Sunday, 29 June 2014

ಋಗ್ವೇದದಲ್ಲಿ ಆತ್ರೇಯರ ಅದ್ಭುತ ಸಂಶೋಧನೆಗಳು - 2




ಆತ್ರೇಯರ ವಾಸ್ತು ಪರಿಣಿತಿ, ನಿರ್ಮಾಣ ಶಾಸ್ತ್ರ ಅಗಾಧವಾದದ್ದು. ರಥ ನಿರ್ಮಾಣ ಕಲೆಯಲ್ಲಿ ಅವು ಏಕಚಕ್ರಿ= ಸೂರ್ಯರಥ ಆರಂಭಿಸಿ ಷಣ್ಣವತೀ ಚಕ್ರದವರೆಗೆ ಬಹುಭಾರ ವಾಹಕ, ವೇಗವರ್ಧಕ, ಇಚ್ಛಾಗಮನ, ಸ್ವಯಂಚಾಲಿತ, ಗುರಿ ನಿರ್ದೇಶಿತ ರಥ ನಿರ್ಮಾಣ ವಿಧಾನಗಳನ್ನು ಅರಿತಿದ್ದರು. ಅವೆಲ್ಲಾ ಅಸಾಮಾನ್ಯ ವಿಧ್ಯೆಗಳು. ಅಮೋಘ ತಂತ್ರಜ್ಞಾನ. ಅಷ್ಟಲ್ಲದೇ ವಸ್ತು ವಿಜ್ಞಾನ (ಈಗಿನ ಮೆಟೀರಿಯಲ್ ಸೈನ್ಸ್) ದಲ್ಲಿಯೂ ನಿಪುಣರಾಗಿದ್ದರು. ಆ ಬಗ್ಗೆ ಕೆಲ ವಿಚಾರಗಳನ್ನು ಬರೆದು ಈ ಆತ್ರೇಯ ಮಂಡಲ ಮುಕ್ತಾಯ ಮಾಡುತ್ತೇನೆ.
ಋ.ಮ.5 ಸೂಕ್ತ 27 ಮಂತ್ರ 1-6

ಅನಸ್ವಂತಾ ಸತ್ಪತಿರ್ಮಾಮಹೇ ಮೇ ಗಾವಾ ಚೇತಿಷ್ಠೋ ಅಸುರೋ ಮಘೋನಃ | 
ತ್ರೈವೃಷ್ಣೋ ಅಗ್ನೇ ದಶಭಿಃ ಸಹಸ್ರೈರ್ವೈಶ್ವಾನರ ತ್ರ್ಯರುಣಶ್ಚಿಕೇತ ||  1 ||
ಯೋ ಮೇ ಶತಾ ಚ ವಿಂಶತಿಂ ಚ ಗೋನಾಂ ಹರೀ ಚ ಯುಕ್ತಾ ಸುಧುರಾ ದದಾತಿ | 
ವೈಶ್ವಾನರ ಸುಷ್ಣುತೋ ವಾವೃಧಾನೋಽಗ್ನೇ ಯಚ್ಛ  ತ್ರ್ಯರುಣಾಯ ಶರ್ಮ || 2 ||
ಏವಾ ತೇ ಅಗ್ನೇ ಸುಮತಿಂ ಚಕಾನೋ ನವಿಷ್ಠಾಯ ನವಮಂ ತ್ರಸದಸ್ಯುಃ
ಯೋ ಮೇ ಗಿರಸ್ತುವಿಜಾತಸ್ಯ ಪೂರ್ವೀರ್ಯುಕ್ತೇನಾಭಿ ತ್ರ್ಯರುಣೋ ಗೃಣಾತಿ || 3 ||
ಯೋ ಮ ಇತಿ ಪ್ರವೋಚತ್ಯಶ್ವಮೇಧಾಯ ಸೂರಯೇ | 
ದದದೃಚಾ ಸನಿಂಯತೇ ದದನ್ಮೇಧಾಮೃತಾಯತೇ || 4 ||
ಯಸ್ಯ ಮಾ ಪರುಷಾಃ ಶತಮುದ್ಧರ್ಷಯಂತ್ಯುಕ್ಷಣಃ | 
ಅಶ್ವಮೇಧಸ್ಯ ದಾನಾಃ ಸೋಮಾ ಇವ ತ್ರ್ಯಾಶಿರಃ || 5 ||
ಇಂದ್ರಾಗ್ನೀ ಶತದಾವ್ನ್ಯಶ್ವಮೇಧೇ ಸುವೀರ್ಯಮ್ | 
ಕ್ಷತ್ರಂ ಧಾರಯತಂ ಬೃಹದ್ದಿವಿ ಸೂರ್ಯಮಿವಾಜರಮ್ || 6 ||

ಕ್ಷಾತ್ರ ವಿಧ್ಯೆ ಬ್ರಹ್ಮವಿಧ್ಯೆಯೂ ಹೌದು. ವಿವೇಕಿಯೂ, ಸಾಧುವೂ ಆದ ಬ್ರಾಹ್ಮಣನು ಇದನ್ನು ಸಾಧಿಸಬಲ್ಲ. ಕ್ಷತ್ರಿಯರಿಗೆ ಪರಂಪರಾಗತ ಹಕ್ಕು. ಆದರೆ ಸಾಧಿಸಿ ಕೊಂಡವರು ಬಹಳ ಕಡಿಮೆ. ವಿಶೇಷವಾದ ಶಕ್ತಿಯ ಒಂದು ಸಾಧನಾ ಸೂತ್ರ ಕರ್ಮಠರ ದೃಷ್ಟಿಯಲ್ಲಿ ಅಶ್ವಮೇಧಯಾಗದ ಮಂತ್ರವೆಂದು ಹೆಸರಿಸಿದೆ. ಆದರೆ ಇದೆಲ್ಲಾ ಒಂದೇ ಕುಣಿಕೆಯಲ್ಲಿ ಸಂಯೋಜಿಸಿದ ಒಂದು ವಿಶೇಷ ಗಣಿತ ಸೂತ್ರ, ತಂತ್ರಶಾಸ್ತ್ರ. ಒಬ್ಬ ಮನುಷ್ಯ ತನ್ನ ಸಂಕಲ್ಪ ಮಾತ್ರದಿಂದಲೇ ಪ್ರಪಂಚದ ಎಲ್ಲಾ ಆಗುಹೋಗುಗಳನ್ನೂ ನಿಯಂತ್ರಿಸುವ ವಿಶಿಷ್ಟ ಸೂತ್ರ ಇದರೊಳಗಡಕವಾಗಿದೆ. ಅರಸನೊಬ್ಬನು ಚಕ್ರವರ್ತಿಯೆನಿಸಿಕೊಳ್ಳಲು ಅಶ್ವಮೇಧ ಯಾಗ ಮಾಡಬೇಕು ಎಂಬುದು ಸರ್ವವಿದಿತ. ನೂರು ಅಶ್ವಮೇಧಯಾಗ ಮಾಡಿದಲ್ಲಿ ಹದಿನಾಲ್ಕು ಲೋಕದ ಅಧಿಪತ್ಯವೂ ಅವನದ್ದಾಗುತ್ತದೆ. ದೇವತೆಗಳಿಗೇ ಒಡೆಯನಾಗುತ್ತಾನೆ ಅಂದರೆ ಇಂದ್ರಪಟ್ಟ ನಿಮಗೆಲ್ಲಾ ಗೊತ್ತಿರಬಹುದು ಈ ವಿಚಾರ. ಆದರೆ ಅಶ್ವಮೇಧವೆಂಬ ಯಾಗದಲ್ಲಿ ಸಂಯೋಜಿಸಿದ ತಂತ್ರ ಗೊತ್ತಿರಬೇಕು ಅಷ್ಟೆ. ಅದು ಗೊತ್ತಿದ್ದರೆ ಅವನು ಯಾಗ ಮಾಡದೇನೇ ಅದನ್ನು ಸಾಧಿಸಬಲ್ಲ. ಇಡೀ ಪ್ರಪಂಚದ ಮೇಲೆ ತನ್ನ ಹಿಡಿತ ಸಾಧಿಸಬಲ್ಲನು. ಆ ಸೂತ್ರವು ಈ ಮಂತ್ರಗಳಲ್ಲಿ ಅಳವಡಿಸಲ್ಪಟ್ಟಿದೆ. 

ತ್ರೈವೃಷ್ಣೋ ಅಗ್ನೇ ದಶಭಿಃ ಸಹಸ್ರೈಃ 
ಯೋ ಮೇ ಶತಾ ಚ ವಿಂಶತಿಂ ಚ ಗೋನಾಂ 

ಎಷ್ಟು ಅದ್ಭುತ ನೋಡಿ. ಯಾರು ತ್ರಿಕರಣ ಪೂರ್ವಕ ವ್ಯವಹರಿಸುತ್ತಾರೆ ಅದರ ಮೊತ್ತದ ಅಗ್ನಿ=7 ಏಳರಷ್ಟು ಶಕ್ತಿ ಸಂಪತ್ತು ಸಾಧಿಸುವ ವಿಧ್ಯೆಯಿದೆಂದು ಋಷಿ ಘೋಷಿಸಿದ್ದಾನೆ. ಒಬ್ಬ ಚಕ್ರವರ್ತಿಯು ಸಮರ್ಥ ಪುರೋಹಿತನ ಸಹಾಯದಿಂದ ಈ ಸಾಧನೆ ಮಾಡಬಹುದೆಂದಿದೆ. ಇಲ್ಲಿ ಅಶ್ವವೆಂದರೆ ಮನಸ್ಸು. ಕಾಯಾ + ವಾಚಾ + ಮನಸಾ = ತ್ರಿಕರಣ. ಅಂದರೆ ಅದಕ್ಕೆ ಆಧರಿಸಿದ ಮನೋಭೂಮಿಕೆಯೇ ಪ್ರಧಾನ. ಹಾಗಾಗಿ ಅಶ್ವಮೇಧ ಅಥವಾ ಮನೋ ಸಂಸ್ಕಾರ. ಆ ಕಾರ್ಯವೇ ಯಾಗ. ಇದನ್ನು ಅರ್ಥಮಾಡಿಕೊಂಡು ವಿಶ್ವವಿಜಯಿಯಾಗಿ ದೇವತೆಗಳಾಗಿರೆಂದು ಹಾರೈಸುತ್ತೇನೆ. ಈ ಆತ್ರೇಯರ ಶಕ್ತಿ ಸಾಧನಾ ಸೂತ್ರಗಳನ್ನು ಅಧ್ಯಯನ ಮಾಡುವರೆ 5 ಜನರ ಒಂದು ಮನಸ್ಸಿನ ಗುಂಪನ್ನು ಸಾಧಿಸಿಕೊಂಡು ಪ್ರಯತ್ನ ಶೀಲರಾದರೆ ಖಂಡಿತಾ ಯಶಸ್ಸು ಸಾಧ್ಯ. ಇದನ್ನು ಸಾಧಿಸುವ ಛಲವಂತ ದೃಢಮನಸ್ಸಿನ ವ್ಯಕ್ತಿಗಳು ನೀವಾಗಬೇಕು ಅಷ್ಟೆ. ಇನ್ನು ಆತ್ರೇಯರ ಕೆಲ ಪ್ರಾಕೃತಿಕ ವಿಶ್ಲೇಷಣೆ ಅಂದರೆ ಪ್ರಕೃತಿ ಸ್ವಭಾವ, ಮಳೆ+ಬೆಳೆ, ಕಾಡು, ನದಿ, ಗುಡ್ಡ ಬೆಟ್ಟಗಳು, ಹವಮಾನ ವೈಪರೀತ್ಯಗಳು, ಭೂಕಂಪನ, ಇತರೆ ಉತ್ಪಾತಗಳು ಇವುಗಳನ್ನು ಗುರುತಿಸಿ ಆಕಾಶಕಾಯಗಳ ಪರಿಣಾಮದ ಬಗ್ಗೆ ಬರೆದು ಪ್ರಕೃತಿಯ ಜೀವ ಸಂಕುಲದ ಮೇಲೆ ಏನು ಪರಿಣಾಮ ಮಾಡುತ್ತವೆಯೆಂದು ಸೂತ್ರೀಕರಿಸಿ ವಿವರಿಸಿದ್ದಾರೆ. ಅದನ್ನು ಚಕ್ರಬಂಧವೆಂಬ ವಿಶಿಷ್ಟ ಕೋಷ್ಟಕದಲ್ಲಿ ಬರೆದಿರುತ್ತಾರೆ. ಅದರ ಬಗ್ಗೆ ಒಂದಿಷ್ಟು ಬರೆಯಲು ಪ್ರಯತ್ನಿಸುತ್ತೇನೆ.
ಋ.ಮ.5 ಸೂಕ್ತ 30 ಮಂತ್ರ 1-15

ಕ್ವ1(ಅ)ಸ್ಯ ವೀರಃ ಕೋ ಅಪಶ್ಯದಿಂದ್ರಂ ಸುಖರಥಮೀ ಯಮಾನಂ ಹರಿಭ್ಯಾಮ್ | 
ಯೋ ರಾಯಾ ವಜ್ರೀ ಸುತಸೋಮ ಮಿಚ್ಛನ್ ತದೋಕೋ ಗಂತಾ ಪುರುಹೂತ ಊತೀ || 1 ||
ಅವಾಚಚಕ್ಷಂ ಪದಮಸ್ಯ ಸಸ್ವರುಗ್ರಂ ನಿಧಾತುರನ್ವಾಯ ಮಿಚ್ಛನ್ | 
ಅಪೃಚ್ಛಮನ್ಯಾಙ್ ಉತ ತೇಮ ಆಹುರಿಂದ್ರಂ ನರೋ ಬುಬುಧಾನಾ ಅಶೇಮ || 2 ||
ಪ್ರ ನು ವಯಂ ಸುತೇ ಯಾತೇ ಕೃತಾನೀಂದ್ರ ಬ್ರವಾಮ ಯಾನಿ ನೋ ಜುಜೋಷಃ | 
ವೇದದವಿದ್ವಾಞ್ಛೃಣವಚ್ಚ ವಿದ್ವಾನ್ ವಹತೇಽಯಂ ಮಘವಾ ಸರ್ವಸೇನಃ || 3 ||
ಸ್ಥಿರಂ ಮನಶ್ಚಕೃಷೇ ಜಾತ ಇಂದ್ರ ವೇಷೀದೇಕೋ ಯುಧಯೇ ಭೂಯಸಶ್ಚಿತ್ | 
ಅಶ್ಮಾನಂ ಚಿಚ್ಛವಸಾ ದಿದ್ಯುತೋ ವಿ ವಿದೋ ಗವಾಮೂರ್ವಮುಸ್ರಿಯಾಣಾಮ್ || 4 ||
ಪರೋ ಯತ್ತ್ವಂ ಪರಮ ಆಜನಿಷ್ಠಾಃ ಪರಾವತಿ ಶೃತ್ಯಂ ನಾಮ ಬಿಭ್ರತ್ | 
ಅತಶ್ಚಿದಿಂದ್ರಾದಭಯಂತ ದೇವಾ ವಿಶ್ವಾ ಅಪೋ ಅಜಯದ್ದಾಸಪತ್ನೀಃ || 5 ||
ತುಭ್ಯೇದೇತೇ ಮರುತಃ ಸುಶೇವಾ ಅರ್ಚಂತ್ಯರ್ಕಂ ಸುನ್ವಂತ್ಯಂಧಃ | 
ಅಹಿಮೋಹಾನಮಪ ಆ ಶಯಾನಂ ಪ್ರ ಮಾಯಾಭಿರ್ಮಾಯಿನಂ ಸಕ್ಷದಿಂದ್ರಃ || 6 ||
ವಿಷೂ ಮೃಧೋ ಜನುಷಾ ದಾನಮಿನ್ವನ್ನಹನ್ ಗವಾ ಮಘವಂತ್ಸಂಚಕಾನಃ | 
ಅತ್ರಾ ದಾಸಸ್ಯ ನಮುಚೇಃ ಶಿರೋ ಯದವರ್ತಯೋ ಮನವೇ ಗಾತುಮಿಚ್ಛನ್ || 7 ||
ಯುಜಂ ಹಿ ಮಾಮಕೃಥಾ ಆದಿದಿಂದ್ರ ಶಿರೋ ದಾಸಸ್ಯ ನಮುಚೇರ್ಮಥಾಯನ್ | 
ಅಶ್ಮಾನಂ ಚಿತ್ ಸ್ವರ್ಯ1(ಅಂ) ವರ್ತಮಾನಂ ಪ್ರ ಚಕ್ರಿಯೇವ ರೋದಸೀ ಮರುದ್ಭ್ಯಃ || 8 ||
ಸ್ತ್ರಿಯೋ ಹಿ ದಾಸ ಆಯುಧಾನಿ ಚಕ್ರೇ ಕಿಂ ಮಾ ಕರನ್ನಬಲಾ ಅಸ್ಯ ಸೇನಾಃ | 
ಅಂತರ್ಹ್ಯಖ್ಯದುಭೇ ಅಸ್ಯ ಧೇನೇ ಅಥೋಪ ಪ್ರೈದ್ಯುಧಯೇ ದಸ್ಯುಮಿಂದ್ರಃ || 9 ||
ಸಮತ್ರ ಗಾವೋಽಭಿತೋಽನವಂತೇಹೇಹ ವತ್ಸೈರ್ವಿಯು ತಾ ಯದಾಸನ್ | 
ಸಂ ತಾ ಇಂದ್ರೋ ಆಸೃಜದಸ್ಯ ಶಾಕೈರ್ಯದೀಂ ಸೋಮಾಸಃ ಸುಷುತಾ ಅಮಂದನ್ || 10 ||
ಯದೀಂ ಸೋಮಾ ಬಭ್ರುಧೂತಾ ಅಮಂದನ್ನರೋರವೀ ದ್ವೃಷಭಃ ಸಾದನೇಷು | 
ಪುರಂದರಃ ಪಪಿವಾಙ್ ಇಂದ್ರೋ ಅಸ್ಯ ಪುನರ್ಗವಾ ಮದದಾದುಸ್ರಿಯಾಣಾಮ್ || 11 ||
ಭದ್ರಮಿದಂ ರುಶಮಾ ಅಗ್ನೇ ಅಕ್ರನ್ ಗವಾಂ ಚತ್ವಾರಿ ದದತಃ ಸಹಸ್ರಾ | 
ಋಣಂಚಯಸ್ಯ ಪ್ರಯತಾ ಮಘಾನಿ ಪ್ರತ್ಯಗ್ರ ಭೀಷ್ಮ ನೃತಮಸ್ಯ ನೃಣಾಮ್ || 12 ||
ಸುಪೇಶಸಂ ಮಾವ ಸೃಜಂತ್ಯಸ್ತಂ ಗವಾಂ ಸಹಸ್ರೈ ರುಶಮಾಸೋ ಅಗ್ನೇ | 
ತೀವ್ರಾ ಇಂದ್ರಮಮಮಂದುಃ ಸುತಾಸೋಽ ಕ್ತೋ ರ್ವ್ಯುಷ್ಟೌ ಪರಿತಕ್ಮ್ಯಾಯಾಃ || 13 ||
ಔಚ್ಛತ್ ಸಾ ರಾತ್ರೀ ಪರಿತಕ್ಮ್ಯಾಯಾಂ ಋಣಂಚಯೇ ರಾಜನಿ ರುಶಮಾನಾಮ್ | 
ಅತ್ಯೋ ನ ವಾಜೀ ರಘುರಜ್ಯ ಮಾನೋ ಬಭ್ರುಶ್ಚತ್ವಾರ್ಯಸನತ್ ಸಹಸ್ರಾ || 14 ||
ಚತುಃ ಸಹಸ್ರಂ ಗವ್ಯಸ್ಯ ಪಶ್ವಃ ಪ್ರತ್ಯಗ್ರಭೀಷ್ಮ ರುಶಮೇಷ್ವಗ್ನೇ
ಘರ್ಮಶ್ಚಿತ್ತಪ್ತಃ ಪ್ರವೃಜೇಯ ಆಸೀದಯಸ್ಮಯ ಸ್ತಮ್ವಾದಾಮ ವಿಪ್ರಾಃ || 15 ||
1)     ಯಾರು ಯಾರೀತ ಯಾರ ಮನೆಯ ಮಗ
ಯಾರು ಕೊಂದರು ಯಾಕಾಗಿ ಸುತನಾದ
ಯಾರ ಮೇಲಣ ದಯೆಯೊ ಯಾರಿಗಾಗಿ ಈ ತ್ಯಾಗ ಆತುರವೇಕೆ ಲೆಕ್ಕ ಹಾಕು ||
ಯಾರಿಂದಲಾಗುವುದೋ ಮುಂದಿನಾ ಜಿಗುಟು
ಯಾರೆಲ್ಲ ಅರ್ಥ ಮಾಡಿಕೊಂಡರೆ ಯಾರ ಹಂಗಿಲ್ಲ
ಯಾರಿಲ್ಲ ಇವಗೆ ಸಮ ಲೋಕದಲಿ ಅನ್ನ, ವಸನ, ಮೋಹಕೆಣೆಯಿಲ್ಲ ಜಾಣನಿವನು || 1 ||

2)    ಏನಕೇನಕೆ ಬಲ್ಲವರಾರು ಎಲ್ಲವರು ದೇವರೇ
ನಾನೆಂಬ ಆತ್ಮನಿಗೆ ಬಂಧವಿದೆ ದೇವನಿಗಿಲ್ಲ ಕೇಳ್
ನೀನಿಂದು ಅರಿತೆಯಾದರೆ ಜನ್ಮ ಸಂಖ್ಯೆಯ ದಾಟಬಹುದೈ ಭವರೋಗದಿಂದಾ ||
ಆನುವರ ಋಷಿ ಮುನಿಗಳಿತ್ತಿಹರು ಜ್ಞಾನವನು
ನೀನದನರಿತು ಕಳೆ ಭವವ ನೂರರೊಳಗೊಂದು
ಹಾನಿಯಿದೆ ಗುಣಾಕಾರದಲಿ ಕಂಡು ನೀ ದಾಟು ಲೋಕ ವ್ಯಾಪಾರದಲಿ ಸಿಗದೇ || 2 ||

3)    ಮನವು ಸ್ಥಿರವಲ್ಲ ಕೇಳ್ ಮನುಜನಾದೆ
ನೀನೇಕೆ ಪಶುಪಕ್ಷಿಪ್ರಾಣಿಗಳಿಗಿಲ್ಲದಾ ಪರಿ
ನೀನು ಕರ್ಮವನು ಪಡೆದು ಸ್ವತಂತ್ರನಾದೆ ದೇವ ರಕ್ಷಣೆಯಿಲ್ಲ ನೀನೇ ನಡೆಯಬೇಕು ||
ಶಾನುಭೋಗರ ಲೆಕ್ಕದಲಿ ಏರುಪೇರಾಗೆ ಆಗಲೇ 
ನಿನ್ನ ನಡೆದಾರಿ ತಪ್ಪುವುದು ದಶ ದಶದ ಮೇಲಾರು
ಇನ್ನೇಳು ಹದಿಮೂರು ಎಲ್ಲರೊಳಗೊಂದಾಗಿಹುದು ಹದಿನೆಂಟು ಕೇಳೆಂಬೆ || 3 ||

4)   ದಾಸನಾಗೈ ಮನುಜ ನೀ ಹರಿಗೆ ನಿರಂತರ ಉ
ದಾಸೀನ ಮಾಡದಿರು ಲೋಕ ಮೆಚ್ಚುವ ತೆರದಿ
ದಾಸಾನುದಾಸರೊಳು ಒಡನಾಡು ಮುನ್ನ ಇಪ್ಪತ್ತೊಂದನರಿತರೇ ಸಾಕು ||
ದೋಷಿ ನೀನಲ್ಲ ನಿನ್ನಯ ಕರ್ಮ ಎಳೆಯುತಿದೆ ನೀ
ದಾಸನಾಗುವತನಕ ಬಿಡದು ಮೂವತ್ತ್ಮೂರು ಉ
ದಾಸೀನ ಮಾಡದೇ ದಾಟು ಅದಕೆ ಬೇಕು ಈರೇಳು ಮತ್ತೆರಡು ಕಲಾ ಮೊತ್ತದಲೀ || 4 ||

5)    ಇನ್ನು ಕೇಳ್ ಋಣವು ಜನ್ಮಾತರದಲಿ ನಿ
ಇನ್ನೇನ ಮಾಡಿರುವೆ ನೀನರಿಯೆ ಆದರೇನ್
ನೀನೀಗ ಈ ಗೊ ಮೊತ್ತದಲಿ ಮಿಥ್ಯಾಂಕ ಗುಣಿಸಿದೊಡೆ ನಿನ್ನ ಋಣದಳತೆ ಮೊತ್ತ ||
ಬಾನಿನೊಳು ಇರುಳಿನಲಿ ತಾರೆಗಳು ಕಾಣುವವು
ಬಾನು ತಾ ಬರಲು ತಾರೆಗಳಿಲ್ಲ ಜ್ಞಾನದಲಿ
ನೀನೀಗ ಅರಿತೆಯಾದರೆ ಜ್ಞಾನ ಪ್ರಖರತೆಯೊಳಗೆ ಋಣ ಕಾಣದಾಗುವುದು ಕೇಳೆಂಬೇ || 5 ||

6)    ಕೇಳು ಶಂಕರ ಕರುಣೆಯಿಂದ ಪೊರೆವ ಜವನು
ತಾಳು ನೀ ನಿನ್ನ ಬಯಕೆಗೆ ಮಿತಿಯಿಡುಲೀಜಗ
ದೇಳು ಬೀಳುಗಳಲಿ ತೊಳಲಾಡದಂತಿರಲು ದುರಾಸೆಯನು ಬಿಡು ನರನೇ |
ಚಾಳಿಯನು ನಿಗ್ರಹಿಸು ನೀ ಲೆಕ್ಕದಲಿ ನಿರಂತರ ಮೇ
ಲೇಳು ನಿನ್ನ ಜೀವನ ಲೆಕ್ಕ ತಪ್ಪದಿರು ನಿನ್ನಯ
ಏಳು ಬೀಳುಗಳೆಲ್ಲ ಲೆಕ್ಕಾಚಾರದೊಳಗಡಗಿದೆ ಲೆಕ್ಕನರಿತವನೇ ಜಾಣ ಕಾಣಯ್ಯಾ || 6 ||


ಈ ರೀತಿಯಲ್ಲಿ ಆತ್ರೇಯರು ಹಲವು ರೀತಿಯ ಸಾಧನೆಗಳಲ್ಲಿ ಮೆರೆದವರು. ಅವರ ಗಣಿತಜ್ಞತೆ ಅಗಾಧವಾದದ್ದು. ನಿರಂತರ ಸಂಶೋಧನೆಯಲ್ಲಿಯೇ ತೊಡಗಿಕೊಂಡ ಇವರು ಹಠಯೋಗಿಗಳು ನಂತರ ಇವರ ಪರಂಪರೆಯಲ್ಲಿಯೇ ಉಳಿದವರು ದತ್ತ ಉಪಾಸಕರೆಂದು ಕರೆಸಿಕೊಂಡರು. ವೇದ ಪ್ರಾಮಾಣ್ಯವನ್ನೇ ಸ್ವೀಕರಿಸಿದರು. ಉಳಿದ ಕೆಲವು ಜನ ಶಿವ ಪ್ರಧಾನತೆಯನ್ನು ಸ್ವೀಕರಿಸಿ ಹಲವು ಭಿನ್ನ ಭಿನ್ನ ಪಂಥಗಳಾಗಿ ಬೆಳೆದರು. ಅವರಲ್ಲಿ ಕಾಪಾಲಿಕರು, ಅಘೋರಿಗಳು, ಬೋಧರು, ಸಾರಸ್ವತರು, ಸಮಂತರು, ಪಂಚಶಾಲಿಗಳು, ತಾಡವಾಲಿಗಳು, ರಸಸಿದ್ಧರು, ಹಠ ಸಿದ್ಧರು, ಸಾಧ್ಯರು, ಪುನ್ನಾಗರು, ನಾಗರು, ಉಛ್ರಯರು, ಕಾಠಕರು, ಕೃತವೇಷ್ಣಿಗಳು, ಶ್ಮಶಾನಸಿದ್ಧರು, ಗರುಡರು ಹೀಗೆ ಭಿನ್ನ ಭಿನ್ನ ಉಪಾಸನಾ ಮಾರ್ಗ ಹಿಡಿದರು. ಇವರ ಒಬ್ಬೊಬ್ಬರ ಸಾಧನೆಯೂ ಅಪಾರವೇ. ಆದರೆ ಒಗ್ಗಟ್ಟಿಲ್ಲದ ಕಾರಣ ಮೂಲೆಗುಂಪಾಗಿ ಹೋಯ್ತು. ಅವರಲ್ಲಿ ರಸಸಿದ್ಧರಲ್ಲಿ ಒಬ್ಬನಾದ ಋಜಿಶ್ವನೆಂಬ ಯೋಗಿಯು ತಾನು ಸಾಧಿಸಿದ ಸುವರ್ಣಸಿದ್ಧಿಯನ್ನು ಕಪಾಲದಲ್ಲಿ ಬರೆದಿಟ್ಟಿದ್ದಾನೆ. ಮಾನವ ಕಪಾಲ ಲೇಖನವೆಂಬುದು ಒಂದು ವಿಶಿಷ್ಠ ಸಿದ್ಧಿ. ತನಗೆ ತಾನೇ ಓದಿಕೊಳ್ಳಲಾಗದ ಇತರೆಯೆಲ್ಲರಿಗೆ ಸುಲಭ ಸರಳ ರೀತಿಯಲ್ಲಿ ಅರ್ಥವಾಗುವ ಒಂದು ತಂತ್ರಜ್ಞಾನವದು. ದೇಶಾದ್ಯಂತ ಅದು ಪ್ರಚಾರದಲ್ಲಿತ್ತು ಹಣೆಬರಹ ಎಂದು ಅದನ್ನು ಹೇಳುತ್ತಿದ್ದರು. ಈಗ ಅದನ್ನು ಬ್ರಹ್ಮ ಬರೆಯುತ್ತಾನೆ ಎಂಬ ಅಭಿಪ್ರಾಯವಿದೆ. ಆದರೆ ಋಜಿಶ್ವನ ವಿಶಿಷ್ಠ ತಂತ್ರವೇ ಹಣೆಬರಹ. ಅದನ್ನು ಓದುವ ವಿಧಾನವನ್ನೂ ಋಜಿಶ್ವ ಬರೆದಿಟ್ಟಿದ್ದಾನೆ. ರಾಸಚ್ಛುರುಧಶ್ಚಂದ್ರಾಗ್ರಾ ಧಿಯಂ” “ಅಚಿತ್ರಂ ಚಿದ್ಧಿ ಜಿನ್ವಥಾ ವೃದಂತ ಎಂದಿದ್ದಾನೆ. 



ವ್ಯಕ್ತಿಯ ಹಣೆಯ ಮೇಲಿರುವ ಲಿಖಿತ ಎರಡನೇ ವ್ಯಕ್ತಿಯ ಎಡಗೈ ಮೇಲೆ ಮೂಡುತ್ತದೆ ಚಿತ್ರರೂಪದಂತೆ ಅಂದರೆ ನೆಗೆಟಿವ್ ಇಂಪ್ರೆಷನ್ ಹಾಗಾಗಿ ಚಿತ್ರದಂತೆ ಕಾಣಿಸುತ್ತದೆ. ಅದಕ್ಕೆ ಬೇಕಾದ ಕೆಲ ಮೂಲಿಕೆ ಸಂಗ್ರಹಿಸಿ ಹಣೆಗೆ ಲೇಪಿಸಿ ಎಡಗೈ ಹಸ್ತವನ್ನಿಟ್ಟು ಒತ್ತಿದರೆ ಇದು ಸಾಧ್ಯ ಎನ್ನುತ್ತಾನೆ. ಇಂತಹಾ ಕೆಲ ಗೂಢ ವಿಶೇಷ ಸಾಧನೆ ಮಾಡಿದ ಆತ್ರೇಯರಿಗೆ ನಾವೆಲ್ಲಾ ಋಣಿಗಳಾಗಿರುವೆವೆಂದು ಹೇಳುತ್ತಾ ಈ ಆತ್ರೇಯ ಮಂಡಲ ಮುಗಿಸುತ್ತಿದ್ದೇನೆ.

No comments:

Post a comment