Skip to main content

Posts

Showing posts from December, 2013

ಉಚಥ್ಯ ಋಷಿವರೇಣ್ಯರ ಗಣಿತ ಸಮೀಕರಣಗಳು - ೧

ಋಗ್ವೇದ ಮಂಡಲ -೧, ಸೂಕ್ತ - ೧೬೧ರಲ್ಲಿ ಉಚಥ್ಯ ಋಷಿವರೇಣ್ಯರು ತಮ್ಮ ಸಂಶೋಧನಾ ಅನುಭವವನ್ನು ಗಣಕೀಕರಿಸಿ ಇಂತೆಂದಿದ್ದಾರೆ:
ಯಾವುದಾವುದು ಕೇಳು ಯಾವುದರೊಳಗೊಂದು ಅದಾವುದೋ ಭಾವಿಸಿದರದರೊಳಗೆ ಬೀದಿಯಿದೆ ಹಾದಿಯಿದೆ ನಾದುವುದು | ಮೇದಿಯ ಒಳಗೆ ಜೀವರ ಶೋಧಿಸಿದರದರರ್ಥ ಸತ್ಯವ ಕಾಂಬ ವೇದಿಯಿದೆ ಅದುವೆ ನಾಟಕ ರಂಗಭೂಮಿ ಕಾಣೈ ತಿರುಕ ||
        ಒಟ್ಟು ೧೪ ಮಂತ್ರಗಳ ಮುಖೇನ ಜಗತ್ತಿನ ಭಿನ್ನ ಭಿನ್ನವಾಗಿ ಕಾಣುವ ವಿಚಿತ್ರ ಪ್ರಪಂಚದ ಮೂಲದಲ್ಲಿ ಮುಖ್ಯವಾಗಿ ಒಂದು ಸೂತ್ರ ಅಳವಡಿಸಲ್ಪಟ್ಟಿದೆ. ಅದೇ ಬೇರೆ ಬೇರೆಯಾಗಿ ಕಾಣುವುದಕ್ಕೆ ಕಾರಣ. ಆದರೆ ಮಾನವರಲ್ಲಿಯೇ ಭಿನ್ನತೆಯನ್ನು ಪ್ರಪಂಚ ಕಾಣುತ್ತಿದೆ. ಆದರೆ ಉಚಥ್ಯರು ಸಕಲ ಜೀವಿಗಳಲ್ಲೂ ಒಂದು ಏಕತೆ ಇದೆ ಅದನ್ನರ್ಥಮಾಡಿಕೊಳ್ಳಲು ಹಿಂದೆ ಉದಾಹರಿಸಿದ ಸೂತ್ರ ಬಳಸಿರಿ ಎಂದಿದ್ದಾರೆ.


"ಆಹುಸ್ತೇ ತ್ರೀಣಿ ಬಂಧನಾನಿ ತ್ರೀಣಿತ ಆಹುರ್ದಿವಿ ಬಂಧನಾನಿ ತ್ರೀಣ್ಯಪ್ಸು ತ್ರೀಣ್ಯಂತಃ ಸಮುದ್ರೇ "||
ಎಂಬುದು ಉಚಥ್ಯರ ಅಭಿಮತ. ಅದರ ಸೂತ್ರದ ಒಟ್ಟು ಸರಳ ಅರ್ಥ ಹೀಗಿದೆ- ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಮುಖ್ಯವಾಗಿ ೩ ಕಾರಣವಿರುತ್ತದೆ. ಆ ಕಾರಣವೆಂಬುದೇ ಈ ಜೀವನಬಂಧನ. ಅಂದರೆ ಕರ್ಮ + ಋಣ + ಯೋಗ ಎಂಬ ಮೂರರಿಂದಾಗಿ ಜೀವ ಜಗತ್ತು ನಿರಂತರವಾಗಿರುತ್ತದೆ. ಆ ಬಂಧನ ಬಿಡಿಸಿಕೊಳ್ಳುವ ಜಾಣ್ಮೆಯನ್ನು ಜೀವಿಗಳು ತಪ್ಪಿಯೂ ಮಾಡಲಾರವು. ಹಾಗಾಗಿಯೇ ಜೀವ = ನೀರು, ಕಾಲ = ಮಧ್ಯ, ಆದಿ, ಅಂತ್ಯ. ಮಾರ್ಗ ಸಮಯೋಜಿತವಾದ ಜೀವನ ಸಾಗರ ಅ…

ಶ್ರಾದ್ಧ ಕರ್ಮ, ಪಿಂಡ-ತರ್ಪಣಗಳು, ನಂಬಿಕೆಯ ಭದ್ರ ಬುನಾದಿ

ಶ್ರಾದ್ಧ ಕರ್ಮದ ಉದ್ದೇಶವೇನು? ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಅಮರತ್ವ. ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು?
ಸಾಮಾನ್ಯವಾಗಿ ವೈದಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಅವರ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕ? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ …

ಅಗಸ್ತ್ಯರ ಅದ್ಭುತ ವೈಜ್ಞಾನಿಕ ಸಂಶೋಧನೆಗಳು - ೧

“ಕಯಾ ಶುಭಾ ಸವಯಸಃ ಸನೀಳಾಃ” ಎಂದಿದ್ದಾರೆ ಅಗಸ್ತ್ಯರು. ನಮ್ಮೀ ಭಾರತ ಭೂಮಿಯಲ್ಲಿ ಲೋಕ ಹಿತಕರವಾದ ಬಡವರ, ದೀನರ, ಏಳ್ಗೆಗಾಗಿ ಶ್ರಮಿಸಿದ ಸರ್ವರನ್ನೂ ಸಮಾನದೃಷ್ಟಿಯಿಂದ ಕಂಡ ಆದರ್ಶ ವ್ಯಕ್ತಿಗಳಲ್ಲಿ ಎತ್ತರದಲ್ಲಿರುವವರು “ಅಗಸ್ತ್ಯರು”. “ಕಸ್ಯ ಬ್ರಹ್ಮಾಣಿ” “ಕೋ ಅಧ್ವರೇ” “ಕೇನ ಮಹಾ ಮನಸಾ”“ಅಹಮೇತಾ ಮನವೇ ವಿಶ್ವಶ್ಚಂದ್ರಾಃ”ಇವೆಲ್ಲಾ ಅಗಸ್ತ್ಯರ ಎತ್ತರದ ಮನಸ್ಥಿತಿಯ ದ್ಯೋತಕಗಳು. ಅವರ ಕೆಲವೊಂದು ಸಮೀಕರಣಗಳನ್ನು ಉದಾಹರಿಸುತ್ತೇನೆ.
ಋಗ್ವೇದ ಮಂಡಲ ೧, ಸೂಕ್ತ ೧೬೫, ಮಂತ್ರ ೧೩
ಕೋನ್ವತ್ರ ಮರುತೋ ಮಾಮಹೇವಃ ಪ್ರಯಾತನ ಸಖೀಙ್ ರಚ್ಛಾ ಸಖಾಯಃ | ಮನ್ಮಾನಿ ಚಿತ್ರಾ ಅಪಿವಾತಯಂತ ಏಷಾಂ ಭೂತ ನವೇದಾ ಮ ಋತಾನಾಮ್ ||
ಈ ಜಗದ ಋತವ ನರಿತವ ಮನುಜ ಕೇಳ್ ಸಾಗರದಿ ಈಜುತಿದೆ ನಾವೆ ದೂರದಿ ದಡದಿ ನಿಂತಿಹ ಮನುಜ ನದರ ಈಜು ಕೋಲನು ಎತ್ತಿ ನಾವಿಕ ಮೀಟುತಿರೆ ಜಲದಂಕ ತೆರೆಯಂಕದಳತೆಯಲಿ ಮೇಲಿರೆ | ಈಂಕಾರದಕ್ಷರದ ಸ್ವರದ ಮೇಲಣ ಭಾರನಾದೆಯಾ ಹೇರದೂರ ಈಕ್ಷಿಸಿಯೇ ಲೆಕ್ಕ ಹಾಕಲುಬಹುದು ಆಳವೆಷ್ಟು ಹರಿವೆಷ್ಟು ಈಡೆಷ್ಟು ಎಂಬುದಕೆ ನೀರಿಗಿಳಿಯಲು ಬೇಡ ಲೆಕ್ಕ ಹಾಕಿಯೇ ತಿಳಿಯಬಹುದು ಜಾಣಾ ||
ಒಂದು ನಾವೆಯು ದೂರ ಸಮುದ್ರದಲ್ಲಿ ತೇಲುತ್ತಿದ್ದರೆ ದಡದ ತೆರೆಗಳ ಲೆಕ್ಕ ಆಧರಿಸಿ ದಡದಲ್ಲಿರುವ ಮರ್ತ್ಯನು ನಾವೆಯಲ್ಲಿರುವ ಹೇರೆಷ್ಟು, ದೂರವೆಷ್ಟು, ನಾವಿಕರೆಷ್ಟು, ಅವರ ಮೀಟು ಗೋಲೆಷ್ಟು, ಹುಟ್ಟೆಷ್ಟು, ವೇಗವೆಷ್ಟು, ಎಲ್ಲವನ್ನೂ ಕೇವಲ ಕಣ್ಣೋಟದಿಂದಲೇ ಅಳೆದು ನಿಖರವಾಗಿ ಹೇಳಬಹುದೆನ್ನುತ್ತಾರೆ ಅ…

ಡಾರ್ವಿನ್ ವಿಕಾಸ ವಾದ ಸರಿಯೇ? ಮಂಗನಿಂದ ಮಾನವನೇ?

ಮಂಗ ಮತ್ತು ಮನುಷ್ಯವೆರಡು ಸಮಕಾಲೀನ. ಮಂಗನಿಂದ ಮನುಷ್ಯನಾದದ್ದಲ್ಲ. ಡಾರ್ವಿನ್ ವಾದ ಸರಿಯಿಲ್ಲವೆಂದು ಎಂದೋ ವೈಜ್ಞಾನಿಕ ವಲಯದಲ್ಲಿ ಬಿದ್ದು ಹೋಗಿದೆ. ಅಂತರ್ಜಾಲದಲ್ಲಿ ಹುಡುಕಿ ನೋಡಿ ಎಷ್ಟೆಷ್ಟು ವಿರೋಧಾಭಾಸಗಳಿವೆ ಎಂದು ನಿಮಗೇ ತಿಳಿದುಬರುತ್ತದೆ. ಆದರೆ ವೈಧಿಕ ಭೌತಶಾಸ್ತ್ರದಲ್ಲಿ ಗೊಂದಲವಿಲ್ಲ. ಒಂದು ಕರ್ಮವನ್ನು ನಿರ್ವಹಿಸುವುದಕ್ಕೆ ಯಾವ ರೂಪ ಬೇಕೋ ಆ ರೂಪ ಧಾರಣೆಯಾಗುತ್ತದೆ ಎನ್ನುತ್ತದೆ. ಉದಾ:- ಹುಲ್ಲು ಕೊಯ್ಯಲು ಕತ್ತಿ, ತರಕಾರಿ ಹೆಚ್ಚಲು ಈಳಿಗೆ ಮಣೆ. ಅದು ಬಿಟ್ಟು ಮಂಗನು ತಾನು ಮನುಷ್ಯನಾಗಬೇಕು ಎಂದುಕೊಂಡರೆ ಹಾಗಾಗುವುದಿಲ್ಲ. ಅದಕ್ಕಾದ ಕರ್ಮವಿರಬೇಕು.
ಪಂಚಭೂತಾತ್ಮಕ ಸೃಷ್ಟಿ ಎನ್ನುವ ಒಂದು ಭಾಗದ ವಿವರಣೆಯು ಸತತ ಐದು ವರ್ಷಗಳಅಗ್ನ್ಯಾವೈಷ್ಣವೀ ಯಾಗದಲ್ಲಿ ಕಂಡುಬಂದ ಸತ್ಯ ವಿಚಾರಗಳನ್ನು ತಿರುಕ ಸಂಹಿತಾ ಎಂಬ ಸಂಪುಟಗಳಲ್ಲಿ ಪ್ರಕಟಿಸಿದ್ದೇವೆ. ಇನ್ನು 3 ಭಾಗದ ಜಗತ್ ಸೃಷ್ಟಿಯ ನಿಯಮಗಳನ್ನು ಹೇಳುತ್ತದೆ. ವಿಚಾರ ಒಂದೇಯಾದರೂ, ಬೇರೆ ಬೇರೆ ಕೋನಗಳಲ್ಲಿ ಚಿಂತಿಸಲಾಗಿದೆ. ಸಮಾನ್ಯವಾಗಿ 4 ಭೂತಗಳ ಪರಿಚಯ ಮಾತ್ರ ನಮಗಿರುವುದು. 5ನೇಯದರ ಪರಿಚಯ ನಮಗಿಲ್ಲ. ಇದೆ ಎಂಬ ಕಲ್ಪನೆ ಮಾತ್ರ ಇರುವಂತಹದ್ದು. ಆಕಾಶದ ಕಲ್ಪನೆಯಿದೆ ಬಿಟ್ಟರೆ ಅದರ ವ್ಯಾಪ್ತಿಯ ಬಗ್ಗೆ ಪೂರ್ಣ ಮಾಹಿತಿ ಇಲ್ಲ.
ಆಕಾಶ ವ್ಯಾಪ್ತಿಯಾದಂತಹಾ ಯಾವುದೋ ಒಂದು ಮೂಲ ಚೈತನ್ಯಕ್ಕೊಂದು ಇಚ್ಛೆ/ಅಪೇಕ್ಷೆ/ಕುತೂಹಲ/ಬೇಕು/ಪ್ರಶ್ನೆ ಹುಟ್ಟುತ್ತದೆ. ಈ ರೀತಿಯಾದ ಇಚ್ಛೆ ಉತ್ಪತ್ತಿಯಾದಾಗ, ಮೂ…