Skip to main content

Posts

Showing posts from January, 2014

ಋಗ್ವೇದದಲ್ಲಿ ಗೃತ್ಸಮದ ಋಷಿವರೇಣ್ಯರ ಗಣಿತಸೂತ್ರಗಳು - ೧

ಋಗ್ವೇದದಲ್ಲಿ ಎರಡನೆಯ ಮಂಡಲವು ಗೃತ್ಸಮದ ಮಂಡಲವೆಂದು ಖ್ಯಾತಿ. ಇಲ್ಲಿ ಗೃತ್ಸಮದರು ಶಕ್ತಿ ಉಪಾಸಕರು. ಪ್ರಕೃತಿ ಉಪಾಸಕರು. ಪಂಚಭೂತಾತ್ಮಕ ಈ ಸೃಷ್ಟಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡವರು. ಅವರ ಮಾತಿನಲ್ಲೇ ವಿವರಿಸವುದಿದ್ದರೆ:
ಋಗ್ವೇದ ಮಂಡಲ -೨, ಸೂಕ್ತ-೧, ಮಂತ್ರ-೬,೭ त्वम॑ग्नेरु॒द्रो असु॑रो म॒हो दि॒वस्त्वं शर्धो॒ मारु॑तं पृ॒क्ष ई॑शिषे । त्वंवातै॑ररु॒णैर्या॑सि शंग॒यस्त्वं पू॒षा वि॑ध॒तः पा॑सि॒ नु त्मना॑ ॥ त्वम॑ग्नेद्रविणो॒दा अ॑रं॒कृते॒ त्वं दे॒वः स॑वि॒ता र॑त्न॒धा अ॑सि । त्वं भगो॑ नृपते॒वस्व॑ ईशिषे॒ त्वं पा॒युर्दमे॒ यस्तेऽवि॑धत् ॥
ಜಗತ್ತಿನ ಸಕಲ ಸೃಷ್ಟಿ ಚರಾಚರಗಳಿವೆಯೋ ಅದೆಲ್ಲವೂ ಪ್ರಕೃತಿ = ತಾಯಿ. ಅದೇ ಸಕಲ ಜೀವ ಸಂವಹನ ಶಕ್ತಿ = ಅಗ್ನಿ. ಅಗ್ನಿರೂಪಳಾದ ತಾಯಿಯೇ ಸಕಲ ಜೀವ ಜೀವಾಧಾರ. ಅದರಲ್ಲಿ ಬೇರಿಲ್ಲ. ನದೀ ನದಗಳಿರಲಿ, ವನ ದುರ್ಗಗಳಿರಲಿ, ಕಾಡು ಮೇಡುಗಳಿರಲಿ, ಓಷಧಿಗಳಿರಲಿ, ಲತೆಗಳಿರಲಿ, ಎಲ್ಲವೂ ಕೂಡ ಪ್ರಕೃತಿಯೇ. ಪ್ರಕೃತಿಯ ನಡೆಯೇ. ಸಂಕಲ್ಪವೇ. ನಿಯಮವೇ "ಬ್ರಹ್ಮಸೂತ್ರ". ಯಾರು ಪ್ರಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೋ ಅವರೇ ಪರಬ್ರಹ್ಮಸ್ವರೂಪರು. ಯಾವ್ಯಾವ ಧರ್ಮಶಾಸ್ತ್ರಗಳಿರಲಿ, ವೇದವಾಙ್ಮಯವಿರಲಿ, ಯಾಗ ಯಜ್ಞಗಳಿರಲಿ, ಸೂತ್ರ ಗ್ರಂಥಗಳಿರಲಿ, ಅವೆಲ್ಲವೂ ಪ್ರಕೃತಿಯ ಧರ್ಮ ಆಧರಿಸಿ ಬ್ರಹ್ಮಸೂತ್ರದ ಆಧಾರದಲ್ಲಿ ರೂಪುಗೊಂಡಿದೆ. ಇಂದ್ರಾದಿ ದೇವತೆಗಳೂ, ರಾಜ…