Skip to main content

ಸ್ನೇಹ ಮತ್ತು ಲೋಭ

(ಅಥರ್ವ ವೇದ ೪-೩೯: ನ್ಯಾಯಶಾಸ್ತ್ರೀಯ ಸೂತ್ರಕಾರ ಋಷಿವರೇಣ್ಯರ ವ್ಯಾಖ್ಯಾನ)
ವಿಚ್ಛಿಕ ಎಂಬ ನ್ಯಾಯಸೂತ್ರದ ವಿವರಣೆಯ ೭ ಭಾಗದಲ್ಲಿ ಸ್ನೇಹ ಮತ್ತು ಲೋಭ ಎಂಬ ಎರಡನ್ನು ಈ ಕೆಳಕಂಡಂತೆ ವಿಶ್ಲೇಷಿಸಿದ್ದಾರೆ.

ಅಂತರಿಕ್ಷೇ ವಾಯವೇ ಸಮನಮನ್‍ತ್ಸ ಆಧ್ನೋತ್ |
ಯಥಾಂತರಿಕ್ಷೇ ವಾಯವೇ ಸಮನಮನ್ನೇವಾ ಮಹ್ಯಂ ಸಂ ನಮಃ ನಂ ನಮಂತು || ೩ ||
ಅಂತರಿಕ್ಷ ಎಂದರೆ ಸಾಮಾನ್ಯವಾಗಿ ಆಕಾಶ. ಆಕಾಶದಲ್ಲಿ ವಾಯುವಿದೆ. ವಾಯುವು ಆಕಾಶದಲ್ಲಿ ಪ್ರತ್ಯೇಕವಾಗಿದೆಯೇ? ನೀವು ಆಕಾಶವನ್ನು ನೋಡಲಾರಿರಿ, ವಾಯುವನ್ನೂ ನೋಡಲಾರಿರಿ. ಆದರೆ ಆಕಾಶದಲ್ಲಿ ವಾಯುವಿದೆ. ಎಲ್ಲಿಯೂ ವಾಯುವಿಲ್ಲದ ಆಕಾಶವಿಲ್ಲ. ಹಾಗಿದ್ದರೆ ಅವೆರಡೂ ಪರಸ್ಪರ ಪೂರಕವಾಗಿರುತ್ತದೆ. ಹಾಗೆ ಸ್ನೇಹದಲ್ಲಿ ಲೋಭ, ಲೋಭವಿಲ್ಲದ ಸ್ನೇಹವಿಲ್ಲ, ಸ್ನೇಹವಿಲ್ಲದ ಲೋಭವಿಲ್ಲ. ಮೇಲ್ನೋಟಕ್ಕೆ ನೋಡುವುದಕ್ಕೆ ಮಾತ್ರ ಸ್ನೇಹವಿದೆ.

ಹೃದಾ ಪೂತಂ ಮನಸಾ ಜಾತವೇದೋ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಸಪ್ತಾಸ್ಯಾನಿ ತವ ಜಾತವೇದಸ್ತೇಭ್ಯೋ ಜುಹೋಮಿ ಸ ಜುಷಸ್ವ ಹವ್ಯಮ್ || ೧೦ ||
ಹೃದಾ ಪೂತಂ – ಹೃದಯದಲ್ಲಿ ಲೋಭವಿರುತ್ತದೆ. ಅದನ್ನು ಶುದ್ಧಪಡಿಸಬೇಕಾದರೆ, ಮನಸಾ ಜಾತವೇದೋ – ಮನಸ್ಸಿಗೆ ಪರಿಶುದ್ಧವಾದಂತಹ ವಿಚಾರಗಳನ್ನು ಬೋಧಿಸತಕ್ಕಂತಹದ್ದರಿಂದ ಮನಸ್ಸನ್ನು ಪಕ್ವತೆ ಮಾಡಿಕೊಳ್ಳಬೇಕು. ವಿಶ್ವಾನಿ ದೇವ ವಯುನಾನಿ ವಿದ್ವಾನ್ – ಹಲವು ಒಳ್ಳೊಳ್ಳೆಯ ವಿಚಾರಗಳನ್ನು ತೆಗೆದುಕೊಳ್ಳಬೇಕು. ಹಾಗೆ ಹಂತ ಹಂತದಲ್ಲಿ ಸ್ನೇಹ+ಲೋಭ ಎಂದು ಹೇಳತಕ್ಕಂತಹದ್ದು ವಾಯ+ಅಂತರಿಕ್ಷಗಳಂತೆ ಪರಸ್ಪರ ಸೇರಿ ಹೋಗಿವೆ. ಲೋಭವನ್ನು ಪ್ರತ್ಯೇಕಿಸಿ ಸ್ನೇಹವನ್ನು ಉಳಿಸಿಕೊಂಡರೆ ಹೇಗೆ? ಮುಂದಿನ ಪ್ರಶ್ನೆ ಎಂದರೆ ಸ್ನೇಹವೂ ಏಕೆ? ಇಡೀ ಪ್ರಪಂಚವನ್ನೇ ಪ್ರೀತಿಸವುದು ಒಳ್ಳೆಯ ಗುಣ. ಪ್ರಪಂಚವನ್ನೇ ಪ್ರೀತಿಸಿದ ಮೇಲೆ ಸ್ನೇಹವೇಕೆ ಬೇಕು? ಅದರಿಂದ ಯಾವ ಫಲವಿಲ್ಲ, ಅದರಿಂದ ಯಾವ ವಿಶೇಷತೆಯೂ ಪ್ರಾಪ್ತವಾಗುವುದಿಲ್ಲ. ಆದರೆ ಪ್ರಪಂಚವನ್ನೇ ಸ್ನೇಹಿತನನ್ನಾಗಿ ಪಡೆದರೆ ಆಗ ಎಲ್ಲ ಫಲಗಳೂ ಪ್ರಾಪ್ತವಾಗುತ್ತವೆ.

ಅಂತರಿಕ್ಷಂ ಧೇನುಸ್ತಸ್ಯಾ ವಾಯುವತ್ಸಃ | ಸಾ ಮೇ ವಾಯುನಾ ವತ್ಸೇನೇಷಮೂರ್ಜಂ ಕಾಮ ದುಹಾಮ್ | ಆಯುಃ ಪ್ರಥಮಂ ಪ್ರಜಾಂ ಪೋಷಂ ರಯಿಂ ಸ್ವಾಹಾ || ೪ ||
ಅಂತರಿಕ್ಷ ಎಂದು ಹೇಳತಕ್ಕಂತಹ ಲೋಭವನ್ನು ತ್ಯಾಗ ಮಾಡುವದರಿಂದಾಗಿ ಸ್ನೇಹವು ಅರ್ಥಬದ್ಧವಾಗಿ ರೂಪುಗೊಳ್ಳಲು ಸಾಧ್ಯ. ಅಕಸ್ಮಾತ್ ರೂಪುಗೊಳ್ಳದೇ ಇದ್ದು, ಸ್ನೇಹವೂ ನಮ್ಮನ್ನು ಬಿಟ್ಟು ಹೋದರೂ ನಮಗೆ ನಷ್ಟವಿಲ್ಲ. ಏಕೆಂದರೆ ಈ ಪ್ರಕೃತಿಯನ್ನೇ ಸ್ನೇಹವಾಗಿ ಪಡೆದುಕೊಳ್ಳುವುದು ನಾವು ಬದುಕಿರುವವರೆಗೆ ಮಾತ್ರ. ನಂತರ ಈ ಪ್ರಕೃತಿಯನ್ನೂ ಬಿಟ್ಟು ಹೋಗುವವರು. ನಮ್ಮ ಹುಟ್ಟಿನ ಪ್ರಯತ್ನವು ಸದಾ ಪ್ರಕೃತಿಯನ್ನು ಬಿಟ್ಟು ಹೋಗುವುದರತ್ತಲೇ ಇರುವುದು. ಆದ್ದರಿಂದ ಅದು ಸ್ನೇಹವಾಗುವುದಿಲ್ಲ, ಅದೂ ನಾಟಕೀಯವೇ, ಸತ್ಯವಲ್ಲ. ಹಾಗಾಗಿ ಸ್ನೇಹವೂ ಲೋಭಾದೇಶಿತವಾಗಿದೆ. ಏಕೆಂದರೆ ನಾವು ಬದುಕಬೇಕು ಅದಕ್ಕಾಗಿ ಸ್ನೇಹ ಬೇಕು. ಹಾಗಾಗಿ ಸಾಧ್ಯವಿದ್ದಷ್ಟು ಅಂತರಿಕ್ಷವನ್ನು ತ್ಯಾಗ ಮಾಡುವುದರ ಜೊತೆಯಲ್ಲಿ ವಾಯು ಅಂದರೆ ಸ್ನೇಹವನ್ನೂ ತ್ಯಾಗ ಮಾಡಿ ಇವೆರಡೂ ನಮಗೆ ಅಗತ್ಯವಿಲ್ಲ ಎಂಬ ಸಿದ್ಧಾಂತಕ್ಕೆ ಬರಬೇಕು.

ಸಾಮಾನ್ಯವಾಗಿ ಎಲ್ಲರಿಗೂ ಸ್ನೇಹಿತರಿರುತ್ತಾರೆ. ಆದರೆ ಅವರೆಲ್ಲರೂ ಒಂದು ಮಿತಿಯವರೆಗೆ ಮಾತ್ರ ಮೈತ್ರಿಯನ್ನು ಉಳಿಸಿಕೊಳ್ಳಬಲ್ಲರು. ಅದರ ನಂತರದ ಹಂತದ ಮೇಲೆ ಅವರೂ ಕೈ ಬಿಡುತ್ತಾರೆ. ಅದರಲ್ಲೂ ಸ್ವಾತ್ಮಚಿಂತನೆಯ ದೃಷ್ಟಿಯಿಂದ ತೊಂದರೆಯಾಗುತ್ತದೆ ಎಂದು ಕಂಡುಬಂದರೆ ಯಾವ ಸ್ನೇಹಿತರೂ ಹತ್ತಿರ ಬರುವುದಿಲ್ಲ. ಹಾಗಾಗಿ ಅಲ್ಲಿ ಸ್ನೇಹವಿಲ್ಲ. ಈ ಮೈತ್ರಿಯು ಮೈತ್ರಿಯೇ ಅಲ್ಲ, ಇವು ಯಾವುದೂ ಸತ್ಯವಲ್ಲವೆಂದು ಹೇಳುತ್ತದೆ. ಸ್ನೇಹವೆಂದರೆ ಪರಸ್ಪರ ಘರ್ಷಣೆಯಾದರೂ ಕೂಡ ತೊಂದರೆಯಾಗದ ರೀತಿಯಲ್ಲಿ ಇರತಕ್ಕಂತಹದ್ದು ಸ್ನೇಹ! ಹಾಗಾಗಿ ಎಣ್ಣೆ, ಬೆಣ್ಣೆಗೆ ಸ್ನೇಹ ಎಂದು ಹೇಳುತ್ತಾರೆ. ಇವು ಒಂದನ್ನೊಂದು ಉಜ್ಜಿದರೆ ಬಿಸಿಯಾಗುವುದೇ ಇಲ್ಲ, ಶಾಖ ಹುಟ್ಟುವುದಿಲ್ಲ. ಅಲ್ಲಿ ಶಾಖವು ಹುಟ್ಟದಿರುವುದಕ್ಕಾಗಿಯೇ ಅದನ್ನು ಬಳಸುವುದು. ಅದು ಸ್ನೇಹ. ಅದಲ್ಲದೆ ಮನುಷ್ಯರಲ್ಲಿರತಕ್ಕಂತಹ ಮೈತ್ರಿ ಅಥವಾ ಸ್ನೇಹವು ಸ್ನೇಹವಲ್ಲ! ಮನುಷ್ಯರಲ್ಲಿ ಘರ್ಷಣೆ ಹುಟ್ಟುತ್ತದೆ, ಅದು ನಾಟಕೀಯವಾಗಿರುತ್ತದೆ. ಅದರಿಂದ ಆಘಾತವಾದಾಗ ಆಂತರಿಕವಾಗಿ ನೋವು ಹೆಚ್ಚಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಸ್ನೇಹವು ಅಗತ್ಯವಿರುವುದಿಲ್ಲ. ಪರಸ್ಪರತೆ ಬೇರೆ, ಸ್ನೇಹವೇ ಬೇರೆ. ಪರಸ್ಪರವಿದ್ದರೆ ಸಾಕು, ಶತ್ರುಭಾವವಿಲ್ಲದಿದ್ದರೆ ಸರಿ. ಅದಕ್ಕಾಗಿ ಸ್ನೇಹವೆಂಬ ವಿಶೇಷತೆ ಅಗತ್ಯವಿರುವುದಿಲ್ಲ. ಅದನ್ನು ಉಳಿಸಿಕೊಳ್ಳುವುದು ಬೇಡ. ಅಂತಹಾ ನಾಟಕೀಯ ಸ್ನೇಹದ ಪ್ರವೃತ್ತಿಯ ಜನರನ್ನು ನಂಬಬಾರದು ಎಂದು ನ್ಯಾಯಶಾಸ್ತ್ರ ನಿರ್ಣಯದಲ್ಲಿ ಹೇಳುತ್ತಾರೆ.

Comments

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…