Skip to main content

Posts

Showing posts from December, 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೯

ಗಣಿತ ಶಾಸ್ತ್ರದ ವಿಚಾರಗಳೊಂದಿಗೇ ಹತ್ತೊಂಬತ್ತನೇ ಅಧ್ಯಾಯವು ಪ್ರಾರಂಭವಾಗಿದೆ. ಗ್ರಂಥಕರ್ತಾರ ಕುಮುದೇಂದು ಮುನಿಯು ಜ್ಞಾನಸಾಗರವಾದ ಭಗವದ್ಗೀತೆಯ ಅಂಕವನ್ನು ಸೂಚಿಸಿದ್ದಾನೆ. ಬೀಜಾಕ್ಷರ, ಶೃತಜ್ಞಾನದ ಅರಿವು, ತತ್ವಾರ್ಥ ಮುಂತಾದುವುಗಳಿಗೆ ಇರುವ ನವಮಾಂಕ ಗಣನೆಯನ್ನು ಸೂಚಿಸಿದ್ದಾನೆ. ಯುದ್ಧದ ಹಲವಾರು ಪರಿಗಳನ್ನು ವಿವರಿಸಿದ್ದಾನೆ:


ಧನ ಯುದ್ಧ |
ಜಿನ ಯುದ್ಧ | ಭೂವಲಯದ ಯುದ್ಧ | ಘನ ಘೋರ ಮೃದುಲ ಜಗಳ |  ಹರುಷವಳಿವ ಯುದ್ಧ | ಸರಸಾಕ್ಷರ ಯುದ್ಧ | ಗುರುಗಳೊಡನೆ ಮಾಳ್ಪ ಲಿಖಿತದರಿವಿನ ಯುದ್ಧ | ಐಸಿರಿಯನಾರ್ಜಿಪ ಯುದ್ಧ | ರೀತಿ ನೀತಿಯ ಯುದ್ಧ | ಅನುಜರನೊಂದುಗೂಡಿಸಲು ಮಾಡುವ ಯುದ್ಧ | ಜಿನಧರ್ಮ ಹರಿ ಹರ ವಣಿಕ ಶಣಸದೆ ಬಾಳಲು ಕುಣಿಕಂಕದ ಯುದ್ಧ | ಘನಧರ್ಮ ಶಾಸನ ಯಶರೈ ಸಮತೆಯೊಳ್ ಮೆರೆಸಲು ದ್ರೋಹವ ಗೈವಾಗ ಮಮತೆಯ ತ್ಯಾಗಿಗಳ ಸುಪರಾಕ್ರಮದ ಉಪಕ್ರಮದನುಭವ ಮುದ್ರೆಯ ವಿಮಲ ಯುದ್ಧದ ಧರ್ಮ ಯುದ್ಧ | 
ಮನಸಿಂಹಪೀಠವ ಸಾಗಿಪ ಯುದ್ಧ | ವರ ರಣ ದೀಕ್ಷೆಯೊಳ್ ನಿಂತು ಬಹಿರಂತರಂಗದ ಜನ ಯುದ್ಧ ಜಿನ ಅರಿಹನನಾ | ಯಶದಂಕದೊಳಗನಂತಾಂಕ್ಷರವನರಿಯುವ ರಸಸಿದ್ಧಿ ಸಂಕ್ರಮ ಯುದ್ಧ | ಯಶದ ವಿಜಯ ಶ್ರೀ ಯುದ್ಧ

ಅಗಸ್ತ್ಯ ಲೋಪಾಮುದ್ರ ಸಂವಾದದಲ್ಲಿ ಸಪ್ತಪದಿ ವರ್ಣನೆ

ಬಾಳಿನಲ್ಲಿನಮ್ಮಪೂರ್ವಜರುಹಾಕಿದಏಳುಸೀಮಾರೇಖೆಯಿದೆ. ದಂಪತಿಗಳೇ, ಅದನ್ನುದಾಟಲೇಬಾರದುತಿಳಿದುಕೊಳ್ಳಿ. ಆಸಪ್ತಪದಿಯನ್ನು ವೇದ ಮಂತ್ರಗಳ ಮುಖೇನವರ್ಣಿಸುತ್ತೇನೆ  ಎನ್ನುತ್ತಾರೆ:
|| ಓಂ ಇಷ ಏಕಪದೀ ಭವ ||
ಲಲನೆಯಿಂದಲೆಜೀವನಲಾಲಿತ್ಯಆಶ್ರಮಧರ್ಮವಿದೆ ಲಲನೆಕೇಳ್, ಮರೆಯದಿರುಧರ್ಮನೀನೇಪೋಷಿಸಿಕೊ ಲಾಲಿತ್ಯದಲಿಬೆಳೆಸುಪ್ರಕೃತಿಯನಿರಂತರತೆಗೆಅಣಿ ಗೊಳಿಸುತಲಿಬೆಳೆಸುವುದು, ಕಾಯುವುದುಗೃಹಸ್ಥಧರ್ಮದಾಮೊದಲಹೆಜ್ಜೆಯದೂ || ೧ ||

ಋಗ್ವೇದದ ವಸಿಷ್ಠ ಮಂಡಲದಲ್ಲೊಂದು ಗಣಿತಸೂತ್ರ - ಭಾಗ ೫

||  ಶ್ರೀಗುರುಭ್ಯೋನಮಃ ||
ಮೊದಲಾಗಿ ವಸಿಷ್ಠರ ಯೋಗಶಕ್ತಿಯನ್ನು ಗಮನಿಸೋಣ. ನಂತರ ಅವರು ಯೋಗದ ಬಗ್ಗೆ ಹೇಳಿದ ವಿಚಾರದ ವೈಜ್ಞಾನಿಕ ಸತ್ಯಾಸತ್ಯತೆ ಗಮನಿಸೋಣ ಹಾಗೂ ಯೋಗದ ಆಸನಗಳು, ದೇಹ ಹೇಗೆ ಅದಕ್ಕೆ ಸ್ಪಂದಿಸುತ್ತದೆ ಎಂಬುದನ್ನು ಅವರ ಮಾತಿನಲ್ಲೇ ಗಮನಿಸೋಣ. ಇಲ್ಲಿ ಉದಾಹರಿಸುವ ಮಂತ್ರಗಳೆಲ್ಲಾ ಹಿಂದೆ ವಸಿಷ್ಠ ಮಂಡಲ ಋಗ್ವೇದದಲ್ಲಿದ್ದು ಈಗ ಖಿಲವೆಂದೂ, ಪರಿಶಿಷ್ಟವೆಂದೂ ಹಾಗೂ ಇತರೆ ವೇದ ಶಾಖೆಗಳಲ್ಲೂ ಸೇರಿ ಹೋಗಿವೆ. ಆದರೆ ಅದರ ಆರಂಭಿಕ ಛಂದೋಬದ್ಧವಾದ ಮೊದಲ ಪಾದ ಋಗ್ವೇದದಲ್ಲೂ ಇದೆ. ಹಾಗೂ ಎರಡನೆ ಪಾದ ಅಥವಾ ಪರಿಣಾಮ ಭಾಗ ಇತರೆ ಶಾಖೆಗಳಲ್ಲಿ ಸೇರಿಹೋಗಿವೆ. ಅದರ ವಿವರ ಹೆಚ್ಚಾಗಿ ಕೊಡಲಾರೆ. ನೀವೇ ವೇದಾಧ್ಯಯನ ಮಾಡಿ ತಿಳಿದುಕೊಳ್ಳಿ. ಅದರಲ್ಲಿ ಮೊದಲಾಗಿ ವಸಿಷ್ಠರಯೋಗಶಕ್ತಿ ಗಮನಿಸೋಣ.
ಸೃಷ್ಟಿಯ ಆದಿಯಿಂದ ಇಲ್ಲಿಯವರೆಗೆ ನಿರಂತರ ಬದುಕಿ ಸದೇಹರಾಗಿರುವ ವ್ಯಕ್ತಿಯೆಂದರೆ ವಸಿಷ್ಠರು ಒಬ್ಬರೇ. ನಂತರ ಚಿರಂಜೀವಿಗಳೆಂದು ಹೆಸರಿಸಲ್ಪಟ್ಟವರು ಈಗಲೂ ಬದುಕಿದ್ದರೂ ಅವರು ಹುಟ್ಟಿದ್ದು ಹಲವು ಯುಗಕಾಲ ಕಳೆದ ಮೇಲೆ. ಇವರು ಹಾಗಲ್ಲ, ಸೃಷ್ಟಿಯ ಆದಿಯಲ್ಲೇ ಮಿತ್ರಾ+ವರುಣಸಂಯೋಗದಿಂದ ಅಂದರೆ ಪ್ರಕೃತಿಯನ್ನು ನೀರಿನ ರೂಪದಲ್ಲಿ ಗುರುತಿಸುವ ಕಾಲದಲ್ಲಿಯೇ ಸೂರ್ಯ ಚೈತನ್ಯ ಸಂಯೋಗ ಕಾರಣದ ಸೃಷ್ಟಿ “ವಸಿಷ್ಠರು”. 
ಬಹುಶಃ ಪಂಚಕೃತ್ಯಗಳೆಂದು ಪ್ರಸಿದ್ಧವಾದ ಈ ಜಗತ್ ಸೃಷ್ಟಿಯ ನಿರಂತರತೆ ಹೊಂದಿಸುವ ಪೂರ್ವದಲ್ಲೇ ಏನಕೇನ ಪ್ರಕಾರೇಣ ಹುಟ್ಟಿದರು. ನಂತರ ಬೇರೆ ಬೇರೆ ಸಂದರ್ಭದಲ…