Skip to main content

Posts

Showing posts from February, 2014

ಋಗ್ವೇದದಲ್ಲಿ ಗೃತ್ಸಮದ ಋಷಿವರೇಣ್ಯರ ಗಣಿತಸೂತ್ರಗಳು - ೨

ಹಿಂದಿನ ಲೇಖನದಲ್ಲಿ ಗೃತ್ಸಮದರು ಮಾನವನ ಉನ್ನತಿ ತನ್ಮೂಲಕ ಜೀವ ವಿಕಾಸ ದೃಷ್ಟಿಯಿಂದ ಈ ಯಜ್ಞಗಳು, ಧ್ಯಾನಾದಿಗಳು, ತಪಸ್ಸು, ಸೇವೆ + ಚಿಕಿತ್ಸೆ, ಅಧ್ಯಯನ + ಅಧ್ಯಾಪನ, ಚಿಂತನೆ + ಮನನ, ಕೃಷಿ + ಪಶುಸಂಗೋಪನೆ, ಕ್ಷೇತ್ರಾಧಿವಾಸ,  ಪರ್ಯಟನೆ, ಆತ್ಮನಿವೇದನೆ ಎಂಬ ೧೦ ವಿಶೇಷ ಮಾರ್ಗಗಳನ್ನು ಹೇಳಿದರು ಮತ್ತು ಅವಕ್ಕೆ ಕೆಲ ಉತ್ತಮ ಮಾರ್ಗದರ್ಶನ ಮಾಡಿದರು. ಈ ದಶವಿಧ ಉಪಾಯಗಳನ್ನು ತಿಳಿಸುತ್ತಾ ಇದರ ಬಗ್ಗೆ ವಿಶೇಷ ಸೂತ್ರಗಳನ್ನೂ ಕನ್ನಡ ಕಂದಪದ್ಯಗಳಲ್ಲಿ ನೀಡಲಾಗಿತ್ತು.ಮಾನವನಿಗೆ ಒಂದು ಲೆಕ್ಕವಿದೆ. ಅವನ ಬಂಧುಗಳೂ, ಬಾಂಧವರೂ, ತಂದೆ, ತಾಯಿ, ಸಹೋದರರೂ ಕೂಡ ಋಣ ಲೆಕ್ಕವೇ.ಹಾಗೇ ಹರಿಹರರೂ ಲೆಕ್ಕದಲ್ಲಿರುವವರೇ! ಅವರವರ ಲೆಕ್ಕ ಅವರವರಿಗೆ. ಮಾನವ ತನ್ನ ಲೆಕ್ಕವನ್ನು ಸರಿಯಾಗಿಟ್ಟು ಯಾರ ಲೆಕ್ಕದಲ್ಲಿ ನಿಶ್ಶೇಷನಾಗುತ್ತಾನೋ ಅವನಾಗಿ ಪರಿವರ್ತಿತನಾಗುತ್ತಾನೆ. ಅದೇ ಸಾಧನೆಯೆಂದರು.
ಋಗ್ವೇದ ಮಂಡಲ -೨, ಸೂಕ್ತ-೧೪, ಮಂತ್ರ-೩, ೪, ೫, ೬, ೭.अध्व॑र्यवो॒ यो दृभी॑कं ज॒घान॒ यो गा उ॒दाज॒दप॒ हि व॒लं वः । तस्मा॑ ए॒तम॒न्तरि॑क्षे॒ न वात॒मिन्द्रं॒ सोमै॒रोर्णु॑त॒ जूर्न वस्त्रै॑: ॥    अध्व॑र्यवो॒ य उर॑णं ज॒घान॒ नव॑ च॒ख्वांसं॑ नव॒तिं च॑ बा॒हून् । यो अर्बु॑द॒मव॑ नी॒चा ब॑बा॒धे तमिन्द्रं॒ सोम॑स्य भृ॒थे हि॑नोत ॥     अध्व॑र्यवो॒ यः स्वश्नं॑ ज॒घान॒ यः शुष्ण॑म॒शुषं॒ यो व्यं॑सम् । यः पिप्रुं…