Saturday, 5 April 2014

ಋಗ್ವೇದದಲ್ಲಿ ವಿಶ್ವಾಮಿತ್ರರ ಕೆಲ ಗಣಿತ ಸಂಶೋಧನೆಗಳು

ಜಗದ ಮೇಲಣ ರಾಜರೆಲ್ಲರು ಹೋರಿ ಸತ್ತರು
ಜಾಗದಾಸೆಯಲಿ ಕಡಿದು ಬಡಿದಾಡಿದರು ಆದರೇನ್
ಜಗದ ದೇವತೆಯೆಂಬ ಬಿರುದ ಪಡೆಯಲಿಲ್ಲಾಗಲೂ ಬೇಡಿ ತಿಂದಾ ಬ್ರಾಹ್ಮಣನೇ ಭೂಸುರನಾದನೂ ||

        ಈ ಪ್ರಪಂಚದಲ್ಲಿ ಗುಣ ಪ್ರಧಾನವಾಗಿ ಸಾಮಾಜಿಕ ಜನಜೀವನ ಒಂದು ವ್ಯವಸ್ಥಿತವಾಗಿ ನಡೆದುಕೊಂಡೇ ಬರುತ್ತಿದೆ. ಅದರಲ್ಲಿ ಆಳುವವರು, ಪ್ರಜೆಗಳು, ದೇಶಭಕ್ತರು, ರಾಜದ್ರೋಹಿಗಳು, ದೇಶದ್ರೋಹಿಗಳು, ಕುಟಿಲರೂ, ಕ್ರೂರರೂ, ದರೋಡೆ ಕೋರರೂ, ಕಳ್ಳಕಾಕರೂ, ಕೊಲೆಗಾರರೂ, ಹುಚ್ಚರೂ, ಮೂರ್ಖರೂ ಎಲ್ಲರೂ ಆಗಲೂ ಈಗಲೂ ಇದ್ದಾರೆ. ಆದರೆ ಏನಕೇನ ಪ್ರಕಾರೇಣ ಕೆಟ್ಟದ್ದು ಸುಖ ಕಂಡಿರಬಹುದೇ ವಿನಃ ನಿರಂತರ ತನ್ನ ಭದ್ರಸ್ಥಾನದಲ್ಲಿ ನೆಲೆ ನಿಂತದ್ದು ಪ್ರಧಾನವಾಗಿ ಸಾತ್ವಿಕ ಗುಣ ಮಾತ್ರ. ರಾಜಸವಾಗಲೀ ತಾಮಸವಾಗಲೀ ತಾತ್ಕಾಲಿಕ ಗೆಲುವನ್ನು ಪಡೆದಿರಬಹುದು. ನಂತರ ನಾಶವಾಗಿ ಸಾತ್ವಿಕ ಪ್ರಜ್ವಲಿಸಿದೆ. ಅದೆಲ್ಲಾ ಲಕ್ಷಾಂತರ ವರ್ಷಗಳಿಂದ ನಡೆದು ಬಂದ ಇತಿಹಾಸ. ಅದನ್ನೇ ಸೋದಾಹರಣ ಸಹಿತವಾಗಿ ಆಕರ್ಷಕವಾಗಿ ಅದ್ಭುತವಾಗಿ ಚಿತ್ರಿಸಿದ್ದೇ ಪುರಾಣಗಳು.
       
        ಪುರಾಣಗಳ ಕೆಲ ಒಳ್ಳೆ ಪಾತ್ರಗಳು, ಕೆಲವು ದುಷ್ಟ ಪಾತ್ರಗಳು, ಕೆಲವು ಕ್ರೂರ ಪಾತ್ರಗಳು, ಕೆಲವು ಕುಟಿಲ ಪಾತ್ರಗಳು. ಒಂದಿಷ್ಟು ಕಾಲಮಾನ, ಹೆಸರಿಸತಕ್ಕಂತಹಾ ಒಂದು ವಂಶ, ಆ ವಂಶೀಕ ಹಿನ್ನೆಲೆ, ಒಂದು ವಿಶಿಷ್ಟ ಘಟನೆ, ಒಂದು ಉದ್ದೇಶ, ಒಂದು ಬೋಧನೆ, ಇವುಗಳೆಲ್ಲಾ ಸೇರಿ ಒಂದು ಪುರಾಣವಾಗುತ್ತದೆ. ಅಲ್ಲೆಲ್ಲಾ ಕಾಣುವುದು ಕೆಟ್ಟದ್ದರ ವಿಜೃಂಭಣೆ ನಂತರ ನಾಶ. ಒಳ್ಳೆಯದರ ಸಂತುಷ್ಠಿ, ಧೈವಸ್ತುತಿ; ಇದೇ ಪುರಾಣ. ಈ ಪುರಾಣ ಪುರುಷರಲ್ಲಿ ಒಬ್ಬನಾದ ಸೂರ್ಯವಂಶದ ದೊರೆ "ಕೌಶಿಕ" ಅರ್ಥಾತ್ "ವಿಶ್ವಾಮಿತ್ರ". ಆತನ ಮತ್ತು ಆತನ ಹಿಂಬಾಲಕರ ಸಾಧನೆಯ ಫಲವೇ ಈ ಋಗ್ವೇದದ ಮೂರನೆಯ ಮಂಡಲ. ಇದೊಂದು ವಿಶಿಷ್ಟವಾದ ದ್ವಂದ್ವದ ಹುತ್ತ. ಮೊದಲು ಅಸ್ತ್ರ ಶಸ್ತ್ರಗಳು, ತೋಳ್ಬಲ, ಶೌರ್ಯ, ಸಾಹಸಗಳು, ವಿಕ್ರಮದ ಹೆಚ್ಚುಗಾರಿಕೆ ಬಲವೇ ಕ್ಷಾತ್ರವೆಂದು ನಂಬಿದ ಮೂರ್ಖವಾದದಲ್ಲಿ ಮುಳುಗಿದ ಕ್ಷತ್ರಿಯ ಸಮೂಹ ನಿರಂತರ ಕಾದಾಟ, ಹೋರಾಟ, ಯುದ್ಧ, ಕೊಲೆ ಇತ್ಯಾದಿಗಳೇ ತುಂಬಿ ಹೋಗಿದ್ದ ಈ ಭರತ ಭೂಮಿಯ ಕಣ್ಣೀರಿಗೆ ಕರಗಿ ಮಹಾವಿಷ್ಣು ಪರಶು ಧಾರಿಯಾಗಿ ಕ್ಷತ್ರಿಯ ಕುಲವನ್ನೆಲ್ಲಾ ನಾಶ ಮಾಡಿದರೂ ಅಳಿದುಳಿದ ಈ ಕೌಶಿಕನಂತಹವರು ಮತ್ತೂ ತಮ್ಮ ಮೂರ್ಖವಾದದಿಂದಲೇ ಪ್ರವರ್ಧಮಾನರಾದರು. ಅವೆಲ್ಲದರ ಇತಿಹಾಸವೆಂಬಂತೆ ಈ ಮಂಡಲದ ಮಂತ್ರಗಳು ದಾರಿ ತೋರುತ್ತವೆ. ವಿಶ್ವಾಮಿತ್ರನು ತಾನು ಸರ್ವಶಕ್ತನೆಂದೂ, ತನ್ನ ಸೇನಾಬಲ ಅಜೇಯವೆಂದೂ, ಲೋಕವೆಲ್ಲಾ ತನ್ನ ಅಧೀನದಲ್ಲಿದೆಯೆಂದೂ ಭಾವಿಸಿದ್ದ. ಅಲ್ಲೆಲ್ಲಾ ಅವನ ಎಣಿಕೆ ಸರಿಯಿರಲಿಲ್ಲ. ಆದರೆ ಏನಕೇನ ಪ್ರಕಾರದಲ್ಲಿ ಅವನು ವಿಜಯಿಯಾಗಿದ್ದ. ಯಾವಾಗ ಅವನನ್ನು ವಿರೋಧಿಸಿ ನಿಂತ ಶಕ್ತಿ ಪ್ರಬಲವಾಯ್ತೋ ಅದರ ಇಚ್ಛಾಶಕ್ತಿಯ ಮುಂದೆ ವಿಶ್ವಾಮಿತ್ರ ನಿರ್ಬಲನಾದ, ಅವನ ಲೆಕ್ಕಾಚಾರ ತಪ್ಪಿತು. ಅದರ ಬಗ್ಗೆ ಒಂದಿಷ್ಟು ವಿವರಣೆ ಕೊಡುತ್ತೇನೆ. ನಂತರ ವಿಜಯಶಾಲಿಯಾದ ಲೆಕ್ಕಾಚಾರ ವಿವರಿಸುತ್ತೇನೆ; ಕೇವಲ ಮಂತ್ರರೂಪದಲ್ಲಿ ಋಗ್ವೇದ ಮಂಡಲ ೩ ಸೂಕ್ತ ೮, ೯, ೧೪, ೨೨, ೨೩, ೩೦.

ಋಗ್ವೇದ ಮಂಡಲ ೩, ಸೂಕ್ತ ೮
अ॒ञ्जन्ति॒ त्वाम॑ध्व॒रे दे॑व॒यन्तो॒ वन॑स्पते॒ मधु॑ना॒ दैव्ये॑न ।
यदू॒र्ध्वस्तिष्ठा॒ द्रवि॑णे॒ह ध॑त्ता॒द्यद्वा॒ क्षयो॑ मा॒तुर॒स्या उ॒पस्थे॑ ॥೧ ||
समि॑द्धस्य॒ श्रय॑माणः पु॒रस्ता॒द्ब्रह्म॑ वन्वा॒नो अ॒जरं॑ सु॒वीर॑म् ।
आ॒रे अ॒स्मदम॑तिं॒ बाध॑मान॒ उच्छ्र॑यस्व मह॒ते सौभ॑गाय ॥೨ ||
उच्छ्र॑यस्व वनस्पते॒ वर्ष्म॑न्पृथि॒व्या अधि॑ ।
सुमि॑ती मी॒यमा॑नो॒ वर्चो॑ धा य॒ज्ञवा॑हसे ॥೩ ||
युवा॑ सु॒वासा॒: परि॑वीत॒ आगा॒त्स उ॒ श्रेया॑न्भवति॒ जाय॑मानः ।
तं धीरा॑सः क॒वय॒ उन्न॑यन्ति स्वा॒ध्यो॒३॒॑ मन॑सा देव॒यन्त॑: ॥೪ ||
जा॒तो जा॑यते सुदिन॒त्वे अह्नां॑ सम॒र्य आ वि॒दथे॒ वर्ध॑मानः ।
पु॒नन्ति॒ धीरा॑ अ॒पसो॑ मनी॒षा दे॑व॒या विप्र॒ उदि॑यर्ति॒ वाच॑म् ॥    ೫ ||
यान्वो॒ नरो॑ देव॒यन्तो॑ निमि॒म्युर्वन॑स्पते॒ स्वधि॑तिर्वा त॒तक्ष॑ ।
ते दे॒वास॒: स्वर॑वस्तस्थि॒वांस॑: प्र॒जाव॑द॒स्मे दि॑धिषन्तु॒ रत्न॑म् ॥೬ ||
ये वृ॒क्णासो॒ अधि॒ क्षमि॒ निमि॑तासो य॒तस्रु॑चः ।
ते नो॑ व्यन्तु॒ वार्यं॑ देव॒त्रा क्षे॑त्र॒साध॑सः ॥    ೭ ||
आ॒दि॒त्या रु॒द्रा वस॑वः सुनी॒था द्यावा॒क्षामा॑ पृथि॒वी अ॒न्तरि॑क्षम् ।
स॒जोष॑सो य॒ज्ञम॑वन्तु दे॒वा ऊ॒र्ध्वं कृ॑ण्वन्त्वध्व॒रस्य॑ के॒तुम् ॥     ೮ ||
हं॒सा इ॑व श्रेणि॒शो यता॑नाः शु॒क्रा वसा॑ना॒: स्वर॑वो न॒ आगु॑: ।
उ॒न्नी॒यमा॑नाः क॒विभि॑: पु॒रस्ता॑द्दे॒वा दे॒वाना॒मपि॑ यन्ति॒ पाथ॑: ॥೯ ||
शृङ्गा॑णी॒वेच्छृ॒ङ्गिणां॒ सं द॑दृश्रे च॒षाल॑वन्त॒: स्वर॑वः पृथि॒व्याम् ।
वा॒घद्भि॑र्वा विह॒वे श्रोष॑माणा अ॒स्माँ अ॑वन्तु पृत॒नाज्ये॑षु ॥೧೦ ||
वन॑स्पते श॒तव॑ल्शो॒ वि रो॑ह स॒हस्र॑वल्शा॒ वि व॒यं रु॑हेम ।
यं त्वाम॒यं स्वधि॑ति॒स्तेज॑मानः प्रणि॒नाय॑ मह॒ते सौभ॑गाय ॥    ೧೧ ||

ಋಗ್ವೇದ ಮಂಡಲ ೩, ಸೂಕ್ತ ೯
सखा॑यस्त्वा ववृमहे दे॒वं मर्ता॑स ऊ॒तये॑ ।
अ॒पां नपा॑तं सु॒भगं॑ सु॒दीदि॑तिं सु॒प्रतू॑र्तिमने॒हस॑म् ॥೧ ||
काय॑मानो व॒ना त्वं यन्मा॒तॄरज॑गन्न॒पः ।
न तत्ते॑ अग्ने प्र॒मृषे॑ नि॒वर्त॑नं॒ यद्दू॒रे सन्नि॒हाभ॑वः ॥೨ ||
अति॑ तृ॒ष्टं व॑वक्षि॒थाथै॒व सु॒मना॑ असि ।
प्रप्रा॒न्ये यन्ति॒ पर्य॒न्य आ॑सते॒ येषां॑ स॒ख्ये असि॑ श्रि॒तः ॥೩ ||
ई॒यि॒वांस॒मति॒ स्रिध॒: शश्व॑ती॒रति॑ स॒श्चत॑: ।
अन्वी॑मविन्दन्निचि॒रासो॑ अ॒द्रुहो॒ऽप्सु सिं॒हमि॑व श्रि॒तम् ॥೪ ||
स॒सृ॒वांस॑मिव॒ त्मना॒ग्निमि॒त्था ति॒रोहि॑तम् ।
ऐनं॑ नयन्मात॒रिश्वा॑ परा॒वतो॑ दे॒वेभ्यो॑ मथि॒तं परि॑ ॥೫ ||
तं त्वा॒ मर्ता॑ अगृभ्णत दे॒वेभ्यो॑ हव्यवाहन ।
विश्वा॒न्यद्य॒ज्ञाँ अ॑भि॒पासि॑ मानुष॒ तव॒ क्रत्वा॑ यविष्ठ्य ॥೬ ||
तद्भ॒द्रं तव॑ दं॒सना॒ पाका॑य चिच्छदयति ।
त्वां यद॑ग्ने प॒शव॑: स॒मास॑ते॒ समि॑द्धमपिशर्व॒रे ॥೭ ||
आ जु॑होता स्वध्व॒रं शी॒रं पा॑व॒कशो॑चिषम् ।
आ॒शुं दू॒तम॑जि॒रं प्र॒त्नमीड्यं॑ श्रु॒ष्टी दे॒वं स॑पर्यत ॥೮ ||
त्रीणि॑ श॒ता त्री स॒हस्रा॑ण्य॒ग्निं त्रिं॒शच्च॑ दे॒वा नव॑ चासपर्यन् । औक्ष॑न्घृ॒तैरस्तृ॑णन्ब॒र्हिर॑स्मा॒ आदिद्धोता॑रं॒ न्य॑सादयन्त ॥೯ ||

ಋಗ್ವೇದ ಮಂಡಲ ೩, ಸೂಕ್ತ ೧೪
आ होता॑ म॒न्द्रो वि॒दथा॑न्यस्थात्स॒त्यो यज्वा॑ क॒वित॑म॒: स वे॒धाः ।
वि॒द्युद्र॑थ॒: सह॑सस्पु॒त्रो अ॒ग्निः शो॒चिष्के॑शः पृथि॒व्यां पाजो॑ अश्रेत् ॥೧ ||
अया॑मि ते॒ नम॑उक्तिं जुषस्व॒ ऋता॑व॒स्तुभ्यं॒ चेत॑ते सहस्वः ।
वि॒द्वाँ आ व॑क्षि वि॒दुषो॒ नि ष॑त्सि॒ मध्य॒ आ ब॒र्हिरू॒तये॑ यजत्र ॥೨ ||
द्रव॑तां त उ॒षसा॑ वा॒जय॑न्ती॒ अग्ने॒ वात॑स्य प॒थ्या॑भि॒रच्छ॑ ।
यत्सी॑म॒ञ्जन्ति॑ पू॒र्व्यं ह॒विर्भि॒रा व॒न्धुरे॑व तस्थतुर्दुरो॒णे ॥೩ ||
मि॒त्रश्च॒ तुभ्यं॒ वरु॑णः सह॒स्वोऽग्ने॒ विश्वे॑ म॒रुत॑: सु॒म्नम॑र्चन् ।
यच्छो॒चिषा॑ सहसस्पुत्र॒ तिष्ठा॑ अ॒भि क्षि॒तीः प्र॒थय॒न्त्सूर्यो॒ नॄन् ॥೪ ||
व॒यं ते॑ अ॒द्य र॑रि॒मा हि काम॑मुत्ता॒नह॑स्ता॒ नम॑सोप॒सद्य॑ ।
यजि॑ष्ठेन॒ मन॑सा यक्षि दे॒वानस्रे॑धता॒ मन्म॑ना॒ विप्रो॑ अग्ने ॥    ೫ ||
त्वद्धि पु॑त्र सहसो॒ वि पू॒र्वीर्दे॒वस्य॒ यन्त्यू॒तयो॒ वि वाजा॑: ।
त्वं दे॑हि सह॒स्रिणं॑ र॒यिं नो॑ऽद्रो॒घेण॒ वच॑सा स॒त्यम॑ग्ने ॥೬ ||
तुभ्यं॑ दक्ष कविक्रतो॒ यानी॒मा देव॒ मर्ता॑सो अध्व॒रे अक॑र्म ।
त्वं विश्व॑स्य सु॒रथ॑स्य बोधि॒ सर्वं॒ तद॑ग्ने अमृत स्वदे॒ह ॥೭ ||

ಋಗ್ವೇದ ಮಂಡಲ ೩, ಸೂಕ್ತ ೨೨
अ॒यं सो अ॒ग्निर्यस्मि॒न्त्सोम॒मिन्द्र॑: सु॒तं द॒धे ज॒ठरे॑ वावशा॒नः ।
स॒ह॒स्रिणं॒ वाज॒मत्यं॒ न सप्तिं॑ सस॒वान्त्सन्त्स्तू॑यसे जातवेदः ॥೧ ||
अग्ने॒ यत्ते॑ दि॒वि वर्च॑: पृथि॒व्यां यदोष॑धीष्व॒प्स्वा य॑जत्र ।
येना॒न्तरि॑क्षमु॒र्वा॑त॒तन्थ॑ त्वे॒षः स भा॒नुर॑र्ण॒वो नृ॒चक्षा॑: ॥೨ ||
अग्ने॑ दि॒वो अर्ण॒मच्छा॑ जिगा॒स्यच्छा॑ दे॒वाँ ऊ॑चिषे॒ धिष्ण्या॒ ये ।
या रो॑च॒ने प॒रस्ता॒त्सूर्य॑स्य॒ याश्चा॒वस्ता॑दुप॒तिष्ठ॑न्त॒ आप॑: ॥     ೩ ||
पु॒री॒ष्या॑सो अ॒ग्नय॑: प्राव॒णेभि॑: स॒जोष॑सः ।
जु॒षन्तां॑ य॒ज्ञम॒द्रुहो॑ऽनमी॒वा इषो॑ म॒हीः ॥    ೪ ||
इळा॑मग्ने पुरु॒दंसं॑ स॒निं गोः श॑श्वत्त॒मं हव॑मानाय साध ।
स्यान्न॑: सू॒नुस्तन॑यो वि॒जावाग्ने॒ सा ते॑ सुम॒तिर्भू॑त्व॒स्मे ॥೫ ||

ಋಗ್ವೇದ ಮಂಡಲ ೩, ಸೂಕ್ತ ೨೩
निर्म॑थित॒: सुधि॑त॒ आ स॒धस्थे॒ युवा॑ क॒विर॑ध्व॒रस्य॑ प्रणे॒ता ।
जूर्य॑त्स्व॒ग्निर॒जरो॒ वने॒ष्वत्रा॑ दधे अ॒मृतं॑ जा॒तवे॑दाः ॥೧ ||
अम॑न्थिष्टां॒ भार॑ता रे॒वद॒ग्निं दे॒वश्र॑वा दे॒ववा॑तः सु॒दक्ष॑म् ।
अग्ने॒ वि प॑श्य बृह॒ताभि रा॒येषां नो॑ ने॒ता भ॑वता॒दनु॒ द्यून् ॥    ೨ ||
दश॒ क्षिप॑: पू॒र्व्यं सी॑मजीजन॒न्त्सुजा॑तं मा॒तृषु॑ प्रि॒यम् ।
अ॒ग्निं स्तु॑हि दैववा॒तं दे॑वश्रवो॒ यो जना॑ना॒मस॑द्व॒शी ॥೩ ||
नि त्वा॑ दधे॒ वर॒ आ पृ॑थि॒व्या इळा॑यास्प॒दे सु॑दिन॒त्वे अह्ना॑म् ।
दृ॒षद्व॑त्यां॒ मानु॑ष आप॒यायां॒ सर॑स्वत्यां रे॒वद॑ग्ने दिदीहि ॥೪ ||
इळा॑मग्ने पुरु॒दंसं॑ स॒निं गोः श॑श्वत्त॒मं हव॑मानाय साध ।
स्यान्न॑: सू॒नुस्तन॑यो वि॒जावाग्ने॒ सा ते॑ सुम॒तिर्भू॑त्व॒स्मे ॥೫ ||

ಋಗ್ವೇದ ಮಂಡಲ ೩, ಸೂಕ್ತ ೩೦
इ॒च्छन्ति॑ त्वा सो॒म्यास॒: सखा॑यः सु॒न्वन्ति॒ सोमं॒ दध॑ति॒ प्रयां॑सि ।
तिति॑क्षन्ते अ॒भिश॑स्तिं॒ जना॑ना॒मिन्द्र॒ त्वदा कश्च॒न हि प्र॑के॒तः ॥೧ ||
न ते॑ दू॒रे प॑र॒मा चि॒द्रजां॒स्या तु प्र या॑हि हरिवो॒ हरि॑भ्याम् ।
स्थि॒राय॒ वृष्णे॒ सव॑ना कृ॒तेमा यु॒क्ता ग्रावा॑णः समिधा॒ने अ॒ग्नौ ॥೨ ||
इन्द्र॑: सु॒शिप्रो॑ म॒घवा॒ तरु॑त्रो म॒हाव्रा॑तस्तुविकू॒र्मिॠघा॑वान् ।
यदु॒ग्रो धा बा॑धि॒तो मर्त्ये॑षु॒ क्व१॒॑ त्या ते॑ वृषभ वी॒र्या॑णि ॥೩ ||
त्वं हि ष्मा॑ च्या॒वय॒न्नच्यु॑ता॒न्येको॑ वृ॒त्रा चर॑सि॒ जिघ्न॑मानः ।
तव॒ द्यावा॑पृथि॒वी पर्व॑ता॒सोऽनु॑ व्र॒ताय॒ निमि॑तेव तस्थुः ॥೪ ||
उ॒ताभ॑ये पुरुहूत॒ श्रवो॑भि॒रेको॑ दृ॒ळ्हम॑वदो वृत्र॒हा सन् ।
इ॒मे चि॑दिन्द्र॒ रोद॑सी अपा॒रे यत्सं॑गृ॒भ्णा म॑घवन्का॒शिरित्ते॑ ॥೫ ||
प्र सू त॑ इन्द्र प्र॒वता॒ हरि॑भ्यां॒ प्र ते॒ वज्र॑: प्रमृ॒णन्ने॑तु॒ शत्रू॑न् ।
ज॒हि प्र॑ती॒चो अ॑नू॒चः परा॑चो॒ विश्वं॑ स॒त्यं कृ॑णुहि वि॒ष्टम॑स्तु ॥೬ ||
यस्मै॒ धायु॒रद॑धा॒ मर्त्या॒याभ॑क्तं चिद्भजते गे॒ह्यं१॒॑ सः ।
भ॒द्रा त॑ इन्द्र सुम॒तिर्घृ॒ताची॑ स॒हस्र॑दाना पुरुहूत रा॒तिः ॥೭ ||
स॒हदा॑नुं पुरुहूत क्षि॒यन्त॑मह॒स्तमि॑न्द्र॒ सं पि॑ण॒क्कुणा॑रुम् ।
अ॒भि वृ॒त्रं वर्ध॑मानं॒ पिया॑रुम॒पाद॑मिन्द्र त॒वसा॑ जघन्थ ॥೮ ||
नि सा॑म॒नामि॑षि॒रामि॑न्द्र॒ भूमिं॑ म॒हीम॑पा॒रां सद॑ने ससत्थ ।
अस्त॑भ्ना॒द्द्यां वृ॑ष॒भो अ॒न्तरि॑क्ष॒मर्ष॒न्त्वाप॒स्त्वये॒ह प्रसू॑ताः ॥    ೯ ||
अ॒ला॒तृ॒णो व॒ल इ॑न्द्र व्र॒जो गोः पु॒रा हन्तो॒र्भय॑मानो॒ व्या॑र ।
सु॒गान्प॒थो अ॑कृणोन्नि॒रज॒ा गाः प्राव॒न्वाणी॑: पुरुहू॒तं धम॑न्तीः ॥೧೦ ||
एको॒ द्वे वसु॑मती समी॒ची इन्द्र॒ आ प॑प्रौ पृथि॒वीमु॒त द्याम् ।
उ॒तान्तरि॑क्षाद॒भि न॑: समी॒क इ॒षो र॒थीः स॒युज॑: शूर॒ वाजा॑न् ॥೧೧ |    |
दिश॒: सूर्यो॒ न मि॑नाति॒ प्रदि॑ष्टा दि॒वेदि॑वे॒ हर्य॑श्वप्रसूताः ।
सं यदान॒ळध्व॑न॒ आदिदश्वै॑र्वि॒मोच॑नं कृणुते॒ तत्त्व॑स्य ॥೧೨ ||
दिदृ॑क्षन्त उ॒षसो॒ याम॑न्न॒क्तोर्वि॒वस्व॑त्या॒ महि॑ चि॒त्रमनी॑कम् ।
विश्वे॑ जानन्ति महि॒ना यदागा॒दिन्द्र॑स्य॒ कर्म॒ सुकृ॑ता पु॒रूणि॑ ॥೧೩ ||
महि॒ ज्योति॒र्निहि॑तं व॒क्षणा॑स्वा॒मा प॒क्वं च॑रति॒ बिभ्र॑ती॒ गौः ।
विश्वं॒ स्वाद्म॒ सम्भृ॑तमु॒स्रिया॑यां॒ यत्सी॒मिन्द्रो॒ अद॑धा॒द्भोज॑नाय ॥೧೪ ||
इन्द्र॒ दृह्य॑ यामको॒शा अ॑भूवन्य॒ज्ञाय॑ शिक्ष गृण॒ते सखि॑भ्यः ।
दु॒र्मा॒यवो॑ दु॒रेवा॒ मर्त्या॑सो निष॒ङ्गिणो॑ रि॒पवो॒ हन्त्वा॑सः ॥೧೫ ||
सं घोष॑: शृण्वेऽव॒मैर॒मित्रै॑र्ज॒ही न्ये॑ष्व॒शनिं॒ तपि॑ष्ठाम् ।
वृ॒श्चेम॒धस्ता॒द्वि रु॑जा॒ सह॑स्व ज॒हि रक्षो॑ मघवन्र॒न्धय॑स्व ॥     ೧೬ ||
उद्वृ॑ह॒ रक्ष॑: स॒हमू॑लमिन्द्र वृ॒श्चा मध्यं॒ प्रत्यग्रं॑ शृणीहि ।
आ कीव॑तः सल॒लूकं॑ चकर्थ ब्रह्म॒द्विष्॒ तपु॑षिं हे॒तिम॑स्य ॥೧೭ ||
स्व॒स्तये॑ वा॒जिभि॑श्च प्रणेत॒: सं यन्म॒हीरिष॑ आ॒सत्सि॑ पू॒र्वीः ।
रा॒यो व॒न्तारो॑ बृह॒तः स्या॑मा॒स्मे अ॑स्तु॒ भग॑ इन्द्र प्र॒जावा॑न् ॥೧೮ ||
आ नो॑ भर॒ भग॑मिन्द्र द्यु॒मन्तं॒ नि ते॑ दे॒ष्णस्य॑ धीमहि प्ररे॒के ।
ऊ॒र्व इ॑व पप्रथे॒ कामो॑ अ॒स्मे तमा पृ॑ण वसुपते॒ वसू॑नाम् ॥೧೯ ||
इ॒मं कामं॑ मन्दया॒ गोभि॒रश्वै॑श्च॒न्द्रव॑ता॒ राध॑सा प॒प्रथ॑श्च ।
स्व॒र्यवो॑ म॒तिभि॒स्तुभ्यं॒ विप्रा॒ इन्द्रा॑य॒ वाह॑: कुशि॒कासो॑ अक्रन् ॥೨೦ ||
आ नो॑ गो॒त्रा द॑र्दृहि गोपते॒ गाः सम॒स्मभ्यं॑ स॒नयो॑ यन्तु॒ वाजा॑: ।
दि॒वक्षा॑ असि वृषभ स॒त्यशु॑ष्मो॒ऽस्मभ्यं॒ सु म॑घवन्बोधि गो॒दाः ॥೨೧ ||
शु॒नं हु॑वेम म॒घवा॑न॒मिन्द्र॑म॒स्मिन्भरे॒ नृत॑मं॒ वाज॑सातौ ।
शृ॒ण्वन्त॑मु॒ग्रमू॒तये॑ स॒मत्सु॒ घ्नन्तं॑ वृ॒त्राणि॑ सं॒जितं॒ धना॑नाम् ॥೨೨ ||

ಈ ಮೇಲಿನ ಮಂತ್ರೋದಾಹರಣೆ ಪೂರ್ವಕ ಕ್ಷಾತ್ರ ಚಿಂತನೆ, ಶಕ್ತಿಯ ಉದ್ಘಾಟನೆ, ಛಲ, ಪ್ರಯತ್ನಶೀಲಗುಣ, ಕ್ಷತ್ರಿಯರಿಗೇ ಹೇಳಿದ ಧನುರ್ವೇದದ ಕೆಲ ಅಂಶಗಳು ವಿವರಿಸಲ್ಪಟ್ಟು ನಂತರ ಅಸ್ತ್ರ ಸ್ವರೂಪವನ್ನು ವಿವರಿಸುತ್ತದೆ. ಸ್ವತಃ ವಿಶ್ವಾಮಿತ್ರ ಏಕಾಂಗಿಯಾಗಿ ಸಾಧಿಸಿದ ಎಲ್ಲಾ ಸಾಧನೆಯ ವಿಚಾರಗಳೂ ಇದರೊಂದಿಗೆ ಸೇರಿರುತ್ತದೆ. ಎಲ್ಲಾ ರೀತಿಯ ಅಸ್ತ್ರಗಳಿವೆ:

೧. ವಜ್ರಾಸ್ತ್ರ
೨. ಸೌರಾಸ್ತ್ರ
೩. ಮಹಾಸೌರಾಸ್ತ್ರ
೪. ತಿಮಿರಾಸ್ತ್ರ
೫. ಆಗ್ನೇಯಾಸ್ತ್ರ
೬. ಐಂದ್ರಾಸ್ತ್ರ
೭. ಜೃಂಭಕಾಸ್ತ್ರ
೮. ಮೋಹನಾಸ್ತ್ರ
೯. ಸರ್ಪಾಸ್ತ್ರ (೮)
    ೯.೧ ವಿಷ
    ೯.೨ ಖಂಡನ
    ೯.೩ ದಂತಿ
    ೯.೪ ಶೂಲ
    ೯.೫ ದೂತಿ
    ೯.೬ ಯಮದೂತಿ
    ೯.೭ ಬಂಧನ
    ೯.೮ ಭದ್ರ
೧೦. ಪರ್ವತಾಸ್ತ್ರ
೧೧. ವಾಯ್ವಾಸ್ತ್ರ
೧೨. ಮೇಘಾಸ್ತ್ರ
೧೩. ವರ್ಷಾಸ್ತ್ರ
೧೪. ಮೃದ್ವಾಸ್ತ್ರ
೧೫. ವೃಶ್ಚಿಕಾಸ್ತ್ರ
೧೬. ಶೂಕಾಸ್ತ್ರ
೧೭. ಧಂಧಾಸ್ತ್ರ
೧೮. ಅಕ್ಷಯಾಸ್ತ್ರ
೧೯. ಶೂಲಾಸ್ತ್ರ
೨೦. ಪಾಶುಪತಾಸ್ತ್ರ
೨೧. ನಾರಾಯಣಾಸ್ತ್ರ
೨೨. ಬ್ರಹ್ಮಶಿರಾಸ್ತ್ರ
೨೩. ಕಾಲಾಸ್ತ್ರ
೨೪. ತೀಕ್ಷ್ಣಶಿರಾಸ್ತ್ರ
೨೫. ವಡವಾಸ್ತ್ರ        ಈ ಎಲ್ಲಾ ಅಸ್ತ್ರಗಳನ್ನೂ ಸಾಧಿಸಿ ಅವುಗಳ ಪ್ರಯೋಗ, ಶತ್ರುನಾಶ, ಉಪಸಂಹಾರಗಳನ್ನು ಸಂಶೋಧಿಸಿ ತನ್ನದ್ದೇ ಕ್ಷಾತ್ರಬಲವನ್ನು ಮೆರೆದ ಧೀಮಂತ. ವಿಶಿಷ್ಟವಾಗಿ ೧೬ ಬಗೆಯಲ್ಲಿ ಆಗ್ನೇಯಾಸ್ತ್ರವನ್ನು ಸಂಶೋಧಿಸಿ ಪ್ರಯೋಗಿಸಿದ ಏಕೈಕ ವೀರ, ಸಾಹಸಿ. ಹಾಗೇ ಉನ್ಮತ್ತನೂ ಹೌದು. ನಿರಂತರ ಯುದ್ಧ ವಿಧ್ಯಾ ಸಂಶೋಧಕ. ವಿಶೇಷವಾಗಿ ಶಿವನಿಂದ ಪರಶು ವಿಧ್ಯೆಯನ್ನೂ; ಜಂಭುಕನಿಂದ ಮುಷ್ಟಿ, ಮುದ್ಗರ, ಶೂರ್ಪ, ನಖ, ತಲ, ಪ್ರಹಾರ, ಎಂಬ ಆರು ವಿಧ ವಿಧ್ಯಾ ನಿಪುಣನಾದ. ದೇಶದೇಶದಲ್ಲಿ ದಿಗ್ವಿಜಯ ಸಾಧಿಸಿದ ಮಹಾನ್ ಕ್ಷತ್ರಿಯ. ಮೇಲೆ ಉದಾಹರಿಸಿದ ಎಲ್ಲಾ ಅಸ್ತ್ರ ವಿಧ್ಯೆಗಳಿಗೂ ಒಂದು ವಿಶಿಷ್ಟ ರೂಪುರೇಷೆಗಳನ್ನು ಕೊಟ್ಟವನು ವಿಶ್ವಾಮಿತ್ರ. ನಂತರ ಅಘೋರ, ದಾಲ್ಭ್ಯ, ಪುಷ್ಪದಂತ, ಪ್ರತ್ಯಂಗಿರಾ, ಛಿನ್ನಮಸ್ತಾ, ದೂಮ್ರ, ಶಕ್ತಿ, ಪಾಶ, ಅಂಕುಶ, ಚಕ್ರ, ಗದಾ, ತೋಮರಗಳೆಂದು ದ್ವಾದಶ ವಿಧ್ಯೆಯನ್ನೂ ಸಾಧಿಸಿ ಅವನ್ನೆಲ್ಲಾ ವಸಿಷ್ಠರಲ್ಲಿ ಪಣಕ್ಕಿಟ್ಟು ಸೋತ.

        ನಂತರ ತನ್ನೆಲ್ಲಾ ಕ್ಷಾತ್ರ ಶಕ್ತಿ ತೀರಾ ಕೇವಲ! ಜಗತ್ತಿನಲ್ಲಿ ಬ್ರಹ್ಮತೇಜಸ್ಸಿನ ಬಲದ ಮುಂದೆ ಮಹಾಕಾಲವೂ ನಗಣ್ಯ!! ಎಂದು ಘೋಷಿಸಿ ತಾನೂ ಕ್ಷಾತ್ರ ಬಿಟ್ಟು ಬ್ರಾಹ್ಮಣನಾಗಿ ಜಪ, ತಪ, ಅಗ್ನಿ ಉಪಾಸನೆ, ಹೋಮ, ಹವನ, ಯಜ್ಞ, ಯಾಗ, ದಾನ ಧರ್ಮ, ಸತ್ಯ ಪರಿಪಾಲನೆ, ಅರಿಷಡ್ವರ್ಗ ನಿರಸನ, ಶಮಾದಿ ಗ್ರಹಣ, ಅಧ್ಯಯನಾದಿ ಷಟ್ಕರ್ಮ ನಿರತನಾಗಿ ಸತತ ಸಂಶೋಧನೆಯಿಂದ ಬ್ರಾಹ್ಮಣತ್ವದ ತುರೀಯ ಸಾಧನೆ - "ಬ್ರಹ್ಮರ್ಷಿ"ಯಾದ. ಅದರ ಹೆಚ್ಚಿನ ವಿವರಗಳೆಲ್ಲಾ ವಿಶ್ವಾಮಿತ್ರ ಮಂಡಲದಲ್ಲಿ ನಾವು ಕಾಣಬಹುದು. ಹಾಗೇ ಅವು ಹೆಚ್ಚಾಗಿ ಗಣಿತ ಸೂತ್ರದ ರೀತಿಯಲ್ಲಿ ಅಡಕವಗಿರುತ್ತವೆ. ಎಲ್ಲಾ ಅಸ್ತ್ರಗಳೂ, ಅದರ ವಿವರಗಳೂ, ಪ್ರಯೋಗ ಉಪಸಂಹಾರಗಳೂ ಸೇರಿರುತ್ತವೆ. ಮಾತ್ರವಲ್ಲ ವ್ಯೂಹ ರಚನೆಯಲ್ಲಿ ಮಹಾನಿಷ್ಣಾತನಾದ ವಿಶ್ವಾಮಿತ್ರನ ಒಂದು ವ್ಯೂಹದ ವಿಚಾರ ಹೇಳುತ್ತೇನೆ ಗಮನಿಸಿ:

ಮಧ್ಯದಲಿ ಮೂರೇಳು ರಥಿಕರು ಆರುದಳ
ಯುದ್ಧ ನಿಪುಣರು ಕೋಣದಲಿದ್ದು ನವಕೋಣ
ದುದ್ದಕು ಧಂಧಶೂಕರು ಬಾಹ್ವೆಯಲಿ ಗಜಪಡೆ ರಾವುತರು ಮುಂಚೂಣಿಯೊಳಗೆ |
ಪದಾತಿಗಳ ಹೇರ ವೃತ್ತಾಗ್ರ ಬಿಂದುವಿನೊಳ್
ಆದಿ ಅಂತ್ಯದಲಿ ನಿಲಿಸೈ ರಥಿಕರನು ಬಿಲ್ವಿಧ್ಯಾದಿ
ಯುದ್ಧ ವಿಧ್ಯೆಗಳಲಿ ಮಹಾರಥಿಗಳ ಸಂರಕ್ಷಣೆಯೊಳಿರಿಸುವುದೇ ಖೇಚರ ವ್ಯೂಹ ||

ಮಂತ್ರರೂಪದಲ್ಲಿ ಯಜುರ್ವೇದದಲ್ಲಿ ಉದಾಹರಿಸಿ ಒಂದು "ಖೇಚರ ವ್ಯೂಹ"ವೆಂಬ ಒಂದು ಉದಾಹರಣೆ ಕೊಟ್ಟಿದ್ದೇನೆ. ಹಾಗೇ ಎಲ್ಲಾ ೧೮ ಬಗೆಯ ಯುದ್ಧ ವ್ಯೂಹ ನಿಪುಣನೆಂದರೆ ವಿಶ್ವಾಮಿತ್ರ ಮಾತ್ರ.

೧. ಚಕ್ರವ್ಯೂಹ
೨. ಕ್ರೌಂಚವ್ಯೂಹ
೩. ನಿಪುಣವ್ಯೂಹ
೪. ಗಾಂದಾರವ್ಯೂಹ
೫. ಗರುಡವ್ಯೂಹ
೬. ಖೇಚರವ್ಯೂಹ
೭. ಪದ್ಮವ್ಯೂಹ
೮. ಶೂರ್ಪವ್ಯೂಹ
೯. ಸಿಂಹವ್ಯೂಹ
೧೦. ಕಾಕವ್ಯೂಹ
೧೧. ಹಂಸವ್ಯೂಹ
೧೨. ಸರ್ಪವ್ಯೂಹ
೧೩. ಬಲವ್ಯೂಹ
೧೪. ಸಾರವ್ಯೂಹ
೧೫. ಶಂಖವ್ಯೂಹ
೧೬. ಎಡವ್ಯೂಹ
೧೭. ಮುಖವ್ಯೂಹ
೧೮. ಮಕರವ್ಯೂಹ

        ಈ ರೀತಿಯ ಹದಿನೆಂಟು ವ್ಯೂಹಗಳನ್ನು ರಚಿಸುವಲ್ಲಿಯೂ ಸೇನಾ ಸಂಯೋಜನೆಯಲ್ಲಿಯೂ ಅತೀ ಶ್ರೇಷ್ಠ "ಮಹಾರಥಿ" ಎಂದರೆ ವಿಶ್ವಾಮಿತ್ರ. ಆದರೆ ಅವೆಲ್ಲ ನಿಪುಣತೆಯೂ ಕೊನೆಯಲ್ಲಿ ನಿಷ್ಫಲವಾದಾಗ ಅವನ ಬಾಯಿಂದ ಹೊರಟ ಉದ್ಗಾರವೇ "ಬ್ರಹ್ಮ ತೇಜೋ ಬಲಂ ಬಲಂ" ಎಂದು. ನಂತರ ಮಂತ್ರಾಸ್ತ್ರಗಳ ಉಪಾಸನೆಯನ್ನೂ ಬಿಟ್ಟು ಕ್ಷಾತ್ರವನ್ನು ತ್ಯಜಿಸಿ ರಾಜ್ಯ, ಕೋಶ, ಮಂತ್ರಿ, ಸೇನೆಗಳನ್ನೂ ದೂರವಿಟ್ಟು ಸತೀಪುತ್ರ ಸಹಿತವಾಗಿ ಅರಣ್ಯ ಪ್ರದೇಶದಲ್ಲಿ ಆಶ್ರಮ ನಿರ್ಮಿಸಿ ತಪೋನಿಷ್ಠನಾಗಿ ಎಲ್ಲಾ ಬ್ರಹ್ಮೋಪಾಸನೆ ಮಾಡುತ್ತಾ "ಬ್ರಹ್ಮಮೇಧ" ಮುಖೇನ ಬ್ರಾಹ್ಮಣತ್ವ ಪಡೆದು ಷಟ್ಕರ್ಮ ನಿರತನಾಗಿ ನಿರಂತರ ಸಾಧನೆಯಿಂದ ಬ್ರಹ್ಮರ್ಷಿಯಾದ. ಲೋಕಕ್ಕೆ ವಿಶಿಷ್ಟವಾದ, ವಿಶೇಷವಾದ ಮತ್ತು ಅಮೂಲ್ಯವಾದ ಸೂರ್ಯನ ಅಥವಾ ಚಿಚ್ಛಕ್ತಿಯನ್ನು ಕುರಿತು ಸಂಯೋಜಿಸಿದ ಗಾಯತ್ರೀ ಮಂತ್ರವನ್ನು ಈ ಲೋಕಕ್ಕೆ ಕೊಟ್ಟು ಕೃತಕೃತ್ಯನಾದ "ವಿಶ್ವಾಮಿತ್ರ"ನಾದ.ಋಗ್ವೇದ ಮಂಡಲ ೩, ಸೂಕ್ತ ೬೨
इ॒मा उ॑ वां भृ॒मयो॒ मन्य॑माना यु॒वाव॑ते॒ न तुज्या॑ अभूवन् ।
क्व१॒॑ त्यदि॑न्द्रावरुणा॒ यशो॑ वां॒ येन॑ स्मा॒ सिनं॒ भर॑थ॒: सखि॑भ्यः ॥೧ ||   
अ॒यमु॑ वां पुरु॒तमो॑ रयी॒यञ्छ॑श्वत्त॒ममव॑से जोहवीति ।
स॒जोषा॑विन्द्रावरुणा म॒रुद्भि॑र्दि॒वा पृ॑थि॒व्या शृ॑णुतं॒ हवं॑ मे ॥ ೨ ||
अ॒स्मे तदि॑न्द्रावरुणा॒ वसु॑ ष्याद॒स्मे र॒यिर्म॑रुत॒: सर्व॑वीरः ।
अ॒स्मान्वरू॑त्रीः शर॒णैर॑वन्त्व॒स्मान्होत्रा॒ भार॑ती॒ दक्षि॑णाभिः ॥     ೩ ||
बृह॑स्पते जु॒षस्व॑ नो ह॒व्यानि॑ विश्वदेव्य । रास्व॒ रत्ना॑नि दा॒शुषे॑ ॥೪ || 
शुचि॑म॒र्कैर्बृह॒स्पति॑मध्व॒रेषु॑ नमस्यत । अना॒म्योज॒ आ च॑के ॥೫ ||
वृ॒ष॒भं च॑र्षणी॒नां वि॒श्वरू॑प॒मदा॑भ्यम् । बृह॒स्पतिं॒ वरे॑ण्यम् ॥ ೬ ||
इ॒यं ते॑ पूषन्नाघृणे सुष्टु॒तिर्दे॑व॒ नव्य॑सी । अ॒स्माभि॒स्तुभ्यं॑ शस्यते ॥೭ ||    
तां जु॑षस्व॒ गिरं॒ मम॑ वाज॒यन्ती॑मवा॒ धिय॑म् । व॒धू॒युरि॑व॒ योष॑णाम् ॥೮ ||    
यो विश्वा॒भि वि॒पश्य॑ति॒ भुव॑ना॒ सं च॒ पश्य॑ति । स न॑: पू॒षावि॒ता भु॑वत् ॥೯ ||
तत्स॑वि॒तुर्वरे॑ण्यं॒ भर्गो॑ दे॒वस्य॑ धीमहि । धियो॒ यो न॑: प्रचो॒दया॑त् ॥    ೧೦ ||
दे॒वस्य॑ सवि॒तुर्व॒यं वा॑ज॒यन्त॒: पुरं॑ध्या । भग॑स्य रा॒तिमी॑महे ॥೧೧ ||   
दे॒वं नर॑: सवि॒तारं॒ विप्रा॑ य॒ज्ञैः सु॑वृ॒क्तिभि॑: । न॒म॒स्यन्ति॑ धि॒येषि॒ताः ॥ ೧೨ ||
सोमो॑ जिगाति गातु॒विद्दे॒वाना॑मेति निष्कृ॒तम् । ऋ॒तस्य॒ योनि॑मा॒सद॑म् ॥    ೧೩ ||
सोमो॑ अ॒स्मभ्यं॑ द्वि॒पदे॒ चतु॑ष्पदे च प॒शवे॑ । अ॒न॒मी॒वा इष॑स्करत् ॥೧೪ ||   
अ॒स्माक॒मायु॑र्व॒र्धय॑न्न॒भिमा॑ती॒: सह॑मानः । सोम॑: स॒धस्थ॒मास॑दत् ॥   ೧೫ ||
आ नो॑ मित्रावरुणा घृ॒तैर्गव्यू॑तिमुक्षतम् । मध्वा॒ रजां॑सि सुक्रतू ॥     ೧೬ ||
उ॒रु॒शंसा॑ नमो॒वृधा॑ म॒ह्ना दक्ष॑स्य राजथः । द्राघि॑ष्ठाभिः शुचिव्रता ॥ ೧೭ ||  
गृ॒णा॒ना ज॒मद॑ग्निना॒ योना॑वृ॒तस्य॑ सीदतम् । पा॒तं सोम॑मृतावृधा ॥    ೧೮ ||


ಈ ಮಂತ್ರಪುಂಜಗಳನ್ನು ಲೋಕಕ್ಕೆ ಕೊಟ್ಟ ಮಹಾನುಭಾವನೀತ. ಅವನಿಗೆ ತ್ರಿಕರಣಪೂರ್ವಕ ನಮಸ್ಕರಿಸುತ್ತಾ ಈ ಮಂಡಲ ವಿವರಣೆ ವಿವರಿಸಲು ನನಗೆ ಅಧಿಕಾರವಿಲ್ಲ. ಗಣಿತಸೂತ್ರದ ಕೆಲ ಮುಖ್ಯ ಅಂಶಗಳು ಅತೀ ಗೌಪ್ಯ. ಹಾಗಾಗಿ ಮಂತ್ರರೂಪ ಮಾತ್ರ ಬರೆಯಲಾಗಿದೆ. ಗಾಯತ್ರೀ ಅನುಷ್ಠಾನದ ಅನಿವಾರ್ಯತೆಯನ್ನು ಮುಂದೆ ಪ್ರತ್ಯೇಕ ಲೇಖನದಲ್ಲಿ ವಿವರಿಸಲಾಗುವುದು. ಮುಂದಿನ ಲೇಖನದಲ್ಲಿ ನಾಲ್ಕನೆಯ ವಾಮದೇವ ಮಂಡಲ ಪ್ರವೇಶಿಸೋಣ. ಈ ಕೊನೆಯಲ್ಲಿ ಕೊಟ್ಟ ಸೂಕ್ತ ಓದಿ, ಪಾರಾಯಣ ಮಾಡಿ, ಅಧ್ಯಯನ ಮಾಡಿ, ಬ್ರಾಹ್ಮಣರಾಗಿ ಎಂದು ಹಾರೈಸುತ್ತೇನೆ. 

- ನಿತ್ಯಾನಂದ ಕೆ. ಎಸ್.
ಅಗಸ್ತ್ಯಾಶ್ರಮ ಗೋಶಾಲೆ, ಬಂದ್ಯೋಡ್, ಕೇರಳ

2 comments:

  1. ಬ್ರಹ್ಮರ್ಷಿ ವಿಶ್ವಾಮಿತ್ರರು ಚಂದ್ರವಂಶದವರು... ಸೂರ್ಯವಂಶಿಗಳಲ್ಲಾ...

    ReplyDelete
  2. ಪೌರಾಣಿಕವಾಗಿ ಅಭಿಪ್ರಾಯ ಭೇದಗಳಿವೆ ಎಂಬುದು ಲೇಖಕರ ಉತ್ತರ. ವಿಶ್ವಾಮಿತ್ರರು ಸವಿತಾ ಗಾಯತ್ರಿಯನ್ನು ಏಕೆ ಅನುಸಂಧಾನ ಮಾಡಿ ಪ್ರಪಂಚಮುಖಕ್ಕೆ ಕೊಟ್ಟರು? ಅಲ್ಲೇ ಇದಕ್ಕೆ ಉತ್ತರವಿದೆ. ಹೆಚ್ಚಿನ ಚರ್ಚೆಗೆ ಲೇಖಕರನ್ನು ಖುದ್ದಾಗಿ ಭೇಟಿಯಾಗಬಹುದು. ಲೇಖಕರು ಪ್ರಸಕ್ತ ದಕ್ಷಿಣಕನ್ನಡದ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಶಾರಧ್ವತ ಯಜ್ಞಾಂಗಣದಲ್ಲಿ ಏಪ್ರಿಲ್ ೩೦ರವರೆಗೆ ನಡೆಯುವ ಮಹಾವ್ರತ ದೀರ್ಘಸತ್ರ ಯಾಗದಲ್ಲಿ ನಿರ್ದೇಶಕರಾಗಿದ್ದಾರೆ. ಅಲ್ಲಿ ಚಿಂತನ-ಮಂಥನಗಳೂ ನಡೆಯುತ್ತಿವೆ. ಪ್ರಶ್ನಿಸಲು, ಚರ್ಚಿಸಲು ಮುಕ್ತ ಅವಕಾಶವಿದೆ.

    ReplyDelete