Skip to main content

Posts

Showing posts from September, 2014

KaaLi envisioned by MArkandeya Muni

ಚಿತ್ರ: ಮಹಾಕಾಳಿ, ಶ್ರೀ ಮಠ ಬಾಲಕೃಷ್ಣ ಸಂಸ್ಥಾನಮ್, ತಲಕಾಡು 
ಮೊದಲು ಅರಿಯಿರಿ ಗುಣ ಮೂರರನು ಅದರೆರಡು
ಬದಲಾದ ರೂಪ ಮೂಲಶಕ್ತಿಯು ಒಂದು ಒಟ್ಟೇಳು
ವಿಧ ನಿಜ+ಮಾಯೆಯೆಂಬೆರಡು ಸೇರಲು ನವಾವರಣವಿದು ವಿಕೃತಿಯೂ ||
ಒದಗಿ ಬರುವುದು ಸಾಧನೆಯೊಳೊಂದು ಕಾರಣ
ವಿದೆ ಅದುವೆ ಸೃಷ್ಟಿ ರಹಸ್ಯ ಅದಕಾಗಿ ಮಾಯೆಯೂ
ಮೊದಲು ಬಂಧಿಸಿತು ಪ್ರಕೃತಿಯಲಿ ಜೀವಿಗಳ ಅನ್ನ ಋಣವೆಂಬ ಬಂಧನದೀ ||

ಮೂರರಲಿ ಮೊದಲನೆಯ ಸಾತ್ವಿಕವೇಳು ಬಗೆ ಕಾಳಿಯೆಂಬರು
ಮೂರು ಮೂರು ಮತ್ತೊಂದು ಬಗೆ ಸಾತ್ವಿಕದಿ ಅನ್ನ, ರಸ, ರೂಪ
ಮೂರ, ಮುಮುಕ್ಷು, ವೀಕ್ಷ್ಯ, ಶ್ರೌತವೆಂದೆಂಬ ಬಗೆಯಲಿದೆ ಅದುವೇ ಮೋಕ್ಷದಾ ದಾರಿಯೆಂದೂ ||
ನಾರದಾ ಸಂಖ್ಯೆಯಲಿ ಗುರಿ ತೋರಿ ಸದ್ಗುಣದ ವೈಚಾರಿಕತೆಯ
ಮೂರಾರು ಸಮಸಂಖ್ಯೆಯ ಲೋಕದಲಿ ಪ್ರಕಟಗೊಂಡಿತು ಕೇಳಿ
ಮೂರು ಮೂರೇ ಲೋಕದಾ ವಿಕೃತಿಯು ಅದಕೆಂಬರು ವೈಕೃತಿಕ ರಹಸ್ಯವೆಂದೂ ||

ಓಂ ಹ್ರೀಂ ಹ್ರೀಂ ಹುಂ ಸ್ಖಾ ಪ್ರೇಂ ದಶವಕ್ತ್ರೇ
ದಶಭುಜೇ ದಶಪಾದೇಂಜನಪ್ರಭೇ ತ್ರಿಂಶಲ್ಲೋ
ಚನ ಮಾಲಿನಿ ಸ್ಫುರದ್ದಶನ ದಂಷ್ಟ್ರೇ ಭೀಮರೂಪೇ ತಾಮಸಿ ಯೋಗನಿದ್ರೇ ||
ಹರಿಪ್ರಬೋಧ ಕಾರಿಣಿ ಮಧುಕೈಟಭನಾಶಿನಿ
ಚರಾಚರವಶೀಕರಿಣಿ ಮಹಾಮೋಹಪಟಲ
ವಿಧ್ವಂಸಿನಿ ಸರ್ವಸೌಖ್ಯಪ್ರದೇ ಭಗವತಿ ಬುದ್ಧಿರೂಪೇ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಬುದ್ಧಿ
ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮೋಯೆಂದು
ಕೊಂಡಾಡುತಲಿ ಮುನಿವರ ಇಪ್ಪತ್ತೊಂದು ರೂಪದಿ ಸಾತ್ವಿಕದ ||
ಚರ್ಯೆಯೇ ತಾಮಸಿಕ ಕಾಣಿರಿ ಮಾಯೆ ಇದ
ಕಧಿಕಾರಿಣಿಯು ಪ್ರಕೃತಿಯಲಿ ವಿಕೃತಿಯನರಿತ
ಜೀವಿಗಳ ಹುಟ್ಟ…

"ಆಶ್ರಮ ಧರ್ಮ ದೀಪಿಕಾ" - ಪುಸ್ತಕ ಪ್ರಕಟಣೆ

ಬ್ರಹ್ಮಚರ್ಯ ಅದರ ಪರಿಚಯ, ಆಶ್ರಮಧರ್ಮ, ಕರ್ತವ್ಯಗಳು, ಸಾಧನೆಗಳು ಯಾವವು? 

ಮಾನವ ಮಾನವನಾಗಿ ಬದುಕಲು ಶಿಕ್ಷಣವೆಷ್ಟು ಮುಖ್ಯ ಅಲ್ಲವೇ? ಶಿಕ್ಷಣ ಹೇಗಿರಬೇಕು?

ಈ ಜೈವಿಕ ಸಂಕುಲ ನಿರಂತರತೆಗೂ ಆಶ್ರಮ ಧರ್ಮ ವ್ಯವಸ್ಥೆಗೂ ಇರುವ ನಂಟೇನು?
ಮನುಷ್ಯನಿಗೆ ಬರುವ ಕಷ್ಟ ಕೋಟಲೆಗಳಾವವು? ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು?
ಭಾರತೀಯ ಕೌಟುಂಬಿಕ ಪದ್ಧತಿ, ಸಂಸಾರ ಬಂಧಗಳು, ಜನರ ಬಾಂಧವ್ಯದ ನಂಟು, ಗಂಡು+ಹೆಣ್ಣಿನ ಮಾನಸಿಕ ಸ್ಥಿತಿ, ಅವರು ಗೃಹಸ್ಥರಾಗಿ ಆಶ್ರಮಧರ್ಮ ಸ್ವೀಕಾರ ಮಾಡುವಾಗ ಅವರಿಗಿರುವ ಜ್ಞಾನ, ಧರ್ಮಬದ್ಧತೆ, ಇವನ್ನೆಲ್ಲಾ ಸಂಗ್ರಹಿಸಿ ಅಧ್ಯಯನ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ?
ಗೃಹಸ್ಥನೊಬ್ಬನು ಸದ್ ಗೃಹಸ್ಥನಾಗಿ ಬದುಕುವುದು ಹೇಗೆ? ಅದರ ಉಪಯೋಗಗಳೇನು?
ಗೃಹಸ್ಥ ಧರ್ಮಾಚರಣೆಯಲ್ಲಿ ಮಳೆ, ಬೆಳೆ, ಸಿದ್ಧಿ, ವೃದ್ಧಿ, ಆಯು, ಆರೋಗ್ಯ, ಸಮಾಜ ಸುಖ, ಸಂತೋಷ, ಇಡೀ ಪ್ರಪಂಚದ ರಕ್ಷಣೆ ಹೇಗೆ ಸಾಧ್ಯ?

ಆಶ್ರಮಧರ್ಮ ಪಾಲನೆಯಿಂದ ಲೋಕಾಃ ಸಮಸ್ತಾಃ ಸುಖಿನೋ ಭವಂತು ಹೇಗೆ ಸಾಧಿಸುವುದು?
ವಾನಪ್ರಸ್ತ ಆಶ್ರಮ ಧರ್ಮ ಹೇಗಿರುತ್ತದೆ?
ಸಂನ್ಯಾಸ, ಪರಿವ್ರಾಜಕ, ಮಹಾಂತಾದಿ, ಬ್ರಹ್ಮರ್ಷಿ, ಸಪ್ತರ್ಷಿ, ಬ್ರಹ್ಮ ಈ ಪಟ್ಟಗಳ ಕರ್ತವ್ಯಗಳೇನು?
17 ವರ್ಷಗಳ ಕಾಲ ಇವುಗಳ ಸಮಗ್ರ ಅಧ್ಯಯನ ನಡೆಸಿ, ಪ್ರಾಯೋಗಿಕವಾಗಿ ಬಳಸಿ ಮೂಢನೂ ಸರ್ವಜ್ಞನಾಗುವಂತೆ ಮಾಡಿ, ಸಾವಿರಾರು ಕುಟುಂಬಗಳನ್ನು ಉಳಿಸಿ, ಸಂಸಾರದ ಭಿನ್ನತೆ ಸರಿಪಡಿಸಿ, ವಿವಾಹ ವಿಚ್ಛೇದನ ಆದವರನ್ನೂ ಒಂದಾಗುವಂತೆ ಮ…