Skip to main content

Posts

Showing posts from October, 2014

ಸಿರಿಭೂವಲಯದ ಕಿರು ಪರಿಚಯ

ಸಿರಿಭೂವಲಯದ ಕಿರು ಪರಿಚಯ


೧. ಕನ್ನಡ ಭಾಷಾಬೆಳವಣಿಗೆಯ ವಿಚಾರದಲ್ಲಿ ನಮ್ಮ ಇಂದಿನ ಅಭಿಪ್ರಾಯಗಳನ್ನು ಇದು ಎಷ್ಟೇ ತಲೆಕೆಳಗು ಮಾಡಿದರೂ, ಇದೊಂದು ಆಧುನಿಕ ಕೃತಿ ಎಂದು ಸಾಬೀತು ಪಡಿಸುವವರೆವಿಗೂ ಕನ್ನಡ ಸಾಹಿತ್ಯ ಹಾಗೂ ಕನ್ನಡ ಭಾಷಾಚರಿತ್ರೆಗೆ ಸಂಬಂಧಿಸಿದಂತೆ ಇದು ಪ್ರಾಚೀನ ಕೃತಿಗಳಲ್ಲಿ ಒಂದು.
೨. ಸಂಸ್ಕೃತ, ಪ್ರಾಕೃತ, ತಮಿಳು ಮತ್ತು ತೆಲುಗು ಭಾಷೆಗಳ ೯ನೇ ಶತಮಾನದ ಚರಿತ್ರೆಯ ವಿಚಾರದಲ್ಲಿ ಇದು ಕಣ್ತೆರಿಸುವ ಸಾಧನವಾಗಿದೆ.
೩. ಭಾರತೀಯ ತತ್ವಶಾಸ್ತ್ರ ಹಾಗೂ ಮತ ಸಂಪ್ರದಾಯದ ಅಧ್ಯಯನದಲ್ಲಿ - ವಿಶೇಷವಾಗಿ ಜೈನ ಸಂಪ್ರದಾಯದ ಅಧ್ಯಯನದಲ್ಲಿ ಇಂದಿನ ಭಾರತೀಯ ದೃಷ್ಟಿಕೋನದ ಬೆಳವಣಿಗೆಗೆ ಕ್ರಾಂತಿಕಾರಕವಾದ ಹೊಸ ಸಾಮಗ್ರಿಯನ್ನು ಇದು ಒದಗಿಸುತ್ತದೆ.
೪. ಮೈಸೂರಿನ ಅಮೋಘವರ್ಷ ಹಾಗೂ ಗಂಗ ವಂಶದ ರಾಜರ ಆಳ್ವಿಕೆಯ ವಿಚಾರವಾಗಿ ಈ ಗ್ರಂಥದಲ್ಲಿರುವ ಉಲ್ಲೇಖವು ಭಾರತೀಯ ಹಾಗೂ ಕರ್ನಾಟಕದ ರಾಜಕೀಯ ಚರಿತ್ರೆಗೆ ನೂತನ ಸಾಮಗ್ರಿಯನ್ನೊದಗಿಸುತ್ತದೆ.
೫. ಭಾರತೀಯ ಗಣಿತಶಾಸ್ತ್ರದ ಚರಿತ್ರೆಗೆ ಇದೊಂದು ಪ್ರಮುಖ ದಾಖಲೆ. ಭಾರತೀಯರು ೯ನೇ ಶತಮಾನದಲ್ಲೇ- ಅದಕ್ಕಿಂತ ಶತಮಾನಗಳಷ್ಟು ಹಿಂದಿನಿಂದ ಅಲ್ಲವಾದರೂ- ಗಣಿತಶಾಸ್ತ್ರದ ಸ್ಥಾನ ನಿರ್ಣಯದಲ್ಲಿ (Place value) ಪ್ರವೀಣರಾಗಿದ್ದುದನ್ನು ವೀರಸೇನನ ಧವಳಟೀಕೆಯ ಇತ್ತೀಚಿನ ಅಧ್ಯಯನಗಳಿಂದ ಕಾಣಬಹುದಾಗಿದೆ. (ಮುಂದಿನ ಕೆಲವು ವಾಕ್ಯಗಳಲ್ಲಿ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಸೂಚಿಸಿ, ಕುಮುದೇಂದುವು ವೀರಸೇನನಿಗಿಂತಲೂ ಮು…

ಭರದ್ವಾಜ ಮಂಡಲ : ಪ್ರಸೂತಿಕಾ ಶಾಸ್ತ್ರ ಗಣಿತ - 2

ಋಗ್ವೇದ ಮಂ.6 ಸೂಕ್ತ 44 ಮಂತ್ರ- 23 ಅಯಮಕೃಣೋದುಷಸಃ ಸುಪತ್ನೀರಯಂ ಸೂರ್ಯೋ ಅದಧಾಜ್ಜ್ಯೋತಿರಂತಃ |  ಅಯಂ ತ್ರಿಧಾತು ದಿವಿ ರೋಚನೇಷು ತ್ರಿತೇಷು ವಿಂದದಮೃತಂ ನಿಗೂಳ್ಹಮ್ || ಭರದ್ವಾಜರ ಅಭಿಪ್ರಾಯವಿದು ಒಂದು ಸಂತಾನ ಅಥವಾ ಜೀವಿ ಭೂಮಿಗೆ ಬರಲು ಭೌತಶಾಸ್ತ್ರರೀತ್ಯಾ ಬಹಳ ಸರಳ ವ್ಯಾಖ್ಯಾನವಿದೆ. ಆದರೆ ತಂತ್ರಜ್ಞಾನರೀತ್ಯಾ ಚಿಂತಿಸಿದಲ್ಲಿ ಅದರೊಂದಿಗೆ ವಿಶಾಲ ಆಧ್ಯಾತ್ಮಿಕತೆ, ಮನೋಭೂಮಿಕೆ, ಪರಿಸರ, ಆಹಾರ, ಬದ್ಧತೆ, ಇಚ್ಛಾಶಕ್ತಿ ಮತ್ತು ಧೈವೀಕ ಕಾರಣ ಮತ್ತು ಅದನ್ನಾಧರಿಸಿದ ಋಣ, ಕರ್ಮಗಳೂ ಸೇರಿರುತ್ತವೆ. ಹಾಗಾದಾಗ ಅವೆಲ್ಲದರಲ್ಲಿ ಯಾವುದೇ ಕೊರತೆಯಾದರೂ ಸಂತಾನ ಫಲಿಸಲಾರದು. ಆದರೆ ತಂತ್ರಜ್ಞಾನದಿಂದ ಇವೆಲ್ಲಾ ಬಾಧ್ಯತೆಗಳನ್ನೂ ಒದಗಿಸಬಹುದೆಂದು ಅಭಿಪ್ರಾಯ ಪಡುತ್ತಾರೆ. ಅದರ ವಿಚಾರವಾಗಿಯೇ ಹಿಂದಿನ ಮಂತ್ರದಲ್ಲಿ ಹೇಳಿದ್ದು.

ಹೀಗೆ ಭರದ್ವಾಜರು ತಮ್ಮ ಸಂಶೋಧನೆಯಲ್ಲಿ ಕೃತಕ ಭ್ರೂಣ ತಯಾರಿಕೆ, ಕೃತಕ ವೀರ್ಯಾಣು ತಯಾರಿಕೆ, ಕೃತಕವಾಗಿಯೇ ಕುಂಭಗಳಲ್ಲಿ, ದ್ರೋಣಗಳಲ್ಲಿ, ವೇಣುಪಾತ್ರೆಗಳಲ್ಲಿ ಹೇಗೆ ಸಂತಾನ ಪಡೆಯಬಹುದು? ಎಂಬ ಸಂಶೋಧನೆಯಲ್ಲಿ ಅತೀ ಎತ್ತರಕ್ಕೇರಿದರು. ಅಲ್ಲಿ ಒಂದು ಸಣ್ಣ ವಂಶವಾಹೀ ಅಂಶವನ್ನು ಪಡೆದು ಹೇಗೆ ಅಭಿವೃದ್ಧಿಪಡಿಸಬಹುದು? ಎಂದು ಗಣಿತ ಸಮೀಕರಣ ರೀತ್ಯಾ ಬರೆದಿಟ್ಟರು. ಅದರ ಒಂದು ಉದಾಹರಣೆ ಗಮನಿಸಿ.


ಒಂದು ಸವತ್ಸಾ ಅಂದರೆ ಆಗತಾನೇ ಕರು ಹಾಕಿದ ಹಸು, ಅದರ ಅಭಿವೃದ್ಧಿ ದರವನ್ನು ಹದಿನೈದು ವರ್ಷದ ಅವಧಿಯಲ್ಲಿ ಎಷ್ಟಾಗಬಹುದು? ಎಂಬುದು ಈ ಗಣಿ…