Skip to main content

Posts

Showing posts from January, 2016

ಯತಿವರೇಣ್ಯ ಅಣ್ಣಪ್ಪಯ್ಯರು ಹೇಳಿದ ಜಗತ್ತಿನ ಹಿಂದಡಗಿರುವ ತಂತ್ರಸೂತ್ರ

ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ ಕೇಳಿರಿ:-
 ****ಯತಿವರೇಣ್ಯ ಅಣ್ಣಪ್ಪಯ್ಯರು ಹೇಳಿದ ಜಗತ್ತಿನ ಹಿಂದಡಗಿರುವ ತಂತ್ರಸೂತ್ರ****

ಜಗಕೆ ಮಿಗಿಲಾದ ಸತ್ಯದೊಳು ಹದಿನಾರು ಸೂತ್ರಗಳು ಮತ್ತಿನ್ನು 
ಯಾಗಸೂತ್ರವ ಯಾಜುಷದೊಳ್ ಇಪ್ಪತ್ತೇಳು ಮತ್ತು ಮುನ್ನೂರು 
ಜಗವ ಮೋಹಿಪ ವೇದ ಮೂಲದಿ ಒಂಭತ್ತು ಅರ್ಥದೊಳ್ ವ್ಯಾಪ್ತಿ ಹಲವಿದೆ ಅದರ ಮಿಗಿಲಾದ ಲೆಕ್ಕದೊಳು ನೂರರ ಸಂಖ್ಯಾ ಸಹಸ್ರ ಶಾಖೆಯ ತಂತ್ರ 
ಅಗಣಿತ ಸೂತ್ರವೆಲ್ಲವೂ ಅಡಕವಾಗಿಹವು ಕಾಣೆಲವೊ ಮಾನವನೇ
ಜಗದ ವ್ಯಾಪಾರವಿನ್ನೇನು ಈ ಜಗವ ಸೃಷ್ಟಿಪ ಸೂತ್ರವೂ ಅಡಕವಾಗಿಹವು ವೇದದೊಳು ||

ಭಾಗವತರು:- ಶ್ರೀ ಪುತ್ತಿಗೆ ರಘುರಾಮ ಹೊಳ್ಳ
ಚಂಡೆ:- ಶ್ರೀ ಪದ್ಯಾಣ ಶಂಕರ ನಾರಯಣ ಭಟ್
ಮದ್ದಳೆ:- ಶ್ರೀ ಪಿ. ಟಿ. ಜಯರಾಮ್


ಸುಗಮ ಜೀವನ - ಸರಳ ಆಹಾರ : ಭಾಗ ೨

ಕಾಫಿ, ಚಾ, ಕೊಕ್ಕೊಗಳು ಪಾನೀಯವಾಗಿ ಜನಪ್ರಿಯತೆ ಗಳಿಸಿದುದು ಇತ್ತೀಚೆಗಿನ ದಶಕಗಳಲ್ಲಾದರೂ ಅವುಗಳ ಬಳಕೆ ಕೆಲವು ಶತಕಗಳಿಂದಲೇ ಜಗತ್ತಿನ ಕೆಲವೆಡೆ ಮಾತ್ರ ಇದ್ದುದು ಸಾರಿಗೆ ಸಂಪರ್ಕದ ಮುನ್ನಡೆಯಿಂದ ಸಾಧ್ಯವಾಗಿದೆ. 'ಕೆಫೇನ್' 'ತೇಯಿನ್' 'ಥಿಯೊಬ್ರೊಮಿನ್'ಗಳಂತಹಾ ಮಾರಕ ಘಟಕಗಳು ಈ ಪಾನೀಯಗಳಲ್ಲಿ ಸೇರಿರುವುದು ಗಮನಾರ್ಹ. ಇವುಗಳನ್ನು ಆಲ್ಕಲೈಡ್‌ಗಳೆನ್ನುವರು. 'ಕೆಫೇನ್' ರಕ್ತನಾಳಗಳನ್ನು ಸಂಕುಚಿತಗೊಳಿಸಿದಾಗ ಅಂಗಾಂಗಗಳಲ್ಲಿ ಕಶ್ಮಲವು ಉಳಿದುಕೊಂಡು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕೋಮಲವಾದ ಮೆದುಳು ಚುರುಕಾಗಿ ಉಳಿದ ಅಂಗಗಳನ್ನು ಎಚ್ಚರಗೊಳಿಸುವಾಗ ಶರೀರದಲ್ಲಿ ಹೆಚ್ಚು ಶಕ್ತಿ ಸಂಚಾರವಾದ ಅನುಭವವಾಗುವುದು. ಕಶ್ಮಲಗಳನ್ನು ಆದಷ್ಟು ಬೇಗ ಹೊರ ತಳ್ಳುವ ಆಸಕ್ತಿಯಿಂದಲೇ ಆದರೂ ಇದನ್ನೇ ಕೆಲಸಕ್ಕೆ ಉತ್ತೇಜನವೆಂದು ಜನರು ತಿಳಿಯುವರು. ಮೈ ಬಿಸಿಯೂ ಏರುವುದು ಕಶ್ಮಲಗಳ ಸಂಗ್ರಹವಾಗಿದೆಯೆಂದು ಸಾರುವ ಸಲುವಾಗಿ. ಈ ಪರಿಸ್ಥಿತಿಯಲ್ಲಿ ಹೃದಯ, ಯಕೃತ್, ಮೂತ್ರಜನಕಾಂಗ, ಮೇದೋಜ್ಜೀರಕ ಗ್ರಂಥಿಗಳೆಲ್ಲ ಕಶ್ಮಲಗಳನ್ನು ಹೊರತಳ್ಳುವ ಪ್ರಯತ್ನದಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡಿ ಬಹುಬೇಗ ಬಳಲುತ್ತವೆ. ಇದರಿಂದ ಕಾಯಿಲೆಗಳ ಸರಮಾಲೆಗಳೇ ಕಾಣಬರುತ್ತವೆ.


'ಥಿಯೊಬ್ರೊಮಿನ್'ಬಳಕೆಯಿಂದ ನೆನಪು ಶಕ್ತಿ ಕಡಿಮೆಯಾಗಿ ಮೆದುಳು ರೋಗಗಳು ಕಾಣಬರುತ್ತವೆ. ಗರ್ಭಿಣಿಯು ಈ ಪಾನೀಯಗಳನ್ನು ಸೇವಿಸಿದರೆ ಗರ್ಭದಲ್ಲಿ ಬೆಳೆಯುವ ಭ್ರೂಣದ…

ಮಾಂಸಾಹಾರ ಒಂದು ವಿಶ್ಲೇಷಣೆ

ಪ್ರಿಯ ಸಮಾಜ ಬಾಂಧವರೇ,
        ಈ ಕೆಲದಿನಗಳಿಂದ ಹಲವಾರು ಮಾದ್ಯಮಗಳಲ್ಲಿ ತಿನ್ನುವ ಆಕಾಂಕ್ಷಿ ಜನ ತಮ್ಮ ತೀಟೆಗಾಗಿಯೋ ಅಥವಾ ಶುದ್ಧ ಶಾಖಾಹಾರಿಗಳಾದ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೋ ಮಾಂಸಹಾರಕ್ಕೆ ವೇದ, ಪುರಾಣ, ಸ್ಮೃತಿಗಳಲ್ಲಿ ಆಧಾರ ಹುಡುಕುತ್ತಿದ್ದಾರೆ. ಅದರಿಂದಲಾದರೂ ವೇದಗಳ ಬಗ್ಗೆ ಅಧ್ಯಯನ ನಡೆಯಲಿ ತುಂಬಾ ಸಂತೋಷ. ಯಾವುದೋ ರಾಜಕೀಯ ಕಾರಣ, ಪಕ್ಷದ್ವೇಷ, ವೈಯಕ್ತಿಕ ಹಿತಾಸಕ್ತಿ, ಇವುಗಳಿಂದ ಪ್ರಚೋದಿಸಲ್ಪಟ್ಟ ಬುದ್ಧಿ ಜೀವಿಗಳು ತಮಗೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಈ ಲೇಖನ ಸಿದ್ಧಪಡಿಸಿದ್ದೇನೆ. ಓದಿ, ಅರ್ಥಮಾಡಿಕೊಳ್ಳಿ. ನಿಮ್ಮವರಿಗೆ ತಿಳಿಸಿ. "ಬದುಕುವುದಕ್ಕಾಗಿ ಮಾತ್ರ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ"ಲೇಖನ ಓದಿ.
        ಈ ಲೇಖನವು ದಿನಾಂಕ: ೧೮-೧೨-೨೦೦೩ ರ ತರಂಗ ವಾರಪತ್ರಿಕೆಯ ಲೇಖನದ ಗೋಹತ್ಯೆ ವಿಚಾರದ ವಿವರಣೆಯಾಗಿರುತ್ತದೆ. ಇದು ಯಾವುದೇ ಒಂದು ಧರ್ಮದ ನಿಂದನೆಯ ಉದ್ದೇಶವಲ್ಲ. ಯಾರನ್ನು ಖಂಡಿಸುವುದೂ ಇಲ್ಲ. ನೈಜತೆಯನ್ನು ನಾವು ಯಾವ ಮಾಪನದಲ್ಲಿ ಅಳೆಯಬೇಕು ಎಂಬುದಕ್ಕೆ ಕೆಲ ಉದಾಹರಣೆ ಕೊಡುತ್ತೇನೆ. ಮಾಂಸಾಹಾರಾಕಾಂಕ್ಷಿಗಳು ಗೋಮಾಂಸವನ್ನೇ ಅಥವಾ ಇನ್ಯಾವುದೇ ಪ್ರಾಣಿಯ ಮಾಂಸವನ್ನೇ ತಿನ್ನುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಅದಕ್ಕೆ ವೇದದ ಉದಾಹರಣೆ ಕೊಡುವುದಕ್ಕೆ ನನ್ನ ಅಭ್ಯಂತರವಿದೆ.
ಅಂದರೆ ಮಾಂಸಭಕ್ಷಕರಾದ ನೀವು ತಿನ್ನುವ ಆಹಾರಕ್ಕೆ ವೇದದ ಉದಾಹರಣೆ ಏಕೆ ಬೇಕು? ಆಲೋಚಿಸ…

ನಮ್ಮ ಋಷೀ ಪರಂಪರೆ - ೧

ಪ್ರೀತಿಯ ಭಾರತೀಯ ಬಂಧುಗಳೇ,
ಈ ಪ್ರಪಂಚದ ಕ್ಷೇಮಾಭ್ಯುದಯ ಚಿಂತನೆಯಲ್ಲಿಯೇ ನಿತ್ಯ ನಿರಂತರ ತಮ್ಮನ್ನು ತೊಡಗಿಸಿಕೊಂಡ ಒಂದು ವರ್ಗವೇ ಋಷೀ ಪರಂಪರೆ. ಅದನ್ನು ವಿಸ್ತೃತವಾಗಿ ಚಿಂತಿಸ ಹೊರಟರೆ ಅದ್ಭುತ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ಅವರ ತ್ಯಾಗದ ಅಗಾಧತೆ ಅಳತೆ ಮಾಡಲಾಗದ್ದು. ಅವರ ಲೋಕಕಲ್ಯಾಣ ಗುರಿ ನಿತ್ಯ ನೂತನ. ಅವುಗಳಲ್ಲಿ ಕೆಲವೊಂದು ಋಷಿಗಳ ಅಧ್ಯಯನ ಮಾಡುತ್ತಾ ಅವರ ಪರಿಚಯ ಲೇಖನ ರೂಪದಲ್ಲಿ ಸಮಕಾಲೀನ ಘಟ್ಟದ ಸಮಾಜಕ್ಕೆ ತಿಳಿಸಲು ಪ್ರಯತ್ನಿಸುತ್ತೇನೆ. ಆ ಮುಖದಲ್ಲಿ ಒಬ್ಬೊಬ್ಬರಾಗಿ ಪರಿಚಯಿಸುತ್ತಾ ಹೋದಲ್ಲಿ ಈ ಲೇಖನಕ್ಕೆ ಕೊನೆಯಿರಲಿಕ್ಕಿಲ್ಲ. ಆದರೆ ಹಾಗೆಂದು ಬಿಡಲೂ ಸಾಧ್ಯವಿಲ್ಲ. ಕಾರಣ ಕೆಲವೊಂದು ಋಷಿವರೇಣ್ಯರ ವಿಚಾರವಾಗಿ ಸಮಕಾಲೀನ ಸಾಹಿತ್ಯದಲ್ಲಿ ಅವರ ಬಗ್ಗೆ ಇರತಕ್ಕ ಕೀಳು ಅಭಿರುಚಿಯ ಚಿತ್ರಣ ಮತ್ತು ಅವರ ಬಗ್ಗೆ ಇರುವ ತಪ್ಪು ಕಲ್ಪನೆ, ತಪ್ಪು ಇತಿಹಾಸ. ಅವನ್ನೆಲ್ಲಾ ಸ್ಪಷ್ಟ ಪಡಿಸುತ್ತಾ ಈ ಲೇಖನ ಮೂಲಕ ಸಾರ್ಥಕ್ಯತೆ ಪಡೆಯಲು ಪ್ರಯತ್ನಿಸುತ್ತೇನೆ.

ಅವುಗಳಲ್ಲಿ ಮುಖ್ಯವಾಗಿ ಏಳು ಬಗೆಯ ಋಷಿ ವರೇಣ್ಯರು ತಮ್ಮ ತಮ್ಮದ್ದಾದ ಕರ್ತವ್ಯ ನಿರ್ವಹಣೆಯಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡು ಲೋಕಕಲ್ಯಾಣ ಚಿಂತನೆಯಲ್ಲಿಯೇ ಕಾರ್ಯ ಪ್ರವೃತ್ತರಾಗಿದ್ದಾರೆ ಈಗಲೂ. ಆದರೆ ದೃಷ್ಟಿ ಪ್ರಪಂಚಕ್ಕೆ ಅದು ಕಾಣುತ್ತಿಲ್ಲ. ಕಾರಣ ಅವರು ಕೀರ್ತಿಗಾಮಿಗಳಲ್ಲ. ಅವರಿಗೆ ಫಲಾಫಲಗಳ ಅಪೇಕ್ಷೆಯಿಲ್ಲ. ಗುರುತಿಸುವ ಸಮಾಜ ಅವರಿಗೆ ಬೇಕಿಲ್ಲ. ಬದುಕುವ ಸಮಾಜ ಅವರಿ…