Monday, 4 January 2016

ಜ್ಯೋತಿರಾಯುರ್ವೇದ - ೨ : ವಂಶವಾಹೀ ಖಾಯಿಲೆಗಳು


ಇಲ್ಲಿ ನೀವು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು. ವಂಶವಾಹೀ ಖಾಯಿಲೆ ಎಂಬುದು ತಲತಲಾಂತರದಿಂದ ಹರಿದು ಬರುತ್ತಿರುವ ಒಂದು ವಿಶೇಷ ಜಾಡ್ಯ. ಅದನ್ನು ತಡೆಯುವುದಕ್ಕೆ ಹಿರಿಯರಾದ ನೀವು ಪ್ರಯತ್ನ ಮಾಡಲೇಬೇಕು. ನಿಮ್ಮಿಂದ ಮುಂದೆ ಈ ಖಾಯಿಲೆ ಮುಂದುವರಿಯದಂತೆ ತಡೆಯಲು ಅದಕ್ಕೆ ವ್ಯತಿರಿಕ್ತ ಸಂತಾನ ಪಡೆಯಬೇಕು. ಹೇಗೆಂದರೆ, ಈ ವಂಶವಾಹೀ ಖಾಯಿಲೆಯ ಬಾಧೆ ಇರುವ ತಂದೆ ತಾಯಿಯರ ಜಾತಕವನ್ನು ಸಮರ್ಥ ಜ್ಯೋತಿಷಿ ವೈಧ್ಯರಲ್ಲಿ ಪರೀಕ್ಷಿಸಿ. ಈ ಖಾಯಿಲೆಯು ನಿಮ್ಮ ಜಾತಕದಲ್ಲಿ ಕುರುಹು ಇಟ್ಟಿರುತ್ತದೆ. ಆ ಸಮಯವನ್ನು ಗುರುತಿಸಿ, ಅದಕ್ಕೆ ಹೊರತುಪಡಿಸಿದ ಸೂಕ್ತ ಸಮಯದಲ್ಲಿ ಸಂತಾನ ಪಡೆಯಿರಿ. ಗರ್ಭಕಾಲದಲ್ಲೇ ಮಗುವಗೆ ವಂಶವಾಹಿ ಖಾಯಿಲೆಯ ಅಂಶ ಬರದಂತೆ ರಕ್ಷಣಾತ್ಮಕ ವ್ಯವಸ್ಥೆ ಮಾಡಿರಿ. ಸೂಕ್ತ ವೈದಿಕ ಸಂಸ್ಕಾರಗಳನ್ನು ಮಾಡಿರಿ. ಸದೃಢ ಮಗುವಿನ ಜನನಕ್ಕಾಗಿ ಪುಂಸವನ ಮಾಡಿರಿ. ಗರ್ಭಿಣೀ ತಾಯಿಯ ದೈಹಿಕ, ಮಾನಸಿಕ ಸ್ವಸ್ಥತೆಗಾಗಿ ಪ್ರಯತ್ನಪೂರ್ವಕ ಸಾಧನೆ ಮಾಡಿರಿ. ಆಗ ವಂಶವಾಹೀ ಖಾಯಿಲೆಯನ್ನು ತಡೆಗಟ್ಟಬಹುದು. ಒಮ್ಮೆ ಎಲ್ಲರೂ ಸಂತಾನ ಪಡೆಯುವ ಕಾಲದಲ್ಲಿ ಈ ಮುನ್ನೆಚ್ಚರಿಕೆಯಿಂದ ಸಂತಾನ ಪಡೆದದ್ದಾದಲ್ಲಿ ಮುಂದೆ ವಂಶವಾಹಿ ಖಾಯಿಲೆ ಎಂಬ ಪಿಡುಗು ನಾಶವಾಗುತ್ತದೆ. ಇದಕ್ಕಾಗಿ ಜ್ಯೋತಿಷ್ಯವನ್ನೂ, ಆಯುರ್ವೇದವನ್ನೂ, ಆಲೋಪತಿಯನ್ನೂ ಬಳಸಿ. ಮುಖ್ಯವಾಗಿ ನಿಮ್ಮ ಗುರಿ ಸಮರ್ಥ ಸಂತಾನದೊಂದಿಗೆ ಆ ವಂಶವಾಹಿ ಖಾಯಿಲೆಯನ್ನು ಹಿಮ್ಮೆಟ್ಟುವಿಕೆ ಎಂಬ ದೀಕ್ಷೆ ಇರಲಿ, ಛಲವಿರಲಿ ಅಥವಾ ಈ ಸಾಧನೆ ಸಾಧ್ಯವೇ ಇಲ್ಲವೆಂದಾದಲ್ಲಿ ಮಕ್ಕಳೇ ಬೇಡ ಎಂಬ ತ್ಯಾಗವಿರಲಿ. ಇದರಿಂದಾಗಿ ಮಾತ್ರ ಖಾಯಿಲೆಯೆಂಬ ಒಂದು ರೀತಿಯ ಪಿಡುಗಿನಿಂದ ಸಮಾಜಕ್ಕೆ ಮುಕ್ತಿ ಕೊಟ್ಟ ಭಾಗ್ಯ ನಿಮ್ಮದಾಗುತ್ತದೆ. 

ಅಕರ:- ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ಋತ್ವಿಕ್ ವಾಣಿ ಮಾಸಪತ್ರಿಕೆ. 
ಆಧಾರ:- ಅತೀ ಪ್ರಾಚೀನವಾದ ಲಕ್ಷಾಂತರ ಶ್ಲೋಕವುಳ್ಳ ಬ್ರಾಹ್ಮಿ ಭಾಷೆಯಲ್ಲಿರುವ ಶಾರ್ಙ್ಘ್ಯಧರ ಪ್ರಣೀತ ಜ್ಯೋತಿರಾಯುರ್ವೇದ ಸಂಹಿತಾ.

No comments:

Post a comment