Monday, 8 July 2013

ಬೋಧಿ ಗಯಾ ವಿಧ್ವಂಸಕ ಕೃತ್ಯ – ಒಂದು ಪ್ರತಿಕ್ರಿಯೆ

ಬಾಂಬ್! ಬಾಂಬ್! ಬಾಂಬ್! ಈ ಬಾರಿಯ ಜ್ಯೇಷ್ಠ ಮಾಸವು ಅತೀವ ಮಳೆ ಪ್ರವಾಹದೊಂದಿಗೆ ಆಷಾಢ ಮಾಸಕ್ಕೆ ಹೆಜ್ಜೆ ಇಡುವ ಮುನ್ನವೇ ಬಿಸಿ ಬಿಸಿ ಬಾಂಬ್ ಮಳೆಯನ್ನೇ ಸುರಿಸಿತು. ಕೊನೆಗೆ ಸರಕಾರ ಎಚ್ಚೆತ್ತುಕೊಂಡು ಬಾಂಬ್ ಪ್ರಿಯರನ್ನು ಸದೆಬಡಿಯುವ ಸಂಕಲ್ಪ ಮಾಡಿತೊ ದೇಶದೆಲ್ಲೆಡೆ ಮಳೆ ಸುರಿಯುವುದು ಮುಂದುವರೆಯುತ್ತಲೇ ಇದೆ. ಒಂದು ಗಾದೆ ಇದೆ – ಪುಣ್ಯಾತ್ಮರಿದ್ದಲ್ಲಿ ಮಳೆ ಬೆಳೆ, ಪಾಪಿಗಳ ಸಂತೆಯಲ್ಲಿ ಕೊಲೆ ದರೋಡೆ; ಯಾವುದೋ ದ್ವೇಷ, ಯಾವುದೋ ಉದ್ದೇಶ, ಯಾವುದೋ ಧರ್ಮದ ಛತ್ರದಡಿಯಲ್ಲಿ ಜೀವಹಾನಿಯಂತಹಾ ಕ್ರೂರ ಕೃತ್ಯ ನಡೆಸುವುದಕ್ಕೆ ಅವಕಾಶವಿದೆಯೇ? ಖಂಡಿತಾ ಇಲ್ಲ. 

    ಯಾವ ಧರ್ಮವೂ ಜೀವಹಾನಿಯನ್ನು ಒಪ್ಪುವುದಿಲ್ಲ. ಹಿಂಸೆಗೆ ಮಾನ್ಯತೆ ಇಲ್ಲ. ಯಾವುದೋ ವಿಚಾರವನ್ನು ಹೇಗೋ ಅರ್ಥಮಾಡಿಕೊಂಡ ಜನ ಧರ್ಮದ ನೆಪ ಕೊಟ್ಟು ಹಿಂಸೆಗೆ ಪ್ರವರ್ತಿಸುತ್ತಾರೆ. ಟಿ.ವಿ. ಮಾಧ್ಯಮದಲ್ಲಿ ಬಂದ ಅಭಿಪ್ರಾಯದಂತೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಒಂದು ಭಯೋತ್ಪಾದಕ ಸಂಸ್ಥೆ. ಅದರ ಉದ್ದೇಶ ಜಗತ್ತೆಲ್ಲಾ ಮುಸ್ಲಿಂ ಆಗಿ ಪರಿವರ್ತಿಸುವುದು, ಮುಸ್ಲಿಂ ಅಲ್ಲದ ದೇಶವನ್ನು ನಾಶಪಡಿಸುವುದು. ಅಲ್ಲಿ ಅರಾಜಕತೆ ಸೃಷ್ಟಿಸುವುದು. ಮುಸ್ಲಿಂ ಧರ್ಮವನ್ನು ಒಪ್ಪದ ಜನರು ಬದುಕಲು ಅರ್ಹರಲ್ಲ ಎಂಬುದು ಅವರ ಅಭಿಪ್ರಾಯ. ಆದರೆ ಮುಸ್ಲಿಂ ಧರ್ಮದ ಅಭಿಪ್ರಾಯ ಖಂಡಿತಾ ಅಲ್ಲ. ಒಂದು ಧರ್ಮ, ಒಂದು ಸಿದ್ಧಾಂತ ಬಲಾತ್ಕಾರವಾಗಿ ಹೇರಲ್ಪಡುವುದಿಲ್ಲ. ಅದರಲ್ಲಿರತಕ್ಕ ಆದರ್ಶ, ಸತ್ಯಕ್ಕೆ ಪ್ರಚೋದಿತವಾಗಿ ಧರ್ಮ ಬೆಳೆಯಬೇಕು. ಬಲಾತ್ಕಾರದಿಂದ ಯಾವ ಧರ್ಮವೂ ಬೆಳೆಯಲಾರದು. ಮತ್ತು ಯಾವುದೇ ಒಂದು ಧರ್ಮ, ಒಂದು ಸಿದ್ಧಾಂತ ಮಾತ್ರ ಇರಬಾರದು. ಹಲವು ಧರ್ಮ ಸಿದ್ಧಾಂತಗಳ ತಾಳಮೇಳವೇ ಜೀವನವ್ಯವಸ್ಥೆ. ಅದಿಲ್ಲದಿದ್ದರೆ ಯಾವ ಧರ್ಮವೂ ಜಾಗೃತವಾಗಿರಲಾರದು. ಇನ್ನೊಂದರ ಭಯದಲ್ಲಿಯೇ ಈ ಪ್ರಕೃತಿಯಲ್ಲಿ ಧರ್ಮ, ಸಿದ್ಧಾಂತ, ಜೀವಿಗಳು, ಪಶು, ಪಕ್ಷಿಗಳು, ಗಿಡ, ಮರಗಳು ಹೆಚ್ಚೇಕೆ ಮಳೆಬೆಳೆಗೂ ಆಗುವುದು. ಅದು ಪ್ರಕೃತಿ ರಹಸ್ಯ. ಆದರೆ ಯಾರೋ ಮೂರ್ಖರು ತಮ್ಮ ಸಿದ್ಧಾಂತವನ್ನು ಮಾತ್ರ ಸರ್ವರೂ ಬಳಸಬೇಕೆಂಬ ಅಭಿಪ್ರಾಯ ಅವರ ಧರ್ಮದ ನಾಶಕ್ಕೆ ಕಾರಣರಾಗುತ್ತಾರೆ ಎಚ್ಚರ. ಒಟ್ಟಾರೆ ಗಮನಿಸಿ ಯಾವುದೇ ಭಯೋತ್ಪಾದಕತೆ, ಯುದ್ಧ ನಾಶ, ಬಲಾತ್ಕಾರ, ಧರ್ಮದ ಬೆಳವಣಿಗೆಗೆ ಪೂರಕವೂ ಅಲ್ಲ, ದಾರಿಯೂ ಅಲ್ಲ. ಪ್ರೀತಿ, ಪ್ರೇಮ, ವಿಶ್ವಾಸ, ಸಚ್ಚಾರಿತ್ರ್ಯ, ಆದರ್ಶ, ಸತ್ಯ ಮಾರ್ಗವೇ ಧರ್ಮಸಿದ್ಧಾಂತಗಳ ಬೆಳವಣಿಗೆಯ ಮಾರ್ಗ ಅರ್ಥ ಮಾಡಿಕೊಳ್ಳಿ.

        ಹಿಂದೆ ಆಗಿಹೋದ ಧರ್ಮಸಿದ್ಧಾಂತಗಳೆಷ್ಟೋ ಈ ದುರ್ಮಾರ್ಗ ಹಿಡಿದಿದ್ದರಿಂದಲೇ ನಾಶವಾದವು. ಅವುಗಳ ಪಟ್ಟಿ ಕೊಡ ಹೋದರೆ ಮುಗಿಯಲಾರದ್ದು. ಇಲ್ಲಿಯ ಬೌದ್ಧಧರ್ಮವಾಗಲೀ, ಜೈನಧರ್ಮವಾಗಲೀ, ಮುಸ್ಲಿಂ, ಕ್ರಿಶ್ಚಿಯನ್ ಆಗಲೀ, ಆ ಮಾರ್ಗ ಹಿಡಿದಾಗ ಉದ್ಧಾರವಾದ ಉದಾಹರಣೆಯಿಲ್ಲ. ಆದರೆ ಜನರೊಂದಿಗೆ ಬೆರೆತು ಬಾಳಿದಾಗ ಅಭಿವೃದ್ಧಿಯಾಗಿವೆ. ಕೆಲವೇ ಕೆಲವು ತಮ್ಮ ಭ್ರಷ್ಟತೆಯಿಂದಲೇ ನಾಶವಾದ ದರ್ಶನಗಳ ಬಗ್ಗೆ ಉದಾಹರಿಸುತ್ತೇನೆ.
 1. ಚಾರ್ವಾಕವಾದ
 2. ನಿರೀಶ್ವರವಾದ
 3. ಸೂಕ್ಷ್ಮವಾದ
 4. ನಿರಾಕಾರವಾದ
 5. ನಿರ್ಗುಣೋಪೇತವಾದ
 6. ಸಾಕಾರವಾದ
 7. ಪಾರ್ಶ್ವೇಶ್ವರವಾದ
 8. ತ್ರೈತವಾದ
 9. ಕಪಾಲಿಕಾವಾದ
 10. ಅಘೋರವಾದ
 11. ಶಾಕ್ತೇಯವಾದ
 12. ಗಾಣಪತ್ಯವಾದ
 13. ಅನಂತ ಕೂರ್ಮವಾದ
 14. ಬಹುಗುಣವಾದ
 15. ಗುಣೋಪೇತವಾದ
 16. ಆತ್ಮಿಕವಾದ
 17. ನಿರಾತ್ಮಕವಾದ
 18. ಜೈವಿಕವಾದ
 19. ಸಾಪೇಕ್ಷವಾದ
 20. ನಿರಪೇಕ್ಷವಾದ
 21. ಕರ್ಮವಾದ
 22. ಜ್ಞಾನವಾದ
 23. ಯೋಗವಾದಗಳು
 24. ಶೂನ್ಯವಾದ
 25. ಶೈವವಾದ
 26. ದ್ವೈತವಾದ
 27. ಅದ್ವೈತವಾದ
 28. ವಿಶಿಷ್ಟಾದ್ವೈತ ವಾದ
 29. ಶಕ್ತಿವಿಶಿಷ್ಟಾದ್ವೈತವಾದ
 30. ಋಣಾತ್ಮಕವಾದ
 31. ಶಾಕ್ತನಿರೀಕ್ಷಕವಾದ
 32. ಶಾಕ್ತ ಈಶ್ವರವಾದ
 33. ಮಾಯಾವಾದ
 34. ಮಾಯಾ ಭೇದವಾದ
 35. ಮಾಯಾಮೂಲವಾದ
 36. ಭೈರವವಾದ
 37. ಜರಾತುಷ್ಟ್ರವಾದ
 38. ಸಾರಸವಾದ
 39. ಪೌರುಷವಾದ
 40. ಅಪೌರುಷೇಯವಾದ
 41. ದೈವಾತ್ಮಕವಾದ
 42. ರೂಪಕಾರ್ಪಣ್ಯವಾದ
 43. ರೂಪ ನಿರಾಕಾರವಾದ
 44. ರೂಪ ನಿರ್ದೇಶವಾದ
 45. ವಸ್ತು ನಿರ್ದೇಶವಾದ
 46. ಪ್ರಾಮಾಣ್ಯವಾದ
 47. ಪ್ರತ್ಯಕ್ಷಪ್ರಾಮಾಣ್ಯವಾದ
 48. ಊಹಾವಾದ
 49. ವೈದಿಕವಾದ
 50. ಭಾಗವತವಾದ
 51. ಪಾರಸ್ಕರೇಯವಾದ
 52. ಬಹುಬಲಾನ್ವಿತವಾದ
 53. ಇಂದ್ರಿಯಸಿದ್ಧಾಂತವಾದ
 54. ಇಂದ್ರಿಯಾತೀತವಾದ
 55. ಇಂದ್ರಿಯಗೋಚರವಾದ
 56. ಅತೀಂದ್ರಿಯವಾದ
 57. ಭೂತವಾದ
 58. ಆಚಾರವಾದ
 59. ದಶಾವತಾರವಾದ
 60. ಪೌರಾಣಿಕ ಪ್ರಾಮಾಣ್ಯವಾದ
 61. ಶ್ರೌತವಾದ
 62. ಸ್ಮಾರ್ತವಾದ
 63. ಗಣಕವಾದ
 64. ಗಣವಾದ
 65. ಪ್ರಮಥವಾದ
 66. ಸಿದ್ಧವಾದ
 67. ಬುದ್ಧವಾದ
 68. ಪೃಚ್ಛಕವಾದ
 69. ಯೋಗದತ್ತವಾದ
 70. ಬ್ರಹ್ಮವಾದ  

ಹೀಗೆ ಹೆಸರಿಸುತ್ತಾ ಹೋದಾಗ ಮುಗಿಯದ ಕಥೆಗಳು. ಇವೆಲ್ಲಾ ಒಂದು ಕಾಲಕ್ಕೆ ಪ್ರಸಿದ್ಧದರ್ಶನ ಶಾಸ್ತ್ರಗಳಾಗಿ ರೂಪುಗೊಂಡು ಸಿದ್ಧಾಂತಗಳಾಗಿ, ಮತಗಳಾಗಿ ಜನಮಾನಸದಲ್ಲಿ ತುಂಬಿ ನಂತರ ಅವುಗಳ ದುಷ್ಪ್ರವರ್ತನೆಯಿಂದ ನಾಶವಾಗಿ ಹೋದವುಗಳು. ಪ್ರಸಕ್ತಕಾಲದಲ್ಲಿಯೂ ಇಂತಹಾ ನೂರಾರು ವಾದ ವಿಚಾರ ಸಿದ್ಧಾಂತಗಳಿವೆ. ಅವುಗಳೂ ಕೂಡ ಉಳಿಯಬೇಕಿದ್ದಲ್ಲಿ ಸದ್ವರ್ತನೆ ರೂಢಿಸಿಕೊಳ್ಳಬೇಕಷ್ಟೆ. ದುಷ್ಟತನ, ದಾರ್ಷ್ಟ್ಯ, ದರ್ಪ, ಹಿಂಸೆಗೆ ಇಳಿಯಬೇಡಿರೆಂದು ಪ್ರಾರ್ಥಿಸುತ್ತೇನೆ. 

      ಪೂರ್ವೀಕ ಉದಾಹರಣೆ ತೆಗೆದುಕೊಂಡರೆ ನಮಗೆ ಕಾಣಬರುವುದು ಪೌರಾಣಿಕವಾಗಿ ರಾಕ್ಷಸೀಪ್ರವೃತ್ತಿ ಸಮಾಜದಲ್ಲಿ ನಿಷೇಧಿತ. ದೈವೀಕವೃತ್ತಿ ಶುಭಪ್ರದ. ಜನಮಾನಸದಲ್ಲಿ ಮಾನ್ಯ. ದೈವೀಕ ಪ್ರವೃತ್ತಿಯನ್ನು ಅನುಸರಿಸಿದ ಜನರನ್ನು ರಾಕ್ಷಸೀ ಪ್ರವೃತ್ತಿಯು ಮೆಟ್ಟಿ ಹಿಂಸಿಸಿ, ನೀವು ನಮ್ಮನ್ನೇ ಪೂಜಿಸಿ, ನಮಗೆ ಹವಿರ್ಭಾಗ ಕೊಡಿ, ದೇವತೆಗಳಿಗೆ ಬೇಡ, ದೈವೀಕಪ್ರವೃತ್ತಿಯ ಸ್ವರ್ಗ ನಮ್ಮದು ಎಂದು ಹಾರಾಡಿದರು, ಹೋರಾಡಿದರು, ಕೂಗಾಡಿದರು, ಕೊಂಡಾಡಿದರು. ಆದರೆ ನಾಶವಾದರು. ಕಾರಣ ರಾಕ್ಷಸೀಪ್ರವೃತ್ತಿಯಲ್ಲಿರುವುದು ಹಿಂಸೆ, ಕ್ರೌರ್ಯ, ಮದ, ಮಾತ್ಸರ್ಯ ಅದೆಲ್ಲಿರುತ್ತದೆ ಅದು ತನ್ನ ನಾಶಕ್ಕೆ ತಾನೇ ಗುಂಡಿ ತೋಡಿಕೊಳ್ಳುತ್ತದೆ. ಸಹನೆ, ಶಾಂತಿ, ದಯೆ, ಧರ್ಮ, ಸತ್ಯ ಎಲ್ಲಿದೆ ಅದು ಉಳಿದು ಬೆಳೆದು ಅಭಿವೃದ್ಧಿಯಾಗುತ್ತಲೇ ಇದೆ. ಅದರರ್ಥವೇ ಯಾಗಯಜ್ಞಗಳು. ಅಂದರೆ ಒಳ್ಳೆಯದರ ಅನುಸರಣೆ, ಅನುಭಾವ, ಸಾಂಗತ್ಯ ಅದೇ ಯಜ್ಞ, ಯಾಗ. ರಾಕ್ಷಸಿಕತೆ ನಾಶವಾಗುತ್ತದೆ. ಆದರೆ ಇದು ತಂತಾನೆ ಬೆಳೆಯುತ್ತದೆ. ಹಾಗೆ ಮೇಲೆ ಕಾಣಿಸಿದ ಹಲವು ಮತ ಧರ್ಮಗಳು ತಮ್ಮ ಕ್ರೌರ್ಯ, ಹೇತುವಾದ, ಅಜ್ಞಾನದಿಂದಾಗಿಯೇ ನಾಶವಾಗಿವೆ ಎಂಬ ಸತ್ಯ ನಿಮಗೆ ಅರಿವಾಗಬಹುದು. ಹೀಗೆ ಧರ್ಮದ ಹೆಸರಿನಲ್ಲಿ ನಡೆಸುವ ಗೂಂಡಾಗಿರಿ, ಭಯೋತ್ಪಾದಕತೆ ಖಂಡಿತಾ ಸಾಧುವಲ್ಲವೆಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇವೆ.

2 comments:

 1. neevu nambidhare nambi bittare bidi... yivugallevu sathya... aadhare yidannu yaaru artha maadikolluvudhilla... bari yinnobbarannu sayisuvudhe, kole maaduvudhe, blast maaduvudhe yivara parama thathva & parama guriyaagidhe...

  ReplyDelete
 2. Good post hemanthanna .. everybody should be awared right from now if we need to protect our nation

  ReplyDelete