Skip to main content

ಪ್ರೀತಿ-ಪ್ರೇಮ-ಬಾಂಧವ್ಯ-ಅನುರಾಗ-ಭೋಗ-ಭವ್ಯ-ಭಾವ೧. ಪರಾ + ಪ್ರಯಃ + ಯಾಯಾಮಿತಿ "ಪ್ರೀತಿಃ" ಎಂದು ಬ್ರಾಹ್ಮಿಯಲ್ಲಿ ಶಬ್ದ ವ್ಯುತ್ಪತ್ತಿ. ಪರಾ ಎಂದರೆ ಮುಂದಿನ ಗುರಿಗೆ ಕರೆದೊಯ್ಯುವ, ಉತ್ತೇಜಿಸುವ, ಪ್ರೇಷಣ, ಉತ್ಕರ್ಷಣ, ಪ್ರಕರ್ಷಣಗಳ ಮೂಲಕ ಜೀವಿಯನ್ನು ಸದಾ ತೊಡಗಿಸುವಂತೆ ಮಾಡುವ ಸ್ವಾಭಾವಿಕ ಗುಣ. ಈ ಗುಣವೇ ಮಾನವತ್ವ ದ್ಯೋತಕ. ಈಗಿನ ಶಿಕ್ಷಣವು ಪ್ರೀತಿಯ ವ್ಯಾಖ್ಯಾನ ಎರಡು ಮದಭರಿತ ಗಂಡುಹೆಣ್ಣುಗಳ ವ್ಯವಹಾರಕ್ಕೆ ಸೀಮಿತಗೊಳಿಸುತ್ತಿದೆ. ಇದಲ್ಲ, ವಿಶಾಲಾರ್ಥವಿದೆ. ಹುಟ್ಟಿದ ಮಗು ಕಣ್ತೆರೆದು ಪ್ರಪಂಚವನ್ನು ನೋಡುವುದಕ್ಕೂ ಪ್ರೀತಿಯೇ ಕಾರಣ. ಮಾನವನಾಗಿ ಬದುಕಿ ಬಾಳಿದ ಸಂತನ ಸಾವೂ ಪ್ರೀತಿಯೇ. ಮಧ್ಯಂತರದ ಎಲ್ಲಾ ವ್ಯವಹಾರವೂ ಪ್ರೀತಿಯ ಬೆಸುಗೆಯಿಂದಲೇ ಜೀವನವನ್ನು ಬೆಸೆದಿರುತ್ತದೆ.
____________________________________________________

೨. ಪ್ರೇಮ:- ತನ್ನ ಪ್ರತ್ಯೇಕತೆಯಲ್ಲಿಯೂ ಅಸ್ತಿತ್ವವನ್ನು ಎತ್ತಿ ತೋರಿಸುವ ಮಕಾರವೇ ಪ್ರೇಮ.
____________________________________________________

೩. ಬಾಂಧವ್ಯ:- ಒಂದಕ್ಕೊಂದರ ಅವಲಂಬನೆಯ ಅನಿವಾರ್ಯತೆಯ ಸ್ವಭಾವ ದ್ಯೋತಕ ಗುಣ.
_______________________________________________

೪. ಅನುರಾಗ:- ತಾನು ಇನ್ನೊಂದಕ್ಕಾಗಿಯೇ ಮೀಸಲು ಎಂಬ ಭವಗುಣವೇ ಪ್ರಕೃತಿಯ ಸ್ವಭಾವ.
_______________________________________________

೫. ಭೋಗ:- ಪ್ರಕೃತಿಯ ಎಲ್ಲವೂ ಅಳತೆಯಲ್ಲಿರುತ್ತಾ ಅದರ ಎಲ್ಲವನ್ನೂ ಅನುಭವಿಸುತ್ತಾ ಜೀವನಾನಂದ ಪಡೆಯುವುದು ಸ್ವಾಭಾವಿಕ ಗುಣ. ಅದೇ ಪ್ರಕೃತಿ.
_______________________________________________

೬. ಭವ್ಯ:- ನೋಟಕಾನಂದ. ಭಾವದ ಭಂಗದಲ್ಲಿ ಜೀವನ ಹಿಂಸೆಯಲ್ಲಿಯೂ ತಡವಿ ಸಮಾಧಾನಿಸಿ ಜೀವನೋತ್ಸಾಹ ಕೊಡತಕ್ಕ ಪ್ರಾಕೃತಿಕ ಸಹಜ ಸುಂದರ ಸ್ವಭಾವವೇ ಭವ್ಯ.
_______________________________________________

೭. ಭಾವ:- ಆರನ್ನು ನೋಡಿ ಅನುಭವಿಸಿ, ತಿಂದು, ಉಂಡು, ಮಿಂದು, ಮಲಗಿ, ಆ.ರಾ.ಮ ಪಡೆಯುವುದೇ ಭಾವ.
_______________________________________________

ಹೀಗೆ ಪ್ರೀತಿಪ್ರೇಮಬಾಂಧವ್ಯಅನುರಾಗಭೋಗಭವ್ಯಭಾವ ಎಂಬ ಏಳು ವಿಧದ ಪಕ್ವತೆಯ ಸಮಗ್ರ ಬದುಕು ಕಂಡುಕೊಂಡ ಏಕೈಕ ಜೀವಿಯೆಂದರೆ ಮಾನವ. ಇತರೆ ಯಾವ ಜೀವಿಗಳಿಗೂ ಇದಿಲ್ಲ. ಪ್ರಕೃತಿಯ ವಿಶೇಷ ಶಕ್ತಿಯೇಪ್ರಕೃತಿಯ ನಿರಂತರತೆಯ ಪೌರುಷವೇ ಮಾನವ. ಇದು ಸತ್ಯ! ಸತ್ಯ! ಸತ್ಯ!

ಈ ಪ್ರಕೃತಿಯ "ಪ್ರೇಮದ" ಕೂಸು "ಮಾನವ". ಇಲ್ಲಿನ ಸ್ವಯಂಕೃತ ಕರ್ಮಾಧಾರಿತ ಜೀವನವನ್ನು ಆಸಕ್ತಿಯಿಂದ ಅನುಭವಿಸುತ್ತಾ ಪ್ರಕೃತಿಯ ನಿರಂತರತೆಗೆ ಸಹಾಯಕ ಮಾನವ ಜೀವನ.

ಪ್ರಕೃತಿಯ "ಪ್ರೀತಿಪೂರ್ವ" ಕೊಡುಗೆಯನ್ನು ತಿರಸ್ಕರಿಸುತ್ತಾ ತಾನೇ ತಾನಾಗಿ ಅವಲಂಬನೆಯಿಲ್ಲದೇ ಬದುಕುತ್ತಾ ಸಾಗುವ ದಾರಿ "ದೇವ".


ಪ್ರಕೃತಿಯ ಸಹಜತೆಯ ಸೊಬಗನ್ನು ನಾಶಪಡಿಸುತ್ತಾ ವಿಕೃತ ಬದುಕನ್ನು ಬದುಕುವುದೇ "ರಾಕ್ಷಸ".

ಭಾವನಾತ್ಮಕ ಜೀವನವೇ ಮಾನವೀಯ ಜೀವನ. ಈ ಮೇಲೆ ಹೇಳಿದ ಬದುಕಿಗೆ ಹಣ ಬೇಡ. ಹಣದಿಂದ ಲಭ್ಯವೂ ಇಲ್ಲ. ಹೆಚ್ಚು ಜಾಗ ಕೊಂಡು ಬೇಲಿ ಹಾಕಿ ಮಧ್ಯೆ ಮಲಗಿ ಭಿಕಾರಿಗಳಾಗಬೇಡಿ. ಒಟ್ಟಾಗಿ ಉಂಡು ಮಲಗಿ ತಬ್ಬಿ ಪ್ರೀತಿಸಿ ಆನಂದಿಸಿರಿ. ಅದೇ ಮಾನವತ್ವ. ಮಾರಾಟಕ್ಕೆ ಸಿಗುವ ವಸ್ತುಗಳು ನಿಮ್ಮ ಶತ್ರುಗಳು. ತಾನಾಗಿ ಸಿಗುವವು ನಿಮ್ಮ ತಾಯಿ, ಶ್ರಮದಿಂದ ಪಡೆಯುವುದು ಕರ್ಮಸಂಚಿತ. ಸುತ್ತಲಿನ ಪ್ರಕೃತಿಯೇ ಧೈವ. ಅದನ್ನು ಆರಾಧಿಸುವುದೇ ನೆಮ್ಮದಿ, ಶಾಂತಿ, ಸುಖ.

`````````````````````````````````೦೧೦೧೦೧೦`````````````````````````````````

Comments

Popular posts from this blog

ಯಾಗದಲ್ಲಿ ಪಶುಬಲಿ ಪ್ರಹಸನ - ಒಂದು ಅಭಿಪ್ರಾಯ

- ಸಂಗ್ರಹ

ಭಾರತ ದೇಶವೆಲ್ಲಿದೆ? ಏನಾಗುತ್ತಿದೆ? ಇದೇನು ಧೈವಸಂಕಲ್ಪ? ನೇತ್ರಾವತಿ ತಿರುವು ಯೋಜನೆಯ ಸಾಧಕ ಬಾಧಕಗಳೇನು?

ಒಂದಾನೊಂದು ಕಾಲದಲ್ಲಿ ಲೋಕಗುರುವಾಗಿದ್ದು, ಸಕಲ ದೇವಾನುದೇವತೆಗಳಿಗೂ ಮಾತೃಭೂಮಿಯೆನ್ನಿಸಿಕೊಂಡ ಈ ಭಾರತ ಭೂಮಿ ಪರಿಸ್ಥಿತಿ ಕೈಮೀರಿ ಹೋಗಿದ್ದು ಯಾವುದೇ ಧರ್ಮ, ಮತ, ದೇವರು, ಚಿಂತಕ, ಬುದ್ಧಿಜೀವಿ ದಡ ದಾಟಿಸಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಇದರ ಕಾರಣದ ಹಿನ್ನೆಲೆಯಲ್ಲಿ ನಾವು ಚಿಂತಿಸಹೊರಟರೆ ಒಂದು ಭಯಾನಕ, ಬೀಭತ್ಸ ಚಿತ್ರಣ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಚಿಂತನಾ ಪ್ರಬಂಧ ಬರೆದು ಲೇಖಿಸುವ ಮತ್ತು ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಗಮನಿಸಿ. ಓದಿ. ನಿಮಗೆ ಬೇಕಿದ್ದರೆ ತಿದ್ದುವ ಪ್ರಯತ್ನ ಮಾಡಿರಿ ಎಂದು ಪ್ರಾರ್ಥನೆ.
ಮೊದಲಾಗಿ ಭಾರತದೇಶದ ಮೂಲ ತಳಹದಿಯ ಚಿಂತನೆ ಮಾಡೋಣ. ಒಂದು ಯಾವುದೇ ಅಭಿವೃದ್ಧಿ ಸಾಧಿಸಲಿ ಅದು ಈ ಮೂಲ ತಳಹದಿಯ ನೆಲೆಯಲ್ಲೇ ಸಾಗಿರಬೇಕು. ಆಗ ನಿರಂತರ ಅಬಾಧಿತ, ಲಾಭದಾಯಕ, ಬೌದ್ಧಿಕ ಉನ್ನತಿಗೆ ಕಾರಣ. ಮಾನವೀಯ ಸಮೃದ್ಧ ಸಮಾಜ ಸೃಷ್ಟಿ ಸಾಧ್ಯ. ಮೂಲ ಸಿದ್ಧಾಂತ ಬಿಟ್ಟರೆ ಅದೆಂದೂ ಉದ್ಧಾರವಾಗಲಾರದು. ಸರ್ವಜ್ಞ ನೊಂದು ಮಾತು ಹೇಳಿದ್ದಾನೆ “ಕಜ್ಜಿಯ ಕೆರೆದಂತೆ” ಎಂದು. ಕೆರೆಯುವಾಗ ಆರಂಭದಲ್ಲಿ ಆಪ್ಯಾಯಮಾನ, ಆನಂದದಾಯಕ. ನಂತರ ಕೆರೆತದ ಕಾರಣದಿಂದಾಗಿ ಹುಣ್ಣಾಗಿ ಕೊಳೆತರೆ ಆ ಅಂಗವೇ ಕತ್ತರಿಸಬೇಕಾದೀತು. ನಂತರ ವಿಕಲಾಂಗವೇ ಗತಿ ಪುನಾರೂಪಿಸಲಾಗದ್ದು. ಈಗಿನ ನಮ್ಮ ರಾಜಕಾರಣಿಗಳು, ಯೋಜನಾಧಿಕಾರಿಗಳು ಈ ಕಜ್ಜಿ ಕೆರೆತದಷ್ಟೇ ಫಲ ನಿರೀಕ್ಷೆಯ ಯೋಜನೆ ತಯಾರಿಸುತ್ತಿದ್ದಾರೆ. ಭವಿಷ್ಯದ ಪರಿಣಾಮ ಅಷ್ಟೇ ಅಪಾಯಕಾರಿ. ಉದಾ:-…