Skip to main content

Posts

Showing posts from August, 2013

Importance of Shantis done during 60, 70, 80 & 90 years for Human

ಉಗ್ರರಥ ಶಾಂತಿ:- ೬೦ನೇ ವರ್ಷಕ್ಕೆ
ಕೇಳು ಮನುಜನೇ ನಿನಗೆ ಷೋಡಶಕರ್ಮಗಳ ಸಂಸ್ಕಾರ ಮಾನವನಾಗಿ ಬದುಕಲು ತಾಳು ಅದರಿಂದ ಜೀವನಕೆ ತಳಹದಿಯು ಜೀವನದಿ ಪಕ್ವತೆಯ ಪಡೆದು ಬಾಳು ಹಸನಾಗಲು ಬೇಕು ಕೇಳೈ ಉಗ್ರರಥ, ಭೀಮರಥ, ವಿಜಯರಥ, ಸಹಸ್ರಚಂದ್ರದರ್ಶನವೆಂಬ ಸಂಸ್ಕಾರಗಳೂ ಹೇಳಿಕೊಳ್ಳುವ ಜೀವನದ ಸಾಧನೆಯು ನಿನಗುಂಟೆ ಜೀವನರಥ ನಿನ್ನಯ ಬಾಳು ವ್ಯರ್ಥವಾಗದಿರಲೆಂದು ಹಾರೈಸಿ ಈ ಸಂಸ್ಕಾರಗಳ ರೂಪಿಸಿದರಾಗ ಆತ್ಮನು ಕೋಳು ಹೋಗದರಲೆಂದು ಉಗ್ರರಥನಾಗು ನೀನೀಗ ನಿನ್ನಯ ಆತ್ಮೋದ್ಧಾರ ಚಿಂತನೆಯಲ್ಲಿ ನಿರತನಾಗೆಂದೂ || ೧ ||
ಭೀಮರಥ ಶಾಂತಿ:- ೭೦ನೇ ವರ್ಷಕ್ಕೆ
ಭೀಮನಹುದೇ ನೀನು ದೃಢಭಕ್ತಿಯೊಳು ದೇವನಲಿ ಚಿತ್ತವ ನೆಲೆಗೊಳಿಪ ಭೀಮಭಕ್ತಿಯು ಬೇಕು ಜೀವನದ ಅನಿವಾರ್ಯತೆಯಪರಾಧ ವಿಪಾಕವಾಗಲು ನೀನು ಭೀಮಭಕ್ತಿಯಲಿ ಸತತ ಧೈವಚಿಂತನೆ ಮನದ ಪಶ್ಚಾತ್ತಾಪ, ಕಾಯ ಪ್ರಾಯಶ್ಚಿತ್ತ ರೋಗಾದಿಗಳ ಭೋಗಲಾಲಸೆಯ ಬಿಡಲೂ ಭೀಮನಂತಿರಬೇಕು ಪ್ರಾಪ್ತಿಯನು ಬಳಸಿ ಆಸೆಯನು ಬಿಟ್ಟು ನಿಶ್ಚಲನಾಗಿದ್ದು ಭೀಮಕಾಯವಿರಲಿ ನಿನಗೆ ಇನ್ನೇನು ಫಲ ಜೀವಿತದಿ ನಿನ್ನರಿವು ಮೂಡದಿರೆ ಭೀಮರಥಶಾಂತಿಯನ ಹತ್ತೇಳು ವರುಷಕ್ಕೆ ಆಚರಿಸಿ ಕರ್ಮವಿಪಾಕಗೊಳಿಸಲು ಸನುಮತದ ಮಾರ್ಗವಿದು ಕಾಣೋ || ೨ ||
ವಿಜಯರಥಶಾಂತಿ:- ೮೦ನೇ ವರ್ಷಕ್ಕೆ
ಜಯನಹುದು ಈ ಲೋಕದೊಳು ನಿನ್ನಾತ್ಮ ನೀನಲ್ಲವೆಂದೆನಬೇಡ ವಿ ಜಯರಥನಾಗು ನೀ ವಿಜಯಿಯಹುದೈ ಲೋಕಮುಖಕೆ ನನ್ನ ಜೀವನ ವಿ ಜಯ ಪತಾಕೆಯಪ್ಪುದು ನೀನದರಿಂದ ಸುದರ್ಶನನಪ್ಪೆ, ಗುರುವಪ್ಪೆ, ಪಿತನಪ್ಪೆ ಲೋಕಕೆ ನೀನೇ ವಿಜಯೀ ಜಯಿಸು ಈ…