Skip to main content

ದ್ವೇಷ ಮತ್ತು ಮಾತ್ಸರ್ಯದ್ವೇಷ ಮತ್ತು ಮಾತ್ಸರ್ಯಗಳು ಯಾವುದೇ ಮನುಷ್ಯನಲ್ಲಿರಲಿ, ಅವನು ಜೀವಿಗಳಿಗೆ ಮೊದಲ ಶತ್ರು ಎಂದು ಹೇಳುತ್ತದೆ. ಅದಕ್ಕಾಗಿ ಷಡ್ವೈರಿಗಳು ಎಂದು ಹೇಳತಕ್ಕಂತಹ ಭಾಗದಲ್ಲಿ ದ್ವೇಷ ಮತ್ತು ಮಾತ್ಸರ್ಯವನ್ನು ಸೇರಿಸಿದ್ದಾರೆ. ಯಾವುದೇ ವ್ಯಕ್ತಿಯಲ್ಲಿ ಆ ಲಕ್ಷಣಗಳು ಕಂಡರೆ ಇಡೀ ಪ್ರಪಂಚಕ್ಕೇ ಅವನು ಶತ್ರು ಎಂದು ವಿಚ್ಛಿಕ ನ್ಯಾಯಸೂತ್ರದ ವಿವರಣೆಯಲ್ಲಿ ಅಥರ್ವವೇದ ೪-೪೦ರ ೮ ಮಂತ್ರಗಳಲ್ಲಿ ಉಲ್ಲೇಖವಿದೆ.

ದ್ವೇಷ ಮತ್ತು ಮಾತ್ಸರ್ಯಗಳನ್ನು ಹೊಂದಿದ ವ್ಯಕ್ತಿ ಹೆಚ್ಚಾಗಿ ಎಲ್ಲಾ ವಿಚಾರಗಳನ್ನೂ ಸಮಾನವಾಗಿ ಸ್ವೀಕರಿಸಿಕೊಂಡು ನಗುನಗುತ್ತಾ ಇರುತ್ತಾನೆ. ಆಂತರ್ಯದಲ್ಲಿ ಅಷ್ಟೇ ಕೊಳಕು ತುಂಬಿರುತ್ತದೆ. ಅದು ದ್ವೇಷ ಮತ್ತು ಮಾತ್ಸರ್ಯ ಎರಡರಲ್ಲೂ ಸಮಾನವಾಗಿರುತ್ತದೆ. ಶೀಘ್ರಕೋಪಕ್ಕೆ ಈಡಾಗುವವರು, ಹಾಗೆ ಶೀಘ್ರವಾಗಿ ಸಮಾಧಾನಿಯಾಗುವವರು. ಉಪನಿಷತ್ತುಗಳ ಕಾಲದ ನಂತರ ಅದನ್ನು ಸದ್ಗುಣವೆಂದು ಸ್ವೀಕರಿಸಿದರು. ಆದರೆ ವೇದವು ಇದನ್ನು ಒಪ್ಪುವುದಿಲ್ಲ. ಕೋಪಕ್ಕೆ ಕಾರಣವಾದ ವಿಚಾರವನ್ನು ಅದರ ಪರಿಮಾರ್ಜನೆಯಾಗುವಲ್ಲಿಯವರೆಗೂ ಹಿಡಿದಿಡಬೇಕು. ಅಂದರೆ ಕೋಪವನ್ನು ಹಿಡಿದಿಟ್ಟುಕಳ್ಳುವವನು ಉತ್ತಮನು ಎಂದು ಹೇಳಿದೆ. ಪ್ರಪಂಚದಲ್ಲಿ ಕೆಟ್ಟವರಾಗಲಿಕ್ಕೆ ಯಾರೂ ಇಷ್ಟಪಡುವುದಿಲ್ಲ. ನಾವು ಯಾರನ್ನು ಕೆಟ್ಟವರೆಂದು ಗುರುತಿಸುತ್ತೇವೆಯೊ ಅವರೆಲ್ಲ ಕೆಟ್ಟವರೆಂದು ಹೇಳಿಕೊಳ್ಳುವುದಿಲ್ಲ. ಒಳ್ಳೆಯವರೆಂದೇ ಬಿಂಬಿಸಲು ಪ್ರಯತ್ನಿಸುತ್ತಾರೆ. ಅವರು ಕೆಟ್ಟವರಾಗಲು ಪರಿಸರ ಮತ್ತು ಪ್ರಕೃತಿ ಕಾರಣವಾಗಿರುತ್ತದೆ. ಹಾಗಾಗಿ ಪ್ರಪಂಚದಲ್ಲಿ ಯಾರೂ ಕೆಟ್ಟವರಿಲ್ಲ. ಕೆಟ್ಟ ಪ್ರವರ್ತನೆಗೆ ಕಾರಣವಾಗುವಂತಹ ವಿಚಾರಗಳನ್ನು ಖಂಡಿಸುವ ಮೊದಲು ನಿನ್ನ ಪರಿಶುದ್ಧತೆಯನ್ನು ಗಮನಿಸಿಕೊ! ಪ್ರತಿಕ್ರಿಯಾ ವಿಚಾರವ ತಪ್ಪು ಎಂದು ವೇದ ಹೇಳುತ್ತದೆ.

Comments

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…