Sunday, 1 November 2015

ಋಗ್ವೇದದ ವಸಿಷ್ಠ ಮಂಡಲದಲ್ಲೊಂದು ಗಣಿತಸೂತ್ರ - ಭಾಗ ೪

||  ಶ್ರೀಗುರುಭ್ಯೋನಮಃ ||

ವಸಿಷ್ಠರು ಒಬ್ಬ ಕರ್ಮಠ ಬ್ರಾಹ್ಮಣನೆಂದು ಹಿಂದೆಯೇ ಅವರ ಬಗ್ಗೆ ವಿವರಿಸಿದ್ದೇನೆ. ಮತ್ತು ಸೃಷ್ಟಿಯ ಆದಿಯಿಂದ ಇಂದಿನವರೆಗೂ ಬದುಕಿರುವ ಒಬ್ಬ ಮಹಾತ್ಮರಿವರು. ಅವರ ಸಾಮಾಜಿಕ ಕಳಕಳಿ ಮತ್ತು ಸೂತ್ರಬದ್ಧತೆಯನ್ನು ಗಮನಿಸುವುದಾ ದಲ್ಲಿ ಒಂದು ವಿಶಿಷ್ಟ ಗಣಿತ ಸೂತ್ರ ಕಂಡು ಬರುತ್ತದೆ. ಅದೇ ಈ ಲೇಖನದ ಮುಖ್ಯ ಸಾರಾಂಶ.

ಋ.ಮಂ.೭ ಸೂ.೭೬ ಮಂ.೧-

ಉದು ಜ್ಯೋತಿರಮೃತಂ ವಿಶ್ವಜನ್ಯಂ ವಿಶ್ವಾನರಃ ಸವಿತಾ ದೇವೋ   ಅಶ್ರೇತ್ | 
ಕ್ರತ್ವಾ ದೇವಾನಾಮಜನಿಷ್ಟ ಚಕ್ಷುರಾವಿರಕರ್ಭುವನಂ ವಿಶ್ವಮುಷಾಃ || ||
ಪ್ರ ಮೇ ಪಂಥಾ ದೇವಯಾನಾ ಅದೃಶ್ರನ್ನಮರ್ಧಂತೋ ವಸುಭಿರಿಷ್ಕೃತಾಸಃ | 
ಅಭೂದು ಕೇತುರುಷಸಃ ಪುರಸ್ತಾತ್ಪ್ರತೀಚ್ಯಾ ಗಾದಧಿ ಹರ್ಮ್ಯೇಭ್ಯಃ || ||

ಜಗತ್ತು ತನ್ನಂತಾನೇ ಸೃಷ್ಟಿಯಾಗಿಲ್ಲ. ಅದಕ್ಕೆ ಅದರದ್ದೇ ಆದ ಒಂದು ಸೂತ್ರಬದ್ಧತೆ, ಅದು ಜ್ಯೋತಿರ್ಗಣಿತ ಆಧರಿಸಿದೆ. ಅದರಂತೆ ಮಾನವ, ಪ್ರಾಣಿ, ಹಿಂಸ್ರ, ಪಶು, ಕ್ರಿಮಿ, ಕೀಟ, ಹಕ್ಕಿ ಇತ್ಯಾದಿ ವರ್ಗ ಆಧರಿಸಿ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ ಶನಿಗ್ರಹದ ಪರಿಣಾಮದಿಂದಾಗಿಯೇ ಭುವಿಯಲ್ಲಿ ಜೀವಪ್ರಭೇದ ಉಂಟಾಗಿದೆ. ಅದರ ಸೂತ್ರವನ್ನು ಹೀಗೆ:

೬೧೦೭೧೮೧೬೧೯೧೭೭೨೦ x ೯ x ೧೦೮ x ೪ = ೨೩೭೪೪೭೨೨೧೩೫೩೬೦೯೫೩೬೦ ಜೀವ ಸಂಖ್ಯೆಯಿದೆ ಎಂದರು. ಅದರಲ್ಲಿ

ಮಾನವ ೬೧೦  x ೨೦ x x ೧೦೮ x = ೪೭,೪೩೩,೬೦೦

ಮೃಗ ೭೧೮ x ೨೦ x x = ೫,೧೬,೯೬೦

ಪಕ್ಷಿ ೧೬೧ xx = ೫,೭೯೬

ಕ್ರಿಮಿ ೯೧೭ x೧೦೮ x= ೩೫,೬೫,೨೯೬

ಕೀಟ ೭೨೦ x ೧೦೦ xx = ೨೫,೯೨,೦೦೦

ಒಟ್ಟು ಜೀವಸಂಖ್ಯೆಯ ಮೊತ್ತ ಪರಮಾತ್ಮವೆಂದರು. ಮೊತ್ತ ಸಂಖ್ಯೆ ಹೇಗಾಗುತ್ತದೆ? ಈ ರೀತಿ ಸೂತ್ರ ಗಮನಿಸಿ.
ಕುಜನೊಳ್ ಜೀವ ಮಿತ್ರರು x ಹೋರಿ ಸೌಮ್ಯನು ಅಜನ ಸಂಖ್ಯೆಯೊಳ್ ಜನವೂ,
ಸೌಮ್ಯವಿರೆ ಮನೆಯಲಿ ಸುರಗುರು ಮಂದದಲಿ ಹೋರೆ ಕ್ರಿಮಿಗಳು,
ಅಸುರ ಗುರುವಿನೊಳ್ ಶಶಿ ಮೇಳವಿಸೆ ಮಂದನುತ್ತರಿಸಿ ಮುಂದೆ ಸೌಮ್ಯನೊಳ್ ಕೀಟಾದಿಗಳು,
ಮಿತ್ರಾದಿ ಗ್ರಹಸಂಖ್ಯೆ ಮೊತ್ತದೊಳ್ ಒಟ್ಟು ಗುಣಿಸಲು ಆತ್ಮಭೇದವು ನಿತ್ಯ ಸಂಖ್ಯೆಯಲಿ ನಿರಂತರ.
 ಇದೇ ಸೃಷ್ಟಿಸೂತ್ರ.ಹಾಗಿದ್ದರೆ ಸೃಷ್ಟಿಗೆ ಮೂಲದ್ರವ್ಯವಾವುದು? 
        ವಸಿಷ್ಠರ ಪ್ರಕಾರ ಮೂಲ ಅಮರ್ಧಗಳು + ವಸು + ನಿಷ್ಕೃತಗಳು = ಸೃಷ್ಟಿ ಎನ್ನುತ್ತಾರೆ ವಸಿಷ್ಠರು. ಅಮರ್ಧಗಳು ಏನಕೇನ ಪ್ರಕಾರೇಣ ಪ್ರಾದುರ್ಭವಿಸುವ ಒಂದು ಚೈತನ್ಯಯುಕ್ತವಾದ ಅಂಶ. 
        ವಸು = ಪೃಥ್ವೀ ತತ್ವ ಪ್ರಧಾನವಾದ ಪಂಚಭೂತಾಂಶ ಹಾಗೂ ನಿಷ್ಕೃತಗಳು ಎಂದರೆ ಸೃಷ್ಟಿಯ ಅಥವಾ ಪ್ರಕೃತಿಯ ಬೇಡಿಕೆ ಅಥವಾ ಅಗತ್ಯತೆ. ಅಗತ್ಯತೆ ಇದ್ದಲ್ಲಿ ಏನಕೇನ ಪ್ರಕಾರೇಣ ಉತ್ಪಾದನೆ ಆಗುತ್ತದೆ. ಅಗತ್ಯತೆ ಆಧರಿಸಿಯೇ ಸಂಶೋಧನೆ. ಇದು ಭೌತಶಾಸ್ತ್ರ ಸೂತ್ರಗಳು. ಇದನ್ನಾಧರಿಸಿ ಕಾರ್ಯ + ಕಾರಣ + ಕರ್ತೃವೆಂಬ ಮುಖ್ಯ ಸೂತ್ರವೇ ಇದರಲ್ಲಿ ಅಡಕವಾಗಿದೆ. ಇದರಂತೆ ಈ ಜಡ ಪ್ರಕೃತಿಗೆ ಚೈತನ್ಯ ತುಂಬುವ ಕಾಯಕವೇ ಸೃಷ್ಟಿ ಪ್ರಕ್ರಿಯೆ. 
        ಹಾಗಾಗಿ ವಸಿಷ್ಠರು ಉಷಸಃ ಪುರಸ್ತಾತ್ ಅರ್ಥಾತ್ ನಡೆಯುವುದು, ನಡೆಯುವುದು, ನಡೆಯುವುದೇ ಗುರಿಯಾದ ಭ್ರಾಂತ ಸೃಷ್ಟಿಯ ವಿಚಾರಗೋಚರವಲ್ಲದ ರಹಸ್ಯ ಸೃಷ್ಟಿ. ಇದನ್ನೇ ಪೂರ್ವೋದಾಹರಣೆಯಿಂದ ಮಾಪನ ಪ್ರತೀಚ್ಯಾ ಆಗಾತ್ ಅಧಿ ಎಂದರು.  ಹಾಗಿದ್ದಾಗ ಸೃಷ್ಟಿ ಪ್ರಕ್ರಿಯೆ ನಿತ್ಯನೂತನ, ನಿತ್ಯ ನಿರಂತರ ಭಿನ್ನ ಭಿನ್ನ ಬಹುವಿಧ. ಅಲ್ಲಿನ ಗಣಿತ ಸೂತ್ರ ಅಗಾಧ. ಅದೊಂದು ವಿಶಿಷ್ಟ ಗಣಿತದಂತೇ ಇರುತ್ತದೆ. ಹಾಗೇ ಸೃಷ್ಟಿ ನಂತರ ಅದರ ಪ್ರವರ್ತನೆ ಭೌತಿಕ ನಿಯಮದಂತೆ ಪುನರುತ್ಪತ್ತಿ. ಅದು ಹೇಗೆ? ಪ್ರತಿಯೊಂದೂ ತನ್ನ ಪ್ರತಿರೂಪವನ್ನೇ ಸೃಷ್ಟಿಸುತ್ತದೆ. ಕಾರಣವೇನು? ಅದನ್ನೇ ಪ್ರೇಷಿಸುವ ಶಕ್ತಿ ಯಾವುದು? ಅದೇ ಯುವತಿ ಎಂಬ ವಿಶಿಷ್ಟ ಮಾಯಾ ಶಕ್ತಿ. ಅದು ಕೂಡ ಒಂದು ಗಣಿತ ಸೂತ್ರದಂತೇ ವ್ಯವಹರಿಸುತ್ತದೆ. ಅದೇ ಈ ಕೆಳಗಿನ ಮಂತ್ರ ಪುಂಜಗಳು. ಹಾಗೂ ಸಮೀಕರಣ ಸೂತ್ರ.

ಋ.ಮಂ.೭ ಸೂ.೭೭ ಮಂ.೧-
ಉಪೋ ರುರುಚೇ ಯುವತಿರ್ನ ಯೋಷಾ ವಿಶ್ವಂ ಜೀವಂ ಪ್ರಸುವಂತೀ ಚರಾಯೈ | 
ಅಭೂದಗ್ನಿಃ ಸಮಿಧೇ ಮಾನುಷಾಣಾಮ ಕರ್ಜ್ಯೋತಿರ್ಬಾಧಮಾನಾ ತಮಾಂಸಿ || ||
ವಿಶ್ವಂ ಪ್ರತೀಚೀ ಸಪ್ರಥಾ ಉದಸ್ಥಾದ್ರುಶದ್ವಾಸೋ ಬಿಭ್ರತೀ ಶುಕ್ರಮಶ್ವೈತ್ | 
ಹಿರಣ್ಯವರ್ಣಾ ಸುದೃಶೀಕಸಂದೃಗ್ಗವಾಂ ಮಾತಾ ನೇತ್ರ್ಯಹ್ನಾಮರೋಚಿ || ||
ದೇವಾನಾಂ ಚಕ್ಷುಃ ಸುಭಗಾ ವಹಂತೀ ಶ್ವೇತಂ ನಯಂತೀ ಸುದೃಶೀಕಮಶ್ವಮ್  | 
ಉಷಾ ಅದರ್ಶಿ ರಶ್ಮಿಭಿರ್ವ್ಯಕ್ತಾ ಚಿತ್ರಾಮಘಾ ವಿಶ್ವಮನು ಪ್ರಭೂತಾ || ||
ಅಂತಿವಾಮಾ ದೂರೇ ಅಮಿತ್ರಮುಚ್ಛೋರ್ವೀಂ ಗವ್ಯೂತಿ ಮಭಯಂ ಕೃಧೀ ನಃ |
ಯಾವಯ ದ್ವೇಷ ಆಭರಾ ವಸೂನಿ ಚೋದಯ ರಾಧೋ ಗೃಣತೇ ಮಘೋನಿ || ೪ ||
ಅಸ್ಮೇ ಶ್ರೇಷ್ಠೇಭಿರ್ಭಾನುಭಿರ್ವಿಭಾಹ್ಯುಷೋ ದೇವೀ ಪ್ರತಿರಂತೀ ನ ಆಯುಃ | 
ಇಷಂ ಚ ನೋ ದಧತೀ ವಿಶ್ವವಾರೇ ಗೋಮದಶ್ವಾವದ್ರ ಥವಚ್ಚ ರಾಧಃ || ||
ಯಾಂ ತ್ವಾ ದಿವೋ ದುಹಿತರ್ವರ್ಧಯಂತ್ಯುಷಃ ಸುಜಾತೇ ಮತಿಭಿರ್ವಸಿಷ್ಠಾಃ | 
ಸಾಸ್ಮಾಸು ಧಾ ರಯಿಮೃಷ್ವಂ ಬೃಹಂತಂ ಯೂಯಂ ಪಾತ ಸ್ವಸ್ತಿಭಿಃ ಸದಾ ನಃ || ||

ಇದೊಂದು ದೀರ್ಘಕಾಲೀನ ಲೆಕ್ಕಾಚಾರ. ಒಬ್ಬ ತಾಯಿ ತಾನು ತಾಯಿಯಾಗಲು, ಒಂದು ಮಗುವನ್ನು ಹೆರಲು ಪೂರ್ವಭಾವಿ ಸಿದ್ಧತೆ ಎಷ್ಟಿದೆ ಗೊತ್ತೆ? ಉದಸ್ತಾದ್ರುಶದ್ವಾಸೋ ಸೂತ್ರದಂತೆ ಉದಿಸುತ್ತದೆ. ಶುಕ್ರ ಅದೇ ಶುಕ್ರಶ್ವೈತ್ ಎಂದಿದೆ. ಅದರಂತೆ ಈ ಕೆಳಗಿನ ಮಾತುಗಳಲ್ಲಿ ವಿವರಿಸಬಹುದು. ಈ ಸಕಲ ಚರಾಚರ ಪ್ರಕೃತಿಯಲ್ಲಿ ಮಾಯಾಭೇದವೆಂಬ ೦೦೧೦೦ ಎಂಬ ಮೂಲ ಮಾಯಾ ಬೀಜರೂಪವಾದ ಪ್ರತ್ಯಕ್ಷ ಪ್ರಕೃತಿ ರೂಪಿಯಾದ ಹೆಣ್ಣು ತಾನು ತಾಯಿ ಎನ್ನಿಸಿಕೊಳ್ಳುವ ಹಂತ ಹಂತದ ಸಿದ್ಧತೆಯೇ ಪುನಃ ಸೃಷ್ಟಿ. ಅದು ಹೆಣ್ಣು ಎನ್ನುವ ಮೂಲ ಪ್ರಕೃತಿ. ಅದೇ ಮಾಯೆ, ಅದೇ ತಾಯಿ, ಅದೇ ಸಕಲ ಜೀವಿಯ ಗುರು. ಅದು ತಾನು ಒಂದು ತಾಯಿಯ ಗರ್ಭದಲ್ಲಿರುವಾಗಲೇ ಕೆಲವೊಂದು ಸಿದ್ಧತೆ ಮಾಡುತ್ತದೆ. ಹಾಗಾಗಿ ತಾಯಿಯ ಗರ್ಭದಲ್ಲಿ ಹೆಣ್ಣು ಶಿಶುವೊ, ಗಂಡು ಶಿಶುವೋ ತಾಯಿಗೆ ಮೊದಲೇ ತಿಳಿದಿರುತ್ತದೆ (ಈಗಿನ ಕಾಲದಲ್ಲಿ ಇಲ್ಲ ಬಿಡಿ).

ಮಾಸವೊಂದರ ಮೊದಲು
ಮಾಸ ನಿಂತಿದೆ ಉದರದಲಿ
ಮೋಸ ಹೋಯಿತು ಗರ್ಭ ತಾ ತನ್ನ ಸೃಷ್ಟಿಗೆಳಸೇ ||
ಮಾಸ ಪೂರ್ಣದಿ ಗುರುತಿಸೆ
ಮಾಸವೆರಡನೆಯಲಿ ಋಣ
ಮಾಸ ಮೂರೇ ಭ್ರೂಣವೆಂದು ತಾ ಬೆಳೆದು ನಿಂತಿರಲೂ || 1 ||

ನಾನೆಂದು ಬೆಳೆದಿದೆ ನಾಲ್ಕರಲಿ
ಏನೆಂದು ಅರಿವಡೆ ಐದರಲಿ
ತಾನೇ ತಾನಾಗಿ ಅವಲೋಕಿಸಿತು ಶಿಶುವೆಂದು ಆರರಲೀ ||
ಇನ್ನೇಳನೆಯಲಿ ಅವಲೋ
ಭನೆಯು ಎಂಟರಲಿ ಅದು
ತಾನು ಋಣಾದಿಗಳನರಿತು ಭುವಿಗಿಳಿಯಿತಿಂದೂ || 2 ||

ಮಾಸ ಒಂಭತ್ತು ಕಳೆಯಲು
ಮಾಸುವನೊಡೆದು ಹರಿದು
ಮಾಸಿನೊಳು ಹೋರಿ ಬಿಸುಸುಯ್ದು ದಿನ ಒಂಭತ್ತರಲೀ ||
ಮಾಸನಾಮಾಂಕಿತನ ನೇಮ
ವೇಸಿದೆಯೊ ಭುವಿಗೆ ಬಂದು
ಮಾಸ ತುಂಬಿದ ಮೂಲಜ್ಞಾನದಿ ಅಳುತಿರಲಾಗಾ || 3 ||

ತಾಳಿಕೊಳ್ಳುವ ತಾಳ್ಮೆ ಬೀಜವ
ಹೇಳಿಕೊಂಡಿದೆ ಮೊದಲ ವರ್ಷ
ಏಳುವರೆಗಾದೊಡೆಯು ಹೆಣ್ಣು ತಾ ಸಾಕಾರ ಪ್ರಕೃತಿ ಮೂರ್ತಿ||
ಕೇಳಿರೀ ಮುಂದಿನ ಮೂರು ವರ್ಷವು
ಕಾಳಿ ಲಕ್ಷ್ಮಿ ಸರಸ್ವತಿಯೆನಿಸಿ ತಾ
ಬಾಳಿ ಮುಂದೋಡುವಳು ವಧುವಾಗಿ ನಿತ್ಯ ತೃಪ್ತತೆಯೂ|| ||

ಮುಂದಿನಾ ಹದಿವಯಸಿನಲಿ
ಚಂದಗಾಣಿಸಿ ತಾ ಮೋಹಕಳಾಗಿ
ಒಂದೊಂದು ವರುಷಕೆ ಆರರಂತೆ ಬೆಳೆದೂ ||
ಇಂದುಮುಖಿ ಹೊರುವಳು
ಮುಂದಿನಾ ಪ್ರಪಂಚ ಸೃಷ್ಟಿಯಲಿ
ಇಂದಿಗವಳೇ ಪಾಲುದಾರಳು ತಾಯಿಯೆನಿಸುವಳೂ || 5 ||

ಈ ಪಂಚಕದಿ ಅಡಗಿದೆ ಲೆಕ್ಕ
ಈ ಮೊತ್ತವರಿತರೆ ಹೆಣ್ಣಿನರಿವು
ಈ ಮೊತ್ತವೇ ಮಾಯೆಯ ಮೂಲ ಬೀಜವು ಕಾಣಿರೊ ||
ಈ ಜಗದ ಸೃಷ್ಟಿ ವಿಚಿತ್ರವಿದು
ಈಗ ನಿಮಗಿದು ಅರ್ಥವಾದರೆ
ಈ ಜಗವೇ ಸೊಬಗು, ಸೊಗಸು, ಸುಖಸಂಪದವು ಕಾಣಿರೊ || 6 ||

ಈ ಐದು ಪದ್ಯಗಳಲ್ಲಿ ಮೂಲಬೀಜದ ರಹಸ್ಯವನ್ನು ಹೇಳಿದ್ದೇನೆ. ಓದಿ ಅರ್ಥಮಾಡಿಕೊಳ್ಳಿರಿ. ಹೆಣ್ಣು ಭ್ರೂಣವಾಗಿರುವಾಗಲೇ ತನ್ನ ಪೂರ್ವಸಿದ್ಧತೆ ಮಾಡಿಕೊಳ್ಳುತ್ತದೆ. ಹಾಗಾಗಿಯೇ ಮುಂದೆ ಹೆಣ್ಣಾಗಿ ಹುಟ್ಟಿ ಪ್ರಪಂಚಸೃಷ್ಟಿಗೆ ಕಾರಣವಾಗುತ್ತಾಳೆ. ಅವಳೇ ಮುಂದೆ ಸಕಲ ಪ್ರಕೃತಿಯ ವಿಕೃತ ವಿಕಟ ಪ್ರಪಂಚದ ಮಾತೆ. ಗುರು, ಧರ್ಮ, ಶಕ್ತಿ, ಅನ್ನಪೂರ್ಣೆ, ಸತ್ಯವಾಗಿ ಪ್ರಕಟ ಪ್ರಪಂಚವನ್ನು ಸಲಹುತ್ತಾಳೆ ಎಂದರು ವಸಿಷ್ಠರು. ಅದೇ ಅರುಂಧತೀ ಅದು ನಃ - ಕ್ಷತ ರೋಹಿತ = ನಕ್ಷತ್ರವಾಗಿದೆ. ಆ ಭರಾ ವಸೂನಿ ಚೋದಯ ಎಂದರು. ಇಡೀ ಪ್ರಪಂಚ ಇದನ್ನು ಅರ್ಥಮಾಡಿಕೊಳ್ಳಲಾಗಿ ಇದೊಂದು ಚೋದ್ಯವೆಂದು ಕೈಬಿಟ್ಟಿದೆ. ಆದರೆ ಅರ್ಥ ಮಾಡಿಕೊಂಡಾಗಲೇ ತಿಳಿಯುವುದು ಸತ್ಯ. ಈ ಸತ್ಯ ಅರಿತವನೇ ಬುದ್ಧಿವಂತನೆನಿಸಿಕೊಳ್ಳಬಲ್ಲ. ಸಮತೋಲನ ಜೀವನ ಮಾಡಬಲ್ಲ. ನಂತರ ವಸಿಷ್ಠರು ಮಾನವ ಧರ್ಮವನ್ನು ಹೇಳುತ್ತಾ ಮಾನವನಾಗಿ ಬದುಕುವುದೂ ಒಂದು ಲೆಕ್ಕಾಚಾರದಡಿಯಲ್ಲಿಯೇ ಎಂದರು. ಅದು ಹೀಗಿದೆ.

ಋ.ಮಂ.೭ ಸೂ.೮೧ ಮಂ.೧-
ಪ್ರತ್ಯು ಅದರ್ಶ್ಯಾಯತ್ಯು(ಉ)1ಚ್ಛಂತೀ ದುಹಿತಾ ದಿವಃ | 
ಅಪೋ ಮಹಿ ವ್ಯಯತಿ ಚಕ್ಷಸೇ ತಮೋ ಜ್ಯೋತಿಷ್ಕೃಣೋತಿ ಸೂನರೀ || ೧ ||
ಉದುಸ್ರಿಯಾಃ ಸೃಜತೇ ಸೂರ್ಯಃ ಸಚಾಙ್ ಉದ್ಯನ್ನರ್ಚತ್ರ ಮರ್ಚಿವತ್ | 
ತವೇದುಷೋ ವ್ಯುಷಿ ಸೂರ್ಯಸ್ಯ ಚ ಸಂ ಭಕ್ತೇನ ಗಮೇಮಹಿ || ||
ಪ್ರತಿ ತ್ವಾ ದುಹಿತರ್ದಿವ ಉಷೋ ಜೀರಾ ಅಭುತ್ಸ್ಮಹಿ |  
ಯಾ ವಹಸಿ ಪುರು ಸ್ಪಾರ್ಹಂ ವನನ್ವತಿ ರತ್ನಂ ನ ದಾಶುಷೇ ಮಯಃ || ೩ ||
ಉಚ್ಛಂತೀ ಯಾ ಕೃಣೋಷಿ ಮಂಹನಾ ಮಹಿ ಪ್ರಖ್ಯೈ ದೇವಿ ಸ್ವರ್ದೃಶೇ | 
ತಸ್ಯಾಸ್ತೇ ರತ್ನಭಾಜ ಈಮಹೇ ವಯಂ ಸ್ಯಾಮ ಮಾತುರ್ನ ಸೂನವಃ  || ||
ತಚ್ಚಿತ್ರಂ ರಾಧ ಆ ಭರೋಷೋ ಯದ್ದೀರ್ಘಶ್ರುತ್ತಮಮ್ | 
ಯತ್ತೇ ದಿವೋ ದುಹಿತರ್ಮರ್ತಭೋಜನಂ ತದ್ರಾಸ್ವ ಭುನಜಾಮಹೈ || ||
ಶ್ರವಃ ಸೂರಿಭ್ಯೋ ಅಮೃತಂ ವಸುತ್ವನಂ ವಾಜಾಙ್ ಅಸ್ಮಭ್ಯಂ ಗೋಮತಃ | 
ಚೋದಯಿತ್ರೀ ಮಘೋನಃ ಸೂನೃತಾವತ್ಯುಷಾ ಉಚ್ಛದಪ ಸ್ರಿಧಃ || ||

        ಜಗತ್ತಿನ ಶ್ರೇಷ್ಠನೂ, ಪ್ರೇಷ್ಠನೂ, ಪರಮಾತ್ಮನ ಅತಿಪ್ರೀತನೂ, ಆದರೆ ಋಣ + ಕರ್ಮಗಳಿಂದ ಬಂಧಿಸಲ್ಪಟ್ಟವನೂ ಆಗಿದ್ದ ಮಾನವ ವಿವೇಕಿಯೂ, ಬುದ್ಧಿಯುತನೂ, ಸಂಸಾರಯುತನೂ ಆಗಿ ಕರ್ಮವಿಪಾಕಗೊಳಿಸುವುದರಲ್ಲಿ ಶಕ್ತನಾಗಿದ್ದಾನೆ. ತನ್ಮೂಲಕ ಮೇಲೇರಿ ಆತ್ಮೋದ್ಧಾರ ಸಾಧಿಸಿ ಸ್ವತಃ ಬ್ರಹ್ಮನಾಗಬಲ್ಲ. ಅದಕ್ಕೆ ಬೇಕಾದ್ದು ಮುಖ್ಯವಾಗಿ ಮಾನವಧರ್ಮ ಪಾಲನೆ. ಆದರೆ ಅದೂ ಕೂಡ ಒಂದು ಲೆಕ್ಕಾಚಾರದಲ್ಲಿ ಬಂಧಿಸಲ್ಪಟ್ಟಿದೆ. ಹಾಗಾಗಿ ಆ ಲೆಕ್ಕಾಚಾರ ಅರಿತು ಪ್ರವರ್ತನೆಗಿಳಿದರೆ ಮುಕ್ತನಾಗಬಹುದು ಎನ್ನುತ್ತಾರೆ ವಸಿಷ್ಠರು. ಹಾಗಾಗಿ ಮೊದಲು ಮಾನವ ಧರ್ಮದ ಮುಖ್ಯ ನಿಯಮವನ್ನರಿತು ಲೆಕ್ಕಾಚಾರ ತಿಳಿಯೋಣ. 

        ಅದರ ಸೂಚೀ ಸೂತ್ರ ಹೀಗಿದೆ.
= ೧೦ = ೧೦೦ 
ಇದು ಏಕಂ ದಶ ಶತಾ ಚ ಸಹಸ್ರಂ ಚಾರ್ಬುದಂ ಚ
= ಏಕಾ ಪರಾರ್ಧ ಶಂಖ ಸಮುದ್ರಾಶ್ಚ
= ವಿತತಂ ತದ್ರಾಸ್ವ ಭುನಜಾಮಹೈ 
ಎಂದಿದ್ದಾರೆ.  ಇಲ್ಲಿ ಒಂದು ಮತ್ತು ಸೊನ್ನೆ ಬೇರೆಯಾಗಿದ್ದರೆ ಜೀವ + ಆತ್ಮ, ಕೂಡಿದರೆ ಜೀವ. ಅದು ದಶ ಅಥವಾ ದಂಶವಾದರೆ ಅದೇ ಮಾನವ. ಈ ಮಾನವ ಶತಃಛಿದ್ರವೆಂದಿದೆ ವೇದ ಸೂತ್ರಗಳು. ಯಾವುದು ಮನೋಭೂಮಿಕೆಯಲ್ಲಿ ಅದು ಒಂದಾಗಲಾರದು, ಎಂದೂ ಕೂಡಲಾರದು, ಅದು ಕೂಡಿಸುವ ಯತ್ನವೇ ಜೀವನ ಗುರಿಯಾದರೆ ಅದೇ ಮಾನವಧರ್ಮ. ಇದರಲ್ಲಿ ಆರು ವಿಧ:-

೧) ಯಾವುದು ಕೂಡಲಾಗದೋ, 
೨) ಯಾವುದು ಕೂಡಲಾರದೋ, 
೩) ಯಾವುದು ಕೂಡಿಸಬಾರದೋ, 
೪) ಯಾವುದು ಕೂಡುವುದೋ, 
೫) ಯಾವುದು ಕೂಡಿಯೇ ಇರುವುದೋ, 
೬) ಯಾವುದು ಕೂಡಿದಂತೆ ಕಂಡುಬರುವುದೋ 

ಅದೇ ಸತ್ಯ ಪ್ರಪಂಚದ ಮಿಥ್ಯಾರೂಪಗಳು. ಅವೆಲ್ಲಾ ವಿರೋಧವಾಗಿಯೇ ಕಂಡುಬರುತ್ತದೆ. ಹಾಗೆಂದು ಪ್ರಕಟ ರೂಪದಲ್ಲಿ ಬಿಟ್ಟು ವ್ಯವಹರಿಸುವಂತಿಲ್ಲ. ಕಾರಣ ಮಾನವನು ಮಾನವನಾಗಿ ಬದುಕಲು ಅದರ ವಿಘಟನೆಯಾಗಲೇಬೇಕು. ವಿಘಟನೆಯ ಪ್ರಯತ್ನದಲ್ಲಿ ಗೆದ್ದರೆ ಜೀವ, ಸೋತರೆ ರಾಕ್ಷಸ. ಇದು ಸತ್ಯ. ಸಮತೋಲನ ಕಾಯ್ದುಕೊಂಡರೆ ಮಾನವ. ಇದಕ್ಕೆ ಬೇಕು ಷಡ್ಬಾಂಧವರ ಸಹಯೋಗ. ಅವರು ನಿಮ್ಮ ಸಮೀಪ ಬಂಧುಗಳು. ಹಾಗೇ ಮಾನವಾಕಾಂಕ್ಷೆಗಳು ಜೀವಿಯ ಆಪ್ತರು. ಆದರೆ ಕಾಲ, ದೇಶ, ಅಪೇಕ್ಷೆ, ಅಭೀಷ್ಟತೆ, ಅಗತ್ಯ, ಸಂದರ್ಭ ಹೊರತುಪಡಿಸಿದ ಇದೇ ಬಾಂಧವರು ಶತ್ರುಗಳಾಗಿಯೂ ಪರಿವರ್ತಿತವಾಗಬಹುದು. ಅವರು ಆರು ಮಂದಿ:

೧)    ಬಂದು ಹೋಗುವವರು
೨)    ಬಂದರೆ ಹೋಗದವರು
೩)    ಹೋಗಿ ಬರುವವರು
೪)    ಕರೆದರೆ ಬಾರದವರು
೫)    ಕರೆಯದೇ ಬರುವವರು
೬)    ಕರೆದು ಬಂದು ಉಂಡು ಹರಸಿ ಹೋಗುವವರು

೧) ಬಂದು ಹೋಗುವವರು:- ಸುಖ + ಕಷ್ಟ. ಅವರು ಸ್ವತಂತ್ರರು. ಅವರಿಷ್ಟಕ್ಕೆ ನಿರ್ಲಿಪ್ತರಾಗಿರಿ.

೨) ಬಂದರೆ ಹೋಗದವರು:- ಅಪಕೀರ್ತಿ.

೩) ಹೋಗಿ ಬರುವವರು:- ಕೀರ್ತಿ. ನಿಮ್ಮ ಶ್ರಮೆ, ಔದಾರ್ಯ, ಸಾಹಸ, ಶಕ್ತಿ, ದಾನ, ಸತ್ಯ, ಪ್ರಾಮಾಣಿಕತೆಯ ನೆಲೆಯಲ್ಲಿ ನಿಮ್ಮನ್ನು ಆಶ್ರಯಿಸುತ್ತದೆ. ಅರ್ಥಾತ್ ನಿಮ್ಮ ಆಯುರ್ದಾಯ ಕಳೆಯುತ್ತಾ ಕೀರ್ತಿ ಬರುತ್ತದೆ.

೪) ಕರೆದರೆ ಬಾರದವರು:- ಇದು ನಿಮ್ಮ ಕರ್ಮಫಲ. ನಿಮ್ಮ ಇಚ್ಛೆ ಆಸೆ, ಬೇಡಿಕೆ ಪ್ರಾಪ್ತಿಯಾಧರಿಸಿಯೇ ವಿನಃ ನಿಮ್ಮ ಬೇಡಿಕೆಯಂತೆ ಬರಲಾರದು.

೫) ಕರೆಯದೇ ಬರುವವರು:- ಮೃತ್ಯು, ರೋಗ, ಕಷ್ಟ, ಕಾರ್ಪಣ್ಯ, ಅಪವಾದ, ಸೋಲು, ಭಯ, ನಿದ್ರಾ, ಹಸಿವು. ಇವೆಲ್ಲಾ ನೀವು ಕರೆಯಬೇಕಿಲ್ಲ. ಬಂದೇ ಬರುತ್ತದೆ.

೬) ಕರೆದು ಉಂಡು ಹರಸಿ ಹೋಗುವವರು:- ನಿಮ್ಮ ಪುಣ್ಯ, ತ್ರಿಕಾಲ (ಜನ್ಮ, ಸುಕೃತ, ಪೂರ್ವ). ಇವು ನಿಮ್ಮನ್ನು ಹರಸಿ ಸನ್ಮಾರ್ಗ ತೋರಿಸಿ ವಿವೇಕ ಜಾಗ್ರತಗೊಳಿಸಿ ತೆರಳುತ್ತವೆ. 

        ಈ ರೀತಿಯಲ್ಲಿ ಈ ಆರು ಬಾಂಧವರನ್ನು ಹೊಂದಿದವ, ತಾನು ಸತ್ಯ, ಪ್ರಾಮಾಣಿಕತೆ, ಸದಾಚಾರ, ದಯೆ, ಅಹಿಂಸೆ, ಕರ್ತವ್ಯನಿಷ್ಠೆ, ಧರ್ಮಬದ್ಧತೆಯಲ್ಲಿದ್ದರೆ ಅದೇ ಮಾನವ; ಈ ಮಾನವತ್ವ ಸಾಧನೆ;  ಅದನ್ನೇ ವಸಿಷ್ಠರು ಹೇಳಿದರು. ಅದೂ ಕೂಡ ಅವರ ಮಾತಿನಂತೆ  ಈ ಲೆಕ್ಕಾಚಾರದಲ್ಲಿದೆ. ಅದು 
೧ + ೨ + ೩ = ಮೊತ್ತ ಮೌನಿಯು
೪ + ೫ = ಯೋಗಿಯು
೬ + ೭ + ೮ = ಪರಮಹಂಸನು
೯ರಾ ಮೊತ್ತವೇ ಮಾನವ
ಎಡವಿದರೆ = ದಾನವ

ಆದ್ದರಿಂದ ಒಂಬತ್ತನ್ನು ದಾಟದ ಜೀವನವೇ ಮಾನವತ್ವವೆಂದರು. ಆ ಮಾನವತ್ವ ಸಾಧಿಸುವ ಲೆಕ್ಕಾಚಾರದಲ್ಲಿ ಎಡವಿದಲ್ಲಿ ಹಲವು ಜನ್ಮಗಳ ಕೋಟಲೆ ತಪ್ಪಿದ್ದಲ್ಲವೆಂದು ಎಚ್ಚರಿಸಿದ್ದಾರೆ ವಸಿಷ್ಠರು. ಇವೆಲ್ಲಾ ಲೆಕ್ಕಾಚಾರವನ್ನು ಕೆಲ ಪದ್ಯಗಳ ರೂಪದಲ್ಲಿ ಬರೆಯುತ್ತೇನೆ. ಓದಿ ಅರ್ಥಮಾಡಿಕೊಳ್ಳಿರಿ.
ಆದಿಯೊಳಿದ್ದಿತು ಮೋದ ವಿಧ್ಯೆಯು
ಸಾಧಿಸಿ ದೇವತೆಗಳಾದರು ಹೆಚ್ಚಿತೈ
ವಾದಿಗಳ ಮೊತ್ತ ಮೋದದ ಹಾದಿ ತಪ್ಪಿತು ಯಕ್ಷ ಗಂಧರ್ವರೂ ||
ಬಾಧಿಸಲು ಕಿಂಪುರುಷ, ಕಿನ್ನರ, ಉರಗ
ರಾದಿಯಾದರು ಗರುಡ ವಿಧ್ಯಾಧರರೆಂಬ
ಸಾಧ್ಯರು, ಸಿದ್ಧರು, ಯೋಗಿಗಳು, ಮುನಿಗಳೆಲ್ಲಾ ಆದರಾಗಾ || ೧ ||
ಮೋದವನರಿಯದಾ ಮಾನವನೇ
ನಾದರೇನ್ ಮೊದವು ಒಂದು ನವ
ವೆಂದರಿತು ಒಂಬತ್ತರೊಳಗೊಂದಾಗಿ ನಲವತ್ತೈದು ನೀನಾಗೇ ||
ಹಿಂದಣಾ ಸೊನ್ನೆ ಮುಂದಿರಲು ಮೊದವು
ಹಿಂದಿರಲು ಆಮೋದ ಮಧ್ಯದಲಿ ಪ್ರಮೋದ
ವೆಂದ ಮಾರ್ಗವಿದು ನೀನರಿತೆಯಾದೊಡೆ ನಿಜ ಮಾನವನೂ || ೨ ||
ಶಾಂತ ಚಿತ್ತತೆ, ಸಕಲ ಕ್ಷಮತೆ ಏ
ಕಾಂತ ಚಿಂತನೆ ವಿಕಲ ಮನ ದೂರೀಕರಿ
ಸುತ ತಂತನ್ನ ವಿಷಯ ಹೊರತಾದ ವಿಚಾರ ಬಿಟ್ಟು ಬಿಡಲಾಗಾ ||
ಸಂತತ್ವ ದೊರಕಿ ನಿತ್ಯ ನಿರಂತರ ಜ್ಞಾನದೊ
ರತೆ ಹುಟ್ಟುತ ದಾರಿ ತೋರುತ ನಡೆಸುತ
ನಿತ್ಯನಾಗುವೆ ಮನುಜ ನೀ ಕೇಳ್ ಸತ್ಯ ಪ್ರಾಮಾಣಿಕತೆ ಇರಲೀ || ೩ ||
ಬೊಂತೆ ಮಾತಾಡದಿರು ಕಷ್ಟಕೆ
ಚಿಂತೆ ನೀ ಮಾಡದಿರು ಸೈರಿಸು ಅ
ನಂತ ಸುಖ ಮುಂದಿದೆ ನಿನಗೆ ದೈವದೊಲುಮೆ ದೊರಕೇ ||
ಅಂಕವಿಲ್ಲದ ಲೋಕದೊಳು ನೀನ
ನಂತವೆಂದರಿ ಪುಣ್ಯಕಾರ್ಯದ
ತಂತುವನು ಬಿಡದಿರು ದಯೆ, ಕ್ಷಮೆ, ದಮೆಯಿರಲಿ ನಿನ್ನೊಳೂ || ೪ ||
ಹುಸಿಯ ನುಡಿಯಲು ಬೇಡ ನೀ
ನಸಿಯ ಹಿಡಿಯಲು ಬೇಡ ಎಂದೂ
ಬಿಸಿಯುಸಿರು ಬಿಡಬೇಡ ಭಗವದಿಚ್ಛೆಯೆಂದು ತಿಳಿದೂ ||
ಬಸಿದು ಬೆವರನು ಕಾಯಕದಲಿ
ಸಸಿದು ಮಾಡೈ ಜೀವನದಲಿ ನೀ ನಿ
ನ್ನಸೊಗೆಯಿದೆ ಭಗವಂತನಲಿ ನೀ ನಿಜ ಮಾನವನು ಕಾಣಯ್ಯಾ || ೫ ||
ಮೂಡಲಿ ಭಗವದ್ಭಕ್ತಿ ಮನದಲಿ
ಮೂಡದಿರಲೀ ಕಾಯ ಕ್ಲೇಶ ರೋಷವು 
ಮೂಡಣದಿಕ್ಕಿನಲಿ ನಿನ್ನ ಜೀವನರವಿ ಉದಯಿಸುವನಾಗಾ ||
ಮೂಢತ್ವ ಬೇಡೈ ಮಾನವನೆ ನಿಂದನೆ
ಮಾಡದಿರು ಪರರ ನೀನೆಂದು ಜನರ
ಕಾಡದಿರು ಒಡನಾಡಿಗಳು ಸಹೋದರರು ಬಂಧುಗಳು ಎಂದು ತಿಳಿಯೆ ||||
ಜಗದ ಜೀವಿಗಳೆಲ್ಲ ಒಂದೇ
ಜಗದ ಬದುಕ ಬಯಸಿ ಬಂದಿರೆ
ಜಗದೊಡೆಯ ನೀನಲ್ಲ ಕಾಡದಿರವನ ಬದುಕಲು ಬಿಡೂ ||
ಜಗದೀಶ ನಿನ್ನನ್ನ ಬರೆದಿಹ ತಿನ್ನಲು
ಜಗದಲಿ ಹಾರದಿರು ನಿನ್ನಳತೆಯಾ
ಜಗವನರಿತು ಬಾಳುವುದೇ ಮಾನವಜೀವನ ಧರ್ಮವಯ್ಯಾ || ೭ ||
ವಿಕಲತೆಯಿರಲು ಅಂಗದಲಿ
ಸಕಲೇಶನಾ ಕರುಣೆಯಿರೆ
ವಿಕಲತೆಯಿಲ್ಲ ಬದುಕಿರೆ ಸಾಧಿಸಲು ಕೀರ್ತಿ ಯಶವೂ ||
ವಿಕಲತೆಯು ಮನದೊಳಿರೆ
ವಿಕಲಾಂಗ ನೀ ಬದುಕಿಲ್ಲ ಕಷ್ಟವು
ವಿಕಲತೆ ಕಳೆಯೊ ಮನದಲಿ ಶುದ್ಧನಾಗು ಮಾನವನಾಗೂ ||||
ದೇವನಿಹ ನೀ ನಂಬು ಜಗವನು
ದೇವ ನಿರ್ದೇಶಿಸುವ ಸತ್ಯವಿದು
ದೇವ ದೇವನದಾವ ಚಿಂತನೆ ಈ ಜಗದಾಟ ಕಾಣೆಲೊ ||
ದೇವ ನಾಟಕರಂಗವೇ ಜೀವನ
ದೀವನೈ ಸುಖ ಕಷ್ಟ ಪಾತ್ರದಲಿ
ದೇವನೊಲುಮೆ ಗಳಿಸಲು ಈ ಪ್ರಾಪಂಚಿಕವೇ ಇಲ್ಲವಯ್ಯಾ || ೯ ||

ಈ ರೀತಿಯಲ್ಲಿ ಮಾನವತ್ವವನ್ನು ರೂಢಿಸಿಕೊಂಡು ಬದುಕು ಸಾಧಿಸಬೇಕು. ಇದು ವಸಿಷ್ಠರ ಅಂಬೋಣ ಸತ್ಯ. 

ಮಾನವನಾಗಲು ಸಕಲ ಜೀವಸಂಕುಲ ಮೊತ್ತ ೮೪ ಲಕ್ಷ ಸಂಖ್ಯೆ
ಅದರಲ್ಲಿ ಶೇಷ ಸಂಖ್ಯೆ ಮಾನವ ಒಂದು. ಹಾಗಿದ್ದ ಮೇಲೆ ಅಗಾಧತೆ ಅರ್ಥಮಾಡಿಕೊಳ್ಳಿರಿ. 
ಹಾಗಾಗಿ ಅಂಡ = ಅದಕ್ಕೆ ಮೊತ್ತ ಗುಣಕ ಭಾಜಕಗಳಿಲ್ಲ. ಸೊನ್ನೆ ಸೊನ್ನೆಯೇ ಎಂದಿಗೂ, ಯಾವಾಗಲೂ. 

ಸ್ವೇದಗಳು 40 ವಿಧ. ಅದನ್ನು ದಶದಿಂದ ಭಾಜಿಸಲು ಶೇಷವಿಲ್ಲ - 4 ಭಾಗಲಬ್ಧ. ನಾಲ್ಕು ಜೀವನ ಗುರಿಯಾದ ಚತುಷ್ಟಯಾಂಶಗಳು ಮಾನವರಿಗೆ ಪುರುಷಾರ್ಥಗಳು. ಕೊಟ್ಟ ಕೊನೆಯ ಗುರಿ ಮೋಕ್ಷ. 

ಅಂಡಜಗಳಿಗೆ ದ್ವಿಜನ್ಮ + ತನ್ಮೂಲಕ ಉಚ್ಛ್ರಾಯ ವರ್ಧನ, ಶ್ರೇಯ, ಭೋಗಗಳು. 

ಸ್ವೇದಜಗಳಿಗೆ ಸ್ವಭಾವ, ವೃತ್ತಿ, ಪ್ರಕರಣ, ಅಮೀಲ್ಯಗಳು

ಇನ್ನು ಉದ್ಭಿಜಗಳು 354 ವಿಧ. ದಶದಿಂದ ಭಾಗಿಸಲು 4 ಶೇಷ, 35 ಭಾಗಲಬ್ಧ. 33 ಮೂಲಪ್ರಕೃತಿ ಮತ್ತು ಋಣ+ಕರ್ಮ ಆಧಾರಿತ ಚೈತನ್ಯ ಮತ್ತು ಭೂತ ಜಡ. ಶೇಷವು ಮಾತ್ರ ಅದರ ಪ್ರಾಪ್ತಿ. ಹಾಗಾಗಿ ಜ್ವಲ, ಸುಜ್ವಲ, ಪ್ರಜ್ವಲ, ಉಜ್ವಲಗಳೆಂಬ ವೃತ್ತಿಯೇ ವಾರ್ತೀಕಗಳಾಗಿ ಉದ್ಭಿಜ ಕಾರಣ. 

ಇನ್ನು ಯೋನಿಜ, ಇದು ಹಲವು ಭಿನ್ನ ಭಿನ್ನ ಪ್ರವೃತ್ತಿಯ ಯೋನಿಗಳು ಹಾಗೂ ಅನಿರ್ದಿಷ್ಟ ಪ್ರಕಾರಗಳು. ಅದರಲ್ಲಿ ಮಾನವ ಯೋನಿ ಒಂದು ಬಗೆ. ಅದರಲ್ಲಿ ಜನನವಾದ ಸಕಲರೂ ಸಮಾನ, ಅದೇ ಮಾನವತ್ವ ಅರಿಯಿರಿ. ಹೀಗೆ ದೊಡ್ಡ ಮಾನವತಾವಾದಿಯಾದ ವಸಿಷ್ಠರು ಮನುಷ್ಯನ ಏಳ್ಗೆ, ಅಭಿವೃದ್ಧಿ, ಸುಖ, ಜೀವನ, ಆತ್ಮೋದ್ಧಾರ ಕುರಿತು ಹಲವು ಉದಾಹರಣೆ ಸಹಿತ ವಿವರಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬನೂ ವಸಿಷ್ಠರಿಗೆ ಕೃತಜ್ಞನಾಗಿರುತ್ತಾ ಜೀವನ ರೂಪಿಸಿ ಕೊಂಡು ಭಾರತೀಯರಾಗಿ ಬಾಳಿರೆಂದು ಹಾರೈಸುತ್ತೇನೆ. 
ಇಂತು
ಕೆ. ಎಸ್. ನಿತ್ಯಾನಂದ
ಅಘಸ್ತ್ಯಾಶ್ರಮ ಗೋಶಾಲೆ, 
ತಲಪಾಡಿ, ಕಾಸರಗೋಡು.

No comments:

Post a Comment