Skip to main content

ಸಂಧ್ಯಾವಂದನೆ ಮತ್ತು ಸಂಧ್ಯೋಪಾಸನೆ


ಸಂಧ್ಯಾವಂದನೆ ಮತ್ತು ಸಂಧ್ಯೋಪಾಸನೆಗಳೆರಡೂ ಬೇರೆ ಬೇರೆ ಅರ್ಥವನ್ನು ಕೊಡತಕ್ಕ ಎರಡು ವಿಧಗಳು. ಇವುಗಳ ವ್ಯತ್ಯಾಸವನ್ನು ಈ ಲೇಖನದಲ್ಲಿ ಮಂಡಿಸುತ್ತೇವೆ. 

ಸಂಧ್ಯಾವಂದನೆ ಎಂಬ ಆಚರಣೆಯು ಮನುಷ್ಯನ ಮನೋ ವಿಕಾಸ, ಮಾನವೀಯ ಧರ್ಮ ಸಹಿಷ್ಣುತೆ ರೂಢಿಸಿಕೊಳ್ಳುವ ಮತ್ತು ಬಳಸುವ ಒಂದು ಅಗತ್ಯ ಕರ್ತವ್ಯವಾಗಿದೆ. ಮನುಷ್ಯ ಸೃಷ್ಟಿಯಾದ್ದಾಗಿನಿಂದಲೂ ಇದಕ್ಕೆ ಮೂಲ ಸ್ಥಾನವಾದ ಮಾತೆಯನ್ನು ಸಹ ಪ್ರಕೃತಿಗೆ ಹೋಲಿಸಿದ್ದಾನೆ. ಆ ಮಾತೆ ಇರುವುದು ಸಹ ಈ ನಿಸರ್ಗದಲ್ಲಿ. ಮಾನವನು ಹುಟ್ಟಿದ ಮೇಲೆ ಪ್ರಕೃತಿಯನ್ನು ಅವಲಂಬಿಸಿಕೊಂಡು ಬೆಳೆದು, ತನ್ನ ಉಪಯೋಗಕ್ಕೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಾ ಬಂದನು. ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ತಾನು ಅನುಭವಿಸಿ ವಿಶೇಷವಾಗಿ ಅದನ್ನು ವಾಣಿಜ್ಯವಾಗಿ ಉಪಯೋಗಿಸಿಕೊಂಡು ಬಂದನು. ಮಾನಸಿಕ ನೆಮ್ಮದಿಯನ್ನೂ ಅದರಿಂದಲೇ ಸಾಧಿಸಿದನು. ಅದರಿಂದಲೇ ಹೆಚ್ಚು ವ್ಯವಹಾರ ನಡೆಸುವವನು, ಅದನ್ನೇ ಆವರಿಸಿಕೊಂಡನು. ಆದ್ದರಿಂದ ಮೂಲ ವಸ್ತು ರೂಪದಲ್ಲಿ ಅಥವಾ ನಗದು ರೀತಿಯಲ್ಲಿ ಪರರಿಗೆ ಸಹಕಾರಿಯಾಗಿ ತಾನು ಉನ್ನತ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಇವಿಷ್ಟನ್ನೂ ಪ್ರಕೃತಿಯಿಂದ ಪಡೆದು ಅದಕ್ಕೆ ಸಹಜವಾದ ಮನವೀಯ ಧರ್ಮ ರೀತ್ಯಾ ಕೃತಜ್ಞತೆ ಸಲ್ಲಿಸಬಕಾಗಿರುವುದು ಕರ್ತವ್ಯವಾಗಿರುತ್ತದೆ. ಅದರಂತೆ ಸಂಧ್ಯಾವಂದನೆಯಲ್ಲಿಆದಿತ್ಯಾನ್ ದ್ಯಾವಾ ಪೃಥಿವೀ ಆಪಃ ಸ್ವಹಾಎಂಬಂತೆ ಪಂಚಭೂತಗಳನ್ನು ಸ್ಮರಿಸಿ ಕೃತಜ್ಞತಾ ಸಮರ್ಪಣೆಯೇ ಸಂಧ್ಯಾವಂದನೆ ಆಗಿರುತ್ತದೆ. ಇದು ಮಾನವನ ಆದ್ಯ ಕರ್ತವ್ಯವಾಗಿರುತ್ತದೆ.

ಸಂಧ್ಯೋಪಾಸನೆಯು ಆಯಾಯ ಕಾಲಕ್ಕೆ ತಕ್ಕ ಆಯಾಯ ಗುಣಾತ್ಮಕ ಶಕ್ತಿಯನ್ನು ಸಂಧಿಸುವ ಅಷ್ಟವಿಧ ಭಕ್ತಿಗಳಲ್ಲಿ ಮುಖ್ಯವಾಗಿರುವಲ್ಲಿ ಉಪಾಸನೆಯೂ ಒಂದು. ಇದು ಬೇರೆ ಅರ್ಥವನ್ನು ಕೊಡತಕ್ಕ ಉಪಾಸನಾ ಉದ್ದೇಶದ ಒಂದು ಉಪಾಯ ಅಥವಾ ತಂತ್ರ ಎಂದು ಹೇಳಬಹುದು. ಆ ಗುಣಾತ್ಮಕ ಶಕ್ತಿಯ ಸೂತ್ರವನ್ನು ಅಭ್ಯಸಿಸುವ ಉದ್ದೇಶದಿಂದ ಮಾಡುವ ಸಾಧನೆಯೇ ಸಂಧ್ಯೋಪಾಸನೆ. ಯಾವುದೇ ಒಂದು ಶಕ್ತಿ ಮೂಲದ ಅನ್ವೇಷಣೆ ಮಾಡುವ ನಿಟ್ಟಿನಲ್ಲಿ ಸತತ ಅಧ್ಯಯನ ಮಾಡುವುದನ್ನು ಕೂಡ ಉಪಾಸನೆ ಎಂದು ಹೇಳಬಹುದು. ಹೀಗಿದ್ದಲ್ಲಿ ಈ ಉಪಾಸನಾ ವಿಧಾನದಿಂದ ಏನು ಸಾಧಿಸಬಹುದು? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಉಪಾಸನೆಗಾಗಿ ಯಾವುದೇ ಮಂತ್ರ ಅಥವಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನೇ ಮತ್ತೆ ಮತ್ತೆ ಸತತವಾಗಿ ಮನನ ಮಾಡುವಾದರಿಂದ ಉಂಟಾಗತಕ್ಕ ಜ್ಞಾನಾರ್ಜನೆಯೇ ಲಾಭ. ಆ ಜ್ಞಾನ ಸಮೂಹವೇ ಕೈವಲ್ಯ ಪ್ರಾಪ್ತಿಯ ದಾರಿಯಾಗುತ್ತದೆ. ಆದ್ದರಿಂದ ಜ್ಞಾನಾಕಾಂಕ್ಷಿಯಾದ ಪ್ರತಿಯೊಬ್ಬನೂ ತನ್ನ ಜೀವನದಲ್ಲಿ ಯಾವುದಾದರೊಂದು ಉಪಾಸನೆ ಮಾಡುವುದು ಉತ್ತಮ. 

ಉದಾ:- ಸಹಜವಾಗಿ ಉಪವೀತ ವಟುವಿಗೆ ಉಪನಯನ ಕಾಲದಲ್ಲಿ, ಗಾಯತ್ರಿ, ಅಷ್ಟಾಕ್ಷರೀ, ಪಂಚಾಕ್ಷರೀ, ದ್ವಾದಶಾಕ್ಷರೀ ಇತ್ಯಾದಿ ಉಪದೇಶವು ಪ್ರಾದೇಶ ಮಾತ್ರದಿಂದ ಲಭ್ಯವಿರುವುದು ಸರಿಯಷ್ಟೆ. ಇವೆಲ್ಲಾ ನಾದೋಪಾಸನಾ ತಂತ್ರ ಆಗಿರುತ್ತದೆ. ನಾದದಿಂದ ಆನಂದವನ್ನು ಸಾಧಿಸಬಹುದು. ಉಪಾಸನೆಯಿಂದ ಮಾರ್ಗವನ್ನು ಕಂಡುಹಿಡಿದು ಬ್ರಹ್ಮಾನಂದವೆಂಬ ಕೈವಲ್ಯ ಸ್ಥಾನ ಹೊಂದಬಹುದು. ಬ್ರಹ್ಮಜ್ಞಾನವನ್ನು ಹೊಂದುವ ಮಾರ್ಗದಲ್ಲಿ ಅತೀ ಸೂಕ್ತ ಮತ್ತು ಉಪಯುಕ್ತ ಮಾರ್ಗವಿದಾಗಿರುತ್ತದೆ. ಆದ್ದರಿಂದ ಯಾವುದೇ ಒಂದು ವಿಷಯದ ಬಗ್ಗೆ ಅತೀ ವಿಶದವಾಗಿ ಅಧ್ಯಯನ ಮಾಡುವುದಕ್ಕೆ ಅತೀ ಸೂಕ್ತವಾದ ಉಪಾಯವೇ ಉಪಾಸನೆ. ಅದು ತ್ರಿಕಾಲದಲ್ಲಿಯೂ ಮಾಡಿದಲ್ಲಿ ಸೂಕ್ತ ಎಂದು ಹೇಳತ್ತಾ ಸಂಧ್ಯಾವಂದನೆಯು ಒಂದು ಕೃತಜ್ಞತಾ ಸಮರ್ಪಣೆಯಾದರೆ, ಸಂಧ್ಯೋಪಾಸನೆಯು ಜ್ಞಾನ ಸಂಗ್ರಹ ಮಾರ್ಗವಾಗಿರುತ್ತದೆ.

Comments

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…