Sunday, 30 March 2014

ಕನಕದಾಸರು ವರ್ಣಿಸಿದ ಗೃತ್ಸಮದ ಋಷಿವರೇಣ್ಯರ ಗಣಿತ ಸೂತ್ರಗಳು - ೪

ಕೊನೆಯದಾಗಿ ಗೃತ್ಸವದರು ಮಾನವ ಜೀವನ ಪ್ರವರ್ತನೆ ಹೇಗಿರಬೇಕು? ಹೇಗಿದರೆ ಸುಲಭ ಸುಖ, ಉನ್ನತಿ, ಶ್ರೇಯ ಪ್ರೇಯಗಳು ಲಭ್ಯವಗುತ್ತವೆ ಎನ್ನುತ್ತಾ ಆ ಸಂಬಂಧಿ ಒಂದು ವಿಶೇಷ ಗಣಿತ ಸೂತ್ರವನ್ನು ತಿಳಿಸಿದರು. ಅದನ್ನು ಮೂರು ಸಮೀಕರಣಗಳಲ್ಲಿ ಹೇಳಿದ್ದಾರೆ. ಅರ್ಥಮಾಡಿಕೊಂಡರೆ ಲೋಕವೆಲ್ಲಾ ದೇವಮಯ, ಯಾವುದೇ ದುರಿತ ದೋಷಗಳಿರುವುದಿಲ್ಲ. ಸರ್ವವೂ ಸದಾಶಿವ, ಶುಭವೆಂದರು. ಅದು ಹೀಗಿದೆ:

ಋಗ್ವೇದ ಮಂಡಲ ೨, ಸೂಕ್ತ ೪೦, ಮಂತ್ರ ೨-೫
इ॒मौ दे॒वौ जाय॑मानौ जुषन्ते॒मौ तमां॑सि गूहता॒मजु॑ष्टा ।
आ॒भ्यामिन्द्र॑: प॒क्वमा॒मास्व॒न्तः सो॑मापू॒षभ्यां॑ जनदु॒स्रिया॑सु ॥  
सोमा॑पूषणा॒ रज॑सो वि॒मानं॑ स॒प्तच॑क्रं॒ रथ॒मवि॑श्वमिन्वम् ।
वि॒षू॒वृतं॒ मन॑सा यु॒ज्यमा॑नं॒ तं जि॑न्वथो वृषणा॒ पञ्च॑रश्मिम् ॥  
दि॒व्य१॒॑न्यः सद॑नं च॒क्र उ॒च्चा पृ॑थि॒व्याम॒न्यो अध्य॒न्तरि॑क्षे ।
ताव॒स्मभ्यं॑ पुरु॒वारं॑ पुरु॒क्षुं रा॒यस्पोषं॒ वि ष्य॑तां॒ नाभि॑म॒स्मे ॥   
विश्वा॑न्य॒न्यो भुव॑ना ज॒जान॒ विश्व॑म॒न्यो अ॑भि॒चक्षा॑ण एति ।
सोमा॑पूषणा॒वव॑तं॒ धियं॑ मे यु॒वाभ्यां॒ विश्वा॒: पृत॑ना जयेम ॥    

ಸಕಲ ಜೀವಿಗಳಲ್ಲಿ ಶ್ರೇಷ್ಠವಾದ ಜನ್ಮವೇ ಮಾನವ ಜನ್ಮ. ಅದರ ಉನ್ನತಿ, ಅಂದರೆ ಆತ್ಮೋನ್ನತಿಯೇ ಗುರಿ. ಈ ಗುರಿಯತ್ತ ಸಾಗುವ ಕೆಲ ವಿಶೇಷ ಸೂತ್ರಗಳೇ ಈ ಗಣಿತ ಸಮೀಕರಣಗಳು. ಇವುಗಳ ಬಗ್ಗೆ ನಾನು ಕನ್ನಡದಲ್ಲಿ ಬರೆಯುವುದಕ್ಕಿಂತ ಜೀವನ ರಹಸ್ಯವನ್ನು ಮಹಾಭಕ್ತರಾದ ಕನಕದಾಸರ ಮಾತಿನಲ್ಲಿಯೇ ಕೇಳೋಣ. ಅವರ ಕೆಲವು ಮಾತುಗಳನ್ನು ಇಲ್ಲಿ ಉದಾಹರಿಸುತ್ತೇನೆ.೧) ದೀಪ ಕರದಲಿ ಪಡಿದು ಕಾಣದೆ
ಕೂಪದಲಿ ಬಿದ್ದಂತೆ ವೇದ ಮ
ಹೋಪನಿಷದರ್ಥಗಳ ನಿತ್ಯದಿ ಪೇಳುವರೆಲ್ಲ |
ಶ್ರೀಪವನಮುಖವಿನುತನಮಲಸು
ರೂಪಗಳ ವ್ಯಾಪಾರ ತಿಳಿಯದೆ
ಪಾಪಪುಣ್ಯಕೆ ಜೀವಕರ್ತೃವ ಕರ್ತೃ ಹರಿಯೆಂದು | ೧೩೩ | ಕನಕದಾಸರು

೨) ಪರಮ ವಿಷ್ಣು ಸ್ವತಂತ್ರ ಮಾಯಾ
ತರುಣಿವಕ್ಷಃಸ್ಥಲ ನಿವಾಸಿಯು
ಸರಸಿಜೋದ್ಭವ ಪವನರೀರ್ವರು ಸಚಿವರೆನಿಸುವರು
ಸರುವ ಕರ್ಮಗಳಲ್ಲಿ ತತ್ಪ್ರಯ
ರುರಗಭೂಷನ ಹಂಕೃತಿ ತ್ರಯ
ಕರಸದಮರೇಂದ್ರಾರ್ಕದಿಂದ್ರಿಯಪರಿನಿಸುವರು | ೧೩೪ | ಕನಕದಾಸರು

೩) ಈ ದಿವೌಕಸರಂತೆ ಕಲಿ
ಮೊದಲಾದ ದೈತ್ಯರು ಸರ್ವದೇಹದಿ
ತೋದಕರು ತಾವಾಗಿ ವ್ಯಾಪಾರಿಗಳ ಮಾಡುವರೂ |
ವೇಧನಂದದಿ ಕಲಯಹಂಕಾ
ರಾಧಿಪಾಧಮ ಮಧುಕೈಟಭ
ಕ್ರೋಧಿ ಶಂಬರಮುಖರು ಮನಸಿಗೆ ಸ್ವಾಮಿಯೆನಿಸುವರು | ೧೩೫ | ಕನಕದಾಸರು

೪) ದೇವತೆಗಳೋಪಾದಿ ನಿತ್ಯದ
ಲೇವ ಮಾಡಿಸೈ ನಾಮದಿಂದಲಿ
ಯಾವದಿಂದ್ರಿಯಗಳೊಳು ವ್ಯಾಪಾರ ಮಾಡುವರು |
ಸೇವಕರ ಸೇವಾನುಗುಣಫಲ
ವೀವ ನೃಪನಂದದಲಿ ತನ್ನ ಸ್ವ
ಭಾವ ಸ್ವಾತಂತ್ರಿಯವ ಭಾಗವ ಮಾಡಿ ಕೊಟ್ಟ ಹರೀ | ೧೩೬ | ಕನಕದಾಸರು

೫) ಈ ವಿಧದಿ ಸ್ವಾತಂತ್ರಿಯತ್ವವ
ದೇವ ಮಾನವ ದಾನವರೊಳು ರ
ಮಾ ವಿನೋದಿ ವಿಭಾಗ ಮಾಡಿಟ್ಟಿಲ್ಲೆ ರಮಿಸುವನು |
ಮೂವರೊಳಗಿದ್ದವರ ಕರ್ಮವ
ತಾ ವಿಚಾರವ ಗೈಸದಲೆ ಕ
ಲ್ಯಾವಸಾನಕೆ ಕೊಡುವನಾ ಹರಿಯವರವರ ಗತಿಯ | ೧೩೭ | ಕನಕದಾಸರು

೬) ಆಲಯದೊಳಗಿಪ್ಪ ದೀಪ
ಜ್ವಾಲೆವರ್ತಿಗಳನುಸರಿಸಿ ಜನ
ರಾಲಿಗೊಪ್ಪುವ ತೆರದಿ ಹರಿ ತಾ ತೋರ್ಪ ಸರ್ವತ್ರ |
ಕಾಲಕಾಲದಿ ಶ್ರೀಧರಾ ದು
ರ್ಗಾ ಲಲನೆಯರ ಕೂಡಿ ಸುಖಮಯ
ಲೀಲೆಗೈಯಲು ತ್ರಿಗುಣ ಕಾರ್ಯಗಳಿಹವು ಜೀವರಿಗೆ | ೧೩೮ | ಕನಕದಾಸರು

೭) ಇಂದ್ರಿಯಗಳಿಂ ಮಾಳ್ಪ ಕರ್ಮ
ದ್ವಂದ್ವಗಳ ತನಗರ್ಪಿಸಲು ಗೋ
ವಿಂದ ಪುಣ್ಯವ ಕೊಂದು ಪಾಪವ ಭಸ್ಮವನೆ ಮಾಳ್ಪ |
ಇಂದಿರೇಶನು ಭಕ್ತಜನರನು
ನಿಂದಿಸುವ ರೊಳಗಿಪ್ಪ ಪುಣ್ಯವ
ತಂದು ತನ್ನವಗೀವ ಪಾಪವ ನವರಿಗುಣಿಸುವನು | ೧೩೯ | ಕನಕದಾಸರು

೮) ಹೊತ್ತು ಹೊತ್ತಿಗೆ ಪಾಪಕರ್ಮ ಪ್ರ
ವರ್ತನೆಯ ನಿಂದಿಸದೆ ತನಗಿಂ
ದುತ್ತಮರ ಗುಣಕರ್ಮಗಳ ಕೊಂಡಾಡದಲೆ ಇಪ್ಪ |
ಮರ್ತ್ಯಂರಿಗೆ ಗೋ ಬ್ರಾಹ್ಮಣ ಸ್ತ್ರೀ
ಹತ್ಯ ಮೊದಲಾದಖಿಳ ದೋಷಗ
ಳಿತ್ತಪನು ಸಂದೇಬಡೆಸಲ್ಲಖಿಳ ಶಾಸ್ತ್ರಮತ | ೧೪೦ | ಕನಕದಾಸರು

೯) ತಿಮಿರ ತರಣಿಗಳೇಕೆ ದೇಶದಿ
ಸಮನಿಸಿಪ್ಪವೆ ಎಂದಿಗಾದರು
ಭ್ರಮಣ ಛಳಿ ಬಿಸಿಲಂಜಿಕೆಗಳುಂಟೇನು ಪರ್ವತಕೆ |
ಅಮಿತ ಜೀವರೊಳಿದ್ದು ಲಕುಮಿ
ರಮಣ ವ್ಯಾಪಾರಗಳ ಮಾಡುವ
ಕಮಲಪತ್ರ ಸರೋವರಗಳೊಳಗಿಪ್ಪ ತೆರನಂತೆ | ೧೪೧ | ಕನಕದಾಸರು

        ಈ ರೀತಿಯಲ್ಲಿ ಕನಕದಾಸರು ಹಿಂದೆ ಸೂಚಿಸಿದ ಮಂತ್ರ ರಹಸ್ಯವನ್ನು ಗೂಢವಾಗಿ ಹೇಳುತ್ತಾ ಎಲ್ಲವೂ ಹರಿಮಯ, ನಿಮ್ಮ ನಿಮ್ಮ ಋಣ ಕರ್ಮಗಳಿಗಾಧರಿಸಿ ನಿಮ್ಮನ್ನು ಹರಿಗರ್ಪಿಸಿಕೊಳ್ಳಿರಿ ಎಂದರು. ಅದರಲ್ಲಿ ಒಂದೇ ಶಬ್ದ ಹರಿ ಎಂದರೇನು ನೋಡಿರಿ: ತಟ್ಟೆ ಹಂಡೆ, ಬ್ರಾಹ್ಮಣ, ನೀರು, ನಾವೆ, ನರಿ, ಹಂದಿ, ಸಿಂಹ, ಆನೆ, ನವಿಲು, ಕಂಬ, ಮೂರ್ತಿ, ಕ್ಷುಧೆ, ಬಾಧೆ, ಉದಯ, ಅಸ್ತ, ಸಾವು, ಹುಟ್ಟು, ನಾಯಿ, ಗಿಡುಗ, ಕಾಗೆ, ಇವೆಲ್ಲಾ ಅಲ್ಲದೆ ಇನ್ನೂ ಕೆಲ ಶಬ್ದಗಳು ಹರಿ ಶಬ್ದಾರ್ಥಗಳೇ! ರಾಕ್ಷಸರೂ, ದಾನವರೂ, ಮಾನವರೂ, ಉರಗ, ಸಿದ್ಧ, ಸಾಧ್ಯ, ಕಿಂಪುರುಷಗಣಗಳೂ ಹರಿ ಶಬ್ದ ವಾಚಕವೇ. ನಿಮ್ಮ ವಿವೇಕ ಮತಿಗಳಿಗೆ ಆಧರಿಸಿ ಯೋಚಿಸಿಕೊಂಡಲ್ಲಿ ವಿಪುಲಾರ್ಥ ಕೊಡುವ ಈ ವಿಶೇಷ ಮಂತ್ರಪುಂಜಗಳು ಗಣಿತ ಸಮೀಕರಣವೂ ಹೌದು. ಹಾಗಾಗಿ ಹರಿ = ಕಪಿಲ. ಇಂತಹಾ ವಿಶೇಷ ಅರ್ಥಪ್ರದವೀವ ಮಂತ್ರ ಪುಂಜಗಳೂ ಶ್ಲೋಕ  ಗೀತೆಗಳೇ ನಮ್ಮ ಸಾಹಿತ್ಯದಲ್ಲಿ ಅಪಾರ. ಅವೆಲ್ಲಾ ಜೀವನ ಮಾರ್ಗದರ್ಶಕವೇ. ಅದನ್ನು ಕನಕಾದಿ ದಾರ್ಶನಿಕರು ಉದಾಹರಿಸಿರುತ್ತಾರೆ. ಹಾಗೇ ಕೊನೆಯಲ್ಲಿ ಗೃತ್ಸಮದರು ಸಕಲ ಜೀವರಾಶಿಗಳನ್ನದ್ಧರಿಸಿ, ಜೀವಗಳಲ್ಲಿರುವ ಜೀವಪಕ್ಷಿ ಅಥವಾ ಪ್ರಾಣದೇವತೆಯನ್ನು ಕುರಿತು ಹೀಗೆ ಹೇಳಿದ್ದಾರೆ:

ಋಗ್ವೇದ ಮಂಡಲ ೨, ಸೂಕ್ತ ೪೩, ಮಂತ್ರ ೧, ೩

प्र॒द॒क्षि॒णिद॒भि गृ॑णन्ति का॒रवो॒ वयो॒ वद॑न्त ऋतु॒था श॒कुन्त॑यः ।
उ॒भे वाचौ॑ वदति साम॒गा इ॑व गाय॒त्रं च॒ त्रैष्टु॑भं॒ चानु॑ राजति ॥ 
उ॒द्गा॒तेव॑ शकुने॒ साम॑ गायसि ब्रह्मपु॒त्र इ॑व॒ सव॑नेषु शंससि ।
वृषे॑व वा॒जी शिशु॑मतीर॒पीत्या॑ स॒र्वतो॑ नः शकुने भ॒द्रमा व॑द वि॒श्वतो॑ नः शकुने॒ पुण्य॒मा व॑द ॥  
आ॒वदँ॒स्त्वं श॑कुने भ॒द्रमा व॑द तू॒ष्णीमासी॑नः सुम॒तिं चि॑किद्धि नः ।
यदु॒त्पत॒न्वद॑सि कर्क॒रिर्य॑था बृ॒हद्व॑देम वि॒दथे॑ सु॒वीरा॑: ॥  


        ಈ ಜಗತ್ತಿನ ಸಕಲ ಜೀವಿಗಳೂ ನಿರಂತರ ಸಚ್ಚಿಂತನೆ, ಸತ್ಸಂಗ, ಸದ್ವಿಚಾರ, ಸತ್ಪ್ರವರ್ತನೆಗಳಿಂದೊಡಗೂಡಿ ನಿರಂತರ ಒಳ್ಳೆಯ ಮಾತನ್ನೇ ಆಡುತ್ತಿದ್ದರೆ ಲೋಕವುಂಟಾಗುತ್ತದೆ ಎನ್ನುತ್ತಾ ಗೃತ್ಸಮದರು ತಮ್ಮ ಮಂಡಲದ ಕೊನೆಯಲ್ಲಿ ಹೇಳಿರುತ್ತಾರೆ. ಇಂತಹಾ ವಿಶಾಲ, ವಿಚಾರಪ್ರದ, ವಿಶೇಷ ವಿಷಯಗಳನ್ನು ಮಾನವನಾದವನು ಅರ್ಥಮಾಡಿಕೊಂಡು ಪರಿಪೂರ್ಣನಾದಲ್ಲಿ ಮಾತ್ರಾ ಆತ್ಮೋನ್ನತಿ ಸಾಧ್ಯವೆಂದು ತಿಳಿಯಬಹುದು. ಇನ್ನು ಮೂರನೆಯ ಮಂಡಲ ವಿಶ್ವಾಮಿತ್ರ ಮಂಡಲದ ಕೆಲ ವಿಶೇಷ ಗಣಿತ ಸೂತ್ರಗಳನ್ನು ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.

No comments:

Post a Comment