Friday, 9 May 2014

ಋಗ್ವೇದ ವಾಮದೇವ ಮಂಡಲದ ಜೈವಿಕ-ತಂತ್ರಜ್ಞಾನ ಗಣಿತ -೧


ವಾಮದೇವರು ಲೋಕ ಪ್ರಸಿದ್ಧರೂ, ಶ್ರೇಷ್ಠ ಜಿಜ್ಞಾಸುಗಳೂ, ಲೋಕ ಕಲ್ಯಾಣಕಾರರೂ, ಅನ್ನಾದಿ ದಶವಿಧ್ಯಾ ಪ್ರವೀಣರೂ ಆಗಿದ್ದು ಋಗ್ವೇದದಲ್ಲಿ ನಾಲ್ಕನೆಯ ಮಂಡಲದಲ್ಲಿ ದೃಷ್ಟಾರರಾಗಿದ್ದಾರೆ. ಇವರ ಸಂಶೋಧನೆಯ ಬಗ್ಗೆ ಒಂದಿಷ್ಟು ವಿವರಣೆ ಕೊಡಲು ಪ್ರಯತ್ನಿಸುತ್ತೇನೆ. ಅದರಲ್ಲಿ ಮುಖ್ಯವಾಗಿ ಅನ್ನ ವಿಷಯಕವಾದ ಕೆಲ ವಿಶಿಷ್ಟ ಗಣಿತಸೂತ್ರಗಳು ಇದರಲ್ಲಿ ಸೇರಿರುತ್ತವೆ.

ಋಗ್ವೇದ ಮಂಡಲ-, ಸೂಕ್ತ-೧೦, ಮಂತ್ರ ೧-
अग्ने॒ तम॒द्याश्वं॒ न स्तोमै॒: क्रतुं॒ न भ॒द्रं हृ॑दि॒स्पृश॑म् । ऋ॒ध्यामा॑ त॒ ओहै॑: ॥|| 
अधा॒ ह्य॑ग्ने॒ क्रतो॑र्भ॒द्रस्य॒ दक्ष॑स्य सा॒धोः । र॒थीॠ॒तस्य॑ बृह॒तो ब॒भूथ॑ ॥|| 
ए॒भिर्नो॑ अ॒र्कैर्भवा॑ नो अ॒र्वाङ्स्व१॒॑र्ण ज्योति॑: । अग्ने॒ विश्वे॑भिः सु॒मना॒ अनी॑कैः ॥||  
आ॒भिष्टे॑ अ॒द्य गी॒र्भिर्गृ॒णन्तोऽग्ने॒ दाशे॑म । प्र ते॑ दि॒वो न स्त॑नयन्ति॒ शुष्मा॑: ॥   ||
तव॒ स्वादि॒ष्ठाग्ने॒ संदृ॑ष्टिरि॒दा चि॒दह्न॑ इ॒दा चि॑द॒क्तोः । श्रि॒ये रु॒क्मो न रो॑चत उपा॒के ॥||   
घृ॒तं न पू॒तं त॒नूर॑रे॒पाः शुचि॒ हिर॑ण्यम् । तत्ते॑ रु॒क्मो न रो॑चत स्वधावः ॥    ||
कृ॒तं चि॒द्धि ष्मा॒ सने॑मि॒ द्वेषोऽग्न॑ इ॒नोषि॒ मर्ता॑त् । इ॒त्था यज॑मानादृतावः ॥     ||
शि॒वा न॑: स॒ख्या सन्तु॑ भ्रा॒त्राग्ने॑ दे॒वेषु॑ यु॒ष्मे । सा नो॒ नाभि॒: सद॑ने॒ सस्मि॒न्नूध॑न् ॥||
ಇವಿಷ್ಟು ಮಂತ್ರಗಳು ಅನ್ನ ಸಂಬಂಧಿ ವಿಮರ್ಷೆಗಳಾಗಿರುತ್ತವೆ. ಹಾಗೇ ದೇಶದ ಅನ್ನ ಲಭ್ಯತೆಯ ಕುರಿತು ಗಣಿತ ರೀತ್ಯಾ ವಿವರಣೆಗಳಿವೆ. ಅನ್ನ ಸಮೃದ್ಧಿಯ ಉಪಾಯಗಳಿವೆ. ಇಲ್ಲಿ "ಅನ್ನ" = ತಿನ್ನುವ ಆಹಾರ ವಸ್ತುಗಳು ಎಂದೇ ಅರ್ಥ. ಬರೇ ಅಕ್ಕಿ ಬೇಯಿಸಿದ ಅನ್ನ ಮಾತ್ರವಲ್ಲ. ಹೆಚ್ಚು ಉತ್ಪತ್ತಿಯ ಉಪಾಯಗಳಿವೆ. ಮಿತ ಬಳಕೆಯ ಸೂತ್ರಗಳಿವೆ. ತುತ್ತು ಅನ್ನದ ಮಹತ್ವ, ಬಾಧ್ಯತೆ, ಋಣ ವಿವರಣೆ ಇದೆ. ಅನ್ನ ಸಂಶೋಧನೆಯ ಕೆಲ ವಿಶಿಷ್ಠ ಸುಲಭ ಸೂತ್ರಗಳಿವೆ. ಅನ್ನವು ಜೀವಿಗಳಿಗೆ ಅಗತ್ಯ, ನಿರಂತರ ನಿತ್ಯ. ಹಾಗಾಗಿ ಅದರ ಸಂಶೋಧನೆಯ ವಿಚಾರದಲ್ಲಿ ವಾಮದೇವರನ್ನು ನೆನಪಿಸಲೇಬೇಕು. ಈ ಅನ್ನ ಸರಪಳಿಯ ವ್ಯವಸ್ಥೆಗೆ ಒಂದು ರೂಪು ರೇಷ ಕೊಟ್ಟವರೇ ವಾಮದೇವರು. ವರ್ಷಕ್ಕೆ ೨೭ ಉಪವಾಸಗಳನ್ನೂ, ೫೪ ಹಬ್ಬಗಳನ್ನೂ ಸೇರಿಸಿ ಒಟ್ಟು ಅನ್ನವನ್ನು ಹಂಚಿ ಜಗತ್ತಿನ ಲಭ್ಯತೆಯಲ್ಲಿ ಕೊರತೆಯಾಗದಂತೆ ನಿಶ್ಚಯಗೊಳಿಸಿದ್ದಾರೆ. ಅದನ್ನು ಆಧರಿಸಿದ ಸೂತ್ರವೇ ಈ ಕೆಳಗಿನ ಮಂತ್ರ ಗಮನಿಸಿ:

ಋಗ್ವೇದ ಮಂಡಲ-, ಸೂಕ್ತ-೧೭, ಮಂತ್ರ ೩-೧೫
भि॒नद्गि॒रिं शव॑सा॒ वज्र॑मि॒ष्णन्ना॑विष्कृण्वा॒नः स॑हसा॒न ओज॑: ।
वधी॑द्वृ॒त्रं वज्रे॑ण मन्दसा॒नः सर॒न्नापो॒ जव॑सा ह॒तवृ॑ष्णीः ॥
सु॒वीर॑स्ते जनि॒ता म॑न्यत॒ द्यौरिन्द्र॑स्य क॒र्ता स्वप॑स्तमो भूत् ।
य ईं॑ ज॒जान॑ स्व॒र्यं॑ सु॒वज्र॒मन॑पच्युतं॒ सद॑सो॒ न भूम॑ ॥
य एक॑ इच्च्या॒वय॑ति॒ प्र भूमा॒ राजा॑ कृष्टी॒नां पु॑रुहू॒त इन्द्र॑: ।
स॒त्यमे॑न॒मनु॒ विश्वे॑ मदन्ति रा॒तिं दे॒वस्य॑ गृण॒तो म॒घोन॑: ॥   
स॒त्रा सोमा॑ अभवन्नस्य॒ विश्वे॑ स॒त्रा मदा॑सो बृह॒तो मदि॑ष्ठाः ।
स॒त्राभ॑वो॒ वसु॑पति॒र्वसू॑नां॒ दत्रे॒ विश्वा॑ अधिथा इन्द्र कृ॒ष्टीः ॥    
त्वमध॑ प्रथ॒मं जाय॑मा॒नोऽमे॒ विश्वा॑ अधिथा इन्द्र कृ॒ष्टीः ।
त्वं प्रति॑ प्र॒वत॑ आ॒शया॑न॒महिं॒ वज्रे॑ण मघव॒न्वि वृ॑श्चः ॥
स॒त्रा॒हणं॒ दाधृ॑षिं॒ तुम्र॒मिन्द्रं॑ म॒हाम॑पा॒रं वृ॑ष॒भं सु॒वज्र॑म् ।
हन्ता॒ यो वृ॒त्रं सनि॑तो॒त वाजं॒ दाता॑ म॒घानि॑ म॒घवा॑ सु॒राधा॑: ॥
अ॒यं वृत॑श्चातयते समी॒चीर्य आ॒जिषु॑ म॒घवा॑ शृ॒ण्व एक॑: ।
अ॒यं वाजं॑ भरति॒ यं स॒नोत्य॒स्य प्रि॒यास॑: स॒ख्ये स्या॑म ॥
अ॒यं शृ॑ण्वे॒ अध॒ जय॑न्नु॒त घ्नन्न॒यमु॒त प्र कृ॑णुते यु॒धा गाः ।
य॒दा स॒त्यं कृ॑णु॒ते म॒न्युमिन्द्रो॒ विश्वं॑ दृ॒ळ्हं भ॑यत॒ एज॑दस्मात् ॥ ೧೦
समिन्द्रो॒ गा अ॑जय॒त्सं हिर॑ण्या॒ सम॑श्वि॒या म॒घवा॒ यो ह॑ पू॒र्वीः ।
ए॒भिर्नृभि॒र्नृत॑मो अस्य शा॒कै रा॒यो वि॑भ॒क्ता स॑म्भ॒रश्च॒ वस्व॑: ॥ ೧೧
किय॑त्स्वि॒दिन्द्रो॒ अध्ये॑ति मा॒तुः किय॑त्पि॒तुर्ज॑नि॒तुर्यो ज॒जान॑ ।
यो अ॑स्य॒ शुष्मं॑ मुहु॒कैरिय॑र्ति॒ वातो॒ न जू॒तः स्त॒नय॑द्भिर॒भ्रैः ॥ ೧೨
क्षि॒यन्तं॑ त्व॒मक्षि॑यन्तं कृणो॒तीय॑र्ति रे॒णुं म॒घवा॑ स॒मोह॑म् ।
वि॒भ॒ञ्ज॒नुर॒शनि॑माँ इव॒ द्यौरु॒त स्तो॒तारं॑ म॒घवा॒ वसौ॑ धात् ॥ ೧೩
अ॒यं च॒क्रमि॑षण॒त्सूर्य॑स्य॒ न्येत॑शं रीरमत्ससृमा॒णम् ।
आ कृ॒ष्ण ईं॑ जुहुरा॒णो जि॑घर्ति त्व॒चो बु॒ध्ने रज॑सो अ॒स्य योनौ॑ ॥ ೧೪
असि॑क्न्यां॒ यज॑मानो॒ न होता॑ ॥ ೧೫

ಕೇಳೇಳು ಜೀವಿ ನೀ ನಿನ್ನನ್ನ
ಕಾಳು ರಸಕಡ್ಡಿ ಗಡ್ಡೆ ಕಂದ
ಗಳು ಆಗಿರಲಿ ಮೊತ್ತವೇ ಶತಬೀಜ ಸಂಖ್ಯೆಯೇಳುಪಟ್ಟು ಜೀವಿ ಲೆಕ್ಕದಲಿ |
ಬಾಳಿಡೀ ತಿಂದು ನೀ ಸುಖಿಸು
ಗೋಳ ಪಡದಿರು ದೊರೆಯುವುದು
ಹೇಳಿ ಕೊಟ್ಟಾ ಲೆಕ್ಕ ನೆನಪಿರಲಿ ನಿನ್ನ ಕರ್ತವ್ಯದೊಳು ನೀನಿರಲೂ || ||

ಜೀವ ಮೊತ್ತಕೆ ಬಾಜಿಸಲು ಆರು
ಜೀವಿಗಳ ಲೆಕ್ಕದಲಿ ಕಂದವಿದೆ
ಬೋವನವ ನಿಂದ್ರ ಬೆಳೆ ಬೆಳೆವ ನಿಮಗಾಗಿ ವರ್ಷಾದಿಗಳ ಸುರಿಸಿ |
ಈ ವನಿತೆ ಭುವಿದೇವಿ ತನ್ನ ಮೈ
ಯವಧರಿಸಿ ನಿಲುವಳು ನಿಮಗಾಗಿ
ಕೇವಲಿಸದಿರು ಅನ್ನವೇ ಬ್ರಹ್ಮ ತಾಯಿ ಭುವಿ ಮರೆಯದಿರು ಕಂದಾ || ||

ಜಗದ ಲೆಕ್ಕದಲಿ ಜೀವಿಗಳು | ಎಂಬತ್ನಾಲ್ಕು ಲಕ್ಷಗಳಿವೆ ಅ ||
ವುಗಳಿಗೆ ಆಹಾರ ಯೋಜಿತವು ನಿಖರವು ಕೊರತೆಯಿಲ್ಲಾ |
ಮಿಗತೆಯಿಲ್ಲದ ತೆರದಿ ಯೋಜಿಸಿ ಒ | ದಗುವಂದದಿ ಮಾಡಿ ಹರಿ |
ಸಿಗದಂತೆ ಮಲಗಿಹನು ವೈಕುಂಠದಲಿ ನಾಗಶಯನನಾಗೀ || ||

ಒಂದು ಜಗಕೇಳಿಯಲಿ ಹರಿ
ಯೊಂದು ಬೀಜವನಿಟ್ಟ ಮೂರರಲಿ
ಇಂದದರ ಲೆಕ್ಕದಲಿ ಆರರಿಯದಷ್ಟಿಹುದು ಮೊತ್ತದಲೀ ||
ಇಂದುಧರನಾ ಲೆಕ್ಕದಲೇಳ ಕಳೆ
ಯೊಂದು ಭಿನ್ನವು ಭಿನ್ನರಾಶಿಯಲಿ
ಚಂದಿರಾನ್ವಯ ದೊರೆಗಳಾಳಿದ ಈ ದೇಶದಲಿ ಅನ್ನವೇ ಬ್ರಹ್ಮ ಕಾಣಯ್ಯಾ || ||

ಈ ರೀತಿಯಲ್ಲಿ ಯೋಜಿತ ಅನ್ನವೆಷ್ಟು? ಅದರ ಸಮತೋಲನ ಹೇಗಾಗುತ್ತದೆ? ಅದು ಭೂಮಿಯಲ್ಲಿ ಉತ್ಪಾದನೆ ಹೇಗೆ? ಕೃಷಿಕನಿಗೆ ಪ್ರೇರಣೆ ಪ್ರೇಷಣೆ ಹೇಗೆ? ಯಾರಿಂದ? ತನ್ಮೂಲಕ ಕೊರತೆ ಅನ್ನದ ಪೂರೈಕೆ ಹೇಗೆ? ಇವೆಲ್ಲಾ ವಿಚಾರಗಳನ್ನು ವಿಸ್ತೃತವಾಗಿ ಸಂಶೋಧಿಸಿದ ವಾಮದೇವರು ತಮ್ಮ ವರ್ಗದ ಜನರಿಗೆ ಅಂದರೆ ಗೌತಮರಿಗೆ ಸೂತ್ರ ರೂಪದಲ್ಲಿ ವಿವರಿಸುತ್ತಾ, ಮಾವು ಹೆಚ್ಚಾದರೆ ಆ ವರ್ಷ ಏಕದಳ ಧಾನ್ಯಗಳ ಸ್ವಾಭಾವಿಕ ಕೊರತೆಯೆಂದೂ, ಹಲಸು ಹೆಚ್ಚಾದರೆ ದ್ವಿದಳ ಧಾನ್ಯಗಳ ಕೊರತೆಯೆಂದೂ, ಅದನ್ನು ಲೆಕ್ಕಾಚಾರ ರೀತಿಯಲ್ಲಿ ವಿವರಿಸಿ ಧ್ಯೂತಲಕ್ಷಣ ವಿವರಿಸಿರುತ್ತಾರೆ. ಅದರಿಂದಾಗಿ ಈ ಗಣಿತ ಸೂತ್ರ ಅರಿತವನು ಪ್ರಪಂಚದ ಯಾವುದೇ ಭಾಗದ ಆಹಾರೋತ್ಪಾದನೆ, ಕೊರತೆ, ಪ್ರಮಾಣ ಇವುಗಳನ್ನು ಲೆಕ್ಕಹಾಕಬಹುದಾಗಿರುತ್ತದೆ. ಅವೆಲ್ಲವೂ ಕೂಡ ಒಂದು ರೀತಿಯ ಸಮತೋಲನದ ಗುರಿಯಲ್ಲಿರುತ್ತದೆ. ಅದನ್ನು ವ್ಯವಸ್ಥೆಗೊಳಿಸುವುದಕ್ಕೆ ನಾವಿದ್ದೇವೆ ಎಂಬ ಅಹಂಕಾರದಲ್ಲಿ ಮನುಷ್ಯ, ಯಜಮಾನ, ಆಡಳಿತದ ಮಂದಿ ಅಹಂಕಾರ ಪಡುತ್ತಿದ್ದಾರೆ. ರೂಪಾಯಿಗೆ ೧ ಕೆಜಿ ಅಕ್ಕಿ, ಆಹಾರ ಭದ್ರತಾ ಕಾಯಿದೆ, ರೇಷನ್ ವ್ಯವಸ್ಥೆ ಇವೆಲ್ಲಾ ಅದರ ಉದಾಹರಣೆಗಳು. ಆದರೆ ಪ್ರಪಂಚದಲ್ಲಿ ಆಹಾರೋತ್ಪಾದನೆಯಾಗುವುದು ಧೈವ ಸಂಕಲ್ಪವೇ ವಿನಃ ಮಾನವೇಚ್ಛೆಯಿಂದಲ್ಲ. ಮಾನವ ಯತ್ನ ಮಾತ್ರ ಬೇಕಷ್ಟೆ. ಹಾಗೆಂದು ಪ್ರಪಂಚಕ್ಕೆಲ್ಲಾ ಅನ್ನ ಕೊಡುವವ ನಾನು ಎಂಬ ಅಹಂಕಾರ ಪಟ್ಟರೆ ಉಪಯೋಗವೇನು? ಆಹಾರ ಭದ್ರತೆ ಎಂದರೇನು? ಉತ್ಪಾದನೆಗೆ ಒತ್ತು ಕೊಡದ ಭದ್ರತೆಯೆಂಬ ಕಾನೂನಿಗೆ ಏನರ್ಥವಿದೆ? ಏನು ಸತ್ಯವಿದೆ? ಎಷ್ಟು ಸಾಧ್ಯವಿದೆ ಚಿಂತಿಸಬೇಕಲ್ಲವೇ? ವಾಮದೇವರು ಅದನ್ನೇ ಹೇಳಿದರು ದೇಶದಲ್ಲಿ ಆಹಾರ ಹೇಗೆ ಉತ್ಪಾದನೆ ಆಗುತ್ತದೆ ಎಂದು. ಅದರ ವೈಜ್ಞಾನಿಕ ವಿವರಣೆ ಗಮನಿಸಿ ವಿವರಿಸುತ್ತೇನೆ.

ಋಗ್ವೇದ ಮಂಡಲ-೪, ಸೂಕ್ತ-೧೮, ಮಂತ್ರ-೮
ಮಮಚ್ಚನತ್ವಾ ಯುವತಿಃ ಪರಾಸ ಮಮಚ್ಚನತ್ವಾ ಕುಷವಾ ಜಗಾರ |
ಮಮಚ್ಚಿದಾಪಃ ಶಿಶವೇ ಮಮೃಡ್ಯುರ್ಮಮಚ್ಚಿದಿಂದ್ರಃ ಸಹಸೋದ ತಿಷ್ಠತ್ ||

೧) ಶಿಶವೇ ಮಮೃಢುಮಿತಿ ಅನ್ನಾಪೇಕ್ಷ್ಯತಿ
೨) ಪರಾಸಃ ಆಯುರ್ಮಮುಚ್ಚತಿ ಇಂದ್ರಃ
೩) ಕುಷವಾ ಜಗಾರೇತಿ ಇಂದ್ರ ಪರಾಸಃ
೪) ಮಾ ಮಾ ಉಚ್ಯಂತೇತಿಯುಧಾ ಆಪಮಿತಿ
೫) ಕುಷವಃ ಸಹಸೋದ ಮಿತಿ ಜಾಗಾರತ್ವಾಂ ಮಿತಿಃ
೬) ಆಪಃ ಯುವತ್ಯಾಂ ಪರಾಸಃ ಜಾಗಾರಃ
೭) ಮಾಮಚನೇತಿ ಇಂದ್ರ ಸಹಸಾತಃ
೮) ಇಂದ್ರಃ ಮಮೃಢ್ಯುಂ ಜಾಗಾರ ತಿಷ್ಠತಿಃ
೯) ಆಪಃ ಮಿತಿ ಪರಾಸಃ ಶಿಶವೇ ಕುಷವಃ
೧೦) ತೇ ತೇ ಅಘಂ ಅದಿತಿ ರಿಂದ್ರಮಮಚ್ಚನಃ ಇತಿ ವಾಕ್ಯ

ಈ ಮೇಲ್ಕಂಡ ವಿವರಣೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಆದರೆ ಆ ಸಂಖ್ಯೆ ತಿಳಿದುಕೊಳ್ಳಿ. ಅಲ್ಲಿ ದಶ = ಕಚ್ಚು, ತಿನ್ನು, ಬಳಸು, ಉಪಯೋಗಿಸು ಎಂಬರ್ಥದಲ್ಲಿ, ಹಾಗೇ ಎಲ್ಲಾ ದಿಕ್ಕು ಅಥವಾ ಎಲ್ಲಾ ಅಗತ್ಯ, ಎಲ್ಲಾ ಪೂರ್ಣತೆಯೆಂಬ ಅರ್ಥದಲ್ಲಿಯೂ "ದಶವು" ಶಬ್ದವಾಗಿಯೂ, ಸಂಖ್ಯಾ ಸೂಚಕವಾಗಿಯೂ ಸಂಖ್ಯೆಯ ಆದಿಯಾಗಿಯೂ, ಅಂಕೆಯ ಪೂರ್ಣತೆಯ ದ್ಯೋತಕವಾಗಿಯೂ ಆರ್ಷ ಸಾಹಿತ್ಯಗಳಲ್ಲಿ ಬಳಕೆಯಲ್ಲಿದೆ. ಇನ್ನು ಆತ್ಮ ಸ್ವರೂಪನಾದ ನಾನು = ಬ್ರಹ್ಮ ಎಂದಾದರೆ ಅದನ್ನು ಒಂದೆಂದು ಗುರುತಿಸಲ್ಪಟ್ಟು ಆತ್ಮರೂಪಕನಾದ ಜೀವಿಯು ದ್ವಂದ್ವವೆಂಬ ಈ ಮಾಯಾ ಜಗತ್ತಿನಲ್ಲಿ ಅರಿತೊ ಅರಿಯದೆಯೊ ಆರ್ಷವಾಕ್ಯಗಳ ಆಧಾರದಲ್ಲಿ ತ್ರಿಕರಣಪೂರ್ವಕವಾಗಿ ಜೀವಿಸುತ್ತಾ ನಾಲ್ಕೆಂಬ ಪುರುಷಾರ್ಥ ಸಾಧನೆಯಲ್ಲಿ ಕೊನೆಯದಾದ ಮೋಕ್ಷದ ಗುರಿಯಲ್ಲಿ ಹೆಜ್ಜೆ ಇಡುವಾಗ ಈ ಪಂಚಭೌತಿಕ ದೇಹ ಅಗತ್ಯವೂ ಪೂರ್ಣವೂ ಆಗಿರಲೇ ಬೇಕು. ಅದಕ್ಕೆ ಮುಖ್ಯವಾಗಿ ಬೇಕಾದ್ದು ಅರಿಷಡ್ವರ್ಗಗಳನ್ನು ಜಯಿಸಿದರೆ ಸಪ್ತಧಾತುಯುಕ್ತವಾದ ಈ ದೇಹ ಸದೃಢವಾಗಿದ್ದಲ್ಲಿ ಅಷ್ಟಕಷ್ಟಗಳ ಬಾಧೆ ಇಲ್ಲದೇನೇ ನವನವೋನ್ಮೇಷವಾಗಿ ಬದುಕು ಕುಷವಾ ಜಗಾರವಾದಲ್ಲಿ ಅಂಕೆಯ ಮುಂದಿನ ಹಂತವೇ ಸಂಖ್ಯೆ ೧೦ = ಅಂದರೆ ದಶ. ಮೋಕ್ಷ ಭೋಕ್ತೃವಾಗುತ್ತಾನೆ. ಅದನ್ನೇ ಉತ್ತಮ ಜೀವಿಯಾದ ಮಾನವನ ತುರೀಯ ಗುರಿ ಪುರುಷಾರ್ಥ ಸಾಧನೆ ಮೋಕ್ಷವೆಂದರು. ಹಾಗೇ ಜೀವಿಗಳ ಅನ್ನ ಸರಪಳಿಯ ಬಗ್ಗೆ ಪರಸ್ಪರಾವಲಂಬನ ಜೀವನ ವಿಜ್ಞಾನದ ಬಗ್ಗೆಯೂ ಹೇಳಿದ್ದಾರೆ. ಹಾಗಾಗಿಯೇ ೮೪ ಲಕ್ಷ ಜೀವಕೋಟಿ ಪ್ರಭೇದಗಳೆಂದು ವಿವರಿಸಿದ್ದಾರೆ. ಮಾನವ ಮತ್ತು ಸಸ್ತನಿ ವರ್ಗದ ಜೀವಿಗಳೆಲ್ಲವುದಕ್ಕೆ ಹಾಲು ಮೊದಲ ಆಹಾರ. ಅದು ಹೇಗೆ ಉತ್ಪಾದನೆಯಾಗುತ್ತದೆ? "ಅರೀಳ್ಹಂ ವತ್ಸಂ ಚರಥಾಯ ಮಾತಾ ಸ್ವಯಂ ಗಾತುಂ ತನ್ವ ಇಚ್ಛಮಾನಮ್". 

ಪ್ರತಿಯೊಂದು ದೇಹದಲ್ಲಿ ರಸ ರಕ್ತ ಧಾತುಗಳೆಂಬ ೩ ಪ್ರವಾಹವಿರುತ್ತದೆ. ಅದರಲ್ಲಿ ಪ್ರತಿಯೊಂದರಲ್ಲೂ ವಿಶಿಷ್ಠವಾದ ಶಕ್ತಿರೂಪದ ಪ್ರವಹನ ವೇಗವರ್ಧಕ ಕಿಣ್ವಗಳು ನಿರಂತರ ಉತ್ಪಾದನೆಯಾಗುತ್ತದೆ. ಅದೇ ಹೆಣ್ಣು ಜೀವಿಯಲ್ಲಿ ಹಾಲಾಗಿಯೂ, ಗಂಡು ಜೀವಿಯಲ್ಲಿ ವೀರ್ಯವಾಗಿಯೂ ಪರಿವರ್ತನೆಗೊಂಡು ಮುಂದಿನ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತದೆ. ಈ ವ್ಯವಹಾರಕ್ಕೆ ಸಂಬಂಧಿಸಿ ೧೧ ಲಕ್ಷ ವಿವಿಧ ಸೂಕ್ಷ್ಮ ಜೀವಿಗಳು ದೇಹದಲ್ಲಿ ವ್ಯವಹರಿಸುತ್ತವೆ. ಅದರ ವ್ಯವಹಾರವೇ "ಜೀವಚೈತನ್ಯ ನಿರೂಪಣ" ಎಂಬ ಜೈವಿಕ ನಿಯಮ. ಹಾಗೇ ಎರಡನೆಯ ಲಘು ಆಹಾರ ವರ್ಗದಲ್ಲಿ ೬ ಲಕ್ಷ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ನಿರಂತರ ಕ್ರಿಯೆಯೇ ಆಹಾರ ರೂಪದವುಗಳು. ನಂತರ ಘನಾಹಾರ ವ್ಯವಹಾರ; ಇಲ್ಲಿ ಕೆಳಕಂಡ ೯ ವಿಧ ಘನಾಹಾರ ಪ್ರಕ್ರಿಯೆಗಳಿವೆ:

೧. ಬೇಯಿಸುವುದು
೨. ಪಾಕಗೊಳಿಸುವುದು
೩. ನೆನೆಸುವುದು
೪. ಹುಳಿಸುವುದು
೫. ಮರ್ದನಗೊಳಿಸುವುದು
೬. ರೂಪಾಂತರಗೊಳಿಸುವುದು
೭. ಮಿಶ್ರಗೊಳಿಸುವುದು
೮. ಮೇಧ್ಯಗೊಳಿಸುವುದು
೯. ಪಥ್ಯರೂಪಿಸುವುದುಅವುಗಳೆಲ್ಲಾ ಒಟ್ಟು ಸೇರಿ ೨೫ ಲಕ್ಷ ಪ್ರಭೇದ ಸೂಕ್ಷ್ಮಜೀವಿಗಳ ಕಾರ್ಯಭಾರವಿದೆ. ಅವೆಲ್ಲಾ ಸ್ವೇದಜಗಳೆಂಬ ಸೂಕ್ಷ್ಮಜೀವಿಗಳು. ಹೀಗೆ ಸಸ್ತನಿ ವರ್ಗದ ಯೋನಿಜ ಜೀವಿಗಳ ಜೀವನದಲ್ಲಿ ೪೨ ಲಕ್ಷ ವಿವಿಧ ಭಿನ್ನ ಭಿನ್ನ ಸೂಕ್ಷ್ಮಾಣುಜೀವಿಗಳು ಬದುಕುತ್ತಿವೆ. ಯೋನಿಜ ಜೀವಿಗಳಾದ ಸಸ್ತನಿಗಳಲ್ಲಿ ಮಾನವನೂ ಒಂದು ವರ್ಗ. ಅವುಗಳ ಬದುಕಿಗಾಗಿಯೇ ೪೨ ಲಕ್ಷ ಜೀವ ಪ್ರಭೇದಗಳ ಕಾರ್ಯ ನಿರೂಪಣೆ ಇದೆ. ಹಾಗಾಗಿ ಸಸ್ತನಿ ಜೀವಿಗಳ ಜೀವ ಸ್ವೇದಜಗಳಾದ ಆ ಜೀವ ಪ್ರಭೇದಗಳು. ಹಾಗಾಗಿ ಮಾನವನೂ ಸೇರಿ ಸಸ್ತನಿವರ್ಗ ಎಷ್ಟು ಋಣಿ ಅರ್ಥ ಮಾಡಿಕೊಳ್ಳಿರಿ. ಹಾಗಾಗಿ ಮಾನವ ತಿನ್ನುವ, ತಿನ್ನಲಪೇಕ್ಷಿಸುವ, ತಿಂದು ರೋಗಾದಿಗಳಿಗೆ ಕಾರಣವಾಗುವ ಅನ್ನವೆಲ್ಲಾ ಪೂರ್ವನಿರ್ಧಾರಿತ ಈ ಕಿಣ್ವಗಳೆಂಬ ಸ್ವೇದಜ ಜೀವ ಪ್ರಭೇದಗಳ ಹೋರಾಟವೇ ವಿನಃ ಪುರುಷಪ್ರಯತ್ನ ಮಾತ್ರವಲ್ಲ. ಹಾಗಾಗಿಯೇ ಹುಟ್ಟಿದ್ದು ಮಾವು ಹೆಚ್ಚಾದರೆ ಏಕದಳ ಧಾನ್ಯ ಕ್ಷಯವೆಂಬ ಮಾತು. ಹಾಗೇ ಅಂಡಜ ಜೀವಿಗಳು ಉದ್ಭಿಜ ಜೀವಿಗಳ ಕಾರಣದಿಂದಾಗಿ ಬದುಕು ರೂಪಿಸಿಕೊಳ್ಳುತ್ತವೆ ಎಂಬುದು ವಾಮದೇವರ ಮತ.ಒಬ್ಬ ಕೃಷಿಕನಿಗೆ ತಾನೊಂದು ಬೆಳೆ ತೆಗೆಯಬೇಕೆಂಬ ವೃತ್ತಿ ಅಥವಾ ಮನೋಭಾವ ಹುಟ್ಟುವುದರಿಂದ ಆರಂಭಿಸಿ ಅದು ಬೆಳೆಯುವುದು, ಫಲ ಕೊಡುವುದು ಎಲ್ಲವುದರ ಹಿಂದಿರುವ ಶಕ್ತಿಯೇ ಈ ಸ್ವೇದಜ ಜೀವಪ್ರಭೇದ. ಸಪ್ತವರ್ಗದ ೧೦,೫೦,೦೦೦ ಪ್ರಭೇದದ ಜೀವಿಗಳ ಅನ್ನದಾತೃವೆಂದರೆ ಈ ಸ್ವೇದಜ ವರ್ಗದ ೪೨ ಲಕ್ಷ ಜೀವ ಪ್ರಭೇದಗಳು. ಅವುಗಳಿಂದಲೇ ಅನ್ನ, ಅನ್ನದ ಪಚನಕ್ರಿಯೆಯಿಂದಾರಂಭಿಸಿ ಅದು ಆಹಾರವಾಗಿ ಪರಿವರ್ತನೆ ಹೊಂದಿ ರೂಪಾಂತರಗೊಂಡು ಮೇಧ್ಯವೋ, ಪಥ್ಯವೋ ಮಾಡಿ ಆಗದ್ದನ್ನು ಅಮೇದ್ಯವಾಗಿ ಪರಿವರ್ತಿಸುವ ಈ ಅನ್ನಸೂತ್ರವೇ "ನಾರಾಯಣೀಯ" ಎಂಬ ಸಮೀಕರಣ.

ಹಾಗೇ ದೇಹದಲ್ಲಿ ಆಗುವ ಎಲ್ಲಾ ಪರಿವರ್ತನೆ, ಬೆಳವಣಿಗೆ, ಆಹರ ಪಚನ ವಿಭಾಗವೆಲ್ಲವೂ ಈ ಸ್ವೇದಜಗಳೆಂಬ ದೇಹಾಂತರ್ಗತ ಸ್ವೇದಜಗಳಾದ ೪೨ ಲಕ್ಷ ವರ್ಗ ಜೀವ ಪ್ರಭೇದಗಳೇ ಕಾರಣವಾಗಿರುತ್ತವೆ. ಹಾಗೆ ಸಸ್ತನಿ ವರ್ಗದ ೧೧,೫೦,೦೦೦ ಜೀವ ಸಂಕುಲಕ್ಕೆ ೪೨,೦೦,೦೦೦ ಜೀವ ಸಂಕುಲ ಆಧಾರವಾಗಿರುತ್ತದೆ. ಹಾಗೇ ವಿಭಾಗಿಸಿದಲ್ಲಿ ೫೩,೫೦,೦೦೦ ಸಂಖ್ಯೆಯ ಜೀವ ಪ್ರಭೇದ ವರ್ಗೀಕೃತವಾಯ್ತು. ಅದರಲ್ಲಿ ಮಾನವ ಸಹಿತವಾದ ಸಸ್ತನಿಯೆಲ್ಲದರ ಜೀವ ವಿಕಾಸ ಅಡಗಿದೆ. ಹಾಗಾಗಿ ಸ್ವೇದಜಗಳಿಂದ ಅಧ್ಯಯನ ಮಾಡಿದಲ್ಲಿ ಮಾನವವೇನೆಂದು ಅರಿಯಲು ಸಾಧ್ಯ. ಅದನ್ನೇ ವಿವರಿಸುತ್ತಾ ವಾಮದೇವರು ಋಗ್ವೇದ ಮಂಡಲ ೪, ಸೂಕ್ತ ೧೮, ಮಂಡಲ ೧೨-೧೩ ರಲ್ಲಿ ಉದಾಹರಿಸಿದ್ದಾರೆ:

कस्ते॑ मा॒तरं॑ वि॒धवा॑मचक्रच्छ॒युं कस्त्वाम॑जिघांस॒च्चर॑न्तम् ।
कस्ते॑ दे॒वो अधि॑ मार्डी॒क आ॑सी॒द्यत्प्राक्षि॑णाः पि॒तरं॑ पाद॒गृह्य॑ ॥
अव॑र्त्या॒ शुन॑ आ॒न्त्राणि॑ पेचे॒ न दे॒वेषु॑ विविदे मर्डि॒तार॑म् ।
अप॑श्यं जा॒यामम॑हीयमाना॒मधा॑ मे श्ये॒नो मध्वा ज॑भार ॥

ಆತ್ಮವೊಂದು ಈ ಸಸ್ತನಿ ವರ್ಗದಲ್ಲಿ ರೂಪುಗೊಳ್ಳುತ್ತದೆ. ಯಥಾ ಸೃಷ್ಟಿ ತಂದೆತಾಯಿಯ ಮೂಲ ರೂಪಕ್ಕೆ ಆಧರಿಸಿಯೇ ರೂಪು ಪಡೆಯುತ್ತದೆ. ಸಣ್ಣ ಪುಟ್ಟ ವ್ಯತ್ಯಾಸ ದೃಗ್ಗೋಚರವಾಗಿ ಕಂಡರೂ, ಕೆಲ ನ್ಯೂನತೆಗಳಿದ್ದರೂ ನಗಣ್ಯ.  ಅಂಶ ಸಮಾನ  ಅಂಶ ವ್ಯತ್ಯಾಸ ಇರಬಹುದು.  ಯ ಅನುಪಾತದಷ್ಟೇ ಇರುತ್ತದೆ. ಆ ಕೊರತೆಯ  ಅಂಶವೇ ಜೀವ ವೈವಿಧ್ಯ ಕಾರಣವಾದ ರೂಪ ವ್ಯತ್ಯಾಸ. ಮತ್ತೆಲ್ಲವೂ ಸಮಾನ. ಅದರ ಆಧಾರದಲ್ಲಿ 

೧. ಹಸಿವು
೨. ತೃಷೆ
೩. ಆಸೆ
೪. ಆಕಾಂಕ್ಷೆ
೫. ಕಾಮ
೬. ಕ್ರೋಧ
೭. ಲೋಭ
೮. ಮೋಹ
೯. ಮದ
೧೦. ಮತ್ಸರ
೧೧. ದೈಹಿಕ ಬೆಳವಣಿಗೆ
೧೨. ಅಂಗ ಪ್ರತ್ಯಂಗ ರಚನೆ
೧೩. ಅನ್ನ
೧೪. ರಸ
೧೫. ರಕ್ತ
೧೬. ಗಂಧ
೧೭. ಶರ್ಕರ
೧೮. ಪ್ಲೀಹ
೧೯. ಮೇಧ
೨೦. ಅಸ್ಥಿ
೨೧. ಮಜ್ಜಾ
೨೨. ತ್ವಕ್
೨೩. ವೀರ್ಯ
೨೪. ಕ್ಷೀರ
೨೫. ರುಚಾ
೨೬. ಮೇಹ
೨೭. ಜ್ವರ
೨೮. ಉಷ್ಣ
೨೯. ಪಿತ್ತ
೩೦. ಕಫ
೩೧. ಮಲ
೩೨. ಮೂತ್ರ
೩೩. ರೋಗ
೩೪. ರುಜೆ
೩೫. ಸುಖ
೩೬. ಸಂತೋಷ
೩೭. ಆನಂದ
೩೮. ಭ್ರಾಂತಿ
೩೯. ತೃಪ್ತಿ
೪೦. ತುಷ್ಠಿ

-ಗಳೆಂಬ ೪೦ ಬಗೆಯ ಪರಿಣಾಮ ದೇಹದಲ್ಲಿ ಅನ್ನ ಕಾರಣದಿಂದ ಉಂಟಾಗುತ್ತದೆ. ಅದು ಸ್ವೇದಜಗಳ ಕಾರ್ಯವಾಗಿರುತ್ತದೆ. ಆ ದೇಹದಲ್ಲಿ ಆತ್ಮ ನೆಲೆಸಿರುವಷ್ಟು ಕಾಲವೂ ಪೂರಕವಾಗಿ ಅನ್ನಗುಣದಂತೆ ವ್ಯವಹರಿಸುತ್ತಿದ್ದು, ಧಾತು ವಿಘಟನೆಯಾಗಿ ಬೇರ್ಪಟ್ಟಾಗ ಆತ್ಮ ನಿರಸನ ಅಥವಾ ದೇಹ ವಿಮೋಚನೆ; ಅರ್ಥಾತ್ ಸಾವು. ನಂತರ ಕೇವಲ ೭೨ ಗಂಟೆಯಲ್ಲಿ ಅದೇ ದೇಹ ಬದಲಾಗಿ ಲಕ್ಷಾಂತರ ಪ್ರಭೇದದ ಹುಳುಗಳಾಗಿ ಪರಿವರ್ತನೆ ಹೊಂದಿ ದೇಹ ನಾಶವಾಗುತ್ತದೆ. ಪ್ರಕೃತಿಗೆ ಕೂಡಿ ಹೋಗುತ್ತವೆ. ಅದೇ ಜೈವಿಕ ಚಕ್ರ ಅಥವಾ ಜೀವ+ಜೀವಾನುಬಂಧ ವ್ಯವಸ್ಥೆಯ ಮೂಲ ಸಮೀಕರಣವೆಂದರು ಗೌತಮರು. ಆದರೆ ಅದರ ಮೂಲ ಸಂಕೇತ ಅನ್ನದಲ್ಲಿದೆ. ಆ ಜೀವಿಯು ತಿನ್ನುವ ಅನ್ನವೇ ಅದಕ್ಕೆಲ್ಲಾ ಕಾರಣವಾಗಿರುತ್ತದೆ. ಹಾಗಾಗಿ ಪ್ರತಿ ಜೀವಿಗೂ ಒಂದು ನಿರ್ದಿಷ್ಟ ಅನ್ನವನ್ನು ಅರ್ಥಾತ್ ಆಹಾರವನ್ನು ನಿರ್ದೇಶಿಸಿತು. ಅದು ಹೊರತುಪಡಿಸಿ ಏನೇನೆಲ್ಲಾ ತಿಂದಲ್ಲಿ ಅದರಿಂದ ಇತರೆ ಪರಿಣಾಮಗಳು ಸಾಧ್ಯ. ಹಾಗಾಗಿಯೇ "ಅನ್ನಂ ಬ್ರಹ್ಮಮೇತಿ".ಇನ್ನುಳಿದ ೨೧ ಲಕ್ಷ ಅಂಡಜಗಳು ಅಂಡರೂಪದಲ್ಲಿ ಭೂಪಾತವಾಗಿ ಅಲ್ಲಿನ ಸೂಕ್ತ ಸಂಸ್ಕಾರಗಳು, ಬೆಳವಣಿಗೆ ನಂತರ ರೂಪಾಂತರ ಹೊಂದಿ ಈ ಪ್ರಕೃತಿ ಪ್ರವೇಶ. ಪ್ರಕೃತಿಯಲ್ಲಿನ ಜೀವನ ಹೋರಾಟ ಅನ್ನಾನ್ವೇಷಣೆ ಬೆಳವಣಿಗೆ ಪುನಃ ಸೃಷ್ಟಿ ಆದಿಯಾಗಿ ಈ ಉಳಿದ ಉದ್ಭಿಜ ಗಣ ೧೧,೫೦,೦೦೦ ಪ್ರಭೇದಗಳು ಪೂರಕವಾಗುತ್ತಾ ಸಮತೋಲನ ಉಂಟು ಮಾಡುತ್ತವೆ. ಇದೇ ಜೀವಜಗತ್ತು. ಇದರ ಅನ್ನ ಸಂಯೋಜನೆಯೇ ಒಂದು ವಿಶಿಷ್ಟವಾದ ಅದ್ಭುತವಾದ ಸರಪಳಿ. ಇದನ್ನರ್ಥ ಮಾಡಿಕೊಂಡಲ್ಲಿ ಪ್ರತೀ ಮಾನವನ ಜೀವನ ಹೋರಾಟದ ಅರ್ಥ ಆಗುತ್ತದೆ. ಅದರಿಂದಾಗಿ ಸುಖ ಪ್ರಾಪ್ತಿ, ಆನಂದ ಮಹದಾನಂದ ಪ್ರಾಪ್ತಿ, ಅನ್ನವನ್ನರಿತವನೇ ಮುಂದೆ ಮುಮುಕ್ಷುವಾಗಬಲ್ಲ. ಯೋಗಿಯಾಗಬಲ್ಲ. ಮೋಕ್ಷದ ಪಟ್ಟ ಕಟ್ಟಿಟ್ಟದ್ದು. ಇನ್ನೂ ಇದನ್ನಾಧರಿಸಿದ ಒಂದು ವಿಶೇಷ ಗಣಿತ ವಿವರಣೆಯೂ ಇದೆ. ಗಮನಿಸಿರಿ "ಅನ್ನಾಜ್ಜಾಯತೇ ಬುದ್ಧಿ"; ಮುಂದಿನ ಲೇಖನದಲ್ಲಿ.

ಇಂತು ಸಜ್ಜನ ವಿಧೇಯ
ಕೆ.ಎಸ್. ನಿತ್ಯಾನಂದ


3 comments:

 1. Really worth knowing information at present scenario, thank you very much for enlightening through such a useful knowledge..

  ReplyDelete
 2. You are really great Sir. Thank you very much for sharing such information. If possible could you please upload audio clips on how to chant these mantras?

  ReplyDelete
  Replies
  1. ಧನ್ಯವಾದಗಳು. ಎಲ್ಲ ಅತ್ಯುನ್ನತ ಋಷಿವರೇಣ್ಯರ ಸಂಶೋಧನೆ. ಇದರಲ್ಲಿ ನನ್ನದೇನಿಲ್ಲ. ಅಧ್ಯಯನದೊಂದಿಗೆ ಸ್ವಲ್ಪ ಅಧ್ಯಾಪನವಷ್ಟೆ. ವೇದ ಮಂತ್ರಗಳ ಧ್ವನಿಮುದ್ರಿತ ಸಿ.ಡಿ.ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೊಂಡು ಕೇಳಿರಿ, ಇಲ್ಲವೇ ವೇದ ಬಲ್ಲವರಲ್ಲಿ ಹೇಳಿಸಿ ಕೇಳಿರಿ, ಕಲಿಯಿರಿ, ಅದರ ನಾದಾನುಸಂಧಾನ ಮಾಡಿರಿ, ಆಗ ಈ ವಿಚಾರಗಳು ನಿಮಗೂ ವೇದ್ಯವಾಗಿ ನೀವು ಆ ಋಷಿಗಳ ಸಖ್ಯ ಸಾಧಿಸಬಹುದು. ಇವೆಲ್ಲ ಓದುವುದೋ, ಬರೆಯುವುದರಿಂದಲೋ ಬರುವುದಿಲ್ಲ. ಅನವರತ ಕಷ್ಟಪಟ್ಟು ನಿದ್ರಾಹಾರಾದಿ ಯಮ ನಿಯಮಾದಿಗಳನ್ನು ಪಾಲಿಸುತ್ತ ಸಾಧನೆಯಿಂದ ಸಿದ್ಧಿಸಿಕೊಳ್ಳಬೇಕು.

   Delete