Thursday, 11 July 2013

Chaaturmaasya Vidhi - 1

ಚಾತುರ್ಮಾಸ್ಯ ವಿಧಿಃ

ಸಾಯನೀ (ಆಷಾಢ ಶುದ್ಧ) ಏಕಾದಶಿಯಿಂದ ಪ್ರಬೋಧಿನೀ (ಕಾರ್ತಿಕ ಶುದ್ಧ) ಏಕಾದಶಿಯವರೆಗೆ ವ್ಯಾಪ್ತವಾದ ವ್ರತಾಚರಣಾ ಕಾಲ. ಕಾರ್ತಿಕ ಪೌರ್ಣಮಿಗೆ ವ್ರತ ಸಮಾಪ್ತಿ. ಪೌರ್ಣಿಮೆಯಂದು ಮಾತ್ರ ಮುಂಡನಕ್ಕೆ ಅವಕಾಶವಿರುವ ಯತಿಗಳು ಸಾಮಾನ್ಯವಾಗಿ ಆಷಾಢ ಪೌರ್ಣಿಮೆಯಂದು ಕೇಶ ಮುಂಡನಾದಿ ಶುದ್ಧಿ ಆಚರಿಸುತ್ತಾರೆ.

ಆಷಾಢ ಶು. 11 - ಶಯನೈಕಾದಶಿ - ಈ ದಿನದಿಂದ ವಿಷ್ಣುವು ಪಾತಾಳದಲ್ಲಿ ಬಲಿ ಚಕ್ರವರ್ತಿಯ ದ್ವಾರದಲ್ಲಿ ಯೋಗನಿದ್ರೆಗೆ ತೆರಳುತ್ತಾನೆಂದು ಪ್ರತೀತಿ.  ಪ್ರಬೋಧಿನಿ ಏಕಾದಶಿವರೆಗೆ ಯೋಗನಿದ್ರೆಯಲ್ಲಿದ್ದು ಉತ್ತಾನ ದ್ವಾದಶಿ (ಕಾ.ಶು.12)ಯಲ್ಲಿ ಜಾಗೃತನಾಗುತ್ತಾನೆ. ಆದ್ದರಿಂದ ಈ ಕಾಲದಲ್ಲಿ ಸಾಮಾನ್ಯವಾಗಿ ಮದುವೆ, ಉಪನಯನಗಳು ನಡೆಸುವುದು ಸೂಕ್ತವಲ್ಲ ಎಂಬುದು ಸ್ಕಾಂದ ಪುರಾಣ ವಾಕ್ಯ.
ಬ್ರಹ್ಮ, ಕ್ಷತ್ರ, ವೈಶ್ಯ, ಶೂದ್ರಗಳೆಂಬ ಚಾತುರ್ವರ್ಣದವರೂ, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಳೆಂಬ ಚತುರಾಶ್ರಮದವರೂ, ರಜಸ್ವಲಾದಿ ದೋಷ ಗಣಿಸದೆ ಸ್ತ್ರೀಯರೂ ಚಾತುರ್ಮಾಸ್ಯದಲ್ಲಿ ಅವರವರಿಗೆ ಉಕ್ತವಾದ, ಶಕ್ಯವಾದ ವ್ರತಗಳನ್ನು ಆಚರಿಸಬೇಕು.

ಅ. ಪ್ರಧಾನ ವ್ರತಗಳು :-
1.    ಶಾಕ ವ್ರತ – ಆ.ಶು. 11 - ಶ್ರಾ.ಶು. 10. ಶಾಕ ವ್ರತ ಸಂಕಲ್ಪ:
ಶಾಕವ್ರತಂ ಮಯಾದೇವ ಗೃಹೀತಂ ಪುರತಸ್ತವ | ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ ತವ ಕೇಶವ ||. ನಿಷೇಧಿತ ಆಹಾರ - ತರಕಾರಿ, ಹಣ್ಣು, ಸೊಪ್ಪು, ಸದೆ, ಶಾಕೆ, ಹುಣಸೆ, ಚೆನ್ನಬೇಳೆ, ಅರಿಶಿನ, ಹಿಂಗು, ಒಣ ಮೆಣಸು, ಹಸಿ ಮೆಣಸು, ಸಾಸಿವೆ, ಕೇಸರಿ, ಒಣ ದ್ರಾಕ್ಷಿ, ಗೋಡಂಬಿ, ಪಚ್ಚಕರ್ಪೂರ, ಜಾಯ್ಕಾಯಿ, ಜಾಪತ್ರೆ, ಏಲಕ್ಕೆ, ಲವಂಗ, ಮೊಗ್ಗು, ತೆಂಗು (ಕೆಲವರು ತೆಂಗಿನ ಬಳಕೆಯನ್ನು ಒಪ್ಪಿದ್ದಾರೆ). ಸೇವನೀಯ ಆಹಾರಗಳು – ಬೇಳೆಗಳು, ಮಾವಿನ ಹಣ್ಣು, ಜೀರಿಗೆ, ಕಾಳ್ಮೆಣಸು, ಹಾಲು, ಮೊಸರು, ತುಪ್ಪ, ಜೇನು, ಒಣ ನಲ್ಲಿಕಾಯಿ, ಮಾವಿನ ಬಾಳ್ಕ, ಒಣ ಶುಂಠಿ. ಶಾಕ ಸಮರ್ಪಣ ಮಂತ್ರ:
ಉಪಾಯನಮಿದಂ ದೇವ ವ್ರತಸಂಪೂರ್ತಿ ಹೇತವೇ | ಶಾಕಂ ತು ದ್ವಿಜವರ್ಯಾಯ ಸಹಿರಣ್ಯಂ ದದಾಮ್ಯಹಂ ||

2.    ದಧಿ ವ್ರತ - ಶ್ರಾ.ಶು. 11- ಭಾ.ಶು. 10. ಈ ಕಾಲದಲ್ಲಿ ನೈವೇದ್ಯ ತಯಾರಿಸುವಾಗ ಯಾವುದೇ ರೂಪದಲ್ಲೂ ಮೊಸರು ಬಳಸುವಹಾಗಿಲ್ಲ. ಮೊಸರ ಮುಂದಿನ ಪರಿವರ್ತನಾ ಭಾಗವಾದ ಮಜ್ಜಿಗೆ, ಬೆಣ್ಣೆ, ತುಪ್ಪ ಬಳಸಬಹುದು. ದಧಿವ್ರತ ಸಂಕಲ್ಪ:
ದಧಿ ಭಾದ್ರಪದೇ ಮಾಸಿ ವರ್ಜಯಿಷ್ಯೇ ಸದಾ ಹರೇ | ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ ||.
ಸಮರ್ಪಣೆ:
ಉಪಾಯನಮಿದಂ ದೇವ ವೃತಸಂಪೂರ್ತಿ ಹೇತವೇ | ದ್ವಿಜವರ್ಯಾಯ ದಾಸ್ಯೇಹಂ ಸಹಿರಣ್ಯಂ ಘನಂ ದಧಿ ||.

3.    ಕ್ಷೀರ ವ್ರತ - ಭಾ.ಶು. 12 – ಅಶ್ವ.ಶು. 10. ನೈವೇದ್ಯ ತಯಾರಿಸುವಾಗ ಯಾವುದೇ ರೂಪದಲ್ಲಿ ಹಾಲನ್ನು ಬಳಸಬಾರದು. ಇದು ಹಾಲು, ಕೆನೆ, ಚೀಸ್, ಐಸ್ ಕ್ರೀಂ ಇತ್ಯಾದಿ ಕ್ಷೀರೋತ್ಪನ್ನಗಳಿಗೆ ಅನ್ವಯಿಸುತ್ತದೆ. ಮೊಸರನ್ನು ಬಳಸಬಹುದು. ಪಾಯಸಕ್ಕೆ ತೆಂಗಿನ ಹಾಲನ್ನು ಬಳಸುವುದು. ಕ್ಷೀರವ್ರತ ಸಂಕಲ್ಪ:
ಕ್ಷೀರವ್ರತಮಿದಂ ದೇವ ಗೃಹೀತಂ ಪುರತಸ್ತವ | ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ ರಮಾಪತೇ ||
ಸಮರ್ಪಣೆ:
ಉಪಾಯನಮಿದಂ ದೇವ ವ್ರತ ಸಂಪೂರ್ತಿ ಹೇತವೆ | ಕ್ಷೀರಂತು ದ್ವಿಜವರ್ಯಾಯ ಸಹಿರಣ್ಯಂ ದದಾಮ್ಯಹಂ ||

4.    ದ್ವಿದಳ ವ್ರತ - ಅಶ್ವ.ಶು. 12 – ಕಾ.ಶು. 10. ಈ ಕಾಲದಲ್ಲಿ ದ್ವಿದಳ ಧಾನ್ಯ ಹಾಗೂ ಬಹು ಬೀಜವುಳ್ಳ ತರಕಾರಿ ನಿಷಿದ್ಧ. ಯಾವುದೇ ತರಕಾರಿ ಅಥವಾ ಧಾನ್ಯವನ್ನು ತುಂಡರಿಸಿದಾಗ ಅಥವಾ ಹುರಿದಾಗ ಎರಡು ಭಾಗಗಳಾಗುತ್ತದೋ ಅವು. ಉದಾ:- ಎಲ್ಲ ಬೇಳೆಗಳು, ಬಟಾಣಿ. ಬಹುಬೀಜವೆಂದಾಗ ಹೊರಚರ್ಮ ಆವೃತವಾಗಿದ್ದು ಹಲವು ಬೀಜವುಳ್ಳ ತರಕಾರಿ ಅಥವಾ ಹಣ್ಣುಗಳು. ಉದಾ:- ಸೇಬು, ದ್ರಾಕ್ಷಿ, ದಾಳಿಂಬೆ, ಸೌತೆ ಇತ್ಯಾದಿ. ಸೇವಿಸಬಹುದಾದ್ದು - ಬಾಳೆ ಹಾಗೂ ಅದರ ಉತ್ಪನ್ನಗಳಾದ ಬಾಳೆಕಾಯಿ, ಬಾಳೆದಿಂಡು, ಬಾಳೆಹೂವು ಇತ್ಯಾದಿ, ಬಿಳಿ ದಂಟಿನ ಸೊಪ್ಪು, ಅಗಸೇ ಸೊಪ್ಪು, ಕರಿಮೇವು, ದೊಡ್ಡಪತ್ರೆ ಸೊಪ್ಪು ಇತ್ಯಾದಿ, ಗೆಣಸು, ಸುವರ್ಣ ಗೆಡ್ಡೆ, ಸಾಮೆಗೆಡ್ಡೆ, ತೆಂಗು, ಶುಂಠಿ, ಆಲೂಗೆಡ್ಡೆ, ತೀರ್ಥಕ್ಕೆ ಪಚ್ಚ ಕರ್ಪೂರ. ಚಾತುರ್ಮಾಸ್ಯ ಹಿಡಿದವರು ದ್ವಿದಳ ವ್ರತವನ್ನು ಆಚರಿಸದಿದ್ದರೆ ಕೀಟ ಭಕ್ಷಣೆಗೆ ಸಮವಾದ ದೋಷ. ದ್ವಿದಳ ವ್ರತ ಸಂಕಲ್ಪ:

ಕಾರ್ತಿಕೇ ದ್ವಿದಳಮ್ ಧಾನ್ಯಂ ವರ್ಜಯಿಷ್ಯೇ ಸದಾ ಹರೇ | ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ ||

ದ್ವಿದಳ ಸಮರ್ಪಣ ಮಂತ್ರ:

ಉಪಾಯನಮಿದಂ ದೇವ ವ್ರತಸಂಪೂರ್ತಿ ಹೇತವೇ | ದ್ವಿದಳಂ ದ್ವಿಜವರ್ಯಾಯ ಸಹಿರಣ್ಯಂ ದದಾಮ್ಯಹಂ ||

ವ್ರತ ಸಮಾಪ್ತಿಯಾದ ನಂತರ ಕಾ.ಶು.11ಯಂದು ದ್ವಿದಳ ಧಾನ್ಯ, ತರಕಾರಿ, ಹಣ್ಣು, ದಕ್ಷಿಣೆ ಸಹಿತವಾಗಿ ಬ್ರಾಹ್ಮಣನಿಗೆ ದಾನ ನೀಡಿ ಕೃಷ್ಣಾರ್ಪಣಮಸ್ತು ಹೇಳುವುದು.
ಅನಿರುದ್ಧ ನಮಸ್ತುಭ್ಯಂ ದ್ವಿದಳಾಖ್ಯವ್ರತೇನ ಚ | ವತ್ಕೃತೇನಾಶ್ವಿನೇ ಮಾಸಿ ಪ್ರೀತ್ಯರ್ಥಂ ಫಲದೋ ಭವ ||
ಚಾತುರ್ಮಾಸ್ಯ ವ್ರತ ಸಮರ್ಪಣ ಮಂತ್ರ:
ಇದಂ ವ್ರತಂ ಮಯಾ ದೇವ ಕೃತಮ್ ಪ್ರೀತ್ಯೈ ತವ ಪ್ರಭೋ |
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾತ್ ಜನಾರ್ದನ ||
5.    ಏಕಾದಶೀ ವ್ರತ – 4 ತಿಂಗಳು
6.    ದಿನತ್ರಯ ವ್ರತ - ಪ್ರತೀ ತಿಂಗಳ 10, 11, 12
7.    ಧಾರಣ ಪಾರಣವ್ರತ - ಶ್ರಾವಣ/ ಕಾರ್ತಿಕ / 4 ತಿಂಗಳು
8.    ಷಷ್ಠಕಾಲ ವ್ರತ – ಕಾರ್ತಿಕ / 4 ತಿಂಗಳು
9.    ಲಕ್ಷ ಬತ್ತಿ ವ್ರತ - ಕಾರ್ತಿಕ
10.    ಲಕ್ಷ ಪ್ರದಕ್ಷಿಣೆ ಹಾಗೂ ನಮಸ್ಕಾರ ವ್ರತ – ಆ.ಶು. 11 - ಪೂರ್ಣ 4 ತಿಂಗಳು
11.    ಲಕ್ಷಕಮಲಾರ್ಚನೆ ವ್ರತ – 4 ತಿಂಗಳು
12.    ಲಕ್ಷತುಳಸೀ ಅರ್ಚನೆ ವ್ರತ - 4 ತಿಂಗಳು
13.    ಲಕ್ಷಪುಷ್ಪಾರ್ಚನೆ ವ್ರತ - 4 ತಿಂಗಳು
14.    ರಂಗವಲ್ಲಿಯಿಂದ ಲಕ್ಷ ಪದ್ಮಗಳನ್ನು ಹಾಕುವ ವ್ರತ - 4 ತಿಂಗಳು
15.    ಶತಪತ್ರ, ಜಾತಿ, ಮಲ್ಲಿಕಾ, ಚಂಪಕ, ಯೂಥಿಕಾದಿ ಸುಗಂಧ ಪುಷ್ಪಗಳಿಂದ ಅರ್ಚನೆ ವ್ರತ - 4 ತಿಂಗಳು
16.    ಭೀಷ್ಮ ಪಂಚಕ ವ್ರತ – ಕಾ.ಶು. 11 - ಪೌರ್ಣಿಮೆವರೆಗೆ
17.    ವಿಷ್ಣು ಪಂಚಕ ವ್ರತ - ಭಾ.ಶು. 11 ಶ್ರವಣಾ ನಕ್ಷತ್ರದಿಂದ ಯುಕ್ತವಾಗಿದ್ದರೆ ಅಂದು ಈ ವ್ರತವನ್ನು ಧಾರಣಮಾಡಿ 1 ವರ್ಷ ಪೂರ್ತಿ ಆಚರಿಸಬೇಕು.
18.    ಚಾಂದ್ರಾಯಣ ವ್ರತ - 4 ತಿಂಗಳು
19.    ಕೃಚ್ಛ್ರ ವ್ರತ - 4 ತಿಂಗಳು
20.    ಪರಾಕ ವ್ರತ - 4 ತಿಂಗಳು
21.    ಪ್ರಾಜಾಪತ್ಯ ವ್ರತ - 4 ತಿಂಗಳು
22.    ಲಕ್ಷಹೋಮ ವ್ರತ - 4 ತಿಂಗಳು
23.    ಮೌನ ವ್ರತ - 4 ತಿಂಗಳು
24.    ಧಾತ್ರೀ ಹೋಮ – ಕಾ.ಶು. 15
25.    ಜಯಂತೀ ವ್ರತ - ಶ್ರಾ.ಕೃ. 8
26.    ಮಾಸ ವ್ರತ – ಆಯಾ ಮಾಸದಲ್ಲಿ ತಿಳಿಸಿದಂತೆ.
27.    ಗುರುಹಿರಿಯರು ಸೂಚಿಸಿರುವ ಇತರೆ ವಿಶಿಷ್ಟ ವ್ರತಗಳು.
 
ಬ. ವಿಶೇಷ ಧರ್ಮಾಚರಣೆಗಳು:- 
1.    ನಿತ್ಯವೂ ಉಕ್ತ ಸಂಪ್ರದಾಯ ಹಾಗೂ ಆಶ್ರಮ ಧರ್ಮದಂತೆ ಪ್ರಣವ, ಪಂಚಾಕ್ಷರೀ, ಅಷ್ಟಾಕ್ಷರೀ, ದ್ವಾದಶಾಕ್ಷರೀ, ಗಾಯತ್ರಿ ಮಹಾಮಂತ್ರಗಳನ್ನು ಜಪಿಸಬೇಕು.
 
2.    ಯಥಾಶಕ್ತಿ ಯಥಾವಕಾಶ ವೇದ, ಸ್ಮೃತಿ, 18 ಪುರಾಣ, 18 ಉಪಪುರಾಣ, ವಿಶೇಷವಾಗಿ ಭಾಗವತ, ರಾಮಾಯಣ, ಮಹಾಭಾರತ, ಭಗವದ್ಗೀತಾ, ವಿಷ್ಣು ಸಹಸ್ರನಾಮ, ಪಾಂಚರಾತ್ರಾಗಮ, ಷಡ್ದರ್ಶನಗಳು, ಬ್ರಹ್ಮಸೂತ್ರಗಳ ಆಚಾರ್ಯತ್ರಯರ ಭಾಷ್ಯಗಳು, ಇತ್ಯಾದಿ ಪಾರಾಯಣ.
 
3.    ಅವುಗಳ ಪಾಠ ಪ್ರವಚನ
 
4.    ಪಿತೃತರ್ಪಣ, ಶ್ರಾದ್ಧಾದಿಗಳು.
 
5.    ಸ್ತ್ರೀಯರು ಹರಿಕಥೆ, ದಾಸಪದಗಳು, ಭಜನೆ, ಕೀರ್ತನೆ, ನವಧಾ ಭಕ್ತಿ. 
ಕ. ದಾನಗಳು:- 
ಭೂ, ಸುವರ್ಣ, ದ್ರವ್ಯ, ಧನ, ಧಾನ್ಯ, ತಿಲ, ಛತ್ರ, ಪಾದರಕ್ಷೆ, ಲವಣ, ಧಾತ್ರೀ (ನೆಲ್ಲೀ), ಘೃತ, ಧೇನು, ದೀಪ, ಶಾಕ, ದಧಿ, ಕ್ಷೀರ, ದ್ವಿದಳಧಾನ್ಯ, ಶಯ್ಯಾದಾನ.


|| ಇತಿ ವರಾಹ ಪುರಾಣಾಂತರ್ಗತ ಚಾತುರ್ಮಾಸ್ಯ ಮಾಹಾತ್ಮ್ಯಂ ||

|| ಅಥ ಆಷಾಢ ಮಾಸ ವ್ರತಾನಿ ||

1. ಆ.ಶು 2 – ರಥಯಾತ್ರಾ – ರಥೋತ್ಸವ, ಮನೋರಥದ್ವಿತೀಯಾ, ಗುಂಡಿಚಾಯಾತ್ರಾ - ಪುರುಷೋತ್ತಮ ಕ್ಷೇತ್ರ ದ್ವಾದಶ ಯಾತ್ರಾಸು
 
2.    ಆ.ಶು 6 - ಸ್ಕಂದವ್ರತಮ್
 
3. ಆ.ಶು 7 – ವಿವಸ್ವತ್ಸಪ್ತಮೀ – ವಿವಿಸ್ವನ್ನಾಮ್ನೋ ಭಾಸ್ಕರಸ್ಯೋತ್ಪತ್ತಿಃ ತತ್ಪೂಜನಂ ಚ, ಮಿತ್ರಾಖ್ಯಭಾಸ್ಕರಪೂಜಾ – ಮಾರ್ಗಮಾಘಯೋರಪಿ, ದ್ವಾದಶಸಪ್ತಮೀವ್ರತಮ್ – ಚೈತ್ರವತ್ | ಪೂರ್ವಾಭ್ಯೋ ವಿಶೇಷಃ ಸೂರ್ಯಪೂಜಾ
 
4. ಆ.ಶು 8 – ಮಹಿಷಘ್ನೀಪೂಜಾ, ಪರಶುರಾಮೀಯಾಷ್ಟಮೀ - ಭುವನೇಶ್ವರಚತುರ್ದಶಯಾತ್ರಾಸು
 
5.    ಆ.ಶು 9 – ಐಂದ್ರೀದುರ್ಗಾಪೂಜಾ – ಉಭಯೋರಪಿ ಪಕ್ಷಯೋಃ
 
6.    ಆ.ಶು 10 – ಜಗನ್ನಾಥಸ್ಯ ಪುನರ್ಯಾತ್ರಾ, ಮನ್ವಾದಿಃ
 
7.    ಆ.ಶು 11 -  ಹರಿಶಯನಮ್ – ಏಕಾದಶೀ ದ್ವಾದಶ್ಯೋರಿದಂ ದೇಶಭೇದೇನ | ಕಾರ್ತಿಕ ಶುಕ್ಲೈಕಾದಶೀ ಪರ್ಯಂತಮ್ | ಪಂಚದಿನಾತ್ಮಕಃ ಪ್ರಸ್ವಾಪೋತ್ಸವೋಽಯಮ್ |
 
8.    ಆ.ಶು 12 - ಪಾರಣಾಯಾಂ ವೈಶಿಷ್ಟ್ಯಮ್, ಪಾರಣೋತ್ತರಂ ಸಾಯಂ ಪೂಜಾ, ಚಾತುರ್ಮಾಸ್ಯ ವ್ರತಸಂಕಲ್ಪಶ್ಚ, ವಾಮನಪೂಜಾ, ಹರಿಶಯನಮ್ - ಪುರುಷೋತ್ತಮ ಕ್ಷೇತ್ರಸ್ಥ ದ್ವಾದಶ ಯಾತ್ರಾಸು |
 
9.  ಆ.ಶು 14 - ಶಿವಪೂಜಾ, ಶಯನೋತ್ತಮಾ ಯಾತ್ರಾ - ಭುವನೇಶ್ವರ ಚತುರ್ದಶ ಯಾತ್ರಾಸು |
 
10. ಆ.ಶು ಪೂ - ಹರಿಯಜನಮ್, ಶಿವಶಯನೋತ್ಸವಃ, ಶಿವೇ ಪವಿತ್ರಾರೋಪಣಮ್ – ವಿಶೇಷಽಪ್ಯತ್ರ, ಅನ್ನದಾನಮಾಹಾತ್ಮ್ಯಮ್ - ಬ್ರಾಹ್ಮಣೇಭ್ಯೋ ದಾನಮ್, ಸಂನ್ಯಾಸಿನಾಂ ಕ್ಷೌರಂ ವ್ಯಾಸ ಪೂಜನಂ ಚ, ಗಜಪೂಜಾ – ಕನಖಲೇ ವಿಶಿಷ್ಟಫಲದಾ : ಚೈತ್ರೀವೇಯಮ್, ಭಾರಭೂತೇಶ್ವರಯಾತ್ರಾ – ಕಾಶ್ಯಾಮ್, ಚಾತುರ್ಮಾಸ್ಯಾರಂಭಃ – ಅನ್ಯೇಷಾಂ ಮತೇನ, ಮನ್ವಾದಿಃ, ದೇವಪೂಜಾ – ವೈಶ್ವದೇವಂ ಚೇನ್ನಕ್ಷತ್ರಂ ವಿಶ್ವದೇವಪೂಜಾ |
 
11. ಆ.ಕೃ 1 – ಮೃಗಶೀರ್ಷವ್ರತಮ್, ಕೋಕಿಲಾವ್ರತಮ್ – ಆಷಾಢಪೂರ್ಣಿಮಾಯಾಂ ಸಾಯಂ ವ್ರತಗ್ರಹಣ ಸಂಕಲ್ಪಃ. ಇತ ಆರಭ್ಯ ಶ್ರಾವಣ ಪೂರ್ಣಿಮಾನ್ತಂ ಮಾಸಂ ಯಾವದಿದಂ ವ್ರತಮ್, ಧರ್ಮಾವಾಪ್ತಿವ್ರತಮ್ – ಇತ ಆರಭ್ಯ ಪೂರ್ಣಿಮಾಂ ಯಾವತ್ |
 
12.    ಆ.ಕೃ 2 – ಕ್ಷೀರಸಾಗರೇ ಸಲಕ್ಷ್ಮೀಕ ಮಧುಸೂದನಪೂಜಾ, ಅಶೂನ್ಯಶಯನವ್ರತಮ್ – ವ್ರತಽತ್ರ ಶ್ರಾವಣ ಶುಕ್ಲಾನ್ತೋ ಗ್ರಾಹ್ಯಃ, ಆರಂಭಽತ್ರ |
 
13.    ಆ.ಕೃ 5 - ನಾಗಪಂಚಮೀ, ಅಷ್ಟನಾಗಪೂಜಾ ಮಾನಸಾಪೂಜಾ ಚ |
14.    ಆ.ಕೃ 8 – ಕಾಲಾಷ್ಟಮೀ
15.    ಆ.ಕೃ 11 – ಕಾಮದೈಕಾದಶೀ
16.    ಆ.ಕೃ ಅಮಾ - ಶಿವರಾತ್ರಿಃ
17.    ಆಷಾಢ ಮಾಸ ಪರ್ಯಂತ – ಆಷಾಢ ಕೃತ್ಯಮ್, ಏಕಭುಕ್ತವ್ರತಮ್, ಶಿವವ್ರತಮ್ - ಬಲಿಮಂಡಲಕರಣಮ್, ಸಾತಿಯೋಗಃ – ವಾಯು ಪೂಜನವi
18.    ಆಷಾಢ ಶುಕ್ಲಪಕ್ಷ - ಪುಲಿಕಬಂಧನಮ್ – ರವಿವಾಸರೇ
19.    ಆಷಾಢ ದ್ವಾದಶೀ – ವಾಸುದೇವದ್ವಾದಶೀವ್ರತಮ್
20.    ಆಷಾಢ ನವಮೀ - ನಕ್ತವ್ರತಮ್
 
|| ಅಥ ಸ್ಕಾಂದ ಪುರಾಣೋಕ್ತ ವ್ರತಕೋಶೋಕ್ತಂ ಚ ಶ್ರಾವಣ ಮಾಸವ್ರತಾ ಸಂಗ್ರಹಃ ||
ನಕ್ತ ವ್ರತ – ಹಗಲು ಮುಗಿಯುವ ಮೊದಲೇ ನಿತ್ಯ ಮಾಡುವ ರಾತ್ರಿ ಭೋಜನಕ್ಕೆ ನಕ್ತವೆಂದು ಹೆಸರು. ಯತಿಗೆ ರಾತ್ರಿ ಭೋಜನ ನಿಷಿದ್ಧವಾದ್ದರಿಮ್ದ ದಿನದ 8ನೇ ಭಾಗ, ಅಂದರೆ ಸೂರ್ಯನು ಮಂದನಾಗುತ್ತಾ ತಮ್ಮ ದೇಹದ ನೆರಳು ವೃದ್ಧಿಸುತ್ತಾ 2 ಪಟ್ಟಾಗುವುದೋ ಆಗ ಸನ್ಯಾಸಿಯ ನಕ್ತವ್ರತ. 1 ತಿಂಗಳು ಸಂಜೆ 4ಕ್ಕೆ ಭೋಜನ. ಅತಿಪ್ರಿಯ ವಸ್ತುವೊಂದರ ತ್ಯಾಗ. ನಿತ್ಯ ರುದ್ರಾಭಿಷೇಕ. ಪುಷ್ಪ, ಫಲ, ಧಾನ್ಯ, ತುಲಸೀಮಂಜರಿಯುಕ್ತದಳ, ಬಿಲ್ವಪತ್ರಾದಿಗಳಿಂದ ಶಂಕರನಿಗೆ ಪೂಜೆ. ಕೋಟಿಲಿಂಗಾರ್ಚನೆ, ಬ್ರಾಹ್ಮಣ ಭೋಜನ.
ನಕ್ತ ವ್ರತ ಸಂಕಲ್ಪ:- ಮಾಸಮೇಕಂ ಶ್ರಾವಣೇ ಪ್ರತ್ಯಾಹಂ ತ್ವಹಮ್ | ಪ್ರಾತಃ ಸ್ನಾನಂ ಕರಿಷ್ಯಾಮಿ ಬ್ರಹ್ಮಚರ್ಯವ್ರತೇ ಸ್ಥಿತಃ | ಭೋಕ್ಷ್ಯಾಮಿ ನಕ್ತಂ ಭೂಶಯ್ಯಾಂ ಕರಿಷ್ಯೇ ಪ್ರಾಣಿನಾಂ ದಯಾಮ್ | ಪ್ರಾರಬ್ದೇಸ್ಮಿನ್ ವ್ರತೇ ದೇವ ಯಜ್ಞಾಪೂರ್ಣೇ ಮ್ರಿಹೇ ಹ್ಯಹಮ್ | ತದಾ ಸಂಪೂರ್ಣತಾಂ ಯಾತು ಪ್ರಸಾದಾತ್ತೇ ಜಗತ್ಪತೇ | ಇತಿ ಸಂಕಲ್ಯ. ಅತಿ/ಮಹಾರುದ್ರ – ಪಾರಾಯಣ, ಅಭಿಷೇಕ, ಹೋಮ, ಶಿವಪ್ರಿಯ ದಾನ, ತ್ಯಾಗ.
 
ಧಾರಣ ಪಾರಣ ವ್ರತ – ಉಪವಾಸ + ಪಂಚಾಮೃತಾಭಿಷೇಕ. ಭೂಮಿಶಾಯೀ, ಬ್ರಹ್ಮಚಾರೀ, ಸತ್ಯವಾದೀ ನಿಯಮಗಳು. ಜಲವಿಲ್ಲದೆ ಭೋಜನ ಅಥವಾ ಹವಿಷ್ಯಾನ್ನ ಮಾತ್ರ. ಮೊದಲ ದಿನ ಭೋಜನ, ಮರುದಿನ ಉಪವಾಸ ಹೀಗೇ 4 ತಿಂಗಳು ಮುಂದುವರೆಸುವುದು ಶ್ರೇಯಸ್ಕರ. ಇಲ್ಲವಾದರೆ ಆದಿ ಅಥವಾ ಅಂತ್ಯ ಮಾಸದಲ್ಲೂ ಮಾಡಬಹುದು. ಮೊದಲನೇ ದಿನ ಪಂಚಗವ್ಯ, ಬ್ರಹ್ಮಕೂರ್ಚ, ಪುಣ್ಯಾಹವಾಚನ, ಸಂಕಲ್ಪ, 108 ನಾರಾಯಣ ಅಘ್ರ್ಯ, ನಂತರವೇ ಭೋಜನ. ವ್ರತ ಮುಗಿದ ನಂತರ ಉದ್ಯಾಪನೆಯಲ್ಲಿ ಪಂಚಾಮೃತದಿಂದ ಪೂಜಿಸಿದ ನಂತರ ಲಕ್ಷ್ಮಿನಾರಾಯಣ ಮೂರ್ತಿ ದಾನ. ಬ್ರಾಹ್ಮಣ, ಸುವಾಸಿನೀ ಭೋಜನ. ಸುಗ್ರೀವನು ವಾಲೀ ನಿಗ್ರಹ ಪಾಪ ಪರಿಹಾರಾರ್ಥವಾಗಿ ರಾಮನ ನಿರ್ದೇಶನದಂತೆ ಈ ವ್ರತವನ್ನು ಕೈಗೊಂಡಿದ್ದನು. ತನ್ನ ಬಂಧುಗಳ ಹತ್ಯೆಯ ನಂತರ ಚಿಂತಾಕ್ರಾಂತನಾದ ಧರ್ಮರಾಯನು ಕೃಷ್ಣನ ವಚನದಂತೆ ಈ ವ್ರತವನ್ನು ಕೈಗೊಳ್ಳುತ್ತಾನೆ. ನಾರದರು ತಮ್ಮ ಪೂರ್ವಜನ್ಮದಲ್ಲಿ ಈ ವ್ರತವನ್ನು ಮಾಡಿ ಜಿತೇಂದ್ರಿಯತ್ವವನ್ನು ಪಡೆದರು.
 
ಪರಾಕ ವ್ರತ - ಸಕಲ ಪಾಪ ನಿವಾರಕವೆಂದು ಖ್ಯಾತ. 12 ದಿನ ಸತತ ಉಪವಾಸ. ಈ ರೀತಿ 3 ಚಕ್ರ. ಅಂದರೆ 36 ದಿನ ಆಚರಿಸಬೇಕು. ಬ್ರಹ್ಮಹತ್ಯಾದಿ ದೋಷ ನಿವಾರಣೆಗೂ ಇದು ಪ್ರಾಶಸ್ತ್ಯ ಪಡೆದಿದೆ.
 
ಏಕಭುಕ್ತ ವ್ರತ - ದಿನಕ್ಕೊಂದೇ ಊಟ. ಆ ಊಟವನ್ನು ಒಂದೇ ಸಾರಿ ಬಡಿಸಬೇಕು. ಅಂದರೆ ಬಾಳೆ ಎಲೆಯಲ್ಲಿ ಮಾಡಿದ ಎಲ್ಲ ಪದಾರ್ಥಗಳನ್ನು ಶಾಸ್ತ್ರೀಯವಾಗಿ ಒಮ್ಮೆಲೇ ಬಡಿಸುವುದು. ನೀರು ಬಿಟ್ಟಿ ಬೇರೇನನ್ನೂ ಪುನಃ ಬಡಿಸುವ ಹಾಗಿಲ್ಲ.
ಅಖಂಡ ವ್ರತ – ಏಕಾದಶಿಯನ್ನು ಬಿಟ್ಟು ಉಳಿದೆಲ್ಲ ದಿನ ಒಂದೇ ಭೋಜನ. ಇದಾದ ನಂತರ ಮರುದಿನದ ಭೋಜನದವರೆಗೆ ನೀರನ್ನು ಸಹ ತೆಗೆದುಕೊಳ್ಳುವ ಹಾಗಿಲ್ಲ. ಸಾಮಾನ್ಯವಾಗಿ ಚಾತುರ್ಮಾಸ್ಯ ದಿನತ್ರಯಗಳಾದ 10, 11, 12ನೇ ತಿಥಿಗಳಲ್ಲಾದರೂ ಆಚರಿಸಬಹುದು. ಬ್ರಾಹ್ಮಣ, ಸುವಾಸಿನಿ ಭೋಜನ.
 
ಮಾಸ ವ್ರತ - ಪತ್ರದಲ್ಲಿ ಭೋಜನ, ಶಾಕಾ (ತರಕಾರಿ) ತ್ಯಾಗ, ಭೂಮಿಶಾಯೀ, ಪ್ರಾತಃ ಸ್ನಾನ, ಜಿತೇಂದ್ರಿಯ, ಏಕಾಗ್ರಚಿತ್ತ, ಶಿವ ಷಡ್ವರ್ಣ ಮಂತ್ರಸ್ಯ ಗಾಯತ್ರ್ಯಾಶ್ಚ ಜಪಂ ಚರೇತ್ || ಪ್ರದಕ್ಷಿಣ ನಮಸ್ಕಾರ, ವೇದ ಪಾರಾಯಣ, ಪುರುಷ ಸೂಕ್ತ ಜಪ, ಗ್ರಹಯಜ್ಞ, ಕೋಟಿಹೋಮ/ಲಕ್ಷಹೋಮ/ದಶಸಹಸ್ರಹೋಮ. ಶ್ರಾವಣದಲ್ಲಿ ಗಭಸ್ತಿ ಎಂಬ ರವಿಯ ಚಾರಣವಿರುವುದರಿಂದ ಶ್ರಾವಣ ಮಾಸ ಪರ್ಯಂತ ಗಭಸ್ತಿ ಪೂಜೆ.
 
ವಾರ ವ್ರತ – 1.    ರವಿವಾರ – ಪ್ರಾತಃ ರವಿವ್ರತ
2.    ಸೋಮವಾರ – ರೋಟಿಕಾ ವ್ರತ :- ಸಾಯಂ 3.5 ತಿಂಗಳು ಶಿವವ್ರತ + ನಕ್ತವ್ರತ ಭೋಜನ
3.    ಮಂಗಳವಾರ – ಪ್ರಾತಃ ಮಂಗಳಗೌರೀ ವ್ರತ
4.    ಬುಧವಾರ - ಪ್ರಾತಃ ಬುಧವ್ರತ
5.    ಗುರುವಾರ - ಪ್ರಾತಃ ಬೃಹಸ್ಪತಿ ವ್ರತ
6.    ಶುಕ್ರವಾರ – ಜೀವಂತಿಕಾವ್ರತ. ಪ್ರಾತಃ ಪೂಜೆ, ರಾತ್ರಿ ಜಾಗರಣೆ.
7.    ಶನಿವಾರ - ಪ್ರಾತಃ ಅಶ್ವತ್ಥ ಪೂಜೆ, ಮಧ್ಯಾಹ್ನ ಹನುಮ ಪೂಜೆ, ಸಾಯಂ ನೃಸಿಂಹ ಪೂಜೆ.
 
ತಿಥಿ ವ್ರತ:- ಪ್ರತಿನಿತ್ಯ ಆಯಾ ತಿಥಿ ದೇವತಾ ಪೂಜೆ ಇರುತ್ತದೆ.
 
1.    ಶ್ರಾ.ಶು. 1 – ರೋಟಿಕಾ. ಸೋಮವಾರವಾದರೆ ಸೂರ್ಯೋದಯಾದಿ 3 ಮುಹೂರ್ತ ನಂತರ, ಇಲ್ಲದಿರೆ ಮೊದಲ ಮುಹೂರ್ತದಲ್ಲಿ. ಧನದಸ್ಯ ಪವಿತ್ರಾರೋಪಣಮ್ – ತತ್ತ್ವಸಂಹಿತೋಕ್ತ್ಯಾ, ಅರ್ಧಶ್ರಾವಣಿಕಾವ್ರತಮ್ – ಏಕಂ ಮಾಸಮ್+ಆರಂಭ್ಯಽತ್ರ.
 
2.    ಶ್ರಾ.ಶು. 2 – ಔದುಂಬರ ವ್ರತ - ದ್ವಿತೀಯ ಸಾಯಾಹ್ನವ್ಯಾಪಿನೀ ತೃತೀಯಾ, ಮನೋರಥದ್ವಿತೀಯಾ - ದಿನೇ ವಾಸುದೇವಾರ್ಚನಂ + ರಾತ್ರೌ ಚಂದ್ರೋದಯೇರ್ಘ್ಯದಾನಂ + ನಕ್ತಂ ಭೋಜನಾದಿಕಂ ಚ.
 
3.    ಶ್ರಾ.ಶು. 3 – ಗೌರೀ ವ್ರತ - ಚತುರ್ಥೀ ಸಹಿತವಾದ ತೃತೀಯಾ, ಪಾರ್ವತ್ಯಾಃ ಪವಿತ್ರಾರೋಪಣಮ್, ಮಧುಶ್ರಾವಣೀವ್ರತಮ್.
 
4. ಶ್ರಾ.ಶು. 4 - ಗಣೇಶ ಚತುರ್ಥೀ/ನಾಗ ಚತುರ್ಥೀ/ದೂರ್ವಾಗಣಪತಿ/ಸಿದ್ಧಿವಿನಾಯಕ ವ್ರತ - ಮಾತೃವಿದ್ಧಾ ಚತುರ್ಥಿ, ವಿಘ್ನಹಾರಿಣಃ ಪವಿತ್ರಾರೋಪಣಮ್, ತ್ರಿಪುರಭೈರವ್ಯಾಃ ಪವಿತ್ರಾರೋಪಣಮ್.
 
5. ಶ್ರಾ.ಶು. 5 - ನಾಗಪಂಚಮೀ/ನಾಗಪೂಜಾ/ಸರ್ವವಿಷಾಪಹಪಂಚಮೀ (ಮಾನವಕಲ್ಪಾದಿ) - ಷಷ್ಠೀಯುತ ಪಂಚಮಿ, ಶಶಿನಃ ಪವಿತ್ರಾರೋಪಣಮ್, ಜಾಗ್ರದ್ರೌರೀ ಪಂಚಮೀ.
 
6.    ಶ್ರಾ.ಶು. 6 - ಸೂಪೌದನ ವ್ರತ - ಸಾಯಂ ಸಪ್ತಮೀಯುತ ಷಷ್ಠಿ, ಗುಹಸ್ಯ ಪವಿತ್ರಾರೋಪಣಮ್, ಕಲ್ಕಿಜಯಂತೀ.
 
7.    ಶ್ರಾ.ಶು. 7 - ಶೀತಲಾ ವ್ರತ - ಮಧ್ಯಾಹ್ನ ವ್ಯಾಪಿನೀ ಸಪ್ತಮಿ, ಭಾಸ್ಕರಸ್ಯ ಪವಿತ್ರಾರೋಪಣಮ್, ಪಾಪನಾಶಿನೀ ಸಪ್ತಮೀ ವ್ರತಮ್ – ಋಕ್ಷಂಕರಯೋಗಯುತಾ ಯದಿ ಸ್ಯಾತ್ತಿಥಿರಿಯಮ್, ಅವ್ಯಂಗ ಸಪ್ತಮೀ ವ್ರತಮ್, ದ್ವಾದಶ ಸಪ್ತಮೀ ವ್ರತಮ್ – ಚೈತ್ರೀವೇಯಮ್ + ಭಾಸ್ಕರತ್ವಷ್ಟ್ರೋಃ ಪೂಜಾ.
 
8.    ಶ್ರಾ.ಶು. 8 – ದೇವೀ/ದುರ್ಗಾಯಾಃ ಪವಿತ್ರಾರೋಹಣಂ, ಅನ್ಯೇಷಾಂ ದೇವಾನಾಮಪಿ ಪವಿತ್ರಾರೋಪಣಮ್, ಪುಷ್ಪಾಷ್ಟಮೀವ್ರತಮ್ – ಆರಂಭಽತ + ವರ್ಷ ಯಾವತ್ ಪ್ರತಿಮಾಸಂ ಭಿನ್ನಪುಷ್ಪೈಃ ಶಿವಪೂಜಾ, ದುರ್ಗಾವ್ರತಮ್ – ವರ್ಷಂ ಯಾವತ್ ಪ್ರತಿಮಾಸಂ ಪೂಜಾ ಭಿನ್ನವಿಧಾ, ದುರ್ಗಾಷ್ಟಮೀ, ಶಕ್ರಧ್ವಜೋಚ್ಛ್ರಾಯವಿಧಿಃ – ಮುಖ್ಯೋ ಭಾದ್ರೇ + ಆಶ್ವಿನೇಽಪ್ಯಸ್ತಿ.
 
9.    ಶ್ರಾ.ಶು. 9 - ಮಾತೄಣಾಂ ಪವಿತ್ರಾರೋಪಣಮ್, ಅನ್ಯೇಷಾಂ ದೇವಾನಾಮಪಿ ಪವಿತ್ರಾರೋಪಣಮ್, ಕೌಮಾರೀನಾಮಕಪೂಜನಮ್.
 
10.    ಶ್ರಾ.ಶು. 10 – ಆಶಾವ್ರತಂ - ನಕ್ತವ್ಯಾಪಿನೀ ದಶಮಿ, ಧರ್ಮಸ್ಯ ಪವಿತ್ರಾರೋಪಣಂ.
 
11.    ಶ್ರಾ.ಶು. 11 - ಮುನೀನಾಂ ಪವಿತ್ರಾರೋಪಣಂ, ಪುತ್ರದೈಕಾದಶೀ.
 
12.    ಶ್ರಾ.ಶು. 12 - ಹರೇ ಪವಿತ್ರಾರೋಪಣೋತ್ಸವಃ – ದಶಮೀತೋ ದ್ವಾದಶೀಪರ್ಯಂತಮ್ + ನೂತನಪಾವೇತ್ರಪರಿಧಾನಮ್ + ಕರ್ಕೇ ಸಿಂಹೇ ಕನ್ಯಾಯಾಂ ವಾ ಗತೇ ಸವಿತರಿ ಸೂತ್ರ ನಿರ್ಮಾಣಾದಿ ಚ, ಶ್ರೀಧರಪೂಜಾ, ದೋಲಾಯಾತ್ರಾರಂಭಃ.
 
13.    ಶ್ರಾ.ಶು. 13 - ಅನಂಗ ವ್ರತ / ಅನಂಗಸ್ಯ ಪವಿತ್ರಾರೋಪಣಮ್ - ರಾತ್ರಿ ವ್ಯಾಪಿನಿ ತ್ರಯೋದಶಿ. ರಾತ್ರಿ ದ್ವಿತೀಯ ಪ್ರಹರ.
 
14.    ಶ್ರಾ.ಶು. 14 – ರಾತ್ರಿ- ಶಿವಸ್ಯ/ಶಂಭು ಪವಿತ್ರಾರೋಹಣ - ರಾತ್ರಿವ್ಯಾಪಿನೀ ಚತುರ್ದಶಿ + ಭುವನೇಶ್ವರ ಚತುರ್ದಶಯಾತ್ರಾಸು ಪವಿತ್ರಾರೋಪಣಂ ಕಾರ್ಯಮಾಷಾಢಶ್ರಾವಣಭಾದ್ರೇಷು + ತತ್ರಾಪಿ ಶ್ರಾವಣೇ ಮುಖ್ಯಮ್, ದೇವ್ಯಾಃ ಪವಿತ್ರಾರೋಪಣೋತ್ಸವಃ.
 
15.    ಶ್ರಾ.ಪೌ - ಪಿತñಣಾಂ ಪವಿತ್ರಾರೋಪಣಮ್, ವಿತಸ್ತಾಸಿಂಧುನದ್ಯೋಃ ಸಂಗಮೇ ಸ್ನಾನಂ, ವಿಷ್ಣು ಪೂಜಾ, ಸಾಮಶ್ರವಣಂ ಚ | ಉತ್ಸರ್ಜನ, ಉಪಾಕರ್ಮ, ಸಭಾದೀಪ, ರಕ್ಷಾಬಂಧ, ಶ್ರಾವಣೀಕರ್ಮ, ಸರ್ಪಬಲಿ (ಇವೆರಡೂ ಸೂರ್ಯಾಸ್ತವ್ಯಾಪಿನೀ ಪೌರ್ಣಿಮೆಯಂದು), ಹಯಗ್ರೀವ ಅವತಾರೋತ್ಸವ (ಮಧ್ಯಾಹ್ನ ವ್ಯಾಪಿನೀ ಪೌರ್ಣಿಮಾ) ಗಳೆಂಬ 7 ಕರ್ಮಾಂಗಗಳು. ಶ್ರಾದ್ಧಂ ನಿತ್ಯಮ್, ಚಂದ್ರರೋಹಿಣೀಶಯನ ವ್ರತಮ್ – ಯೋಗವಿಶೇಷೇ ಆರಂಭಽತ್ರ, ಪುತ್ರಪ್ರಾಪ್ತಿ ವ್ರತಮ್ – ಮುಖ್ಯಮತ್ರೈವ + ಆಶ್ವಿನ್ಯಾಂ ಕಾರ್ತಿಕ್ಯಾಂ ವಾ, ಪೂರ್ಣಿಮಾವ್ರತಮ್, ಬಲದೇವೋತ್ಥಾಪನಪೂಜನೇ - ನಂದಾಯೋಗೋ ನಿಷಿದ್ಧೋತ್ರ, ಮಹಾಶ್ರಾವಣೀ – ಕೇದಾರೇ ವಿಶಿಷ್ಟಫಲದಾ, ಶ್ರೀಕೃಷ್ಣಸ್ಯ ದೋಲಾಯಾತ್ರಾ.
 
16.    ಶ್ರಾ. ಕೃ 1 – ಅಶೂನ್ಯಶಯನವ್ರತಮ್ - ಶ್ರಾವಣಾದಿಕಾರ್ತಿಕಾಂತಮ್, ಧನಾವಾಪ್ತಿ ವ್ರತಮ್ – ಇತ ಆರಭ್ಯ ಭಾದ್ರಪೂರ್ಣಿಮಾಂತಂ ಮಾಸವ್ರತಮ್, ಸೋದ್ಯಾಪನಂ ಮೌನವ್ರತಮ್ - ಷೋಡಶದಿನಾತ್ಮಕಂ ಶಿವವ್ರತಂ ಭಾದ್ರಶುಕ್ಲಪ್ರತಿಪದಿ ಸಮಾಪ್ತಿಃ.
 
17.    ಶ್ರಾ. ಕೃ 2 – ಅಶೂನ್ಯ ವ್ರತಮ್ – ಏತದಾದಿಮಾಸಚತುಷ್ಟಯಂ ಯಾವತ್ + ಚಂದ್ರಾಘ್ರ್ಯಾದಿ.
18.    ಶ್ರಾ.ಕೃ 3 – ತುಷ್ಟಿಪ್ರಾಪ್ತಿತೃತೀಯಾ ವ್ರತಮ್, ಕಜ್ಜಲೀತೃತೀಯಾ
 
19.  ಶ್ರಾ.ಕೃ. 4 - ಸಂಕಷ್ಟ ಚತುರ್ಥೀ ವ್ರತಮ್ - ಚಂದ್ರೋದಯ ವ್ಯಾಪಿನಿ, ಗೋಪೂಜಾ.
 
20. ಶ್ರಾ.ಕೃ. 5 – ಮಾನವಕಲ್ಪಾದಿ, ಸ್ನುಹೀವಿಟಪೇ ಮನಸಾದೇವೀ-ವಿಷಹರೀ-ಪೂಜಾ, ರಕ್ಷಾಪಂಚಮೀ - ನಾಗಪೂಜಾಽತ್ರ.
 
21.    ಶ್ರಾ.ಕೃ 6 - ಹಲಷಷ್ಠೀ
 
22.    ಶ್ರಾ.ಕೃ 7 - ಶೀತಲಾಸಪ್ತಮೀ
 
23.    ಶ್ರಾ.ಕೃ. 8 - ಶ್ರೀಕೃಷ್ಣವ್ರತ ಮತ್ತು ಮಹೋತ್ಸವ - ನಿಶೀಥವ್ಯಾಪಿನಿಯಾದ ಅಷ್ಟಮಿ, ಜಯಂತೀ ವ್ರತಮ್ – ರೋಹಿಣೀಯೋಗಸತ್ತ್ವೇ + ಅನ್ಯಥಾ ಭಾದ್ರೇಮತ್ತ್ವಾತ್ತತ್ರೈವ, ಮಂಗಲಾ ವ್ರತಮ್ – ಆಶ್ವಿನೇಽಪಿ, ಕಾಲಾಷ್ಟಮೀ, ಮನ್ವಾದಿಃ.
 
24.    ಶ್ರಾ.ಕೃ 9 – ಚಂಡಿಕಾಪೂಜಾ
 
25.    ಶ್ರಾ.ಕೃ 11 – ಅಜೈಕಾದಶೀ
 
26.    ಶ್ರಾ.ಕೃ 12 – ರೋಹಿಣೀ ದ್ವಾದಶೀ ವ್ರತಮ್ - ಪ್ರತಿವರ್ಷ ಕಾರ್ಯಮ್.
 
27.    ಶ್ರಾ.ಕೃ 13 – ದ್ವಾಪಯುಗಾದಿಃ.
 
28.    ಶ್ರಾ.ಕೃ 14 - ಶಿವರಾತ್ರಿಃ, ಅಘೋರ ಚತುರ್ದಶೀ.
 
29.    ಶ್ರಾ.ಅಮಾ - ಮಧ್ಯಾಹ್ನ ವ್ಯಾಪಿನಿ ಅಮಾವಾಸ್ಯೇ ಪೀಠೋರಾವ್ರತ, ಸಂಗವ ಸಮಯೇ ದರ್ಭಾ ಸಂಗ್ರಹ, ಅಮಾ ಸಾಯಂ ವ್ಯಾಪಿನಿ ವೃಷಭ ಪೂಜಾ, ಕುಲಸ್ತಂಭಯಾತ್ರಾ – ಕಾಶ್ಯಾಮ್, ಸಪ್ತಪೂರಿಕಾಮಾವಾಸ್ಯಾ - ಸಪ್ತಪೂರಯುಕ್ತಪಿಷ್ಟಕದ್ವಾರಾ, ಕೌಶ್ಯಮಾವಾಸ್ಯಾ – ಆಲೋಕಾಮಾವಾಸ್ಯಾ ವಾ.
 
30.    ಶ್ರಾವಣ ಮಾಸ ಕರ್ತವ್ಯಮ್ - ಶ್ರಾವಣಕೃತ್ಯಮ್, ಕೇದಾರನಾಥಪೂಜಾ - ಸೋಮವಾಸರೇ, ಕಾಮಾಕ್ಷೀಪೂಜಾ - ಭೌಮವಾಸರೇ, ಏಕಭುಕ್ತವ್ರತಮ್, ಶಿವವ್ರತಮ್ - ಪುಷ್ಪವಿಮಾನಾರ್ಪಣಮ್, ಪೂಜಾದಿ - ರೋಹಿಣೀ ಸಂಯೋಗೇ,
 
31.    ಶ್ರಾವಣ ದ್ವಾದಶೀ - ಬುದ್ಧದ್ವಾದಶೀವ್ರತಮ್, ಪಂಚಮಹಾಪಾತಕನಾಶನ ದ್ವಾದಶೀವ್ರತಮ್
 
32.    ಶ್ರಾವಣ ಚತುರ್ಥೀ – ದೂರ್ವಾಗಣಪತಿ ಚತುರ್ಥೀ ವ್ರತಮ್ – ವರ್ಷತ್ರಯಂ ಯಾವತ್ + ಅತ್ರಾರಂಭಃ ಕಾರ್ತಿಕೇ ವಾ.
 
33.    ಶ್ರಾವಣ ನವಮೀ - ನಕ್ತವ್ರತಮ್ – ದೇವೀಪೂಜಾ.
ಅಗಸ್ತ್ಯೋದಯ ಕಾಲ:- ಸಿಂಹ ರಾಶಿಗೆ ರವಿಯು ಪ್ರವೇಶಿಸಿದ 52 ಘಟಿಗಳ ನಂತರ ಅಗಸ್ತ್ಯೋದಯ ಕಾಲ. ಇದಕ್ಕೆ 7 ದಿನ ಮೊದಲೇ ಅಗಸ್ತ್ಯ ಋಷಿಗೆ ಅರ್ಘ್ಯ ಪ್ರಾರಂಭ. ಸಿಂಹ ಸಂಕ್ರಾತಿಯ ಮೊದಲು 16 ಘಳಿಗೆವರೆಗೆ ಅಗಸ್ತ್ಯಾರ್ಘ್ಯ ಪ್ರಾಶಸ್ತ್ಯ.

1 comment:

  1. Do I understand that this Chaturmaasya vidhi is for Yatis? is it applicable to Gruhastas too?
    I am one who is unable to fast even for a day and consider this a great weakness of mine.

    ReplyDelete