Skip to main content

Posts

Showing posts from June, 2014

ಋಗ್ವೇದದಲ್ಲಿ ಆತ್ರೇಯರ ಅದ್ಭುತ ಸಂಶೋಧನೆಗಳು - 2

ಆತ್ರೇಯರ ವಾಸ್ತು ಪರಿಣಿತಿ, ನಿರ್ಮಾಣ ಶಾಸ್ತ್ರ ಅಗಾಧವಾದದ್ದು. ರಥ ನಿರ್ಮಾಣ ಕಲೆಯಲ್ಲಿ ಅವು ಏಕಚಕ್ರಿ= ಸೂರ್ಯರಥ ಆರಂಭಿಸಿ ಷಣ್ಣವತೀ ಚಕ್ರದವರೆಗೆ ಬಹುಭಾರ ವಾಹಕ, ವೇಗವರ್ಧಕ, ಇಚ್ಛಾಗಮನ, ಸ್ವಯಂಚಾಲಿತ, ಗುರಿ ನಿರ್ದೇಶಿತ ರಥ ನಿರ್ಮಾಣ ವಿಧಾನಗಳನ್ನು ಅರಿತಿದ್ದರು. ಅವೆಲ್ಲಾ ಅಸಾಮಾನ್ಯ ವಿಧ್ಯೆಗಳು. ಅಮೋಘ ತಂತ್ರಜ್ಞಾನ. ಅಷ್ಟಲ್ಲದೇ ವಸ್ತು ವಿಜ್ಞಾನ (ಈಗಿನ ಮೆಟೀರಿಯಲ್ ಸೈನ್ಸ್) ದಲ್ಲಿಯೂ ನಿಪುಣರಾಗಿದ್ದರು. ಆ ಬಗ್ಗೆ ಕೆಲ ವಿಚಾರಗಳನ್ನು ಬರೆದು ಈ ಆತ್ರೇಯ ಮಂಡಲ ಮುಕ್ತಾಯ ಮಾಡುತ್ತೇನೆ. ಋ.ಮ.5 ಸೂಕ್ತ 27 ಮಂತ್ರ 1-6
ಅನಸ್ವಂತಾ ಸತ್ಪತಿರ್ಮಾಮಹೇ ಮೇ ಗಾವಾ ಚೇತಿಷ್ಠೋ ಅಸುರೋ ಮಘೋನಃ |
ತ್ರೈವೃಷ್ಣೋ ಅಗ್ನೇ ದಶಭಿಃ ಸಹಸ್ರೈರ್ವೈಶ್ವಾನರ ತ್ರ್ಯರುಣಶ್ಚಿಕೇತ ||  1 || ಯೋ ಮೇ ಶತಾ ಚ ವಿಂಶತಿಂ ಚ ಗೋನಾಂ ಹರೀ ಚ ಯುಕ್ತಾ ಸುಧುರಾ ದದಾತಿ |
ವೈಶ್ವಾನರ ಸುಷ್ಣುತೋ ವಾವೃಧಾನೋಽಗ್ನೇ ಯಚ್ಛ  ತ್ರ್ಯರುಣಾಯ ಶರ್ಮ || 2 ||ಏವಾ ತೇ ಅಗ್ನೇ ಸುಮತಿಂ ಚಕಾನೋ ನವಿಷ್ಠಾಯ ನವಮಂ ತ್ರಸದಸ್ಯುಃ | 
ಯೋ ಮೇ ಗಿರಸ್ತುವಿಜಾತಸ್ಯ ಪೂರ್ವೀರ್ಯುಕ್ತೇನಾಭಿ ತ್ರ್ಯರುಣೋ ಗೃಣಾತಿ || 3 ||ಯೋ ಮ ಇತಿ ಪ್ರವೋಚತ್ಯಶ್ವಮೇಧಾಯ ಸೂರಯೇ |
ದದದೃಚಾ ಸನಿಂಯತೇ ದದನ್ಮೇಧಾಮೃತಾಯತೇ || 4

ಋಗ್ವೇದದಲ್ಲಿ ಆತ್ರೇಯರ ಅದ್ಭುತ ಸಂಶೋಧನೆಗಳು - 1

ಅತೀ ಪ್ರವೀಣರೂ, ತಾಂತ್ರಿಕ ವಿಧ್ಯಾ ಪಿತಾಮಹರು ಎಂದರೆ ಆತ್ರೇಯರು. ಇವರ ಸಂಶೋಧನೆ ತಂತ್ರಜ್ಞಾನದಲ್ಲಿ ಅಗಾಧವಾಗಿದ್ದು ನಿತ್ಯನೂತನ, ನಿರಂತರ, ಕ್ಷಣಕ್ಷಣಕ್ಕೂ ಬೆಳೆಯುತ್ತಲೇ ಇದೆ. ಅದರ ಕುರಿತು ಎರಡು ಮಾತನ್ನು ಬರೆದು ಅವರ ಗಣಿತದ ಕೊಡುಗೆಯ ಬಗ್ಗೆ ಬರೆಯುತ್ತೇನೆ.
ಅತ್ರಿ ಮುನಿಯಿಂದ ಮುಂದಿನ ಜನರೆಲ್ಲಾ ಆ ಪರಂಪರೆಯ ಎಲ್ಲರೂ ಆತ್ರೇಯರು. ಅತೀ ಬುದ್ಧಿವಂತರೂ, ನಿಷ್ಠರೂ, ಶ್ರದ್ಧಾಳುಗಳೂ, ಕಠೋರ ತಪೋನಿಷ್ಠರೂ, ತಂತ್ರವಿಧ್ಯಾ ಪ್ರವೀಣರೂ, ಕುಶಲರೂ ಆಗಿದ್ದ ಇವರು ನಿರಂತರ ಸಾಧನಾ ಮಾರ್ಗದಲ್ಲಿಯೇ ಇರುವವರು. ಹಾಗೇ “ಏನ ಕೇನ ಪ್ರಕಾರೇಣ” ವೆಂಬಂತೆ ಸಾಧಿಸಿದ್ದನ್ನೆಲ್ಲಾ ಬಳಸಿ ಫಲ ಪಡೆದವರು. ಇವರಲ್ಲಿ ತ್ರಿಶೋಕ, ಅತ್ರಿ, ಗುಣವಂತ, ದತ್ತಾತ್ರೇಯ, ವಂಶಿ, ಪುರು, ನೃಮೇಧ, ಔಡಲ, ಋಚೀಕ, ತ್ರಿತ, ದ್ವಿತ, ಆಪ್ತ್ಯ, ಅನುವಂಶಿ, ಆರ್ಷ್ಣಿಷೇಣ, ವೃಶ, ಜಾನ, ವಸುಶ್ರುತ, ಇಷ, ಗಯ, ಗಯಪ್ಲಾತ, ಸುತಂಭರ, ಧರುಣ, ಮೃಕ್ತವಾಹಾ, ವಪ್ರಿ, ಪ್ರಯಸ್ವಂತ, ಧ್ಯುಮ್ನ, ಶ್ರುತಬಂಧು, ವಿಪ್ರಬಂಧು, ಸುಬಂಧು, ವಸೂಯವ, ತ್ರೈರುಣ, ವಿಶ್ವವಾರಾದಿಯಾಗಿ ಇನ್ನೆಷ್ಟೋ ಜನ ಆತ್ರೇಯರು ನಾನಾ ರೀತಿಯ ಸಾಧನೆ ಮಾಡಿದ ಸಿದ್ಧಪುರುಷರು, ತಪಸ್ವಿಗಳು “ಸಂಕಲ್ಪ ಸೃಷ್ಟಿ”ಯೆಂಬ ಹೊಸಾ ಸೂತ್ರವನ್ನು ಕಂಡುಹಿಡಿದವರು. ಸೃಷ್ಟಿ ಪ್ರಕ್ರಿಯೆಯಲ್ಲಿ ಮಹಾನ್ ಸಾಧನೆ ಮಾಡಿದವರು. ಅಂಗ ಪ್ರತ್ಯಂಗ ಉತ್ಪಾದನಾ ನಿಷ್ಣಾತರು. ಹುಟ್ಟಿದ ಮಗುವಿಗೆ ಕೈಯಿಲ್ಲವೆಂಬ ಕಾರಣಕ್ಕೆ ಶಿಶುವಿಗೆ ಸಾವಿರ ಕೈಗಳನ್ನು ಕೊಟ್ಟ…