Saturday, 13 June 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೫-೮

                             ಸರ್ವಭಾಷಾಮಯೀಭಾಷಾ ಸಿರಿಭೂವಲಯ ಗ್ರಂಥದ ಸ್ಥೂಲ ಪರಿಚಯಐದನೇ ಅಧ್ಯಾಯ

    ಗುರುಪರಂಪರೆಯ ಐದು ಜನಗಳ ಜ್ಞಾನದ ಮಹಿಮೆಯಿಂದ ತನ್ನ ಕಾಲದ, ಅದಕ್ಕೆ ಹಿಂದಿನ, ಮುಂದಿನ (ಅಂದರೆ ಭೂತ, ವರ್ತಮಾನ, ಭವಿಷ್ಯತ್ ಎಂಬ) ಮೂರು ಕಾಲಾವಧಿಗಳ ವಿಚಾರಗಳನ್ನೆಲ್ಲ ಆಕಾಶದಲ್ಲಿ ಸಂಚರಿಸುವವನು ಜಗತ್ತನ್ನು ನೋಡುವ ಕ್ರಮದಲ್ಲಿ ತನ್ನ ಕಾವ್ಯವು ರಚನೆಯಾಗಿರುವುದನ್ನು ಸೂಚಿಸುವುದರೊಂದಿಗೆ ಐದನೇ ಅಧ್ಯಾಯವು ಪ್ರಾರಂಭವಾಗಿದೆ. ಇಂದಿನ ಆಧುನಿಕ ಸೂಪರ್ ಕಂಪ್ಯೂಟರ್ನ ಸಾಮರ್ಥ್ಯವನ್ನೂ ಮೀರಿಸಿದ ಗಣಕಯಂತ್ರ ಕ್ರಮದ ತಾಂತ್ರಿಕ ಪರಿಣತಿಯನ್ನು ಸೂಚಿಸಿದ್ದಾನೆ! ( ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ|ಅವರೊಳನನ್ತವ ಸಕಲಾನ್ | ಕವ ನವದೊಳ್ ಸವಿಯಾಗಿಸಿ ಪೇಳುವ | ನವಸಿರಿ ಇರುವ ಭೂವಲಯ| ಅ., ಪದ್ಯ..) ಆತ್ಮದ ರೂಪು ಎಂಬ ಮಹತ್ತರವಾದ ವಿಚಾರವನ್ನು ಇಹಲೋಕದ ಕಾಲ ಪರಿಸರದ ವಿವರಗಳಿಂದ ಸ್ಪಷ್ಟಗೊಳಿಸುವ ಕಾವ್ಯ ಎಂದು ವಿವರಿಸಿದ್ದಾನೆ. ಒಂಬತ್ತು ಎಂಬ ಅಂಕಿಯ ಮಹತ್ವವನ್ನು ನಾನಾ ರೀತಿಯಲ್ಲಿ ವರ್ಣಿಸಿದ್ದಾನೆ. ಈ ನವಮಾಂಕವು ಎಲ್ಲದರೊಂದಿಗೂ ಬೆರೆತು ಬೆಂದಿರುವ ಒಂದು ಅಂಕಿಯಾಗಿ, ಸಸ್ಯದ ರಸವು ಮೂಲಿಕೆಗಳ ಸಾರವನ್ನು ಹೀರಿಕೊಳ್ಳುವಂತೆ ಈ ಹೊಸದಾದ ಕರ್ಣಾಟಕದ ಭೂಷೆಯು ಉಳಿದೆಲ್ಲ ಭಾಷೆಗಳನ್ನೂ ಒಳಗೊಂಡಿದೆ ಎಂದು ಸೂಚಿಸಿದ್ದಾನೆ.

  ಕನ್ನಡದ ಪದಗಳು ಪದಗಳ ಪದ್ಮದಳದಂತೆ, ಇದು ಹೃದಯ ಪದ್ಮದ ದಲವನ್ನೇರುತ್ತವೆ. ದಯೆತುಂಬಿರುವುದೆನಿಸಿ ಮೆದುಳನ್ನು ಹೊಕ್ಕು ಕೇಳುಗರಿಗೆ ಕರ್ಮದಾಟವನ್ನು ತಿಳಿಸುವುದೆಂದು ಕನ್ನಡದ ಹಿರಿಮೆಯನ್ನು ಸಾರಿದ್ದಾನೆ! ಮಹಾವೀರನು ೨೪ನೇ ತೀರ್ಥಂಕರ. +=ನ್ನು ಮಹಾಮಹಿಮೆಯುಳ್ಳ ರಿಂದ ಗುಣಿಸಿದರೆ (x=೫೪) ೫೪ ಬರುತ್ತದೆ. ಈ ೫೪  ಸಂಖ್ಯಾತದಂಕವೆಂದು ಸೂಚಿಸಿದ್ದಾನೆ.                           

  ಲಿಪಿಗಳಿರುವ ಭಾಷೆ; ಲಿಪಿ ಇಲ್ಲದ ಭಾಷೆ; ಹುಟ್ಟಿರುವ ಭಾಷೆ; ಹುಟ್ಟದಿರುವ ಭಾಷೆ ಎಲ್ಲವಕ್ಕೂ ಈ ಅಂಕಲಿಪಿಯು ಒದಗಿ ಬರುವುದೆಂದು ತಿಳಿಸಿದ್ದಾನೆ. ಎಲ್ಲಕಾಲದ ಎಲ್ಲ ಭಾಷೆಯ ಎಲ್ಲ ಶಬ್ದಗಳೂ ಇದರಲ್ಲಿ ಅಡಕವಾಗಿವೆಯೆಂದು ಸ್ಪಷ್ಟಪಡಿಸಿದ್ದಾನೆ. ಅಂದಮೇಲೆ ಇದರಿಂದ ಹೊರತಾಗಿ ಉಳಿಯುವುದು ಯಾವುದೂ ಇಲ್ಲ! ಇದೊಂದು ಕಾಲಾತೀತವಾದ ಸಾಹಿತ್ಯವಾಗಿದೆ ಎಂಬುದು ಸ್ವಯಂವೇದ್ಯ. ಸಿದ್ಧಮಾತೃಕಾ ವರ್ಣಮಾಲೆಯ ವಿವರಗಳನ್ನೂ ಈ ಅಧ್ಯಾಯದಲ್ಲಿ ನಿರೂಪಿಸಿದ್ದಾನೆ. ಬ್ರಾಹ್ಮಿಯ ಅಕ್ಷರಲಿಪಿ ಹಾಗೂ ಸೌಂದರಿಯ ಅಂಕಲಿಪಿಯಿಂದ ಎಲ್ಲ ದೇಶಗಳ ಅಂಕಿಯನ್ನೂ ಹೆಸರಿಟ್ಟು ಅರಿಯಬಹುದೆಂದು ಹೇಳಿದ್ದಾನೆ.

  ರಿಂದ ರ ವರೆಗಿನ ಅಂಕಿಗಳನ್ನು ಅನುಲೋಮ ಹಾಗೂ ಪ್ರತಿಲೋಮ ಕ್ರಮದಲ್ಲಿ ಬರೆದುಅವುಗಳನ್ನು ಕೂಡಿದರೆ ಸೊನ್ನೆಯ ಮುಂದೆ ಒಂದುಗಳು ಬರುವುದೆಂದು ಹೇದ್ದಾನೆ.    
  
               
               
                                                                

ಸೊನ್ನೆ ಸಹಿತವಾದ ಅಂಕಿಗಳ ಈ ನವಮಾಂಕ ಪದ್ಧತಿಯ ೬೪ ಅಕ್ಷರಗಳನ್ನು ಬಾಹುಬಲಿಯು ಅಕ್ಕತಂಗಿಯಾರಾದ ಬ್ರಾಹ್ಮಿ ಹಾಗೂ ಸೌಂದರಿಯು ಅರಿತಿದ್ದರೆಂದು ಸೂಚಿಸಿದ್ದಾನೆ. ಮೊದಲನೇ ತೀರ್ಥಂರ ಋಷಭದೇವನಿಂದಾರಂಭಿಸಿ, ಮಹಾವೀರನವರೆಗಿನ ೨೪ ಜನತೀರ್ಥಂಕರರ ಹೆಸರನ್ನು ಸೂಚಿಸಿದ್ದಾನೆ.
*   *    *

ಆರನೇ ಅಧ್ಯಾಯ

ಆರನೇ ಅಧ್ಯಾಯದ ಪ್ರಾರಂಭದಲ್ಲಿಯೇ ಈ ಸಿರಿಭೂವಲಯ ಗ್ರಂಥವು, ಮೂರರ ಮಗ್ಗಿಯ ಗಮಕದಿಂದ ತಿಳಿಯಬಹುದಾದ; ತ್ರಿಕಾಲದ; ಸರ್ವಜೀವರಾಶಿಗಳ ಭಾಷೆಯ ಸಮಸ್ತ ಶಬ್ದಗಳನ್ನೊಳಗೊಂಡ ಸರ್ವಜ್ಞದೇವನ ವಾಣಿ; ೭೧೮ ಭಾಷೆಗಳ ಸಾಹಿತ್ಯವು ಅಡಕವಾಗಿದೆ ಎಂಬ ಅತಿ ಪ್ರಮುಖವಾದ ಅಂಶವನ್ನು ಸ್ಪಷ್ಟಪಡಿಸಿದ್ದಾನೆ! ಜಿನಧರ್ಮದ ಮಹತ್ವವನ್ನು ಸೂಚಿಸುವಲ್ಲಿ ಈ ಧರ್ಮದಿಂದ ಏನೆಲ್ಲ ಆಗುವುದೆಂಬ ವಿವರವನ್ನು ಸೂಚಿಸಿದ್ದಾನೆ.

  ಅದ್ವೈತ ತತ್ವವು ಶಂಕರರಿಂದ ಪ್ರತಿಪಾದಿಸಲ್ಪಟ್ಟಿದೆ. ಆದರೆ ಈ ಅದ್ವೈತದ ಮೂಲಕಲ್ಪನೆಯನ್ನು ಅವರಿಗೂ ಮೊದಮೊದಲು ಸಾವಿರವರ್ಷಗಳ ಹಿಂದೆ, ಮಹಾವೀರನು ಪ್ರತಿಪಾದಿಸಿದ್ದ ಎಂಬ ಸಂಗತಿಯನ್ನು ವಿವರಿಸಿದ್ದಾನೆ. 'ಮಹಾವೀರನ ವಾಣಿಯೆಂಬುದೇ ತತ್ವಮಸಿಯಾಗಿ| ಮಹಿಯಮನ್ಗಲವದು ಪ್ರಾ| ಭೃತ್ವವ ಅಣುವಿನೊಳ್ ತೋರುವ ಮಹಿಮೆಯ| ವಹಿಸಿಹ ದಿವ್ಯಪ್ರಾಭೃತದ|' ಎಂದಿದ್ದಾನೆ(ಅ..ಪದ್ಯ.೫೬) ಇದರಿಂದ ಅದ್ವೈತ ಸಿದ್ಧಂತವು ಶಂಕರರಿಗೆ ಮೊದಲಿನಿಂದಲೂ ಆದಿತೀರ್ಥಂಕರ ಋಷಭದೇವನ ಕಾಲಕ್ಕಿಂತಲೂ ಮೊದಲಿನಿಂದ; ಗಾಯತ್ರೀ ಮಂತ್ರದ ದ್ರಷ್ಟಾರನಾದ ವಿಶ್ವಾಮಿತ್ರನ ಕಾಲದಿಂದಲೂ ಹಿಂದಿನಿಂದ ಪ್ರಚಾರದಲ್ಲಿದ್ದ ಸಿದ್ಧಾಂತವೆಂಬ ಸಂಗತಿಯು ಸ್ಪಷ್ಟವಾಗುತ್ತದೆ. ಅಂದ ಮಾತ್ರಕ್ಕೇ ಶಂಕರರ ಮಹತ್ವವೇನೂ ಕಡಿಮೆಯಾಗುವುದಿಲ್ಲ. ಮಂಗಲಪ್ರಾಭೃತದ ಮೂಲ ಆಶಯವನ್ನು ಸಮರ್ಪಕವಾಗಿ ತಿಳಿದು ಪುನಃ ಪ್ರತಿಪಾದಿಸಿ ಪ್ರಚಾರಕ್ಕೆ ತಂದ ಕೀರ್ತಿಯು ಶಂಕರರಿಗೇ ಸಲ್ಲುತ್ತದೆ. ಶಂಕರರ ಬರಹಗಳು ಸಂಸ್ಕೃತ ಭಾಷೆಯಲ್ಲಿವೆ; ಇದೇ ಕಾರ್ಯವನ್ನು ಕುಮುದೇಂದುಮುನಿಯು ಕಟ್ಟಾ ಕನ್ನಡಾಭಿಮಾನಿಯಾಗಿ, ಕನ್ನಡ ಭಾಷೆಯಲ್ಲಿ ಮಾಡಿದ್ದಾನೆ! ಈ ಕಾರಣದಿಂದಾಗಿ ಇವನು ಕನ್ನಡಿಗರ ಆರಾಧ್ಯ ದೈವವಾಗಬೇಕು.

  ನಮ್ಮ ಮನಸ್ಸು ಬುದ್ಧಿಯಲ್ಲಿ ದೋಷ ತುಂಬಿ ರಾಶಿಯಾಗಿದ್ದಾಗ, ಈಶ್ವರನಲ್ಲಿ ಭೇದತೋರುತ್ತದೆ. ರತ್ನತ್ರಯದಾಶೆ ಬಂದವರಿಗೆ ದೋಷ ಕಳೆಯುವುದೆಂದು ತಿಳಿಸಿದ್ದಾನೆ. (ಮುಂದೆ ರತ್ನತ್ರಯವೆಂದರೆ ಆದಿಯ ಅದ್ವೈತ; ಧ್ಯದ್ವೈತ ಅನಂತರದ ಸ್ಯಾದ್ವಾದ ಎಂದು ಸೂಚಿಸಿದ್ದಾನೆ) ಸಹವಾಸ ದೋಷದಿಂದ ಈ ಸಂಸಾರದ ಕತ್ತಲೆಯಲ್ಲಿರುತ್ತೇವೆ. ಆವರಿಸಿರುವ ಕತ್ತಲೆಯು ಕಳೆದರೆ ದೊರೆಯುವುದೇ ಸುಖವಾದ ಮೋಕ್ಷ ಎಂದು ನಿರೂಪಿಸಿದ್ದಾನೆ. ( ಅಂದಮೇಲೆ ಅದ್ವೈತತ್ವವು ಅನಾದಿಯಾದುದು; ದ್ವೈತವು ಅನಂತರ ತಲೆ ಎತ್ತಿದ್ದು; ಇವೆರಡನ್ನೂ ಸಮನ್ವಯ ಗೊಳಿಸಿಕೊಂಡ ಸ್ಯಾದ್ವಾದವು ಋಷಭದೇವನ ಸಮೀಪಕಾಲದಲ್ಲಿ ರೂಪುಗೊಂಡಿದೆ ಎಂಬ ವಿಚಾರವು ಸ್ಪಷ್ಟವಾಗುತ್ತದೆ. ಋಷಭದೇವನೆಂದರೆ ಆದಿನಾಥ ಪರಶಿವ. ಆಗ ಶಂಕರಾಚಾರ್ಯರು ಅದ್ವೈತವನ್ನು ಸ್ಥಾಪಿಸಿದರು; ಮಧ್ವಾಚಾರ್ಯರು ದ್ವೈತವನ್ನು ಸ್ಥಾಪಿಸಿದರು ಎಂಬ ಇಂದಿನವರ ತಿಳುವಳಿಕೆಯು ತಪ್ಪುಕಲ್ಪನೆ ಎಂಬುದು ಖಚಿತವಾಗಿ ನಿರ್ಧಾರವಾದಂತಾಯಿತು). ಈ ಅಧ್ಯಾಯದಲ್ಲಿಯೂ ಸಿರಿಭೂವಲಯದ ಮಹತ್ವವನ್ನು ವಿಸ್ತಾರವಾಗಿ ವಿವರಿಸಿದ್ದಾನೆ. 'ಮನುಜರಿಗೆಲ್ಲರ್ಗೊಂದೇಧರ್ಮ' ಎಂಬ ಸಾರ್ವಕಾಲಿಕ ಸತ್ಯವನ್ನು ಸೂಚಿಸಿದ್ದಾನೆ. ಜಗಳವಾಡದೇ ಬಾಳುವುದರ ಮಹತ್ವ ತಿಳಿಸಿದ್ದಾನೆ. ಹರಿ; ಹರ; ಜಿನಧರ್ಮಗಳು ಮೂರೂ ಒಂದೇ ಎಂಬ ಸಮನ್ವಯವನ್ನು ಸಾರಿದ್ದಾನೆ. ಈ ಮೂರು ಮೂರಲ ( x = ) ಒಂಬತ್ತೇ (ನವಮಾಂಕವೇ) ಸಿರಿಭೂವಲಯ ಕಾವ್ಯದ ಜೀವಾಳವೆಂಬುದನ್ನು ಸೂಚಿಸಿದ್ದಾನೆ. ಅದ್ವೈತದ ಕೊನೆಗೆ ಜೈನರಮಂತ್ರವು ಸೇರುವುದೆಂಬ ವಾಕ್ಯದೊಂದಿಗೆ ಆರನೇ ಅಧ್ಯಾಯದ ಅಕ್ಷರಗಳ ಸಂಖ್ಯೆಯನ್ನು ಸೂಚಿಸಿದ್ದಾನೆ.
*   *    *

ಏಳನೇ ಅಧ್ಯಾಯ

  ಅಂಕಾಕ್ಷರಗಳ ವ್ಯಾಪ್ತಿಯನ್ನು ಸೂಚಿಸುತ್ತಾ , , , , ಳ್, , , , ಗಳೆಂಬ ೯ ಸ್ವರಾಕ್ಷರಗಳಿಂದಲೇ ಕಾವ್ಯರಚನೆಯು ಸಾಧ್ಯವಿಲ್ಲ ಎಂಬುದನ್ನು ಸೂಚಿಸುವುದರೊಂದಿಗೆ ಏಳನೇ ಅಧ್ಯಾಯವು ಪ್ರಾರಂಭವಾಗಿದೆ. ದರ್ಶನ, ಜ್ಞಾನ, ಚಾರಿತ್ರವೆಂಬ ಮೂರು ರತ್ನಗಳು ಸೇರಿರುವ ವಿಚಾರವನ್ನು ಬರೆಯಬಾರದ; ಬರೆದರೂ ಓದಬಾರದ ಸಿರಿಯ ಸಿದ್ಧತ್ವವಿರುವ ಭೂವಲಯ ಎಂದು ಆತ್ಮಜ್ಞಾನದ ಪಾವಿತ್ರ್ಯವನ್ನು ಪ್ರತಿಪಾದಿಸಿದ್ದಾನೆ. ಹರಿ; ವಿರಂಚಿ; ಅರಹಂತ; ಗುರು; ಸದ್ಗುರು; ಪುರುದೇವ; ಹರ; ಶಿವ; ಗುರುಪರಂಪರೆಯಾಶಾವಲಯ ಎಂದು ಸೂಚಿಸುತ್ತ ಧರಸೇನಗುರುವಿನ ಹೆಸರು ಹೇಳಿದ್ದಾನೆ.

 ೨೪ ಜನ ತೀರ್ಥಂಕರರ ಉಪದೇಶವೂ ಮಾನವರ ಮೋಕ್ಷಮಾರ್ಗದ ದರ್ಶಿನಿ ಎಂಬದನ್ನು ತಿಳಿಸಿದ್ದಾನೆ. ೨೪ ಜನ ತೀರ್ಥಂಕರರನ್ನು ತ್ರಿಕಾಲದಲ್ಲಿ ಗುಣಿಸಿದಾಗ ಬರುವ ಅಂಕಿ ೭೨ ಅನ್ನು ರರಿಂದ ಗುಣಿಸಿದಾಗ ಬರುವ ಅಂಕಿ . ಈ ಒಂಬತ್ತರ ಮಗ್ಗಿಯಲ್ಲಿ ಸೇರುವ ೭೨ ಅನ್ನು ೧೪ ರಿಂದ ಗುಣಿಸಿದಾಗ ಬರುವುದು ೧೦೦೮ ದಲಗಳ ಪದ್ಮವೆಂದೂ, ಇದನ್ನು ೨೨೫ ರಿಂದ ಗುಣಿಸಿದಾಗ ಬರುವ ಅಂಕಿ ೨೨೬೮೦೦ (೧೦೦೮ x ೨೨೫=೨೨೬೮೦೦) ಇದರ ಸಂಯುಕ್ತಾ೦ಕ . ಈ ಒಂದೇ ಪಾದದ ಶಕ್ತಿಯ ಪುಣ್ಯವು ರಾಶಿರಾಶಿ ಬೇರೆ ಬೇರೆ ಕ್ರಮದ ಗಣಿತದಲ್ಲಿ ಆತ್ಮಸ್ವರೂಪವನ್ನು ಸಿದ್ಧ ರಸವನ್ನಾಗಿಸುವುದೆಂದು ನವಮಾಂಕ ಗಣಿತದ ಮಹತ್ವವನ್ನು ವಿವರಿಸಿದ್ದಾನೆ. ಈ ರೀತಿ ಪ್ರತಿಪಾದಿತ ಹಲವು ಗಣಿತ ವಿಚಾರಗಳು ಭಾರತೀಯ ಗಣಿತಶಾಸ್ತ್ರ ಅಭ್ಯಾಸ ಮಾಡುವವರಿಗೆ (ಸಾಂಖ್ಯರಿಗೆ) ಮಾತ್ರ ಅರ್ಥವಾದೀತು. ನಮಗೆ ತಿಳಿಯುವುದು ಬಹಳ ಕಠಿಣವಾಗುತ್ತದೆ.

  ಈ ಕಾವ್ಯದಲ್ಲಿ ಆರುಸಾವಿರ ಪ್ರಶ್ನೆಗಳಿಗೆ ಉತ್ತರವಿದೆಯೆಂದು ಹೇಳಿದ್ದಾನೆ. ಮಹಾವೀರನ ಗಣಧರ ಗೌತಮನಿಂದ ಅರುವತ್ನಾಲ್ಕಕ್ಷರಯುಕ್ತವಾಗಿ ಬಂದಿರುವ ಈ ಕಾವ್ಯದಲ್ಲಿ ಕನ್ನಡದ ಆರುಲಕ್ಷ ಶ್ಲೋಕಗಳಿರುವುದಾಗಿ ಸೂಚಿಸಿದ್ದಾನೆ. ಕಾವ್ಯದ ಭಾಷೆಯು ಕನ್ನಡವೇ ಆಗಿರಬೇಕೆಂಬ ಕಾರಣದಿಂದ ತಾಳ-ಲಯಗಳಿಂದ ಕೂಡಿದ ಆರುಸಾವಿರ ಸೂತ್ರಗಳಿಂದ ಕಾವ್ಯವನ್ನು ರಚಿಸಿರುವುದಾಗಿ ಹೇಳಿದ್ದಾನೆ. 

 • ಅಶೋಕ
 • ಆಲ (ನ್ಯಗ್ರೋಧ); 
 • ಸಪ್ತಪರ್ಣ
 • ಶಾಲ
 • ಸರಲ
 • ಪ್ರಿಯಂಗು
 • ಶೀರುಷ
 • ಶ್ರೀನಾಗ
 • ಧೂಲಿ
 • ಫಲಾಶ
 • ಪಾಟಲ
 • ನೇರಿಲ
 • ದಧಿಪರ್ಣ
 • ನಂದಿ
 • ತಿಲಕ
 • ಬಿಳಿಮಾವು
 • ಕಂಕೇಲಿ
 • ಮೇಷಶೃಂಗ; 

ಮುಂತಾದುವುಗಳಿಗೆ ಅನ್ವಯವಾಗುವ ಅಂಕಿಗಳನ್ನು ತಿಳಿಸಿ, ರಸಸಿದ್ಧಿಗೆ ಅಶೋಕವು ಮುಖ್ಯವೆ೦ಬ ಮಾಹಿತಿಯನ್ನು ನೀಡಿದ್ದಾನೆ.

  ಗಣಿತದ ಸ್ವರೂಪವನ್ನು ಸೂಕ್ಷ್ಮವಾಗಿ ವಿವರಿಸಿ, ಗೋಪುರದ ಹಿಂದಿರುವ ಸಿಂಹಾಸನದಂತೆ ಈ ಗಣಿತ ಎಂದು ಹೇಳಿ, ಕೋಪವಳಿದ ನಾಲ್ಮೊಗದ ಸಿಂಹವು ಚಂದ್ರನ ಶೀತಲಕಿರಣಗಳ ಪ್ರವಾಹದಂತೆ ಎಂದು ತಿಳಿಸಿ, ಶ್ರೀಪದ್ಧತಿಯ ಪಾಹುಡವೇ ಪ್ರಾಭೃತವೆಂದೂ, ಇದರಿಂದಲೇ ಎಲ್ಲರಿಗೂ ಆತ್ಮದರ್ಶನವೆಂದೂ, ಇದೇ ದಿವ್ಯಜ್ಯೋತಿಯ ಅಂಕವೆಂದೂ, ಯಾಪನೀಯರ ದಿವ್ಯಯೋಗವೆಂದೂ, ಇದರಿಂದಲೇ ಭಾರತದಲ್ಲಿ ಶಾಂತಿಯು ನೆಲೆಸುವುದೆಂದೂ ಯಾಪನೀಯ ಜೈನಸಂಪ್ರದಾಯದ ಮಹತ್ವವನ್ನು ಸೂಚಿಸಿದ್ದಾನೆ. ನಭೋಮಂಡಲದಿಂದ ಪ್ರಸಾರವಾಗುವ ಸೂರ್ಯ ಚಂದ್ರರ ಕಿರಣಗಳು ಶಂಖದಂತಿರುವ ಅರುವತ್ನಾಲ್ಕು ಚಾಮರಗಳಂತೆ ಎಂದು ಸೂಚಿಸಿ; ಒಂಬತ್ತು ಸ್ವರಗಳು - ಇವುಗಳಲ್ಲಿ ಹ್ರಸ್ವ; ದೀರ್ಘ; ಪ್ಲುತಗಳೆಂಬ ಮೂರುರೀತಿ (೯ x = ೨೭) + ೨೫ ವರ್ಗೀಯವ್ಯಂಜನಗಳು + ಅವರ್ಗೀಯವ್ಯಂಜನಗಳು + ಯೋಗವಾಹಗಳು ಸೇರಿ ೬೪ ಅಕ್ಷರಗಳ ಚಾಮರವಾಗಿದೆಯೆಂದು ವಿವರಿಸಿದ್ದಾನೆ. ಈ ೬೪ ಅಕ್ಷರಗಳೇ ನವ ಮನ್ಮಥನಾದ ಬಾಹುಬಲಿಯು ತಿಳಿದಿದ್ದ ಅನಾದಿಕಾಲದ ಅಂಕಾಕ್ಷರ ಕ್ರಮ. ಇದೇ ಬ್ರಾಹ್ಮಿಯ ಲಿಪಿ, ಎಂದೂ ಸ್ಪಷ್ಟವಾಗಿ ನಿರೂಪಿಸಿದ್ದಾನೆ. ರ ವರ್ಗ ೬೪. ಈ ಎಂಟೇ (ಅಷ್ಟ) 'ಅಷ್ಟಮಹಾಪ್ರಾತಿಹಾರ್ಯ' ಇದನ್ನೇ ಅಷ್ಟಮಜಿನನಾದ ಚಂದ್ರಪ್ರಭನು ಹೇಳಿರುವುದು. ಈ ಅಂಕಿಗಳನ್ನೆಲ್ಲ ಕೂಡಿದರೆ ಬರುವುದು ಎಂದು ವಿವರಿಸಿದ್ದಾನೆ. ಈ ೧ ಅದ್ವೆತದ ಮೂಲ ರೂಪವಾಗಿದೆ! ಈ ಅಷ್ಟಮಹಾಪ್ರಾತೀಹಾರ್ಯವಾಗಿರುವ ಮಂಗಲಪ್ರಾಭೃತವೇ ಈ ಸಿರಿಭೂವಲಯ ಕಾವ್ಯದ ಮೂಲವಸ್ತು ಎಂಬ ಹೇಳಿಕೆಯೊಂದಿಗೆ ಏಳನೇ ಅಧ್ಯಾಯವು ಮುಕ್ತಾಯವಾಗಿದೆ.
*     *      *

ಎಂಟನೇ ಅಧ್ಯಾಯ

  ಈ ಒಂಬತ್ತು ಅಂಕಿಗಳಿಂದ ಸಿದ್ಧವಾದ ಸಿಂಹಾಸನವನ್ನೇ ಆದಿಜಿನನು ಏರಿಕುಳಿತದ್ದು. ಈ ಒಂಬತ್ತು ಎಂಟಾಗಿ, ಏಳಾಗಿ, ಆರಾಗಿ, ಐದಾಗಿ, ನಾಲ್ಕಾಗಿ, ಮೂರಾಗಿ, ಎರಡಾಗಿ, ಒಂದಾಗಿ, ಕೊನೆಗೆ ಶೂನ್ಯವಾಗಿದೆ ಎಂದು ಹೇಳುತ್ತ, ಕನ್ನಡ ಅಂಕಿಗಳ ಉಗಮವನ್ನು ವಿವರಿಸುವುದರೊಂದಿಗೆ ೮ನೇ ಅಧ್ಯಾಯವು ಪ್ರಾರಂಭವಾಗಿದೆ.  . ಮುಂದಕ್ಕೆ ಪೂರ್ವಪಕ್ಷ ಸಿದ್ಧಾಂತವನ್ನು ವಿವರಿಸುತ್ತಾನೆ. ವರ್ಧಮಾನನ ವಾಹನವಾದ ಸಿಂಹದ ಹಲವಾರು ರೂಪಗಳನ್ನು ಸೂಚಿಸುತ್ತಾನೆ. ಎಲ್ಲವೂ ಸಿಂಹಸ್ವರೂಪವೇ ಎಂಬ ಉತ್ತರ ನೀಡುತ್ತಾನೆ. (ಪರಮಾತ್ಮ ಸ್ವರೂರೂಪದ ನಿರೂಪಣೆಗೆ ಸಂಸ್ಕೃತದಲ್ಲಿ ಶಂಕರರು ಚಿನ್ನವನ್ನು ನಿದರ್ಶನವಾಗಿ ಬಳಸಿದ್ದರೆ; ಇಲ್ಲಿ ಕನ್ನಡದಲ್ಲಿ ಕುಮುದೇಂದುವು ಇದೇ ಪರಮಾತ್ಮದ ಸ್ವರೂಪದ ನಿರೂಪಣೆಗೆ 'ಸಿಂಹ'ವನ್ನು ನಿದರ್ಶನವಾಗಿ ಬಳಸಿಕೊಂಡಿದ್ದಾನೆ) ಸಿಂಹದ ಅಳತೆಯನ್ನು ಬಿಲ್ಲಿನ ಅಳತೆಯ ಮಾನದಲ್ಲಿ ಸೂಚಿಸಿ, ೨೪ಜನ ತೀರ್ಥಂಕರರ ಸಿಂಹದ ಅಳತೆಯನ್ನು ನಿರೂಪಿಸಿದ್ದಾನೆ.

  ಚಿನ್ನದನಾಡಾದ ನಂದೀದುರ್ಗದ ಪ್ರದೇಶವು ಲೋಕಪೂಜ್ಯವೆಂದೂ; ನಂದಿಬೆಟ್ಟವು ಜಗತ್ತಿನಲ್ಲಿರುವ ಅತಿಪ್ರಾಚೀನವಾದ ಗಿರಿಯೆಂದೂ ಸೂಚಿಸಿ, ಆದಿಕಾಲದಿಂದ ಪ್ರವಹಿಸಿರುವ ಗಾಂಗೇಯ ಕುಲವನ್ನು ಗಂಗರಸರ ಕುಲದೊಂದಿಗೆ ಸೇರಿಸಿ, ಗಂಗರಕಾಲದ ಗಣಿತಪದ್ಧತಿಯನ್ನು ಹೆಸರಿಸಿ, ಮಹಾವೀರ ತಲೆಕಾಚ ಗಂಗರ ಹೆಸರು ಹೇಳಿದ್ದಾನೆ. (ತಲಕಾಡಿನ ಗಂಗರಾಜರು) ಕರುಣೆಯ ಪ್ರತಿರೂಪವಾದ ಧವಲವರ್ಣದ ಪರಮಾತ್ಮನ ಪಾದಗಳಂತೆ ಎರಡುಪಾದಗಳು; ನಾಲ್ಕು ಶಿರಸ್ಸುಗಳಿರುವ ಸಿಂಹವು ಭರತಖಂಡದ ಶುಭಚಿಹ್ನೆ ಎಂದು ಹೇಳಿದ್ದಾನೆ. (೧೯೪೭ರ ನಂತರ ಸ್ವಾತಂತ್ರ್ಯ ಪಡೆದ ಭಾರತವು ಈ ಸಿಂಹದ ಗುರುತನ್ನೇ ರಾಷ್ಟ್ರಲಾಂಛನವಾಗಿ ಹೊಂದಿದೆ!) ಈ ಸಿಂಹಗಳ ಆಯಸ್ಸನ್ನು ಸೂಚಿಸುವಲ್ಲಿ ೨೪ನೇ ತೀರ್ಥಂಕರ ಮಹಾವೀರನಡಿಯ ಸಿಂಹಾಸನದ ಸಿಂಹದ ಆಯಸ್ಸು ಅತಿಕಡಿಮೆ, ಎಂದರೆ ಹತ್ತು ವರ್ಷಗಳೆಂದೂ, ಅವನ ಹಿಂದಿನತೀರ್ಥಂಕರರನ್ನೆಲ್ಲ ಹೆಸರಿಸಿ, ಅವರ ಪೀಠದ ಸಿಂಹದ ಆಯಸ್ಸು ಕ್ರಮವಾಗಿ ಹೆಚ್ಚುತ್ತಾ ಹೋಗಿ, ಆದಿತೀರ್ಥಂಕರ ಋಷಭದೇವನ (ಪುರುದೇವ) ಸಿಂಹದ ಆಯಸ್ಸು ಲಕ್ಷವರ್ಷಗಳಾಗುತ್ತದೆಂಬ ಮಾಹಿತಿಯನ್ನು ನೀಡಿದ್ದಾನೆ. (ಇಲ್ಲಿ ಸೂಚಿತವಾಗಿರುವ ಪಶ್ಚಾದಾನುಪೂರ್ವಿ ಪ್ರಾತೀಹಾರ್ಯ ಮುಂತಾದ ಶಬ್ದಗಳು ಕಾಲಗಣನೆಯ ಮೂಲಮಾನಕ್ಕೆ ಸಂಬಂಧಿಸಿದ ತಾಂತ್ರಿಕ ಪದಗಳಾಗಿರಬಹುದು. ಇವುಗಳ ಅರ್ಥನಿರ್ಣಯವಾದಲ್ಲಿ ಈ ಸಿಂಹಗಳು; ಇವುಗಳನ್ನೇರಿದ ತೀರ್ಥಂಕರರು ಎಷ್ಟು ವರ್ಷಗಳ ಕಾಲ ಬಾಳಿದರೆಂಬ ಸ್ಪಷ್ಟವಾದ ಲೆಕ್ಕಾಚಾರ ದೊರೆಯುತ್ತದೆ) ಮಹಾವೀರನ ಸಿಂಹಕ್ಕೆ ಹತ್ತುವರ್ಷವಿದ್ದದ್ದು ಹೆಚ್ಚುತ್ತಾ ಹೋಗಿ, ಪಾರ್ಶ್ವನಾಥನಕಾಲದಲ್ಲಿ ೬೯ ವರ್ಷ ೮ ತಿಂಗಳುಗಳಾಗಿದೆ. ಹೀಗೇ ಹಿಂದಕ್ಕೆ ಹೋಗುತ್ತಾ ಋಷಭದೇವನ ಕಾಲಕ್ಕೆ ಲಕ್ಷವರ್ಷಕ್ಕೆ ಏರುತ್ತದೆ! ಈ ಮಾಹಿತಿಯ ಆಧಾರದಲ್ಲಿ ಹಿಂದಿನ ಕಾಲದವರು ಲಕ್ಷಾಂತರ ವರ್ಷಗಳ ಕಾಲ ಜೀವಿಸಿ, ಬಾಳಿ ಬದುಕುತ್ತಿದ್ದರೆಂಬ ವಿಚಾರಕ್ಕೆ ಸಮರ್ಥನೆ ದೊರೆಯುವುದನ್ನು ಕಾಣಬಹುದು. ಪುರಾಣಗಳೂ ಇದನ್ನೇ ಸೂಚಿಸುತ್ತವೆ. ಭರತ ಚಕ್ರವರ್ತಿಯು ೬೦೦೦೦ ವರ್ಷಗಳ ಕಾಲ ಚಕ್ರಾಧಿಪತ್ಯ ನೆಡೆಸಿದನೆಂಬ ಹೇಳಿಕೆಯನ್ನು ಜೈನ ಸಂಪ್ರದಾಯದ ಪ್ರಾಚೀನ ಗ್ರಂಥಗಳೂ ಸೂಚಿಸುತ್ತವೆ. ಇವುಗಳನ್ನೆಲ್ಲ ಅಲ್ಲಗಳೆಯಲಾಗದು ಎಂಬುದನ್ನು ನಾವು ಗಮನದಲ್ಲಿಡಬೇಕು.    

  ಈ ತೀರ್ಥಂಕರರೊಂದಿಗೆ ಹಲವಾರು ಯಕ್ಷ-ಯಕ್ಷಿಯರ ಹೆಸರುಗಳನ್ನೂ ಸೂಚಿಸಿದ್ದಾನೆ. 


ಗೋವದನಚಕ್ರೇಶ್ವರಿರೋಹಿಣಿಪ್ರಜ್ಞಪ್ರಿಯಕ್ಷೇಶ್ವರ
ವಜ್ರಶೃಂಖಲೆವಜ್ರಾಂಕುಶರಾಗಮಾತಂಗಅಪ್ರತಿಚಕ್ರೆಂಶಿ
ಪುರುಷದತ್ತೆಬ್ರಹ್ಮನುಕಾಳಿಜ್ವಾಲಾಮಾಲಿನಿದೇವಿಮಹಾಕಾಳಿ
ಗಾಂಧಾರಿಸೋಲಸೆಮಾನಸೀದೇವಿಮಹಾಮಾನಸೀದೇವಿ; ಕುಬೇರದೇವಿ
ಜಯಾವಿಜಯಾಅಪರಾಜಿತೆಬಹುರೂಪಿಣಿಕೂಷ್ಮಾಂಡಿನೀ
ಪದ್ಮಾವತಿಸಿದ್ಧಾಯಿನಿ 
ಮುಂತಾದುವು ಈ ರೀತಿಯ ಹೆಸರುಗಳು. ಇವರೆಲ್ಲರೂ ಹಲವಾರು ಹೂವುಗಳ ರಸದಿಂದ - ಬೇವಿನಹೂವು; ಜಲದಾವರೆ; ನೆಲತಾವರೆ; ಬೆಟ್ಟತಾವರೆ ಇತ್ಯಾದಿ- ಈ ಲೋಕದ ಜೀವರಾಶಿಗಳನ್ನು ಕಾಪಾಡುವರೆಂಬ ವಿಚಾರವನ್ನು ಸೂಚಿಸಿದ್ದಾನೆ.

  ಪರಮಪಾವನವಾದ ಪರಮಾತ್ಮನ ಪಾದದ್ವಯಗಳಡಿಯಲ್ಲಿ ಎಂಟು ಅಂಕಾಕ್ಷರಗಳಿಂದ ರೂಪಿತವಾದ, ಎಂಟು ಮಂಗಲದ್ರವ್ಯಗಳಿಂದ ಕೂಡಿದ ಸೂರ್ಯಚಂದ್ರರಿರುವವರೆವಿಗೂ ಉಳಿಯುವ ಭೂಮಿಯಲ್ಲಿರುವ ಜಂಬೂದ್ವೀಪದ ಸಕಲ ಪುಷ್ಪಗಳ ಮಾಲೆಯಾದ ಪೂರ್ವದ ಐವರು ಗುರುಗಳ ದಿವ್ಯಕರಯುಗದಂಕಿಗಳ ಈ ಕಾವ್ಯವು ಭಾರತದ ಅಮೋಘವರ್ಷನ ರಾಜ್ಯದಲ್ಲಿ ಗಣಿತರೂಪದ ಕಾವ್ಯವಾಗಿ, ನೂರುಸಾವಿರಲಕ್ಷಕೋಟಿಯಾಗಿ ಉಳಿದಿದೆಯೆಂಬ ಗ್ರಂಥಪ್ರಶಸ್ತಿಯೊಂದಿಗೆ ಎಂಟನೇ ಅಧ್ಯಾಯವು ಮುಕ್ತಾಯವಾಗಿದೆ.


*    *   *
- ಸುಧಾರ್ಥಿ, ಹಾಸನ

No comments:

Post a comment