Skip to main content

Shanmukha Bhajan in Yakshagaana Style

SHRI JNANASAKTHI SUBRAMANYA SWAMI PAVANJE


ಜ್ಞಾನಮೂರುತಿ ದೇವ ನೀ || ಶಿವಸುತನೇ || ಸುಜ್ಞಾನವೀಯೆನಗೆ ಬೇಡುವೆ ||
ಜ್ಞಾನಿಗಳು ನುತಿಸುವರು ನಿನ್ನ || ಅತುಲ || ಪಾಂಡಿತ್ಯದಲಿ ಪಾಮರನು ನಾನೂ || ಪಲ್ಲವಿ ||

ಸೋಮಶೇಖರನಂದು ಪಡೆದ || ಮುಖದಲಿ || ಮಾರಿ ತಾರಕನ ನಾಶಕೆಂದೂ ||
ಭೀಮಬಲರೆಲ್ಲ ಹೋರಿ ಸೋತರು || ಹಸುಳೆ ನೀ || ಕಾದಿಹೆ ಅಂದು ವಿಜಯಿಯಾದೆ || ೧ ||

ಬಾಲಬ್ರಹ್ಮಚಾರಿಯು ನೀನಹುದು || ದೇವಸೇನೆಗೆ || ಪತಿಯಹುದು ಅದರರ್ಥ ತಿಳಿಯೇ ||
ಕಾಲಕಾಲನ ಸುತನೆಂದರ್ಥ || ಕಲ್ಪಾಂತದಲಿ || ಏಕಮುಖ ಪ್ರವಹನವು ಸತ್ಯವೆಂಬೇ || ೨ ||

ಆರು ಮುಖದವ ನೀನು ಬಲ್ಲೆ || ವೇದಾರ್ಥ || ತಿಳಿಯುವುದು ಆರು ಮುಖದಿಂದಾ ||
ಆರು ತಿಳಿದಿಹರು ವೇದವನು || ನೀ ನೊಪ್ಪೆ || ಅರಿಯುವುದು ವೇದಾರ್ಥ ಜ್ಞಾನ || ೩ ||

ಕೇಳು ಸುಬ್ರಹ್ಮಣ್ಯ ನಾನಜ್ಞಾನಿ || ನೀ ನೆನಗೆ || ಸುಜ್ಞಾನ ತಿಳಿವ ಬಗೆಯರಿತು ನೀಡೂ ||
ಹಾಳು ಜಾವನ ಬರಡು ಸಾಕಿನ್ನು || ಜ್ಞಾನವನು || ಇತ್ತು ನೀ ಬೇಗದಲೀ ಕೃಪೆ ತೋರು || ೪ ||

ಬಾಳು ಕೇಳುವುದಿಲ್ಲ ಕೂಳು || ಬೇಕಿಲ್ಲ || ಎನಗೆ ಬಾಳಿನುದ್ಧಾರ ಜ್ಞಾನ ಕೊಡು ದೊರೆಯೆ ||
ಬಾಳಿನಾ ಕೊನೆಯಲ್ಲಿ ತಾಳುಮೆಯ || ನಿತ್ತು ನೀ || ದಾಳಿಯಿಡುವ ಯಮದೂತರನಟ್ಟು ಬೇಗಾ || ೫ ||

ಕಾಳಿಯಾ ಮಗನೆಂಬರೈ ನಿನ್ನ || ಅಗ್ನಿಜಾತ || ನೀನಹುದು ಪೋಷಿಸಿದರು ಕೃತ್ತಿಕೆಯು ||
ಕೇಳಬೇಡವೊ ನನ್ನಲ್ಲಿ ನೀನೇನು || ತಿರುಕನಾ || ಕೊಡಲಾರೆ ಬೇಡುವುದೇ ನನ್ನಯ ವೃತ್ತಿ ಕಾಣೊ || ೬ ||
Comments

  1. ನಾಲ್ಕನೇ ಪದ್ಯದ ಎರಡನೇ ಸಾಲು "ಜೀವನ" ಆಗಬೇಕಲ್ಲ?

    ReplyDelete
    Replies
    1. ಇಲ್ಲ.. ಲೇಖಿಸಿರುವುದು ಸರಿಯಿದೆ.

      Delete

Post a Comment

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…