Friday, 22 November 2013

ಭಾರತೀಯ ಸಂಸ್ಕೃತಿ ಎಂದರೇನು?

www.exoticindiaart.com
http://www.exoticindiaart.com/product/paintings/bhanwara-pata-symbolic-depiction-of-indian-marriage-rite-DE02/

ನಮ್ಮ ದೇಶದಲ್ಲಿ ಎಲ್ಲವೂ ಮಾನ್ಯವಾಗುತ್ತಿದೆ. ರಾಜಕೀಯ ಕಾರಣದಿಂದ ಭಯೋತ್ಪಾದಕತೆಯನ್ನೇ ಬೆಂಬಲಿಸುವವರು ಹೆಚ್ಚುತ್ತಿದ್ದಾರೆ. ಅವರವರ ಅಭಿರುಚಿಗೆ ತಕ್ಕಂತೆ ವರ್ತಿಸಲು ಸ್ವಾತಂತ್ರ್ಯವಿದೆ ಎಂಬ ಹಕ್ಕು ಮಂಡನೆ. ಯಾವುದೇ ವಿದೇಶೀ ಸಂಸ್ಕೃತಿ, ಅಲ್ಲಿನ ಆಟ, ಊಟ, ಪಾಠ, ನೃತ್ಯ, ಗೊಂದಲಗಳೆಲ್ಲಾ ಇಲ್ಲಿ ಸ್ಥಾನ ಪಡೆಯುತ್ತದೆ. ಅದರಿಂದ ಇಲ್ಲಿನ ಹಲವು ಸಾವಿರ ವರ್ಷದ ಶಿಸ್ತುಬದ್ಧ ಸಂಸ್ಕೃತಿ ನಾಶವಾಗುತ್ತಿದ್ದರೂ ಅದನ್ನು ಕೇಳುವ ಹಕ್ಕು ಭಾರತೀಯರಿಗಿಲ್ಲ. ಕೇಳಿದರೆ ಅದು ಅಪರಾಧ. ಅವೆಲ್ಲಾ ಸಂವಿಧಾನಾತ್ಮಕ ಮೂಲಭೂತಹಕ್ಕು ಎಂದು ಪ್ರತಿಪಾದಿಸಲ್ಪಡುತ್ತದೆ. ಆದರೆ ಮೂಲಭೂತ ಹಕ್ಕಿನಲ್ಲಿ ಇಲ್ಲಿನ ಸಂಸ್ಕೃತಿ, ಹಬ್ಬ, ಹರಿದಿನಗಳ ಆಚರಣೆ ಮಾತ್ರ ಸೇರಿದೆಯೇ ವಿನಃ ಪಬ್ ಸಂಸ್ಕೃತಿಯಲ್ಲ, ಪ್ರೇಮಿಗಳ ದಿನಾಚರಣೆಯಲ್ಲ!

ಕಾಮಕ್ಕಾಗಿ ಪ್ರೇಮವೆಂಬ ವಿದೇಶೀ ಸಂಸ್ಕೃತಿ ನಮ್ಮ ಭಾರತೀಯವಲ್ಲ. ನಮ್ಮಲ್ಲಿ ಗಿಡ-ಮರಗಳನ್ನೂ, ಹಕ್ಕಿ-ಪಕ್ಷಿಗಳನ್ನ, ಪ್ರಾಣಿಗಳನ್ನೂ ಹಾಗೆಯೇ ವಯೋಮಾನ ವ್ಯತ್ಯಾಸವಿಲ್ಲದ ಮಾನವನನ್ನೂ ಪ್ರೇಮಿಸಲು ಹೇಳಿದೆ. ದಿನವನ್ನು ಆಚರಿಸಲು ಇಲ್ಲಿ ಕಾಮವಿಲ್ಲ. ಈಗ ಆಚರಿಸುತ್ತಿರುವುದು ವಿಶಾಲ ಪ್ರವೃತ್ತಿಯ ಪ್ರೇಮ+ಪ್ರೀತಿಯಲ್ಲ. ಗಂಡು-ಹೆಣ್ಣುಗಳ ಆಕರ್ಷಣೆಯ ಕಮಾಭಿಭೂತವಾದ ಸ್ವೇಚ್ಛಾ ಪ್ರವೃತ್ತಿ. ಇದು ಮಣ್ಣಿಗೆ, ಇಲ್ಲಿನ ಹವಾಗುಣಕ್ಕೆ ಸರಿಯಲ್ಲ. ಬೇಕಾಬಿಟ್ಟಿ ಕುಡಿದು ಕುಣಿಯುವ; ಅದರಲ್ಲೂ ಹೆಣ್ಣು ಗಂಡುಗಳು ಮದ್ಯಪಾನ ಮಾಡ ಕುಣಿಯುವ ಪ್ರವೃತ್ತಿ ಖಂಡಿತಾ ಸರಿಯಲ್ಲ. ಅದರಿಂದ ವೈಚಾರಿಕ ಮತ್ತು ಸಾಂಪ್ರದಾಯಿಕ ಅನಾಹುತ ಖಂಡಿತ. ಮುಂದೆ ಮಾನವ ಸೃಷ್ಟಿಯಲ್ಲಿ ವ್ಯತ್ಯಯವಾಗಬಹುದು. ಬರೇ ಕ್ರೂರ ಹಿಂಸಾತ್ಮಕ ಕಾಮಾಭಿಭೂತವಾದ ಯಾವುದೋ ಒಂದು ವಿಚಿತ್ರಮಾನವನು ಭೂಮಿಯ ಮೇಲೆ ಸೃಷ್ಟಿಯಾಗಬಹುದು. ನಮ್ಮ ಪ್ರಕೃತಿ ಯಥಾವತ್ತಾಗಿರುವಂತೆಯೇ ನಮಗೆ ಬಾಳುವ ಅಧಿಕಾರವಿದೆಯೇ ವಿನಃ ಪರಿವರ್ತನೆ ಮಾಡಲಲ್ಲ. ಇವೆಲ್ಲ ವಿಷಯಗಳಿಗೆ ಆಧರಿಸಿ ಕೆಲ ಮುಖ್ಯ ಸಾಕ್ಷ್ಯಾಧಾರಗಳೊಂದಿಗೆ ವಿವರಿಸುತ್ತೇನೆ.

ಮುಖ್ಯವಾಗಿ ಕಾಮಕ್ಕೆ ವಿಶಾಲವಾದ ಅರ್ಥವಿದೆ. ಮನಸ್ಸಿನಲ್ಲಿ ಹುಟ್ಟುವ ಅಪೇಕ್ಷೆಗಳೆಲ್ಲಾ ಕಾಮವೇ. ಆದರೆ ಆಕರ್ಷಣೆ ನಿಷೇಧವೆಂದಿದೆ. ಪ್ರಚೋದಕತೆ ನಿಷೇಧ. ಮನೋಕಾಮನೆಗೆ ಧರ್ಮದ ಚೌಕಟ್ಟಿದೆ. ಚೌಕಟ್ಟಿನ ಅಡಿಯಲ್ಲಿ ಅಳತೆಯಲ್ಲಿ ಮಾತ್ರ ಪೂರೈಕೆ ಸಿಂಧುವೆಂದಿದೆ. ಎಲ್ಲಿಯೂ ಮುಕ್ತತೆಗೆ ಅವಕಾಶವಿಲ್ಲ. ಅವುಗಳಲ್ಲಿ ಮುಖ್ಯವಾಗಿ ಮನಸ್ಸಿನ ಕಾಮನೆಗಳನ್ನು ವಿಭಾಗ ಮಾಡಿದರು.

. ಇಂದ್ರಿಯಕಾಮ
. ಅಂತಃಕಾಮ
. ಅರ್ಥಕಾಮ
. ಜ್ಞಾನಕಾಮ
. ಮೋಕ್ಷಕಾಮ
. ಋಣಾತ್ಮಕ ವಿಧಿ ಕಾಮ

ರೀತಿಯ ಕಾಮಗಳೂ ತನ್ನ ಪ್ರತ್ಯೇಕ ಗುಣ, ವೃತ್ತಿ, ಧರ್ಮ ಹೊಂದಿ ಒಂದು ನ್ಯಾಯಬದ್ಧ ಚೌಕಟ್ಟಿನಲ್ಲಿ ವ್ಯವಹರಿಸಬೇಕು. ಅದನ್ನು ಮೀರಿದರೆ ಅಪಾಯ ಖಂಡಿತ. ಮೊದಲಾಗಿ ಋಣಾತ್ಮಕ ವಿಧಿಕಾಮವೆಂಬ ವಿಚಾರ ಮಂಡಿಸಿ ನಂತರ ಅದರ ಪೂರಕತೆಯೊಂದಿಗೆ ವಿವರಿಸುತ್ತೇನೆ.

ಒಂದು ಜೀವಿ, ಅದು ಯಾವುದೇ ಆಗಿರಬಹುದು, ಅದಕ್ಕೆ ಜನ್ಮ ಋಣ ಕಾರಣ ಮಾತ್ರ. ಹಾಗಾಗಿ ಜನ್ಮಕಾರಣವಾದ ಋಣ ತೀರಿಸಲು ನಿಯಮಿತ ಋತುಮಾನ ಹೊಂದಿ ಮನೋ+ಇಂದ್ರಿಯ ಕಾಮಾರ್ಥಗಳಿಂದ ವ್ಯವಹರಿಸಿ ತನ್ನ ಪ್ರತಿಸೃಷ್ಟಿಯ ಪ್ರಯತ್ನ. ಅದೂ ಒಂದು ರೀತಿಯ ಋಣಾತ್ಮಕ ಕಾಮ. ಇಲ್ಲಿ ಮಾನವ ಹೊರತುಪಡಿಸಿ ಇತರೆ ಜೀವಿಗಳಿಗೆ ಗಂಡು ಹೆಣ್ಣು ಲಿಂಗಭೇದ ಮಾತ್ರ. ಆದರೆ ಮಾನವನಿಗೆ ನಿರ್ಬಂಧವಿದೆ. ಇಲ್ಲಿ ಭಾವನಾತ್ಮಕ ಸಂಬಂಧವಿದೆ. ಹೆಣ್ಣು-ಗಂಡು ಹೊರತುಪಡಿಸಿದ ಅಣ್ಣ, ತಮ್ಮ, ಭಾವ, ಮಾವ, ತಂದೆ, ಅಜ್ಜ, ಮಿತ್ರ, ಭರ್ತಾ ಎಂಬ ವಿಧ. ಅದರಲ್ಲಿ ಭರ್ತಾ ಮಾತ್ರ ಋಣಕಾರಕ ಕಾಮಕ್ಕೆ ಅರ್ಹ. ಅದು ಬಿಟ್ಟು ಇತರೆ ಪ್ರಭೇದದಲ್ಲಿ ವ್ಯವಹರಿಸಿದರೆ ಮಾನವೀಯ ಮೌಲ್ಯ ನಾಶ ಖಂಡಿತ. ಹಾಗಾಗಿ ಹೆಣ್ಣು-ಗಂಡುಗಳಿಗೆ ಋಣಾತ್ಮಕ ಇಂದ್ರಿಯ ತೋಷವು ಬದ್ಧತೆಯಲ್ಲಿಯೇ ಇರಬೇಕೆಂದು ಧರ್ಮಶಾಸ್ತ್ರ ವಿಧಿಸಿತು.

ಇದಕ್ಕೆ ಕಾರಣ ವಿವರಣೆ ನೋಡೋಣ. ಪ್ರಾದೇಶಿಕ ವಾತಾವರಣ ಹೊಂದಿ ಜೀವಿಗಳಲ್ಲಿ ಕಾಮ ಅಂದರೆ ಇಂದ್ರಿಯ ಕಾಮವಿರುತ್ತದೆ. ಅದರಲ್ಲಿ ಜಿಹ್ವಾ ಕಾಮ, ನೇತ್ರಕಾಮ, ಶ್ರೋಣಕಾಮ, ಗಂಧಕಾಮ. ಅದರದ್ದಾದ ಮಿತಿಯಲ್ಲಿದ್ದರೂ ಗಡಿದಾಟಲಾಗದಿದ್ದರೂ ಅಂತಹಾ ವಿಪರೀತ ಪರಿಣಾಮಕಾರಿಯಲ್ಲ. ಆದರೆ ಐದನೆಯದಾದ ತ್ವಕ್ಕಾಮವು ಅಪಾಯಕಾರಿ. ಆದರೆ ಹಿಂದೆ ಹೇಳಿದ ಎಲ್ಲಾ ಕಾಮನೆಗಳೂ ತಮ್ಮ ಮಿತಿಯಲ್ಲಿಯೇ ಇರಬೇಕು. ಅದಕ್ಕೆ ಮುಖ್ಯವಾಗಿ ರೀತಿಯ ವಾತಾವರಣ ಮತ್ತು ಪ್ರಾದೇಶಿಕತೆ, ಸಂಸ್ಕೃತಿ ರಚಿಸಿದರು.

. ಉಷ್ಣವಲಯ
. ಸಮಶೀತೋಷ್ಣವಲಯ
. ಶೀತವಲಯ

ಉಷ್ಣವಲಯದಲ್ಲಿ ಪೂರ್ತಾ ನಿರ್ಬಂಧಿತ ಕಾಮವಿರಬೇಕು. ಸಮಶೀತೋಷ್ಣವಲಯದಲ್ಲಿ ಪ್ರಚೋದಕ ಕಾಮ ಹೊರತುಪಡಸಿ ಒಂದು ಮಿತಿಯಲ್ಲಿರಬೇಕು. ಶೀತವಲಯಕ್ಕೆ ಅಂತಹಾ ವಿಶೇಷ ನಿರ್ಬಂಧ ಅಗತ್ಯವಿಲ್ಲ. ಹಾಗಾಗಿ ಮೂರೂ ಪ್ರದೇಶಗಳನ್ನು ದೈವ, ಮಾನಷ, ರಕ್ಷಸ ಸಂಸ್ಕೃತಿ ಎಂದು ವಿಭಾಗಿಸಿದರು. ಇಲ್ಲಿ ಮುಖ್ಯವಾಗಿ ದೈವ ಸಂಸ್ಕೃತಿ ಆಧರಿಸಿ ಒಂದು ಮಾನವೀಯ ಮಡಿವಂತಿಕೆಯ ಶಿಷ್ಟಾಚಾರಗಳೆಂಬ ಒಂದು ಸಿದ್ಧಾಂತ, ಅದು ಉಷ್ಣವಲಯ ಪ್ರದೇಶಕ್ಕೆ ಸೀಮಿತ. ಅಲ್ಲಿ ಮಾನವೀಯ ಮಡಿವಂತಿಕೆ ಸಿದ್ಧಾಂತ ಶ್ರದ್ಧಾಪೂರ್ವಕವಾಗಿ ಆಚರಿಸಲ್ಪಡಬೇಕು. ಅದು ತಪ್ಪಿದರೆ ಅಲ್ಲಿನ ಜನಾಂಗೀಯ ವ್ಯವಸ್ಥೆಯಲ್ಲಿ ಸರ್ವನಾಶ ಖಂಡಿತ.

೨ನೇಯದಾದ ಮಾನುಷ ಪ್ರಭೇದ. ಇದಕ್ಕೆ ಋತು, ಋತುಮಾನ, ಋತುಚಕ್ರ ಆಧರಿಸಿ ಜೈವಿಕ ಸಂಕುಲ ವೃದ್ಧಿ ಸಾಧ್ಯವಾದ್ದರಿಂದ ಅದಕ್ಕೆ ದೈವದ ಕೆಲವೊಂದು ನಿರ್ಬಂಧಗಳು ಇಲ್ಲ. ಆದರೆ ಸ್ವೇಚ್ಛೆಯೂ ಇಲ್ಲ. ಒಂದು ರೀತಿಯ ಒಡಂಬಡಿಕೆ ಆಧರಿಸಿ ವ್ಯವಸ್ಥೆ ಇರುತ್ತದೆ. ಇದು ಮಾನುಷ. ಇಲ್ಲಿ ಏಕಪತ್ನೀವ್ರತ, ಸಹಧರ್ಮಿಣಿಯೊಂದಿಗೆ ಮಾತ್ರ ಜೀವನದ ಎಲ್ಲಾ ಸುಖಧರ್ಮಗಳೂ ಭೋಗ್ಯ. ಆದರೆ ಅನಿವಾರ್ಯವಾದರೆ ಅಲ್ಲಿ ಲಭ್ಯತೆಯು ಇಲ್ಲದಿದ್ದರೆ, ಯಾವುದಾದರೂ ಕೊರತೆಯಾಗಿದ್ದರೆ, ಆಗ ದ್ವಿತೀಯ ವಿವಾಹ. ಹಾಗಂತ ಸ್ವತಂತ್ರತೆ ಇಲ್ಲ. ವೇಶ್ಯಾವೃತ್ತಿ ಇಲ್ಲ. ಗಂಡು-ಹೆಣ್ಣು ಸೀಮಿತ ವ್ಯವಹಾರ. ಅದು ಜಿಹ್ವಾ, ನೇತ್ರ, ಶ್ರೋಣ, ಗಂಧಗಳಾದರೂ ಅಷ್ಟೆ, ಊಟ-ತಿಂಡಿಯಲ್ಲೂ ಕೂಡ ಪತಿಪತ್ನಿ ಅವಿನಾಭಾವ ಸಂಬಂಧವೇ ಉಚ್ಚ ಸಂಸ್ಕೃತಿ.

೩ನೇಯದಾದ ರಾಕ್ಷಸ, ಇಲ್ಲಿ ಅತಿಶೀತವಲಯಕ್ಕೆ ನಿರ್ದೇಶಿಸಿದ್ದರಿಂದ ಅಲ್ಲಿ ಕಾಮ ಸಹಜ ಪ್ರಚೋದಕವಲ್ಲ. ಕಾರಣ ಪ್ರಯತ್ನಪೂರ್ವಕ ಪ್ರಚೋದಕವಾದ್ದರಿಂದ ಎಲ್ಲವೂ ಮುಕ್ತ. ಅಲ್ಲಿಯೂ ಕೆಲ ಮುಖ್ಯ ನಿಬಂಧನೆಗಳಿವೆ.

ಹೀಗೆ ಕೆಲ ಸಾಮಾಜಿಕ ಆರೋಗ್ಯ ಬದ್ಧತೆ ಆಧರಿಸಿ-
. ಊಟ
. ತಿಂಡಿ
. ಆಟ
. ಪಾಠ
. ಮನೋರಂಜನೆ
. ಅಧ್ಯಯನ
. ಸಾಧನೆ
. ಜಪ
. ತಪ
೧೦. ಉಡಿಗೆ
೧೧. ತೊಡಿಗೆ
೧೨. ಅಲಂಕಾರ
೧೩. ವೇಷ
೧೪. ಭೂಷಣ
೧೫. ಗೃಹಣ
೧೬. ವಿರೇಚನ
೧೭. ಪ್ರಮೋಚನ
೧೮. ಭೋಗ
೧೯. ಭಾಗ್ಯ
೨೦. ಸಂಗ್ರಹ
೨೧. ದಾನ
೨೨. ಕರ್ಮ
೨೩. ಋಣ
೨೪. ಸಂಸ್ಕಾರ

ಎಂಬ ೨೪ ರೀತಿಯ ವಿಶ್ಲೇಷಣಾತ್ಮಕವಾಗಿ ವಿಶೇಷವಾಗಿ ಮಾನವನಿಗೆ ಜೀವನದಲ್ಲಿ ನಿರ್ಬಂಧ ವಿಧಿಸಲ್ಪಟ್ಟಿದೆ. ಅದು ಖಂಡಿತಾ ಅನುಲ್ಲಂಘನೀಯ. ಉಲ್ಲಂಘಿಸಿದರೆ ಆಪತ್ತು ಖಂಡಿತ. ಅಲ್ಲದೆ ಪ್ರಾದೇಶಿಕತೆ ವಿಭಾಗಿಸಿದರು.

. ಕರಾವಳೀ ತೀರ ಪ್ರದೇಶ
. ಮುಖಜಭೂಮಿ ಪ್ರದೇಶ
. ನದೀತೀರ ಪ್ರದೇಶ
. ಮಲೆನಾಡು ಪ್ರದೇಶ
. ಕಣಿವೆ ಪ್ರದೇಶ
. ಪರ್ವತ ಪ್ರದೇಶ

ಹೀಗೆ ೬ ರೀತಿಯಲ್ಲಿ ವಿಭಾಗಿಸುತ್ತಾ ಅಲ್ಲಲ್ಲಿಗೆ ಹೊಂದಿದಂತೆ ಆಹಾರ, ವಿಹಾರ, ಆಟ, ಪಾಠ, ನೋಟಗಳಿಗೆ ಸೀಮಾರೇಖೆ ವಿಧಿಸಿದರು. ಅದರಲ್ಲಿ ಉತ್ತಮ ಪ್ರದೇಶವೆಂದರೆ ನದೀತಟ. ನಮ್ಮ ಎಲ್ಲಾ ಸಂಸ್ಕೃತಿಗಳೂ ಜೀವತಳೆದದ್ದು ನದೀತಟದಲ್ಲಿ. ಎರಡನೆಯದ್ದು ಸ್ವಲ್ಪ ಪ್ರಚೋದಕತೆ ಪ್ರಾದೇಶಿಕತೆಯನ್ನು ಹೊಂದಿದ ಮುಖಜಭೂಮಿ (ಅಂದರೆ ಸಂಗಮ ಪ್ರದೇಶ). ಮೂರನೆಯದಾಗಿ ಕರಾವಳೀ ತೀರ. ನಾಲ್ಕನೆಯದು ಮಲೆನಾಡು. ಐದನೆಯದು ಕಣಿವೆ ಪ್ರದೇಶ. ಆರನೆಯದು ಪರ್ವತಪ್ರದೇಶ. ಹೀಗೆ ಕ್ರಮವಾಗಿ ತನ್ನ ಸೃಷ್ಟಿ ಸಮತೋಲನ, ಶಕ್ತತೆ, ಪ್ರಬುದ್ಧತೆ, ಜ್ಞಾನಗಳು ವೃದ್ಧಿಯಾಗುತ್ತವೆ ಎಂದು ಮೀಮಾಂಸ ಹೇಳುತ್ತದೆ. ಅದನ್ನು ಅರ್ಥಮಾಡಿಕೊಳ್ಳದ ಈ ಜನ ಏನೇನೋ ಏನಕ್ಕೇನೋ ಮಾಡ ಹೋದರೆ ಒಟ್ಟಾಗಿ ಒಂದೇ ಬಾರಿಗೆ ತಮ್ಮೆಲ್ಲಾ ಜೀವನವನ್ನು ನಾಶಮಾಡಿಕೊಳ್ಳುವುದು ಖಂಡಿತ. ಏಡ್ಸ್‍ನಂತಹ ಖಾಯಿಲೆ ಮುಕ್ತತೆಯಂದಲೇ ಪ್ರಾಪ್ತವಾದದ್ದು ಎಂಬ ಸತ್ಯ ವೈಜ್ಞಾನಿಕವಾಗಿ ಸಿದ್ಧಪಡಿಸಿದ್ದಲ್ಲವೆ?

ಉದಾಹರಣೆಗೆ ಮಸ್ಲಿಂ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಬುರ್ಕಾ ಪದ್ಧತಿ. ಅವರ ಧರ್ಮದ ಆಚರಣೆಯದಾದ ಪ್ರದೇಶ ಅತೀ ಉಷ್ಣವಲಯ. ಆದ್ದರಿಂದ ಅಲ್ಲಿ ಯಾವುದೇ ಪ್ರಚೋದಕತೆ ಅವಕಾಶವಿಲ್ಲ. ಪೂರಕತೆ ಮಾತ್ರ ಮಾನ್ಯ. ಅಲ್ಲಿ ವೇಶ್ಯಾವಾಟಿಕೆ ಅಮಾನ್ಯ. ಆದರೆ ಬೇಕಿದ್ದರೆ ಬಹುಪತ್ನಿಯನ್ನು ಪಡೆಯಲಿ. ಅದರರ್ಥ ನಿರ್ಬಂಧಿತ ಬಿಗಿತ. ಪತ್ನಿಯ ಹೊರತುಪಡಿಸಿ ಬೇರೆ ರೀತಿಯಲ್ಲಿ ಕಾಮನೆಗಳಲ್ಲಿ ತೀರಿಕೆ ಇಲ್ಲ. ಅಂದರೆ ಊಟ, ತಿಂಡಿ, ಮನೋರಂಜನೆ, ಆಟ, ಪಾಠ, ವಿಚಾರ, ದಾನ, ಧ್ಯಾನ, ಪೂಜಾ, ವಿನಿಯೋಗ ಎಂಬ  ಯಾವುದೇ ಐಹಿಕ ಭೋಗಗಳಿದ್ದರೂ ಪತ್ನಿಯ ಹೊರತುಪಡಿಸಿ ಇಲ್ಲ. ಇದು ಧರ್ಮಶಾಸ್ತ್ರ. ಸಾಮಾಜಿಕ ಆರೋಗ್ಯವನ್ನು ಆಧರಿಸಿಯೇ ಇಷ್ಟೆಲ್ಲಾ ದೀರ್ಘಚಿಂತನೆ ಮಾಡಿದ್ದಾಗಿದೆ. ಹೀಗಿರುವಾಗ ಈಗೀಗ ಭಾರತಕ್ಕೆ ಕಾಲಿಟ್ಟ ವಿದೇಶೀ ಸಂಸ್ಕೃತಿ ಪಬ್ ಇತ್ಯಾದಿಗಳನ್ನು ಪ್ರಶ್ನಿಸುವ ಅಧಿಕಾರ ಭಾರತೀಯರಿಗಿಲ್ಲವೆ? ಅದು ಎಷ್ಟು ಅನಾಗರೀಕವೆಂದು ಚಿಂತಿಸೋಣ.

ಆಮೋದ ಪ್ರಮೋದಗಳೆಂಬ ಎರಡು ವಿಧದ ಮುಖ್ಯ ವಿಭಜಿತ ಮನೋರಂಜನೆಗಳು. ಈ ಆಟ, ನೃತ್ಯ, ಸಂಗೀತ, ಕಲಾಪ್ರದರ್ಶನಗಳೆಲ್ಲಾ ಪ್ರಮೋದ ವರ್ಗದಲ್ಲಿ ಬರುತ್ತದೆ. ಆಮೋದ ವರ್ಗದಲ್ಲಿ ತೀರ್ಥಯಾತ್ರಾ, ದೇವದರ್ಶನ, ಪ್ರಕೃತಿದರ್ಶನ, ರಥಯಾತ್ರಾ, ಗಂಗೋದ್ಧರಣ, ಯಾಗ, ಯಜ್ಞ, ಉತ್ಸವಗಳು ಬರುತ್ತವೆ. ಮೊದಲನೆಯದಾದ ಪ್ರಮೋದಗಳು ಆಟ, ನಾಟಕ, ನೃತ್ಯ, ಸಂಗೀತ, ಕಲಾ ಪ್ರದರ್ಶನದಲ್ಲಿ ಬರೇ ನೋಟಕವಾದರೆ ಹೆಚ್ಚಿನ ನಿರ್ಬಂಧನೆ ಇಲ್ಲ. ಆದರೆ ಅದರಲ್ಲಿ ಪಾತ್ರಧಾರಿ ಆಗುವುದಾದಲ್ಲಿ ಪತ್ನಿಯೊಂದಿಗೆ ಅಥವಾ ಅವಳ ಉಪಸ್ಥಿತಿಯಲ್ಲಿ ಅನುಮತಿಯೊಂದಿಗೆ ಭಾಗವಹಿಸಬೇಕೆಂದಿದೆ. ಅದೇ ಎರಡನೆಯ ವರ್ಗದ ಆಮೋದಗಳು ಪತ್ನಿಯ ಹೊರತುಪಡಿಸಿ ಇಲ್ಲವೇ ಇಲ್ಲ. ಪತ್ನಿಯೇ ಇರಬೇಕು. ಪತ್ನಿ ಇಲ್ಲದೆ ಅವು ಯಾವುದೂ ಸಾರ್ಥಕವಲ್ಲ, ನಿಷೇಧಿತ. ಇಲ್ಲಿ ವಿದೇಶೀ ಸಂಸ್ಕೃತಿಯಲ್ಲಿ ಕುಡಿದು ಬೇಕಾಬಿಟ್ಟಿ ಕುಣಿಯುವುದು, ಇಷ್ಟಬಂದಂತೆ ಹಾಡುವುದು, ನಾಟಕವೆಂಬ ಹೆಸರಿನಲ್ಲಿ ಅಶ್ಲೀಲತೆ ಪ್ರದರ್ಶನ, ನೃತ್ಯವೆಂದರೆ ಅಂಗಾಂಗ ಕುಣಿಸುವುದು, ಕಲೆ ಎಂದರೆ ವಿಚಿತ್ರ, ವಿಕರಾಳ, ಹಿಂಸಾತ್ಮಕವಾದರೂ ಆದೀತು! ಇದು ವಿದೇಶೀ ಸಂಸ್ಕೃತಿ.

ಇವೆಲ್ಲಾ ಭಾರತೀಯ ಸಂಸ್ಕೃತಿಗೆ ಖಂಡಿತಾ ನಿಷೇಧ. ಕೇವಲ ಕಾರಿನ ಕೀ ಬದಲಾವಣೆ ಮಾಡಿ ತಾತ್ಕಾಲಿಕ ಹೆಂಡತಿಯರನ್ನು ಆರಿಸುವ ಪದ್ಧತಿ ಯಾವ ದೇಶಕ್ಕೆ ಮಾನ್ಯವಾದೀತು? ಅಂತಹಾ ಸಂಸ್ಕೃತಿ ಭಾರತಕ್ಕೆ ಬೇಕೆ? ಅದು ಖಂಡಿತಾ ಭವಿಷ್ಯದ ಅಪಾಯ. ಇಂತಹಾ ಪಬ್, ಕೆಲ ಹುಚ್ಚು ದಿನಾಚರಣೆ, ರಾತ್ರಿ ನೃತ್ಯ, ಬ್ಯಾಲೆ ನೃತ್ಯ ಇತ್ಯಾದಿಗಳೆಲ್ಲ ಈ ಪರಿಸರಕ್ಕೆ ಮಾನ್ಯವಲ್ಲ. ಅದನ್ನು ಖಂಡಿಸ ಹೊರಟವರಿಗೆ ಕಾನೂನಿನ ದಂಡದಿಂದ ಶಿಕ್ಷೆ ವಿಧಿಸುವುದು ಧರ್ಮಕ್ಕೆ ಮಾಡುವ ಅಪಚಾರ. ಸಂವಿಧಾನಾತ್ಮಕ ಹಕ್ಕು ಎಂದು ವಿಶ್ಲೇಷಿಸುವ ಈ ಜನ ಸಂವಿಧಾನವನ್ನ ತಿರುಚುತ್ತಾರೆ ಅಷ್ಟೆ. ಇಂತಹಾ ಮೂರ್ಖ, ಭಂಡ ಕಲ್ಪನೆ ಇಲ್ಲದ ಕಾಲದಲ್ಲಿ ದೇಶೀಯ ಚಿಂತನೆಯ ಹರಿಕಾರರಿಂದ ರಚಿಸಲ್ಪಟ್ಟ ಸಂವಿಧಾನದಲ್ಲಿ ಇದನ್ನು ನಿಷೇಧಿಸದಿಲ್ಲದಿರಬಹುದು. ಆದರೆ ಭಾರತೀಯರಿಗೆ ಸ್ವಲ್ಪವಾದರೂ ಬುದ್ಧಿ ಇದೆಯೆಂದು ತಿಳಿದ ಸಂವಿಧಾನ ಶಿಲ್ಪಿಗಳು ಅದನ್ನೂ ವಿಶ್ಲೇಷಿಸಿಲ್ಲ. ಆದರೆ ಇಲ್ಲಿನ ಕಲೆ, ಸಂಸ್ಕೃತಿ, ಆಚರಣೆಗೆ ಪೂರ್ಣ ಸ್ವಾತಂತ್ರ್ಯ ಅಂದರೆ ಏನು ಬೇಕಾದರೂ ಮಾಡಿ ಪೂರ್ಣ ಸ್ವಾತಂತ್ರ್ಯವೆಂದು ಅರ್ಥವಲ್ಲವೆಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಇಂತು
ಕೆ.ಎಸ್. ನಿತ್ಯಾನಂದ 

No comments:

Post a comment