Skip to main content

Posts

Showing posts from July, 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೩

ಎರಡೂವರೆ ದ್ವೀಪವೆನಿಸಿದ ಈ ನಾಡಿನಲ್ಲಿ ಅನಾದಿಕಾಲದಿಂದಲೂ ಸಾಧುಸಂತರು ಮೋಕ್ಷಸಾಧನೆ ಮಾಡುತ್ತಿರುವುದನ್ನೂ, ಈ ಸಾಧನೆಗೆ ನವವೆಂಬ ಓಂ ಅಕ್ಷರವೇ ಮೂಲವೆಂದೂ ಸೂಚಿಸುವುದರೊಂದಿಗೆ ೧೩ನೇ ಅಧ್ಯಾಯವು ಪ್ರಾರಂಭವಾಗಿದೆ. ಅನಂತ ಜ್ಞಾನದ ಆದಿಸ್ವರೂಪವನ್ನು ಸಾಧಿಸಿದವರು ಪರಮಾತ್ಮನನ್ನು ತಮ್ಮ ಆತ್ಮದಲ್ಲಿಯೇ ಕಾಣುತ್ತಾರೆ ಎಂಬುದಾಗಿ ಅದ್ವೆತದ ಶುದ್ಧ ಕನ್ನಡ ರೂಪವನ್ನು ನಮಗೆ ಒದಗಿಸಿಕೊಟ್ಟಿದ್ದಾನೆ.
ಜ್ಞಾನಸಂಪಾದನೆಗೆ ತೊಡಗಿರುವವರು ಆತ್ಮಜ್ಞಾನವನ್ನು ಬಿಡಬಾರದು. ಇಂಥವರು ಸಿಂಹದಂತೆ ಮಹಾಪರಾಕ್ರಮ ಉಳ್ಳವರು. ಸಂಯಮಶೀಲರು, (ಮುಂಗೋಪಿಗಳಲ್ಲ!) ಇವರು ಸದಾಕಾಲವೂ ಜ್ಞಾನ; ಆತ್ಮಜ್ಞಾನ ಮುಂತಾದುವುಗಳಲ್ಲೇ ಆಸಕ್ತರಾಗಿರುತ್ತಾರೆ. ಜ್ಞಾನಿಗೆ ಆತ್ಮಜ್ಞಾನವೇ ಪ್ರಧಾನ. ಉಳಿದವು ಗೌಣ. ಜ್ಞಾನಿಯು ಮಹಾ ಪರಾಕ್ರಮಿಯೇ ಹೊರತು; ಹೇಡಿಯಲ್ಲ. ಜ್ಞಾನಿಯು ನಿಧಾನಿಯೇ ಹೊರತು; ಆತುರಗಾರನಲ್ಲ ಎಂಬುದಾಗಿ ಜ್ಞಾನಿ ಹಾಗೂ ಜ್ಞಾನದ ವಿವರ ನೀಡಿದ್ದಾನೆ.
  ಶಿಷ್ಯರಿಗೆ ಗಣಿತಸೂತ್ರಗಳನ್ನು ನೀಡಿ, ಅದನ್ನು ವಿಸ್ತರಿಸಿ ತರುವಂತೆ ಸೂಚಿಸುವುದು, ರಾತ್ರಿಯಸಮಯದಲ್ಲಿ ಶಿಷ್ಯರು ಈ ಸೂತ್ರಗಳನ್ನು ಕುರಿತು ಚಿಂತಿಸಿ; ಮನನಮಾಡಿಕೊಂಡು, ವಿಸ್ತರಿಸಿ ಮರುದಿನ ಗುರುವಿಗೆ ವಿವರಗಳನ್ನೊದಗಿಸುವುದು, ಇವುಗಳನ್ನು ಕ್ರೋಢೀಕರಿಸಿ; ಕುಮುದೇಂದುಮುನಿಯು ಸಿರಿಭೂವಲಯವನ್ನು ನಿರೂಪಿಸುವುದು; ಈ ಗ್ರಂಥರಚನೆಯ ವಿಧಾನ. ಇದನ್ನು ಕುರಿತ ವಿವರಗಳನ್ನು ಓದುಗರು ೧೩ನೇ ಅಧ್ಯಾಯದ ಪೂರ್ಣಪದ್ಯಗಳ ಅಶ್ವಗತಿಯ ಅ೦ತರ…

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೨

ಹನ್ನೆರಡನೇ ಅಧ್ಯಾಯಹಿಂದಿನ ಋಷಿಮುನಿಗಳು ತಮ್ಮ ಯೋಗ ಸಾಮ್ರಾಜ್ಯದಲ್ಲಿ ವಶಪಡಿಸಿಕೊಂಡ ಈ ರಸವಸ್ತುವಿನ ಸಂಪತ್ತನ್ನು ಅವರು ಸಂಯಮದಿಂದ ತ್ಯಜಿಸಿದ್ದಾರೆ. ಈ ಯಶಸ್ಸಿನಕಾವ್ಯ ಭೂವಲಯ ಎಂಬುದಾಗಿ ಗ್ರಂಥ ಪ್ರಶಂಸೆಯೊಂದಿಗೆ ಹನ್ನೆರಡನೇ ಅಧ್ಯಾಯವು ಪ್ರಾರಂಭವಾಗಿದೆ. ಮಾನವ ಜನ್ಮದ ಆದಿ-ಅಂತ್ಯಗಳ ಶುಭಕರ್ಮಗಳು; ಇರುವಷ್ಟು ಸುಖ; ಇವುಗಳನ್ನು ತುಂಬಿ, ಎಲ್ಲ ಪುಣ್ಯೋದಯದ ವಿಚಾರಗಳೂ ಹದಿನೆಂಟು ಶ್ರೇಣಿಯಲ್ಲಿ ಬರಬೇಕೆಂದು ರಚಿಸಿದಕಾವ್ಯ ಭೂವಲಯ ಎಂದು ವಿವರಿಸುತ್ತಾನೆ.  ಈ ಅಧ್ಯಾಯಾಂತರ್ಗತವಾಗಿ ದೊರೆಯುವ ಅಂತರ್ಸಾಹಿತ್ಯವನ್ನು ಪ್ರತ್ಯೇಕವಾಗಿ ಸೂಚಿಸಲಾಗಿದೆ. ೨೭೭ನೇ ಪಾದಪದ್ಯದಿಂದ ೬ನೇ ಪಾದಪದ್ಯದ ವರೆವಿಗೆ ಪ್ರತಿಪಾದದಮೊದಲನೇ ಅಕ್ಷರವನ್ನು ನಾಗಬಂಧ ಕ್ರಮದಲ್ಲಿ ಜೋಡಿಸಿಕೊಂಡಾಗ ದೊರೆಯುವ ಸಾಹಿತ್ಯದ ವಿಚಾರವನ್ನೂ ಅಲ್ಲೇ ಸೂಚಿಸಲಾಗಿದೆ. ಈ ಭಾಗವು ೧೯ನೇ ಅಧ್ಯಾಯದಿಂದ ಹಿಂದಕ್ಕೆ ೧೨ನೇ ಅಧ್ಯಾಯದ ವರೆವಿಗೆ ಹರಿದುಬಂದಿದೆ ಎಂಬುದನ್ನು ಮರೆಯದೇ ನೆನೆಪಿನಲ್ಲಿಟ್ಟುಕೊಳ್ಳಬೇಕು.
  ಮಂಗಗಳ ಮನಸ್ಸು ಬಹಳ ಚಂಚಲವಾದುದು. ಈ ಕಾರಣದಿಂದಾಗಿಯೇ ಅವುಗಳು ಹಗಲೆಲ್ಲ ಮರದಿಂದ ಮರಕ್ಕೆ ನೆಗೆದಾಡುತ್ತಲೇ ಇರುತ್ತವೆ! ಮನುಷ್ಯನ ಮನಸ್ಸಿನ ನೆಗೆದಾಟವೂ ಇದೇ ಕ್ರಮದಲ್ಲಿರುತ್ತದೆ. ಧ್ವಜದಲ್ಲಿರುವ ಕಪಿಯ ಹಾರಾಟಕ್ಕೆ ಮಿತಿ ಇರುತ್ತದೆ. ಈ ರೀತಿಯಲ್ಲಿ ಹಾರಾಡುವ ಮನಸ್ಸನ್ನು ಒಂದೆಡೆ ಕಟ್ಟಿನಿಲ್ಲಿಸುವ ಸಾಧನವೆಂದರೆ, ಸ್ಯಾದ್‍ವಾದ. ಈ ಸ್ಯಾದ್ವಾದದಿಂದಲೇ ಸರ್ವಸ್ವವನ್ನೂ ಕಟ್ಟಿರಿಸಿ…