Saturday, 14 January 2017

ಸಸ್ಯಾಹಾರ: ಪುರಾತನ ಆಯುರ್ವೇದ, ಧಾರ್ಮಿಕ ಹಾಗೂ ಆಧುನಿಕ ವಿಜ್ಞಾನದ ದೃಷ್ಟಿಕೋನದಲ್ಲಿ


“ಶಂಖ ಕೂಗುವುದಲ್ಲ, ಹಿಂದಿನ ಉಸಿರು ಕೂಗುತಿದೆ” ಎನ್ನುತ್ತಾರೆ ಯತಿವರೇಣ್ಯ ಅಣ್ಣಪ್ಪಯ್ಯರು. ಈ ಚರ್ಚೆಯಲ್ಲಿಾವುದೇ ವ್ಯಕ್ತಿ ಖಂಡನೆ ಇಲ್ಲ, ವಿಚಾರದ ಮಂಡನೆ ಹಾಗೂ ಖಂಡನೆ ಇದೆ. ದುರ್ವಿಚಾರ, ಧರ್ಮ ಬಾಹಿರ ವಿಚಾರ ಪ್ರಚಾರ, ಮಾನವ ಧರ್ಮ ವಿರುದ್ಧ ವಿಚಾರ, ದೇಹ ಧರ್ಮ ವಿರುದ್ಧ ಆಹಾರ, ಒಟ್ಟಾರೆ ವೇದ ವಿರುದ್ಧ ವಿಚಾರಗಳ ನಿಷ್ಠೂರ ಖಂಡನೆ ಅನಿವಾರ್ಯ. ಖಂಡಿತವಾದಿ ನಿಷ್ಠುರವಾದಿ, ಖಂಡಿತವಾದಿ ಲೋಕವಿರೋಧಿ ಎಂಬ ಗಾದೆಯೇ ಇದೆ. ಇದರಲ್ಲಿ ನನ್ನಂಶವೇನೂ ಇಲ್ಲ. ಋಷಿ ಮುನಿಗಳು ದ್ರಷ್ಟಿಸಿದ್ದು, ಗುರುಗಳು ಪಾಠ ಪ್ರವಚನಗಳಲ್ಲಿ ಏನನ್ನು ಒರೆದಿದ್ದರೂ ಅದನ್ನು ಎಳ್ಳಷ್ಟೂ ವಿಚಲಿತಗೊಳಿಸದೆ, ಪೂರಕ ಮಾಹಿತಿ, ಉದಾಹರಣೆ, ಪ್ರಶ್ನೋತ್ತರ ಸೇರಿಸಿ ವೈಚಾರಿಕ ಬದ್ಧತೆಯಲ್ಲಿ ಹಿಂದಿನ ಲೇಖನದಲ್ಲಿ ಖಂಡಿಸಲಾಗಿದೆಯೇ ಹೊರತು ಅಹಂಕಾರ ಅಲ್ಲಿಲ್ಲ. ವಿಚಾರಗಳ ದಾರ್ಷ್ಟ್ಯತೆಯಿಂದ ಸಾಮಾಜದಲ್ಲಿ ಅಜ್ಞಾನ ಪ್ರಸಾರ ಹೆಚ್ಚಾಗಲು ಅದನ್ನು ಹರಿತವಾದ ತೀವ್ರವಾದ ಶಬ್ದಗಳಿಂದಲೇ ಖಂಡಿಸಬೇಕೆಂದು ಬ್ರಹ್ಮರ್ಷಿಗಳೇ ಪಾಠ ಹೇಳಿದ್ದಾರೆ. ಮತ್ತೆ ಅತೀ ಪುರಾತನ ನಾಥ ಸಂಪ್ರದಾಯದ ಮುನಿ ಕುಮುದೇಂದು ಇವರು ಸ್ವತಃ ಅನುಭವಿಸಿ ಗಣಿತಾವಧಾನ ಗೈದಿರುವ ಪದ್ಯಗಳಿಂದಲೇ ನೂತನ ಆಯುರ್ವೇದ ಗ್ರಂಥ ಕರ್ತಾರರ ಕುಟಿಲತೆಯನ್ನು ಸುಬ್ರಹ್ಮಣ್ಯನ ವಾಹನವಾದ ಮಯೂರವು ನಾಗನನ್ನು ಮೆಟ್ಟಿದಂತೆ ಮೆಟ್ಟಲಾಗಿದೆಯಷ್ಟೆ.
ಸುಶ್ರುತನಿಂದ ಅವಸಾನವಾದ ಶಾರ್ಙ್ಘ್ಯಧರನು ತನ್ನ ಜ್ಯೋತಿರಾಯುರ್ವೇದ ಸಂಹಿತೆಯಲ್ಲಿ ಇನ್ನಿಲ್ಲದಂತೆ ವೈಧ್ಯಾಗಮವನ್ನು ಮಂಡಿಸಿ ೩೫೦೦ ವರ್ಷಗಳೇ ಕಳೆದಿವೆ. ಏನೆಂಬೆ ಜ್ಯೋತಿರಾಯುರ್ವೇದ ಸಂಹಿತೆಯ ಪರಿಯನ್ನು; ಇಪ್ಪುದು ತಾಳೆಗ್ರಂಥಗಳು ೧೩೨. ಪ್ರತಿ ಗ್ರಂಥದಲ್ಲಿ ೨.೫ ಅಡಿ ಉದ್ದವಿಪ್ಪ ಇಕ್ಕೆಲಗಳಲ್ಲಿ ಕೆತ್ತಿದ ೨೦೪ ತಾಳೆಯೋಲೆಗಳು. ಹಾಗಾಗಿ ಒಟ್ಟು ೨೬೯೨೮ ತಾಳೆ ಹಾಳೆಗಳು ಇರುವುದು ಅದರಲ್ಲಿ ನಕ್ಷತ್ರ ಸಂಖ್ಯೆಯಾ ಸರ್ಗಗಳು. ಪ್ರತಿಯೊಂದರಲ್ಲಿ ೪-೫ ಲಕ್ಷ ಶ್ಲೋಕಗಳು. ಈ ಅಹಿಂಸಾತ್ಮಕ ಪುರಾತನ ವೇದ ವೈಧ್ಯ ಗ್ರಂಥದ ಮುಂದೆ ಪೂಜಾ-ಕೀರ್ತಿ-ಲಾಭದ ಆಶೆಯಿಂ ಹಿಂಸೆಯನ್ನು ಬೆರೆಸಿ ತಂದ ನೂತನ ಖಳರ ಕಾವ್ಯಕ್ಕೆ ಧಿಕ್ಕಾರ ಎಂದು ಕುಮುದೇಂದು ಮುನಿಯ ಪದ್ಯ ಘಂಟಾಘೋಷವಾಗಿ ಹಾಡಲು ಸಂತೋಷವಾಗುತ್ತದೆ. ಶಾರ್ಙ್ಘ್ಯಧರನ ವೈಧ್ಯಶಾಲೆಯು ಸ್ವಾಮೀಜಿಯವರು ಗುಜರಾತಿನ ಜಂಬೂ ಪ್ರದೇಶದಲ್ಲಿ ನಿರ್ಮಿಸಿರುವ ಬಾಳೇಕುದ್ರು ಶಾಖಾ ಮಠಕ್ಕೆ ಬಹಳ ಸಮೀಪದಲ್ಲಿ ಭೂಗತವಾಗಿದೆ. ಶಾರ್ಙ್ಘ್ಯಧರನನ್ನು, ಪುರಾತನ ವೈಧ್ಯ ಪದ್ಧತಿಯನ್ನು ನಾಶ ಮಾಡಿದವರು ದೊಡ್ಡ ಗೂಂಡಾ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿದ್ದರು ಎನ್ನುತ್ತಾರೆ ಸ್ವಾಮೀಜಿ. ಪ್ರಸಕ್ತ ಆ ಗೂಂಡಾಗಳು ಪುನಃ ಆಯಾಯ ಪ್ರದೇಶದಲ್ಲಿಯೇ ಹುಟ್ಟಿ ಮಹಾವ್ಯಾಧಿಗಳಿಂದ ನರಳುತ್ತಿದ್ದು ಈಗ ಹಲವರು ಸ್ವಾಮೀಜಿಯವರ ಮಾರ್ಗದರ್ಶನ ಅರಿಸಿ ಬರುತ್ತಿದ್ದಾರೆ. ಅವರಿಗೆಲ್ಲ ಶಾರ್ಙ್ಘ್ಯಧರನ ಜ್ಯೋತಿರಾಯುರ್ವೇದದಿಂದಲೇ ಚಿಕಿತ್ಸೆ ಎಂದು ಕಂಡುಬರುತ್ತದೆ. ಸುಮ್ಮನೆ ವಾದ ಮಾಡುವುದಲ್ಲ, ಆ ಸಮಸ್ಯೆಗಳಿಗೆಲ್ಲ ತಲೆ ಕೊಡಲು ತಯಾರಿರುವವರಿಗೆ ಶಾರ್ಙ್ಘ್ಯಧರನ ಕುರುಹುಗಳನ್ನು ತೋರಿಸಿಕೊಡುತ್ತೇನೆ ಎಂದು ಸ್ವಾಮೀಜಿಯವರು ಸವಾಲು ಹಾಕಿದ್ದಾರೆ! 

ಶಾರ್ಙ್ಘ್ಯಧರನಾದರೋ ಸಮಾಜದಲ್ಲಿ ರೋಗ ಹುಟ್ಟುವುದನ್ನೇ ತಡೆಯುತ್ತಿದ್ದ. ಹಾಗಾಗಿ ದುಷ್ಟ ವೈದ್ಯರಿಗೆ ಲಾಭ ಕಡಿಮೆಯಾಯಿತು. ಸಾಮಾಜಿಕ ಆರೋಗ್ಯ ಕಾಯ್ದುಕೊಳ್ಳಲು ಮಾಡಬೇಕಾದ ಯಜ್ಞ-ಯಾಗಗಳನ್ನೆಲ್ಲ ತನ್ನೊಂದು ಸರ್ಗದಲ್ಲಿ ಬಹಳವಾಗಿ ವಿವರಿಸಿದ್ದಾನೆ. ಸಮ್ಮಾನ, ಕೀರ್ತಿ, ಲಾಭದ ಆಶೆಯಿಂ ಬರೆದ ಗ್ರಂಥವಲ್ಲವದು. ಸಾವಿರಾರು ವರ್ಷಗಳ ಅಧ್ಯಯನ, ಹಲವಾರು ದೇಶಗಳ ಪರ್ಯಟನೆ, ಪುರಾತನ ವೈಧ್ಯ ಪದ್ಧತಿ, ಜನಪದಕೆ ಲಾಭ ಪದ್ಧತಿ. ಅದು ಕಲಿತವರ ಪೂಜಿಪ, ಕಲಿಯದವರ ಕೊಲ್ವ ಖಳರ ಕಾವ್ಯವಲ್ಲ.  ಅದು ರಾಷ್ಟ್ರಾರೋಗ್ಯ, ಸಾಮಾಜಿಕ ಆರೋಗ್ಯ, ವೈಯಕ್ತಿಕ ಆರೋಗ್ಯ ಕಾಯ್ವ ಧೀಮಂತ, ಶ್ರೀಮಂತ ವೈಧ್ಯ ಪದ್ಧತಿ. ರೋಗವೇ ಬರದಿದ್ದರೆ ವೈಧ್ಯರಿಗೆ ಕೆಲಸವೆಲ್ಲಿ? ಈ ಹಿನ್ನೆಲೆಯಲ್ಲಿದೆ ಆಹಾರ ಪದ್ಧತಿ ಮತ್ತು ಪಾಕಶಾಸ್ತ್ರ. ಒಳ್ಳೇ ಸಸ್ಯಾಹಾರ ತಿಂದು ದಷ್ಟ ಪುಷ್ಟವಾಗಿ ಸದೃಢ ಆರೋಗ್ಯ ಉಳ್ಳವರಾಗಿದ್ದರೆ ಡಾಕ್ಟರುಗಳಿಗೆ ಕೆಲಸವಿರುವುದಿಲ್ಲ. ಹಾಗಾಗಿ ಆ ಕಾಲದಲ್ಲೇ ಚರಕ, ಸುಶ್ರುತಾದಿ ಗ್ರಂಥಗಳು ಮಾಂಸಾಹಾರವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡರು. ಈ ಯಾವುದೇ ನೂತನ ಗ್ರಂಥಗಳಲ್ಲಿ ಸರಿಯಾದ ಪಾಕಶಾಸ್ತ್ರವಾಗಲೀ, ರೋಗ ನಿದಾನ ಪದ್ಧತಿಯಾಗಲಿ ಇಲ್ಲವೇ ಇಲ್ಲ. ರೋಗ ಮೂಲ ಏನು? ಕಾರಾಣಾನ್ವೇಷಣಾ ಪದ್ಧತಿ ಹೇಗೆ? ತಿಳಿದೇ ಇಲ್ಲ. ಇವೆಲ್ಲ ತಂತ್ರಗಳೆಂದು ಶಾರ್ಙ್ಘ್ಯಧರನು ತನ್ನ ಅಧ್ಯಾಯಗಳಲ್ಲಿ ಹೆಸರಿಸಿದ್ದಾನೆ. ಅದೆಲ್ಲ ಸೂತ್ರಾತ್ಮಕವಾಗಿ ಈಗ ಉಳಿದಿರುವುದು ವೇದದಲ್ಲಿ ಮಾತ್ರ. ಇನ್ನು ಶಾರ್ಙ್ಘ್ಯಧರ ಸಂಹಿತೆ ನಮ್ಮಲ್ಲಿಲ್ಲ ಏನು ಮಾಡುವುದು? ಇದ್ದ ಗ್ರಂಥಗಳೇ ನಮಗೆ ಆಧಾರ ಎನ್ನುವುದು ಸೂಕ್ತವಲ್ಲ. ಅಜ್ಜ ಹಾಕಿದ ಆಲದ ಮರ ಎಂದು ಅದಕ್ಕೆ ನೇಣು ಹಾಕಿಕೊಳ್ಳುವುದಲ್ಲ! ಉಪಾಸನೆ, ಅನುಷ್ಠಾನಗಳಿಂದ ಏನನ್ನೂ ಪಡೆಯಲು ಸಾಧ್ಯ. ಆಯುರ್ವೇದವೆಂಬುದೇ ಅಥರ್ವವೇದದ ಒಂದು ಉಪವೇದವಿದೆ. ಆಧುನಿಕ ಗ್ರಂಥಗಳ ಭರಾಟೆಯಲ್ಲಿ ಅದಂತೂ ಸುಪ್ತವಾಗಿಬಿಟ್ಟಿದೆ. ಇದಕ್ಕೆಲ್ಲ ತಿರುಪತಿ ತಿಮ್ಮಪ್ಪ ಒಂದು ಒಳ್ಳೇ ಮಾರ್ಗಸೂಚೀ ಹೇಳುತ್ತಾರೆ-

ತಂತ್ರಾದಿಗಳು ಸುಪ್ತದಲಿ ವೇದ ನಾಲ್ಕರೊಳಡಕವಾಗಿದೆ ಸತ್ಯ ಅದ ಹೊರತು ಉದ್ಗ್ರಂಥಗಳೆಲ್ಲ ಮೋಸ ||
ವೇದ ಮುಖದಿಂ ಅರಿವು ಪಡೆಯಲು ಬೇಕು ವೇದವೆ ಪ್ರಾಮಾಣ್ಯ
ವೇದ ಪ್ರಾಮಾಣೀಕರಿಸದಾ ವಿಚಾರಗಳೆಲ್ಲ ಅಸತ್ಯ ತಂತ್ರದರಿವಿಲ್ಲ
ಮೋದವಿಲ್ಲ ಕೇಳ್ ತಂತ್ರಗಳನೆಲ್ಲ ತಿಮ್ಮನು ತನ್ನೊಳೈಕ್ಯಗೊಳಿಸಿದ ಶಂಖಾದ್ರಿಯಲಿ ಅನುಷ್ಟಿಸಲೂ ||
ವೇದದೊಳಗಣ ರಹಸ್ಯ ತೆರೆಯುವುದು ಆರ್ಹರಿಗೆ ಮಾತ್ರಾ
ವಿದ ಬಿಟ್ಟು ಹಳೆಗ್ರಂಥಗಳ ನಂಬಿ ಕೆಡದಿರೊ ಮನುಜ ನೀ ಶ್ರಮ
ವಿದನಾಗು ವೇದವನೋದು ಸತತ ಬಾಧಿಪ ಈ ಜಗದ ಜಂಜಾಟ ಬಿಡು ಸಿದ್ಧನಾಗುವೆಯೋ ಇದು ಸತ್ಯ ||

ನಿಷ್ಠೂರ ಸತ್ಯ ಮಂಡನೆ ಮಾಡುವುದಕ್ಕಾಗಿಯೇ ಮೀಮಾಂಸಕರನ್ನು ಹಿಂದಿನಿಂದಲೂ ವ್ಯವಸ್ಥಿತವಾಗಿ ಬದಿಗಿರಿಸಿ, ಕಡೆಗಣಿಸಿ, ಇಲ್ಲಸಲ್ಲದ ಅಪವಾದ ಹೊರಿಸಿ ವಿದ್ವಾಂಸರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಕನ್ನಡಿಗರ ಸುದೈವವೋ ಎಂಬಂತೆ ಉತ್ತರದಿಂದ ಬಂದ ಅವೈಧ್ಯನಾಥರ ಶಿಷ್ಯರಾದ ಪೂರ್ವೋತ್ತರ ಮೀಮಾಂಸಕರಾದ ಬ್ರಹ್ಮರ್ಷಿ ನಿತ್ಯಾನಂದ ಸ್ವಾಮೀಜಿಯವರಿಂದ ನಿಜವಾದ ವೇದ ಬದ್ಧ ವಿಚಾರಗಳು ಸಿರಿಗನ್ನಡದ ಮುಖೇನ ವಿಶ್ವಮಾನ್ಯ ಪ್ರಚಾರ ಪಡೆಯುತ್ತಿವೆ. ಹಾಗೇ ಋತ್ವಿಕ್ ವಾಣಿಗೆ ಅದರದ್ದಾದ ಬಳಗವಿದೆ. ವೇದವನ್ನು ಪೂರ್ವಾಗ್ರಹವಿಲ್ಲದೆ ಒಪ್ಪಿ ಬಳಸುವವರೆಲ್ಲ ಋತ್ವಿಜರೇ! 

ಮಾಂಸಾಹಾರ ಮನುಷ್ಯನ ಆಹಾರವೇ ಅಲ್ಲ! ಮನುಷ್ಯನ ಆಹಾರ ಏನು? ಅದನ್ನು ಹೇಗೆ ಉತ್ಪಾದಿಸಬೇಕು? ಹೇಗೆ ತಯಾರಿಸಬೇಕು? ಎಂದೆಲ್ಲ ಹಲವಾರು ಲೇಖನಗಳಲ್ಲಿ ಸ್ವಾಮೀಜಿಯವರು ಋತ್ವಿಕ್ ವಾಣಿಯಲ್ಲಿ ಪ್ರಕಟಿಸಿಯಾಗಿದೆ. ಅವರು ಸದಾ ಬಳಸುವ ಕೆಲ ವಾಕ್ಯಗಳೆಂದರೆ “ಮನುಷ್ಯನು ಬದುಕುವುದಕ್ಕಾಗಿ ತಿನ್ನಬೇಕೇ ಹೊರತು ತಿನ್ನುವುದಕ್ಕಾಗಿ ಬದುಕುವುದಲ್ಲ! “ನಾಯಿ ಹೇಲು ತಿನ್ನುತ್ತದೆ, ಆದರೆ ಮನುಷ್ಯ ಅನ್ನ ತಿನ್ನಬೇಕು”. ಕೇವಲ ಸುಶ್ರುತ ಚರಕಾದಿಗಳ ಆಯುರ್ವೇದವಲ್ಲ, ನಮ್ಮ ದುರಾಶಾ ಪೀಡಿತ ಪಂಡಿತರು ಹಿಂದಿನಿಂದಲೂ ವೇದ ವಿಚಾರಗಳನ್ನು ತಿದ್ದಿ ತೀಡುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಅದನ್ನು ವೈಧಿಕ ನ್ಯಾಯಶಾಸ್ತ್ರವು “ವೇದ ಶ್ವಾನ ಸಂಯೋಗ ವಾದ” ಎಂದು ವೇದವನ್ನು ಕಲಿತ ಪಂಡಿದರೇ ವೇದ ವಿರುದ್ಧ ಕೆಲಸ ಮಾಡುತ್ತಾರೆ ಎಂದು ನಿಷ್ಠೂರವಾಗಿ ಹೇಳಿದೆ. ಅದನ್ನೂ ಮಡಿವಂತಿಕೆಯ ಪಂಡಿತರು ತಿದ್ದಿ “ವೇದ ಜ್ಞಾನ ಸಂಯೋಗ ವಾದ” ಎಂದು ಮಾಡಿದರು. ಇನ್ನು ಇತ್ತೀಚೆಗೆ  ಬ್ರಿಟೀಷರ ಎಂಜಲು ಕಾಸಿನ ಆಸೆಗಾಗಿ ಹಲವಾರು ಹೊಸ ಗ್ರಂಥಗಳನ್ನು, ಇರುವ ಗ್ರಂಥಗಳನ್ನು ತಿದ್ದಿ ಬರೆಸುವ ಕೃತ್ಯ ಗೈದಿದ್ದಾರೆ; ನಮ್ಮ ವಿದ್ವಾಂಸರು. ಅಂದಾಜು ೫-೬ ದಿಗಹಿಂದೆ ಓರ್ವ ಸ್ವಾಮೀಜಿಯವರು ಈ ರೀತಿ ಮಾಡಿದ ಪಂಡಿತರನ್ನು ಆಶ್ರಮಕ್ಕೆ ಕರೆಸಿ ಮೃಷ್ಟಾನ್ನ ಭೋಜನ ಬಡಿಸಿ ತುಪ್ಪ ಅಭಿಘಾರ ಮಾಡುವ ಬದಲು ಹೇಲು ಅಭಿಘಾರ ಮಾಡಿ ತಿನ್ನಲು ಹೇಳಿದರಂತೆ. ತಿಂದವರಿಗೆ ಮಾತ್ರ ಊಟದ ದಕ್ಷಿಣೆ ಎಂದರಂತೆ. ಆಗ ಹೌಹಾರಿದ ಪಂಡಿತರನ್ನು ಹೀಗೆ ಖಂಡಿಸಿದರು – “ನೀವು ಮಾಡಿರುವ ಗ್ರಂಥ ತಿದ್ದುವ ಕೆಲಸವು ಹೇಲು ತಿಂದಂತೆಯೇ, ಹಾಗಾಗಿ ನಿಮ್ಮ ಊಟದ ಎಲೆಗೆ ಅದನ್ನೇ ಬಡಿಸಿದ್ದು”. ಇದು ನಿಷ್ಪಕ್ಷಪಾತಿ ಮೀಮಾಂಸಾ ಧರ್ಮ ಪರಿಷತ್ತಿನಿಂದ ನೀಡಲ್ಪಟ್ಟ ಶಿಕ್ಷೆ! ಅಂತಹಾ ದುರ್ವಿಚಾರಗಳಿಂದ ಸಮಾಜವನ್ನು ದಾರಿ ತಪ್ಪಿಸುವ ವ್ಯವಸ್ಥೆಗೆ ಕಟು ನಿಂದೆ ಮಾಡಲೇಬೇಕು. ಅದೇ ಶಾಸನ!

        ಮಾನವ ದೇಹಕ್ಕೆ ಮಾಂಸ ಆಹಾರವೇ ಅಲ್ಲ. ಮಾನವನಿಗೆ ಯಾವುದೇ ಪ್ರಾಣಿ, ಪಕ್ಷಿ, ಮೀನು, ಮೊಟ್ಟೆ, ಇತ್ಯಾದಿ ಮಾನವ ಆಹಾರವಲ್ಲ. ಅವೆಲ್ಲ ಸಹಜೀವಿಗಳು, ಅವುಗಳ ರಕ್ಷಣೆ ನಮ್ಮ ಕರ್ತವ್ಯವೇ ಹೊರತು ಭಕ್ಷಣೆ ಮಾಡುವುದಲ್ಲ! ಮಾಂಸವು ದೇಹಕ್ಕೆ ಮಾತ್ರ ವಿಷವಲ್ಲದೆ ಅದು ಮನೋ, ಬುದ್ಧಿ, ಚಿತ್ತ, ಅಹಂಕಾರ, ಜ್ಞಾನ, ಆತ್ಮ ಎಂಬ ಪಂಚೀಕರಣಕ್ಕೇ ವಿಷ! ಅದು ವೈಜ್ಞಾನಿಕ ಸತ್ಯ. ಮಾಂಸಾಹಾರ ಮಾನವ ದೇಹಕ್ಕಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕೆ ಕೆಳಕಂಡ ವೈಜ್ಞಾನಿಕ ಕೋಷ್ಠಕ ನೋಡಿರಿ:

ಮಾಂಸಾಹಾರಿ ಪ್ರಾಣಿ
ಸಸ್ಯಹಾರಿ ಪ್ರಾಣಿ
ಮನುಷ್ಯ
ನೆಕ್ಕುತ್ತವೆ ಮತ್ತು ಕುಡಿಯುತ್ತವೆ
ಸೀಪುತ್ತವೆ ಮತ್ತು ಕುಡಿಯುತ್ತವೆ
ಸೀಪುತ್ತವೆ ಮತ್ತು ಕುಡಿಯುತ್ತವೆ
ಮಾಂಸ ಕೀಳಲು ಬೇಕಾದ ಹರಿತವಾದ ಮೊನಚಾದ ಮುಂದಿನ ಹಲ್ಲು
ಹರಿತವಾದ ಹಲ್ಲುಗಳಿಲ್ಲ
ಹರಿತವಾದ ಹಲ್ಲುಗಳಿಲ್ಲ
ಮಾಂಸ ಭೇಟೆಗಾಗಿ ಪಂಜಗಳಿವೆ
ಪಂಜಗಳಿಲ್ಲ
ಪಂಜಗಳಿಲ್ಲ
ಕರುಳಿನ ಉದ್ದವು ದೇಹದ ಉದ್ದದ ಕೇವಲ ೩ ಪಟ್ಟಿರುವುದರಿಂದ ಬೇಗ ಕೊಳೆಯುವ ಮಾಂಸವು ಬೇಗನೆ ದೇಹದಿಂದ ಹೊರ ಹೋಗಲು ಸಾಧ್ಯ
ಕರುಳಿನ ಉದ್ದವು ದೇಹದ ಉದ್ದದ ೧೦-೧೨ಪಟ್ಟು ಇರುತ್ತದೆ. ಹಣ್ಣುಗಳು ಮಾಂಸದಷ್ಟು ಬೇಗ ಕೊಳೆಯುವುದಿಲ್ಲ. ಹಾಗಾಗಿ ಉದ್ದವಾದ ಕರುಳಿನಲ್ಲಿ ನಿಧಾನವಾಗಿ ಸಾಗುವ ವ್ಯವಸ್ಥೆ ರೂಪಿಸಲಾಗಿದೆ.
ಕರುಳಿನ ಉದ್ದವು ದೇಹದ ಉದ್ದದ ೧೦-೧೨ಪಟ್ಟು ಇರುತ್ತದೆ. ಹಣ್ಣುಗಳು ಮಾಂಸದಷ್ಟು ಬೇಗ ಕೊಳೆಯುವುದಿಲ್ಲ. ಹಾಗಾಗಿ ಉದ್ದವಾದ ಕರುಳಿನಲ್ಲಿ ನಿಧಾನವಾಗಿ ಸಾಗುವ ವ್ಯವಸ್ಥೆ ರೂಪಿಸಲಾಗಿದೆ.
ಬಾಯಿಯಲ್ಲಿ ಚಿಕ್ಕ ಎಂಜಲು ಗ್ರಂಥಿ (ಹಣ್ಣು, ಧಾನ್ಯ, ಸಸ್ಯಗಳನ್ನು ಮೊದಲೇ ಜೀರ್ಣಿಸಲು ಇದರ ಅವಶ್ಯಕತೆಯಿಲ್ಲ)
ಹಣ್ಣು-ಧಾನ್ಯಗಳನ್ನು ಮೊದಲೇ ಜೀರ್ಣಿಸಲು ಬೇಕಾಗಿ ಚೆನ್ನಾಗಿ ಬೆಳೆದ ಎಂಜಲು ಗ್ರಂಥಿಗಳಿವೆ.
ಹಣ್ಣು-ಧಾನ್ಯಗಳನ್ನು ಮೊದಲೇ ಜೀರ್ಣಿಸಲು ಬೇಕಾಗಿ ಚೆನ್ನಾಗಿ ಬೆಳೆದ ಎಂಜಲು ಗ್ರಂಥಿಗಳಿವೆ.
ಆಮ್ಲೀಯ ಎಂಜಲು. ಧಾನ್ಯಗಳನ್ನು ಪೂರ್ವೀಜೀರ್ಣ ಮಾಡಲು ಬೇಕಾದ ತ್ಯಾಲಿನ್ ಕಿಣ್ವವಿಲ್ಲ.
ಕ್ಷಾರೀಯ ಎಂಜಲು. ಧಾನ್ಯಗಳನ್ನು ಪೂರ್ವೀಜೀರ್ಣ ಮಾಡಲು ಬೇಕಾದ ತ್ಯಾಲಿನ್ ಕಿಣ್ವವಿದೆ.
ಕ್ಷಾರೀಯ ಎಂಜಲು. ಧಾನ್ಯಗಳನ್ನು ಪೂರ್ವೀಜೀರ್ಣ ಮಾಡಲು ಬೇಕಾದ ತ್ಯಾಲಿನ್ ಕಿಣ್ವವಿದೆ.
ಆಹಾರ ನುರಿಯಲು ಸಮತಟ್ಟಾದ ಹಿಂದವಡೆ ಇಲ್ಲ.
ಆಹಾರ ನುರಿಯಲು ಸಮತಟ್ಟಾದ ಹಿಂದವಡೆ ಇದೆ.
ಆಹಾರ ನುರಿಯಲು ಸಮತಟ್ಟಾದ ಹಿಂದವಡೆ ಇದೆ.
ರಾತ್ರಿ ಕತ್ತಲೆಯಲ್ಲಿ ನೋಡಬಲ್ಲವು
ಬಹುತೇಕ ರಾತ್ರಿ ಕತ್ತಲೆಯಲ್ಲಿ ನೋಡಲಾರವು
ರಾತ್ರಿ ಕತ್ತಲೆಯಲ್ಲಿ ನೋಡಲಾರವು
ಶಸ್ತ್ರಗಳಿಲ್ಲದೆ ತಮ್ಮ ಭೇಟೆ ಮಾಡಬಲ್ಲವು
ತಿನ್ನುವುದಕ್ಕಾಗಿ ಕೊಲ್ಲುವುದಿಲ್ಲ
ಸಹಜವಾಗಿ ಶಸ್ತ್ರಗಳಿಲ್ಲದೆ ಪ್ರಾಣಿಗಳನ್ನು ಕೊಲ್ಲಲಶಕ್ಯ
ಹಸಿ ಮಾಂಸವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲವು
ಮಾಂಸವನ್ನು ತಿನ್ನುವುದೇ ಇಲ್ಲ.
ಹಸಿ ಮಾಂಸವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲಾಗುವುದಿಲ್ಲ
ಸಹಜವಾಗಿ ಕ್ರೂರ ಸ್ವಭಾವ ಉಳ್ಳವು
ಸಹಜವಾಗಿ ಕ್ರೂರ ಸ್ವಭಾವವಿರುವುದಿಲ್ಲ
ಮಾಂಸಾಹಾರದಿಂದ ಕ್ರೂರ ಸ್ವಭಾವವು ಉಂಟಾಗುತ್ತದೆ
ಆಹಾರಕ್ಕಾಗಿ ಹುಲ್ಲು ಇತ್ಯಾದಿ ಸಸ್ಯಗಳನ್ನು ತಿನ್ನುವುದಿಲ್ಲ
ಆಹಾರಕ್ಕಾಗಿ ಮಾಂಸ ತಿನ್ನುವುದಿಲ್ಲ
ಮಾಂಸವನ್ನು ತಿನ್ನಬಾರದು
ಚರ್ಮರಂಧ್ರಗಳಿಲ್ಲ. ನಾಲಗೆಯಿಂದಲೇ ಬೆವರು ಸುರಿಸಿ ದೇಹವನ್ನು ತಣ್ಣಗಿಡುತ್ತವೆ.
ಕೋಟ್ಯಾಂತರ ಚರ್ಮರಂಧ್ರಗಳಿಂದ ಬೆವರು ಹೊರ ಹಾಕುತ್ತವೆ.
ಕೋಟ್ಯಾಂತರ ಚರ್ಮರಂಧ್ರಗಳಿಂದ ಬೆವರು ಹೊರ ಹಾಕುತ್ತವೆ.

ಮನುಷ್ಯ ಮಾನವನಾಗಿ ಬದುಕಬೇಕೆಂದು ವೇದದಿಂದಲೇ ಹೆಕ್ಕಿ ಮನುವು ಮಾನವ ಧರ್ಮಶಾಸ್ತ್ರವನ್ನು ನಿರೂಪಿಸಿದ. ಅದರಲ್ಲಿ ಆಹಾರ ಪದ್ಧತಿಯ ಬಗ್ಗೆ ಹೀಗೆ ಹೇಳುತ್ತಾನೆ:

ನಾಕೃತ್ವಾ ಪ್ರಾಣಿನಾಂ ಹಿಂಸಾಂ ಮಾಂಸಂ ಉತ್ಪದ್ಯತೇ ಕ್ವಚಿತ್
ನಚ ಪ್ರಾಣಿ ವಧಃ ಸ್ವರ್ಗ್ಯಸ್ತಮಾನ್ ಮಾಂಸಂ ವಿವರ್ಜಯೇತ್ || ೫.೪೮ ||

ಪ್ರಾಣಿಮಾಂಸವು ಅದನ್ನು ಕೊಲ್ಲುವುದರಿಂದ ಮಾತ್ರ ಸಿಗುತ್ತದೆ. ಅದು ಪಾಪ, ಪ್ರಾಣಿವಧೆ ಗೈಯ್ಯುವವನೆಂದೂ ಸ್ವಾರ್ಜಿತ ಗತಿಯನ್ನು ಹೊಂದಲು ಸಾಧ್ಯವಿಲ್ಲ.

ಅನುಮಂತಾ ವಿಶಸಿತಾ ನಿಹಂತಾ ಕ್ರಯವಿಕ್ರಯೀ
ಸಂಸ್ಕರ್ತಾ ಚೋಪಹರ್ತಾ ಚ ಖಾದಕಶ್ಚೇತಿ ಘಾತಕಃ || ೫.೫೧ ||

ಕೊಲ್ಲುವ ಆಜ್ಞೆ ನೀಡುವವ, ಮಾಂಸ ಕತ್ತರಿಸುವವ, ಪಶುಗಳನ್ನು ಕೊಲ್ಲುವವ, ಪಶುಹತ್ಯೆಗೆ ಮೌಲ್ಯ ನೀಡುವವನು ಹಾಗೂ ಮಾರಾಟ ಮಾಡುವವನು, ಪಾಕ ಮಾಡುವವನು ಮತ್ತು ತಿನ್ನುವವನು ಇವರೆಲ್ಲರೂ ಮುಂದೆ ನರಕ = ಅಂದರೆ ದಾರಿ ಕಾಣದೆ ಅಂಧಕಾರದಲ್ಲಿ ತಮಸ್ಸಿನಲ್ಲೇ ಹಿಂಸೆಯನ್ನು ಅನುಭವಿಸುತ್ತಾರೆ ಎಂದಿದೆ ಮಾನವ ಧರ್ಮಶಾಸ್ತ್ರ. 

ವಿಘಸಾರೀ ಭವೇನ್ನಿತ್ಯಂ ನಿತ್ಯಂ ವಾಮೃತ ಭೋಜನಃ
ವಿಘಸೋ ಭುಕ್ತಶೇಷಂ ತು ಯಜ್ಞಶೇಷಂ ತಥಾಮೃತಮ್ || ೩.೨೮೫ ||

ಗೃಹಸ್ಥರಿಗೆ ಎರಡೇ ಪ್ರಕಾರದ ಭೋಜನ ವಿಧಾನ ಹೇಳಲಾಗಿದೆ. ಗೃಹಸ್ಥನು ಒಂದೋ “ವಿಘಸ” ಭೋಜನ ಮಾಡುವವನಾಗಬೇಕು ಅಥವಾ “ಅಮೃತ” ಭೋಜನ ಭುಂಜಿಸುವವನಾಗಬೇಕು. ಅತಿಥಿ, ಮಿತ್ರಾದಿ ವ್ಯಕ್ತಿಗಳು ತಿಂದ ನಂತರ ಉಳಿದ ಅಡಿಗೆಯನ್ನು ಬಳಸಬೇಕು. ಅದನ್ನು ವಿಘಸ ಎಂದರು. ಹಾಗೇ ಯಜ್ಞದಲ್ಲಿ ಆಹುತಿ ನೀಡಿದ ನಂತರ ಉಳಿದಿರುವ ಪ್ರಸಾದವೇ ಅಮೃತಭೋಜನ.

        ವೇದಗಳು ಎಲ್ಲ ಪಶುಗಳನ್ನು ರಕ್ಷಿಸಲು ಹೇಳಿದೆ. ಇನ್ನು ತಿನ್ನುವುದರ ಬಗ್ಗೆ ವೇದವು ಯವೆ, ಅಕ್ಕಿ, ಹಣ್ಣು, ತರಕಾರಿ, ಗೆಡ್ಡೆ-ಗೆಣಸು, ಎಲೆ-ಸೊಪ್ಪು, ಹಾಲು, ಬೆಣ್ಣೆ, ತುಪ್ಪ, ಇತ್ಯಾದಿ ಹೇಳಿದೆಯೇ ಹೊರತು ಎಲ್ಲಿಯೂ ಮಾನವನಿಗೆ ಮಾಂಸಾಹಾರವನ್ನು ಹೇಳಿಲ್ಲ. ಆಹಾರವು ಸೋಮಕ್ಕೆ ಪೂರಕವಾಗಿರಬೇಕು ಎನ್ನುತ್ತಾ ಪಾಕಶಾಸ್ತ್ರವನ್ನು ಮಂಡಿಸಿದ್ದೇ ಪವಮಾನವೆಂಬ ಸೋಮವೇದ. ಪ್ರತಿ ಪ್ರಾಣಿಯೂ ಜೀವನಾನಂದ + ಮೃತ್ಯು ಭಯ ಹೊಂದಿರುತ್ತದೆ. ಅದು ನಿಮ್ಮಂತೆಯೇ ನೋವು-ನಲಿವುಗಳನ್ನು ಅನುಭವಿಸುತ್ತದೆ. ಕೃಷಿಕ, ಸರಿಸೃಪ, ಕೀಟ, ಪ್ರಾಣಿ, ಪಕ್ಷಿ ಎಂಬ ಎಲ್ಲ ಜೀವಿಗಳಿಗೂ ಭಗವಂತನೊಬ್ಬನೇ. ಹೀಗಿರವಾಗ ಪ್ರಾಣಿ-ಪಕ್ಷಿಗಳು ತಾವು ಕೊಲ್ಲಲ್ಪಡಲಿ ಎಂದು ಆಶಿಸುತ್ತವೆಯೇ? ಇಲ್ಲ, ಇಲ್ಲವೇ ಇಲ್ಲ! ನಾವು ಬದುಕಿದಂತೆಯೇ ತಮ್ಮ ಪೂರ್ಣಾಯು ಜೀವಿಸಲು ಇಚ್ಚಿಸುವುದಿಲ್ಲವೇ? ಕಂಡಿತಾ! ಪ್ರತಿ ಜೀವಿಗೂ ಅದರ ಜನುಮದುದ್ದೇಶ ಪ್ರಾಕೃತಿಕ ಕರ್ಮವಾಗಿದ್ದರೂ, ಜೀವನದ ಉದ್ದೇಶಕ್ಕೆ ಅಂದರೆ ಅಸ್ಥಿತ್ವಕ್ಕೆ ಒಂದು ಕಾರಣವಿರುತ್ತದೆ. ಅದು ಕಂಡಿತವಾಗಿಯೂ ತಾನು ಇನ್ನೊಂದರಿಂದ ಕೊಲ್ಲಲ್ಪಡದೆ, ತಿನ್ನಲ್ಪಡದೆ ಜೀವಿಸಬೇಕು ಎಂದಿರುತ್ತದೆ. ಹಾಗಾಗಿ ಅವಷ್ಟಕ್ಕೆ ಅವನ್ನು ಬಿಟ್ಟರೆ ಅದೇ ಅವುಗಳ ಉದ್ದೇಶ ನೆರವೇರಿಸಿಕೊಳ್ಳಲು ಸಹಕಾರಿ. 

     ುನಿಕ ಲೇಖಕರು ಮಂಡಿಸಿದಂತೆ ಆದಿಯಲ್ಲಿ ನಮ್ಮ ಋಷಿ-ಮುನಿಗಳು ಮಾಂಸಾಹಾರಿಗಳಾಗಿದ್ದರೇ ಎಂದು ವಿಶ್ಲೇಷಿಸೋಣ. ಕಲ್ಪಾಂತರ ಜ್ಞಾನ ಲಭ್ಯವಿಲ್ಲ. ಹಾಗಾಗಿ ಈ ಕಲ್ಪದ ಆದಿಯಿಂದ ಏನೇನಾಯಿತು ಎಂದು ಪುರಾಣಗಳು ನಿರ್ಧಿಷ್ಟವಾಗಿ ವಿವರಿಸುತ್ತವೆ. ಅದನ್ನೆಲ್ಲ ಅಗ್ನ್ಯಾವೈಷ್ಣವೀ ಯಾಗದಲ್ಲಿ ಅಗ್ನಿಯಲ್ಲಿ ವಿಶ್ಲೇಷಿಸಿ ಸ್ವಾಮೀಜಿಯವರು ತಿರುಕ ಸಂಹಿತೆಯಲ್ಲಿ ಲೇಖಿಸಿದ್ದಾರೆ. ಒಂದೆರಡು ದೃಷ್ಟಾಂತಗಳನ್ನು ನೋಡಿ:

ಸಕಲ ಜೀವಿಗಳಿಗಾಶ್ರಯವನಿತ್ತು ತುತ್ತನು ನೀಡಿ ಸಲಹುವ
ಸಕಲ ಕರ್ಮವ ಭುಂಜಿಸುವ ಉಧ್ಯಾನವಿದು ಕರ್ಮಕೆ ಋಚಿ ಕೊಡುವ
ಸಕಲೇಶನಾಸಖನ ಆವಾಸಸ್ಥಾನವದು ಚರಾಚರಗಳೆಂಬ ರೂಪಕ್ಕೆ ಅಸ್ಥಿತ್ವವನೀವ ತತ್ವವೇ 
ಭೂಮಿಯೆಂದೂ |
ಸಕಲ ಜೀವಿಗಳೊಂದಾಗಿ ಬಾಳಿರೀ ಎಂದು ಆಹಾರ ಸಂತುಲದ
ವಿಕಲತೆಗೆ ಅವಕಾಶವಿಡದೆ ರಚಿಸುತ ಸಮತೋಲನವ ಕಾಯ್ದು
ಸಕಲಾದಿ, ಹಾದಿ, ಕಾದಿಯನಿತ್ತು ಅನ್ನದಿಂ ಜ್ಞಾನವನು ತುಂಬಿ ಪೋಷಿಸುವ ಮೂಲಚೈತನ್ಯವನು 
ಪ್ರೇಷಿಸುವುದೂ || ೨.೪.೧ ||

ಈ ಭುಮಿಯೊಳಗೆ ಹುಟ್ಟಿದ ಜೀವಿಗಳಿಗೆಲ್ಲಾ ಕರ್ಮಬಂಧನವಿಹುದು
ಈ ರಹಸ್ಯವ ಬೋಧಿಸುತಿಹವು ಸಕಲ ವೇದಶಾಸ್ತ್ರಾದಿಗಳು ಆದರೇನ್
ಈ ರಹಸ್ಯವರಿತ ಮಾನವನೆಂದೂ ದುಃಖಿಯಾಗಲು ಬಿಡದೆ ಅವನ ಪ್ರಾಪ್ತ ಕರ್ಮಕೆ ರಸವ ಯೋಜಿಸುವಾ |
ಈ ಪಾಕಶಾಸ್ತ್ರವನು ಅರಿತವನಿನ್ನಿಲ್ಲ ಮರೆತು ಬಾಳುವೆ ಇಲ್ಲಿ ಋಣದಿಂ
ಈ ಜೀವನವ ಆನಂದಗೊಳಿಸುವ ಆತ್ಮನಾ ಹೋರಾಟದಲಿ ಕರ್ಮಕೆ ಋಚಿ ನೀಡಿ
ಈ ಭುವಿಯ ಸಕಲ ಜೀವಿಗಳ ಜನನ + ಮರಣಾದಿ ಘೋಷಿಸುತ ಪ್ರಾಕೃತತೆಯನು ಬೆಳೆಸುತಿದೆ ಸತತಾ || ೨.೪.೨ ||

ಲೋಕದಲಿ ಸ್ಥಾವರವ ಸೃಜಿಸಿದನು ಬೊಮ್ಮನೈ ಈ
ಲೋಕದಾ ಜೈವಿಕವ ನಿರುಕಿಸಲು ಜೈವಿಕವು ತನ್ನಯ
ಲೋಕ ವ್ಯವಹಾರವನು ನಡೆಸಲೋಸುಗವಿತ್ತನು ಕರ್ಮ, ಋಣಗಳೆಂಬ ಮೂಲಧನವಾ |
ಲೋಕನಾಯಕ ಬಂದು ಅನ್ನವನು ಈಯುವೆನು ತಾನೆಂದು
ಲೋಕಪೂಜಿತನಾದ ಆತ ನೀಗಲು ವಾಸುದೇವನು ಅದನರಿತ
ಲೋಕಾಲೋಕ ಜ್ಞಾತವೈ ಗುರು ಬಂದು ಬೋಧಿಸಿದ ನಂಬದಿರಿ, ನಿಮ್ಮ ಋಣ-ಕರ್ಮಕಾಧರಿಸಿ ಅನ್ನವದು 
ನಿಮ್ಮ ಪ್ರಾಪ್ತಿ || ೨.೭.೨ ||

ಅಹಿಂಸಾವೃತವೇ ನಮ್ಮಯ ವೃತವು ಕೇಳೈ ಅರಸ ಕುಲವೃತ್ತಿ ಹೊರತಾಗಿ
ಅಹಿಂಸೆಯೇ ನಮ್ಮ ಜಪ ಗುರುವಿನಿಂದ ಕಲಿತೆವೈ ವೇದ ವೇದಾಂಗಗಳ
ಅಹಿಂಸಾತ್ಮಕವಾದ ವೇದ ವಿಧ್ಯೆಗಳ ಅರಸ ಕೇಳೈ ನಾವು ನಾಗರನು ಹಿಂಸಿಸಲಿಲ್ಲ ಸಪ್ತಪಾತಾಳಗಳು ನಮ್ಮ ಅಧೀನ || ೨.೧೫.೯ || 
 ಎನ್ನುತ್ತಾರೆ ಕಲ್ಪಾಂತರದಲ್ಲಿದ್ದ ಖಂಡ-ಪರಶು ಎಂಬ ಬೇಡರು.

ಈ ವಿಪ್ರ ಸಂದೋಹ ಬಂದುದ ಕಂಡು ಶಬರರು ಸಂತಸದಿಂದ ಹಿಗ್ಗುತ
ಈ ಕಪಟಿಗಳ ಮನದಿಂಗಿತವನರಿಯದೇ ನಾನಾ ವಿಧ ಫಲಪುಷ್ಪವನು
ಈಯುತಲಿ ಧನ್ಯರಾದೆವು ಭೂಸುರರೆ ನಿಮ್ಮಯ ಆಗಮನದಿಂ ನಾವು
ಪುನೀತರಾದೆವು ತಮ್ಮ ಬರವಿಗೆ ಕಾರಣವದೇನೆಂದರೂ || ೨.೧೮.೨೨ || 
 ಎಂದು ಕಾಡಿಗೆ ಬಂದ ವಿಪ್ರರಿಗೆ ಸಸ್ಯಾಹಾರಿ ಆತಿಥ್ಯವೇ ಇತ್ತು. ಇದು ಯಾಗದಲ್ಲಿ ತೆಗೆದ ಹಿಂದಿನ ಯಾವುದೋ ಕಲ್ಪದ ವಿಚಾರ!

ಜಲಜನಾಭನು ತಾನು ಹೊಟ್ಟೆ ಹೊರೆಯುವನು
ಜಲಜಾದಿ ಸಹಿತಾಗಿ ಸಕಲ ಜೀವಿಗಳಿಗಿಂತು
ಜಲ, ಅನ್ನ, ಔಷಧಿಯನೀಯುವನು ನೀ ನಿಸ್ವಾರ್ಥದಲಿರೆ ಬಿಡು ಆಸೆಯನ್ನೂ || ೩.೨ ||

ಪ್ರಸಕ್ತ ಕಲ್ಪವು ಶ್ವೇತವರಾಹ ಏಕೆ ಆಯಿತೆಂದು ಹಿಂದೆಯೇ ವಿವಿಸಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೂರ್ಮ ಪುರಾಣ ನೋಡಿರಿ. ಅದರ ಪ್ರಕಾರ ಹಿಂದಿನ ಕಲ್ಪವು ಪದ್ಮಕಲ್ಪ. ಅದು ಜಲಾವೃತಗೊಂಡು ಅಂತ್ಯಗೊಂಡಿತು. ಆಗ ೧೦೦೦ ಮಹಾಯುಗಗಳು ಇದ್ದದ್ದು ನಾರ = ನೀರು, ಅಯನ = ವಿಶ್ರಾಂತಿ, ಅಂದರೆ ನೀರು ಎಂಬ ನಾರಾಯಣದಲ್ಲಿ ವಟಪತ್ರಶಾಯಿಯಾಗಿದ್ದ ಬಾಲ ರೂಪೀ ಅನಂತ. ಮತ್ಸ್ಯ ಪುರಾಣದ ಕಲ್ಪಾದಿ ಸೃಷ್ಟಿಯ ವಿವರವನ್ನು ಹೀಗೆ ಹೇಳಿದ್ದಾರೆ:-


ಹಿಂದೆ ಕಲ್ಪಾಂತ ಕಾಲದಲಿ ಕಶ್ಯಪನು ತನ್ನಯ ಬಂಧುಗಳ ಕೂಡೆ ನಾವೆಯಲಿ
ಒಂದೊಂದು ಜೀವಯುಗ್ಮವನಿಟ್ಟು ಪ್ರಳಯದಿಂ ರಕ್ಷಿಸಿದ ಜೀವಿಗಳ (ಭಕ್ಷಿಸಲಿಲ್ಲ!)
ಅಂದೆ ಆತನ ನಾವೆಯನು ಮಹಾಮತ್ಸ್ಯವೊಂದು ಮೇರುವಿನ ತಪ್ಪಲಿಗೆ ತಂದು ಬಿಡಲು ದಕ್ಷಿಣದಿ |
ಹಿಂದಿನಾ ಕಲ್ಪದರಿವು ಅರಿತಿಹ ಕಶ್ಯಪನು ಜೀವಿಗಳನೊರಿಸಿ ತಪ
ದಿಂದ ಪಡೆದನೈ ಮಕ್ಕಳನು ಸಕಲ ಜೀವ ಜಗತ್ತು ಪುನಃ ಸೃಷ್ಟಿಗಾರಂಭ
ಅಂದೇ ಆಯಿತೈ ಸಕಲ ಜೀವಿಗಳು ಕಾಶ್ಯಪರು ತಿಳಿಯಿರೈ ಜಾತಿ ಕುಲ ಬೇರಿಲ್ಲವೆಂಬೇ || ೩.೨೧ ||

        ಕಶ್ಯಪನು ತನ್ನ ಬಂಧುಗಳು, ಸಪ್ತರ್ಷಿಗಳೊಂದಿಗೆ, ಎಲ್ಲ ಜೀವ ಸಂಕುಲಗಳನ್ನು ರಕ್ಷಿಸಿಕೊಂಡು ಮಹಾಮತ್ಸ್ಯದ ಆಸರೆಯಿಂದ ಜಲಪ್ರಳಯದಿಂದ ಪಾರಾಗಿ ಬಂದಾಗ ತಮೋ ಜನಿತ ಮಾಯಾ ಮತ್ಸ್ಯಕ್ಕೂ ವಿಷ್ಣು ಸ್ವರೂಪೀ ಮಹಾಮತ್ಸ್ಯಕ್ಕೂ ಎಷ್ಟೋ ಲಕ್ಷವರ್ಷ ಯುದ್ಧವಾಗುತ್ತದೆ. ಯುದ್ಧಕ್ಕೆ ಮೊದಲು ಮಹಾಮತ್ಯ್ಸವು ನೀಡಿದ್ದ ವೇದವನು ಹಿಡಿದುಕೊಂಡು ಮಂಡೂಕದಂದದಿ ತೇಲುತ್ತಿದ್ದ ಸತ್ಯವ್ರತನು ಪೂರ್ಣಜ್ಞಾನ ಬಂದೊಡನೆ ತನ್ನ ಹಿಂದಿನ ಜ್ಞಾನ ಮರೆತ. ಹಾಗೆ ವೇದವನ್ನು ಮತ್ಸ್ಯಕ್ಕೆ ತಿಳಿಸದೆ ಕೊಂಡೊಯ್ದಕ್ಕೆ ಕಲ್ಪಾಂತರ ಜ್ಞಾನ ಮರೆಯಾಗುತ್ತದೆ. ಆಗ ಮಂಡೂಕನು ಬೇಗ ಬಂದು ಗಂಧಮಾದನ ಗಿರಿಯನ್ನು ಸೇರಿ ಸತತ ವೇದಾಧ್ಯಯನದಿಂದ ತನ್ನ ಜವಾಬ್ದಾರಿಯನ್ನು ಅರಿತು ಯಜ್ಞದಿಂದಲೇ ಸೃಷ್ಟಿ, ಸ್ಥಿತಿ, ಲಯ ಎಂದು ಅಧ್ಯಯನ ಗೈದು ಅದಕ್ಕೆಲ್ಲ ನಿಖರ ಯಜ್ಞ-ಯಾಗ ಸೂತ್ರ ರಚಿಸಿದನು. ಆಗ ಬ್ರಹ್ಮನ ಬಿನ್ನಹಕ್ಕೆ ನಾರಾಯಣನು “ವರಾಹ” ಅವತಾರದ ಮುಖೇನ ಜಲಾವೃತ ಭೂಪ್ರದೇಶವನ್ನೆಲ್ಲ ಮೇಲಕ್ಕೆತ್ತಿದನು. ಅದೂ ಒಂದು ಸಿವಿಲ್ ಇಂಜಿನಿಯರಿಂಗ್ ತಂತ್ರಜ್ಞಾನವಷ್ಟೆ. ಅದರ ವಿವರ ಗಣೇಶಾಥರ್ವಶೀರ್ಷದಲ್ಲಿದೆ ಎಂದು ವಿವರವಾಗಿ ಋತ್ವಿಕ್ ವಾಣಿಯಲ್ಲಿ ಹಿಂದೆಯೇ ಲೇಖಿಸಲಾಗಿದೆ.

        “ಪ್ರಜಾಪತಿರ್ಯಜ್ಞಮಸೃಜತ” ಎಂದು ವಿಧ ವಿಧವಾಗಿ ಸೃಷ್ಠಿಸೂತ್ರಗಳನ್ನು ಯಜುರ್ವೇದವು ಅನಾವರಣಗೊಳಿಸುತ್ತಾ ಹೋಗುತ್ತದೆ. ಹೀಗಿರುವಾಗ ಬ್ರಹ್ಮನ ಮನಶ್ಶಕ್ತಿಯಿಂದ ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ ಎಂಬ ಶಿಶುಗಳು ಸ್ವಯಂ ಉದ್ಭವಿಸಿದವು. ಅವರೇ ರಚಿಸಿದ್ದು ಸಂಪೂರ್ಣ ಅಹಿಂಸಾತ್ಮಕವಾದ ಅತೀ ಪುರಾತನ “ಭಾಗವತ ಸಿದ್ಧಾಂತ”. ಸನಕಾದಿಗಳು ಎಂದೆಂದೂ ಶಿಶುಗಳೇ ಆಗಿದ್ದು ಪೂರ್ಣಜ್ಞಾನಿಗಳಾಗಿದ್ದು ಸದಾ ಪರಬ್ರಹ್ಮ ಚಿಂತನೆಯಲ್ಲೇ ನಿರತರಾಗಿದ್ದರೇ ಹೊರತು ಸೃಷ್ಠಿಯನ್ನು ಮುಂದುವರೆಸಲಿಲ್ಲ. ಆಗ ಚಿಂತಿತನಾದ ಬ್ರಹ್ಮನು ಲಯಕರ್ತ ಶಿವನಲ್ಲಿ ಹಿಂದಿನ ಕಲ್ಪದಿಂದ ಬಂದ ಸೃಷ್ಠಿಗೆ ಬೇಕಾದ ಮೂಲದ್ರವ್ಯಗಳನ್ನು ಒದಗಿಸಿಕೊಡಲು ಕೇಳುತ್ತಾನೆ. ಆದರೆ ಶಿವನು ತನ್ನ ತದ್ರೂಪೀ ಅಮರ ಸ್ವರೂಪಗಳನ್ನೇ ಕೊಡುತ್ತಾನೆ. ಅವಕ್ಕೆ ರೋಗ, ಮುಪ್ಪು ಇತ್ಯಾದಿಗಳಿರಲಿಲ್ಲ. ಹಾಗಾಗಿ ಬ್ರಹ್ಮನು ತಾನೇ ಪುನಃ ಸೃಷ್ಠಿಯನ್ನು ಮುಂದುವರೆಸುತ್ತಾನೆ. ಅಂದರೆ ಸತ್ಯವ್ರತನು ಮಂಡೂಕ ಗಣಗಳ ದೀರ್ಘಸತ್ರಗಳ ಮುಖೇನ ಯಜ್ಞಸೃಷ್ಠಿ ಮುಂದುವರೆಸುತ್ತಾರೆ. ಆಗ ಮೊದಲು ಜಲ, ಅಗ್ನಿ, ಆಕಾಶ ತತ್ವಗಳ ಸಂಯೋಜನೆ, ಸ್ವರ್ಗರಚನೆ, ವಾಯು, ನದಿ, ಪರ್ವತ, ಸಮುದ್ರ, ವೃಕ್ಷ, ಸಸ್ಯ, ಕಾಲನಿಯಮಿತತೆ ಇತ್ಯಾದಿ ರೂಪುಗೊಳ್ಳುತ್ತವೆ. ವಸಿಷ್ಠರಂತೂ ಬ್ರಹ್ಮನಿಗಿಂತ ಹಿಂದೆ, ಪಂಚಭೂತಗಳ ಸೃಷ್ಠಿಗಿಂತಲೂ ಹಿಂದೆಯೇ ಇರುತ್ತಾರೆ. ಅವರು ಸಮಯಕ್ಕೆ ಸರಿಯಾಗಿ ಪ್ರಕಟಕ್ಕೆ ಬರುತ್ತಿರುತ್ತಾರೆ. ಹಾಗೆ ಮರೀಚಿ, ಭೃಗು, ಅಂಗಿರ, ಪುಲಸ್ತ್ಯ, ಪುಲಹ, ಕ್ರತು, ದಕ್ಷ, ಅತ್ರಿ, ಧರ್ಮ, ಸಂಕಲ್ಪ ಎಂಬ ಮಾನಸ ಪುತ್ರರ ವೃತ್ತಾಂತ. ಸುರ, ಅಸುರ, ಪಿತೃ, ಮಾನವ ಎಂಬ ಚತುರ್ವರ್ಗೀಕರಣ. ಸರ್ಪ, ಯಕ್ಷ, ಭೂತ, ಗಂಧರ್ವ ಎಂಬ ಇನ್ನೂ ೪ ವರ್ಗ. ಗೋಮಾತೆ, ಅಶ್ವ, ಆನೆ, ಕತ್ತೆ, ಜಿಂಕೆ, ಒಂಟೆ, ಇತ್ಯಾದಿ ಪ್ರಾಣಿಗಳು ಯಜ್ಞದ ಮುಖೇನವೇ ರೂಪು ಪಡೆದವು. ಹಾಗಾಗಿ ಆದಿ ಋಷಿಗಳಿಗಾಗಲೀ, ಸುರಾಸುರಪಿತೃಮಾನವರಿಗಾಗಲೀ ತಿನ್ನುವುದಕ್ಕೆ ಯಾವುದೇ ಪ್ರಾಣಿಗಳೇ ಇರಲಿಲ್ಲ! ತಿನ್ನುವ ಚಟವೇ ಇನ್ನೂ ಅಲ್ಲಿ ಉದ್ಭವವಾಗಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. 

        ಕೂರ್ಮ ಪುರಾಣ ಹೇಳುತ್ತದೆ ಬ್ರಹ್ಮನು ತನ್ನ ದೇಹವನ್ನೇ ವಿಭಜಿಸಿ ಸ್ವಾಯಂಭುವ ಮನು + ಶತರೂಪ ಎಂಬೀರ್ವರನ್ನು ಸೃಷ್ಠಿಸಿದ. ಸ್ವಾಯಂಭುವ ಮನ್ವಂತರದಲ್ಲಿ ಮೈಥುನ ಸೃಷ್ಠಿಯೇ ಇರಲಿಲ್ಲ ಎಂಬುದನ್ನು ಓದುಗರು ನೆನಪಿನಲ್ಲಿಡಬೇಕು. ಸ್ವಾಯಂಭುವಿನಿಂದ ಪ್ರಿಯವ್ರತ, ಉತ್ತಾನಪಾದ, ಪ್ರಸೂತಿ, ಆಕೂತಿ ಎಂಬ ಸಂತಾನ. ಮನುವಿನಿಂದ ಮುಂದುವರೆದ ಸಂತತಿಯನ್ನೇ ಮಾನವರೆಂದು ಪುರಾಣಗಳು ದಾಖಲಿಸಿದವು. ವಿಷ್ಣು ಪುರಾಣ, ಪ್ರಥಮ ಅಂಶದಲ್ಲಿ ದಕ್ಷನು ಪ್ರಾಚೇತ ಗಣ ಮತ್ತು ಮಾರಿಷಾ ಪುತ್ರನೆಂದಿದೆ. ಅವನು ೫೦೦೦ ಪುತ್ರರನ್ನು ನಂತರ ೧೦೦೦ ಪುತ್ರರನ್ನು ಸೃಷ್ಠಿಸಿದ. ಅವರೆಲ್ಲರೂ ತಪಸ್ವಿಗಳಾಗಿ ಮುಕ್ತಿ ಪಡೆದರು. ನಂತರ ೬೦ ಪುತ್ರಿಯರನ್ನು ಸೃಷ್ಠಿಸಿದ. ಅವರಲ್ಲಿ ಧರ್ಮನಿಗೆ ೧೦, ಕಶ್ಯಪನಿಗೆ ೧೩, ಸೋಮನಿಗೆ ೨೭, ಅರಿಷ್ಠನೇಮಿಗೆ ೪, ಭೂಪುತ್ರನಿಗೆ ೨, ಅಂಗಿರನಿಗೆ ೨, ಕೃತಾಶ್ವನಿಗೆ ೨ ಪುತ್ರಿಯರನ್ನು ಕೊಟ್ಟು ವಿವಾಹ ಮಾಡಲಾಯಿತು. ಪುತ್ರಿಯರ ಸಂಖ್ಯೆ ಮತ್ತು ಹೆಸರಿನ ಬಗ್ಗೆ ವಿವಿಧ ಪುರಾಣಗಳಲ್ಲಿ ಭಿನ್ನತೆ ಇದೆ. ಆದರೆ ಅಲ್ಲಿನ ತತ್ವ ಮಾತ್ರ ಚಿಂತನೀಯ. 

        ಕಶ್ಯಪನಿಗೆ ದಕ್ಷನ ೧೩ ಮಾನಸ ಪುತ್ರಿಯರಾದ ಅದಿತಿ, ದಿತಿ, ದನು, ಕಸ್ಥ, ಅರಿಷ್ಠ, ಸುರಸ, ಇಳಾ, ಮುನಿ, ಕ್ರೋಧವಶ, ತಾಮ್ರ, ಸುರಭಿ, ಸರಮಾ, ತಿಮಿ ಇವರೊಂದಿಗೆ ವಿವಾಹವಾಯಿತು. ಅದಿತಿಯ ಪುತ್ರರು ೧೨ ಆದಿತ್ಯರು. ದಿತಿಯ ಪುತ್ರರೆಲ್ಲ ದೈತ್ಯರು. ದನುವಿನ ಸಂತತಿ ದಾನವರಾಯಿತು, ಕಸ್ಥಳಿಂದ ಕುದುರೆಗಳು, ಅರಿಷ್ಠಳಿಂದ ಗಂಧರ್ವರು, ಸುರಸೆಯಿಂದ ರಾಕ್ಷಸರು, ಇಳೆಯಿಂದ ವೃಕ್ಷ, ಓಷಧಿ, ವನಸ್ಪತಿಗಳು; ಮುನಿಯಿಂದ ಅಪ್ಸರೆಯರು, ಕ್ರೋಧಶ್ವಳಿಂದ ಪಿಶಾಚ ವರ್ಗ, ತಾಮ್ರೆಯಿಂದ ಪಕ್ಷಿಗಳು, ಸುರಭಿಯಿಂದ ಕರುಗಳು, ಸರಮೆಯಿಂದ ಕ್ರೂರ ಮೃಗಗಳು ಹಾಗೂ ತಿಮಿಯಿಂದ ಜಲಚರಗಳ ಸೃಷ್ಟಿಯಾಯಿತು. ಅಂದರೆ ಈಗಿನಂತೆ ಮ್ಯಾರೇಜ್ ಆಗಿ ಮೈಥುನ ಪ್ರಕ್ರಿಯೆಯಿಂದ ಮಕ್ಕಳನ್ನು ಹೆಡೆದರು ಎಂದು ಏನಕ್ಕೇನೋ ಅರ್ಥ ಮಾಡಬಾರದು. ಅಲ್ಲಿ ಕಶ್ಯಪನು ಮಾಡುತ್ತಿದ ಸೃಷ್ಠಿಯಜ್ಞ ಎಂಬ ಬೃಹತ್ ಯೋಜನೆಯ ಅನುಷ್ಠಾನಾಧಿಕಾರಿಗಳಂತೆ ದಕ್ಷನ ೧೩ ತತ್ವಗಳು ನಿಯೋಜಿಸಲ್ಪಟ್ಟವು. 

        ಚಾಕ್ಷುಷ ಮನ್ವಂತರದಲ್ಲಿ ೧೨ ತೂಷಿತ ಗಣಗಳಿದ್ದರು. ಉತ್ತಮ, ತಾಮಸ, ರೈವತ ಮನ್ವಂತರಗಳು ಕಳೆದು ಪ್ರಸಕ್ತ ವೈವಸ್ವತ ಮನ್ವಂತರದಲ್ಲಿ ಆ ೧೨ ಗಣಗಳು ಪ್ರಾರ್ಥಿಸಿಕೊಂಡು ಕಶ್ಯಪ+ಅದಿತಿಯಿಂದ ಜನಿಸಿದರು. ಅವರನ್ನೇ ದ್ವಾದಶ ಆದಿತ್ಯರು ಎಂದಿದೆ. ಏಕೆ ಇದನ್ನು ಹೇಳಿದೆನೆಂದು ಅರ್ಥ ಮಾಡಿಕೊಳ್ಳಿ. ೧೨ ಸೂರ್ಯರನ್ನೂ ಸೃಷ್ಠಿಸುವ ಶಕ್ತಿ ಋಷಿ ಮುನಿಗಳಿಗಿದೆ. ಅವರು ಸೃಷ್ಠಿ ಕರ್ತರೇ ಹೊರತು ಮಾಂಸಭಕ್ಷಕರಲ್ಲ! ಅರುಣೋದಯ ಕಾಲದಲ್ಲೇ ಒಂದಷ್ಟು ದಿನ ಅರುಣ ಪ್ರಶ್ನೆ ಪಾರಾಯಣ ಮಾಡಿದರೆ ಇವೆಲ್ಲ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದರಲ್ಲಿ ಋಷಿಗಳಿಗೆ “ವಾತರಶನಾಃ” ಅಂದರೆ ಗಾಳಿ ಸೇವಿಸಿಕೊಂಡೇ ಬದುಕಿರುವವರು ಎಂಬ ಭಾವಾರ್ಥ ಹೇಳಿದೆ.

        ಹೀಗೆ ಯಜ್ಞಗಳ ಮುಖೇನ ಜನಸ್ತೋಮ ಬೆಳೆಯಿತು. ಹೀಗೆ ೬೦೦೦೦ ಮಂಡೂಕ ಗಣದಿಂದ ಲಕ್ಷೋಪಲಕ್ಷ ಯಜ್ಞ-ಯಾಗಾದಿಗಳ ಸೂತ್ರ ರಚನೆಯಾಯಿತು. ಅದರಿಂದ ಆರ್ತರಾ ರಕ್ಷಣೆ, ಮಳೆ, ಬೆಳೆ, ಸಮೃದ್ಧಿ, ಔಷಧೀ ಪ್ರವರ್ಧನೆ, ಬುದ್ಧಿ ಪ್ರಚೋದಕ, ಉತ್ಪಾತ ನಿರಸನ ಮತ್ತು ಅರ್ಥಕಾಮಗಳಾದ ಕಾಮ್ಯೇಷ್ಟಿಗಳೆಲ್ಲ ನಡೆದವು. ಹೀಗೆ ಕಲ್ಪಸೂತ್ರದ ಆಧಾರದಲ್ಲಿ ಚರಾಚರ ಜಗತ್ತು ಚಾಲನೆಗೊಂಡಿತು. ಕಲ್ಪದ ಆದಿಯಲ್ಲಿ ಎಲ್ಲವೂ ಯಜ್ಞಯಾಗದಿಗಳಿಂದಲೇ ಬ್ರಹ್ಮನ ಸೃಷ್ಠಿ ಸೂತ್ರದ ಆಧಾರದಲ್ಲಿ ತಮಗೆ ತಾವೇ “ಸ್ವಯಂ” ಪೂರ್ಣಜ್ಞಾನಯುಕ್ತವಾಗಿ, ಪೂರ್ಣ ಬ್ರಹ್ಮಸ್ವರೂಪದಲ್ಲಿಯೇ ಉದ್ಭವಿಸಿದವು. ಅದನ್ನೇ ಸ್ವಾಯಂಭುವ ಮನ್ವಂತರ ಎಂದು ಗುರುತಿಸಿದರು. ಇದನ್ನು ವಿವರಿಸುತ್ತಾ ಹೋದರೆ ಬಹಳ ವಿಸ್ತಾರವಾದೀತು ಎಂದು ಅಣ್ಣಪ್ಪಯ್ಯರ ತಂತ್ರಸೂತ್ರದ ಒಂದು ಪದ್ಯ ಅನುಷ್ಠಿಸಿ ಸೃಷ್ಟಿಸೂತ್ರವನ್ನು ಅರ್ಥಮಾಡಿಕೊಳ್ಳಿರೆಂದು ಪ್ರಾರ್ಥಿಸುತ್ತೇನೆ:

ಸೃಷ್ಟಿ ಸೂತ್ರವ ಪೇಳ್ವೆ ಕೇಳೈ ಜೀವಿಯು ಸ್ವಾಯಂಭುವವಾಗಿರಲೊಂದು
ಸೃಷ್ಟಿಯು ಮುಂದೆ ಉಚಿತವರಿದಾ ಸೃಷ್ಟಿ ಉತ್ತಮದೆಡೆಗೆ ಚಿಂತನೆಯ ಹತ್ತಿದಾ
ಸೃಷ್ಟಿ ಅದರಿಂದಲಾಯ್ತೈ ಹೊಯ್ದಾಟವದರಿಂದಲಾಯ್ತು ತಾಮಸಸೃಷ್ಟಿ ಕಾಣೈ ಮುಂದೆ
ಸೃಷ್ಟಿಗೆ ನಿರ್ಬಂಧ ಹೇರಲು ರೈವತವು ಸೃಷ್ಟಿಯಾಯಿತು ಅಜ್ಞಾನ
ಸೃಷ್ಟಿಯೊಳು ಪಸರಿಸಲು ದೃಷ್ಟಿ ನೀಡಿದವು ವೇದಗಳು ಅದನಾಧರಿಸಿ ಜೀವ
ಸೃಷ್ಟಿಯಾಯಿತು ಈ ವೈವಸ್ವತವು ಕಾಣೆಲೊ ಮನುಜ ನಿನಗಿದರರಿವು ಉಂಟೇನೂ?

ಬೇಕಾಬಿಟ್ಟಿ ಸಿಕ್ಕ ಸಿಕ್ಕ ಜೀವಿಗಳನ್ನೆಲ್ಲ ಹಿಂಸಿಸಿ ತಿಂದರೆ ಮಹಾಲಯವಾದೀತು ಎಚ್ಚರ ಎಂದು ಶಿವನ ವಾಕ್ಯವಿದೆ ನೋಡಿ ತಿರುಕ ಸಂಹಿತೆ ೮-೬೨

        ಸೃಷ್ಠಿ ಸ್ಥಿತಿ ಲಯವೆಂಬ ಸಹಜ ಪ್ರಕೃತಿಯ ನಿಯಮ
        ಸೃಷ್ಠಿಯೊಳು ಈರೇಳು ಲೋಕದಲಿ ಭಿನ್ನವಿಲ್ಲವು
        ಸೃಷ್ಠಿಯಾ ನಿಯಮಬದ್ಧತೆ ಮೀರಿದಾ ಆತ್ಮಗಳಿಗೊಂದುಪಾಯವೇ ಈ ಮಹಾಲಯವೂ |
        ಸೃಷ್ಠಿಗೀಶನು ಬ್ರಹ್ಮ ಜೀವಿಯ ಜೀವನವ ಬರೆಯುವನು
        ಸೃಷ್ಠಿಸಿದ ಜೀವಿಗಳಿಗನ್ನ ವಿಕ್ಕುವನು ಮಾಧವನು ನಾ
        ಸೃಷ್ಠಿಯಾ ಕಾಲವರಿಯುತ ಲಯವ ನಿಯೋಜಿಸುವೆ ಆಯವಿಲ್ಲದಿರೆ ಮಹಾಲಯವು ಖಂಡಿತವೂ ||

        ಒಂದು ಕಾಲದಲ್ಲಿ ಸೂಚೀಮುಖ, ಗೃದ್ಧಮುಖ, ಚುಂಚಾಮುಖ, ವೇಳಾಮುಖ, ಘಂಟಾಕರ್ಣ ಇತ್ಯಾದಿ ವಿಕಾರ ಸ್ವರೂಪ ಹೊಂದಿದ್ದ ಮಾನವರಿದ್ದರು ಎನ್ನುತ್ತದೆ. ಆದರೆ ಅವರು ಮಾಂಸಭಾಕ್ಷಕರಾಗಿದ್ದರು ಎಂಬ ಉಲ್ಲೇಖವಿಲ್ಲ. ಹೈಹಯ ವಂಶದ ಬೃಹದಶ್ವನು ಕಪಾಲಚಿತಿಯಿಂದ ಮನುಷ್ಯನಿಗೆ ಭೌತಿಕ ವಿಕೃತಿ ನೀಗಿಸಿ ಈಗಿರುವ ಮುಖದ ಸೌಂದರ್ಯ ಒದಗಿಸಿಕೊಟ್ಟರು. ಆ ಕಾಲದಲ್ಲೆಲ್ಲ ಬದುಕುವುದಕ್ಕೆ ತಿನ್ನುವುದು ಅವಶ್ಯಕವೇ ಇರಲಿಲ್ಲ. ಪ್ರಕೃತಿಯಿಂದ ನೇರವಾಗಿ ಅಂಶಗಳನ್ನು ಸ್ವೀಕರಿಸಬಹುದಾಗಿತ್ತು. ಅದಕ್ಕೆ ಬೇಕಾದಷ್ಟು ಆಧಾರವು ಯಜುರ್ವೇದದಲ್ಲಿ ಸಿಗುತ್ತದೆ. ಅದನ್ನು ಸವಿಸ್ತಾರವಾಗಿ ಸ್ವಾಮೀಜಿಯವರು ಪಾಠ ಮಾಡಿದ್ದಾರೆ. ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯೂ ಇದೆ. ಈಗಲೂ ಹಲವಾರು ಜನ ಉದಯ ಸೂರ್ಯನನ್ನು ಪ್ರತಿನಿತ್ಯ ಗಮನಿಸುತ್ತಾ ತಮ್ಮ ಆಹಾರಾದಿ ಅಪೇಕ್ಷಗಳು, ರೋಗ ರುಜಿನಗಳನ್ನೆಲ್ಲ ಗೆದ್ದಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುವುದನ್ನು ಕಾಣಬಹುದು. ಕಾಲ ಕಳೆದಂತೆ ಆಹಾರ, ನಿದ್ರಾ, ಭಯ, ಮೈಥುನಗಳು ಅನಿವಾರ್ಯವೆಂಬಂತೆ ಬ್ರಹ್ಮನ ಸೃಷ್ಟಿಯಲ್ಲಿ ಅಳವಡಿಸಲ್ಪಟ್ಟಿತು. ಆಗ ವಿಢೂರಥ ಏನು ಮಾಡಿದ ಗೊತ್ತೇ?

ಹಿಂದೊಂದು ಕಾಲದಲಿ ವಿಢೂರಥನೆಂಬ ಸೋಮಕವಂಶಜಾತನು
ಒಂದು ಯುಗ ಪರ್ಯಂತ ತಪವನಾಚರಿಸಿ ಲೋಕಕೆ ಅನ್ನವೇ ಜ್ಞಾನ
ವೆಂದರಿತು ಅತುಲ ಪರಾಕ್ರಮದಿ ಸೃಜಿಸಿದನೊಂದು ರಥವನು ಅಗಾಧ ಶಕ್ತಿಯದೂ ಅದನೇರಿ |
ಬಂದಾಗ ಭೂಮಿ ಸಮತಲವಾಯ್ತು, ಹಸನಾಯ್ತು ಲೋಗರಿ
ಗಂದು ಕೃಷಿಯೋಗ್ಯ ಭೂಮಿಯ ಹಸನು ಮಾಡಿಕೊಟ್ಟಾತನೇ ಪೃಥು
ವೆಂದು ಕರೆದರು ಈ ಭುವಿಯ ಪೃಥ್ವೀಯೆಂದು ಜನ ಕೊಂಡಾಡಿದರು ಕೃಷಿಯು ಆರಂಭವಾಯ್ತು || ೩.೬೬ ||

ಜನರಿಗೆ ಆಹಾರ ಒದಗಣೆಯಿಂದ ತಿಂದುಂಡ ಜನ ಅಕೃತರಾಗಲು
ಜನರಲುದಿಸಿ ಖಾಯಿಲೆಯು ಅದನರಿತ ಸೋಮಕನು ಔಷಧಿಯ
ವನದೊಳಗೆ ಚಂದ್ರನಿಂ ತರಿಸಿ ನಡೆಸಿದ ಹದಿನಾರು ಸಂಖ್ಯೆಯಲಿ ಸೋಮರಸ ಸಿದ್ಧಿಪಡೆಯೇ |
ಜನಮನಕೆ ತೋಷವಾಗಲು ಸೋಮನೇ ಈತನೆಂದು ಕೊಂಡಾಡಿ
ಜನ ಹಾಡಿ ಹೊಗಳಿತು ಧನ್ವಂತರಿಯೆಂದು ಧನುವಿನೋಪಾದಿಯಲಿ
ಜನರಿಂದ ಚಿಗಿತು ಎಸೆಯಿತು ರೋಗ ಸಕಲೌಷಧಿಯ ಕರ್ತರ ಚಂದ್ರನೆಂದರಿದರಾಗಾ || ೩.೬೭ ||

ದೇಶಕಾಲವನರಿತು ಕಾಯಕವ ಮಾಡಯ್ಯ ವಿವೇಕವಿಲ್ಲದೇ
ದೇಶವ್ಯಾಪ್ತಿಯ ಮೀರಿದಾ ಕಾಯಕವು ವ್ಯರ್ಥವಪ್ಪುದು ಕೇಳು
ದೇಶದಾಹಾರ, ಜನಮಾನಸವು, ವಿಹಾರ, ಮಳೆ, ಬೆಳೆ, ಭೂಗುಣವನರಿತು ಕಾಯಕ ಮಾಡೆ ಸಫಲವಯ್ಯ || ೩.೧೮ ||

        ದೇಶಕಾಲವರಿತ ಕಾಯಕ + ದೇಶದಾಹಾರ ಎಂದರೇನೆಂದು ಅತೀ ಆಳವಾಗಿ ಅಧ್ಯಯನ ಪ್ರಯೋಗಗಳಿಂದ ಕಂಡುಹಿಡಿದ ಲಕ್ಷಾಂತರ ಸೂತ್ರಕಾರರ ೨೭ ವರ್ಗಗಳು ಇಡೀ ಭೂಮಿಯನ್ನು ೨೭ ವಿಭಾಗಗಳಾಗಿ ವಿಂಗಡಿಸಿ ಎಲ್ಲೆಲ್ಲಿ ಹೇಗೇಗೆ ಜೀವನ ನಡೆಸಬೇಕು? ಏನು ತಿನ್ನಬೇಕು? ಉಡುಗೆ ತೊಡುಗೆ ಇತ್ಯಾದಿ ಎಲ್ಲವನ್ನೂ ಬ್ರಾಹ್ಮೀ ಭಾಷೆಯಲ್ಲಿ ನಮೂದಿಸಿದರು. ಅದು ಮೂಲತಃ ವೇದವನ್ನಾಧರಿಸಿ ಭೂಗುಣ, ಜಲಗುಣ, ವಾಯುಗುಣ, ಜನಗುಣ, ಮನೋಗುಣ ಇತ್ಯಾದಿಗಳನ್ನಾಧರಿಸಿದೆ. ಈಗಿನವರಿಗೆ ತಮ್ಮ ಶಾಖೆ, ಸೂತ್ರಗಳನ್ನು ಹೇಳಲಿಕ್ಕೂ ಗೊತ್ತಿಲ್ಲ. ಮೊನ್ನೆ ಒಬ್ಬರು ಹೇಳಿದರಂತೆ - ತಮ್ಮ ಶಾಖೆಯು ವೃಕ್ಷಾಕೆ. ಮತ್ತೆ ಅದು ವೃಕ್ಷಗಳ ಅಧ್ಯಯನದ ಶಾಖೆ ಎಂದು ಸಮರ್ಥಿಸಿಕೊಂಡರಂತೆ. ಪಾಪ ಅವರಿಗೆ ಋಗ್ ಶಾಖೆ ಎಂಬ ಶಬ್ದವೂ ಗೊತ್ತಿಲ್ಲದಷ್ಟು ಅಜ್ಞಾನ ಪ್ರಸಾರವಾಗುತ್ತಿದೆ. ಹಾಗೇ ಆಶ್ವಲಾಯನ, ಬೋಧಾಯನ, ಆಪಸ್ಥಂಭ, ಕಾತ್ಯಾಯನ ಎಂದೆಲ್ಲ ಸೂತ್ರದ ಹೆಸರು ಮಾತ್ರ ಕೆಲವರಾದರೂ ಹೇಳುತ್ತಾರೆ. ಆದರೆ ಸೂತ್ರ ಅಧ್ಯಯನ ಮಾಡಿದವರು ವಿರಳ. ಅದನ್ನರಿತರೆ ಮಾತ್ರ ಎಲ್ಲೆಲ್ಲಿ ಹೇಗೆ ಜೀವನ ಮಾಡಬೇಕೆಂದು ತಿಳಿಯುತ್ತದೆ. ಸಾಧ್ಯವಾದರೆ ಬ್ರಿಟೀಷರು ತಿದ್ದಿರುವ ಹಾಗೂ ಪ್ರಕ್ಷಿಪ್ತ ಭಾಗಗಳನ್ನು ಬದಿಗಿರಿಸಿ ಮೂಲ ಸೂತ್ರ ಅಧ್ಯಯನದಲ್ಲಿ ತೊಡಗಿರಿ ಎಂದು ಆಶಿಸುತ್ತಾ ಆ ಸೂತ್ರಕಾರರ ಹೆಸರನ್ನಾದರೂ ಇಲ್ಲಿ ಸ್ಮರಿಸೋಣ: (ಆಧಾರ:- ಜ್ಯೋತಿರಾಯುರ್ವೇದ ಸಂಹಿತಾ: ಆಹಾರ ಜನ್ಯ ರೋಗ ವಿವರಣೆ ಅಧ್ಯಾಯ)


1.             ಆಶ್ವಲಾಯನ
2.            ಸಾಂಖ್ಯಾಯನ
3.            ಕೌಶೀತಕೀ
4.           ವಾಮದೇವ
5.            ಕಾತ್ಯಾಯನ
6.            ಔಡಲ
7.            ಬೋಧಾಯನ
8.            ಭರದ್ವಾಜ
9.            ಆಪಸ್ತಂಭ
10.          ಹಿರಣ್ಯಕೇಶೀ
11.           ಆರ್ಷೇಯ
12.          ಮಷಕ
13.          ಲಾಖ್ಯಾಯನ
14.          ದ್ರಾಹ್ಯಾಯಣ
15.          ಜೈಮಿನಿ
16.          ಭೃಗು
17.           ತ್ರಿಶಿರ
18.          ಸಾಮ ವಿಧಾನ
19.          ಕೌತುಮ
20.        ಪಂಚವಿಂಶ
21.          ವೈತಾನವೆಂಬ ೨೧.
22.         ಪರಾಶರೀ
23.         ನಾರದೀಯ
24.        ಆರ್ಥಿವ
25.         ತಾಪತ್ಯ
26.         ಸೋಮಾಂಶು
27.         ವಾಸಿಷ್ಠ
28.         ರಾಣಾಯಣೀಯ ಎಂಬ ೭,


        ಇನ್ನು ಕಪಿಲ ಮಹರ್ಷಿ ಅನ್ನಾಹಾರದ ಬಗ್ಗೆ ಏನು ಹೇಳಿದ್ದಾರೆ ನೋಡೋಣ. ಮನುಷ್ಯರಿಗೆ ಅನ್ನವು ಮುಖ್ಯವಾಗಿ ತಲೆಯಲ್ಲಿರುವ ಕಪಿಲಾಂಶ ಹಾಗೂ ಅನ್ನದಲ್ಲಿರುವ ಕಪಿಲಾಂಶದ ಆಧಾರದಲ್ಲಿ ರಸ ಮತ್ತು ಗುಣ ವಿಶ್ಲೇಷಣೆಯಿಂದ ಸೃಷ್ಠಿಸುವಾಗಲೇ ನಿರ್ಣಯವಾಗಿರುತ್ತದೆ. ಅನ್ನದಲ್ಲಿರುವ ಕಪಿಲವು ಪಕ್ವವಾಗಬೇಕಾದರೆ ಅದಕ್ಕೆ ತಕ್ಕ ರಸಗಳು ಇರಬೇಕು. ವೇದದಲ್ಲೆಲ್ಲ ಅನ್ನವೆಂದರೆ ಆಹಾರವೆಂದರ್ಥ. ಯಾವುದಕ್ಕೆ ಯಾವುದು ಆಹಾರ ಎನ್ನುವುದೇ “ಅನ್ನಸೂತ್ರ”.  ಘೋಟಕ ಎಂಬ ಸೂತ್ರವು ಅನ್ನ ವಿನಿಮಯ ಸೂತ್ರ. ಅದನ್ನು ಸಾಧಿಸಿಯೇ ವಿಷ್ಣು ಪದವಿ ಸಿಗುವುದು. ಅದೇ ಸ್ಥಿತಿ ರಹಸ್ಯ. ಅದನ್ನು ಕಪಿಲರು ಸಾಧಿಸಿದರು. ತಾವೇ ಸ್ವಯಂ ಅನ್ನದಲ್ಲಿ ಒಂದಂಶವಾಗಿ ಬೆರೆತ ಕಪಿಲ ಮುನಿಯ ಶಕ್ತಿಯು ಅನ್ನವೇ ಜೀವಿಗಳಿಗೆ ಆಧಾರ, ಅದೇ ಜ್ಞಾನ, ಬುದ್ಧಿ, ಸತ್ಯ, ಸನ್ಮಾರ್ಗ ಎಂದಿದ್ದಾರೆ. ಅವರು ಹೇಳುತ್ತಾರೆ - ಮಾನವನೇ ನೀ ನಿನಗೊಗ್ಗುವ ಅನ್ನವನ್ನು ಮಾತ್ರ ತಿನ್ನು, ಬೇರೆ ತಿನ್ನಬೇಡ. ಎಲ್ಲ ಜೀವಿಗಳಿಗೆ ಅದರದ್ದೇ ಆದ ಅನ್ನವಿದೆ. ಅದಿಲ್ಲದೆ ಜೀವಿಗಳು ಬದುಕಲಾರವು. ಇದು ವಿಧಿನಿಯಮ. ಹಾಗಾಗಿ ಕಪಿಲರು ತಾವೇ ಸ್ವಯಂ ಅನ್ನರೂಪರಾದರು.

        ಕಪಿಲ ಮಹರ್ಷಿಯು ಮೊದಲು ಘೋಟಕ ಸೂತ್ರದಿಂದ ಆಹಾರವೇ ಇಲ್ಲದಂತೆ ಬದುಕುವ ವಿಧ್ಯೆಯನ್ನು ಸಾಧಿಸಿದರು. ಆದರೆ ಅವರು ಭೂಲೋಕದಲ್ಲಿ ಪ್ರತಿ ಜೀವಿಯ ಮಿದುಳಲ್ಲಿ ಬೆಸೆದಿರುವ ಅನ್ನಚಕ್ರದ ವಿರುದ್ಧ ಹೋಗಲಿಲ್ಲ. ಬದಲಾಗಿ ಅತಳ ಲೋಕವನ್ನೇ ಸೃಜಿಸಿ ಆಹಾರ ನಿರ್ಬಂಧವನ್ನು ತೆಗೆದರು. ಅಂದರೆ ತನ್ನಲ್ಲಿರುವ ಅಣುವನ್ನು ವಿಭಜಿಸಿಕೊಂಡು ಶಕ್ತಿ ಪಡೆದು ಹಸಿವೆಯೇ ಇಲ್ಲದಂತೆ ಜೀವಿಸುವ ಜೀವಸಂಕುಲವನ್ನೇ ಸೃಷ್ಠಿಸಿಕೊಂಡರು. ಆದರೆ ಇದೆಲ್ಲ ನಡೆದದ್ದು ಬ್ರಹ್ಮ ಸೃಷ್ಠಿಯಿಂದ ಹೊರತುಪಡಿಸಿದ ಅತಳ ಲೋಕದಲ್ಲಿ. ಆಹಾರ ನಿರ್ಬಂಧವನ್ನೇ ಬಿಡಿಸಿದ ಕಪಿಲರು ಭೂಲೋಕವಾಸಿಗಳಿಗಾಗಿ ಪಾಕಶಾಸ್ತ್ರವನ್ನು ರಚಿಸಿಕೊಟ್ಟರು. ಅದರಲ್ಲಿ ೨.೫ ಲಕ್ಷ ಶ್ಲೋಕಗಳಿವೆಯಂತೆ. ಆಹಾರವೆಂದರೆ ಶಾಸ್ತ್ರೀಯವಾಗಿ ಸಿಹಿ, ಕಹಿ, ಉಪ್ಪು, ಹುಳಿ, ಖಾರ, ಒಗರು ಎಂಬ ೬ ರಸಗಳ ಪಾಕಮೋದಕವದು. ಅಂತಹಾ ಆಹಾರವನ್ನು ಜೀವಿಗಳು ಸರಿಯಾದ ಪಾಕವಿಧಾನವನ್ನು ಅರಿತು ಭುಂಜಿಸಿದಾಗ ಮಾತ್ರ ದೀರ್ಘಾಯು. ಈ ರೀತಿ ಆಹಾರವೇ ಮಾನವನಿಗೆ ಆರೋಗ್ಯ, ಆಯುಷ್ಯ, ಸುಖ, ಸಂತೋಷದಾಯಕವೆಂದು ಯಜುರ್ವೇದ ಹಾಗೂ ಸೋಮವೇದಗಳಿಂದ ಪಾಕಶಾಸ್ತ್ರವನ್ನು ರಚಿಸಿಕೊಟ್ಟರು.

ಮಾನವಾಹಾರ ಮತ್ತು ಇತರೆ ಜೀವಿಗಳ ಆಹಾರ ಚಕ್ರವನ್ನು ಬಹಳ ಚಂದವಾಗಿ ಮೃಗಚರ್ಮಾಂಬರಧರನು ಅಗ್ನ್ಯಾವೈಷ್ಣವೀ ಯಾಗದಲ್ಲಿ ವಿವರಿಸಿದ್ದನ್ನು ತಿರುಕ ಸಂಹಿತೆ ೮ ಈ ರೀತಿ ಚಿತ್ರಿಸಿದೆ:-

ಮೃಗಪಕ್ಷಿ ಜೀವ ಜಂತು ಕ್ರಿಮಿ ಕೀಟಾದಿಗಳಿಗಿಲ್ಲ ಈ ಗುಣ
ಮೃಗೀಯಗುಣವೆಂದು ದೂಷಿಸದಿರಿ ಅವಕೆ ಅನ್ನ ಬೇರಿಹುದು
ಮೃಗದಂತೆಯೆಂಬ ನಾಣ್ನುಡಿಯ ಒಳಾರ್ಥ ಮಾನವಧರ್ಮದಳತೆಯಲಿ ಹೊರತು ಮೃಗದಲಲ್ಲಾ |
ಮೃಗಧರ್ಮ ಬೇರಿಹುದು ತನ್ನಾಹಾರಕೆ ಹೊರತು ಇನ್ನಿಲ್ಲ
ಮೃಗಗಳಲಿ ಅಪರಾಧ ಆದರೆ ಮಾನವಗೆ ಮೋಹ ಮತ್ಸರವು
ಮೃಗೀಯ ಗುಣ ವೈರಿಗಳು ಅರಿಯಿರೈ ಕಾಮಲೋಭಗಳು ಮದಕ್ರೋಧಗಳು ಮಾನವನಿಗೆ ನಿಷಿದ್ಧವೂ ||

ಈಗ ಮಾರ್ಗಶಿರ ಮಾಸ ಬರುತ್ತಿದೆ. ಈಗಲಾದರೂ ಜೀವಹಿಂಸೆಯನ್ನು ಪೋಷಿಸುವ ಜನರು ಅಹಿಂಸಾ ಮಾರ್ಗಾನುಯಾಯಿಗಳಾಗಿ ಮಾರ್ಗಶೀರ್ಷರಾಗಿರಿ ಎಂದು ಪ್ರಾರ್ಥಿಸುತ್ತಾ ತಿರುಕಸಂಹಿತೆ ೮ರ ಶಿವನುಡಿಯ ಉದಾಹರಿಸುವೆ:

ಇದುವೆ ಕೇಳ್ ಮೃಗಶಿರ ವೃತ್ತಿಯೆಂಬರು ನಿನಗೆ
ಸದರಗೊಳ್ಳದಿರು ದೇಹವೇನಿರಲಿ ಶಿರ ಮಾನವನದಿರಲಿ
ಮಧುವೆಯಪ್ಪುದು ಮೃಗಶಿರನಾಗದಿರು ಅದರಲಿ ಬುದ್ಧಿ ವಿವೇಕವಿಲ್ಲಾ |
ಅದನು ನೀನರ್ಥಮಾಡಿಕೋ ಮನುಜ ಮೃಗಶಿರ ವೃತ್ತಿ
ಹೊದರಲಿ ಜೀವಿಗೆ ಮಾನವಗೆ ಸಿಕ್ಕಿದನ್ನವ ತಿನ್ನದಿರು
ಬದಿಯಲಿಹ ಆರ್ತರಿಗೆ ಹಂಚಿ ತಿನ್ನುತ ಹಸಿವೆಯನರ್ಥ ಮಾಡಿಕೊ ಮಾರ್ಗಶೀರ್ಷನಾಗೂ ||

ದುರ್ಗಾಸಪ್ತಶತಿ ಅಂತರ್ಗತ ವೈಕೃತಿಕ ರಹಸ್ಯದಲ್ಲಿ ಮಾರ್ಕಾಂಡೇಯರ ವಿಚಾರವನ್ನು ತಿರುಕ ಸಂಹಿತೆಯಲ್ಲಿ ಹೀಗೆ ಹೇಳಿದ್ದಾರೆ:-

ಅಷ್ಟೈಶ್ವರ್ಯ ಭೋಗ ಭಾಗ್ಯಗಳ ಬೇಡುತ ಇಹದ
ಕಷ್ಟಗಳನನುಭವಿಸಿ ಹೊಟ್ಟೆಯಾ ಚಿಂತೆಯಲಿ ಬೆಂದು
ಇಷ್ಟಾನಿಷ್ಟಗಳನರಿಯದೇ ಬಾಳಿದವು ಮತ್ತೆರಡ ನೆನೆಯದೇ ಬಸವಳಿದವು |
ಶಿಷ್ಟಾಚಾರ ಊಟದೊಳಿದೆಯೆಂಬ ಭ್ರಾಂತಿಯಲಿ ನಾನಾಕರ್ಮ
ಕೋಟಲೆಗಳಲಿ ಸಿಲುಕುತ ಹೊಟ್ಟೆಗಾಗಿಯೇ ಹೋರಾಡಿದವು
ಅಷ್ಟಾದಶ ಭುಜಳು ಪ್ರಕೃತಿಯು ತನ್ನ ತನವನು ತೋರಿ ಹರಸಿ ಮೈದಡವಿ ಹೊಟ್ಟೆ ತುಂಬುವಳೂ ||

ಅನ್ನದಾ ಋಣ ಬಂಧಿ ಜೀವಿಗಳು ಇನ್ನಿಲ್ಲಿ ಮರೆತು
ಅನ್ನವಿತ್ತವಳೆ ತಾಯೆಂದು ಬಗೆದು ಪೂಜಿಸುತ
ಅನ್ನದಾ ಋಣದಿ ಬನ್ನ ಪಡುತಲಿಹ ಜೀವರಾಶಿಯ ಪೊರೆವೆನೆಂಬಾ ಬಿರುದು ||

ಬಾಳಿನಾ ಮುಖದಲ್ಲಿ ಅನ್ನವೇ ಪರಬ್ರಹ್ಮ ಅನ್ನವಿಲ್ಲದಿರೆ
ಕೂಳಿನಾ ಕದನ ಬಾರಿಯಪ್ಪುದು ಅನ್ನಕ್ಕಾಗಿ ಜೀವಿಗಳು
ಬಾಳುವವು ಆದರೇನ್ ಅನ್ನವಿಲ್ಲದೆ ಬದುಕು ಸಾಧಿಪ ದಾರಿಯೇ ವಿಕೃತಿಯಾ ಒಂದು ಭಾಗ |
ಹೇಳುವಳು ತಾರೆ ಅನ್ನ ಕಾರಣವಲ್ಲ ಜನ್ಮಕೆ ಪುಣ್ಯವೇ
ಕೇಳಿ ಕಾರಣ ಜನ್ಮದಾ ಗುರಿ ಆತ್ಮೋದ್ಧಾರ ಅದಕಾಗಿ ನೀವ್
ಬಾಳೆಲ್ಲ ಅನ್ನ ದುಡಿಯುತ ಇದ್ದು ವ್ಯರ್ಥ ಬಾಳುವಿರಿ ಅನ್ನ ಬಿಡಿ ಬನ್ನ ಪಡದಿರಿ ಸುಖವ ಕಾಣಿರೀ ||

ಅನ್ನ ಒಂದೇ ಕಾಣು ತಿನ್ನುವುದೆಲ್ಲ ಅನ್ನವು ಆದರೇನ್
ಅನ್ನದಾ ನಿಯಮವಿದೆ ಜೀವಿಗಳಿಗೆ ಪ್ರತ್ಯೇಕವಿದೆ
ಅನ್ನದಾ ದಾರಿಯರಿಯುವುದೆ ಇತರೆ ಮೃಗ ಪಕ್ಷಿ ಕ್ರಿಮಿ ಕೀಟ ಸರಿಸೃಪಾದಿಗಳಿಗೆ |
ಅನ್ನವಿದೆ ಮಾನವಗೆ ಬೇರೆ ಉದರಕೊಂದನ್ನ ಬದುಕಲು
ಅನ್ನವೇ ಜ್ಞಾನ ಆತ್ಮಗೆ ಇನ್ನು ಶ್ರವಣ, ಚಕ್ಷು, ಜಿಹ್ವಾದಿ
ಅನ್ನವೇ ಬೇರಿಹುದು ತ್ವಕ್ ಪ್ರಾಣಗಳಿಗನ್ನ ವಿಧಿಸಿಹುದು ಅರಿತುಕೊಂಡರೆ ಅದು ವಿಕೃತಿ ||

ಭುಜಗಳು ಹದಿನೆಂಟು ಸ್ಮೃತಿಯಲಿ ಬಹುಭಿನ್ನತೆ ಭೂ
ಭುಜರೆಲ್ಲರಾಳಿದ ನಾಡಿನಲಿ ಅನ್ನ ಬದ್ಧತೆ ವಿಧಿಸಿ
ಭುಜಂಗಾದಿ ಕ್ರಿಮಿ, ಕೀಟ, ಸರೀಸೃಪ, ಮೃಗ, ಪಕ್ಷಿಗಳನೆಲ್ಲನಾದೆಳಿವೆಂದು ಬೀಗುತಲೀ |
ಭುಜದರ್ಥ ತಿಳಿಯದ ಮೂರ್ಖರವರು ಅನ್ನ ಬಾಧ್ಯರು
ಭಜನೆಗೈವರು ಹೊಟ್ಟೆಗಾಗಿಯೆ ಬಳಲಿ ಬೆಂಡಾಗುವರು
ಭಜಕರಾಗಿರಿ ವಿಕೃತಿಯನು ಅರಿಯಿರಿ ಅನ್ನವನು ಜಯಿಸಿರೆಂದು ಕೂಗುವೆನೂ ||

ಅನ್ನಮಯ ಲೋಗರಿಗೆ ಜೀವದರಿವಾಗುವುದೇ?
ಅನ್ನದಾ ದಾಸನಾಗುತ ಅನ್ನವೇ ಸರ್ವಸ್ವವೆಂದು
ಅನ್ನಕಾಗಿ ಹೋರಾಡುತಿರೆ ನಗುತಿಹಳು ಪ್ರಕೃತಿ ಅನ್ನತಿನ್ನು ನೀ ಮತ್ತೆ |
ಅನ್ನದಾ ರಸದಿಂದ ಬುದ್ಧಿ ಕಳೆಯುತ ತೊಡಗುವೆ
ನಿನ್ನ ಕರ್ಮದೆಳೆಸಿನ ಚೆಲುವು ಕಣ್ಣಿಗೆ ಎಂದು
ಅನ್ನವಿಕ್ಕುವಳು ಮದಿರೆ ಬೆರೆಸುತ ಮಾಯೆ ಒಮ್ಮೆ ಸಿಕ್ಕಿದರೆ ಬಿಡಲಾರಳೂ ||

ದುಡಿದು ತಿನ್ನಲು ಬೇಕು ಮಾನವ ಉತ್ಪಾದಕನಾಗಿರಬೇಕು ಉದ್ಯೋಗವು ಉತ್ಪಾದಕತೆಯೆ ಹೊರತು
ಬಡಿದು ತಿನ್ನುವ, ಕುಳಿತು ಮಾಡುವ, ಮರೆತು ಮಲಗುವ, ಸೊನ್ನೆ ಸುತ್ತುವದು ಉದ್ಯೋಗವಲ್ಲವು ಅದು
ಕಡೆಯಲಿ ಸಾವಿನಂಚಿನ ವೃದ್ಧರಾ ಕೈಂಕರ್ಯ ಕೇಳೆಲವೊ ಮಾನವ ದೇಹಶ್ರಮ,
ವ್ಯಾಯಾಮ, ವಿಚಕ್ಷಣೆಯಿದ್ದರದು ಉದ್ಯೋಗ
ಹೊಡೆದು ಓಡಿಸಿ ವಿದೇಶೀಯ ಅನುಕರಣೆಯೆಂಬ ಮಹಾರೋಗವನು ಅನುಸರಿಸಿ ನಿಮ್ಮಯ ಆಚಾರವನು
ಕಡೆಯ ದಿಕ್ಕಿನಲಿ ನೆಲೆಸಿದ ಶಿವನು ಸರಸ್ವತಿಯೊಂದಿಗಿಹನೆಂಬ ಸತ್ಯವ ಮರೆಯದಿರಿ ಬುದ್ಧಿ ಮಾರಾಟ
ಮಾಡದಿರಿ ಮೂರ್ಖರಾಗುವಿರಿ ಸುತರು ನಿಮಗೆ ಮುಂದೆ ಅಂತಕರಾಗಬಹುದೈ ಬಿಡಿ ಅದನು 
ದುಡಿಮೆಯಲಿ ಶ್ರಮವೇ ಇಂಧನವೆಂದು ತಿಳಿಯಿರಯ್ಯಾ ||

ಮನುಷ್ಯರು ಮಾಂಸ ತಿನ್ನುತ್ತಲೇ ಹೋದರೆ ಏನಾಗುತ್ತದೆ?


        ಕಾಳಿಯ ಹೆಸರೇಳಿಕೊಂಡು ಕೆಲವರು ಪ್ರಾಣಿಬಲಿ ನೀಡಿ ಅದರ ಮಾಂಸ ಭಕ್ಷಣೆ ಮಾಡುತ್ತಾರೆ. ಆದರೆ ಕಾಳಿಯು ಪರಮ ಸಾತ್ವಿಕ ಶಕ್ತಿ. ಮದ್ಯ-ಮಾಂಸಗಳನ್ನು ಸ್ವೀಕರಿಸುವುದೇ ಇಲ್ಲ. ಅಂತಹಾ ಸಾತ್ವಿಕ ಶಕ್ತಿಯನ್ನು ಪ್ರಾಣಿಬಲಿ, ನರಬಲಿ ಇತ್ಯಾದಿ ತಾಮಸಿಕ ಆಚರಣೆಗಳಿಂದ ಉದ್ರಿಕ್ತಗೊಳಿಸಿ ತಾಮಸಿಕತೆಗೆ ಎಳೆದೊಯ್ದದ್ದು ಮೂರ್ಖ ದಾನವತ್ವದ ಪರಾಕಾಷ್ಠೆ. ಇನ್ನು ಶಾಕ್ತ ಪಂಥದಲ್ಲಿದ್ದ ವಿಕೃತ ಆಚರಣೆಯಿಂದ ತಾವು ಮಾಡುತ್ತಿರುವ ಬಲಿಯು ದುಷ್ಕೃತ್ಯ ಎಂದು ತಿಳಿದಿದ್ದೂ ಅದರಿಂದ ಹೊರಬರಲಾರದ ಅಸಹಾಯಕ ಸ್ಥಿತಿ ಉಂಟಾಗುತ್ತದೆ. ಊರ ಹೊರಗೆ ಪ್ರಾಣಿಯನ್ನು ಕರೆದೊಯ್ದು ಅದನ್ನು ಕತ್ತರಿಸುವಾಗ ಕಟುಕನು ಪಶುವಿನ ಕಿವಿಯಲ್ಲಿ ಉಚ್ಚರಿಸುವ ಒಂದು ವಾಕ್ಯವೇ ಅದಕ್ಕೆ ಸಾಕ್ಷಿ – “ಮಾಂ ಸಃ ಖಾದತಿ ಮಾಂಸಃ”. ಮಾಂ = ನಾನು, ಸಃ = ಅವನು, ಅದು, ಖಾದತಿ = ತಿನ್ನುತ್ತೇನೆ. ಅಂದರೆ ಆ ಪ್ರಾಣಿಯು ಈಗ ತನ್ನ ಜೀವ ತೇಯುತ್ತಿದೆ, ತನ್ಮುಖೇನ ಅದಕ್ಕೆ ಮುಂದಿನ ಮಾನವ ಜನ್ಮ ಪ್ರಾಪ್ತಿಯಾಗುತ್ತದೆ, ಕೊಂದವನಿಗೆ ಪ್ರಾಣಿ ಜನ್ಮ ಪ್ರಾಪ್ತಿಯಾಗುತ್ತದೆ, ಪುನಃ ಹಿಂದಿನ ಜನ್ಮದ ಕರ್ಮವಿಪಾಕವೋ ಎಂಬಂತೆ ಮನುಷ್ಯ ಜನ್ಮ ಪಡೆದ ಪ್ರಾಣಿಯಿಂದ ಪ್ರಾಣಿಜನ್ಮ ಪಡೆದ ಮನುಷ್ಯನು ಹತನಾಗುತ್ತಾನೆ ಎಂಬುದು ಆ ವಾಕ್ಯದ ಅರ್ಥ. ಅದು ತಿಳಿದೂ ಕೂಡ ಬಲಿ ಎಂಬ ಹತ್ಯೆ ಮಾಡುತ್ತಾರೆ. ಇವರಿಗೇನು ಹೇಳಬೇಕು? ನೀವೇನು ತಿನ್ನುತ್ತೀರೋ ಅದರಂತೆ ನಿಮ್ಮ ಸ್ವಭಾವವು ರೂಪುಗೊಳ್ಳುತ್ತದೆ. ಮಾಂಸ ತಿಂದರೆ ಅಮಾನುಷ, ದಾನವ, ಪ್ರಾಣಿತುಲ್ಯ ಗುಣಗಳು ಆವರಿಸುತ್ತವೆ. ಮತ್ತೆ ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಗಳನ್ನು ಊಳುವ ಸ್ಮಶಾನವನ್ನಾಗಿ ರೂಪಿಸುತ್ತೀರಾ? ಚಿಂತಿಸಿ!

ಮಾಂ ಸ ಭಕ್ಷಿತ ಮೂತ್ರ ಯಸ್ಯ ಮಾಂಸಂ ಇಹದ್ಮೈ ಅಹಂ ಏತಾನ್ ಮಾಂಸಸ್ಯ ಮಾಂಸತ್ವಂ ಪ್ರವದಂತಿ ಮನೀಷಿಣಃ  

ಅಂದರೆ ಈಗ ತಾನು ಭಕ್ಷಿಸುತ್ತಿರುವ ಪ್ರಾಣಿ ಮಾಂಸವು ಮುಂದಿನ ಜನ್ಮಗಳಲ್ಲಿ ತನ್ನ ಮಾಂಸವೇ ಆ ಪ್ರಾಣಿಯಿಂದ ಭಕ್ಷಿಸಲ್ಪಡುತ್ತದೆ. ಉದಾಹರಣೆ:- ಭಾಗವತದಲ್ಲಿ ನಾರದ ಮುನಿಯು ಬಲಿಯ ಹೆಸರಿನಲ್ಲಿ ಅತ್ಯಧಿಕ ಪ್ರಾಣಿ ಹತ್ಯೆ ಮಾಡುತ್ತಿದ್ದ ರಾಜ ಪ್ರಾಚೀನಬರ್ಹಿಗೆ ಇಂತೆನ್ನುತ್ತಾರೆ:

ನಾರದ ಉವಾಚ: ಭೋ ಭೋಃ ಪ್ರಜಾಪತೇ ರಾಜನ್ ಪಶೂನ್ ಪಶ್ಯ ತ್ವಯಧ್ವರೇ ಸಂಜ್ಞಾಪಿತಾನ್ ಜೀವ ಸಂಘಾನ್ ನಿರ್ಘೃಣೇನ ಸಹಸ್ರಶಃ | ಏತೇ ತ್ವಂ ಸಂಪ್ರತೀಕ್ಷಂತೇ ಸ್ಮರಂತೋ ವೈಶಶಂ ತವ ಸಂಪರೇತಂ ಅಯಃ-ಕುಟೈಸ್ ಛಿಂದಂತಿ ಉತ್ಥಿತ-ಮನ್ಯವಃ || (ಭಾಗವತ ೪.೨೫.೭.೮)

ಓ ಪ್ರಜಾ ರಂಜಕ, ನನ್ನ ಪ್ರಿಯ ರಾಜನ್! ಮೇಲಾಕಾಶದಲಿ ನೋಡು ನೀ ಪ್ರೀತಿ, ಮಮತೆ, ಕರುಣೆ ಇಲ್ಲದೆ ಬಲಿ ನೀಡಿದಾ ಪಶುಗಳನು. ಕಾಯುತಿವೆ ನಿನ್ನವಸಾನಕೆ ತಮಗಾದ ನೋವು ಬಾವುಗಳ ಸೇಡನು ತೀರಿಪವೋ ಎಂಬ ತೆರದಿ. ನಿನ್ನ ಮೃತ್ಯುವಿನ ನಂತರ ನಿನ್ನ ದೇಹವ ಕಬ್ಬಿಣದ ಮೊಳೆಗಳಲ್ಲಿ ಇರಿಯುವ ಕಿಡಿ ಸಿಟ್ಟಿನಲ್ಲಿಹವು. ಹಂತಕರಿಗೆ ಅಂತಹಾ ಶಿಕ್ಷೆಗಳು ಯಮರಾಜನ ಆಡಳಿತದಲ್ಲಿ ನಿಯೋಜಿಸಲ್ಪಡುತ್ತವೆ ಎಂದಿದೆ. 

ಯಜುರ್ವೇದ ೧೪.


ಪಶೂನ್ ಪಾಹಿ – ತೈತ್ತಿರೀಯ ಸಂಹಿತೆಯ ಮೊದಲ ಮಂತ್ರ ಭಾಗವಿದು, ಎಲ್ಲ ಪಶುಗಳನ್ನು ರಕ್ಷಿಸಿರಿ ಎಂದಿದೆ.
ದ್ವಿಪಾದವ ಚತುಷ್ಪಾತ್ ಪಾಹಿ - ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು.
ಕ್ರವ್ಯಾದ  – ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು
ಪಿಶಾಚ   – ಪಿಶಿತ (ಕೊಳೆತ ಮಾಂಸ) + ಅಶ (ತಿನ್ನುವವನು)  = ಕೊಳೆತ ಮಾಂಸ ತಿನ್ನುವವನು
ಅಸುತೃಪ – ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು) 
           ಇನ್ನೊಂದು ಜೀವಿಯನ್ನು ಆಹಾರಕ್ಕೆಂದು ಬಳಸುವವನು
ಗರ್ಭದಾ ಮತ್ತು ಅಂಡದಾ –  ಗರ್ಭವನ್ನು ಮತ್ತು ಮೊಟ್ಟೆಯನ್ನು ತಿನ್ನುವವನು

ವೈದಿಕಸಾಹಿತ್ಯದಲ್ಲಿ ಮಾಂಸ ಭಕ್ಷಕರನ್ನು ಯಾವಾಗಲೂ ತಿರಸ್ಕರಿಸಲಾಗಿದೆಮಾಂಸ ತಿನ್ನುವವರನ್ನು ರಾಕ್ಷಸಪಿಶಾಚಿಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿ ಹೇಳಲಾಗಿದೆ. ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಬಹಿಷ್ಕರಿಸಲಾಗಿದೆ. ನೋಡಿರಿ ಲೇಖನ “ವೇದದಲ್ಲಿ ಯಾವುದೇ ಪಶು ಹಿಂಸೆ, ಹತ್ಯೆ, ಭಕ್ಷಣೆ ಇಲ್ಲ” – http://veda-vijnana.blogspot.in/2013/03/blog-post_31.html

ಇನ್ನು ಇತರೆ ಗ್ರಂಥಗಳು ಏನು ಹೇಳುತ್ತವೆ ನೋಡೋಣ:


೧. ಮಹಾಭಾರತ ಅನುಶಾಸನ ಪರ್ವ: “ನಿಸ್ಸಂದೇಹವಾಗಿ ಮಾಂಸ ಭಕ್ಷಣೆಯನ್ನು ಮಾಡುವ ಮಾನವರು ಹದ್ದಿನಂತೆ”

೨. ಕ್ರಿಶ್ಚಿಯನ್ ಪೂರ್ವ ಜೆನಿಸಿಸ್ (೧.೨೯) “ತಡೆದುಕೋ, ನಾನು ನಿಮಗೆ ಬೇಕಾದ ಎಲ್ಲ ಸಸ್ಯೌಷಧಗಳು ಬೆಳೆಯುವ ಮರಗಳನ್ನು ನೀಡಿದ್ದೇನೆ. ಹಣ್ಣುಗಳಿಂದ ನಿನ್ನ ಪೋಷಣೆ, ಅದರಿಂದಲೇ ಪುನಃ ಬೀಜ, ಗಿಡ, ವೃಕ್ಷ, ಹಣ್ಣು ಎಂಬ ನಿರಂತರತೆ ಇದೆ”.

೩. ಸಿಕ್ ಪಂಥದ ಗುರು ನಾನಕ್ – “ನನ್ನ ಶಿಷ್ಯರಾದವರು ಮದ್ಯ-ಮಾಂಸಗಳನ್ನು ತಿನ್ನುವುದಿಲ್ಲ”

೪. ಬುದ್ಧ – “ಮಾಂಸವು ಮಾನವ ವರ್ಗಕ್ಕಲ್ಲ, ಅದಕ್ಕೂ ಕೆಳಹಂತದ ಜೀವಿಗಳಿಗೆ ಮಾತ್ರ”

೫. ಜೈನರ ಆಚಾರಾಂಗ ಸೂತ್ರ- “ಎಲ್ಲ ಜೀವಿಗಳೂ ಬದುಕಿಗಾಗಿ ಹೋರಾಟ ಮಾಡುತ್ತವೆ. ಹಾಗಾಗಿ ಯಾವುದೇ ಪಶುವು ವಧಾರ್ಹವಲ್ಲ”.

೬. ಗಾಂಧಿಜಿ- “ಒಂದಲ್ಲ ಒಂದು ಹಂತದಲ್ಲಿ ಆಧ್ಯಾತ್ಮಿಕ ಉನ್ನತಿಯು ನಮ್ಮ ದೇಹವಾಂಛೆಗಾಗಿ ಸ್ನೇಹಿತರಂತಿರುವ ಪಶುಗಳನ್ನು ಕೊಂದು ತಿನ್ನುವುದನ್ನು ನಿಲ್ಲಿಸಬೇಕಾಗುತ್ತದೆ”.

೭. ಪ್ರೊಫೆಟ್ ಮೊಹಮ್ಮದ್- “ಯಾರು ದೇವರು ಸೃಷ್ಠಿಸಿದ ಜೀವಿಗಳಲ್ಲಿ ಸಜ್ಜನಿಕೆಯನ್ನಿಡುತ್ತಾರೋ ಅವರು ನನ್ನಲ್ಲೇ ಸಜ್ಜನಿಕೆಯನ್ನಿಟ್ಟಂತೆ”.

೮. ಕ್ರೈಸ್ತರ ಬೈಬಲ್ಲಿನ ಹಳೆಯ ಒಡಂಬಡಿಕೆಯು ಮೂಲತಃ ಹೆಬ್ರೀವ್ ಭಾಷೆಯಲ್ಲಿ “lo tirtzach” ಇದ್ದದ್ದು ಆಂಗ್ಲ ಭಾಷೆಯಲ್ಲಿ “Thou shall not kill.” (Exodus 20:13) ಎಂದಾಯಿತು. ಮೂಲ ಭಾಷೆಯಲ್ಲಿ ಅದರ ಅರ್ಥವು ಯಾವುದೇ ರೀತಿಯ ಹತ್ಯೆಗಳಿಗೆ ಅವಕಾಶವಿಲ್ಲ ಎಂದೇ ಆಗುತ್ತದೆ. ಗ್ರೀಕ್ ಭಾಷೆಯಲ್ಲಿದ್ದ ಹೊಸ ಒಡಂಬಡಿಕೆಯಲ್ಲೂ ನೇರವಾಗಿ ಎಲ್ಲಿಯೂ ಮಾಂಸ ಭಕ್ಷಣೆ ಹೇಳಲಿಲ್ಲ. ನಮ್ಮಲ್ಲಿ ಆದಂತೆಯೇ ಅಲ್ಲೂ ಆಂಗ್ಲಭಾಷೆಗೆ ತರ್ಜುಮೆ ಮಾಡುವಾಗ ತಮ್ಮ ಆಹಾರ ಕ್ರಮವನ್ನು ಸಮರ್ಥಿಸಿಕೊಳ್ಳಲು ಹಲವಾರು ಶಬ್ದಗಳಿಗೆ ವಿಪರೀತಾರ್ಥ ಮಾಡಿಕೊಂಡರು. ಉದಾ:- ಗ್ರೀಕಿನಲ್ಲಿ ಮಾಂಸಕ್ಕೆ kreas ಎಂದಿದೆ. ಈ ಶಬ್ದವನ್ನು ಕ್ರಿಸ್ತನಿಗೆ ಸಂಬಂಧಿಸಿದಂತೆ ಬಳಸಿಲ್ಲ. ಆದರೆ phago ಎಂಬ ಗ್ರೀಕ್ ಶಬ್ದವು ಬರೇ ತಿನ್ನುವುದು ಎಂಬರ್ಥ ನೀಡುತ್ತದೆ; ಅದನ್ನು ಬಳಸಿದ್ದಾರೆ. ಆದರೆ ಟೀಕಾಕಾರರು ತಿನ್ನುವುದು ಎಂಬ phago ಶಬ್ದವನ್ನು ತಿರುಚಿ ಮಾಂಸ ತಿನ್ನುವುದು ಎಂದು ವ್ಯಾಖ್ಯಾನಿಸಿಕೊಂಡರು.

೯. ಇಸ್ಲಾಮ್ ಆಗಲಿ ಇಸಾಯಿಯಾಗಲಿ ಇವ್ಯಾವೂ ಹುಟ್ಟೇ ಇರದ ಕಾಲದಲ್ಲಿ ಆ ಪ್ರದೇಶಗಳಲ್ಲಿ ಇದ್ದದ್ದು ಭಾರತೀಯ ಮೂಲದ ಜರಾತುಷ್ಟರು (ಈಗದು Zorastrian ಎಂಬ ಅಪಭ್ರಂಶ ಶಬ್ದವಾಗಿದೆ). ಪುರಾತನ ಪರ್ಶಿಯಾದಲ್ಲಿ ವೇದ ಮೂಲದಿಂದ ಸ್ಥಾಪಿಸಲ್ಪಟ್ಟ ಜರಾತುಷ್ಟರ “ಝೆಂಡ್ ಅವೆಸ್ಥಾ” ಎಂಬ ಗ್ರಂಥವೂ ಸಸ್ಯಾಹಾರವನ್ನೇ ಪ್ರತಿಪಾದಿಸಿದೆ. ಕೇವಲ ಸಸ್ಯಾಹಾರದಿಂದಲೇ ೧೨೦ ವರ್ಷಗಳವರೆಗೆ ಜರೆಯೇ ಇಲ್ಲದೆ ಬದುಕುತ್ತಿದ್ದರು ಎಂದು ಹೇಳುತ್ತದೆ.

೧೦. ಹನ್ಜಸ್, ವಿಲ್ಕಾಬಂಬನ್ ಇಂಡಿಯನ್ಸ್, ಮಾಯನರು, ಇತ್ಯಾದಿ ಸಂಸ್ಕೃತಿಗಳಲ್ಲಿ ಶತಾಯುಷಿಗಳೆಲ್ಲ ಸಸ್ಯಾಹಾರಿಗಳಾಗಿದ್ದರು ಎಂದು ಇತಿಹಾಸ ಸಂಶೋಧಕರು ಹೇಳುತ್ತಾರೆ (Conscious Eating: page 288). ದಕ್ಷಿಣ ಅಮೇರಿಕಾದ ಮೂಲಧಾನ್ಯ ಜೋಳ. ಹುನ್ಜಾಲ್ಯಾಂಡಿನಲ್ಲಿ ಗೋಧಿ. ಹೀಗೆ ಹಿಂದೆಲ್ಲ ಸಸ್ಯಾಹಾರವೇ ಇತ್ತು.

೧೧. ವಿದೇಶಗಳಲ್ಲೂ ಪ್ರಾಕೃತಿಕ ಮೂಲದಿಂದ ಚಿಕಿತ್ಸೆ ನೀಡುತ್ತಿದ್ದ ಡಾ. ಪಾವೋ ಐರೋಲ, ಡಾ|| ಬಿರ್ಚರ್-ಬೆನ್ನರ್, ಡಾ|| ಮ್ಯಾಕ್ಸ್ ಗೆರ್ಸನ್, ಡಾ|| ಎಡ್ಮಂಡ್ ಬೋರ್ಡಿಯಾಕ್ಸ್ ಸಿಜ಼ಕ್ಲಿ ಇವರೆಲ್ಲ ಸಸ್ಯಾಹಾರದ ಮಹತ್ವ ಸಾರಿದ್ದಾರೆ. ಡಾ|| ಸಿಜ಼ಕ್ಲಿಯವರು ೩೦ ವರ್ಷ ಮೆಕ್ಸಿಕೋದಲ್ಲಿ ೧,೨೩,೦೦೦ ರೋಗಿಗಳನ್ನು ಪರೀಕ್ಷಿಸಿದ್ದಾರೆ. ಅವರಲ್ಲಿ ಬರೇ ಸಸ್ಯಾಹಾರದಿಂದಲೇ ೮೦-೧೦೦% ರೋಗ ನಿವಾರಣೆ ಆಗಿದೆ ಎಂದು ದಾಖಲೆ ನೀಡುತ್ತಾರೆ. ಡಾ|| ಸ್ವಾಂಕ್, ಓರ್ವ ದಕ್ಷ ಮಲ್ಟಿಪಲ್ ಸ್ಕ್ಲೇರೋಸಿಸ್ ಫಿಸಿಷಿಯನ್ ಅವರು ತಮ್ಮ ರೋಗಿಗಳನ್ನೆಲ್ಲ ಗಮನಿಸಿ ಹೇಳಿದ್ದೇನೆಂದರೆ ಮಾಂಸಾಹಾರ ಬಿಡಿ, ಮುಖ್ಯವಾಗಿ ಅಲ್ಲಿಯವರು ಬಳಸುತ್ತಿದ್ದ ಚತುಷ್ಪದಿ ಮಾಂಸಭಕ್ಷಣೆ ನಿಲ್ಲಲಿ ಎಂದರು. 

ಈ ಭಾರತೀಯ ವಿಧ್ಯಾ ಸಾಗರದಲ್ಲಿ ಚತುರ್ದಶ ವಿಧ್ಯೆಗಳು ಮಹತ್ತರ ಸ್ಥಾನವನ್ನು ಪಡೆದಿವೆ. ವೇದಕ್ಕೆ ಪ್ರತಿಯೊಂದು ವಿಧ್ಯೆಯ ರೀತಿ ಅರ್ಥ ಮಾಡಲು ಸಾಧ್ಯ. ಹಾಗಾಗಿ ವೇದಕ್ಕೆ ೧೪ ಅರ್ಥವಿದೆ ಎಂದು ಪ್ರಸಿದ್ಧಿ. ನನ್ನ ಸೀಮಿತ ಅಧ್ಯಯನ ಹಾಗೂ ಗುರುಕೃಪೆಯಿಂದ ಋಗ್ವೇದವೆಲ್ಲ ಆಯುರ್ವೇದಮಯವಾಗಿರುವುದನ್ನು ಯಜುರ್ವೇದದ ಅಧ್ಯಾಪನದಿಂದ ತೋರಿಸಿಕೊಟ್ಟು ವೇದಾರ್ಥ ಸಾಮೀಪ್ಯ ಸಿದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಗುರುವರ್ಯ ನಿತ್ಯಾನಂದರಿಗೆ ಶತಕೋಟಿ ವಂದನೆಗಳು. ಅವರು ನಾಥಸಂಪ್ರದಾಯದ ಅವೈಧ್ಯನಾಥರ ಶಿಷ್ಯರು. ವೈಧ್ಯಶಾಸ್ತ್ರದಲ್ಲಿ ಅವೈಧ್ಯನಾಥರು ಬಿಟ್ಟರೆ ಇನ್ಯಾರೂ ಇಲ್ಲ ಎನ್ನುವಷ್ಟು ಖ್ಯಾತಿಯನ್ನು ಪಡೆದು ಅನ್ವರ್ಥಕ ನಾಮವನ್ನು ಪಡೆದಿದ್ದಾರೆ. ಈಗಲೂ ಉತ್ತರ ಭಾರತದಲ್ಲಿ ಎಷ್ಟೋ ಜನ ಅವೈಧ್ಯನಾಥರ ಶಿಷ್ಯರಲ್ಲದಿದ್ದರೂ ಹೆಗ್ಗಳಿಕೆಗಾಗಿ ಹೇಳುತ್ತಾರೆ ಎಂದು ಕೇಳಿದ್ದೇನೆ. ವೈಧ್ಯರಾಜ, ಓಷಧೀಶ, ಭಿಷಗ್ರತ್ನ ಎಂದೇ ಬಿರುದಾಂಕಿತ ಅಂತಹಾ ಅವೈಧ್ಯನಾಥರೇ ದಕ್ಷಿಣ ಕನ್ನಡದಲ್ಲಿ ದೈವವಾಗಿ ಪೂಜೆಗೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ಅವರ ತಪಃ ಪ್ರಭಾವವಿದೆ ಎಂದರೆ ಕೇವಲ ವೈಧ್ಯನಾಥನ ಸ್ಮರಣೆ ಮಾತ್ರದಿಂದಲೇ ಸಾವಿರ ರೋಗ ಉಪಶಮನಗೊಳ್ಳುತ್ತದೆ ಎಂದು ತುಳುವಿನ ನುಡಿಗಟ್ಟಿನಲ್ಲಿದೆ ಎಂದು ವೈಧ್ಯನಾಥಾದಿ ಪಂಚದೈವಗಳನ್ನು ಆರಾಧಿಸಿಕೊಂಡು ವೈಧಿಕ ನ್ಯಾಯಶಾಸ್ತ್ರದ ಪ್ರಕಾರ ನ್ಯಾಯ ತೀರ್ಮಾನ ಮಾಡುತ್ತಿರುವ ಗೋಳಿದಡಿ ಗುತ್ತಿನ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟರು ಹೇಳುತ್ತಾರೆ. ಹಿಂದೆಲ್ಲ ವೈಧ್ಯನಾಥರು ಕುದುರೆಯ ಮೇಲೇರಿಕೊಂಡು ಬರುತ್ತಿದ್ದರಂತೆ. ಈಗಲೂ ರೋಗವಿದ್ದಾಗ ಸ್ಮರಿಸಿದವರಿಗೆ ಅದೇ ರೂಪದಲ್ಲಿ ಬಂದು ರೋಗೋಪಶಮನ ಮಾಡುತ್ತಾರೆಂಬ ನಂಬಿಕೆ ಇದೆ. ಅವರಿಂದಲೇ ಮೂಲ ವೈಧ್ಯ ಪದ್ಧತಿಯು ಪುನರುತ್ಥಾನಗೊಂಡು ದಕ್ಷಿಣ ಕನ್ನಡ ಮತ್ತು ಮಲಯ ಪ್ರಾಂತ್ಯದಲ್ಲಿ ಉಳಿದುಕೊಂಡು ಬಂದಿದೆ. ಅವರೆಲ್ಲ ಚರಕಾದಿ ನೂತನ ಗ್ರಂಥಗಳ ಹಿಂದೆ ಹೋಗಲಿಲ್ಲದ ಕಾರಣ ಇನ್ನೂ ಪಾರಂಪರಿಕ ವೈಧ್ಯಪದ್ಧತಿಯಲ್ಲಿ ರೋಗ ನಿದಾನ, ಚಿಕಿತ್ಸೆಗಳು ಫಲಕಾರಿಯಾಗಿವೆ. ಇಡೀ ಪ್ರಪಂಚಕ್ಕೆಲ್ಲ ಒಂದೇ ಆಯುರ್ವೇದ ರೂಪಿಸುತ್ತೇನೆ ಎಂಬುದು ಮೂರ್ಖತನ. ಅಣ್ಣಪ್ಪಯ್ಯರು ಕೂಡ ತಮ್ಮ ಜೀವಿತಾವಧಿಯಲ್ಲಿ ವೈಧ್ಯ ಮನೆತನಗಳನ್ನು ಅಲ್ಲಲ್ಲಿ ನೆಲೆಗೊಳಿಸಿದರು. ಎಲ್ಲರೂ ಸಾತ್ವಿಕ ಆಹಾರ ಮತ್ತು ಜೀವನ ಪದ್ಧತಿಯಿಂದ ರೋಗ ರುಜಿನಗಳನ್ನು ಬರದಂತೆ ತಡೆಯುವ ಮೂಲ ವೈಧ್ಯ ಪದ್ಧತಿಯನ್ನು ಪುನರುತ್ಥಾನ ಮಾಡುತ್ತಾರೆ. ಇಂತಹಾ ಸಾಧಕರ ವೈಧ್ಯ ಪದ್ಧತಿಯನ್ನೇಕೆ ಸುಶ್ರುತ, ಚರಕಾದಿ ನೂತನ ಗ್ರಂಥ ಕರ್ತಾರರು ಉಲ್ಲೇಖಿಸಿಲ್ಲ? ಚಿಂತಿಸಿ! ನಿಮಗೇ ಅರ್ಥವಾಗುತ್ತದೆ. 

        ಪಾಣಾಜೆ ಪಂಡಿತರೆಂದೇ ಪ್ರಖ್ಯಾತ ವೈಧ್ಯ ಮನೆತನದ ಬದನಾಜೆ ಶಂಕರಭಟ್ಟರು ತಮ್ಮಲ್ಲಿ ಸಂಗ್ರಹವಿರುವ ಹಲವಾರು ಹಸ್ತಪ್ರತಿಗಳು, ತಾಳೆಗರಿಗಳನ್ನು ಓದಿದಾಗ ಲಭ್ಯವಿರುವ ಪ್ರಕಟಿತ ಗ್ರಂಥಗಳು ಏನೂ ಸಾಲದು. ವೈಧ್ಯ ಪದ್ಧತಿಯನ್ನು ಇನ್ನೂ ಆಳದಲ್ಲಿ ಜನಪದೀಯವಾಗಿ ಆಯಾಯ ಪ್ರಾಂತೀಯ ಭಾಷೆಗಳಲ್ಲಿ ಉಳಿಸಿಕೊಂಡು ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
 

ಮಾಂಸಾಹಾರದ ಬಗ್ಗೆ ಆಧುನಿಕ ವಿಜ್ಞಾನದ ಸಂಶೋಧನೆಗಳು ಏನು ಹೇಳುತ್ತದೆ?


ಮೊದಲಿಗೆ ಭಾರತೀಯರು ತಿಳಿದುಕೊಳ್ಳಬೇಕಾದದ್ದು ಆಹಾರ ಪದ್ಧತಿಯ ಬಗ್ಗೆ ಗೊಂದಲ ಉಂಟಾಗಿರುವುದಕ್ಕೆ ಕಾರಣ ವಿದೇಶೀ ಬಂಡುಕೋರರು! ಅವರು ಮನುಷ್ಯನ ವಿಕಾಸ ವಾದದಲ್ಲಿ ಆದಿವಾಸಿ ಶಿಲಾಯುಗ ಇತ್ಯಾದಿ ಕಟ್ಟುಕತೆಯಿಂದ ಅಜ್ಞಾನ ಪ್ರಸಾರ ಮಾಡಿದ್ದಾರೆ. ಮಾಂಸಾಹಾರಿ ಕಾರ್ಖಾನೆಗಳಿಂದ ಹಣಕೊಟ್ಟು ಸಂಶೋಧನೆ ಎಂಬ ಹೆಸರಿನಲ್ಲಿ ತಮಗೆ ಬೇಕಾದ್ದನ್ನು ಬರೆಸಿರುತ್ತಾರೆ. ಹಾಗೇ ಅದನ್ನು ಖಂಡಿಸುವ ಪ್ರಕೃತಿ ವಾದಕರು, ಚಿಕಿತ್ಸಕರು, ಸಂಶೋಧಕರೂ ಇದ್ದಾರೆ. 

ಉದಾ:- ಜರ್ಮನಿಯಲ್ಲಿ ಮೊದಲೆಲ್ಲ ದಿನಕ್ಕೆ ೧೨೦ಗ್ರಾಂ ಪ್ರೋಟೀನ್ ಬೇಕೆಂದು ಬರೆಸಿದ್ದರು. ಆಧುನಿಕ ಸಂಶೋಧನೆಯ ಪ್ರಕಾರ ಯುವ ಪೀಳಿಗೆಗೂ ಕೂಡ ದಿನಕ್ಕೆ ೨೦-೩೫ ಗ್ರಾಂ ಪ್ರೋಟೀನ್ ಸಾಕಾಗುತ್ತದೆ ಎಂದಿದೆ. ಜರ್ನಲ್ ಆಫ್ ಕ್ಲೀನಿಕಲ್ ನ್ಯೂಟ್ರೀಷನ್ ಪ್ರಕಾರ ಒಟ್ಟು ಆಹಾರದ ಕ್ಯಾಲೋರಿಯಲ್ಲಿ ೨.೫% ಮಾತ್ರ ಪ್ರೋಟೀನ್ ಇದ್ದರೆ ಸಾಕು. ಅದು ಸರಾಸರಿ ೧೮ಗ್ರಾಂ ಆಗುತ್ತದೆ. ಇನ್ನು W.H.O. ಪ್ರಕಾರ ೪.೫% ಕ್ಯಾಲೋರಿ, ಅಂದರೆ ಸರಾಸರಿ ೩೨ಗ್ರಾಂ ಪ್ರೋಟೀನ್ ದಿನಕ್ಕೆ ಸಾಕು. ಇನ್ನು ತಾಯಿಯ ಹಾಲಿನಲ್ಲಿ ೫% ಕ್ಯಾಲೋರಿಯು ಪ್ರೋಟೀನ್ ಆಗಿರುತ್ತದೆ. ಹಾಗಾಗಿ ಪಾಕಶಾಸ್ತ್ರಬದ್ಧ ಸಸ್ಯಾಹಾರದಲ್ಲಿ ಸಾಕಷ್ಟು ಪ್ರೋಟೀನ್ ಸಿಗುತ್ತದೆ ಎಂದು ೧೯೮೧ರಲ್ಲೇ ಪ್ರಾನ್ಸಿಸ್ ಲಪ್ಪೇ ತಮ್ಮ Diet for a small plant ಪುಸ್ತಕದಲ್ಲಿ ತಿಳಿಸಿದ್ದಾರೆ. ಅವರ ಮುಂದುವರೆದ ಸಂಶೋಧನೆಯ ಪ್ರಕಾರ ಮನುಷ್ಯರು ಸಹಜ ಊಟ ಮಾಡಿದರೆ ಸಾಕು, ಪ್ರೋಟೀನ್ ಸಪ್ಲಿಮೆಂಟರಿ ತೆಗೆದುಕೊಳ್ಳುವುದೇ ಬೇಡ ಎಂದಿದ್ದಾರೆ. ಅಮೇರಿಕನ್ ಡೈಯೇಟಿಕ್ ಅಸೋಸಿಯೇಷನ್ ಪ್ರಕಾರ ಶುದ್ಧ ಸಸ್ಯಾಹಾರೀ ಪದಾರ್ಥಗಳಲ್ಲಿ ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ ಬೇಕಾದ ಪ್ರೋಟೀನ್ ಪ್ರಮಾಣಕ್ಕಿಂತ ದ್ವಿಗುಣವಿರುತ್ತದೆ. ಹಾರ್ವರ್ಡ್ ಸಂಶೋಧಕರ ಪ್ರಕಾರ ಕುರುಕುಲು ತಿಂಡಿಗಳು, ಸಿಹಿ ತಿಂಡಿಗಳ ಅಧಿಕ ಸೇವನೆಯಿಂದ ನೀವು ಸಸ್ಯಾಹಾರಿಗಳಾದರೂ ಪ್ರೋಟೀನ್ ಅಂಶದ ಕೊರತೆಯುಂಟಾಗುತ್ತದೆ. ಬ್ರಿಟೀಷ್ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಪ್ರಕಾರ ಸಸ್ಯಾಹಾರೀ ಪದಾರ್ಥಗಳು ಈಗ ಪ್ರೋಟೀನ್ ಪೂರೈಕೆಯ ಎರಡನೇ ದರ್ಜೆಯವು ಎಂದು ಪರಿಗಣಿಸಲಾಗುವುದಿಲ್ಲ ಎಂದಿದೆ. ಪ್ರತಿಷ್ಠಿತ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಪ್ರಕಾರ ಅಗತ್ಯ ೮ ಅಮೈನೋ ಆಮ್ಲಗಳುಳ್ಳ ಸಂಪೂರ್ಣ ಸಸ್ಯಾಹಾರ ಪ್ರೋಟೀನುಗಳು ಪ್ರಾಣಿಜನ್ಯ ಪ್ರೋಟೀನುಗಳಿಗೆ ಸಮ ಮತ್ತು ಇನ್ನೂ ಅಧಿಕ ದರ್ಜೆಯವು ಎಂದಿದೆ. ಕೆಲ ಹಣ್ಣುಗಳಂತೂ ಸ್ತನ್ಯಪಾನದಷ್ಟೇ ಪ್ರೋಟೀನು ಉಳ್ಳವಾಗಿವೆ ಎಂದಿದೆ. 

ಪ್ಯಾವೋ ಐರೋಲಾ ಪ್ರಕಾರ ಅತೀ ಪ್ರೋಟೀನು ಉಳ್ಳ ಆಹಾರ ಸೇವನೆಯಿಂದ ಸಂಧಿವಾತ, ಪಯ್ಯೋರಿಯಾ, ಸ್ಕಿಜೋಫ್ರೇನಿಯಾ, ಅಪಧಮನಿ ಕಾಠಿಣ್ಯ, ಹೃದಯ ಸಮಸ್ಯೆ, ಕ್ಯಾನ್ಸರ್, ಕಿಡ್ನಿ ಹಾನಿ, ವೃದ್ಧಾಪ್ಯ ಇತ್ಯಾದಿ ಉಂಟಾಗುತ್ತದೆ. ಇನ್ನಿತರೆ ಸಂಶೋಧಕರು ಅಸಹಜ ವಯಸ್ಸಿನಲ್ಲಿ ಬರುವ ವೃದ್ಧಾಪ್ಯಕ್ಕೆ ಮಾಂಸಾಹಾರವೇ ಕಾರಣ ಎನ್ನುತ್ತಾರೆ. ಹಾಗಾಗಿ ನೋಡಿ ಜರಾತುಷ್ಟರು ಸಸ್ಯಾಹಾರದಿಂದಲೇ ಅಗ್ನಿವಿಧ್ಯೆಯನ್ನು ಸಾಧಿಸಿ ಜರೆಗೆ ತುಷ್ಟಿ ನೀಡಿದರು. ಫ್ರ್ಯಾಂಕ್‍ಫರ್ಟ್ ವಿಶ್ವವಿದ್ಯಾಲಯದ ಪ್ಯಾಥೋಲಜಿ ಫ್ರೊಫೇಸರ್ ಡಾ. ಸ್ವಾರ್ಟಜ್ ಅತ್ಯಧಿಕ ಪ್ರೋಟೀನು ಸೇವನೆಯಿಂದ ಎಮಿಲಾಐಡ್ ಎಂಬ ಅಂಶದ ಸಂಗ್ರಹವು ಜೀವಕೋಶಗಳು ಹಾಗೂ ಸಂಪರ್ಕ ಸಾಧನಾ ಅಂಗಾಂಶಗಳಲ್ಲಿ ಸೇರಿ ಅಂಗನಾಶ ಆರಂಭಿಸುತ್ತದೆ. ಹೀಗೆ ಅಜೀರ್ಣಕಾರೀ ಹಾಗೂ ಅತ್ಯಧಿಕ ಪ್ರಮಾಣದಲ್ಲಿರುವ ಮಾಂಸಾಹಾರದ ಪ್ರೋಟೀನುಗಳು ದೊಡ್ಡ ಕರುಳಿನಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತವೆ. ಮಾಂಸಾಹಾರೀ ಅಡುಗೆಯಲ್ಲಿ ಉತ್ಪನ್ನವಾಗುವ ಅಮೋನಿಯಾ ಎಂಬ ಉಪವಸ್ತುವು ನೇರವಾಗಿ ದೇಹಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಅದು ನೇರವಾಗಿ free radical damage ಹಾಗೂ cross-linking (skin aging) ಮುಖೇನ ದೇಹದ ಶಕ್ತಿಯನ್ನು ಕುಂದಿಸುತ್ತದೆ. 

ಅಮೇರಿಕಾದ ಸೇನಾಪಡೆಯಲ್ಲಿ ಅಧಿಕ ಪ್ರೋಟೀನ್ ಉಳ್ಳ ಮಾಂಸಾಹಾರ ಸೇವನೆಯಿಂದ B6 ಹಾಗೂ B3 ಕೊರತೆ ಕಂಡುಬಂದಿದೆ. ಹಾಗೇ ಕ್ಯಾಲ್ಸಿಯಂ, ಕಬ್ಬಿಣ,         ಸತು, ಮ್ಯಗ್ನೀಶಿಯಂ ಇತ್ಯಾದಿ ಅವಶ್ಯ ಧಾತುಗಳನ್ನು ದೇಹದಿಂದ ತೊಲಗಿಸಿ ಕೊರತೆಯುಂಟು ಮಾಡುತ್ತದೆ. ಕಳೆದ ೩೦ ವರ್ಷಗಳಿಂದ ವೆಂಡ್‍ಟ್ಸ್ ಎಂಬ ಸಂಶೋಧನಾ ನಿರತ ವೈದ್ಯರು ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಫೋಟೋಗ್ರಾಫಿ ಮುಖೇನ ಅಧಿಕ ಪ್ರೋಟೀನು ಉಳ್ಳ ಮಾಂಸಾಹಾರದಂತಹವು ಮೂಲ ಪದರಗಳಲ್ಲಿ ಅಡಚಣೆಯುಂಟು ಮಾಡುತ್ತವೆ ಎಂದು ಪ್ರಕಟಿಸಿದ್ದಾರೆ. ಮೂಲ ಪದರಗಳೆಂದರೆ ಲೋಮನಾಳಗಳಿಂದ ಪೋಷಕಾಂಶಗಳು ಹಾಗೂ ಆಮ್ಲಜನಕವನ್ನು ಜೀವಕೋಶಗಳಿಗೆ ಸೋಸಿ ಕಳುಹಿಸುವ ಪದರಗಳಾಗಿವೆ. ಹಾಗೆ ಇವು ಜೀವಕೋಶಗಳಿಂದ ಬರುವ ಕೊಳೆಯನ್ನು ರಕ್ತಕ್ಕೆ ಸೋಸಿ ಕಳುಹಿಸುತ್ತವೆ.  ಹೆಚ್ಚು ಪ್ರೋಟೀನು ಇದ್ದರೆ ಹೆಚ್ಚು ಕಸವು ಮೂಲ ಪದರದಲ್ಲಿ ಉಳಿಯುತ್ತದೆ. ಆಗ ಪದರಗಳು ನಿಷ್ಕ್ರಿಯೆಗೊಳ್ಳುತ್ತಾ ಬರುತ್ತವೆ. ಅದು ಜೀವಕೋಶಗಳಿಗೆ ಅತೀ ಕಡಿಮೆ ಆಮ್ಲಜನಕ ಪೂರೈಕೆ ಮಾಡುವ ಖಾಯಿಲೆ “cellular anoxia” ಹಾಗೂ ಜೀವಕೋಶ ಅಪೌಷ್ಠಿಕತೆ ಉಂಟುಮಾಡುತ್ತದೆ. ತನ್ಮುಖೇನ ಅಧಿಕರಕ್ತದೊಟ್ಟಡ, ಅಥೆರೋಸ್ಕ್ಲೀರೋಸಿಸ್, ಹೃದಯ ರೋಗ, ಪ್ರೌಢ ಮಧುಮೇಹ, ಇತ್ಯಾದಿ ಉಂಟಾಗುತ್ತದೆ.

ಅಮೇರಿಕಾದಲ್ಲಿ ಸರಾಸರಿ ೧/೩ ಮಹಿಳೆಯರಿಗೆ ಮೂಳೆಗೆ ದೊರಕುವ ಖನಿಜಾಂಶ ಕೊರತೆ ಇದೆ. ಅದರಿಂದ ಅವರು ಜೀವನದಲ್ಲಿ ಒಂದಾದರೂ ಮೂಳೆ ಮುರಿತದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಿಂದ ಉಂಟಾಗುವ ರೋಗವೇ ಓಸ್ಟಿಯೋಪೋರೋಸಿಸ್. ಇದರಿಂದ ವರ್ಷಕ್ಕೆ ೨ ಲಕ್ಷಕ್ಕೂ ಹೆಚ್ಚು ಸಾವುಗಳಾಗುತ್ತವೆ. ಹಾಗೇ ಖನಿಜಾಂಶ ಕೊರತೆಯಿಂದ ಮರ್ಷಕ್ಕೆ ೧೦-೨೦ ಲಕ್ಷ ಜನರಿಗೆ ಮೂಳೆ ಮುರಿತ ಉಂಟಾಗುತ್ತದೆ. ಪ್ರಧಾನ ಸಂಶೋಧನೆಗಳ ವೈದ್ಯಕೀಯ ಪುರಾವೆಯು (clinical evidence) ಸಸ್ಯಾಹಾರಿಗಳಿಗೆ ಮೂಳೆ ಮುರಿತ ಕಡಿಮೆ, ಮಾಂಸಾಹಾರಿಗಳಿಗೇ ಹೆಚ್ಚು ಎಂದು ಪ್ರಕಟವಾಗಿದೆ. ಜರ್ನಲ್ ಆಫ್ ಕ್ಲೀನಿಕಲ್ ನ್ಯೂಟ್ರೀಷಿಯನ್ ೧೯೮೩ರಲ್ಲಿ ೬೫ ವಯೋಮಾನದ ಜನರಲ್ಲಿ ದೊಡ್ಡ ಅಧ್ಯಯನ ಮಾಡಿತು. ಅದರ ಫಲಿತಾಂಶ ಇಂತಿದೆ:-

೧. ಮಾಂಸಹಾರಿ ಮಹಿಳೆಯರು ಸರಾಸರಿ ಗಣನೆಗೆ ತೆಗೆದುಕೊಳ್ಳಲು ಶಕ್ಯವಾದ ೩೫% ಮೂಳೆ ನಷ್ಟ ಹೊಂದಿದ್ದರು. ಅದೇ ಸಸ್ಯಹಾರಿ ಮಹಿಳೆಯರಲ್ಲಿ ಕೇವಲ ೭% ಮೂಳೆ ನಷ್ಟ ಕಂಡುಬಂದಿತ್ತು. ಅಂದರೆ ೬೫ ವಯಸ್ಸಿನ  ಮಾಂಸಹಾರಿ ಮಹಿಳೆಯರು ಸಸ್ಯಹಾರಿ ಮಹಿಳೆಯರಿಗಿಂತ ೫ ಪಟ್ಟು ಮೂಳೆ ನಷ್ಟಕ್ಕೆ ಈಡಾಗುತ್ತಾರೆ.

೨. ಮಾಂಸಹಾರಿ ಪುರುಷರಿಗೆ ೧೮% ಮೂಳೆ ನಷ್ಟ ಕಂಡುಬಂದರೆ, ಸಸ್ಯಹಾರಿ ಪುರುಷರಿಗೆ ಕೇವಲ ೩% ಮೂಳೆ ನಷ್ಟ ಕಂಡುಬಂದಿತ್ತು.

೧೯೮೪ರಲ್ಲಿ ಮೆಡಿಕಲ್ ಟ್ರೈಬೂನ್ - ಸಸ್ಯಹಾರಿಗಳ ಮೂಳೆಯು ಮಾಂಸಹಾರಿಗಳ ಮೂಳೆಗಿಂತ ಬಲಿಷ್ಠವಾಗಿರುತ್ತದೆ ಎಂದು ವರದಿ ಮಾಡಿತ್ತು. ೧೯೮೮ರಲ್ಲಿ ೧೬೦೦ ಮಹಿಳೆಯರ ಮೇಲೆ ನಡೆಸಿದ ಅಧ್ಯಯನವನ್ನು ಅಮೇರಿಕಾ ಜರ್ನಲ್ ಆಫ್ ನ್ಯೂಟ್ರೀಷನ್ ಪ್ರಕಟಿಸಿತ್ತು. ಅಲ್ಲಿ ಕನಿಷ್ಠ ೨೦ ವರ್ಷಗಳ ಕಾಲ ಸಸ್ಯಾಹಾರ ಬಳಸುತ್ತಾ ಬಂದಿದ್ದ  ೮೦ ವಯಸ್ಸಿನ ಮಹಿಳೆಯರಲ್ಲಿ ೧೮% ಮೂಳೆ ಸವೆತ ಇದ್ದರೆ ಅದೇ ವಯೋಮಾನದ ಮಾಂಸಹಾರಿ ಮಹಿಳೆಯರಲ್ಲಿ ೩೫% ಮೂಳೆ ನಷ್ಟ ಕಂಡುಬಂದಿತ್ತು.

ಸಂಶೋಧನೆಗಳ ಅಂಬೊಣ ಎಂದರೆ ಕೃತಕವಾಗಿ ಅಧಿಕ ಕ್ಯಾಲ್ಸಿಯಂ ಮಾತ್ರೆ ಪೂರಕತೆಯಿಂದ ಮೂಳೆ ಸವೆತವನ್ನು ತಡೆಯಲಸಾಧ್ಯ!!  ಉದಾ:- ಆಫ್ರಿಕಾದ ರಾಷ್ಟ್ರೀಯ ಡೈರಿ ಕೌಂಸಿಲ್ ಪ್ರಕಾರ ಓರ್ವ ವ್ಯಕ್ತಿಗೆ ದಿನಕ್ಕೆ ೧೨೦೦ಮಿ.ಗ್ರಾಂ ಕ್ಯಾಲ್ಸಿಯಂ ಬೇಕಂತೆ. ಆದರೆ ಬಂಟೂಸ್ ಎಂಬ ಆಫ್ರಿಕಾದ ಬುಡಕಟ್ಟು ಜನಾಂಗದವರ ದೇಹಕ್ಕೆ ದಿನಕ್ಕೆ ೩೫೦ಮಿ.ಗ್ರಾಂ ಕ್ಯಾಲ್ಸಿಯಂ ಪೂರೈಕೆಯಾಗುತ್ತದೆ. ಅಂದರೆ ಇದು ನಿಗಧಿತ ಪ್ರಮಾಣಕ್ಕಿಂತ ೧/೪ರಷ್ಟು ಕಡಿಮೆಯಿದೆ. ಆದರೆ ಬಂಟೂ ಸ್ತ್ರೀಯರಿಗೆ ಯಾವುದೇ ಮೂಳೆ ಮುರಿತವಾಗಲೀ ಓಸ್ಟಿಯೋಪೋರೋಸಿಸ್ ಆಗಲಿ ಬಂದಿರಲಿಲ್ಲ. ಕೆಲವರು ಅದು ಅವರ ವಂಶವಾಹಿ ದೃಢತೆಯ ಕಾರಣ ಎಂದು ಸಮರ್ಥಿಸಲು ಪ್ರಯತ್ನಿಸಿದರು. ಆದರೆ ಅಮೇರಿಕಾದಲ್ಲಿದ್ದು ಅಲ್ಲಿನ ಪ್ರತಿಷ್ಠಾ ದ್ಯೋತಕ ಮಾಂಸಾಹಾರ ತಿನ್ನುತ್ತಿದ್ದ ಅವರ ರಕ್ತ ಸಂಬಂಧಿಗಳಿಗೆ ಮೂಳೆ ಸವೆತ ಇದ್ದ ದಾಖಲೆ ಇದೆ.

ಇನ್ನು ಎಸ್ಕಿಮೋಗಳೆಂಬ ಹಿಂದುಳಿದ ವರ್ಗವು ದಿನಕ್ಕೆ ೨೦೦೦ಮಿ.ಗ್ರಾಂ ಆಹಾರದಲ್ಲಿ ಕ್ಯಾಲ್ಸಿಯಂ ತೆಗೆದುಕೊಳ್ಳುತ್ತಿದ್ದು ಜೊತೆಗೆ ೨೫೦-೪೦೦ ಗ್ರಾಂ ಪ್ರೋಟೀನ್ ಸೇವಿಸುತ್ತಿದ್ದರು. ಅವರಿಗೆ ಅಧಿಕ ಮೂಳೆ ಸವೆತ ಇದ್ದಿತು. ಹಾಗಾಗಿ ಕ್ಯಾಲ್ಸಿಯಂ ಜಾಸ್ತಿ ಇದ್ದರೂ ಕೂಡ ಪ್ರೋಟೀನ್ ಜಾಸ್ತಿಯಾದರೆ ಮೂಳೆ ಅಧೋಗತಿ ಎಂಬುದು ದೃಢಪಡುತ್ತದೆ. ೧೯೮೪ರಲ್ಲಿ ಬ್ರಿಟೀಷ್ ಮೆಡಿಕಲ್ ಜರ್ನಲ್ಲಿನಲ್ಲಿ ವಯಸ್ಸಾಗಿ ಋತುಬಂಧವಾದ ಮಹಿಳೆಯರ ಬಗ್ಗೆ ೨ ವರ್ಷಗಳ ಅಧ್ಯಯನದ ಪ್ರಕಟಣಾ ವರದಿಯ ಒಂದು ಮುಖ್ಯಾಂಶ ಇಂತಿದೆ. ೨೦೦೦ಮಿ.ಗ್ರಾಂ ಕ್ಯಾಲ್ಸಿಯಂ ಪೂರೈಕೆ ಹಾಗೂ ೫೦೦ಮಿ.ಗ್ರಾಂ ಕ್ಯಾಲ್ಸಿಯಂ ಪೂರೈಕೆ ಇವೆರಡರಲ್ಲೂ ಖನಿಜಾಂಶ ಕೊರತೆಯ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ನ್ಯೂ ಇಂಗ್ಲಾಂಡ್ ಜರ್ನಲ್ ಆಫ್ ಮೆಡಿಸಿನ್ ಇವರ ಪ್ರಕಾರವೂ ಕ್ಯಾಲ್ಸಿಯಂ ಮಾತ್ರೆ ಪೂರೈಕೆಯಿಂದ ಕ್ಯಾಲ್ಸಿಯಂ ಕೊರತೆ ಹಾಗೂ ಮೂಳೆ ಸವೆತ ನೀಗುವ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲವಂತೆ. ಹಾಗೆ ಡಾ|| ಹೆಕ್ಟೊರ್ ಡೀಲೂಕ ಎಂಬ ಪ್ರಪಂಚದ ದೊಡ್ಡ ವಿಟಮಿನ್ ಡಿ ಸಂಶೋಧಕ ಹೇಳುತ್ತಾರೆ – ಅತ್ಯಧಿಕ ಕ್ಯಾಲ್ಸಿಯಂ ಪೂರೈಕೆಯಿಂದ ದೇಹದಲ್ಲಿ ವಿಟಮಿನ್ ಡಿ ಹಾರ್ಮೋನು ಉತ್ಪಾದನೆ ನಿಲ್ಲುತ್ತದೆ. ಇದರಿಂದ ಮೂಳೆಯ ಪುನಾರಚನಾ ಕ್ರಿಯೆಯು ಸ್ಥಗಿತಗೊಳ್ಳುತ್ತದೆ. ಅಧಿಕ ಕ್ಯಾಲ್ಸಿಯಂ ಸೇವನೆಯು ಮೂಳೆಯ ತಾಮ್ರ ಮತ್ತು ಸತು ಹೀರುವಿಕೆಯ ಶಕ್ತಿಯನ್ನು ತಗ್ಗಿಸುತ್ತದೆ. ಈ ಲೋಹಗಳು ಮೂಳೆಯ ಚಯಾಪಚಯ ಕ್ರಿಯೆಗೆ ಬಹಳ ಮುಖ್ಯವಾಗಿರುತ್ತದೆ ಎಂಬುದನ್ನ ಮರೆಯಬಾರದು. ಕೇವಲ ೨೦ನಿಮಿಷ ಉದಯ ಸೂರ್ಯಕಿರಣಕ್ಕೆ ಮೈಯೊಡ್ಡಿದ್ದಲ್ಲಿ ದೇಹಕ್ಕೆ ಸಾಕಷ್ಟು ವಿಟಮಿನ್ ಡಿ ಪೂರೈಕೆಯಾಗುತ್ತದೆ.

ವಿಟಮಿನ್ ಸಿ, ಫೋಲಿಕ್ ಆಮ್ಲ, ಪೈರಿಡಾಕ್ಸಿನ್ (ಬಿ೬) ಇವು ಮಾಂಸಾಹಾರಕ್ಕಿಂತ ಸಸ್ಯಾಹಾರದಲ್ಲಿ ಹೆಚ್ಚಿದೆ. ವಿಟಮಿನ್ ಸಿ, ಮೂಳೆ ನಿರ್ಮಾಣ ಹಾಗೂ ಪುನರ್ನಿಮಾಣಕ್ಕೆ ಅತ್ಯಗತ್ಯ.

ಇನ್ನೊಂದು ಮುಖ್ಯ ಖನಿಜವೆಂದರೆ ಸಿಲಿಕಾನ್. ಇದು ಮೂಳೆ ಹಾಗು ಹಲ್ಲಿನ ನಿರ್ಮಾಣ ಹಾಗೂ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಮೂಳೆಗೆ ಬೇಕಾದ ಅತೀ ಮುಖ್ಯ ಸಂಪರ್ಕ ಅಂಗಾಂಶದ ಕ್ರಿಯಾತ್ಮಕ ಪ್ರೋಟೀನಾದ ಕೊಲಾಜೆನ್ ಪ್ರಮಾಣವನ್ನು ಸಿಲಿಕಾನ್ ವೃದ್ಧಿಸುತ್ತದೆ. ತಾಯಿಯ ಹಾಲು, ಕಂದು ಅಕ್ಕಿಯ ನಾರಿನಂಶ, ಹರಿದ್ವರ್ಣದ ಎಲೆಗಳಲ್ಲಿ, ದೊಡ್ಡ ಮೆಣಸಿನಕಾಯಿ, ಅಶ್ವಪುಚ್ಛ ಎಂಬ ಮೂಲಿಕೆ, ಇವು ಸಿಲಿಕಾನ್ ಪೂರೈಸುವ ಸಸ್ಯಾಹಾರಿ ಮೂಲಗಳು. ಅಶ್ವಪುಚ್ಛ ಮೂಲಿಕೆಯು ಯಥೇಚ್ಚ ನೈಸರ್ಗಿಕ ಸಿಲಿಕಾನ್ ಹೊಂದಿದ್ದು ಅಸ್ಥಿ ಸಂಧಾನಕರಣಿ, ನಖ ಪುನರುಜ್ಜೀವನ, ಕೇಶವೃದ್ಧಿ, ಜೀವಶಕ್ತಿ ವೃದ್ಧಿ ಮಾಡುತ್ತದೆ. ಇದು ಕೇವಲ ನೈಸರ್ಗಿಕ ಸಿಲಿಕಾನಿನ ಕೆಲಸವೇ ಹೊರತು ವಿದ್ಯುನ್ಮಾನ ಯಂತ್ರಗಳಲ್ಲಡಗಿರುವ ನೈಸರ್ಗಿಕವಲ್ಲದ ಸಿಲಿಕಾನಿನಿಂದ ಸಾಧ್ಯವಿಲ್ಲ.

ಮೂಳೆಯಲ್ಲಿ ಕ್ಯಾಲ್ಸಿಯಂ ೨೦.೨% ಇದ್ದರೆ, ಮೆಗ್ನೀಷಿಯಮ್ ೦.೧% ಇರುತ್ತದೆ. ಆದರೂ ಮೆಗ್ನೀಷಿಯಂ ಮೂಳೆಗೆ ಕ್ಯಾಲ್ಸಿಯಮ್ಮನ್ನು ಅಂಟು ಹಾಕುವ ಕೆಲಸ ಹಾಗೂ ವಿಟಮಿನ್ ಡಿ ಯನ್ನು ತನ್ನ ಜಾಗೃತ ಹಾರ್ಮೋನ್ ರೂಪಕ್ಕೆ ಪರಿವರ್ತಿಸಲು ಶ್ರಮಿಸುತ್ತದೆ. ಹರಿದ್ವರ್ಣದ ಎಲೆಗಳು, ಪೂರ್ಣ ಧಾನ್ಯಗಳು, ದ್ವಿದಳಧಾನ್ಯಗಳು, ಬೀಜಗಳು, ಬಾದಾಮಿ, ಕಪ್ಪು-ಕಣ್ಣಿನ ಅವರೆಕಾಳು, ಕರಿಬೇವು, ಸಾಸಿವೆ ಪುಡಿ, ಹುರುಳಿ ಕಾಳಿನ ಮೊಳಕೆ, ಬೆಣ್ಣೆ ಹಣ್ಣು, ಸೇಬು, ಜೇನುತುಪ್ಪ, ಗಾಜರು ಗೆಡ್ಡೆ, ಖರ್ಜೂರ, ಬೆಳ್ಳುಳ್ಳಿ, ಕಡಲ ಕಳೆ, ಹಸಿರು ತರಕಾರಿ, ದ್ರಾಕ್ಷಿಹಣ್ಣು, ಇತ್ಯಾದಿಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಹಾಗಾಗಿ ಸಸ್ಯಾಹಾರಿಗಳಿಗೆ ಯಥೇಚ್ಚವಾಗಿ ಮಗ್ನೀಷಿಯಂ ದೊರಕುತ್ತದೆ.

ಮ್ಯಾಂಗನೀಸ್, ತಾಮ್ರ, ಪೊಟಾಷಿಯಂ, ಸ್ಟ್ರೋಂಟಿಯಮ್, ಸತು ಇವು ಮೂಳೆ ಹಾಗೂ ಮೃದ್ವಸ್ಥಿ ರಚನೆಗೆ ಸಹಕರಿಸುವ ಇನ್ನಿತರೆ ಖನಿಜಗಳು. ಮ್ಯಗ್ನೀಷಿಯಂ ಉಳ್ಳ ಸಸ್ಯ ಮೂಲಗಳು ಈ ಖನಿಜಗಳನ್ನೂ ಹೊಂದಿರುತ್ತವೆ.   

ಬೋರಾನ್ ಇದು ಬಹಳ ಕಡಿಮೆ ಚರ್ಚಿತ ಖನಿಜ. ಮೂಳೆಯ ಚಯಾಪಚಯಕ್ಕೆ ಇದರ ಆಂಶಿಕ ಪೂರೈಕೆಯ ಅಗತ್ಯತೆ ಇದೆ. ಇದು ಮೂಳೆ ಸವೆತ ತಡೆಯಲು ಬಲು ಸಹಕಾರಿ. ಇದು ವಿಟಮಿನ್ ಡಿ’ಯ ಜಾಗೃತ ರೂಪದ ಉತ್ಪತ್ತಿಗೆ ಅವಶ್ಯಕ. ೧೯೮೬ರಲ್ಲಿ ನಡೆದ ವಯಸ್ಸಾಗಿ ಋತುಬಂಧ ನಂತರದ ಸ್ತ್ರೀಯರಿಗೆ ದಿನಕ್ಕೆ ೩ಮಿ.ಗ್ರಾಂ ಬೋರಾನ್ ಕೊಡುವುದರಿಂದ ಮೂತ್ರದ ಮುಖೇನ ನಷ್ಟವಾಗುತ್ತಿದ್ದ ೪೪% ಕ್ಯಾಲ್ಸಿಯಮ್ಮನ್ನು ಉಳಿಸಲಾಯಿತು. ಇದು ನೈಸರ್ಗಿಕ ಮದಜನಕ (ಈಸ್ಟ್ರೋಜೆನ್) ಹಾರ್ಮೋನುಗಳಲ್ಲಿ ರಕ್ತಸಾರ (ಸಿರಮ್) ಕೇಂದ್ರೀಕರಣವನ್ನು ವೃದ್ಧಿಸಿತು. ಕೊರತೆಯುಳ್ಳ ಮಹಿಳೆಯರಲ್ಲಿ ಬೋರಾನು ಉಪಯೋಗದಿಂದ ರಕ್ತದ ೧೭೮-ಈಸ್ಟ್ರಾಡೈಲ್ ಹಂತಗಳನ್ನು ಸದೃಢ ಮಹಿಳೆಯರಷ್ಟು ಹಾಗೂ ಈಸ್ಟ್ರೋಜನ್ ಬದಲೀಕರಣ ಚಿಕಿತ್ಸೆ ನಡೆಸಿಕೊಂಡ ಮಹಿಳೆಯರಷ್ಟೇ ಏರಿಸಿತು. ಈ ಸಹಜ ವಿಧಾನವು ಮೂಳೆ ನಷ್ಟವನ್ನೂ ತಡೆಯುತ್ತದೆ. ಆದರೆ ಕೃತಕ ಈಸ್ಟ್ರೋಜೆನ್ ಥೆರಪಿಯು ಎಂಡೋಮೆಟ್ರಿಯಲ್ ಕ್ಯಾನ್ಸರಿಗೆ ಬಲಿಯಾಗಿಸುತ್ತದೆ ಎಂದು ೧೯೮೪ರಲ್ಲಿ ನಡೆದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕನ್ಸೆನ್ಸಸ್ ಡೆವಲಪ್ಮೆಂಟ್ ಕಾನ್ಫರೆನ್ಸ್ ಆನ್ ಓಸ್ಟಿಯೋಪೋರೋಸಿಸ್ ಇದರಲ್ಲಿ ದಾಖಲಾಗಿದೆ. ಹಾಗೆ ಋತುಬಂಧ ಮಾಡಿಸುವ ಈಸ್ಟ್ರೋಜೆನುಗಳ ಬಳಕೆಯಿಂದ ನೇರವಾಗಿ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂದು ಏಪ್ರಿಲ್ ೧೯೯೧ರ ಜರ್ನಲ್ ಆಫ್ ಧ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಸಂಚಿಕೆಯಲ್ಲಿ ಲೇಖನವೇ ಬಂದಿದೆ. ಇನ್ನೊಂದು ಹಬ್ಬಿದ ಸುದ್ದಿ ಎಂದರೆ ಈಸ್ಟ್ರೋಜೆನ್ ಥೆರಪಿ ಮಾಡಿಸಿಕೊಳ್ಳದಿದ್ದರೆ ಪೃಷ್ಠದ ಮೂಳೆ ಮುರಿತ ಉಂಟಾಗುತ್ತದೆ. ಆದರೆ ಇದು ಸುಳ್ಳೆಂದು ೧೯೮೪ರ ಜರ್ನಲ್ ಆಫ್ ಧ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ನಿನ ೧೪ ವರ್ಷದ ಸಂಶೋಧನಾ ವರದಿ ಹೇಳಿದೆ. 

ಎರಡು ಮುಖ್ಯ ಬೋರಾನ್ ಮೂಲಗಳೆಂದರೆ ಸಮುದ್ರ ಸಸ್ಯಗಳು (ಕೆಲ್ಪ್) ಹಾಗೂ ಕುದುರೆ ಮೇವಿನ ಸೊಪ್ಪು (ಅಲ್ಫಾಲ್ಫಾ) ಇವುಗಳಲ್ಲಿ ಹೇರಳವಾಗಿದೆ. ಇನ್ನು ಪಾಲಾಕು, ಕ್ಷಿಪ್ರ ಅವರೆಕಾಳು, ಹೂಕೋಸು, ತರಕಾರೆ ಸೊಪ್ಪು (ಲೆಟಿಸ್), ಸೇಬು, ಹರಿದ್ವರ್ಣದ ಎಲೆ, ದ್ವಿದಳ ಧಾನ್ಯಗಳ (ಲೆಗ್ಯೂಮ್), ಇತ್ಯಾದಿಗಳಲ್ಲಿ ಬೋರಾನ್ ಪೂರೈಕೆಯಾಗುತ್ತದೆ. ನಿಮ್ಮ ಕೈದೋಟದಲ್ಲಿ ಬೋರಾಕ್ಸ್ ಬಳಕೆ ಮಾಡಿ ಬೋರಾನ್ ಪ್ರಮಾಣ ಸ್ವಲ್ಪ ಹೆಚ್ಚಿಸಬಹುದು ಎನ್ನುತ್ತಾರೆ. ಕೆಲ ಪ್ರದೇಶಗಳಲ್ಲಿ ಸಹಜವಾಗಿ ಆಗುವ ೧೩ಪಟ್ಟು ಅಧಿಕ ಬೋರಾನ್ ಬಳಕೆಯು ಆರೋಗ್ಯದ ಮೇಲೆ ಯಾವ ದುಷ್ಪರಿಣಾಮವನ್ನೂ ಮಾಡಿಲ್ಲ ಎಂದು ಸಂಶೋಧನೆಯೊಂದು ವರದಿ ಮಾಡಿದೆ. 

ಹೀಗೆ ಸಸ್ಯಾಹಾರಿ ಪದ್ಧತಿಯಿಂದ ಮಾತ್ರ ನಿಗಧಿತ ಪ್ರಮಾಣದ ಖನಿಜಾಂಶಗಳು ದೇಹಕ್ಕೆ ಸೇರಿ ಮುಖ್ಯವಾಗಿ ಅಸ್ಥಿ ದೃಢತೆ, ತನ್ಮುಖೇನ ಶುದ್ಧ ರಕ್ತ, ಮಾಂಸಬಲ, ಸ್ನಾಯುಬಲ, ಇತ್ಯಾದಿ ವೃದ್ಧಿಸಿ ಆರೋಗ್ಯ, ದೀರ್ಘಾಯು ಕೊಡುತ್ತದೆ. ಮಾಂಸಾಹಾರದಿಂದ ಮೂಳೆಯಲ್ಲಿ ದೋಷ ಅಂದರೆ ಅಸ್ಥಿಗತ ಪಾಪ ಸಂಚಯನವಾಗುತ್ತದೆ. ಒಂದು ಅಧ್ಯಯನವಂತೂ ನಿಯಮಿತ ವ್ಯಾಯಾಮದೊಂದಿಗಿದ್ದ ಸಸ್ಯಾಹಾರಿ ಮಹಿಳೆಯರಲ್ಲಿ ೭೦ ವರ್ಷದ ನಂತರ ಮೂಳೆ ನಷ್ಟವಾಗುವುದೇ ನಿಂತುಬಿಡುತ್ತದೆ ಎಂದಿದೆ.  ಗುರುತ್ವ ವಿರುದ್ಧ ಆಸನಗಳು ಇದಕ್ಕೆಲ್ಲ ಸಹಕಾರಿ. ಅದಕ್ಕಾಗಿ ಬರೆಗಾಲಿನಲ್ಲಿ ನಡೆಯುವುದು, ಮೇಲ್ಭುಜ ತಿರುಗಣೆ, ಕೈಗೆ ವ್ಯಾಯಾಮ, ಬಸ್ಕಿ, ದಿನಕ್ಕೆ ೩ ಗಂಟೆಯಾದರೂ ನಿಲ್ಲುವ ಭಂಗಿ ಇರುವಂತೆ ಪ್ರಯತ್ನ, ಹಾಗೇ ವಾರಕ್ಕೆ ೫ ದಿನ ೨೦ ನಿಮಿಷ ಗುರುತ್ವ-ವಿರುದ್ಧ ವ್ಯಾಯಾಮ ಮಾಡುವುದು ಒಳಿತೆಂದು ಡಾ. ಬೆಟ್ಟಿ ಕಮೆನ್ ಎಂಬುವರು ತಮ್ಮ ಓಸ್ಟಿಯೋಪೊರೋಸಿನ್ ಹೊತ್ತಿಗೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಮಾಂಸಭಕ್ಷಣೆ ಸಾವಿಗೆ ದೇಹದ ಸಂತರ್ಪಣೆ. ಹಿತಮಿತ ಸಸ್ಯಹಾರಿ ಜೀವನ ಶೈಲಿಯು ಕ್ಯಾಲ್ಸಿಯಂ ಸಮತೋಲನ ಕಾಯುತ್ತದೆ.
 

ಇನ್ನಷ್ಟು ಪುರಾವೆಗಳು ಹಾಗೂ ವಿಶ್ಲೇಷಣೆಗಳು:-


ಮಾನವರು ಬ್ರಹ್ಮನಿಂದ ನೇರ ಸೃಷ್ಠಿ ಎಂದು ಪುರಾಣಗಳು ಸಾರಿ ಹೇಳುತ್ತಿವೆ. ಜನ್ಮತಃ ಸಕಲ ಜ್ಞಾನ ಹೊಂದಿದ್ದ ಬ್ರಹ್ಮನ ಮಾನಸ ರೂಪೀ ಋಷಿಗಳೇ ಸ್ವಾಯಂಭುವ ಮನ್ವಂತರದಲ್ಲಿ ಇದ್ದವರು. ಅವರೆಲ್ಲ ತಪಸ್ಸು ಮಾಡಿ ಒಟ್ಟಿಗೇ ಮುಕ್ತಿಯನ್ನು ಪಡೆದರು ಎಂದಿದೆಯೇ ಹೊರತು ಆಧುನಿಕ ವಿಕಾಸವಾದ ಹೇಳುವಂತೆ ಮಾಂಸಾಹಾರ ಮಾಡುತ್ತಾ ಆದಿವಾಸಿ ಶಿಲಾಯುಗದ ಮಾನವರಾಗಿರಲಿಲ್ಲ. ನಮ್ಮ ಸಂಸ್ಕೃತ ಅಧ್ಯಾಪಕರಾಗಿರುವ ಶ್ರೀಯುತ ನಾಗೇಶ್ ಅಡಿಗರಿಗೆ ಇದರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆಂದರು – “ಒಂದು ವೇಳೆ ಮಾನವರು ಶಿಲಾಯುಗದಲ್ಲಿ ಅಜ್ಞಾನಿಗಳಾಗಿದ್ದರೂ ಹೊಟ್ಟೆ ಹಸಿದಾಗ ಕಲ್ಲು ಹರಿತಗೊಳಿಸಿ ಕಷ್ಟಪಟ್ಟು ಭೇಟೆಯಾಡಿ ತಿನ್ನುವ ಹೋರಾಟ ಮಾಡಿರಲಿಕ್ಕಿಲ್ಲ. ಅಲ್ಲಲ್ಲೆ ಸಿಕ್ಕುವ ಹೇರಳವಾದ ಗೆಡ್ಡೆ, ಗೆಣಸು, ಹಣ್ಣು, ಹಂಪಲಗಳನ್ನು ಸುಲಭವಾಗಿ ಬಳಸಿಕೊಂಡಿರಬಹುದಲ್ಲವೇ?” ಎಂಬ ತಾರ್ಕಿಕ ಉತ್ತರವನ್ನು ನೀಡಿದರು. ಇದು ವಿದೇಶೀ ವಿಕಾಸವಾದಕ್ಕೆ ನುಂಗಲಾಗದ ತುತ್ತು. ಮನುಷ್ಯನಿಗೆ ಸುಲಭವಾಗಿ ಸಸ್ಯೋತ್ಪನ್ನಗಳು ಸಿಗುತ್ತಿರುವಾಗ ಅವನೇಕೆ ತಿನ್ನುವುದಕ್ಕಾಗಿ ಶಸ್ತ್ರಗಳ ತಯಾರಿಕೆ, ಆಹಾರಕ್ಕಾಗಿ ಭೇಟೆಯ ಅನಿವಾರ್ಯತೆಯನ್ನು ಹೊಂದಲು ಸಾಧ್ಯ? ಅನಿವಾರ್ಯತೆಯೇ ಸಂಶೋಧನೆಗೆ ತಳಹದಿ ಎಂಬುದನ್ನು ನೆನಪಿಡಬೇಕು. ಅನಿವಾರ್ಯತೆಯೇ ಇಲ್ಲದಿದ್ದಾಗ ಆದಿಮಾನವ ತಿನ್ನುವುದಕ್ಕಾಗಿ ಭೇಟೆಯಾಡಲು ಹೋದನೆಂಬುದು ದೊಡ್ಡ ಕಟ್ಟುಕತೆ. ಈಗಿನ ಕಾಲದಲ್ಲಿ ಋಷಿಪರಂಪರೆ ಎಂದರೇನೆಂದೇ ತಿಳಿಯದಾಗಿದೆ. ಅದನ್ನು ಅರ್ಥಮಾಡಿಕೊಳ್ಳಲು ಸ್ವಾಮೀಜಿಯವರ “ನಮ್ಮ ಋಷಿ ಪರಂಪರೆ” ಲೇಖನ ಮಾಲೆಯನ್ನು ನೂರಾರು ಬಾರಿ ಓದಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ದಶಲಕ್ಷಣೋಪೇತ ಪುರಾಣ ಅಧ್ಯಯನ ಮಾಡಿದರೆ ಸತ್ಯತೆ ಅರ್ಥವಾದೀತು.    

ಇನ್ನು ಸಿರಿಭೂವಲಯದಲ್ಲಿ ಅಗಾಧವಾಗಿ ೬೫೦೨೧೨೫೨೮೦೦೨೫೪೪೦೦೦೦೦೦ ಎಂಬ ಸೂತ್ರಾಂಕದಿಂದ ೩ ಕೋಟಿ ಪದಗಳಲ್ಲಿ “ಪ್ರಾಣಾವಾಯ” ಎಂಬ ವೈಧ್ಯಾಗಮವನ್ನು ವಿವರಿಸಲಾಗಿದೆ. ಅದರ ಕೆಲವು ಪದ್ಯಗಳನ್ನು ಓದಿ, ಮಥಿಸಿ ಅರ್ಥಮಾಡಿಕೊಳ್ಳಿರಿ:-

ನಮಿನೆಮಿಯು ಪಾರ್ಶ್ವ ಜಿನರತ್ನತ್ರಯರು | ವಿಮಲವ ಕುಲಶೃಂಗದಾರು |
ಕ್ರಮದ ವೃಕ್ಷಮೂಲದೊಳು ತಪಗೈದಿದ್ದ | ಕ್ರಮದ ಭೂವಲಯಕೆ ನಮಿಪೆ ||||

ಮನದೋಷಕೆ ಸಿದ್ಧಾನ್ತದ ಶಾಸ್ತ್ರವು | ತನುವಿಗೆ ಪ್ರಾಣಾವಾಯ |
ದನುಪಮ ವಚನ ದೋಷಕೆ ಶಬ್ದ ವರ್ | -ಧನಸಿದ್ಧಾಂತವನರುಹಿ||||

ಶ್ರೀವರ್ಧಮಾನ ಜಿನೇಂದ್ರನ ವಾಣಿಯ | ಸೇವಿಸಿಗೌತಮ ಋಷಿಯು |
ಭೂವಲಯದಿ ಸಿದ್ಧಾಂತಕಳೈದಕೆ | ಕಾವೆಂಬ ಹನ್ನೆರಡಂಗ |||| 

-ವನುಪೇಳೆ, ಮುಂದಕೆಶ್ರುತ ಕೇವಲಿಗಳು | ಜಿನವಾಣಿಯನು ಹದಿನಾಲ್ಕು |
ಘನಪೂರ್ವೆಗಳಲಿ ಕಟ್ಟಿರಿಸಿದಾ ಪೂರ್ವೆಯೊಳ್ | ಜನರ ಜೀವನಕೊಂದು ಪೂರ್ವೆ |||| 

ರಮಣೀಯವಾದೊಂದು ಪ್ರಾಣಾವಾಯದ | ಕ್ರಮದೊಳು ಹದಿಮೂರುಕೋಟಿ |
ಕ್ರಮವಾದ ಸಿದ್ಧಾಂತ ಲೆಕ್ಕದ ಪದದಲಿ | ಶ್ರಮಹಾರಿಯಾಯುರ್ವೇದವ ||||

ಧರ್ಮಸಾಂರಾಜ್ಯವಾದೀ ವೇದಾಂಕವು | ಕರ್ಮಜಾಡ್ಯಗಳ ಕೊಲ್ಲುವುದು |
ನಿರ್ಮಲವಹ ಮಧ್ಯಮ ಪದದಿಂದಲಿ | ಶ್ರಮರು ಗುಣಿಸಿದಕ್ಷರ ದಶ |||| 

ಮಾಲೆಯ ಸೊನ್ನೆಗಳಾರಂಕದ ಹಿಂದೆ | ಸಾಲಿನೊಳ್‌ ನಾಲ್‌ ನಾಲ್ಕೈದೆರಡಂ |
ಮೇಲೆ ಸೊನ್ನೆಯು ಸೊನ್ನೆ ಎಂಟೆರಡೈದು | ನೂಲಂತೆ ಬಂದೆರಡೋಂದೆರಡಾ |||

ನಾಲಗೆ ಲೇಪ ಹಚ್ಚುವಾಕ್ಷರ ವೈದ್ಯ | ಸಾಲಂಕ ಸರದ ಪಾದರಸ |
ಪೋಲಾಗದಂದತದ ಹೂವಿನಿಂದರೆದಾಗ | ಲೀಲೆಯಿಂದಿಷ್ಟು ಚಿದ್ರಗಳು |||

ಯಶವಾಗಿ ಓಂದರೊಳೊಂದಕೆ ಬೆರೆಯದೆ | ಹೊಸಪುಟದೊಳು ಭಸ್ಮವಾಗಿ |
ಕುಸುಮಾಯುರ್ವೇದದ ಮಹಿಮೆಯ ಸಾರುವ | ಅಸದೃಶ ಕಾವ್ಯ ಭೂವಲಯಾ ||||

ನಿತ್ಯಯವ್ವನವಿತ್ತು ವೀರ್ಯರಕ್ಷಣೆಮಾಳ್ಪ | ಅಕ್ಷರಾಂಕದ ಸಿದ್ಧರಸದ ರಕ್ಷಣೆ |
ಕಾವ್ಯದೊಳೆಂಟು ಭೇಷಜಮಷ್ಟಧಾಷಜ | ರಿದ್ಧಿಯಕ್ಷಿಯ ಪ್ರಾಣರಕ್ಷಣೆಯ ||೧೦|

ರಸಪಕ್ವವಾಗಲು ಪುಷ್ಪದ | ರಸದಿಂದ ಹೊಸ ಸಿದ್ಧರಸವಾದಂತೆ |
ಹೊಸ ವೈದ್ಯದಾನದ ಫಲದಿಂದಾತ್ಮಗೆ | ಹೊಸದೇಹಪ್ರಾಪ್ತವಾಗುವುದು ||೧೧||

ಧೂಳಿಧೂಸರಿತವಾಗಿಹ ಮುನಿಯದೇಹದ | ಧೂಳಿನ ಸ್ಪರ್ಶನವಾಗೆ |
ಹಾಳಾದ ಮಹಮಹಾವ್ಯಾಧಿಯ ರಿದ್ಧಿಗೆ | ಹೇಳುವ ರಾಮೌಷಧರ್‌ಧಿಂ ||೧೨|

ತಮ್ಮ ಬಾಯಿಯ ಎಂಜಲುಗಳಲು | ಉಮ್ಮುವ ಸೇಚನೆಯಿಂದ |
ನಮ್ಮವ್ಯಾಧಿಗಳೆಲ್ಲ ಉಪಶಮವಪ್ಪುದು | ಹಮ್ಮೆಕ್ಷವೇಳೌಷಧರ್ಧಿಯರ ||೧೩|

ಕನುಗವ ಬೆವರಿನಿಂ ಹುಟ್ಟುವ ಮಲದಿಂದ | ಕೊನೆಕಾಲದ ರೋಗವಡಗೆ |
ಜಿನಮುನಿಗಳ ರಿದ್ಧಿಯನು ಝಲೌಷಧಿ | ಎನುವರಾಗಮ ಕೋವಿದರ್‌ ||೧೪|

ಲೀಲೆಯಿಂ ಕಿವಿದಂತ ನಾಸಿಕ ಕಣ್ಣಿನ | ಮಾಲೆಗಳಿಂ ಬಂದ |
ಮಲದಿಂದ ರಿದ್ಧಿಯುಂಟಾಗೆ ಪೇಳು | ಮಲೌಷಧರ್ಧಿಯ ಸಮ್ ||೧೫||

ಲಾಲಿತ್ಯ ಕಾವ್ಯ ನಾಲಿಗೆಯಿಂದ ಬರುವಂತೆ | ಸಾಲಾದ ಮಲ ಮೂತ್ರಾದಿಗಳ |
ಪಾಲೆಲ್ಲ ದಿವ್ಯೌಷಧವಪ್ಪ ದೇಹದ | ಹೇಲುಚ್ಚೆಷಷ್ಟೌಷಧರ್ಧಿನಮ್ ||೧೬|

ತನುವಿನ ಸ್ಪರ್ಶದ ಗಾಳಿಯು ಸೋಕಲು | ತನುವಿನ ವ್ಯಾಧಿಗಳೆಲ್ಲ | 
ಕೊನೆಯಾಗಿ ನಿರೋಗವಾಗುವ ರಿದ್ಧಿಯ | ಜನನ ಸರ್ವೌಷಧರ್ಧಿ ಸನಾ ||೧೭|

ಮನವ ಸೋಂಕಿದ ಕಾಲಕೂಟವಮೃತವಪ್ಪ | ಜಿನಮತದಂತಿರ್ಪ ರಿದ್ಧಿ |
ಮುನಿಯ ಮುಖವ ಸಾರ್ದ ವಿಷವಮೃತವದಾಗೆ | ತನು ಆಸ್ಯಾವಿಷರ್ಧಿಯ ||೧೮||

ನೇರದೃಷ್ಟಿ ಬೀಳಲು ವಿಷದಮೃತ | ಸಾರವಾಗುವ ರಿದ್ಧಿಯದು |
ಸೇರಿದ ಮುನಿಯ ದೃಷ್ಟಿಯು ವಿಷವಮೃತ | ಸಾರವದೃಷ್ಟಿವಿಷರ್ರ್ದಿ ||೧೯||

ಚಿತ್ರ ವಿಚಿತ್ರವಾದೌಷಧರ್ಧಿಗಳೆಂಟು | ಹತ್ರಕೆ ಬಂದು ಸಾರಿರುವ |
ಚಿತ್ರವಲ್ಲಿಯೆ ಮೊದಲಾದ ಮೂಲಿಕೆಗಳಂ | ಸೂತ್ರಿಸಿ ಗ್ರಂಥಕೆ ತನುತಾಮ್ ||೨೦||

ತತ್‌ಕ್ಷಣ ಹದಿನೆಂಟು ಸಾವಿರ ಶ್ಲೋಕದ | ಸೂತ್ರವೈದ್ಯಾಂಕ ಕ್ರಮದಿ |
ಚಿತ್ರಿಸಿಹ ಹದಿನೆಂಟುಸಾವಿರ ಜಾತಿಯ | ಉತ್ತಮ ಹೂವಿನಿಮ್‌ ರಸಗಿಮ್ ||೨೧||

ರಸವನು ಹೂವಿನಿಮ್‌ ಮರ್ಧಿಸಿ ಪುಟವಿಟ್ಟು | ಹೊಸರಸ ಘುಟಿಕೆಯಕಟ್ಟಿ |
ರಸಸಿದ್ಧಿಯಾಗೆ ಸಿದ್ಧಾಂತ ರಸಾಯನ | ಹೊಸಕಲ್ಪಸೂತ್ರ ವೈದ್ಯಯುವದ ||೨೨|

ವಶಗೊಳಿಸಿದ ಶ್ರೀಸಮಂತ ಭದ್ರಾಚಾರ್ಯ | ಋಷಿಯು ಪ್ರಾಣಾವಾಯದಿಂದ |
ಹೊಸೆದ ಕಾವ್ಯವು ಚರಕಾದಿಗಳರಿಯದ | ಅಸದೃಷವೈದ್ಯಾಗಮಕರು ||೨೩|

ಲಲಿತಾಯುರ್ವೇದವೆಲ್ಲವು ಹುಟ್ಟಿತಿಲ್ಲಿಂದ | ಇಳೆಯವರೆಲ್ಲವಿಲ್ಲಿಂದ |
ಬಳಸುತಜೀವಹಿಂಸೆಯ ಸೇರಿಸಿತಂದ | ಖಳರಕಾವ್ಯಕೆ ಧಿಹ್ಕಾರ ||೨೪|

ಲೀಲೆಯಾಯುರ್ವೇದ ಶಬ್ದವ  ಭಗವಂತ | ಸಾಲಿನಿಮ್‌ ಪ್ರಾಣವಾಯ |
ಶೀಲವೆಂದರೆ ಜೀವರಕ್ಷೆಯೆಂದೊರೆದಿರೆ | ಪಾಲಿಸಬೇಡವೆ ದಯನೇ||೨೫|

ಕಲಿತ ಜೀವರ ಕಾಯ್ವ ಕಲಿಯದವರ ಕೊಲ್ವ | ಬಲವಂತ ಚರಕನ ಮತಮಮ್ |
ಗೆಲುತಲಹಿಂಸಾಯುರ್ವೇದವ ರಕ್ಷಿಪ | ಬಲವೆ ಪ್ರಾಣವಾಯವದಿ ||೨೬|

ಥಾವರ ಜೀವರ ಕೊಲ್ಲುವುದರಿಂದಲೇ | ತಾವು ಪಾಪವ ಹೊಂದುವರೆಂ |
ಬಾ ವೀರವಾಣಿಯ ನೆನೆಯದೆ ಹಿಂಸೆಯ | ಭಾವನೆಗಿಹುದು ಧಿಹ್ಕಾರ ||೨೭|

ಕರುಣೆಯು ಸರ್ವಜೀವರ ಮೇಲಿರಬೇಕು | ದೊರೆಯುವುದಾಗೌಷಧರ್ದಿ |
ಇರುವೆಂಟು ಸಿದ್ಧಸಮಂತ ಭಧ್ರಾರ್ಯನ | ಚರಣಕೆ ನಮಿಸಿದರಹುದಿ ||೨೮|

ಖ್ಯಾತಿ ಪೂಜಾ ಲಾಭದಾಶೆಯಿಮ್‌ ಚರಕಾದಿ | ನೂತನಗ್ರಂಥ ಕರ್ತಾರರ್ |
ಪ್ರೀತಿಯಿಂ ಹಿಂಸೆಯ ಪೊರೆಯಲು ರಸವಿದ್ಯೆ | ಯಾತಕೆ ಸಿದ್ಧಿಯಾಗುವನಮ್||೨೯||

ನತಮಸ್ತಕವಾಗಿ ಗಿಡದೊಳು ಕುಳಿತಿರ್ದ | ನುತ ಮೂಲಿಕೆಗಳ ಹೂವಮ್ |
ಹತಿಸಲಹಿಂಸೆಯವ್ರತದೊಂದಿಗೆ ದಿವ್ಯ | ಕ್ಷಿತಿಯ ಸಿದ್ಧೌಷಧ ಬಹುಸನಾ||೩೦|

ಮರ್ಮದ ವಿದ್ಯೆ ಇದನ್ಯರ್ಗೆ ದೊರೆಯಲು | ಕರ್ಮದ ಯಜ್ಞ ಹಿಂಸೆಯದು | [ಯಜ್ಞದಲ್ಲಿ ಪಶು ಬಲಿ ಖಂಡನೆ]
ಧರ್ಮವಾಗುವುದೆಂದು ಪೇಳ್ವನೆ ಜಿನದೇವ | ನಿರ್ಮಿಸಿದಾಯುರ್ವೇದ ಜಲ ||೩೧||  

ಪೂರ್ವಾರ್ಜಿತತ್‌ಪೀಡನ ರೋಗವೆಲ್ಲವ | ಸಾರ್ವಜನಿಕರೆಲ್ಲ ಕಳೆದು |
ನಿರ್ವಾಣ ಸುಖವ ಸಾಧಿಸಿರೆಂದು ಪೇಳ್ದುದಮ್ | ಸಾರ್ವಂಗೆ ಸುಖಸಿದ್ಧಿಯಹ ||೩೨|

ಜಯಿಸಿರಿ ಕರ್ಮವಹಿಂಸೆಯಮಾರ್ಗದಿ | ಜಯಸಿದ್ಧಿಯಪ್ಪುದು ರಸದ |
ಜಯವಾಗೆ ದೇಹಲೋಹಗಳ ಸೌಭಾಗ್ಯದ | ಜಯಲಾಭವಹುದೆಲ್ಲರಸಾಮ್ ||೩೩|

ಯಜ್ಞದಪಶುಹಿಂಸೆ ಅಜ್ಞರಾಯುರ್ವೇದ | ಅಜ್ಞರಮಾರಿಯ ಬಲಿಯಿಮ್ |
ಸುಜ್ಞರು ಪಾಪವೆಂದರಿದು ತ್ಯಾಗವಮಾಡಿ | ಅಜ್ಞತೆಯಂ ಪರಿಹರಿಕುಂ ||೩೪|

ಪಾಪಪುಣ್ಯಗಳ ವಿವೇಚನೆಯಿಂದಿರ್ದು | ಪಾಪಮಾರ್ಗವು ಹಿಂಸೆಯೆಂದು |
ಆಪತ್ತುಂಬಹುದೆಂದು ಬಿಟ್ಟು ಹಿಂಸೆಯ | ಶ್ರೀಪದ್ಧತಿಯ ವೈದ್ಯವನಮ್ ||೩೫|

ದೇವರು ಗುರು ಶಾಸ್ತ್ರ ಶರಣೆಂದು ನಂಬುತ | ನೀವುಗಳ್‌ ಕಲಿಯಲು ಬರಲು |
ನಾವು ಪುಷ್ಪಾಯುರ್ವೇದ ಮರ್ಮವ ಪೇಳಿ | ಸಾವು ಹುಟ್ಟಡಗುವತರ ||೩೬|

ನಮ್ಮವರೆಲ್ಲರ್ಗೆ ಕಲಿಸುವೆವದರಿಂದ | ಸಮ್ಮೋದದಿಂದಲಿ ಬಂದು |
ಬೆಮ್ಮೆಯ ಸ್ವರ್ಣವದಂ ರಸವಾದವ | ನೆಮ್ಮಿಸೌಖ್ಯವ ಸಾಧಿಸಿರಿ ||೩೭|

ಭಾರತದೇಶದ ಭಾಗ್ಯವಹಿಂಸೆಯ | ಸಾರುವ ಹೂವಿನ ವೈದ್ಯ |
ಸಾರಸಂಗ್ರಹವನು ಶ್ರೀಪೂಜ್ಯಪಾದಚಾರ್ಯರ್ | ಸಾರಕಲ್ಯಾನಕಾರಕ ವರ್ ||೩೮|

ಷಿದುಗತೌಷಿದು ಸಮ್ರಾಧ್ಧವ್‌ ಸೂತ್ರದ | ಹದವನ್ನರಿತು ಭೂವಲಯ |
ಕದವು ಮೋಕ್ಷದ ದಾರಿಯಮ್ | ಸಿದ್ಧರಸದಿಂದೊದಗಿಸಿ ಕಾವ್ಯಕವಿನಿ ||೩೯|

ತರುವದು ಮಂಗಲಮಯ ಸಿದ್ಧರಸ ಕಾವ್ಯ | ಅರುಹನಾಗಮ ಗ್ರಂಥ |
ಬರೆದಕಾವ್ಯವ ಕೇಳಿ ಹಿಂಸೆಯ ತ್ಯಜಿಸಿರಿ | ಸರುವಸಂಪದವೆಲ್ಲ ತರುವ ||೪೦|

ನಿರ್ಮಲ ಮನ ವಚನವು ಕಾಯ ತ್ರಿಕರಣ ಮಮ ಶುದ್ಧಿಯ ಜಿನವೈದ್ಯ ಹದಿನೆಂಟು |
ನೂರಕೊನೆಗಿಪ್ಪತ್ತೇಳಂಕವಿರುವ ಶ್ರೀಭೂವಲಯಕೆ ಘನಭಕ್ತಿಯಿಂದೆರಗುವೆನುಮ್ ||೪೧||

ಚಿರಕಾಲ ನಮಸ್ಕಾರಕೆ ಬರುವ ಕೈಮುಗಿದಿಹ ಮನದರ್ತಿಯತಿಶಯ ಬನಯ ಏನೆಂಬ ಚರಕಮಹರ್ಷಿಯ ಹಿಂಸೆಯ ಸಾನುರಾಗದಿ ನಿವಾರಿಸಿಹ ಜಾಣರ್ ಅಮೋಘವರ್ಷಾಂಕನ  ಸಭೆಯೊಳುಕ್ಷೋಣಿಯ ಸರ್ವಜ್ಞಮತದಿಮ್ ಸಿವಪಾರ್ವತೀಶನ ಗಣಿತದೆಬಹ ವೈದ್ಯದವನಿಯೊಳ್ ಪೇಳಿದ ಅದರ ವಿವರ ಸಮನ್ವಯದ ಅಂತರದೊಂಬತ್‌ಸವಿಮೂರ್ ಐದೊಂದುದು ಅಕ್ಷರಯ ಮರಳಲು ಹತ್ತುಸಾವಿರದಿನ್ನೂರಾರು(ಎರಳ್‌ನೂರು) ಬರುವಂತವಿದ್ಯೆ ಈ ‘ಳೂ’ ಅಮ್ ಸರುವಜ್ಞನೇರಿದ ಹದಿನಾಲ್ಕು ಗುಣಸ್ಥಾನ ಅರಹಂತ ವಾಕ್ಯ(ಗುರುಪರಂಪರೆಯಾದ ‘ಳೂ’ ಅಂದದ) ಭುವಲಯದ ||

ಪ್ರತಿಕ್ರಿಯೆ ನೀಡುವುದಕ್ಕಾಗಿ ಮಾತ್ರ ಈ ಲೇಖನ ನೀಡಿದ್ದಲ್ಲ. ಸಮಾಜಕ್ಕೆ ಒಂದಿಷ್ಟು ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳೋಣ ಎಂಬ ಆಶಯದಿಂದ ಬರೆದೆನಷ್ಟೆ. ಇನ್ನು ಹೆಚ್ಚು ವಿಶ್ಲೇಷಣೆ, ವಿಡಂಬನೆ ಮಾಡುತ್ತಾ ಕುಳಿದರೆ ನನ್ನ ಅಧ್ಯಯನ, ಅನುಷ್ಠಾನಗಳಿಗೆ ಸಮಯ ಸಿಗುವುದಿಲ್ಲ. ಹಿಂದಿನ ನನ್ನ ವೃತ್ತಿ ಮತ್ತು ಇಂದಿನ ಪ್ರವೃತ್ತಿಯಾದ ಉಪನ್ಯಾಸಕತ್ವದಿಂದ ಲೇಖನದ ಮುಖೇನ ಶ್ರದ್ಧಾವಂತರಿಗೆ ಅಧ್ಯಾಪನ ಮಾಡಿಸಿದ್ದೇನೆ ಎಂದು ಸಂತೃಪ್ತಿ ಇದೆ. ಅರ್ಥ ಮಡಿಕೊಂಡ ಮಾನವ ಪ್ರಬುದ್ಧನಾಗಬಲ್ಲ. ಇಲ್ಲೆಲ್ಲೂ ಲೇಖಕರ ಖಂಡನೆಯಿಲ್ಲ, ಸಮಾಜದಲ್ಲಿ ರಾರಾಜಿಸುತ್ತಿರುವ ವೇದ ವಿರುದ್ಧ ವಿಚಾರಗಳ ಖಂಡನೆ ಮತ್ತು ವೇದಮತದ ಮಂಡನೆ ಮಾತ್ರವಿದೆ ಎಂದು ಪೂರ್ವಾಗ್ರಹ ಬಿಟ್ಟು ಪರಿಶೀಲಿಸಿದರೆ ಒಲಿದು ತೋರುವುದು. ಪ್ರಸಕ್ತ ಜನಮಾನಸವನ್ನು ಕಂಡು ಬೇಗುದಿಯಿಂದ ಸ್ವಾಮೀಜಿಯವರು ಕೋಲಮುನಿಚರಿತೆಯಲ್ಲಿ ಹೇಳಿರುವ ಒಂದೆರಡು ಪದ್ಯಗಳೊಂದಿಗೆ ಈ ಪ್ರತಿಕ್ರಿಯೆ ಮುಗಿಸುತ್ತಿದ್ದೇನೆ:

ಎಷ್ಟು ಬೋಧಿಸಲೇನು ಏನು ಮಾಡಿದರೇನು ತಾ ಮಾಡಿದಾ ಕರ್ಮ ಇ
ನ್ನೆಷ್ಟಿದೆಯೊ ಎಂದರಿಯದಾ ಜನಕೆ, ಸನ್ಮಾರ್ಗ ಬೋಧೆಯು ಪಥ್ಯವಾಗದು
ಇಷ್ಟಪಡುವರು ಸುಖ, ಭೋಗ, ಅನ್ನಾಹಾರ, ನಾನಾವಿಧದ ಉಡುಗೆ ತೊಡುಗೆಗಾಗಿ
ಕಷ್ಟಪಡುತಿಹರು ಅದನು ಪಡೆಯಲು ಅವು ಮಿಥ್ಯವೆಂದರೆ ನಂಬಲಾರರು ಇ
ನ್ನೆಷ್ಟು ಜನ್ಮವೆತ್ತಲು ಬೇಕೊ ಈ ಜ್ಞಾನ ಮನದಾಳದಲಿ ಉದಿಸಲು ಇವರಿಗೆ,
ಸ್ಪಷ್ಟವಾಗಿಯೇ ಪೇಳ್ವೆ ಇದು ಕಣಾ ಕಲಿಗಾಲ, ಇಲ್ಲಿ ನಿಜಕನಕ ಬಿಟ್ಟು ಇದ್ದಿಲಕೊಂಬರೂ ||

ಶುದ್ಧಮನದೊಳು ಹರಿಯ ಭಜಿಸಲು ಪರಮಕಾರುಣ್ಯಮೂರುತಿ
ಬದ್ಧನಾಗಿಯೆ ಬಂದು ಸಲಹುವನೆಂಬ ನಿಜನುಡಿ ಸತ್ಯವೆ, ನಂಬರಿವರು,
ಶುದ್ಧಮನದರ್ಥ ಇವರಿಗೆ ಸಿದ್ಧಪಡಿಸಲು ಸಾಧ್ಯವಿಲ್ಲವು, ಅದಕೆ ಬದ್ಧವೇ ವೇದವಿಧ್ಯೆಗಳು,
ಇದ್ದು ಮಾಡುವುದೇನು ಶುದ್ಧಾಂತರಾತ್ಮದಲಿ ಪರಮಾತ್ಮನನು ಭಜಿಸುವುದ ಬಿಟ್ಟು,
ಎದ್ದು ಬಿದ್ದೋಡುವರು, ಮಿಥ್ಯೆಯ ನಂಬಿ ಬಿದ್ದು ಒದ್ದಾಡುವರು ನಾನಾ ಕಷ್ಟದಲಿ,
ಗುದ್ದಿ ಹೊಡೆದಾಡಿ, ಮೈನೋಯಿಸಿಕೊಂಡು, ಹೊದ್ದು ಮಲಗುತ ದೇವರೆಲ್ಲಿಹನೆಂಬರೂ ||

ಬುದ್ಧಿ ಹೇಳಲು ಹೋಗಬಾರದು ಶುದ್ಧಮನವಿಲ್ಲದವರಿಗೆ ವಿಧ್ಯೆಯಾ ಗಂಧ
ವಿದ್ದಿತೇ ಇವರಲ್ಲಿ ವ್ಯರ್ಥಬುದ್ಧಿಜೀವಿಗಳೆಂದು ಗಂಟೆ ಬಾರಿಸಿಕೊಂಡು ಹೊಗಳು ಭಟರ
ಬದ್ಧತೆಯ ಸಿದ್ಧತೆಗಾಗಿ ನಾನಾವೇಷ ತೊಡುವರು, ಅಂತರಾತ್ಮದಲಿ ತುಂಬಿಹುದು ಗೊಬ್ಬರವದೂ,
ಸದ್ದು ಮಾಡಿದರೇನು ಫಲ ಶುದ್ಧವಾಕ್ಯವ ನುಡಿಯದಿರೆ, ಬಣ್ಣದಲಿ ಬೇಗಡೆಯ ಚಿನ್ನಕ್ಕೆ
ಹೊದ್ದುದಲ್ಲದೇ ಗುಣದಲಿ ಚಿನ್ನವಾಗುವುದೇ ಬಿಡಿ ಬಿಡಿರಿ ಈ ವೇಷದಿಂ
ದೆದ್ದು ಬನ್ನಿರಿ ನಿಜಜೀವನ ನದಿಯಲಿ ಈಜಿ ದಡ ಸೇರಲು ಬೇಕು ಅಂತರಾತ್ಮ ಶುದ್ಧಿಯದೂ || ತಿರುಕ ||

-      ಹೇಮಂತ್ ಕುಮಾರ್ ಜಿ.

3 comments:

 1. Aruna Prashne bagge vivarisi dayamadi...

  ReplyDelete
  Replies
  1. Aruna Prashna is very vast. It discussess Deha Shaastra, Kirana Vijnaana, all yogaasanas, Jala taranga Vijnaana, Aarogya Siddhi, Dharma Shaastra, Khagola Vijnaana, etc., Once I collect and compile presentable information, I will post it. There will be time factor for every information to get published in Vedic literature. Keep waiting.. Meanwhile get Aruna Prashna learnt from well versed Guru and chant it everyday in Arunodaya Kaala till Sooryodaya around 3-6AM. Paaraayana will makes you understand better.

   Delete
  2. http://veda-vijnana.blogspot.in/2017/02/blog-post.html

   ಸೃಷ್ಟಿಯ ಹಂತಗಳು, ಧಾಮಗಳು, ಆದಿತ್ಯ ಅರ್ಥ ವಿಶ್ಲೇಷಣೆ, ಸೌರಮಂಡಲ, ಗ್ರಹಗಳು, ನಕ್ಷತ್ರಗಳು, ಗೆಲಾಕ್ಸಿ, ನದಿಗಳು, ಪರ್ವತಗಳು, ರಸಶಾಸ್ತ್ರ, ಇತ್ಯಾದಿ.

   Delete