Sunday, 20 October 2013

ನಮ್ಮ ಪುರಾತನ ಭಾರತೀಯ ರಾಜ್ಯಾಂಗ ವ್ಯವಸ್ಥೆ - ಒಂದು ಪರಿಚಯ - ಭಾಗ ೧


ಅಂದಾಜು ಭರತಖಂಡವನ್ನು ಏಕಚಕ್ರಾಧಿಪತ್ಯದ ಆಡಳಿತದಲ್ಲಿ ಒಂದೇ ಸಮಗ್ರತೆಯ ಸೂತ್ರದಲ್ಲಿ ಆಳಿದವರು ಕೊನೆಯಲ್ಲಿ ಪಾಂಡವರು ನಂತರ ಪರೀಕ್ಷಿತ. ಅವನ ಕಾಲಕ್ಕೇ ಕ್ಷೀಣಿಸುತ್ತಾ ಬಂದು, ಜನಮೇಜಯನ ಕಾಲಕ್ಕೆ ಪ್ರತಿಕ್ರಿಯಾ ಪ್ರವೃತ್ತಿ ಹೆಚ್ಚುತ್ತಾ, ಅವನ ಮೊಮ್ಮಗನ ಕಾಲಕ್ಕೆ ಒಂದು ಸಮಗ್ರ ಶಾಸನದಿಂದ ಆಳ್ವಿಕೆ ಕಷ್ಟಸಾಧ್ಯವೆಂದು ಮನಗಂಡ ಜನಮೇಜಯನ ಮೊಮ್ಮಗ ಸುಧನ್ವನು ಒಂದು ವಿಸ್ತೃತ ವಿಭಜೀಕೃತ ಪ್ರಾದೇಶಿಕ ಶಾಸನ ಪದ್ಧತಿಯನ್ನು ರೂಪಿಸಿದ. ಅದರಂತೆ ರಾಜ್ಯಾಂಗ ರಚಿಸಿ ಆಳ್ವಿಕೆ ರೂಪಿಸಿದ. ಆಡಳಿತ ಪದ್ಧತಿಯೇ ಈಗ ಪ್ರಸಕ್ತ ಅಳಿದುಳಿದು ಬಂದಿರುವ ಈಗ ನಮ್ಮ ಮುಂದಿರುವ ಬೀಡು ಗುತ್ತಿನ ಆಡಳಿತ ವ್ಯವಸ್ಥೆ. ಅದರ ಓಘವನ್ನು ಸಿಕ್ಕಿದ ಲಭ್ಯ ಆಧಾರಗಳ ಮುಖೇನ ಸ್ಪಷ್ಟ ಪಡಿಸುತ್ತೇನೆ. ವಿಶಾಲ ಭಾರತದಲ್ಲಿ ಸೈಂಧವ, ಮ್ಲೇಂಛ, ಗುರ್ಜರ, ಪಠಾಣ, ಪಾರಶೀಯ, ಕಾಲಯವನ, ಯವನ ಇತ್ಯಾದಿಯವರನ್ನು ಸೇರಿಸಿ ಈಗಿನ ಕೆಲ ಅರಬ್ ಪ್ರದೇಶ ಬಲೂಚಿಸ್ಥಾನ, ಅಫ್ಘಾನಿಸ್ಥಾನ, ಪಾಕಿಸ್ಥಾನ, ಟಿಬೆಟ್, ಬರ್ಮಾ ಸೇರಿದ ವಿಶಾಲ ಭಾರತದಲ್ಲಿ ಏಕಮುಖ ಅಂದರೆ ವಿಕೇಂದ್ರೀಕೃತ ಪ್ರಾದೇಶಿಕ ಸಂವಿಧಾನಾತ್ಮಕ ಆಡಳಿತ ಜಾರಿಗೆ ತಂದರು. ಅವನ್ನೆಲ್ಲಾ ಸ್ಥೂಲವಾಗಿ ವಿವರಿಸುವುದು ಈ ಲೇಖನದ ಉದ್ದೇಶ. ಕೆಲ ಇತಿಹಾಸಕಾರರ ಮನಸ್ಸಿಗೆ ಇದರಿಂದ ಕಿರಿಕಿರಿಯಾದರೆ ಕ್ಷಮೆ ಇರಲಿ. ಯಾವುದೇ ಧರ್ಮದ, ಪಂಥದ ನಿಂದನೆ ಇದರಲ್ಲಿ ಇಲ್ಲ. ಭಾಷಾ ಕಾರಣದಿಂದ ನಿಂದನಯೆಂದು ಕಂಡುಬಂದರೆ ಕ್ಷಮಸಿರೆಂದು ವಿದ್ವಜ್ಜನರಲ್ಲಿ ಪ್ರಾರ್ಥಿಸಿ ಲೇಖನ ಆರಂಭಿಸುತ್ತೇನೆ.

ಸಮಗ್ರ ಆಡಾಳಿತ ವ್ಯವಸ್ಥೆಯ ರೂಪುರೇಷೆ ಒಂದು ಕೋಷ್ಟಕ ವಿಭಾಗ ರೀತಿ ಇರುತ್ತದೆ:
) ಸಾಮಾಜಿಕ ನ್ಯಾಯ ಪದ್ಧತಿ.
) ಆಸ್ತಿ, ಋಣ, ವಿಭಾಗ, ಹಕ್ಕು ಬಾಧ್ಯತೆಗಳು.
) ಸಾಮಾಜಿಕ ರಕ್ಷಣೆ, ಪೂರೈಕೆ ಕಾನೂನುಗಳು.
) ಉತ್ಪಾದಕತೆ ಮತ್ತು ವಿತರಣೆ ಕಾನೂನು.
) ಕಂದಾಯ, ಸುಂಕ, ಮೋಜಣಿ ದಾಖಲಾತಿ ಕಾನೂನು.
) ನಾಗರೀಕ ವಿಧ್ಯಾರ್ಜನೆ, ದೇವಸ್ವಾಧೀನ ಪದ್ಧತಿ.
) ಗಡಿ ರಕ್ಷಣೆ, ರಾಜಸ್ವಾಧೀನ ಪದ್ಧತಿ.
) ಅರಸು ಮತ್ತು ಪರಿವಾರ ರಕ್ಷಣೆಯ ವಿಚಾರ.

ಹೀಗೆ ಎಂಟು ವಿಧದಲ್ಲಿ ಸಮಗ್ರ ಮತ್ತು ಏಕರೂಪ. ಆದರೆ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ರೂಪುಗೊಟ್ಟನು ಸುಧನ್ವ ಮಹಾರಾಜ್”. ಅದರ ವಿವರಣೆ ಹೀಗಿದೆ:

) ಚಕ್ರವರ್ತಿ:- ಸಮಗ್ರದೇಶ. ಅದಕ್ಕೆ ಆಧರಿಸಿದ ಮುಖ್ಯ ಸಂವಿಧಾನ.
) ಮಹಾಮಂಡಲಾಧಿಪತಿ:- ೧೬ನೇ ಒಂದು ಭಾಗ. (ಪ್ರಾದೇಶಿಕ ವಿಭಜನೆ)
) ಮಂಡಲಾಧಿಪತಿ:- ೧೬ನೇ ಒಂದು ಭಾಗ. (ಪ್ರಾದೇಶಿಕ ವಿಭಜನೆ)
) ಅರಸು:- ಮಂಡಲದ ಒಂದು ಭಾಗದ ರಾಜಮನೆತನ.
) ಬೀಡು:- ಅರಸು ಮನೆತನಕ್ಕೆ ಆಧರಿಸಿ ಕಂದಾಯ ಮತ್ತು ನ್ಯಾಯ ನಿರ್ವಹಣೆ.
) ಗುತ್ತು:- ವಿಭಾಗೀಯ ಆಡಳಿತ. ಆಂಶಿಕ ನ್ಯಾಯ ಮತ್ತು ನಿರ್ವಹಣೆ.

ಇದಲ್ಲದೆ ನಾಯಕ, ಪಟೇಲ, ಕೈಯಾಲ, ಸರದಾರ, ಇತ್ಯಾದಿ ರಾಜೋದ್ಯೋಗಿ ಪಂಗಡವಿರುತ್ತದೆ. ಒಟ್ಟು ದೇಶದ ೧೬*೧೬ ಒಂದು ಭಾಗದಲ್ಲಿ ಅರಸು+ಬೀಡು+ಗುತ್ತು ಮನೆಯು ಆಡಳಿತ ವ್ಯವಸ್ಥೆಯಲ್ಲಿ ಪರಸ್ಪರ ಪೂರಕತೆಯೊಂದಿಗೆ ಯಾವುದೇ ರೀತಿಯ ಭಂಗ, ಬಾಧೆಗಳಿರದಂತೆ ಮೂಲ ರಾಜವಿಕ ಸಂವಿಧಾನಕ್ಕೆ ಭಂಗವಿರದಂತೆ ಆಡಳಿತ ಒದಗಿಸುತ್ತಿತ್ತು. ಇಲ್ಲಿ ಗುತ್ತಿನ ವ್ಯಾಪ್ತಿಯ ತಳಹದಿಯ ನ್ಯಾಯ ಪದ್ಧತಿ ಅಂದರೆ ಆಂಶಿಕ ನ್ಯಾಯ. ಗುತ್ತಿನ ಮುಖ್ಯರ ಮಾತಿನ ಮೇಲೇ ಆಡಳಿತ ಭದ್ರತೆ ಇರುತ್ತಿತ್ತು. ಒಟ್ಟು ಆಡಳಿತವು ೨೫೬ ವಿಭಾಗವಗಿ ಅಲ್ಲಲ್ಲಿಯ ಉತ್ಪಾದಕತೆ ಕೃಷಿ, ವಾಣಿಜ್ಯ, ಭೂಮಿ, ಅರಣ್ಯೋತ್ಪನ್ನ ಆಧರಿಸಿ ಕಂದಾಯ, ಕಾನೂನು ಇರುತ್ತಿತ್ತು. ರಾಜಾದಾಯ ಸಂಗ್ರಹಣೆ, ನಿರ್ವಹಣೆ, ದೇವಸ್ವಾದಾಯ ಸಂಗ್ರಹಣೆ ಹಾಗೂ ನಿರ್ವಹಣೆ, ಸುಂಕ ಸಂಗ್ರಹಣೆ ಹಾಗೂ ನಿರ್ವಹಣೆ. ರೀತಿಯಲ್ಲಿ ಮೂರು ಬಗೆಯಲ್ಲಿ ಮಾತ್ರಾ ತೆರಿಗೆ ಪದ್ಧತಿ ಇತ್ತು.

) ರಾಜಾದಾಯ ಸಂಗ್ರಹಣೆ:-
 • ಅರಣ್ಯೋತ್ಪನ್ನಗಳಲ್ಲಿ ೧೬ ನೇ ಭಾಗ ತೆರಿಗೆ
 • ಕೃಷಿ ಉತ್ಪನ್ನಗಳಲ್ಲಿ ನೇ ಭಾಗ ತೆರಿಗೆ
 • ಇತರೆ ಉತ್ಪಾದನೆಯಲ್ಲಿ ನೇ ಭಾಗ ತೆರಿಗೆ 
 • ಯುದ್ಧ, ಕಪ್ಪ, ಗಣಿ, ಭೂಗತ ದ್ರವ್ಯಪೂರ್ತಿ ರಾಜಾದಾಯ.
ಧನವೆಲ್ಲಾ ಆಹಾರವಸ್ತು ಸಂಗ್ರಹಣೆ, ದೇವಾಲಯ ಧರ್ಮಛತ್ರ ನಿರ್ವಹಣೆ, ರಸ್ತೆ, ಸಾರಿಗೆ, ರಕ್ಷಣೆ, ಋಷ್ಯಾಶ್ರಮ, ಗುರುಕುಲ ನಿರ್ವಹಣೆ, ವೈದ್ಯಾದಿಗಳಿಗೆ, ರಾಜೋದ್ಯೋಗಿಗಳಿಗೆ ಸಂಬಳ, ಉಂಬಳಿ ನಿರ್ವಹಣೆಗೆ ಬಳಕೆಯಾಗುತ್ತದೆ. ಇದಕ್ಕೆ ಪೂರ್ತಿ ಚಕ್ರವರ್ತಿ ಅಧಿಕಾರಿ. ಅವನ ಆದೇಶದಂತೆ ಅಲ್ಲಲ್ಲಿ ಬಳಕೆಯಾಗುತ್ತದೆ. ಅರನು ಮನೆತನಸ್ಥರ ನಿರ್ವಹಣೆಯೂ ಇದರಲ್ಲಿ ಸೇರಿರುತ್ತದೆ. ವಸ್ತುಗಳು, ಚಿನ್ನ, ಬೆಳ್ಳಿ ಮಾತ್ರ ಚಲಾವಣೆಯಲ್ಲಿ ಪರಿವರ್ತಕಗಳು. ಬಿಟ್ಟರೆ ಗೋವು ಸಂಪತ್ತಾಗಿ ಪರಿಗಣಿಸಲ್ಪಡುತ್ತದೆ.

) ದೇವಸ್ವಾಧಾಯ ಸಂಗ್ರಹಣೆ:-
ಚಮ್ಮಾರ, ಕ್ಷೌರಿಕ, ಅಕ್ಕಸಲಿಗ, ನೇಕಾರ ಹೀಗೆ ವೃತ್ತಿಗಳವರಿಗೆ ಕೊಡುವ ಅಶನಾರ್ಥಗಳು. ಪುರೋಹಿತ, ವೈದ್ಯ, ಅರ್ಚಕ, ಜ್ಯೋತಿಷಿಗಳಿಗೆ ಕೊಡುವ ಅಗ್ರಹಾರ ಭತ್ಯೆ. ಇವೆಲ್ಲಾ ಕೃಷಿ ಉತ್ಪನ್ನ ಆಧರಿಸಿ ಆಹಾರ ಧಾನ್ಯರೂಪದಲ್ಲಿ ಸಂಗ್ರಹಿಸಿ ಹಂಚುವುವು. ವಿವಾಹಕಾಲದಲ್ಲಿ ವಿಧಿಸಿದ ದಂಡರೂಪದ ಹಣ, ಶಿಕ್ಷಾರೂಪದಲ್ಲಿ ವಿಧಿಸಿದ ಶ್ರಮಿಕ ಕಾರ್ಯದ ಆಯಧನ ಇತರೆ ಚರಾದಾಯಗಳೆಲ್ಲಾ ಆಯಾಯ ಗುತ್ತಿನ ಮನೆಯವರು ಸಂಗ್ರಹಿಸಿ ಸೂಕ್ತ ವಿನಿಯೋಗ ಮಾಡುವುದು.

) ಸುಂಕ ಸಂಗ್ರಹಣೆ:-
೨೫೬ ವಿಭಾಗ ಮಟ್ಟದಲ್ಲಿ ಆಡಳಿತವಿದ್ದು ಒಂದು ವಿಭಾಗದಿಂದ ಒಂದು ವಸ್ತು ಇನ್ನೊಂದು ವಿಭಾಗದಲ್ಲಿ ಮಾರಾಟ, ಪರಿವರ್ತನೆ ಆಗಬೇಕಿದ್ದಲ್ಲಿ ಸುಂಕ ಕಡ್ಡಾಯ. ಸುಂಕದ ಹಣವು ಮತ್ತು ಬಿಕರಿಯಾಗದ ವಸ್ತುಗಳ ಮೇಲಿನ ದಂಡ, ಇನ್ನಿತರೆ ವಂಚನೆ ಕಾರಣದ ದಂಡಗಳು ಕೂಡ ಮಂಡಲೇಶ್ವರರ ಅನುಮತಿಯ ಮೇರೆಗೆ ಆಯಾಯ ಪ್ರದೇಶಗಳಲ್ಲಿ ವಿತರಣೆಯಾಗುತ್ತದೆ. ರೀತಿಯಲ್ಲಿ ಮೂರು ಬಗೆಯ ಆರ್ಥಿಕ ನಿರ್ವಹಣೆಯಿರುತ್ತದೆ.

ವಂಶಪಾರಂಪರ್ಯ ಮತ್ತು ನೇಮಕಾತಿ ನಿಯಮದಂತೆ ರಾಜೋದ್ಯೋಗಿಗಳಿರುತ್ತಾರೆ. ಆರ್ಹತೆಯೇ ಮಾನದಂಡವಾಗಿರುತ್ತದೆ. ನೇಮಕಾತಿಯ ಅಧಿಕಾರ ಒಂದರಿಂದ ಎರಡನೆಯವರು, ಎರಡನೆಯವರಿಂದ ಮೂರನೆಯವರು, ಮೂರನೆಯವರಿಂದ ನಾಲ್ಕನೆಯವರು, ನಾಲ್ಕನೆಯವರಿಂದ ಐದನೆಯವರು, ಐದನೆಯವರಿಂದ ಆರನೆಯವರು, ಆರನೆಯವರಿಂದ ಏಳನೆಯವರು ಹೀಗಿರುತ್ತದೆ. ಅಲ್ಲಿ ಯಾವುದೇ ಮೇಲಿನವರ ಕೈವಾಡವಿರುವುದಿಲ್ಲ. ಚಕ್ರಾಧಿಪತಿಯು ಮಹಾಮಂಡಲೇಶ್ವರರನ್ನು ನೇಮಿಸುತ್ತಾರೆ. ಆದರೆ ಮಂಡಲೇಶ್ವರ ನೇಮಕಾತಿಯಲ್ಲಿ ಚಕ್ರವರ್ತಿಗೆ ಯಾವುದೇ ಅಧಿಕರವಿಲ್ಲ. ಮಹಾಮಂಡಲೇಶ್ವರರೇ ಪೂರ್ಣಾಧಿಕಾರಿಯಾಗಿರುತ್ತಾರೆ. ಹಾಗೆಯೇ ಗುತ್ತಿನವರೆಗೆ ಇರುತ್ತದೆ. ಇನ್ನು ಅವರವರಿಗೆ ಬೇಕಾದ ಲೆಕ್ಕಪತ್ರನಿರ್ವಹಣೆ, ರಕ್ಷಣೆ ಭಾಗಗಳು ಅವರವರ ಅಧಿಕಾರವಾಗಿರುತ್ತದೆ. ಇಲ್ಲಿ ಸ್ಫಟಿಕದಂತೆ ಶುದ್ಧ ಆಡಳಿತವಿರುತ್ತದೆ. ಮತ್ತು ಭ್ರಷ್ಟಾಚಾರಾದಿಗಳಿಗೆ ಅವಕಾಶವಿರುವುದಿಲ್ಲ

) ಚಕ್ರಾಧಿಪತಿಗೆ ಸಮಗ್ರ ದೇಶದ ಸಾಮಾಜಿಕ ನ್ಯಾಯ ಮತ್ತು ರಕ್ಷಣೆ ಮತ್ತು ಕಲಾ ನೈಪುಣ್ಯತೆಯ ಪೋಷಣೆ ಮಾತ್ರಾ ಜವಾಬ್ದಾರಿ.

) ಮಹಾಮಂಡಲೇಶ್ವರರು:- ತಮ್ಮ ಮಂಡಲದ ಹದಿನಾರು ಪ್ರದೇಶಗಳ ಸಮಗ್ರ ಅಭಿವೃದ್ಧಿ, ಆಂತರಿಕ ಭದ್ರತೆ, ಕಾನೂನು ಪಾಲನೆ, ಸೈನಿಕರ ಪೋಷಣೆ, ನಿರ್ವಹಣೆ, ಯುದ್ಧಸಾಮಗ್ರಿ ಉತ್ಪಾದನೆ, ಕರ್ತವ್ಯ.

) ಮಂಡಲೇಶ್ವರರು:- ತಮ್ಮ ಪ್ರದೇಶದ ಉತ್ಪಾದಕತೆ, ಖನಿಜ, ಗಣಿಗಾರಿಕೆ, ಲೋಹಾದಿಗಳ ಉತ್ಪನ್ನ, ವಿನಿಯೋಗ, ರೈತಾಪಿ ಜನರ ಆವಶ್ಯಕ ಸಾಮಗ್ರಿ ಪೂರೈಕೆ, ಆಡಳಿತ ಭದ್ರತೆ, ಕರ್ತವ್ಯ.

) ಅರಸು ಮನೆತನ:- ಮಂಡಲೇಶ್ವರ ಆದೇಶದಂತೆ ಅಲ್ಲಲ್ಲಿನ ರಾಜಾದಾಯ ಸಂಗ್ರಹ, ಸುಂಕ ನಿರ್ವಹಣೆ, ಪ್ರಾದೇಶಿಕ ಸಾಂಸ್ಕೃತಿಕ ಬೆಳವಣಿಗೆ, ಆರ್ತರಕ್ಷಣೆ, ಆಪತ್ಕಾಲೀನ ನಿರ್ವಹಣೆ (ರಾಜಮುದ್ರಾಧಿಕಾರಿ), ಭೂ, ವಂಶ, ಕಂದಾಯ, ದೇವಸ್ವ ಲೆಕ್ಕಾಧಿಕಾರಿ, ಇತಿಹಾಸ ಲೇಖಾಪಾಲನೆ, ಕರ್ತವ್ಯ.

) ಬೀಡಿನ ಮನೆತನ:- ಧಾರ್ಮಿಕ ಆಚರಣೆ, ನ್ಯಾಯಿಕ ಧರ್ಮಪಾಲನೆ, ದಂಡ, ಪ್ರಮಾಣ, ಮಂಡೆಕೋಲು ಇತ್ಯಾದಿ ಇತ್ಯಾದಿ ಶಿಕ್ಷಾದಿ ನಿರ್ವಹಣೆ, ವಿಧ್ಯಾವರ್ಧನೆ ಕರ್ತವ್ಯ.

) ಗುತ್ತಿನ ಮನೆತನ:- ಗ್ರಾಮರಕ್ಷಣೆ, ಕೃಷ್ಯಾದಿ ಆಹಾರ ಧಾನ್ಯ ಉತ್ಪಾದನೆ, ಸಂಗ್ರಹಣೆ, ರೈತಾಪಿ ಜನರ ರಕ್ಷಣೆ, ಗ್ರಾಮೀಣ ಕ್ರೀಡಾದಿಗಳ ಉತ್ತೇಜನ, ಶಿಕ್ಷಾದಿಗಳ ಶಿಫಾರಸು, ಶಿಕ್ಷೆ ಜಾರಿ ಇತ್ಯಾದಿಗಳ ಕರ್ತವ್ಯ (ಆಂಗಿಕ ನ್ಯಾಯ). ಗರಡಿ ಮನೆ, ಮಲ್ಲ ಯುದ್ಧ ತರಬೇತಿ, ಕಶಲ ಕೈಗಾರಿಕಾ ತರಬೇತಿ, ಅಲ್ಲದೆ ಮನೋರಂಜನಾವೃತ್ತಿ ಕುಲಕಸುಬುಗಳ ಮೇಲ್ವಿಚಾರಣೆ, ಕುಲವೃತ್ತಿ ಮಾಡದವರ ಸಂಬಂಧಿ ವಿಚಾರ, ಕಾರ್ಯಕಾರಣವರಿತು ವ್ಯವಸ್ಥೆಗಳು.

ಹೀಗೆ ಆರು ವಿಭಾಗದಲ್ಲಿ ಬೇರೆ ಬೇರೆ ರೀತಿಯಲ್ಲಿ ಮೂಲ ಸಂವಿಧಾನಕ್ಕೆ ಬದ್ಧವಾಗಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಂಡು ಒಟ್ಟು ಉತ್ತಮ ಆಡಳಿತಾತ್ಮಕ ಕಾನೂನುಗಳನ್ನು ರೂಪಿಸಿ ಅಂದಿನ ಚಕ್ರವರ್ತಿಯಾದ ಸುಧನ್ವನು ಬಳಕೆಗೆ ತರುತ್ತಾನೆ. ಅಂದಾಜು ೪೦೦೦ ವರ್ಷಗಳ ಹಿಂದಿನ ಮಾತು. ಜನರೆಲ್ಲಾ ಸುಖ ಸಂತೋಷ, ಸಂಭ್ರಮಗಳಿಂದಲೇ ಬಾಳುತ್ತಿದ್ದರು. ಯಾವುದೇ ರೀತಿಯ ಸಮಸ್ಯೆಗಳಿರಲಿಲ್ಲ. ಹಾಗಾಗಿ ಗುತ್ತಿನ ಮನೆಯ ಗ್ರಾಮಪದ್ಧತಿಯ ಆಡಳಿತ ಸುಸೂತ್ರವಾಗಿತ್ತು.
(ಸಶೇಷ..)

3 comments:

 1. This is really great information! Thank you very much. Could you please post the next part.

  ReplyDelete
  Replies
  1. http://veda-vijnana.blogspot.in/2014/04/blog-post_8.html

   Delete