Skip to main content

"ಆಶ್ರಮ ಧರ್ಮ ದೀಪಿಕಾ" - ಪುಸ್ತಕ ಪ್ರಕಟಣೆ


Ref. mirellakersten.com

ಬ್ರಹ್ಮಚರ್ಯ ಅದರ ಪರಿಚಯ, ಆಶ್ರಮಧರ್ಮ, ಕರ್ತವ್ಯಗಳು, ಸಾಧನೆಗಳು ಯಾವವು? 

ಮಾನವ ಮಾನವನಾಗಿ ಬದುಕಲು ಶಿಕ್ಷಣವೆಷ್ಟು ಮುಖ್ಯ ಅಲ್ಲವೇ? ಶಿಕ್ಷಣ ಹೇಗಿರಬೇಕು?

ಈ ಜೈವಿಕ ಸಂಕುಲ ನಿರಂತರತೆಗೂ ಆಶ್ರಮ ಧರ್ಮ ವ್ಯವಸ್ಥೆಗೂ ಇರುವ ನಂಟೇನು?

ಮನುಷ್ಯನಿಗೆ ಬರುವ ಕಷ್ಟ ಕೋಟಲೆಗಳಾವವು? ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು?

ಭಾರತೀಯ ಕೌಟುಂಬಿಕ ಪದ್ಧತಿ, ಸಂಸಾರ ಬಂಧಗಳು, ಜನರ ಬಾಂಧವ್ಯದ ನಂಟು, ಗಂಡು+ಹೆಣ್ಣಿನ ಮಾನಸಿಕ ಸ್ಥಿತಿ, ಅವರು ಗೃಹಸ್ಥರಾಗಿ ಆಶ್ರಮರ್ಮ ಸ್ವೀಕಾರ ಮಾಡುವಾಗ ಅವರಿಗಿರುವ ಜ್ಞಾನ, ಧರ್ಮಬದ್ಧತೆ, ಇವನ್ನೆಲ್ಲಾ ಸಂಗ್ರಹಿಸಿ ಅಧ್ಯಯನ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ? 

ಗೃಹಸ್ಥನೊಬ್ಬನು ಸದ್ ಗೃಹಸ್ಥನಾಗಿ ಬದುಕುವುದು ಹೇಗೆ? ಅದರ ಉಪಯೋಗಗಳೇನು?

ಗೃಹಸ್ಥ ಧರ್ಮಾಚರಣೆಯಲ್ಲಿ ಮಳೆ, ಬೆಳೆ, ಸಿದ್ಧಿ, ವೃದ್ಧಿ, ಆಯು, ಆರೋಗ್ಯ, ಸಮಾಜ ಸುಖ, ಸಂತೋಷ, ಇಡೀ ಪ್ರಪಂಚದ ರಕ್ಷಣೆ ಹೇಗೆ ಸಾಧ್ಯ?

ಆಶ್ರಮಧರ್ಮ ಪಾಲನೆಯಿಂದ ಲೋಕಾಃ ಸಮಸ್ತಾಃ ಸುಖಿನೋ ಭವಂತು ಹೇಗೆ ಸಾಧಿಸುವುದು?

ವಾನಪ್ರಸ್ತ ಆಶ್ರಮ ಧರ್ಮ ಹೇಗಿರುತ್ತದೆ?

ಸಂನ್ಯಾಸ, ಪರಿವ್ರಾಜಕ, ಮಹಾಂತಾದಿ, ಬ್ರಹ್ಮರ್ಷಿ, ಸಪ್ತರ್ಷಿ, ಬ್ರಹ್ಮ ಈ ಪಟ್ಟಗಳ ಕರ್ತವ್ಯಗಳೇನು?

17 ವರ್ಷಗಳ ಕಾಲ ಇವುಗಳ ಸಮಗ್ರ ಅಧ್ಯಯನ ನಡೆಸಿ, ಪ್ರಾಯೋಗಿಕವಾಗಿ ಬಳಸಿ ಮೂಢನೂ ಸರ್ವಜ್ಞನಾಗುವಂತೆ ಮಾಡಿ, ಸಾವಿರಾರು ಕುಟುಂಬಗಳನ್ನು ಉಳಿಸಿ, ಸಂಸಾರದ ಭಿನ್ನತೆ ಸರಿಪಡಿಸಿ, ವಿವಾಹ ವಿಚ್ಛೇದನ ಆದವರನ್ನೂ ಒಂದಾಗುವಂತೆ ಮಾಡಲಾಗಿದೆ, ವೃದ್ಧರು ತಮ್ಮ ವೃದ್ಧಾಪ್ಯದಲ್ಲಿ ಪಾಪಭೀತಿಯಿಂದ ನರಳಿ ನರಳಿ ಸಾಯದಂತೆ ಸುಖವಾಗಿರುವಂತೆ ಮಾಡಲು ಸಾಧ್ಯ ಎಂದರೆ ವೇದದ ಅಗಾಧತೆ, ಉಪಯುಕ್ತತೆ ಎಷ್ಟೆಂದು ಅರ್ಥ ಮಾಡಿಕೊಳ್ಳಬಹುದು.

ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇದರ ಸಂಸ್ಥಾಪಕರೂ, ಪೂರ್ವೋತ್ತರೀಯ ಮೀಮಾಂಸಕರೂ, ಬ್ರಹ್ಮರ್ಷಿಗಳೂ ಆದ ಶ್ರೀ ಕೆ.ಎಸ್. ನಿತ್ಯಾನಂದರು ಭಾರತೀಯ ಒಕ್ಕೂಟ ಕುಟುಂಬದ ರಹಸ್ಯವನ್ನು ಅಧ್ಯಯನ, ಪ್ರಯೋಗಗಳ ಮುಖೇನ ಕಂಡುಕೊಂಡಂತೆ ವಟುಜೀವನ, ಗೃಹಸ್ಥಾಶ್ರಮ, ವಾನಪ್ರಸ್ಥ, ಆಧ್ಯಾತ್ಮ ವಲಯ, ಸಂನ್ಯಾಸಾಶ್ರಮ, ಪೀಠಾಧಿಪತಿಗಳು, ಮಠ, ದೇವಾಲಯಗಳು, ಬಿಡಿ ಸಂನ್ಯಾಸಿಯ ಜೀವನ, ಸಾಧು, ಸಂತರು, ಅವಧೂತರು, ಪರಿವ್ರಾಜಕರು, ಸಿದ್ಧರು, ಋಷಿಗಳು, ಮುನಿಗಳು, ಮಹಾಂತರು, ಪರಮಹಂಸರು, ವ್ಯಾಸಾದಿ ಹುದ್ದೆಗಳು, ಸಪ್ತರ್ಷಿ ಪಟ್ಟ, ಬ್ರಹ್ಮರ್ಷಿ ಪಟ್ಟ, ಬ್ರಹ್ಮಪಟ್ಟಗಳ ಬಗ್ಗೆ ಸಿಕ್ಕ ಕೆಲ ಆಧಾರಗಳಿಂದ ಸಂಶೋಧನೆ ಕೈಗೊಂಡು ಆಶ್ರಮ ಧರ್ಮಗಳಲ್ಲಿರುವ ವಿಚಾರಗಳನ್ನು ವಿವರಣಾತ್ಮಕವಾಗಿ ಷಟ್ಪದಿರೂಪದ ಒಂದು ಸಾವಿರ ಪದ್ಯಗಳಲ್ಲಿ ಬರೆದ "ಆಶ್ರಮ ಧರ್ಮ ದೀಪಿಕಾ" ಗ್ರಂಥವು ವೇದಾಧಾರಿತವಾಗಿದ್ದು, ಋಷಿ-ಮುನಿಗಳ ಅನುಮೋದನೆಯಂತೆ ಪರಿಷ್ಕರಣೆಗೊಂಡು, ಕನ್ನಡ ಭಾಷೆಯಲ್ಲಿ ಪ್ರಕಟಗೊಳ್ಳಲಿದೆ. ಇದರ ಪ್ರಕಟಣಾ ಪೂರ್ವ ಬೆಲೆ ರೂ.1000/- ಆಗಿದ್ದು ಆಸಕ್ತರು 30-09-2014 ರ ಒಳಗೆ ಮುಂಗಡವಾಗಿ ಕಾಯ್ದಿರಿಸಿಕೊಳ್ಳಿ. ಪ್ರಕಟಣಾ ನಂತರದ ಬೆಲೆ ರೂ. 1200/-. ಇದರ ಪ್ರಕಟಣಾ ಜವಾಬ್ದಾರಿ ಋತ್ವಿಕ್ ವಾಣಿ ಮಂಡಳಿ, ಚಿಕ್ಕಮಗಳೂರು ಇವರದ್ದು. ಪ್ರಕಾಶಕರು ಓಂಕಾರ್ ಪಬ್ಲಿಕೇಷನ್ಸ್, ಬೆಂಗಳೂರು. ಮುದ್ರಣ ಶ್ರೀಕಾಲಭೈರವೇಶ್ವರ ಆಫ್‍ಸೆಟ್ ಪ್ರಿಂಟರ್ಸ್ ಇವರದ್ದು.

ಈ ಪುಸ್ತಕ ಒಂದು ಜೀವನ ಮಾರ್ಗದರ್ಶಿ. ಇದರ ಮಾರ್ಗದರ್ಶನವು ದರ್ಶಿತನಿಗೆ ಫಲಪ್ರದವಾಗಲು ಗೋಶಾಲೆಗೆ ಸಹಕಾರ ನೀಡಬೇಕು. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೊದಲ ಸಂಪತ್ತು ಗೋ. ನಮ್ಮ ಸಂಸ್ಕೃತಿಯ ಅತ್ಯುಚ್ಚ ದೇವತೆ ಗೋ. ನಮ್ಮೆಲ್ಲಾ ಕಷ್ಟ ಗ್ರಹಚಾರಗಳಿಗೆ ಸಾಂತ್ವನ ನೀಡುತ್ತಿದ್ದುದ್ದು ಗೋ. ಒಂದು ಮಗು ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡಿದ್ದರೆ ಅದಕ್ಕೆ ತಾಯಿಯ ಸ್ಥಾನ ತುಂಬುತ್ತಿದ್ದುದ್ದು ಗೋ. ಹಾಗಾಗಿ ಈ ಪುಸ್ತಕ ಮೂಲಕ ಸಂಗ್ರಹಿಸಿದಾ ಹಣದಿಂದ ಇನ್ನೂ ಹೆಚ್ಚಿನ ಗೋಶಾಲೆ ನಡೆಸಬೇಕೆಂದಿದ್ದೇವೆ. ಅದಕ್ಕಾಗಿ ನಿಮ್ಮ ಹಣದಲ್ಲಿ ಕಿಂಚಿತ್ತು ಗೋವಿಗೆ ಮೀಸಲಿರಲಿ ಎಂದು ಆಶಿಸುತ್ತೇವೆ.

Comments

  1. ಇ ಕೃತಿಯು ಪದ್ಯ ರೊಪದಲ್ಲಿದೆಯ???

    ReplyDelete
    Replies
    1. ಮೂಲತಃ ೧೦೦೦ ಸರಳ ಕನ್ನಡ ಷಟ್ಪದಿ ರೂಪದ ಪದ್ಯಗಳಿವೆ. ಪ್ರತಿ ಅಧ್ಯಾಯದ ಆರಂಭದಲ್ಲಿ ಆಯಾ ಆಶ್ರಮದ ವಿವರಣೆ ನೀಡಲಾಗಿದೆ. ಗೃಹಸ್ಥಾಶ್ರಮದಲ್ಲಿ ಪ್ರತೀ ಪದ್ಯಕ್ಕೂ ಭಾವಾರ್ಥ ನೀಡಲಾಗಿದೆ.

      Delete

Post a Comment

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…