Skip to main content

KaaLi envisioned by MArkandeya Muni


ಚಿತ್ರ: ಮಹಾಕಾಳಿ, ಶ್ರೀ ಮಠ ಬಾಲಕೃಷ್ಣ ಸಂಸ್ಥಾನಮ್, ತಲಕಾಡು 

ಮೊದಲು ಅರಿಯಿರಿ ಗುಣ ಮೂರರನು ಅದರೆರಡು
ಬದಲಾದ ರೂಪ ಮೂಲಶಕ್ತಿಯು ಒಂದು ಒಟ್ಟೇಳು
ವಿಧ ನಿಜ+ಮಾಯೆಯೆಂಬೆರಡು ಸೇರಲು ನವಾವರಣವಿದು ವಿಕೃತಿಯೂ ||
ಒದಗಿ ಬರುವುದು ಸಾಧನೆಯೊಳೊಂದು ಕಾರಣ
ವಿದೆ ಅದುವೆ ಸೃಷ್ಟಿ ರಹಸ್ಯ ಅದಕಾಗಿ ಮಾಯೆಯೂ
ಮೊದಲು ಬಂಧಿಸಿತು ಪ್ರಕೃತಿಯಲಿ ಜೀವಿಗಳ ಅನ್ನ ಋಣವೆಂಬ ಬಂಧನದೀ ||

ಮೂರರಲಿ ಮೊದಲನೆಯ ಸಾತ್ವಿಕವೇಳು ಬಗೆ ಕಾಳಿಯೆಂಬರು
ಮೂರು ಮೂರು ಮತ್ತೊಂದು ಬಗೆ ಸಾತ್ವಿಕದಿ ಅನ್ನ, ರಸ, ರೂಪ
ಮೂರ, ಮುಮುಕ್ಷು, ವೀಕ್ಷ್ಯ, ಶ್ರೌತವೆಂದೆಂಬ ಬಗೆಯಲಿದೆ ಅದುವೇ ಮೋಕ್ಷದಾ ದಾರಿಯೆಂದೂ ||
ನಾರದಾ ಸಂಖ್ಯೆಯಲಿ ಗುರಿ ತೋರಿ ಸದ್ಗುಣದ ವೈಚಾರಿಕತೆಯ
ಮೂರಾರು ಸಮಸಂಖ್ಯೆಯ ಲೋಕದಲಿ ಪ್ರಕಟಗೊಂಡಿತು ಕೇಳಿ
ಮೂರು ಮೂರೇ ಲೋಕದಾ ವಿಕೃತಿಯು ಅದಕೆಂಬರು ವೈಕೃತಿಕ ರಹಸ್ಯವೆಂದೂ ||

ಓಂ ಹ್ರೀಂ ಹ್ರೀಂ ಹುಂ ಸ್ಖಾ ಪ್ರೇಂ ದಶವಕ್ತ್ರೇ
ದಶಭುಜೇ ದಶಪಾದೇಂಜನಪ್ರಭೇ ತ್ರಿಂಶಲ್ಲೋ
ಚನ ಮಾಲಿನಿ ಸ್ಫುರದ್ದಶನ ದಂಷ್ಟ್ರೇ ಭೀಮರೂಪೇ ತಾಮಸಿ ಯೋಗನಿದ್ರೇ ||
ಹರಿಪ್ರಬೋಧ ಕಾರಿಣಿ ಮಧುಕೈಟಭನಾಶಿನಿ
ಚರಾಚರವಶೀಕರಿಣಿ ಮಹಾಮೋಹಪಟಲ
ವಿಧ್ವಂಸಿನಿ ಸರ್ವಸೌಖ್ಯಪ್ರದೇ ಭಗವತಿ ಬುದ್ಧಿರೂಪೇ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಬುದ್ಧಿ
ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮೋಯೆಂದು
ಕೊಂಡಾಡುತಲಿ ಮುನಿವರ ಇಪ್ಪತ್ತೊಂದು ರೂಪದಿ ಸಾತ್ವಿಕದ ||
ಚರ್ಯೆಯೇ ತಾಮಸಿಕ ಕಾಣಿರಿ ಮಾಯೆ ಇದ
ಕಧಿಕಾರಿಣಿಯು ಪ್ರಕೃತಿಯಲಿ ವಿಕೃತಿಯನರಿತ
ಜೀವಿಗಳ ಹುಟ್ಟಿನಾ ಗುರಿಸಾಧನೆಗೆ ವಿಕೃತಿಯೇ ಮೂಲವೆಂದೆಂದಾ ||

ವರಮುನಿಯ ನುಡಿ ಸತ್ಯ ಹತ್ತು ಕೈ ತಲೆಯೆಷ್ಟು
ಬರವೇಕೆ ಸಂಖ್ಯೆಯಲಿರದ ರೂಪಿನ ಕಲ್ಪ ಕಾಲುಗಳು
ಬರಿ ನೆಲದ ಮೇಲೂರಲು ಸಾಧ್ಯವೇ? ಅರಿತುಕೊ ಇದು ರೂಪವಲ್ಲವು ||
ವರಮುನಿಯ ಇಂಗಿತ ಜ್ಞಾನಕ್ಕೆ ಬಲ ಮೂವತ್ತು
ಬರಿಗೈ ಹತ್ತು ಮುಖ ಹತ್ತು ಕಾಲ್ಗಳು ಹತ್ತು ಅಂದೊಡೆ
ವರದೇಹದಾ ಗುಣ ರೂಪಶಕ್ತಿಯು ವಿಕೃತಿಯು ಜ್ಞಾನವೇ ಹೆಚ್ಚು ಅದನರಿಯೆಂದನೂ ||

ಇಂತು
ಕೆ.ಎಸ್.  ನಿತ್ಯಾನಂದ 
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

Comments

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…