು ದೇಶ ಭಕ್ತ ಭೂಗರ್ಭ ಶಾಸ್ತ್ರಜ್ಞರು, ಭೂ-ರಾಸಾಯನಿಕ ಶಾಸ್ತ್ರಜ್ಞರು, ಸಿ.ಎ’ಗಳು, ಕೆಲಸ ಮೌಲೀಕರಿಸುವ ಅಕೌಂಟೆಂಟುಗಳು ಹಾಗೂ ಹಿರಿಯ ಸಿವಿಲ್ ಕಾರ್ಮಿಕರ ಸಹಕಾರದಿಂದ ಪ್ರಕಟಿಸಿದರು. ಪ್ರೊ|| ವಿ. ರಾಜಮಣಿಕ್ಕಂ ಅವರ ಹೇಳಿಕೆ- ಮುಕ್ತ 358 ಹೆಕ್ಟೇರ್ ಭೂಮಿಯನ್ನು ಅಧಿಕೃತ ಭೋಗ್ಯಕ್ಕೆ ನೀಡಿದ್ದಾಗ್ಯೂ, ಕಂಪೆನಿಯು ಕಳೆದ 10 ವರ್ಷಗಳಿಂದ ರೂ. 96,120 ಮೌಲ್ಯದ ಪರಮಾಣು ಖನಿಜಗಳಾದ ಲಿಮ್ನೈಟ್, ಗಾರ್ನೆಟ್, ಜಿರ್ಕಾನ್, ಮೊನಾಜೈಟ್, ಸಿಲ್ಲಿಮನೈಟ್, ರುಟೈಲ್ ಮತ್ತು ಲ್ಯೂಕೋಜೀನ್‍ಗಳನ್ನು ರಫ್ತು ಮಾಡಿದೆಯಂತೆ.

ಲಿಮ್ನೈಟ್ – 60 ಲಕ್ಷ ಮೆಟ್ರಿಕ್ ಟನ್ (ಮೆ.ಟ.) ರಫ್ತಾಗಿದೆ. 1 ಮೆ.ಟ್. ಗೆ ರೂ. 15,000. ಈ ದರದಲ್ಲಿ ಮಾರುಕಟ್ಟೆ ಬೆಲೆಯು ರೂ. 9,000 ಕೋಟಿ. ಈ 60 ಲಕ್ಷ ಮೆ.ಟ. ರಫ್ತು ಮಾಡಲು 12 ಕೋಟಿ ಮೆ.ಟ. ಕಚ್ಛಾ ಮರಳಿನ ಗಣಿ ಕೊರೆಯಬೇಕಾಗುತ್ತದೆ.

ಈ ರೀತಿ ಪ್ರತಿಯೊಂದು ಧಾತುಗಳ ವಿವರ ಗುಣಿಸಿದ್ದಾರೆ. ಇಂತಹಾ ವಿರಳ ಭೂ-ಧಾತುಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಪಡೆಯಲಿಕ್ಕೆ ಸಾವಿರಾರು ಹೆಕ್ಟೇರ್ ಭೂಪ್ರದೇಶದಲ್ಲಿ ಗಣಿಗಾರಿಕೆ ಮಾಡಬೇಕಾಗುತ್ತದೆ. ಇನ್ನು ಭಾರತೀಯ ಆಟೋಮಿಕ್ ಎನರ್ಜಿ ವಿಭಾಗವು ಥೋರಿಯಂ ಕಳ್ಳತನ ಸುಳ್ಳೆಂದಿದೆ! ಅದು 2007ರಲ್ಲಿ ಲಿಮ್ನೈಟ್, ರೂಟೈಲ್, ಲ್ಯೂಕೋಜೀನ್, ಇತ್ಯಾದಿ ಸಮುದ್ರ ಮರಳು ಖನಿಜಗಳನ್ನು 1962ರ ಆಟೋಮಿಕ್ ಎನರ್ಜಿ ಯಾಕ್ಟ್‍ನಲ್ಲಿದ್ದ ಅರ್ಹ ಪರಮಾಣು ಇಂಧನ ಮೂಲಗಳ ಪಟ್ಟಿಯಿಂದ ಕೈಬಿಟ್ಟಿದೆ. ಇವುಗಳೀಗ ಸಾಮಾನ್ಯ ಮುಕ್ತ ಪರವಾನಗೆ ವ್ಯವಸ್ಥೆಯಲ್ಲಿವೆ. ಆ ಕಂಪೆನಿಯು ತನ್ನ ಅಂತರ್ಜಾಲ ತಾಣದಲ್ಲಿ ತಾನು 1998ರಿಂದ ಇವೆಲ್ಲದರ ರಫ್ತು ಮಾಡುತ್ತಿರುವುದಾಗಿ ಘೋಷಿಸಿಕೊಂಡಿದ್ದರೂ, ಇಂತಹಾ ವಿರಳ ಭೂ-ಧಾತುಗಳ ರಫ್ತಿಗಾಗಿ ಸರ್ಕಾರಕ್ಕೆ ಯಾವುದೇ ರಾಯಲ್ಟಿಯೂ ಕಟ್ಟಿಲ್ಲ. ಈ ಗಣಿಗಾರಿಕೆಯಿಂದಾಗಿ ತಮಿಳುನಾಡಿನ 3 ಜಿಲ್ಲೆಗಳ ಕೃಷಿ ಭೂಮಿಯು ಆಕ್ರಮಿಸಲ್ಪಟ್ಟು ಈಗ ಉತ್ಪತ್ತಿ ದಾಯಕ ಭೂಮಿಯೇ ಉಳಿದಿಲ್ಲ. 

ಇನ್ನು ಆಟೋಮಿಕ್ ಎನರ್ಜಿ ಯಾಕ್ಟ್-67ರಲ್ಲಿ ಉಲ್ಲೇಖಿತ ಮೋನಾಜೈಟ್ ಮತ್ತಿತರೆ ಪರಮಾಣು ಖನಿಜ (ಭೂ-ಧಾತುಗಳು) ಬಂದರಿನ ಮೂಲಕ ಕಳ್ಳಸಾಗಾಣಿಕೆ ಅಥವಾ ರಫ್ತು ಆಗುತ್ತಿದ್ದರೂ ಅದನ್ನು ಪತ್ತೆ ಹಚ್ಚುವ ಸಾಧನಗಳಿಲ್ಲ ಎಂದು ಬಂದರ್ ಟ್ರಸ್ಟಿನ ಅಧಿಕಾರಿಗಳೇ ಹೇಳಿದ್ದಾರೆ. ಸಾಗಿಸಲ್ಪಡುತ್ತಿರುವ ವಸ್ತುವಿನ ವಿಕಿರಣಪಟುತ್ವದ ಹಂತಗಳನ್ನು ಮಾಪನ ಮಾಡುವುದಕ್ಕೆ ವ್ಯವಸ್ಥೆಯೇ ಇಲ್ಲ, ಇದು ವೈಜ್ಞಾನಿಕತೆಯ ಕೊಡುಗೆ! ಅಲ್ಲಿ 1400 ಹೆಕ್ಟೇರ್ ಪ್ರದೇಶದಲ್ಲಿ 3 ಮಿಲಿಯನ್ ಟನ್ನಿಗೂ ಹೆಚ್ಚು ಮೋನಾಜೈಟ್ ಇದೆ ಎಂದು ಹಿಂದು-ಮುಂದು ಚಿಂತಿಸದೆ ವರದಿ ನೀಡುವ ಪ್ರಾಕೃತಿಕ ರಹಸ್ಯವರೆಯದ ಸಂಶೋಧರು! ಅದನ್ನರಿತ ಆ ಸಂಸ್ಥೆಯು ಆಂಧ್ರ ಕರಾವಳಿಗೂ ಲಗ್ಗೆ ಇಟ್ಟಿದೆ. ಇಷ್ಟೆಲ್ಲಾ ಆದರೂ ಅಂತಹಾ ಸಂಸ್ಥೆಗಳಿಗೆ ಬಿರುದಾವಳಿ ಪಾರಿತೋಷಕಗಳನ್ನು ಸರ್ಕಾರದ ಬೊಕ್ಕಸದಿಂದಲೇ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೆಲವು ಪ್ರಶ್ನೆಗಳನ್ನು ಹಾಕಲೇಬೇಕಾಗುತ್ತದೆ:-
·        ಅರ್ಹ ಪಟ್ಟಿಯಿಂದ ಲಿಮೈಟ್, ಜಿರ್ಕಾನ್ ಇತ್ಯಾದಿ ಧಾತುಗಳನ್ನು ಮುಕ್ತಗೊಳಿಸಲು ಕಾರಣವೇನು?
·        ವಿದೇಶಿ ಒತ್ತಡ ಇದ್ದಿತೇ?
·  ಭಾರತದ “ಫಾಸ್ಟ್ ಬ್ರೀಡರ್ ರಿಯಾಕ್ಟರ್ ಯೋಜನೆ” ಮತ್ತು “ಥೋರಿಯಂ ಆಧಾರಿತ ರಿಯಾಕ್ಟರ್ ಯೋಜನೆಗಳು” ಹಿಂಜರಿಕೆ ಕಾಣಲು ಕಾರಣವೇನು?
·    ಇನ್ನು ಹೆಚ್ಚೆಚ್ಚು ರಿಯಾಕ್ಟರ್‍ಗಳನ್ನು ಆಮದು ಮಾಡಿಕೊಳ್ಳುವುದರ ಮುಖೇನ ಭಾರತೀಯ ಸಂಶೋಧನೆಗಳನ್ನು ಹತ್ತಿಕ್ಕುವ ಹುನ್ನಾರವೇ?

ಭಾರತೀಯರಾದ ನಮಗೆ ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಿನಲ್ಲಿ ಅವಕಾಶವಿದೆ. ಸರ್ಕಾರವೂ ಇದರ ಬಗ್ಗೆ ದಿಟ್ಟ ನಿಲುವನ್ನು ತೆಗೆದುಕೊಳ್ಳಬೇಕು.

ಒಂದು ಪರಮ ಸತ್ಯವನ್ನು ಈ ವಿಜ್ಞಾನದ ಅಜ್ಞಾನಿಗಳು ಮನಗಾಣಲೇಬೇಕು. 187 ಧಾತುಗಳಿಂದ ಪ್ರಕೃತಿಯು ನಿರಂತರ ಪ್ರವರ್ತನೆಯನ್ನು ಹೊಂದಿರುತ್ತದೆ. ಯಾವುದೇ ಧಾತುವು ಸಂಪೂರ್ಣ ನಷ್ಟವಾದರೆ ಲೋಕಕ್ಕೇ ಆಪತ್ತು. ಎಷ್ಟೆಷ್ಟೋ ಸರಪಳಿಗಳು ಅಸ್ತ-ವ್ಯಸ್ತವಾಗುತ್ತವೆ. ಒಂದೊಂದು ಧಾತುವಿನ ಮೇಲೂ ಆಗುತ್ತಿರುವ ಅತ್ಯಾಚಾರವನ್ನು ಕೂಗಿ ಕೂಗಿ ತನ್ನ ಪ್ರಾಕೃತಿಕ ಕಂಪನದ ಮುಖೇನ ಎಚ್ಚರಿಸುತ್ತಿದೆ! ಪ್ರಕೃತಿಯ ಅಂತರ್ಮಿಡಿತವನ್ನು ಸ್ವಲ್ಪ ಕಿವಿಕೊಟ್ಟು ಕೇಳಿದರೆ ಸಾಕು ಅರ್ಥವಾಗುತ್ತದೆ, ದೊಡ್ಡ ಹಠ ಸಾಧನೆಗಳೇನು ಬೇಡ. ಪ್ರಕೃತಿಯು ತಾಟಕಿಯಾಗಲು ಬಿಡದಿರಿ, ತಟಾಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಿರಿ, ತನ್ಮುಖೇನ ಮಾನವತ್ವ ತೋರಿರಿ.

ತಾನು ತಿಳಿದದ್ದೇ ಶಾಸ್ತ್ರ, ಪ್ರಚಾರದಲ್ಲಿರುವುದೇ ವಿಜ್ಞಾನ ಎಂಬ ಅಜ್ಞಾನ ಬಿಟ್ಟು,
ವೇದ ಪ್ರಮಾಣೀಕರಿಸುವ ಭೌತಶಾಸ್ತ್ರ, ತಂತ್ರಶಾಸ್ತ್ರಗಳಿಗೆ ಶರಣು ಹೋಗೈ ಜಿಜ್ಞಾಸು,
ತಾನು, ತನ್ನ ಕುಟುಂಬಕ್ಕಾಗಿ ಎಲ್ಲ ಮಾಡಿ ಆಗಿದೆ, ದೇಶಕ್ಕಾಗಿ ಸ್ವಲ್ಪ ಶ್ರಮಿಸಿ,
ಈ ದೇಶವೇನು ಗಡಿಗಳಲ್ಲಿ ಪ್ರಾಣ ತೆತ್ತ ವೀರರದ್ದು ಮಾತ್ರವೇ? ನಮ್ಮದಲ್ಲವೇ? ಯೋಚಿಸಿ......

-     ಹೇಮಂತ್ ಕುಮಾರ್ ಜಿ.

No comments:

Post a comment