Sunday, 14 July 2013

ಭಗವದ್ಗೀತಾ ಅಭಿಯಾನ – ಮಾನವೀಯತೆಯ ಮಂಡನೆ, ವಿಚಾರವಾದ ಖಂಡನೆಕಳೆದೆರಡು ವರ್ಷದಿಂದ ಕರ್ನಾಟಕದಲ್ಲಿ ಆಯೋಜಿಸಲ್ಪಟ್ಟಿದ್ದ “ಭಗವದ್ಗೀತಾ ಅಭಿಯಾನವನ್ನು” ವಿರೋಧಿಸುವ ಬುದ್ಧಿಜೀವಿಗಳೆಂಬ ಸೋಗಿನ ಸೋಗಲಾಡಿಗಳೇ ಹೆಚ್ಚಾಗಿದ್ದಾರೆ. “ಕೃಣ್ವಂತೋ ವಿಶ್ವಮಾರ್ಯಂ” ಎಂಬ ಆದರ್ಶದ ಹಿನ್ನೆಲೆಯಲ್ಲಿ ಬೆಳೆದ ಭಾರತೀಯ ಸಂಸ್ಕೃತಿಯಲ್ಲಿ ಈಗಿನ ಸೋಗಲಾಡಿ ಬುದ್ಧಿಜೀವಿಗಳು ಜನರು ನೈತಿಕವಾಗಿ ಬುದ್ಧಿವಂತರಾಗದಿರಲಿ ಎಂಬ ವ್ಯವಸ್ಥಿತ ಸಂಚು ಮಾಡುತ್ತಿರುವರೇ? ಭಗವದ್ಗೀತೆ ಬೋಧನೆಯಿಂದ ಯಾವುದೇ ನಿಂದನೆಯಾಗುವುದಿಲ್ಲ. ನೈತಿಕ ಮಟ್ಟ ಸುಧಾರಿಸಬಹುದು. ಅದನ್ನು ಬೇಡವೆನ್ನುವ ಮೂರ್ಖತನವೇಕೆ ಬುದ್ಧಿಜೀವಿಗಳಿಗೆ? ಕಾರಣ ಅವರಿಗೇ ಗೊತ್ತಿಲ್ಲ. ಇಲ್ಲಿ ಬುದ್ಧಿಜೀವಿಗಳೆಂಬ ಹಣೆಪಟ್ಟಿ ಅವರಿಗವರೇ ಕಟ್ಟಿಕೊಂಡು ಸಮಾಜದಲ್ಲಿ ಅತೃಪ್ತತೆಯನ್ನು ಗುರುತಿಸಿ ಅದನ್ನೇ ಬಂಡವಾಳವಾಗಿ ಮಾಡಿಕೊಂಡು ಬದುಕುವ ಜನರಿವರು. ಅವರನ್ನು ನಂಬಿದ ಅತೃಪ್ತಜನ ಅವರು ಹೇಳುವುದೇ ಸತ್ಯವೆಂದು ಮೋಸ ಹೋಗುತ್ತಿದ್ದಾರೆ.

        ಆಧ್ಯಾತ್ಮಿಕತೆ ಈ ದೇಶದ ಜೀವ. ಅದಿಲ್ಲದಿದ್ದರೆ ಬದುಕಿಲ್ಲ. ಆದರೆ ಆಧ್ಯಾತ್ಮಿಕ ಹೇಳುವವರಿಗೂ ಗೊತ್ತಿಲ್ಲ, ಕೇಳುವವರಿಗೆ ಅರ್ಥವಾಗುವುದಿಲ್ಲ. ಈ ಅಯೋಮಯ ಸ್ಥಿತಿಯನ್ನು ಟ್ರಂಪ್ ಮಾಡಿ ಬದುಕುತ್ತಿದ್ದಾರೆ ವಿಚಾರವಾದಿಗಳು. ಆದರೆ ಆಧ್ಯಾತ್ಮಿಕತೆ ಅನಿವಾರ್ಯ. ಅದರ ದೂಷಣೆ, ನಿಂದನೆ ಖಂಡಿತ ಅಪರಾಧ. ಭಗವದ್ಗೀತೆ ಒಂದು ಉತ್ತಮ ಆಧ್ಯಾತ್ಮಿಕ ಗ್ರಂಥ. ಅದು ಒಂದು ಮತದ ವಿಚಾರ ಹೇಳುತ್ತಿಲ್ಲ. ಒಂದು ಸಿದ್ಧಾಂತದ ವಿಚಾರ ಹೇಳುತ್ತಿಲ್ಲ, ವೈಜ್ಞಾನಿಕ ಸತ್ಯವನ್ನೇ ಹೇಳುತ್ತಿದೆ. ಆದರೆ ವಿಚಾರವಾದಿಗಳೆಂಬ ಸೋಗಲಾಡಿಗಳು, ಮೋಸಗಾರರು, ವಂಚಕರು ಅದನ್ನು ವಿಕೃತ ಅರ್ಥವನ್ನು ಮಾಡಿ ಜನರನ್ನು ತಪ್ಪು ದಾರಿಗೆಳೆದು ಸಮಾಜದಲ್ಲಿರುವ ಅತೃಪ್ತರ ಕೂಟ ಕಟ್ಟಿಕೊಂಡು ಗಲಾಟೆ ಮಾಡುತ್ತಾರೆ.

        ಭಗವದ್ಗೀತೆಯ ಒಂದು ವಿಶೇಷ ವಾಕ್ಯ “ಮಾ ಫಲೇಷು ಕದಾಚನ” ಇದು ವೈಜ್ಞಾನಿಕ ಸತ್ಯವೆ. ರೈತನೊಬ್ಬ ಬೆಳೆಗಾಗಿ ಬೀಜ ಬಿತ್ತುವಾಗ ಫಲದ ಆಕಾಂಕ್ಷೆಯಿಂದಲೇ ಬಿತ್ತುತ್ತಾನೆ. ಆದರೆ ಕಾರಣಾಂತರದಿಂದ ಫಸಲು ಬರದಿರಬಹುದು, ನಿರೀಕ್ಷಿಸಿದಷ್ಟು ಬರದಿರಬಹುದು, ಅದು ನಿರ್ಣಯವಲ್ಲ. ರೈತನ ಕರ್ತವ್ಯ ಬಿತ್ತುವುದು. ಫಲಕ್ಕೆ ಯಾವುದೇ ವಿಚಾರವಾದವಾಗಲಿ, ವಿಜ್ಞಾನವಾಗಲಿ, ಆಧ್ಯಾತ್ಮಿಕತೆಯಾಗಲಿ ಗ್ಯಾರಂಟಿ ಕೊಡಲಾರದು. ಹಾಗಾಗಿ ಹೇಳಿದ ಸಾಂತ್ವನ ವಾಕ್ಯ “ಕರ್ತವ್ಯ ಮಾಡು, ಫಲ ಧೈವಾಯತ್ತ” ಎಂಬ ಆಧ್ಯಾತ್ಮ ಹೇಳಿದರೆ ಯಾರಿಗೆ ನಷ್ಟ? ಖಂಡಿತಾ ಇಲ್ಲ. ಯಾವುದೇ ಮತಧರ್ಮದ ದೂಷಣೆ ಇಲ್ಲ. ಮತ ಪ್ರವಚನವೂ ಇಲ್ಲ. ಮಾನವನ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸಿದೆ ಅಷ್ಟೆ.

        ಶ್ರೀಶ್ರೀಶ್ರೀ ಸ್ವರ್ಣವಲ್ಲೀ ಶ್ರೀಗಳು ಭಗವದ್ಗೀತಾ ಅಭಿಯಾನ ಕೈಗೊಂಡರೆ ಅದರಿಂದ ಸಮಾಜದಲ್ಲಿ ಯಾವುದೇ ಭಯೋತ್ಪಾದಕತೆ ಸೃಷ್ಟಿಯಾಗಲಿಕ್ಕಿಲ್ಲ. ಇದು ಅಭಿಯಾನ. ಜೆಹಾದ್ ಅಲ್ಲ. K.F.D. ಅಂತಹಾ ಸಂಘಟನೆ ಹುಟ್ಟಿಕೊಂಡಲ್ಲಿ ಸಮಾಜಕ್ಕೆ ಮಾರಕ. ಆದರೆ ಭಗವದ್ಗೀತೆ ಹೇಳಿದರೆ ಜನರಲ್ಲಿ ಸತ್ಯ, ಧರ್ಮ, ನ್ಯಾಯ ಬೋಧಿಸಿದರೆ ದಯಾಮಯ ಜೀವನದ ಋಚಿ ಬೋಧಿಸಿದರೆ, ಕರ್ತವ್ಯ ಪ್ರಜ್ಞೆ ಬೋಧಿಸಿದರೆ ಯಾವ ಮತೀಯರಿಗೂ ಅವಹೇಳನ ಅಲ್ಲ. ಅಂತಹಾ ಆದರ್ಶ ವಿಚಾರಗಳಿದ್ದರೆ ಯಾವ ಮತಗ್ರಂಥವೂ ಬೋಧಿಸಬಹುದು. ಯಾವ ಧರ್ಮ ಗ್ರಂಥವೇ ಆಗಲಿ ಸಾರ್ವತ್ರಿಕ ವಿಮರ್ಶೆಗೆ ಮುಕ್ತ ಅವಕಾಶ ಕಲ್ಪಿಸಿ. ನಿಮಗೇ ನೇರ ಬುದ್ಧಿಯಿದ್ದಲ್ಲಿ ಮತೀಯ ವಿಚಾರವಾದ ಬಿಟ್ಟು ವೈಜ್ಞಾನಿಕವಾಗಿ ಭಗವದ್ಗೀತೆ, ವೇದ, ಕುರಾನ್, ಬೈಬಲ್, ತ್ರಿಪಿಟಕ, ಷಟ್ಕಂಡಾಗಮ, ಮಹಾಯಾನ, ಅಂತರ್ಯಾನ, ಕೋಶಖಂಡಿಕಾ, ಅವೆಸ್ತಾ ಇವುಗಳನ್ನು ಒಂದು ಬದ್ಧ ವೈಜ್ಞಾನಿಕ ನೆಲೆಯಲ್ಲಿ ಚಿಂತಿಸಿ ವಿಮರ್ಶೆ ಮಾಡಿರಿ. ಅಲ್ಲೆಲ್ಲಾ ಬದ್ಧವೆಂದು ಕಂಡದ್ದು ಸ್ವೀಕಾರಾರ್ಹ. ನಿಮಗೆ ಮುಕ್ತ ವಿಮರ್ಶೆಗೂ ಕೂಡ ವೇದ, ಭಗವದ್ಗೀತೆ ಹೊರತು ಪಡಿಸಿ ಉಳಿದವು ತೆರೆದು ಕೊಂಡಾವೆ? ಚಿಂತಿಸಿ. ಅವೆಲ್ಲಾ ಮುಕ್ತ ವಿಮರ್ಶೆಗೆ ಮಾನ್ಯತೆ ಕೊಡುವುದಿಲ್ಲ. ಸಲ್ಮಾನ್ ರಶ್ದಿ ಇತ್ಯಾದಿಯವರು ಯಾವುದಕ್ಕೆ ಶಿಕ್ಷೆಗೊಳಗಾದರು ಚಿಂತಿಸಿ. ವಿಚಾರವಾದಿಗಳೇ! ನೀವು ರಾಜಕಾರಣಿಗಳಾಗಬೇಡಿ. ಭಾರತೀಯರಾಗಿ ನಾನು ಹೇಳಿದ ವಿಚಾರವನ್ನು ಸವಾಲಾಗಿ ಸ್ವೀಕರಿಸಿ. ಎಲ್ಲಾ ಗ್ರಂಥಗಳನ್ನೂ ವೈಜ್ಞಾನಿಕ ದೃಷ್ಟಿಯಲ್ಲಿ ವಿಮರ್ಶಿಸಿ ಧೈರ್ಯವಿದ್ದರೆ ಬರೆಯಿರಿ. ಮೇಲೆ ಉದಾಹರಿಸಿದ ಗ್ರಂಥ ಬಿಟ್ಟು ನಿಮ್ಮಂತಹಾ ಯಾರೋ ತಮ್ಮ ತೀಟೆ ತೀರಿಸಿಕೊಳ್ಳಲು ಬರೆದ ಸಾಹಿತ್ಯ ಉದಾಹರಿಸಬೇಡಿ. ಸದ್ಯಕ್ಕೆ ಮೇಲೆ ಉದಾಹರಿಸಿದ ಗ್ರಂಥಗಳು ಮಾತ್ರ ನಿಮ್ಮ ವಿಮರ್ಶೆಗೆ ಒಳಪಡುವುದು ಒಳ್ಳೆಯದು. ಯಾವುದೋ ಪುರಾಣ ಕಥೆ, ಸಿನಿಮಾಗಳನ್ನು ಉದಾಹರಿಸಿ ವಿಮರ್ಶಿಸಬೇಡಿ. ಭಗವದ್ಗೀತೆಯಲ್ಲಿರತಕ್ಕ ಕೆಲ ಮುಖ್ಯವಾದ ವೈಜ್ಞಾನಿಕ ವಿಚಾರ ಪಟ್ಟಿ ಮಾಡಿರುತ್ತೇನೆ ಗಮನಿಸಿ.

ವೇದದ ಕೆಲ ಉದಾಹರಣೆಯೂ ಗಮನಿಸಿ.

೧) “ಕೃಣ್ವಂತೋ ವಿಶ್ವಮಾರ್ಯಂ” :-
        ಇಲ್ಲಿ ಜಾತಿ ಮತ ಹೇಳಿಲ್ಲ. ಇಡೀ ವಿಶ್ವದ ಸಕಲ ಚರಾಚರಗಳೂ ಒಟ್ಟು ಸೇರಿ ವಿಶ್ವ ಎಂದಿದ್ದಾರೆ.

೨) “ಸಹನಾವವತು, ಸಹನೌ ಭುನಕ್ತು, ಸಹ ವೀರ್ಯಂ ಕರವಾವಹೈ, ತೇಜಸ್ವಿನಾವಧೀತಮಸ್ತು, ಮಾವಿದ್ವಿಷಾವಹೈ” :-
        ಇಲ್ಲಿಯೂ ಅಷ್ಟೆ ಜಾತಿ, ಮತ, ಧರ್ಮ ಹೇಳಿಲ್ಲ.

೩) “ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ” :-
        ಪ್ರಪಂಚವೂ, ಸರ್ವವೂ, ಸರ್ವಜೀವಿಗಳೂ ತೃಪ್ತ, ಸುಖ, ಸಮೃದ್ಧವಾಗಿ ಬಾಳಲಿ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧವೆಂದು ಹೇಳಿಲ್ಲ.

೪) “ಸರ್ವೇ ಜನಾಃ ಸುಖಿನೋ ಭವಂತು”:-
            ಪಕ್ಕದ ಮನೆಯವರನ್ನು ಬಿಟ್ಟು ಎಂದೂ ಕೂಡಾ ಹೇಳಿಲ್ಲ. ಅಥವಾ ವಿಚಾರವಾದಿಗಳನ್ನು ಬಿಟ್ಟು ಎಂದೂ ಹೇಳಿಲ್ಲ. ನಿಂದಕರೂ ಸೇರಿ ಸರ್ವೇ ಜನಾಃ ಎಂದು ಹೇಳಿದೆ.

೫) ಮಧುವಾತಾ ಋತಾಯತೇ ಮಧು ಕ್ಷರಂತಿ ಸಿಂಧವಃ | ಮಾಧ್ವೀರ್ನ ಸಂತ್ವೋಷಧೀಃ || ಮಧುನಕ್ತಮುತೋಷಸೋ ಮಧುಮತ್ಪಾರ್ಥಿವಂ ರಜಃ | ಮಧು ದ್ಯೌರಸ್ತು ನಃ ಪಿತಾ || ಮಧುಮಾನ್ನೋ ವನಸ್ಪತಿರ್ಮಧುಮಾಙ್ ಅಸು ಸೂರ್ಯಃ | ಮಾಧ್ವೀರ್ಗಾವೋ ಭವಂತು ನಃ || :-
            ಎಲ್ಲವುದರಿಂದಲೂ ನಮಗೆಲ್ಲರಿಗೂ ಮಧು ಸಿಗಲಿ. ಇಲ್ಲಿ ಜಾತಿ, ಮತ, ಧರ್ಮ, ಸಿದ್ಧಾಂತ ಹೆಸರಿಸಿ ಯಾರಿಗೆ ಎಂದು ಹೇಳಿಲ್ಲ.

೬) ಶತಂ ಜೀವ ಶರದೋ ವರ್ಧಮಾನಃ ಶತಂ ಹೇಮಂತಾಞ್ಛತಮು ವಸಂತಾನ್ | ಶತಮಿಂದ್ರಾಗ್ನೀ ಸವಿತಾ ಬೃಹಸ್ಪತಿಃ ಶತಾಯುಷಾ ಹವಿಷೇಮಂ ಪುನರ್ದುಃ || :-
            ನೂರು ವರ್ಷವಾದರೂ ಬಾಳುವ ಯೋಜನೆಯ ವೃತ್ತಾಂತ ಆದರ್ಶ ವೇದಧರ್ಮ ನಮ್ಮದು. ಪಂಚವಾರ್ಷಿಕ ಯೋಜನೆ ಅಲ್ಲ. ಮೋಸ ಚಿಂತನೆಯೂ ಇಲ್ಲ.

೭) ನವೋ ನವೋ ಭವತಿ ಜಾಯಮಾನೋಹ್ನಾಂ ಕೇತುರುಷಸಾಮೇತ್ಯಗ್ರಮ್ | ಭಾಗಂ ದೇವೇಭ್ಯೋ ವಿದಧಾತ್ಯಾಯನ್ ಪ್ರ ಚಂದ್ರಮಾಸ್ತಿರತೇ ದೀರ್ಘಮಾಯುಃ ||
        ಜಿಡ್ಡು ಗಟ್ಟಿದ ಎಂದೋ ಯಾರೋ ಹೇಳಿದ ವಿಚಾರವೇ ಬದ್ಧ ಎನ್ನುವುದು ವೇದವಲ್ಲ. ಸದಾ ಹೊಸ ವಿಚಾರಗಳ ಉದ್ಘಾಟನೆ ವೇದ. ಹಳೇ ಬೇರಿನ ಮರೆಯಲ್ಲಿ ಹೊಸ ಹೊಸ ಚಿಗುರು ಹೊರಳುತ್ತದೆ. ಹಾಗಾಗಿ ಸಾರ್ವಕಾಲಿಕ, ಸಾರ್ವದೇಶಿಕ ಸರ್ವಸಮ್ಮತ ಸತ್ಯ.

ಗೀತಾಭಾಗದಲ್ಲಿ ಗಮನಿಸಿ

ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವೃಜ :-
        ಧರ್ಮ ಎಂದರೆ ಏನು ಎಂದು ಅರ್ಥಮಾಡಿಕೊಂಡರೆ, ಅರ್ಥವಾಗುವುದು ಬುದ್ಧಿ ಜೀವಿಗಳಿಗೆ. ಮತವಲ್ಲ. ಬದುಕು ಜೀವಿಗಳಿಗೆ ಮುಖ್ಯ. ಅದಕ್ಕೊಂದು ನೀತಿ, ಅದೂ ಮುಖ್ಯ. ಅದು ಪ್ರಾದೇಶಿಕ, ಅಲ್ಲಲ್ಲಿಯ ಋತು, ಮಾನ, ಕಾಲ, ದೇಶ ಆಧರಿಸಿದ್ದು. ಅದನ್ನಾಧರಿಸಿದ ಜೀವನ ವಿಧಾನವೇ ಸಿದ್ಧಾಂತ ಅಥವಾ ಮತ. ಆ ಮತ, ಸಿದ್ಧಾಂತಗಳು ಸಾರ್ವಕಾಲಿಕವೂ ಅಲ್ಲ, ಸಾರ್ವದೇಶಿಕವೂ ಅಲ್ಲ, ಸಾರ್ವಜನಿಕವೂ ಅಲ್ಲ. ಯಾರು ಯಾರಿಗೆ ಅದು ಇಷ್ಟುವೋ ಅವರು ಅದನ್ನು ಬಳಸಬಹುದಷ್ಟೆ. ಆದರೆ ಅದರಲ್ಲಿ ಬದುಕಿನ ಸತ್ಯ ಅರಿವಾಗದಿದ್ದರೆ ನಾನು ಅಂದರೆ ಜೀವನಧರ್ಮ ನನ್ನನ್ನು ಶರಣಾಗು ಎಂದಿದೆ ಭಗವದ್ಗೀತೆ. ಹದಿನೆಂಟು ಅಧ್ಯಾಯಗಳಲ್ಲಿ ಜೀವನ ಧರ್ಮ, ಸತ್ಯ, ಆಧ್ಯಾತ್ಮಿಕತೆ ಬೋಧಿಸಿದೆ. ಇಲ್ಲಿಯ ಅರ್ಥ ವಿವರಣೆ ಶ್ಲೋಕದ್ದಲ್ಲ, ಭಾವಮಾತ್ರವಾಗಿರುತ್ತದೆ.

ಒಟ್ಟು ೧-೧೮ ಅಧ್ಯಾಯದ ಭಾವ:-


೧) ಗೀತಾ ೧ನೇ ಅಧ್ಯಾಯ:-
ಅರ್ಜುನ ವಿಷಾದಯೋಗ:-

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |

ಮಾಮಕಾಃ ಪಾಂಡವಶ್ಚೈವ ಕಿಮಕುರ್ವತ ಸಂಜಯ ||

ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ |

ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ||


     ಪ್ರಪಂಚವನ್ನೇ ತನ್ನ ಪಾಶುಪತ ಶಕ್ತಿಯಿಂದ ಒಂದೇ ಬಾರಿಗೆ ಆಪೋಶನ ತೆಗೆದುಕೊಳ್ಳಬಲ್ಲ ಅರ್ಜುನ ಮೂರು ಲೋಕದಲ್ಲೇ ಶ್ರೇಷ್ಠ ವೀರ, ಇಂದ್ರನನ್ನೇ ಜಯಿಸಿದವ (ಖಾಂಡವವನ ದಹನ). ಅಗ್ನಿದತ್ತವಾದ ಬಿಲ್ಲು, ಬತ್ತಳಿಕೆ, ರಥ, ಅಶ್ವ, ದೇವ ದೇವನೇ ಸಾರಥಿ. ಇಷ್ಟೆಲ್ಲಾ ಇದ್ದಾಗ ಅರ್ಜುನನಿಗೆ ವಿಷಾದ ಹುಟ್ಟಿತು. ಆ ಕಾಲದಲ್ಲೇ ವಿಷಾದ ಹುಟ್ಟಬೇಕು. (ಕುಂಟು ನಾಯಿಗೆ ವಿಷಾದ ಬೇಕಿಲ್ಲ) ಏನು ಚಿಂತಿಸಿದ? ತನ್ನ ಶೌರ್ಯ ಸಾಮರ್ಥ್ಯದಿಂದ ಈ ಮುಂದಿರುವ ಸೇನೆಯನ್ನು ಕೊಂದು ಪಡೆಯುವ ರಾಜ್ಯ ಬೇಕೆ? ಇದು ನೈಜ ವಿಷಾದ. ಅಮೇರಿಕಾ ದೇಶಕ್ಕೆ, ಈಗಿನ ವಿಚಾರವಾದಿ ಭ್ರಷ್ಟತನದ ಉದಾಹರಣೆಯ ದೇಶಕ್ಕೆ ೧೯೪೦ನೇ ಇಸವಿಗೆ ಮುಂಚೆ ಈ ವಿಷಾದಯೋಗವನ್ನು ಬೋಧಿಸಬೇಕಿತ್ತು. ಅವರಿಗೆ ಅರ್ಥವಾಗುತ್ತೋ ಬಿಡುತ್ತೋ ಬೇರೆ. ಅರ್ಥವಾಗಿದ್ದರೆ ಸರ್ವಶಕ್ತ ಎನಿಸಿಕೊಳ್ಳುವ ಮೂರ್ಖತನದಿಂದ ಜಪಾನಿನ ಹಿರೋಷಿಮಾ, ನಾಗಸಾಕಿ ಪಟ್ಟಣದ ನಿಷ್ಪಾಪಿ ಜನ ಬದುಕುಳಿಯುತ್ತಿದ್ದರಲ್ಲವೇ? ಭಗವದ್ಗೀತೆ ಬೋಧಿಸಬೇಕಿತ್ತೇ? ಇಲ್ಲವೇ? ಚಿಂತಿಸಿ ವಿಚಾರವಾದಿಗಳು. ಈಗಿನ ಜೆಹಾದಿಗಳು, ಲ್ಯಾಡೆನ್‍ಗಳು ಇದನ್ನು ಓದಬೇಕಿತ್ತಲ್ಲವೇ?

೨) ಗೀತಾ ೨ನೇ ಅಧ್ಯಾಯ:-
ಸಾಂಖ್ಯಯೋಗ:-

ತಂ ತಥಾ ಕೃಪಯಾವಿಷ್ಟಂ ಆಶ್ರುಪೂರ್ಣಾ ಕುಲೇಕ್ಷಣಮ್ |

ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ||


   ದೀರ್ಘಕಾಲೀನ ಪರಿಣಾಮ ಚಿಂತನೆ, ಲೆಕ್ಕಾಚಾರ, ಕುಲಧರ್ಮ ಪಾಲನೆ, ಉದ್ದೇಶ, ಅದರ ಅಗತ್ಯ, ಅದರಲ್ಲಿ ತೊಡಗಬೇಕಾದ ಅನಿವಾರ್ಯತೆ, ಲೋಕ ಕ್ಷೇಮ ಇದನ್ನು ಹೇಳುತ್ತಿದೆ. ಕ್ರಿ.ಶ. ೨೦೧೩ನೇ ಇಸವಿಯಲ್ಲಿ ಬೋಧಿಗಯಾ ಕ್ಷೇತ್ರದ ಮಹಾಬೋಧಿ ಮಂದಿರಕ್ಕೆ ನುಗ್ಗಿದ ಜೆಹಾದಿಗಳಿಗೆ ಯಾರು ಯಾವುದನ್ನು ಬೋಧಿಸಿದ್ದರು? ಅದರ ಧ್ಯೇಯ ಜೆಹಾದ್ ತಾನೆ? ವೀರಪ್ಪನ್‍ಗೋ, ನಕ್ಸಲೀಯರಿಗೂ, ಲ್ಯಾಡೆನ್‍ಗೋ, ಇಂಡಿಯನ್ ಮುಜಾಹಿದ್‍ಗೋ ಈ ಭಗವದ್ಗೀತೆ ಬೋಧನೆಯಾಗಿತ್ತೆ? ಆಗಿದ್ದರೆ ಅವರು ಎಲ್ಲಿ ಲೆಕ್ಕ ತಪ್ಪಿದರು ಹೇಳಿ?

೩) ಗೀತಾ ೩ನೇ ಅಧ್ಯಾಯ:-
ಕರ್ಮಯೋಗ:-

ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾಬುದ್ಧಿರ್ಜನಾರ್ದನ |

ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ||


     ರಾಗದ್ವೇಷ ರಹಿತವಾದ ಕರ್ಮವನ್ನು ನಿರೂಪಿಸುತ್ತದೆ. ಜೆಹಾದ್ ಅಲ್ಲ. ಖಾಪಿರರಿಲ್ಲ, ಸೈತಾನರೂ ಇಲ್ಲ, ವಧಾರ್ಹರೂ ಇಲ್ಲ, ಎಲ್ಲಾ ಅವರವರ ಕರ್ಮಾನುಸಾರ. ಕಾಮಾದಿಗಳ ತ್ಯಾಗ, ಫಲಾಫಲ ಅಪೇಕ್ಷೆಯಿಲ್ಲದ, ಭ್ರಷ್ಟಾಚಾರ, ಲಂಚಮುಕ್ತ ಕರ್ಮದ ಪರಿಚಯ, ಶ್ರೇಷ್ಠತೆಯ ನಿರೂಪಣೆ ಮಾಡುತ್ತದೆ. ವಿಚಾರವಾದಿಗಳೇ! ಇದು ಬೇಕೇ? ಬೇಡವೇ?

೪) ಗೀತಾ ೪ನೇ ಅಧ್ಯಾಯ:-
ಜ್ಞಾನಕರ್ಮ:-

ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹ ಮವ್ಯಯಮ್ |

ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇಬ್ರವೀತ್ ||


  ಸಂಶೋಧನೆಗಳು – “(ನೋಬೆಲ್ ಮಾಡಿದ್ದಲ್ಲ)” ಸಮಾಜ ಹಿತದ ಸಂಶೋಧನೆ, ಹಿಂದಿನ ಉತ್ತಮ ಪುರುಷರ ಮಾರ್ಗದರ್ಶನ, ಯತ್+ಜ್ಞಾಯತೇ ಇತಿ ಯಜ್ಞ ಪೂರ್ವೋದಾಹರಣೆ ಸಹಿತ ಉತ್ತಮ ಮಾರ್ಗವೆಂದು ಸಿದ್ಧ ಪಡಿಸಿದಲ್ಲಿ ತೊಡಗುವುದು. ಹಾಗಾಗಿ “ಹಾರು ಬೂದಿಯೂ ಇಲ್ಲ”, “ಕಿವಿಯ ಕ್ಯಾನ್ಸರೂ ಇಲ್ಲ” ದರೋಡೆಯೂ ಇಲ್ಲ, ದೊಂಬಿಯೂ ಇಲ್ಲದ ಉತ್ತಮ ಮಾರ್ಗ ಕಲ್ಪನೆ. ಬೇಕಿಲ್ಲವೇ?

೫) ಗೀತಾ ೫ನೇ ಅಧ್ಯಾಯ:-
ಕರ್ಮಸಂನ್ಯಾಸಯೋಗ:-

ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ |

ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ||


  ತನ್ನ ಸಂಶೋಧನೆಯನ್ನು ಪ್ರಾಯೋಗಿಕವಾಗಿ ಬಳಸಿ ಸಮಾಜಕ್ಕೆ ತೋರಿಸುವುದು. ತ್ಯಾಗ ಜೀವನ ಬೋಧನೆ, ತೃಪ್ತ ಜೀವನ ಬೋಧನೆ, ತೃಪ್ತಿಯ ಆನಂದ ಬೋಧನೆಯನ್ನು ಹೇಳುತ್ತದೆ. ಇದು ಬೇಡವೆ?

೬) ಗೀತಾ ೬ನೇ ಅಧ್ಯಾಯ:-
ಆತ್ಮಸಂಯಮಯೋಗ:-


ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ |

ಸ ಸನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ||

        ಸಹಜೀವನ ಮಾಡುವ ಈ ಪ್ರಕೃತಿಯಲ್ಲಿ ಸಂಯಮ ಬೇಕೇ ಬೇಡವೆ? ಸಂಯಮದಿಂದ, ದಯೆಯಿಂದ, ಪ್ರಾಮಾಣಿಕತೆಯಿಂದ ಇನ್ನೊಂದು ಜೀವಿಗೆ ಬಾಧಕವಾಗದಂತೆ ಬದುಕಬೇಕೆಂಬ ವೈಜ್ಞಾನಿಕ ಸತ್ಯ ಅಡಗಿದೆ. ಇದು ಬೇಡವೆ?

೭) ಗೀತಾ ೭ನೇ ಅಧ್ಯಾಯ:-
ಜ್ಞಾನವಿಜ್ಞಾನಯೋಗ:-

ಮಯ್ಯಾಸಕ್ತ ಮನಾಃ ಪಾರ್ಥ ಯೋಗಂ ಯಂಜನ್ಮದಾಶ್ರಯಃ|

ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ||

         ಸರ್ವತ್ರ ಬೌದ್ಧಿಕ ಬೆಳವಣಿಗೆ (ದೇಹ, ಮಾಂಸವಲ್ಲ), ಸಂಶೋಧನೆ, ಸಮಾಜ ಹಿತ ರಕ್ಷಣೆ, ಪರಿಚಯ, ಹಲವು ಮುಖದಲ್ಲಿ ನಡೆಸಬೇಕಾದ ಸಂಶೋಧನೆ, ಅದರ ಬಳಕೆ ವಿಚಾರ, ತನ್ಮೂಲಕ ಸಹಬಾಳ್ವೆಯ ಸಾಧನೆಯ ವಿಚಾರ ವಿಮರ್ಶೆ, ಇದು ಬೇಡವೆ?

೮) ಗೀತಾ ೮ನೇ ಅಧ್ಯಾಯ:-
ಅಕ್ಷರಬ್ರಹ್ಮಯೋಗ:-

ಕಿಂ ತದ್ಬ್ರಹ್ಮ ಕಿಂ ಅಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ|

ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ ||


       ಅವಿನಾಶಿಯ ಚಿಂತನೆ, ಶಾಶ್ವತವಾದದ್ದರ ಸಾಧನೆ, ನಿರ್ಮಾಣ, (ಈಗಿನ ಬಿಲ್ ಪಾಸಾಗುವವರೆಗಿನ ಕಂಟ್ರಾಕ್ಟರ್, ಇಂಜಿನಿಯರ ನಿರ್ಮಾಣವಲ್ಲ) ಶಾಶ್ವತದ ಅನ್ವೇಷಣೆ ಬೇಕೆ. ಒಂದು ಸಮಾಜ ನಾಶಕ್ಕೆ ಕಾರಣವಾಗುವ ಅಣುಬಾಂಬ್, ಮೊಬೈಲ್‍ನಂತಹಾ ಸಂಶೋಧನೆ ಬೇಕೆ? ನೀವೇ  ಹೇಳಿ. ಅದನ್ನೇ

ಅಸತೋಮಾ ಸದ್ಗಮಯ | ತಮಸೋಮ ಜ್ಯೋತಿರ್ಗಮಯ | ಮೃತ್ಯೋರ್ಯಾ ಅಮೃತಂ ಗಮಯ –

ಇದು ವೇದವಾಕ್ಯ. ಯಾವಾಗಲೂ ಮಾನವನ ನಡೆ ಶಾಶ್ವತಃ ಸ್ಥಿರತೆಯತ್ತ ಇರಬೇಕು. ಅದು ದೈಹಿಕವಾಗಿಯಲ್ಲ, ಆತ್ಮಿಕವಾಗಿ.

೯) ಗೀತಾ ೯ನೇ ಅಧ್ಯಾಯ:-
ರಾಜವಿಧ್ಯಾಯೋಗ:-

ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ|

ಜ್ಞಾನಂ ವಿಜ್ಞಾನಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾಮ್ ||


    ಬದುಕುವುದಕ್ಕೆ ಸಾವಿರ ವಿಧ್ಯೆ. ಬದುಕಿಸುವುದಕ್ಕೆ ನೂರು ವಿಧ್ಯೆ. ಬದುಕಿ ಬದುಕುವ ವಿಧ್ಯೆಯೊಂದೇ ಅದೇ ಮಾನವತಾ ವಿಧ್ಯೆ. ಅದೇ ರಾಜವಿಧ್ಯೆ. ಈಗಿನ ಪ್ರಚಲಿತ ಅನಾಗರೀಕ ಶಿಕ್ಷಣ ಬೇಕೆ? ಬದುಕಿ ಬದುಕುವ ವಿಧ್ಯೆ ಬೇಕೆ? ನೀವೇ ಹೇಳಿ. ಬೇಕಿದ್ದರೆ ಭಗವದ್ಗೀತೆ ಓದಿ. ವ್ಯಾಖ್ಯಾನ ಓದಬೇಡಿ. ಷಂಡ, ಭಂಡರ, ಲಂಡ ವ್ಯಾಖ್ಯಾನವದು.

೧೦) ಗೀತಾ ೧೦ನೇ ಅಧ್ಯಾಯ:-
ವಿಭೂತಿಯೋಗ:-

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ|

ಯತ್ತೇಽಹಂ ಪ್ರೀಯಮಾಣಾಯ ವಕ್ಷ್ಯಾಮಹಿತ ಕಾಮ್ಯಯಾ ||


    ಹುಟ್ಟಿದ ಒಬ್ಬ ಮನುಷ್ಯ ದಿನಕ್ಕೆ ೩ ಊಟ ಉಂಡರೂ ೧೦೦ ವರ್ಷಕ್ಕೆ ೭೩ಸಾವಿರ ಊಟ ಮಾಡಿರುತ್ತಾನೆ. ಅಲ್ಲಿ ತಿಂದ ಅನ್ನದ ಸಾರ, ಇತರೆ ಆಹಾರದ ಸಾರ, ತಾನು ಬಳಸಿದ ಬಟ್ಟೆ, ಬಣ್ಣಗಳ ವೈಭವದ ಸಾರವೆಲ್ಲವೂ ಕೊನೆಗೆ ಸುಟ್ಟರೆ ಸಿಗುವುದು ಒಂದು ಹಿಡಿ ಬೂದಿ ಮಾತ್ರ ತಾನೆ? ಆದರೆ ಆತ್ಮನನ್ನು ಸುಡಲಾರಿರಿ. ಆತ್ಮನನ್ನರಿತು ವಿಭೂತಿಗಳಾಗಿ. ಬೂದಿಯಾಗಬೇಡಿ. ನೀನು ತಿಂದನ್ನ ನಿನ್ನರಿವು ಕೊಡುವುದಾಗಿರಲಿ ಎಂಬ ಎಚ್ಚರಿಕೆ, ದಾರಿ ತೋರುವ ಮಾರ್ಗ ಬೇಕೆ? ಬೇಡವೆ?

೧೧) ಗೀತಾ ೧೧ನೇ ಅಧ್ಯಾಯ:-
ವಿಶ್ವರೂಪ ದರ್ಶನ:-

ಮದನು ಗ್ರಹಾಯ ಪರಮಂ ಗುಹ್ಯಮಧ್ಯಾತ್ಮ ಸಂಜ್ಞಿತಮ್|

ಯತ್ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ ||


     ಭಿನ್ನ ಭಿನ್ನ ಪ್ರಪಂಚದಲ್ಲಿ ಆಡಿ ಬಂದಿರುವ ಜೀವನವೇ ನಿನ್ನ ಕರ್ಮಕಾಂಡವನ್ನೆಲ್ಲಾ ವರ್ಣಿಸುವ ವಿಡಿಯೋ ಚಿತ್ರಣ ನೋಡಿ ಆನಂದಿಸುವೆಯೊ, ದುಃಖಿಸುವೆಯೊ ನಿನಗೆ ಬಿಟ್ಟದ್ದು. ಇನ್ನಾದರೂ ನೀನು ಭಿನ್ನದೊಳಗೊಂದಾಗು, ಹೊಂದಿ ಬಾಳುವೆ ಮಾಡು. ಈ ಕಲಹ, ಈ ದ್ವೇಷಾಸೂಯೆ, ಮೋಹವ ಬಿಟ್ಟು ಸಾತ್ವಿಕನಾಗು. ಬದುಕು ಬೇಕೆಂಬ ಜ್ಞಾನ ಬೋಧೆ ಬೇಕಿಲ್ಲವೆ? ನಿತ್ಯ ಹೊಡೆದಾಟದ ಜಗಳ, ದೊಂಬಿ, ಗಲಾಟೆ, ಕೋರ್ಟುಕಟ್ಟಲೆ, ಸೆರೆವಾಸ, ಮರಣದಂಡನೆ, ರೋಗ ರುಜಿನದ ಜೀವನ ಬೇಕೆ? ನೀವೇ ಹೇಳಿ.

೧೨) ಗೀತಾ ೧೨ನೇ ಅಧ್ಯಾಯ:-
ಭಕ್ತಿಯೋಗ:-

ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ|

ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ||


  “ಅಭ್ಯಾಹ ಉಕ್ತವ್ಯ ಇತಿ ಭಕ್ತಿಃ” ಅಂತರ್ಮನಕ್ಕೆ ಗೋಚರವಾದದ್ದು, ಅನ್ನಿಸಿದ್ದು, ಪ್ರಕಟವಾದದ್ದು ಎಂಬರ್ಥದಲ್ಲಿ ಭಕ್ತಿ ಶಬ್ದ ಪ್ರಯೋಗವಿದೆ “ಬ್ರಾಹ್ಮಿಯಲ್ಲಿ”. ಅಂತರ್ಮನ ಒಪ್ಪಿ ಮಾಡುವ ಕ್ರಿಯೆಯೇ ಭಕ್ತಿಯುಕ್ತ ಕ್ರಿಯೆ. ಅದರ ಪ್ರಕಟರೂಪವೇ ಶೃದ್ಧಾ. ಬದುಕಲು ಮುಖ್ಯವಾಗಿ ಬೇಕಾದ್ದು ಶೃದ್ಧೆ. ಅದನ್ನು ಪಡೆಯುವ ವಿಧಾನವೇ ಭಕ್ತಿಯೋಗ. ಯೋಗ ಎಂದರೆ ಕೂಡು ಎಂದರ್ಥ.

೧೩) ಗೀತಾ ೧೩ನೇ ಅಧ್ಯಾಯ:-
ಕ್ಷೇತ್ರ+ಕ್ಷೇತ್ರಜ್ಞವಿಭಾಗಯೋಗ:-

ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ|

ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ ||


     ಕಾರ್ಯ+ಕಾರಣ+ಕರ್ತಾ. ಕರ್ತನು ಕಾರಣವಿದ್ದಲ್ಲಿ ಕಾರ್ಯ ಮಾಡಬಲ್ಲ. ಜೀವನದಲ್ಲಿ ಪ್ರತ್ಯುತ್ಪಾದಕತೆ ಸೃಷ್ಟಿ, ಹೊಸ ಸಂಶೋಧನೆ, ಬೌದ್ಧಿಕ ಬೆಳವಣಿಗೆ, ವೈಜ್ಞಾನಿಕ ಮನೋಭಾವ, ಸತ್ಯ ಸಾಕ್ಷಾತ್ಕಾರ ಹೇಳಿ ಕೊಡುವುದು ಈ ಅಧ್ಯಾಯ. ಮೊದಲು ಕ್ಷೇತ್ರನಾಗಿ ಕ್ಷೇತ್ರವನ್ನರಿತು ಪುರುಷನಾಗೆಂಬ ತಾತ್ವಿಕಜ್ಞಾನ ಇದರಿಂದ ಪ್ರಾಪ್ತಿ.

೧೪) ಗೀತಾ ೧೪ನೇ ಅಧ್ಯಾಯ:-
ಗುಣತ್ರಯವಿಭಾಗ:-

ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್|

ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ||


  ಪ್ರಕಟ ಪ್ರಪಂಚದಲ್ಲಿ ಪಾಂಚಭೌತಿಕ ದೇಹ ಸಹಿತವಾಗಿ ಅಣು, ರೇಣು, ತೃಣಗಳೆಲ್ಲವೂ ತ್ರಿಗುಣಾತ್ಮಿಕವಾಗಿರುತ್ತೆ. ಅದು ಸ್ವಭಾವ, ಸ್ವಭಾವಜನ್ಯವನ್ನು ಬಳಸಿಕೊಂಡು ಉತ್ತಮಿಕೆ ಪಡೆಯುವುದು ಹೇಗೆ ಎಂಬುದು ತಿಳಿದಿರಬೇಡವೆ? ಪ್ರಕೃತಿಯಲ್ಲಿ ಅನ್ನಕ್ಕೆ ಪೂರ್ಣವಾದ್ದು ಸಿಗುತ್ತದೆ. ಅದರದರ ಸ್ವಭಾವವರಿತು ಹದ ಮಾಡಿ ಪಕ್ವಮಾಡಿ ಬಳಸುವ ಈ ಚಿಂತನೆ ಇಲ್ಲದಿದ್ದರೆ ಪುರುಷತ್ವವೆಂಬುದು ಅಸತ್ಯ.

೧೫) ಗೀತಾ ೧೫ನೇ ಅಧ್ಯಾಯ:-
ಪುರುಷೋತ್ತಮಯೋಗ:-

ಊರ್ಧ್ವಮೂಲಮಧಃ ಶಾಖಮಶ್ವತ್ಥಂ ಪ್ರಾಹುರವ್ಯಯಮ್|

ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||


  ಮಾನವನು ತನ್ನ ಹಿರಿಯರನ್ನೇ ಮೂಲವೃಕ್ಷದ ಬೇರೆಂದು ತಿಳಿದು ಅವರನ್ನು ಗೌರವಿಸುತ್ತಾ ಎತ್ತರದಲ್ಲಿಟ್ಟು ಅವರ ನೆರಳಲ್ಲಿ ತಾನು ಹೊಸ ಚಿಗುರು, ಹೂ, ಕಾಯಿ, ಹಣ್ಣಾಗಬೇಕು. ಅದೇ ಸತ್ಯ ಮಾರ್ಗ, ಸನ್ಮಾರ್ಗ. ಈಗಿನ ವಿದೇಶೀಯ ಜೀವನ ಮಾರ್ಗ ಮುದುಕರು ವೃದ್ಧಾಶ್ರಮಕ್ಕೆ. ಇಲ್ಲಿ ಬೆಳೆಯುವ ಚಿಗುರು ಬೆಳೆಯಲಾರದೆ ತನಗೆ ತಾನೇ ಒಣಗಿ ಸತ್ತು ನಂತರ ಸರಕಾರವನ್ನೋ, ಆಧ್ಯಾತ್ಮವನ್ನೋ, ದೇವರನ್ನೋ ದೂಷಿಸುತ್ತಾ ಪ್ರೇತವೋ, ಪಿಶಾಚಿಯೋ ಆಗಿ ಬಕುಕಿರುತ್ತದೆ. ಅದನ್ನೇ ಬೋಧಿಸುತ್ತಿದೆ ವಿದೇಶೀ ವಿಜ್ಞಾನ. ಅದು ಬೇಕೆ? ಉತ್ತಮ ಪುರುಷವೆಂಬ ಅತೀ ಸರಳ, ಸುಲಭ, ಜ್ಞಾನಯುಕ್ತ, ಪೀಳಿಗೆಯಿಂದ ಪೀಳಿಗೆಗೆ ನಡೆಯುವ ಪರಿಷ್ಕೃತ ಜ್ಞಾನ ಬೇಕೆ? ವಿಚಾರವಾದಿಗಳು ಚಿಂತಿಸಿ.

೧೬) ಗೀತಾ ೧೬ನೇ ಅಧ್ಯಾಯ:-
ದೇವಾಸುರ ಸಂಪತ್ತು ಯೋಗ:-

ಅಭಯಂ ಸತ್ತ್ವ ಸಂಶುದ್ಧಿರ್ಜ್ಞಾನಯೋಗ ವ್ಯವಸ್ಥಿತಿಃ|

ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ||


      ಮಾನವ ಜೀವನಿಗೆ ಒಟ್ಟು ಅಷ್ಟವಿಧ ಸಂಫತ್ತು. ಅದರಲ್ಲಿ ಭೌತಿಕವಾಗಿ ಜೀವನ ನಿರ್ವಹಣೆಗೆ ಆಧರಿಸಿದ ಆರೋಗ್ಯಾದಿ ಸಂಪತ್ತುಗಳು. ಮೋಕ್ಷಕಾರಕವಾದ ಜ್ಞಾನಾದಿ ಸಂಪತ್ತುಗಳು. ಅದೇ ದೇವಾಸುರ ಸಂಪತ್ತು. ಉತ್ತಮ ಜ್ಞಾನ ಉತ್ತಮಿಕೆಯಲ್ಲಿ ತೊಡಗಿದರೆ ಬೃಹಸ್ಪತಿ. ಉತ್ತಮ ಜ್ಞಾನವು ಕೆಟ್ಟದ್ದಕ್ಕೆ ಬಳಸಿದರೆ ಶುಕ್ರ, ಆಸುರೀ ಭಾಗ, ಈಗಿನ ವಿಜ್ಞಾನದಂತೆ. ಮೊಬೈಲ್ ತಂತ್ರಜ್ಞಾನ ದರೋಡೆಗೆ, ಬಾಂಬ್ ಸ್ಫೋಟಕ್ಕೆ ಬಳಸುವಂತೆ ದೇವ ಸಂಪತ್ತು ಕೂಡ ವಿನಿಯೋಗದಲ್ಲಿ ವಿವೇಚನೆ ಬೇಕು. ಹೇಗೆ ಎಂಬುದು ತಿಳಿಯಬೇಡವೆ?

೧೭) ಗೀತಾ ೧೭ನೇ ಅಧ್ಯಾಯ:-
ಶ್ರದ್ಧಾ ತ್ರಯಗಳು:-

ಯೇ ಶಾಸ್ತ್ರವಿಧಿ ಮುತ್ಸೃಜ್ಯ ಯಜಂತೇ ಶ್ರದ್ಧಯಾನ್ವಿತಾಃ|

ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ||


     ಭಕ್ತಿಯಿಂದ ಹುಟ್ಟುವ ಶ್ರದ್ಧೆ ಅಥವಾ ಶ್ರದ್ಧೆಯಿಂದ ಹುಟ್ಟುವ ಭಕ್ತಿ. ಇನ್ನು ಭಯದಿಂದ ಹುಟ್ಟುವ ಶ್ರದ್ಧಾಭಕ್ತಿ. ಇವು ಒಂದೇ ಶಬ್ದಗಳಾದರೂ ಭಿನ್ನ ಗುಣಗಳು. ಅವೆಲ್ಲವೂ ಉಪಾಸನಾ ಮಾರ್ಗ ಪ್ರೇಷಕವಾದರೂ ಪ್ರಯೋಗದ ಕಾರಣದಿಂದ ಪರಿಣಾಮ ಭಿನ್ನ. ನಮ್ಮಲ್ಲಿ ಶನಿ ದೇವರನ್ನು ಪೂಜಿಸುವುದು ಭಯದಿಂದ. ಭೂಗತ ಪಾತಕಿಗಳಿಗೆ ಗೌರವ ಕೊಡುವುದೂ ಭಯದಿಂದ. ಹೆಚ್ಚಿನವರು ತಿರುಪತಿ ವೆಂಕಟರಮಣನನ್ನು ಆರಾಧಿಸುವುದೂ ಧನದಾಹದಿಂದ. ಅರ್ಥ ಮಾಡಿಕೊಂಡರೆ ಇಷ್ಟು ಸಾಕು.

೧೮) ಗೀತಾ ೧೮ನೇ ಅಧ್ಯಾಯ:-
ಮೋಕ್ಷಸಂನ್ಯಾಸ ಯೋಗ:-

ಸಂನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಮ್|

ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ ||

   ವಿಶೇಷವಾಗಿ ಪ್ರಪಂಚದ ತತ್ತ್ವಶಾಸ್ತ್ರದ ಗುರುವೆಂದೇ ಗುರುತಿಸಲ್ಪಡುವ ನಮ್ಮೀ ಭಾರತೀಯತೆಯಲ್ಲಿ ಕೆಲ ವಿಶೇಷ ಲಕ್ಷಣಗಳಿವೆ. ಈಗಿನ ಭ್ರಷ್ಟವಿಚಾರವಾದದಲ್ಲಿ ಮತ್ತು ಕೆಲ ಮೋಸಗಾರ ವೇಷಧಾರಿಗಳಲ್ಲಿ ಅದು ಸಿಕ್ಕಿ ನರಳುತ್ತಿದೆ. ಅದನ್ನು ಬಿಡಿಸಿಕೊಂಡು ಮೋಕ್ಷವನ್ನು ಪಡೆಯುವ ದಾರಿ ಹುಡುಕಬೇಕಿದೆ. ಅದಕ್ಕೆ ಈ ಭಗವದ್ಗೀತೆಯೇ ದಾರಿ. ಇದು ಬೇಕೇ ಬೇಕು. ಇದನ್ನು ಬೇಡವೆನ್ನುವ ವಿಚಾರವಾದಿಗಳು ತಮ್ಮ ವೈಯಕ್ತಿಕ ಜ್ಞಾನಕ್ಕೆ ತುಲನೆ ಮಾಡಿಕೊಂಡರೆ ಉತ್ತಮ. ಅಥವಾ ಇನ್ನಿತರೆ ಮತೀಯವಾದಿಗಳು ತಮ್ಮ ಮತಗ್ರಂಥವನ್ನೂ, ಅದರ ಆದರ್ಶವನ್ನೂ ತುಲನೆ ಮಾಡಿಕೊಳ್ಳುವುದು ಉತ್ತಮ. ವೇದ, ಭಗವದ್ಗೀತೆಯಲ್ಲಿರತಕ್ಕ ನೈಜ ಸಾಮಾಜಿಕ ಕಳವಳಿ ಇದ್ದ ಎಲ್ಲಾ ಮತಗ್ರಂಥಗಳೂ ಖಂಡಿತಾ ಮಾನ್ಯ. ಅದಿಲ್ಲದೆ ಬಾಂಬ್ ಬ್ಲಾಸ್ಟ್ ಮಾಡಿ “ಜೆಹಾದ್” ಎಂಬ ಘೋಷಣೆ ಮಾಡುವ ಮತಗ್ರಂಥ ಖಂಡಿತಾ ಸಮಾಜಕ್ಕೆ ಬೇಡವೆಂದು ಕಳಕಳಿಯಿಂದ ವಿನಂತಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಇಂತು – ಕೆ.ಎಸ್. ನಿತ್ಯಾನಂದ

No comments:

Post a comment