Friday, 3 February 2017

ಗಾಯತ್ರೀ ಪಂಚದಶೀ ಅಧ್ಯಾಯ – ೧


        ನಮ್ಮ ಶಾಸ್ತ್ರಗಳಲ್ಲಿ ಗಾಯತ್ರೀಯ ಮಹತ್ವವನ್ನು ಬಹಳವಾಗಿ ವರ್ಣಿಸಲಾಗಿದೆ. ಈ ಲೇಖನ ಮಾಲೆಯ ಉದ್ದೇಶವು ಅದರ ಪುನರುಕ್ತಿಯಲ್ಲ. ಗಾಯತ್ರೀಯು ಒಂದು ಛನ್ದೋ ಪ್ರಾಕಾರ, ಹಾಗೂ ಆ ರೂಪದಲ್ಲಿ ಅದನ್ನು ಸರ್ವಪ್ರಮುಖ ಎಂದು ಹೇಳಲಾಗಿದೆ ಗೀತೆಯಲ್ಲಿ ಭಗವಾನ್ ಕೃಷ್ಣನು ಛನ್ದಸ್ಸುಗಳಲ್ಲಿ ತಾನು ಗಾಯತ್ರೀ ಎಂದು ಹೇಳಿದ್ದಾನೆ. ಈ ಛನ್ದಸ್ಸಿನಲ್ಲಿ ವೇದದ ಅಧಿಕಾಂಶ ಸೂಕ್ತಗಳಿವೆ. ಅವುಗಳಲ್ಲಿ ಋಗ್ವೇದದ ಒಂದು ಸೂಕ್ತದಿಂದ ಪ್ರಸಕ್ತ ಕಾಲದಲ್ಲಿ ಸಾರ್ವತ್ರಿಕ ಉಪಾಸನೆಗೊಳ್ಳುತ್ತಿರುವ ಗಾಯತ್ರೀ ಮಂತ್ರವನ್ನು ಆಯ್ದುಕೊಳ್ಳಲಾಗಿದೆ. ಇದರೊಂದಿಗೆ ಓಂಕಾರ ಹಾಗೂ ೩ ಅಥವಾ ೭ ವ್ಯಾಹೃತಿಗಳ ಪ್ರಯೋಗವೂ ಉಂಟಾಗುತ್ತದೆ. ಈ ಗಾಯತ್ರೀ ಮಂತ್ರವನ್ನೇ ವೇದಮಾತೆ ಎಂದು ಕರೆಯಲಾಗಿದೆ. ಅಥರ್ವವೇದದ (೧೯-೭೧) ಒಂದು ಸ್ವತಂತ್ರ ಸೂಕ್ತವನ್ನೇ ವೇದಮಾತಾ ಎಂದು ಕರೆಯಲಾಗಿದೆ. ಮಹರ್ಷಿ ದೇವರಾತರಾದರೊ ವಾಙ್ಮಾತಾ ರೂಪದಲ್ಲಿ ಋಕ್ (೧೦-೧೧೪-೪) ಇದನ್ನು ತಿಳಿಸಿರುತ್ತಾರೆ. ಈ ರೂಪದಲ್ಲಿ ಸೃಷ್ಟಿ ಹಾಗೂ ಶಬ್ದ ರೂಪದಲ್ಲಿ ವೇದದ ಉತ್ಪತ್ತಿಯು ಹೇಗೆ ಉಂಟಾಗುತ್ತದೆ, ಎಂಬ ವ್ಯಾಖ್ಯೆಯು ಸಿಗುವುದು ವಿರಳ. ಇಲ್ಲಿ ಸೃಷ್ಟಿಯ ಆರಂಭ ಬಿಂದು, ಓಂಕಾರ, ವ್ಯಾಹೃತಿ ಹಾಗೂ ಗಾಯತ್ರೀ ಪದಗಳಿಂದ ಹೇಗೆ ಉಂಟಾಗುತ್ತದೆ, ಎಂಬ ವ್ಯಾಖ್ಯಾನ ಮಾಡಲು ಪ್ರಯತ್ನಿಸಲಾಗಿದೆ.

        ಪ್ರಖ್ಯಾತ ವೇದಜ್ಞ ಹಾಗೂ ತಾಂತ್ರಿಕ ಶ್ರೀ ಭಾಸ್ಕರರಾಯ ಭಾರತಿ ಇವರು ವರಿವಸ್ಯಾ-ರಹಸ್ಯದಲ್ಲಿ ಮಂತ್ರಕ್ಕೆ ೧೫ ಅರ್ಥ ಇರುತ್ತದೆ ಎಂದಿದ್ದಾರೆ. ಇದೇ ಅರ್ಥವನ್ನು ವೇದಕ್ಕೂ ಹೇಳಲಾಗಿದೆ. ವೇದದಲ್ಲಿ ಮುಖ್ಯತಃ ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕ ಎಂಬ ೩ ಅರ್ಥಗಳಿವೆ ಎಂದು ಪ್ರಚಲಿತವಿದೆ. ಇದು ಶರೀರದ ಒಳಗೆ, ಆಕಾಶದಲ್ಲಿ, ನಮ್ಮ ನಿಕಟ ಪೃಥ್ವಿಯ ಮೇಲೆ ಎಂಬ ವಿಶ್ವಗಳ ೩ ವಿಭಜನೆಯ ಆಧಾರಿತವಾಗಿದೆ. ಆಕಾಶದಲ್ಲಿ ಸೃಷ್ಟಿ, ಸ್ಥಿತಿ, ಲಯ, ಅನುಗ್ರಹ, ತಿರೋಧಾನ ಎಂಬ ನಿರ್ಮಾಣದ ೫ ಚರಣಗಳಿದ್ದವು, ಇದರ ಅನುರೂಪ ಯಜ್ಞಗಳಲ್ಲೂ ೫ ಪ್ರಕಾರದ ವಿಭಜನೆಯು ವಿವಿಧ ರೂಪದಲ್ಲಿ ಉಂಟಾಗುತ್ತದೆ. ಇದರಂತೆ ಸಿಖ್ ಮತದಲ್ಲಿ ೩ ವಿಶ್ವ- ಸತ್, ಶ್ರೀ, ಅಕಾಲ, ಹಾಗೂ ಪಂಚಕ್ರಿಯೆಗಳ ಪ್ರತೀಕವಾಗಿ ೫ ಕಕಾರಗಳಿವೆ. ಇದರಿಂದ ೨ ಪ್ರಕಾರ ವಿಭಜನೆಯ ರಹಸ್ಯವು ಸ್ಪಷ್ಟವಾಯಿತು. ಎರಡೂ ಪ್ರಕಾರಗಳನ್ನು ಸೇರಿಸಲು ೧೫ ಪ್ರಕಾರದ ಅರ್ಥಗಳು ವೇದಮಂತ್ರಗಳಲ್ಲಿ ಸಿಗುತ್ತದೆ. ಈ ೧೫ ಅರ್ಥಗಳ ವ್ಯಾಖ್ಯಾನವು ಮೂಲ ವರಿವಸ್ಯಾ ರಹಸ್ಯದಲ್ಲಿ ಇದೆ. ಈ ಅರ್ಥಗಳ ಅನುರೂಪದಲ್ಲಿ ಅರ್ಥೈಸಲು ಈಗ ಅಸಂಭವ. ಆದರೆ ಬ್ರಹ್ಮನ ಪ್ರತೀಕವಾಗಿ ಯಾವ ದೇವತೆಗಳನ್ನು ಪೂಜಿಸಲಾಗುತ್ತದೋ, ಅವರೆಲ್ಲರ ನಿರ್ದೇಶನವು ಒಂದೇ ಗಾಯತ್ರೀ ಮಂತ್ರದಿಂದ ಹೇಗೆ ಉಂಟಾಗುತ್ತದೆ ಎಂಬುದರ ವ್ಯಾಖ್ಯೆಯನ್ನು ಮಾಡಲಾಗಿದೆ. ಇದು ಎಲ್ಲ ದೇವತೆಗಳ ಏಕತ್ವದ ರೂಪದಲ್ಲಿ ತಿಳಿಸಲ್ಪಟ್ಟಿದೆ. ಬ್ರಹ್ಮವೊಂದೇ, ಆದರೆ ಅದನ್ನು ಹಲವು ರೂಪಗಳಲ್ಲಿ ನೋಡಲಾಗುತ್ತದೆ. ಕುರಾನಿನಲ್ಲಿಯೂ ಅಲ್ಲಾಹ್‍ ಎಂಬುದರ ೧೦೦, ೧೦೩, ಅಥವಾ ೧೦೮ ನಾಮಗಳಿವೆ. ಇವುಗಳಿಗೆ ಭಿನ್ನ ಭಿನ್ನ ಅರ್ಥಗಳೂ ಇವೆ. ಇದರರ್ಥ ಹಲವು ಅಲ್ಲಾಹ್‌ಗಳಿವೆ ಎಂದಲ್ಲ, ಆದರೆ ಒಂದನ್ನೇ ಹಲವು ರೂಪದಲ್ಲಿ ಕಾಣಲಾಗುತ್ತದೆಯಷ್ಟೆ. ವಸ್ತುತಃ ಎಲ್ಲ ರೂಪಗಳೂ ಒಂದೇ ಭಗವಂತನದ್ದು. ಪುರಾಣಗಳಲ್ಲಿಯೂ ಭಗವಂತನನ್ನು ವಿಭಿನ್ನ ರೂಪಗಳಲ್ಲಿ ಅಷ್ಟೋತ್ತರಶತ (೧೦೮) ಅಥವಾ ಸಹಸ್ರ (೧೦೦೦) ನಾಮಗಳ ಪಾಠ ವಾರ್ಣಿತವಾಗಿದೆ. ವಿಶೇಷವಾಗಿ ವಿಷ್ಣುಸಹಸ್ರನಾಮದ ಸಾವಿರ ಹೆಸರುಗಳು, ಮಧ್ವಾಚಾರ್ಯರ ಮತದಂತೆ ಋಗ್ವೇದದ ದಶಸಹಸ್ರಾದಿ ಸೂಕ್ತಗಳ ಸಾರಾಂಶ ರೂಪದಲ್ಲಿರುವ ನಾಮಗಳು.

        ಈ ಎಲ್ಲ ತತ್ವಗಳ ಚರ್ಚೆಗೆ ಛಂದಃ ಶಾಸ್ತ್ರದ ಸಾಮಾನ್ಯ ಪರಿಚಯ, ಹಾಗೂ ವಿಸ್ತಾರವಾಗಿ ಗಾಯತ್ರೀಯ ವ್ಯಾಹೃತಿ ಸಹಿತ ಶಬ್ದಗಳ ಅರ್ಥ ನೀಡಲಾಗಿದೆ. ಇದಲ್ಲದೆ ಗಾಯತ್ರೀಯ ಯಂತ್ರ, ಯಜ್ಞ ಪ್ರಕ್ರಿಯೆ ಇತ್ಯಾದಿ ಹಲವು ಅನ್ಯ ರೂಪಗಳಿವೆ. ಕುರಾನಿನಲ್ಲಿ ರೋಗ ದೂರೀಕರಿಸಲು ಎಷ್ಟು ಮಂತ್ರಗಳಿವೆಯೋ, ಅವುಗಳನ್ನು ಪಂ. ಹನೀಫ್ ಶಾಸ್ತ್ರೀ, ಪ್ರಾಧ್ಯಾಪಕರು, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೆಹಲಿ, ಇವರು ಒಂದೇ ಗಾಯತ್ರೀ ಮಂತ್ರದ ರೂಪವೆಂದು ಹೇಳುವುದಲ್ಲದೆ ಕೇವಲ ಗಾಯತ್ರೀಯಿಂದಲೇ ಚಿಕಿತ್ಸೆಯನ್ನೂ ಮಾಡುತ್ತಾರೆ.

        ವೇದಗಳ ವ್ಯಾಖ್ಯಾನಕ್ಕಾಗಿ ನಮ್ಮ ಯುಗದಲ್ಲಿ ವ್ಯಾಸರು, ವಾಲ್ಮೀಕಿ ಹಾಗೂ ಕೃಷ್ಣದ್ವೈಪಾಯನರು ರಾಮಾಯಣ ಹಾಗೂ ಭಾಗವತವನ್ನು ಪುನಃ ರಚಿಸಿದರು. ಇವೆರಡೂ ಗ್ರಂಥಗಳು ಗಾಯತ್ರೀ ಮಂತ್ರದ ವ್ಯಾಖ್ಯೆಗಳೂ ಹೌದು, ಏಕೆಂದರೆ ಗಾಯತ್ರೀಯೇ ಸೂಕ್ಷ್ಮ ರೂಪದಲ್ಲಿ ವೇದವಾಗಿದೆ! ನಾವು ಶ್ರದ್ಧೆಯಿಂದ ಗಾಯತ್ರೀ ಮಂತ್ರದ ದೊಡ್ಡ ದೊಡ್ಡ ಅರ್ಥ ಮಾಡುತ್ತೇವೆ. ಆದರೆ ಯಾವುದು ಶಬ್ದವೇ ಅಲ್ಲವೋ, ಅದರ ಅರ್ಥ ಮಾಡುವ ಅವಶ್ಯಕತೆಯೇ ಇಲ್ಲ! ಛನ್ದಸ್ಸಿನ ರೂಪದಲ್ಲಿ ಗಾಯತ್ರೀಯ ಪಾದಗಳಿವೆ, ಆದರೆ ಮಂತ್ರದ ರೂಪದಲ್ಲಿ ೩ ಮಾತ್ರವಿದೆ. ೩ ಚರಣ ಅಥವಾ ಖಂಡಗಳು ೩ ವಾಕ್ಯಾಂಶವಾಗಿದ್ದು ಅವುಗಳ ಬೇರೆ ಬೇರೆ ಅರ್ಥ ಮಾಡಿ ಕೊನೆಗೆ ಜೋಡಿಸಲಾಗುತ್ತದೆ. ಯತಿವರೇಣ್ಯ ಅಣ್ಣಪ್ಪಯ್ಯನವರು ಚರಣ ಭಿನ್ನವ ಮಾಡೆ ತೋರುವುದು ಕಾಯಿಕ ಮೂಲಶಕ್ತಿಯ ಯೋಗಶಕ್ತಿಯು ಮಾಯೆಯೊಳಿಪ್ಪುದುಎಂದಿದ್ದಾರೆ. ಇದೇ ಮೀಮಾಂಸಾ ದರ್ಶನದ ಪ್ರಕ್ರಿಯೆಯಾಗಿದೆ; ಅನ್ವಯ ಮಾಡಿ ಚರಣ ಭಿನ್ನತೆ ಮಾಡುವುದಲ್ಲ.

        ಬ್ರಹ್ಮೋಪದೇಶ ಎಂದು ಕರೆಯಲ್ಪಡುವ ಉಪನಯನ ಸಂಸ್ಕಾರದೊಂದಿಗೆ ಗಾಯತ್ರೀಯ ಉಪದೇಶವೇ ವೇದ ಓದುವ ಅಧಿಕಾರ ಕೊಡುತ್ತದೆ. ಅದು ಮೊದಲು ಮಾತೃಭ್ಯೋ ನಮಃ, ಪಿತೃಭ್ಯೋ ನಮಃ, ಗುರುಭ್ಯೋ ನಮಃ ಎನ್ನು ಭಾರತೀಯ ಸಂಸ್ಕಾರದಲ್ಲಿ ಚಿಗುರೊಡೆಯುತ್ತದೆ. ಈ ಲೇಖನದಲ್ಲಿ ಪಂ. ಮಧುಸೂದನ್ ಓಝಾರವರು, ಒರಿಸ್ಸಾದ ಅರುಣ್ ಕುಮಾರ್ ಉಪಾಧ್ಯಾಯರು, ತಿರುಪತಿಯ ಪ್ರೋ. ರಾಮಸಜೀವನ್ ತ್ರಿಪಾಠೀಯವರು, ಪುರೀ ಪೀಠದ ಸ್ವಾಮೀ ನಿಶ್ಚಲಾನಂದ ಸರಸ್ವತೀಯವರು (ಶಮರಾಚಾರ್ಯರು), ಕಾಂಚೀ ಪೀಠದ ಸ್ವಾಮೀ ಜಯೇಂದ್ರ ಸರಸ್ವತೀಯವರು, ತೇರಾಪಂಥ ಜೈನ ಮುನಿ ಮಹೇಂದ್ರ ಕುಮಾರರು, ಜೈನ ಮುನಿ ಪ್ರಸನ್ನ ಸಾಗರರು, ತ್ರಿದಂಡೀ ಸ್ವಾಮೀ ಇತ್ಯಾದಿಗಳ ಅಭಿಪ್ರಾಯವನ್ನು ಸೇರಿಸಿಕೊಳ್ಳಲಾಗಿದೆ.

ಅಧ್ಯಾಯ

ಛನ್ದಸ್ಸುಗಳ ಸ್ವರೂಪ

(೧) ವೇದದ ಪೂರಕ ಅಂಗೋಪಾಂಗ:-

       
        ಋಷಿಗಳು ಯಾವ ಕಾಲದಲ್ಲಿ ವೈದಿಕ ಮಂತ್ರಗಳನ್ನು ದ್ರಷ್ಟಿಸಿದರೋ, ಆ ಸಮಯಕ್ಕೇ ಅದರ ಅರ್ಥ ತಿಳಿಯಲು ಸಹಕರಿಸುವ ವಿಜ್ಞಾನ ಹಾಗೂ ಭಾಷೆಗಳ ವಿಕಾಸವಾಗಿತ್ತು. ನಂತರ ವಿಜ್ಞಾನ ಲುಪ್ತವಾದ್ದರಿಂದ ಅದರ ಅರ್ಥ ತಿಳಿಯಲು ವೇದದ ೬ ಅಂಗ ಹಾಗೂ ಉಪಾಂಗಗಳನ್ನು ರಚಿಸಲಾಯಿತು. ಷಡಂಗ ಪುರುಷನಾಗಿರುವುದರಿಂದ ೬ ದರ್ಶನ ಹಾಗೂ ೬ ಪ್ರಕಾರದ ದರ್ಶಾ ವಾಕ್ ಅಥವಾ ಲಿಪಿಗಳಿವೆ. ಅದೇ ರೀತಿ ವೈಜ್ಞಾನಿಕ ಅರ್ಥ ತಿಳಿಯಲು ವೇದದ ೬ ಅಂಗಗಳಿವೆ. ಉಪಾಂಗದ ರೂಪದಲ್ಲಿ ೬ ದರ್ಶನಗಳನ್ನು ೩ ಯುಗ್ಮಗಳಲ್ಲಿ ಚಾಲ್ತಿಯಲ್ಲಿ ಇರಿಸಲಾಗಿದೆ -
  • ನ್ಯಾಯ ವೈಶೇಷಿಕ
  • ಸಾಂಖ್ಯ - ಯೋಗ,  
  • ಮೀಮಾಂಸಾ - ವೇದಾಂತ
ಪಂ. ಮಧುಸೂದನ್ ಓಝಾರವರು ಬ್ರಹ್ಮ ಸಿದ್ಧಾಂತದಲ್ಲಿ ೩ ಆಸ್ತಿಕ ಹಾಗೂ ೩ ನಾಸ್ತಿಕ ದರ್ಶನಗಳ ವಿಭಜನೆ ಮಾಡಿದ್ದಾರೆ
ಕ್ಷರ ಪುರುಷ
ಸಾಂಖ್ಯ
ಚಾರ್ವಾಕ
ಅಕ್ಷರ
ವೈಶೇಷಿಕ
ಬೌದ್ಧ
ಅವ್ಯಯ
ಮೀಮಾಂಸಾ (ಪೂರ್ವ, ಉತ್ತರ)
ಜೈನ

ನ್ಯಾಯ ಹಾಗೂ ಯೋಗವು ಎಲ್ಲದರೊಂದಿಗೆ ಸಂಬದ್ಧವಾಗಿರುತ್ತದೆ ಎಂದು ನಂಬಲಾಗಿದೆ. ಪಂ. ಮೋತಿಲಾಲ್ ಶಾಸ್ತ್ರಿಯವರು ಗೀತಾ ವಿಜ್ಞಾನ ಭಾಷ್ಯ ಭೂಮಿಕೆಯಲ್ಲಿ ೬x೬ ದರ್ಶನಗಳ ವರ್ಗೀಕರಣ ಮಾಡಿದ್ದಾರೆ. ಇದರಂತೆ ವೇದದಲ್ಲಿ ೬ ಅಂಗಗಳೂ ಅವುಗಳ ಉಲ್ಲೇಖ ಕ್ರಮಾನುಸಾರವಾಗಿ ೩ ಯುಗ್ಮಗಳಲ್ಲಿದೆ:- [೧]
೧. ಶಿಕ್ಷಾ ಕಲ್ಪ,
೨. ವ್ಯಾಕರಣ ನಿರುಕ್ತ,
೩. ಜ್ಯೋತಿಷ ಛನ್ದ

ಇವುಗಳು ವೇದದ ಅಂಗ ಹಾಗೂ ಉಪಾಂಗಗಳಾಗಿದ್ದಾಗ್ಯೂ ವೇದವೇ ಆಗಿವೆ[೨]. ಏಕೆಂದರೆ ಇವುಗಳಿಲ್ಲದೆ ಮಂತ್ರಗಳ ಅರ್ಥವಾಗಲೀ ಪರೀಕ್ಷೆಯಾಗಲೀ ಆಗುವುದಿಲ್ಲ. ಉದಾಹರಣೆಗೆ ಭೂಃ, ಭುವಃ, ಸ್ವಃ ಇತ್ಯಾದಿ ಲೋಕಗಳ ಉಲ್ಲೇಖವು ವೇದಗಳಲ್ಲಿದ್ದರೂ ಅದರ ವಿಸ್ತೃತ ವರ್ಣನೆಯು ಪುರಾಣಗಳಲ್ಲಿದೆ. ಅದರ ಅಳತೆಗಳು ಜ್ಯೋತಿಷ ಹಾಗೂ ಪುರಾಣಗಳಲ್ಲಿ ಸಿಗುತ್ತದೆ. ಅಳತೆಗೋಲಿನ ವರ್ಣನೆಯು ಛನ್ದಶ್ಶಾಸ್ತ್ರದಲ್ಲಿ ಸಿಗುತ್ತದೆ, ಛನ್ದಸ್ಸಿಗೆ ಜ್ಯೋತಿಷ ಆಧಾರಿತ ವ್ಯಾಖ್ಯಾನದ ಹೊರತು ಛನ್ದೋಮಾ ಸ್ತೋಮಾ ಇತ್ಯಾದಿಗಳ ಯಾವ ಅರ್ಥವೂ ತಿಳಿಯುವುದಿಲ್ಲ.

        [೩]ಋಷಿಗಳು ಮಂತ್ರವನ್ನು ದ್ರಷ್ಟಿಸಿದರು ಎಂಬ ಅರ್ಥದಲ್ಲಿ ಅದು ಅಪೌರುಷೇಯ. ಈ ಮಂತ್ರಗಳಿಗೆ ಶಬ್ದಶಃ ಅರ್ಥವು ವೇದದ ಅಂಗೋಪಾಂಗದಿಂದಲೇ ಪ್ರಕಟವಾಗಿದೆ ಹಾಗೂ ಅದೇ ಋಷಿಗಳಿಂದ ಪ್ರಬಂಧಗಳ ರೂಪದಲ್ಲಿ ಬೆಳೆಸಲ್ಪಟ್ಟಿದೆ. ಆ ಪ್ರಸಂಗದಲ್ಲಿ ಮಾತ್ರ ಮಂತ್ರಗಳ ಶಬ್ದ ರೂಪೀ ದರ್ಶನವಾಗುತ್ತದೆ. ವ್ಯಕ್ತಿಗತ ರೂಪದಲ್ಲಿ ಋಷಿಗಳು ಮಂತ್ರಕೃತರು. ಹಲವು ಋಷಿಗಳು ಬ್ರಹ್ಮನನ್ನು ಹಲವಾರು ಶಬ್ದಗಳಲ್ಲಿ ವರ್ಣಿಸಿದ್ದಾರೆ. ವ್ಯಕ್ತಿಗತ ರಚನೆಯ ರೂಪದಲ್ಲಿ ಮಂತ್ರ ಅಥವಾ ಅದರ ಸ್ಪಷ್ಟೀಕರಣವು ಪೌರುಷೇಯವಾಗಿದೆ. ಆದರೆ ಅದರ ಏಕತ್ವವು ಬ್ರಹ್ಮಸೂತ್ರದಿಂದ ಸ್ಪಷ್ಟವಾಗುತ್ತದೆ. ಬ್ರಹ್ಮಸೂತ್ರದ ವೇದಾಂತದರ್ಶನದಿಂದ ತಿಳಿಯಲ್ಪಡುವುದರಿಂದ ಆ ಏಕತ್ವವು ಅಪೌರುಷೇಯವಾಗಿದೆ.

        ಕಾಲಾಂತರದಲ್ಲಿ ಅಂಗಗಳ ಸಮಿತಿಯೇ ಅರ್ಥವೆಂದಾಯಿತು. ಶಬ್ದಗಳ ಉತ್ಪತ್ತಿ, ಸ್ಥಿತಿ ಮತ್ತು ಲಯದ ಪ್ರತಿಪಾದನೆಯೇ ನಿರ್ವಚನ ಹಾಗೂ ಅದರ ಶಾಸ್ತ್ರವು ನಿರುಕ್ತ ಎಂದಾಯಿತು. ಯಾಸ್ಕ ಮುನಿ ರಚಿತ ನಿರುಕ್ತವಲ್ಲದೆ ಬ್ರಾಹ್ಮಣ ಗ್ರಂಥ ಅಥವಾ ಮಂತ್ರ ಸಂಹಿತೆಗಳಲ್ಲಿ ಯಾವ ನಿರ್ವಚನಗಳು ಸಿಗುತ್ತವೋ ಅವು ನಿರುಕ್ತವೇ ಆಗಿವೆ. ಶಬ್ದಗಳ ಉತ್ಪತ್ತಿ ಹಾಗೂ ರೂಪಾಂತರವು ವೈಜ್ಞಾನಿಕ ತಥ್ಯಗಳು ಅಥವಾ ಕ್ರಿಯೆಗಳ ಮೇಲೆ ಆಧಾರಿತವಾಗಿದೆ. ಹೇಗೆ ಭೌತಿಕ ಅಥವಾ ರಸಾಯನ ವಿಜ್ಞಾನದಲ್ಲಿ ಕೆಲ ಗುಣ ಹಾಗೂ ಅಳತೆಗಳ ವಿಧಿಯ ಆಧಾರದಲ್ಲಿ ಶಬ್ದಗಳ ಪರಿಭಾಷೆ ನೀಡಲಾಗುತ್ತದೋ, ಹಾಗೆಯೇ ವೈದಿಕ ಜ್ಞಾನ-ವಿಜ್ಞಾನದಲ್ಲಿ ಮೇಲ್ತಿಳಿಸಿದ ನಿರ್ವಚನವನ್ನು ಆಧಾರವಾಗಿಸಿಕೊಳ್ಳಲಾಗಿದೆ. ಆ ನಿರ್ವಚನಗಳು ಅಥವಾ ಪರಿಭಾಷೆಗಳಿಂದಲೇ ವೇದದ ಅರ್ಥವಾಗುತ್ತದೆ.  ಇದಕ್ಕೆ ಪೂರಕವಾಗಿ ಹುಟ್ಟಿದ್ದೇ ವ್ಯಾಕರಣ. ಶಬ್ದದ ಅವಯವ ಮೂಲ ಧಾತು, ಪ್ರತಿಪಾದಿಕ, ಪ್ರತ್ಯಯ ಉಪಸರ್ಗ ಹಾಗೂ ಅವ್ಯಯಗಳ ವ್ಯಾಖ್ಯೆ ಹಾಗೂ ಅವುಗಳ ಸಂಯೋಗವೇ ಇದರ ವಿಷಯವಾಗಿದೆ. ಶಬ್ದ ಸಮೂಹದ ೧೨ ಪ್ರಕಾರದ ಅರ್ಥವೇ ಪೂರ್ವ ಮೀಮಾಂಸ ಹಾಗು ಅವುಗಳ ಏಕತ್ವವೇ ಉತ್ತರ ಮೀಮಾಂಸ ವೇದಾಂತವಾಗಿದೆ. ಈ ರೀತಿ ಪೂರಕ ಯುಗ್ಮಗಳಲ್ಲದೆ ಅನ್ಯ ಅಂಗಗಳು ಹಾಗೂ ಮಂತ್ರ ಸಂಹಿತೆಗಳೊಂದಿಗೆ ಇವುಗಳ ಸಂಬಂಧವಿದೆ. ಶಿಕ್ಷಾದ ಅರ್ಥವು ಕೇವಲ ವರ್ಣೋಚ್ಛಾರಣೆಗೆ ಸೀಮಿತವಲ್ಲ. ವ್ಯಾಕರಣ ಸಂಬಂಧೀ ಪಾಣಿನೀಯ ಶಿಕ್ಷಾದಿಗಳು ವರ್ಣೋಚ್ಛಾರಣಾ ಶಿಕ್ಷಾ ಆಗಿವೆ. ವರ್ಣ-ಅಕ್ಷರಗಳನ್ನು ಯಾವ ರೂಪದಲ್ಲಿ ಬರೆಯಲಾಗುತ್ತದೆ? ಅದನ್ನು ಹೇಗೆ ಓದಲಾಗುತ್ತದೆ? ಉಚ್ಛಾರಣಾ ವ್ಯತ್ಯಾಸದಿಂದ ಹೇಗೆ ಅರ್ಥ ವ್ಯತ್ಯಾಸವಾಗುತ್ತದೆ? ಇವೆಲ್ಲ ಶಿಕ್ಷಾದ ವಿಷಯವಾಗಿದೆ. ಯಜ್ಞ ವಿಜ್ಞಾನದ ಶಿಕ್ಷಾವು ಭೌತಿಕ, ರಸಾಯನ ವಿಜ್ಞಾನ ಅಥವಾ ಮಂತ್ರ ವಿಜ್ಞಾನದ ಪ್ರಯೋಗಗಳಂತಿವೆ. ಶಿಕ್ಷಾ ದೊರಕಿದ ಮೇಲೆ ಅವುಗಳನ್ನು ಪ್ರಯೋಗಿಸಿ ವ್ಯಾವಹಾರಿಕ ಕಾರ್ಯ ಮಾಡುವುದೇ ಕಲ್ಪ. ಉದಾ:- ತೈತ್ತಿರೀಯ ಉಪನಿಷತ್ತಿನ ೩ ಖಂಡಗಳಲ್ಲಿ ಪ್ರಥಮ ಭಾಗ ಶೀಕ್ಷಾ-ವಲ್ಲೀ (ಶೀಕ್ಷಾ = ಶಿಕ್ಷಾ ಸಂಬಂಧೀ, ವೈದಿಕ ರೂಪ) ಆಗಿದೆ. ೫ ಅಧಿಕರಣಗಳಲ್ಲಿ ಅಧ್ಯಾತ್ಮ, ಅಧಿದೈವ, ಅಧಿಜ್ಯೋತಿಷ, ಅಧಿಭೌತಿಕ, ಅಧಿವಿಧ್ಯಾ ಹಾಗೂ ದಿಶಾ ಮತ್ತು ಲೋಕಗಳ ವ್ಯಾಖ್ಯಾನವಿದೆ.

        ವಿಶ್ವದ ವೈಜ್ಞಾನಿಕ ವ್ಯಾಖ್ಯೆ, ಲೋಕಗಳ ಆಕಾರ, ಗತಿ ಇತ್ಯಾದಿಗಳ ವ್ಯಾಖ್ಯೆಯು ಜ್ಯೋತಿಷವಾಗಿದೆ. ಆದ್ದರಿಂದ ಜ್ಯೋತಿಷವನ್ನು ಚಿತಿ ಎಂದು ಕರೆಯಲಾಗಿದೆ. ಇದರ ಅಳತೆಗೋಲು ಅಥವಾ ದೇಶ-ಕಾಲ-ದಿಕ್-ಪಾತ್ರಗಳ ಅಳತೆ ಹಾಗೂ ಪರಿಮಾಣಗಳೇ ಛನ್ದ. ಇದು ಚಿತಿಯ ಅಳತೆಯ ಆಧಾರ ಹಾಗೂ ಅದರ ಪರಿಣಿತಿಯೂ ಆಗಿದೆ, ಆದ್ದರಿಂದ ಛನ್ದವನ್ನು ವಿಚಿತಿಎಂದು ಕರೆಯಲಾಗಿದೆ.[೧,೪]

(೨) ಛನ್ದಸ್ಸಿನ ಅರ್ಥ, ನಿರ್ವಚನ ಹಾಗೂ ವೇದಾರ್ಥದಲ್ಲಿ ಪ್ರಯೋಗ -

        ಛನ್ದೋ ಆಧಾರಿತ ದರ್ಶನವು ನಾಸದೀಯ ಸೂಕ್ತದ (ಋ, ೧೦-೧೨೮) ಪ್ರಥಮ ಮಂತ್ರದಲ್ಲಿ ಆವರಣ ವಾದದ ಉಲ್ಲೇಖ ಕಿಮಾವರೀವಃ ಶಬ್ದದಿಂದುಂಟಾಗಿದೆ.[೫] ಇದರಲ್ಲಿ ಒಟ್ಟು ದಶವಾದಗಳು ಅಥವಾ ೧೦ ದೃಷ್ಟಿಕೋನದಲ್ಲಿ ಸೃಷ್ಟಿ ಉತ್ಪತ್ತಿಯ ವ್ಯಾಖ್ಯಾನವಿದೆ. ಇದರ ವಿಸ್ತೃತ ವರ್ಣನೆಯನ್ನು ಪಂ. ಮಧುಸೂದನ್ ಓಝಾರವರು ದಶವಾದ ರಹಸ್ಯ ಹಾಗೂ ಹಲವು ವಾದ ಪುಸ್ತಕಗಳಲ್ಲಿ ವಿವರಿಸಿದ್ದಾರೆ. ಸೃಷ್ಟಿಯ ಉತ್ಪತ್ತಿಯು ಸಮರೂಪ ಅವಿಚ್ಛಿನ್ನ ರಸದ ಆವರಣಗಳಿಂದ ವಿಭಜನೆಯಿಂದಾಗಿದೆ. ಆವರಣವೇ ಛನ್ದ, ಇದರ ೩ ತತ್ವಗಳಿವೆ[೬]
೧. ವಯ ವಸ್ತುವಿನ ಉಪಾದಾನ ಅಥವಾ ಸಾಮಗ್ರಿಯೇ ವಯ. ಇದು ಪ್ರಾಣದ ರೂಪಾಂತರವಾಗಿದೆ.
೨.  ವಯೋನಾಧ – ವಸ್ತುವಿನ ಪರಿಚ್ಛೇದ ಸೀಮೆಯಾಗಿದೆ. ಇದೇ ಛನ್ದಸ್ಸು. ಇದು ಪ್ರಾಣವೂ ಹೌದು.
೩. ವಯುನ- ವಸ್ತುವಿನ ಅಸ್ತಿತ್ವದ ವಿಜ್ಞಾನವೇ ವಯುನ. ಇದರ ಸಾಮಗ್ರಿಯ ಪರಸ್ಪರ ಸಂಬಂಧ ಹಾಗೂ ಸೀಮೆಯ ಹೊರಗಿರುವ ಪದಾರ್ಥದಿಂದ ವಿಭೇದವಾಗಿದೆ. ಛನ್ದಸ್ಸಿನ ಮೂಲ ಧಾತು
೧. ಚದಿ (ಚನ್ದ) ಆಲ್ಹಾದನೇ, ದೀಪ್ತೌ ಚ (ಪಾಣಿನಿ ಧಾತು ೧-೫೬)
೨. ಛದ ಸಂವರಣೇ (೧೦-೨೪೮) ಆಚ್ಛಾದನೆ ಮಾಡು.
೩. ಛದ ಉಪವಾರಣೇ (೧೦-೨೬೦ ಸ್ವರಿತ, ೧೦-೩೬೨ ಅದನ್ತ) ದೂರೀಕರಿಸು, ಬಚ್ಚಿಡು
೪. ಛದಿ (ಛನ್ದ) ಸಂವರಣೇ (೧೦-೪೬). ಪಂ. ಯುಧಿಷ್ಠಿರ ಮೀಮಾಂಸಕರು ಛದಿ (ಛನ್ದ) ಎಂಬುದನ್ನೇ ಮೂಲ ಧಾತು ಎಂದಿದ್ದಾರೆ (ವೈದಿಕ ಛನ್ದೋ ಮೀಮಾಂಸಾ ರಾಮಲಾಲ್ ಕಪೂರ್ ಟ್ರಸ್ಟ್ ಅಧ್ಯಾಯ ೧)

ಛನ್ದದ ವೈದಿಕ ನಿರ್ವಚನ ವಸ್ತುವಿನ ಸೀಮೆಯಿಂದ ಅವಚ್ಛೇದನವೇ ಛನ್ದ.[೭] ಸೀಮೆಯಿಂದ ಆವೃತವಾಗಿರುವ ಕಾರಣ ವಸ್ತುವು ಅದರಿಂದ ಹೊರಗೆ ಹೋಗುವುದಿಲ್ಲ. ಪಂ. ಮಧುಸೂದನ ಓಝಾರವರು ಛಾದನದ ೧೧ ವಿಷಯಗಳ ವರ್ಣನೆಯನ್ನು ಛನ್ದಃ ಸಮೀಕ್ಷೆಯಲ್ಲಿ ತೋರಿಸಿದ್ದಾರೆ [೮]

೧. ಉಪಸಂವ್ಯಾನ ಆಂತರಿಕ ಆವರಣ ಅಥವಾ ವಸ್ತ್ರ
೨. ಪರ್ಯಾಧಾನ ಬಾಹ್ಯ ಆವರಣ ಅಥವಾ ವಸ್ತ್ರ
೩. ಚರ್ಚಿತಕ ಬಾಹ್ಯ ಲೇಪ, ವಿಚಾರಣ
೪. ಅವರೋಧ ಬಾಧಾ
೫. ವ್ಯಾಪ್ತಿ ವಿಸ್ತಾರ ಅಥವಾ ಅಳತೆ
೬. ದೂಷಿತಕರಣ
೭. ಸ್ವರೂಪ ಕರಣ
೮. ಊರ್ಜನ ಗತಿ ಅಥವಾ ಶಕ್ತಿ ನೀಡುವುದು
೯. ವಿವಿತಾ ಕ್ಷೇತ್ರದ ಕೆಲ ಭಾಗವನ್ನು ಬೇರ್ಪಡಿಸುವುದು
೧೦. ಗೋಪನ ಅಡಗಿಸುವುದು
೧೧. ಅನ್ತರ್ಧಾನ ಲೋಪ, ಅದರ್ಶನ

ಛನ್ದದ ಪರ್ಯಾಯಗಳ ವ್ಯುತ್ಪತ್ತಿ

೧. ಆವೃತಿ, ಸಂವೃತಿ-, ಸಮ್ ಉಪಸರ್ಗ + ವೃಞ್ ವರಣೇ + ಕ್ತಿನ್. ಆವರಣ, ಸಂವರಣದಿಂದ ರೂಪ, ಭಾವಗಳು ಉಂಟಾಗುತ್ತವೆ; ವರಣವು ಅರ್ಥವೂ ಆಗಿದೆ.
೨. ತಂತ್ರಣ ತತ್ರಿ ಕುಟುಮ್ಭಧಾರಣೇ (ಧಾತು ೧೦-೧೩೫ ಸಾಯಣ) ಅಥವಾ ತತ್ರಿ ಧಾರಣೇ (ಚಂದ್ರ ೧೦-೬೫); ಧಾರಣೆ ಮಾಡುವುದು.
೩. ಅವಚ್ಛಿತಿ ಅವಪೂರ್ವಕ ಛೇದಿಸುವುದರಿಂದ ಕ್ತಿನ್ ಪ್ರತ್ಯಯ. ಅಖಂಡ ಅಥವಾ ಅಸೀಮವನ್ನು ಖಂಡ ಅಥವಾ ಸೀಮಾ ಬದ್ಧಗೊಳಿಸುವುದು.
೪. ಚಂದನ ಚದಿ ಹ್ಲಾದನೇ ದೀಪ್ತೌ ಚ (೧-೫೬) ಪದ್ಯ-ಬದ್ಧತಾ ಅಥವಾ ವಸ್ತುವಿನ ಸ್ವರೂಪದ ಆಹ್ಲಾದಕತೆ. ಉಣಾದಿಯಲ್ಲಿ ಚನ್ದೇರಾದೇಶ್ಚ ಛಃ ಇದರಿಂದ ಛನ್ದವಾಯಿತು. ಚದಿ ಕಾನ್ತಿಕರ್ಮಾ (ಯಾಸ್ಕ) ಆಗಿದೆ, ಕಾಂತಿ, ಇಚ್ಛಾ, ಗತಿ ಇತ್ಯಾದಿ ಅರ್ಥಗಳಲ್ಲೂ ಇದೆ. ಹಾಗಾಗಿ ಛನ್ದದಿಂದ ವಸ್ತುಗಳ ಗತಿ ಹೇಳಲ್ಪಟ್ಟಿದೆ. ಓಝಾರವರ ದೇವತಾ ನಿವಿತ್ ಹಾಗೂ ಯುಧಿಷ್ಠಿರ ಮೀಮಾಂಸಕರ ವೈದಿಕ ಛನ್ದೋ ಮೀಮಾಂಸದಲ್ಲಿ ಚದಿ ಧಾತುವನ್ನು ಗ್ರಹಿಸಿಲ್ಲ. ಚದಿಯ ಸಂಭಾವ್ಯವು ನಿಪಾತನದಿಂದ ಛದಿ ಎಂದಾಗಿರಬೇಕು (ಚಡ್ಢೀ ಹಸಿ).
೫. ಹರಿದಾನ ಇಂದ್ರನ ಅಶ್ವವು ಹರಿ ಎಂಬುದಾಗಿದೆ. ಈ ೨ ಹರಿಗಳಿಂದ ಮಾಸದ ೨ ಪಕ್ಷವಾಗುತ್ತದೆ. ಇದು ಋಕ್ ಸಾಮವೂ ಆಗಿದೆ ಋಕ್ ಸಾಮೇ ವೈ ಹರಿ ಎನ್ನುತ್ತದೆ ಶತಪಥ ಬ್ರಾಹ್ಮಣ (೪-೪-೩-೬). ಇಂದ್ರನು ವಯವಾಗಿದ್ದು. ಅದರ ೨ ಸೀಮಾ ಬಿಂದುಗಳು ಹರಿಯಾಗಿವೆ. ಅವುಗಳ ದಾನವು (ಕತ್ತರಿಸುವುದರಿಂದ ಅಥವಾ ಕೊಡುವುದರಿಂದ) ಸೀಮಾ ಬದ್ಧ ಛನ್ದ ಅಥವಾ ವಯೋನಾಧ ಹರಿದಾನ ಎಂದಾಗುತ್ತದೆ. ಹರಿಜ (Horizon) ಎಂಬುದರ ಅರ್ಥ ಕ್ಷಿತಿಜ ಎಂದೂ ಆಗುತ್ತದೆ.

 

ವೇದಗಳಲ್ಲಿ ಛನ್ದೋ ಪ್ರಯೋಗ-

ಛನ್ದಸ್ಸನ್ನು ವೇದದಲ್ಲಿ ಪಶು, ವ್ರಜ ಗೋಸ್ಥಾನ, ಸೂರ್ಯ ರಶ್ಮಿ, ಅಶ್ವ, ಪ್ರಜಾಪತಿಯ ರಥ, ಅಗ್ನಿಯ ಸಪ್ತಧಾಮ, ಅಥವಾ ಅಗ್ನಿಯ ತನೂ (ಶರೀರ), ಅಥವಾ ವೇದ ಎಂದೂ ಹೇಳಲಾಗಿದೆ. ಅರ್ಥಗಳ ಸಮನ್ವಯ ಯಾವುದು ಕಾಣುತ್ತದೋ ಅದು ಪಶು, ಛನ್ದ ಅಥವಾ ಆವರಣದಲ್ಲಿ ಸೀಮಿತ ರೂಪ ಸಿಗುತ್ತದೆ. ನಿರ್ಮಾಣ ಅಥವ ಭೋಜನ ಸಾಮಗ್ರಿಯು ಅನ್ನ. ಅದೂ ಹಲವು ಚೂರುಗಳಾಗಿ ಹಂಚಲ್ಪಟ್ಟಿದೆ. ಅಳತೆಗಾಗಿ ಗತಿಯ ಅವಶ್ಯಕತೆ ಇದೆ. ಆದ್ದರಿಂದ ರಶ್ಮಿ ಅಥವಾ ಗೋ ಹಾಗೂ ಅದರ ಸ್ಥಾನ ಗತಿಯಾಗಿದೆ. ಉದಾ:- ೧ ತ್ರುಟಿಗೆ (ಸೆಕೆಂಡಿನ ೩೩,೭೫೦ ನೇ ಭಾಗಕ್ಕೆ) ಪ್ರಕಾಶವು ಎಷ್ಟು ದೂರ ಹೋಗುತ್ತದೋ ಅದು ಯೋಜನ. ಎಲ್ಲ ಲೋಕ, ಧಾಮ, ಅಥವಾ ಶರೀರ ವಿಸ್ತೃತ ಸೋಮದ ಸಧನ ರೂಪವೇ ಅಗ್ನಿಯಾಗಿದೆ. ಅದರ ಶರೀರವು ಛನ್ದ ಅಥವಾ ಆಕಾರ ಪ್ರಕಾರ ಉಳ್ಳದ್ದಾಗಿದೆ. ಸಂಪೂರ್ಣ ವಿಶ್ವದಲ್ಲಿ ಪಿಂಡದ ಅಳತೆ, ಗತಿ, ಮಹಿಮೆಗಳೇ ವೇದತ್ರಯೀ. ಈ ೩ ಹಾಗೂ ಅವುಗಳ ಮೂಲವು ಅನಂತ ಛನ್ದೋ ರೂಪೀ ಅಥರ್ವವೂ ಛನ್ದವಾಗಿದೆ. ಹಾಗಾಗಿ ಛನ್ದವು ವೇದವಾಗಿದೆ. ಗತಿಕಾರಕ ರೂಪದಲ್ಲಿ ಛನ್ದಸ್ಸು ಅಶ್ವವೂ ಆಗಿದೆ.
(೧) ವಾಕ್ ಅಥವಾ ಅಕ್ಷರಗಳ ಪರಿಮಾಣವೇ ಛನ್ದ.[೧೦] ಇದು ಗಾಯನ ಮತ್ತು ಕಾವ್ಯದಲ್ಲಿ ಉಪಯೋಗಿಸಲ್ಪಡುವುದರೊಂದಿಗೆ ವಾಕ್ಯ ಖಂಡಗಳನ್ನೂ ನಿರ್ದೇಶಿಸುತ್ತದೆ. ವಾಕ್ಯವು ಒಂದು ಛನ್ದವಾಗಿರುತ್ತದೆ, ಪೂರ್ಣ ಅರ್ಥದ ವಾಕ್ಯಾಂಶವು ಛನ್ದದ ಪದವಾಗಿದೆ. ದೊಡ್ಡ ಛನ್ದಸ್ಸುಗಳಲ್ಲಿ ಒಂದು ಪದದಲ್ಲಿ ಒಂದು ಅಥವಾ ಎರಡು ಯತಿ ನೀಡಿ ವಿಭಕ್ತಗೊಳಿಸಲಾಗುತ್ತದೆ. ಛನ್ದ, ಪದ ಹಾಗೂ ಯತಿಯ ನಂತರವಷ್ಟೇ ಶಬ್ದಗಳ ಅನ್ವಯ ಮಾಡಿ ಅವುಗಳ ಅರ್ಥ ನಿರ್ದೇಶನವಾಗುತ್ತದೆ.
(೨) ದೇಶ ಹಾಗೂ ಕಾಲಗಳ ಸೀಮಾ ನಿರ್ದೇಶನ ಪಿಂಡಗಳ ಆಕಾರಗಳು ಛನ್ದದಿಂದ ನಿರ್ದಿಷ್ಟವಾಗುತ್ತದೆ. ಅವುಗಳ ಪರಿವರ್ತನಾ ಕಾಲವು ಸಾಪೇಕ್ಷವಾಗಿದೆ. ಹಾಗಾಗಿ ಅದೂ ಛನ್ದಸ್ಸಿನ ಮೇಲೆಯೇ ಆಧಾರಿತವಾಗಿದೆ. ವಸ್ತುಗಳ ಅವಯವಗಳ ಸಂಖ್ಯೆ, ಅಳತೆಯ ಸಂಖ್ಯೆ ಇತ್ಯಾದಿ ಅಳತೆಗಳೂ ಛನ್ದಸ್ಸಿನಿಂದ ಉಂಟಾಗುತ್ತದೆ.
(೩) ಛನ್ದಸ್ಸುಗಳ ವರ್ಗೀಕರಣ ಹಾಗೂ ರೂಪ-
        ಅಗ್ನಿಯ ೭ ಜಿಹ್ವೆಗಳ ಕಾರಣದಿಂದ ೭ ಲೋಕಗಳು, ೭ ಅರ್ಚಿ, ೭ ಸ್ವರ ಇತ್ಯಾದಿಗಳಿವೆ.[೧೧] ಎಲ್ಲ ಅಳತೆಗಳು ೭ ಛನ್ದಸ್ಸುಗಳಲ್ಲಿವೆ. ಸಂಗೀತದ ೩ ಸಪ್ತಕಗಳಂತೆ ಇದರಲ್ಲಿಯೂ ೩ ಸಪ್ತಕಗಳಿವೆ. ಅವುಗಳ ಹಿಂದಿನ ಅಳತೆಗೋಲಿನ ಆಧಾರ ರೂಪೀ ೫ ಕಾರ ಛನ್ದಸ್ಸುಗಳಿವೆ. ಪ್ರತಿ ಛನ್ದಸ್ಸಿನಲ್ಲೂ ೪ ಪದಗಳಿವೆ. ಹಾಗೂ ಪ್ರತಿ ಪದದ ಅಕ್ಷರಗಳ ಸಂಖ್ಯೆಯು ೧-೫, ೬-೧೨, ೧೩-೧೯, ೨೦-೨೬ ಇರುತ್ತದೆ.
        ಪ್ರಾಗ್ ಗಾಯತ್ರೀ ಪಂಚಕ ಗ್ರಂಥಗಳ ಅನುಸಾರ ನಾಮ ಭೇದವಿದೆ[೧೨]     
              
ಪ್ರಥಮ ಸಪ್ತಕ ಬೃಹತೀ ಛನ್ದ

ಪದಾಕ್ಷರ
ಒಟ್ಟು ಅಕ್ಷರ
ಋಕ್ ಪ್ರಾತಿ ಶಾಖ್ಯ
ಉಪ ನಿದಾನ ಸೂತ್ರ
ನಾರದ-ಶಾಸ್ತ್ರ
ತೈತ್ತಿರೀಯ ಬ್ರಾಹ್ಮಣ
(೩-೩-೧)
ಮಾ
ಉಕ್ತಾ
ಕೃತಿ
ಮಾ
ಪ್ರಮಾ
ಅಯುಕ್ತಾ
ಪ್ರಕೃತಿ
ಪ್ರಮಾ
೧೨
ಪ್ರತಿಮಾ
ಮಧ್ಯಾ
ಸಂಕೃತಿ
ಪ್ರತಿಮಾ
೧೬
ಉಪಮಾ
ಪ್ರತಿಷ್ಠಾ
ಅಭಿಕೃತಿ
ಅಸ್ರೀವ
೨೦
ಸಮಾ
ಸುಪ್ರತಿಷ್ಠಾ
ಆಕೃತಿ
ವಿರಾಟ್
               
ದ್ವಿತೀಯ ಸಪ್ತಕ ಅತಿ ಛನ್ದ
ಪದಾಕ್ಷರ
ಒಟ್ಟು ಅಕ್ಷರ
ಛನ್ದಸ್ಸು
ಪಾದಾಕ್ಷರ
ಒಟ್ಟು ಅಕ್ಷರ
ಛನ್ದಸ್ಸು
೨೪
ಗಾಯತ್ರೀ
೧೩
೫೨
ಅತಿಜಗತೀ
೨೮
ಉಷ್ಣಿಕ್
೧೪
೫೬
ಶಕ್ವರೀ
೩೨
ಅನುಷ್ಟುಪ್
೧೫
೬೦
ಅತಿಶಕ್ವರೀ
೩೬
ಬೃಹತೀ
೧೬
೬೪
ಅಷ್ಟಿ
೧೦
೪೦
ಪಂಕ್ತಿ
೧೭
೬೮
ಅತ್ಯಷ್ಟಿ
೧೧
೪೪
ತ್ರಿಷ್ಟುಪ್
೧೮
೭೨
ಧೃತಿ
೧೨
೪೮
ಜಗತೀ
೧೯
೭೬
ಅತಿಧೃತಿ


ತೃತೀಯ ಸಪ್ತಕ ಕೃತಿ ಛನ್ದ
ಪದಾಕ್ಷರ
ಒಟ್ಟು ಅಕ್ಷರ
ಛನ್ದಸ್ಸು (ಪಿಂಗಲ)
ನಿದಾನ ಸೂತ್ರ
೨೦
೮೦
ಕೃತಿ
ಸಿನ್ಧು
೨೧
೮೪
ಪ್ರಕೃತಿ
ಸಲಿಲ
೨೨
೮೮
ಆಕೃತಿ
ಅಮ್ಭಸ್
೨೩
೯೨
ವಿಕೃತಿ
ಗಗನ
೨೪
೯೬
ಸಂಕೃತಿ
ಅರ್ಣವ
೨೫
೧೦೦
ಅಭಿಕೃತಿ
ಆಪಃ
೨೬
೧೦೪
ಉತ್ಕೃತಿ
ಸಮುದ್ರ

ಛನ್ದಸ್ಸಿನ ಅಕ್ಷರ ಸಂಖ್ಯೆಯಲ್ಲಿ ೪-೪ರ ಅಂತರವಿರುವುದರಿಂದ ೨ ಅಕ್ಷರ ಕಡಿಮೆಯಿಂದ ೨ ಅಕ್ಷರ ಜಾಸ್ತಿ ಇದ್ದರೂ ಅದೇ ಛನ್ದಸ್ಸೆಂದು ಪರಿಗಣಿಸಲಾಗುತ್ತದೆ
೨ ಅಕ್ಷರ ಕಡಿಮೆ = ವಿರಾಟ್, ೧ ಅಕ್ಷರ ಕಡಿಮೆ = ನಿಚೃದ್.
೧ ಅಕ್ಷರ ಅಧಿಕ = ಭುರಿಕ್, ೨ ಅಕ್ಷರ ಅಧಿಕ = ಸ್ವರಾಟ್.

ಈ ಮುಖ್ಯ ಭೇದಗಳು ಆರ್ಷೀ ಎಂದು ಕರೆಯಲ್ಪಡುತ್ತವೆ. ಇದಲ್ಲದೆ ೭ ಅನ್ಯ ಪ್ರಕಾರದ ವರ್ಗಗಳಿವೆ. ಇದರ ಕಾರಣವು ಅಸ್ಪಷ್ಟ. ಪ್ರಯೋಗಕ್ಕೆ ತಕ್ಕಂತೆ ಸಂಯೋಜನೆ ಇರುತ್ತದೆ ಎಂದು ಕಂಡುಬರುತ್ತದೆ.

ಛನ್ದ
ದೈವೀ
ಆಸುರೀ
ಪ್ರಾಜಾಪತ್ಯಾ
ಆರ್ಷೀ
ಯಾಜುಷೀ
ಸಾಮ್ನೀ
ಆರ್ಚೀ
ಬ್ರಾಹ್ಮೀ
ಗಾಯತ್ರೀ
೧೫
೨೪
೧೨
೧೮
೩೬
ಉಷ್ಣಿಕ್
೧೪
೧೨
೨೮
೧೪
೨೧
೪೨
ಅನುಷ್ಟುಪ್
೧೩
೧೬
೩೨
೧೬
೨೪
೪೮
ಬೃಹತೀ
೧೨
೨೦
೩೬
೧೮
೨೭
೫೪
ಪಂಕ್ತಿ
೧೧
೨೪
೪೦
೧೦
೨೦
೩೦
೬೦
ತ್ರಿಷ್ಟುಪ್
೧೦
೨೮
೪೪
೧೧
೨೨
೩೩
೬೬
ಜಗತೀ
೩೨
೪೮
೧೨
೨೪
೩೬
೭೨

ಇದರಲ್ಲಿ ಬೃಹತೀ ಛನ್ದಸ್ಸುಗಳವರೆಗೆ ಮಾತ್ರ ವರ್ಗೀಕರಣವಿದೆ. ಆದರೆ ಪತಂಜಲಿಯ ನಿದಾನ ಸೂತ್ರದಂತೆ ಅತಿಛನ್ದಸ್ಸುಗಳಿಗೂ ೪ ಪ್ರಕಾರದ ವರ್ಗೀಕರಣವಿದೆ.

ಛನ್ದ
ದೈವೀ
ಆಸುರೀ
ಪ್ರಾಜಾಪತ್ಯಾ
ಆರ್ಷೀ
ಅತಿಜಗತೀ
೩೬
೫೨
ಶಕ್ವರೀ
೪೦
೫೬
ಅತಿಶಕ್ವರೀ
೧೦
೪೪
೬೦
ಅಷ್ಟಿ
೧೧
೪೮
೬೪
ಅತ್ಯಷ್ಟಿ
೧೨
೫೨
೬೮
ಧೃತಿ
೧೩
೫೬
೭೨
ಅತಿಧೃತಿ
೧೪
೬೦
೭೬

ಛನ್ದಸ್ಸುಗಳ ರೂಪ- [೧೩]

ಛನ್ದಸ್ಸು
ರೂಪ
ದೇವತಾ
ಮಾ
ಪೃಥಿವೀ
ಅಗ್ನಿ
ಪ್ರಮಾ
ಅಂತರಿಕ್ಷ
ವಾಯು
ಪ್ರತಿಮಾ
ದ್ಯೌ
ಸೂರ್ಯ
ಅಸ್ರೀವಿ
ದಿಶಾ
ಸೋಮ
ಗಾಯತ್ರೀ
ಅಜಾ
ಬೃಹಸ್ಪತಿ
ತ್ರಿಷ್ಟುಪ್
ಹಿರಣ್ಯ
ಇಂದ್ರ
ಜಗತೀ
ಗೌ
ಪ್ರಜಾಪತಿ
ಅನುಷ್ಟುಪ್
ಆಯು
ಮಿತ್ರ
ಉಷ್ಣಿಕ್
ಚಕ್ಷು
ಪೂಷಾ
ವಿರಾಟ್
ಅಶ್ವ
ವರುಣ
ಬೃಹತೀ
ಕೃಷಿ
ಪರ್ಜನ್ಯ
ಪಂಕ್ತಿ
ಪುರುಷ
ಪರಮೇಷ್ಠೀ

ಪ್ರಾಗ್ ಗಾಯತ್ರೀ ಪಂಚಕವು ಮಾಪನಗಳ ಆಧಾರ. ಇದಕ್ಕೆ ಸಾಂಖ್ಯದರ್ಶನದ ಅನುಸಾರ ಒಂದು ಅರ್ಥವೆಂದರೆ ೫ ತನ್ಮಾತ್ರೆಗಳು, ಅರ್ಥಾತ್ ೫ ಮೂಲ ಘಟಕಗಳಿಂದ ಯಾಂತ್ರಿಕ ವಿಶ್ವದ ಮಾಪನ ಸಾಧ್ಯ.
ಎರಡನೇಯ ಅರ್ಥವೆಂದರೆ ಮಾಪನದ ಮೂಲ ಘಟಕವು ಮಾಅಥವಾ ಪೃಥಿವೀ ಆಗಿದೆ. ಅದಕ್ಕಿಂತ ಹೆಚ್ಚಿನ ಘಟಕವು ಪ್ರಮಾ. ಪ್ರಮಾ ಎಂಬುದರ ಉದಾಹರಣೆಯು ಜೈನ ಜ್ಯೋತಿಷದಲ್ಲಿ ಸಿಗುತ್ತದೆ.
೫೦೦ ಯೋಜನೆಯನ್ನು ಪ್ರಮಾಣ ಯೋಜನ ಎನ್ನಲಾಗಿದೆ. ಭಾಗವತ-ವಿಷ್ಣು ಇತ್ಯಾದಿ ಪುರಾಣಗಳಲ್ಲಿ ಇದೇ ಪ್ರಮಾಣ ಯೋಜನಾನುಸಾರ ಅಂತರಿಕ್ಷ ಲೋಕಗಳ ಮಾಪನವಿದೆ.[೧೪]
ಪ್ರತಿಮಾ ಎಂಬುದು ಸೂಕ್ಷ್ಮ ರೂಪವಾಗಿದ್ದು ಸಣ್ಣ ಘಟಕಗಳುಳ್ಳದ್ದಾಗಿದೆ. ಅಸ್ರೀವಿಯು ಮೂಲ ಘಟಕಗಳ ಸಂಯೋಗದಿಂದ ಉಂಟಾದ ಘಟಕಗಳಾಗಿವೆ. ಮೂರನೇ ಅರ್ಥವೆಂದರೆ ಮಾ ಎಂಬುದು ಉದ್ದಳತೆ, ಪ್ರಮಾ ಎಂಬುದು ಗತಿ (ವಾಯು) ಅಥವಾ ಸಮಯದ ಅಳತೆ, ಪ್ರತಿಮಾ ಎಂಬುದು ಊರ್ಜಾ (ದ್ಯೌ, ಸೂರ್ಯ) ಅಥವಾ ಪದಾರ್ಥದ ಮಾಪನ, ಅಸ್ರೀವಿ ಎಂಬುದು ವಿದ್ಯುತ್ ಚುಂಬಕೀಯ ಗುಣಗಳು ಹಾಗೂ ಪರಸ್ಪರ ಸಂಬಂಧಗಳ ಮಾಪನವಾಗಿದೆ. ಇದು ಮೊದಲನೆಯ ಅರ್ಥಕ್ಕೆ ಸಮಾನವಾಗಿದೆ.
ಬೃಹತೀ ಛನ್ದ [೧೫]
ಅರ್ಥ
ಬೃಹತೀ ಛನ್ದ
ಅರ್ಥ
ಗಾಯತ್ರೀ
ಬ್ರಹ್ಮವರ್ಚಸ
ಪಂಕ್ತಿ
ಯಜ್ಞ
ಉಷ್ಣಿಕ್
ವಾಯು
ತ್ರಿಷ್ಟುಪ್
ಇಂದ್ರಿಯ, ವೀರ್ಯ
ಅನುಷ್ಟುಪ್
ಸ್ವರ್ಗ
ಜಗತೀ
ಪಶು
ಬೃಹತೀ
ಶ್ರೀ, ಯಶ
ವಿರಾಟ್
ಶ್ರೀ, ಅನ್ನದ ಆಯತನ

ಇದರಲ್ಲಿ ಮುಖ್ಯತಃ ಗಾಯತ್ರೀ, ತ್ರಿಷ್ಟುಪ್, ಜಗತೀಗಳು ಲೋಕಗಳ ಮಾಪನವಾಗಿವೆ. ಸೌರಮಂಡಲದ ಒಳಗೆ ಗಾಯತ್ರೀ, ಉಷ್ಣಿಕ್, ಅನುಷ್ಟುಪ್ ವಿಭಿನ್ನ ಕ್ಷೇತ್ರಗಳ ಮಾಪನವಿದೆ. ಆಕಾಶ-ಗಂಗಾ ಕ್ಷೇತ್ರದ ತನಕ ಗಾಯತ್ರೀ, ತ್ರಿಷ್ಟುಪ್, ಜಗತೀಗಳಿವೆ. ಸೌರಮಂಡಲದ ಮಾಪನವು ಋಗ್ವೇದ (೧೦-೧೩೦-೪,೫) ಇಲ್ಲಿದೆ. ಅತಿಛನ್ದಗಳು ಆಯತನ ಎಂದು ಹೇಳಲ್ಪಟ್ಟಿವೆ.[೧೬] ಗಾಯತ್ರೀ ಕ್ಷೇತ್ರದ ಆಯತನವು ಧೃತಿ-ಅನುಧೃತಿ ಆಗುತ್ತವೆ. ಇಲ್ಲಿ ಪೃಥ್ವಿಯನ್ನು ಅಳತೆಗೋಲಾಗಿಸಿ ಎರಡರ ಘಾತಗಳಲ್ಲಿ ಮಾಪನ ಮಾಡುವುದರಿಂದ ಉಂಟಾಗುತ್ತದೆ. ಕೃತಿ ಛನ್ದಸ್ಸು ಕಣಗಳ ಮಾಪನವಾಗಿದೆ.[೧೭]

(೪) ಛನ್ದಸ್ಸುಗಳ ಅನ್ಯ ರೂಪ- ತ್ರಿವಿಧ ರೂಪ

ಛನ್ದ
ಗಾಯತ್ರೀ
ತ್ರಿಷ್ಟುಪ್
ಜಗತೀ
ಪದಾರ್ಥ[೧೮]
ಆಗ್ನೇಯ
ಐಂದ್ರ
ವಿಶ್ವೇದೇವ
ವರ್ಣ[೧೯]
ಬ್ರಾಹ್ಮಣ
ಕ್ಷತ್ರೀಯ
ವೈಶ್ಯ
ಪದಾರ್ಥ ರೂಪ[೨೦]
ಓಷಧಿ
ವಾತ
ಆಪಃ


ಗಾಯತ್ರಿಯ ವಿವಿಧ ರೂಪ -

(೧) ವೈಶ್ವಾನರ ಅಗ್ನಿ ಶರೀರದ ಆಕಾರವು[೨೧] ತ್ರಿಪಾದ ಗಾಯತ್ರಿಯ ೮ ಅಕ್ಷರಗಳ ಅನುಸಾರ ೮ ಪ್ರದೇಶ = ೮ x ೧೦.೫ = ೮೪ ಅಂಗುಲವಾಗಿದೆ.
(೨) ಪಾರ್ಥಿವ ಗಾಯತ್ರೀ[೨೨]ಅಪ್ ಇದರ ಕ್ರಮಶಃ ೮ ರೂಪಾಂತರಗಳಿವೆ
        ೨.೧ ಅಪ್
        ೨.೨ ಫೇನ
        ೨.೩ ಊಷಃ (ಕ್ಷಾರ)
        ೨.೪ ಸಿಕತಾ (ಕರಡಿ)
        ೨.೫ ಶರ್ಕರಾ (ರೇತ)
        ೨.೬ ಅಶ್ಮಾ (ಕಲ್ಲು)
        ೨.೭ ಅಯಃ (ಲೋಹಾದಿ ಧಾತು)
        ೨.೮ ಹಿರಣ್ಯ (ಸುವರ್ಣ)
(೩) ಆದಿತ್ಯ ಗಾಯತ್ರೀ[೨೩]ಆದಿತ್ಯನ ೪ ಯುಗ್ಮ ಮಿತ್ರ-ವರುಣ, ಭಗ-ಅಂಶ, ಧಾತಾ-ಅರ್ಯಮಾ, ಸವಿತಾ-ವಿವಸ್ವಾನ್.
(೪) ದ್ಯೌ ಗಾಯತ್ರೀ[೨೪]ದ್ಯು ಲೋಕದ ೩ ಪಾದ ಜ್ಯೋತಿ, ಗೌ, ಆಯು ಎಲ್ಲವೂ ಅಷ್ಟಾಕ್ಷರ ಆಗಿವೆ.

(೫) ಸರ್ವಾತ್ಮಿಕಾ ಗಾಯತ್ರೀ[೨೫]ಅಗ್ನಿಯ ೮ ರೂಪ ಪೃಥಿವೀ, ಅಪ್, ಅಗ್ನಿ, ವಾಯು, ವಿದ್ಯುತ್, ಸೋಮ, ರವಿ, ಆತ್ಮಾ.
(೬) ಲೋಕ ಗಾಯತ್ರೀ[೨೬] ೭ ಆರಣ್ಯ ಪಶು, ೭ ಗ್ರಾಮ್ಯ ಪಶು, ೫ ಉದ್ಭಿಜ್ಜ, ೫ ಜೀವ. ಚತುಷ್ಪಾದ ಗಾಯತ್ರಿಯ ಅನುಸಾರ ವಾಕ್, ಭೂ, ಶರೀರ, ಹೃದಯಗಳು ೪ ಪಾದಗಳು.
(೭) ಸಂವತ್ಸರ ೨೪ ಪಕ್ಷಗಳು ಗಾಯತ್ರಿಯ ೨೪ ಅಕ್ಷರಗಳು.[೨೭] ಪೃಥ್ವೀ, ಅಂತರಿಕ್ಷ ಹಾಗೂ ದ್ಯು ಇವುಗಳ ೮-೮ ದಿಕ್ಕುಗಳೂ ಗಾಯತ್ರಿ.
(೮) ಲೋಕ ಮನುಷ್ಯನಿಗಿಂತ ದೊಡ್ಡ ಮಂಡಲ ಪೃಥ್ವೀ, ಸೌರ, ಬ್ರಹ್ಮಾಂಡ, ಸ್ವಯಂಭೂ ಎಲ್ಲವೂ ಮನುಷ್ಯನಿಂದ ಕ್ರಮಶಃ ೨೨೪ ಅಥವಾ ಕೋಟಿಗುಣ ದೊಡ್ಡದಿವೆ.

ಸಂದರ್ಭ ಸೂಚಿ

(೧) ವೇದಾಂಗಗಳ ಯುಗ್ಮ

(ಕ) ಶಿಕ್ಷಾ ಕಲ್ಪೋ ವ್ಯಾಕರಣಂ ನಿರುಕ್ತಂ ಜ್ಯೋತಿಷಾಂ ಚಿತಿಃ |
ಛನ್ದೋ ವಿಚಿತಿರಿತ್ಯೇಷ ಷಡಂಗೋ ವೇದ ಉಚ್ಯತೇ || ||
(ಖ) ಛಂದಃ ಪಾದೌ ತು ವೇದಸ್ಯ ಹಸ್ತೌ ಕಲ್ಪೋಽಥ ಪಠ್ಯತೇ |
ಜ್ಯೋತಿಷಾಮಯನ ಚಕ್ಷುರ್ನಿರುಕ್ತಂ ಶ್ರೋತ್ರಮುಚ್ಯತೇ || ||
ಶಿಕ್ಷಾ ಘ್ರಾಣಂ ತು ವೇದಸ್ಯ ಮುಖಂ ವ್ಯಾಕರಣಂ ಸ್ಮೃತಂ |
ತಸ್ಮಾತ್ಸಾಂಗಮಧೀತ್ಯೈವ ಬ್ರಹ್ಮಲೋಕೇ ಮಹೀಯತೇ || || (೨, ೩ ಪಾಣಿನೀಯ ಶಿಕ್ಷಾ ೪೧, ೪೨)
(ಗ) ಶಿಕ್ಷಾ ಕಲ್ಪೋ ವ್ಯಾಕರಣಂ ನಿರುಕ್ತಂ ಛನ್ದೋವಿಚಿತಿ ರ್ಜೋತಿಷಮಿತಿ ಚಾಂಗಾನಿ (ಕೌಟಿಲ್ಯ ಅರ್ಥಶಾಸ್ತ್ರ ೧-೨-೧) ಇದು ಸಂಭವತಃ ಜ್ಯೋತಿಷದ ಚಿತಿಯೇ ಆಗಿರಬೇಕು.
(ಘ) ಏವಮಿಮೇ ಸರ್ವೇ ವೇದಾ ನಿರ್ಮಿತಾಃ ಸಕಲ್ಪಾಃ ಸರಹಸ್ಯಾಃ, ಸಬ್ರಾಹ್ಮಣಾಃ ಸೋಪನಿಷತ್ಕಾಃ, ಸೇತಿಹಾಸಾಃ, ಸಾನ್ವಾಖ್ಯಾನಾಃ, ಸಪುರಾಣಾಃ, ಸಸ್ವರಾಃ, ಸಸಂಸ್ಕಾರಾಃ, ಸನಿರುಕ್ತಾಃ, ಸಾನುಶಾಸನಾಃ, ಸಾನುಮಾರ್ಜನಾಃ, ಸವಾಕೋವಾಕ್ಯಾಃ | (ಗೋಪಥ ಬ್ರಾಹ್ಮಣ ಪೂರ್ವ, ೨-೯)
(ಙ) ಏವಂ ವಾ ಅರೇಽಸ್ಯ ಮಹತೋ ಭೂತಸ್ಯ ನಿಃಶ್ವಸಿತಮೇತದ್ಯತ್ ಋಗ್ವೇದೋ, ಯಜುರ್ವೇದಃ, ಸಾಮವೇದೋಽಥರ್ವಾಂಗಿರಸಃ, ಇತಿಹಾಸಃ, ಪುರಾಣಂ, ವಿಧ್ಯಾಃ, ಉಪನಿಷದಃ, ಶ್ಲೋಕಾಃ, ಸೂತ್ರಾಣಿ, ಅನುವ್ಯಾಖ್ಯಾನಾನಿ, ವ್ಯಾಖ್ಯಾನಾನಿ. ಅಸ್ಯೈವೈತಾನಿ ನಿಃಶ್ವಾಸಿತಾನಿ. (ಬೃಹದಾರಣ್ಯಕ ಉಪನಿಷದ್, ೨-೪-೧೦)
(ಚ) ದ್ವೇ ವಿಧ್ಯೇ ವೇದಿತವ್ಯೇ ಇತಿ ಹ ಸ್ಮ ಯತ್ ಬ್ರಹ್ಮವಿದೋ ವದಂತಿ ಪರಾ ಚೈವ ಅಪರಾ ಚ || || ತತ್ರಾಪರಾ ಋಗ್ವೇದೋ ಯಜುರ್ವೇದಃ ಸಾಮವೇದೋಽಥರ್ವವೇದಃ ಶಿಕ್ಷಾ ಕಲ್ಪೋ ವ್ಯಾಕರಣಂ ನಿರುಕ್ತಂ ಛನ್ದೋ ಜ್ಯೋತಿಷಮಿತಿ || || (ಮುಂಡಕೋಪನಿಷದ್ ೧-೧-೪,೫)

(೨) ವೇದಾಂಗಗಳ ಸ್ಪಷ್ಟ ರೂಪದಲ್ಲಿ ಮೇಲೆ (೧.ಕ) ಇಂದ (೧.ಚ) ತನಕ ವೇದ ಭಾಗದಲ್ಲಿ ಉಲ್ಲೇಖವಿದೆ.

(೩) ಋಷಿಗಳನ್ನು ಮಂತ್ರ ದ್ರಷ್ಟಾರರು ಎಂದು ಕರೆಯಲಾಗಿದೆ ಅಂದರೆ ಮಂತ್ರ ಹಾಗೂ ಶಬ್ದಗಳು ನಿತ್ಯವಾಗಿವೆ. ಋಷಿಗಳು ಕೇವಲ ಅದರ ದರ್ಶನ ಮಾಡುತ್ತಾರೆ. ಆಂಗ್ಲದ Discover ಶಬ್ದವೂ ಹಾಗೇ ಇದೆ. ವಿಚಾರಗಳು ಹಿಂದಿನಿಂದಲೂ ಇದ್ದವು, ಆದರೆ ಆವರಣದಲ್ಲಿ (cover) ಇದ್ದವನ್ನು ಹೊರತರಲಾಯಿತಷ್ಟೆ. ಪೂರ್ವ ಮೀಮಾಂಸದ ೬ ಸೂತ್ರಗಳು (೧-೧-೨೭-೩೨) ಇದರಲ್ಲಿ ವೇದದ ಅಪೌರುಷೇಯತ್ವವನ್ನು ಪ್ರಮಾಣಿತಗೊಳಿಸಲಾಗಿದೆ-
೧. ವೇದಾಂಶ್ಚೈಕೇ ಸಂನಿಕರ್ಷಂ ಪುರುಷಾಖ್ಯಾಃ | ೨. ಅನಿತ್ಯದರ್ಶನಾಶ್ಚ | ೩. ಉಕ್ತಂ ತು ಶಬ್ದಪೂರ್ವತ್ವಂ | ೪. ಆಖ್ಯಾಃ ಪ್ರವಚನಾತ್ | ೫. ಪರಂ ತು ಶ್ರುತಿ ಸಾಮಾನ್ಯ ಮಾತ್ರಮ್ | ೬. ಕೃತೋ ವಾ ವಿನಿಯೋಗಃ ಸ್ಯಾತ್, ಕರ್ಮಣಃ ಸಂಬಂಧನಾತ್ |
ಜೈಮಿನೀಯ ನ್ಯಾಯಮಾಲಾವಿಸ್ತರದಲ್ಲಿಯೂ ವಿಧ್ಯಾದಿ ರೂಪೋ ಯಃ ಶಬ್ದಃ ಸೋ ನಿತ್ಯೋಽಥಾ ವಿನಶ್ವರಃ | ಅನಿತ್ಯೋ ವರ್ಣ ರೂಪತ್ವಾದ್ ವರ್ಣೇ ಜನ್ಮೋಪಲಂಭನಾತ್ |
ಅಬಾಧಿತ ಪ್ರತ್ಯಭಿಜ್ಞಾಬಲಾದ್ ವರ್ಣಸ್ಯ ನಿತ್ಯತಾ | ಉಚ್ಚಾರಣ ಪ್ರಯತ್ನೇನ ವ್ಯಜ್ಯತೇಽಸೌ ನ ಜನ್ಯತೇ ||
ನಿತ್ಯಾ ವಾಕ್ ವಾಗಕ್ಷರಂ ಪ್ರಥಮಜಾ ಋತಸ್ಯ ಮಾತಾ ಅಮೃತಸ್ಯ ನಾಭಿಃ |
ಸಾ ನೋ ಜುಷಾಣೋಪಯಜ್ಞಮಾಗಾದವಂತೀ ದೇವೀ ಸುಹವಾ ಮೇ ಅಸ್ತು | (ತೈತ್ತಿರೀಯ ಬ್ರಾಹ್ಮಣ ೨-೮-೮-೫)
ಇಯಂ ಯಾ ಪರಮೇಷ್ಠಿನೀ ವಾಗ್ದೇವೀ ಬ್ರಹ್ಮಶಂಸಿತಾ |
ಯೇನೈವ ಸಸೃಜೇ ಘೋರಂ ತೇನೈವ ಶಾಂತಿರಸ್ತು ನಃ || (ಅಥರ್ವ ಸಂ. ೧೯-೯-೩)
        ಇನ್ನಿತರೆ ವಿಚಾರಗಳೆಂದರೆ ಪದೇ-ಪದೇ ಲುಪ್ತವಾಗುವ ವೇದವನ್ನು ಋಷಿಗಳು ಪುನಃ ನಿರ್ಮಾಣ ಮಾಡುತ್ತಾರೆ
ಯುಗೇ ಯುಗೇ ವಿದಥ್ಯಂ ಗೃಣದ್ಭ್ಯೋಽಗ್ನೇ ರಯಿಂ ಯಶಸ ದೇಹಿ ನವ್ಯಸೀಮ್ (ಋಗ್ವೇದ ೬-೮-೫)
ಯುಗಾಂತೇಂಽತರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ | ಲೇಭಿರೇ ತಪಸಾ ಪೂರ್ವಮನುಜ್ಞಾತಾ ಸ್ವಯಂಭುವಾ ||
ಪ್ರತಿ ಮನ್ವಂತರಂ ಚೈವ ಶ್ರುತಿರನ್ಯಾ ವಿಧೀಯತೇ | ಋಚೋ ಯಜೂಂಷಿ ಸಾಮಾನಿ ಯಥಾವಾನ್ ಪ್ರತಿದೈವತಮ್ ||
ಋಷೀಣಾಂ ತಪ್ಯತಾಮುಗ್ರಂ ತಪಃ ಪರಮದುಶ್ಚರಮ್ | ಮಂತ್ರಾಃ ಪ್ರಾದುರ್ಬಭೂಬುರ್ಹಿ ಪೂರ್ವ ಮನ್ವಂತರೇಷ್ವಿಹ || (ವಾಯು ಪುರಾಣ, ಅಧ್ಯಾಯ ೫೯)
ಏತೇ ಮಂತ್ರಕೃತಾಃ ಸರ್ವೇ ಕೃತ್ಸ್ನಶಸ್ತು ನಿಬೋಧತ | ಭೃಗುಃ ಕಾಶ್ಯಃ ಪ್ರಚೇತಾಶ್ಚ ದಧೀಚೋಹ್ಯಾತ್ಮವಾನಪಿ ||
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾ ಋಷಿಪುತ್ರಾಸ್ತಥಾ ಸ್ಮೃತಾಃ |
ಋಷೀಣಾಂಶ್ಚ ಸುತಾ ಹ್ಯೇತೇ ಋಷಿಪುತ್ರಾಃ ಶ್ರುತರ್ಷಯಃ || (ಮತ್ಸ್ಯ ಪುರಾಣ, ೧೨೧ ಅಧ್ಯಾಯ)
ಯಾಮೃಷಯೋ ಮಂತ್ರಕೃತೋ ಮನೀಷಿಣ ಅನ್ವೈಚ್ಛನ್ ದೇವಾಸ್ತಪಸಾ ಶ್ರಮೇಣ |
ತಾಂ ದೇವೀ ವಾಚಂ ಹವಿಷಾ ಯಜಾಮಹೇ ಸಾ ನೋ ದಧಾತು ಸುಕೃತಸ್ಯ ಲೋಕೇ | (ತೈತ್ತಿರೀಯ ಬ್ರಾಹ್ಮಣ. ೨-೮-೮-೫)
ನಮೋ ಋಷಿಭ್ಯೋ ಮಂತ್ರಕೃದ್ಭ್ಯೋ ಮಂತ್ರಪತಿಭ್ಯಃ |
ಮಾಮಾ ಋಷಯೋ ಮಂತ್ರಕೃತೋ ಮಂತ್ರವಿದಃ ಪ್ರಾಹುರ್ದೈವೀ ವಾಚಮ್ (ತೈತ್ತಿ. ಆ. ೪-೧-೧)
ಋಷೇ ಮಂತ್ರಕೃತಾಂ ಸ್ತೋಮೈಃ ಕಶ್ಯಪೋದ್ವರ್ಧಯತ್ ಗಿರಃ |
ಸೋಮಂ ನಮಸ್ಯ ರಾಜಾನಂ ಯೋ ಜಜ್ಞೇ ವೀರುಧಾಂ ಪತಿಃ | (ಋಕ್ ಸಂ. ೯-೧೧೪-೨)
        ಮಂತ್ರದ ನಿರ್ಮಾತಾ ಅಥವಾ ದ್ರಷ್ಟಾ ಎಂಬೆರಡೂ ರೂಪಗಳಲ್ಲಿ ಋಷಿಗಳು ವೇದದ ದರ್ಶನ ಮಾಡಿರುತ್ತಾರೆ. ಅದನ್ನು ತಿಳಿಯಹೇಳುವುದಕ್ಕಾಗಿ ವೇದಾಂಗಗಳನ್ನು ನಿರ್ಮಿಸಿದರು ಸಾಕ್ಷಾತ್ ಕೃತ ಧರ್ಮಾಣ ಋಷಯೋ ಬಭೂವುಃ | ತೇಽವರೇಭ್ಯೋ ಽಸಾಕ್ಷಾತ್ಕೃತ ಧರ್ಮೇಭ್ಯ ಉಪದೇಶೇನ ಮಂತ್ರಾನ್ ಸಂಪ್ರಾದುಃ | ಉಪದೇಶಾಯ ಗ್ಲಾಯಂತೋಽವರೇ ಬಿಲ್ಮಗ್ರಹಣಾಯೇಮಂ ಗ್ರಂಥಂ ಸಮಾಮ್ನಾಸಿಷುರ್ವೇದಂ ಚ ವೇದಾಂಗಾನಿ ಚ (ಯಾಸ್ಕ ನಿರುಕ್ತ, ೧-೨೦)

(೪) ಛನ್ದೋ ವಿಚಿತಿ ಶಬ್ದದ ಪ್ರಯೋಗ - ೧.ಕ ಹಾಗೂ ೧.ಗ ಇದರಲ್ಲಿ ಮೇಲೆ ತಿಳಿಸಲಾಗಿದೆ. ಇದಲ್ಲದೆ ಪಾಣಿನೀಯ ಗಣಪಾಠ ೪-೩೮೩, ಚಾಂದ್ರ ಗಣಪಾಠ ೩-೧-೪೫, ಜೈನೇಂದ್ರ ಗಣಪಾಠ ೩-೩-೪೭, ಜೈನೇಂದ್ರ ಶಾಕಟಾಯನ ಗಣಪಾಠ ೩-೧-೧೩೬, ಸರಸ್ವತೀಕಂಠಾಭರಣ ೪-೩-೧೮೯, ಹಾಗೂ ಗಣರತ್ನ ಮಹೋದಧಿ ೫-೩-೪೪ ಇವುಗಳಲ್ಲಿಯೂ ಉಲ್ಲೇಖವಿದೆ. ನಿದಾನ ಸೂತ್ರದ ಭೂಮಿಕೆಯಲ್ಲಿಯೂ
ಯಾಃ ಷಟ್ ಪಿಂಗಲ ನಾಗಾದ್ಯೈಃ ಛನ್ದೋವಿಚಿತಯಃ ಕೃತಾಃ |
ಅಥ ಭಗವಾನ್ ಛನ್ದೋವಿಚಿತಿಕಾರಃ ಪತಂಜಲಿಃ || (ನಿದಾನ ಸೂತ್ರ, ಹೃಷೀಕೇಶ ವ್ಯಖ್ಯಾ ಭೂಮಿಕಾ)

(೫) ಆವರಣ ವಾದ ಸೃಷ್ಟಿ ನಿರ್ಮಾಣದ ಹತ್ತು ವೈಕಲ್ಪಿಕ ಸಿದ್ಧಾಂತಗಳ ಉಲ್ಲೇಖವು ಋಗ್ವೇದದ ನಾಸದೀಯ ಸೂಕ್ತ (ಶೌನಕ ಸಂಹಿತಾ ೧೦-೧೨೮) ಇಲ್ಲಿದೆ. ಅದರ ಪ್ರಥಮ ಮಂತ್ರವು ಆವರೀವಃ ಪದದಿಂದ ಆವರಣವಾದದ ಉಲ್ಲೇಖ ಮಾಡುತ್ತಿದೆ-
ನಾಸದಾಸೀನ್ನೋ ಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾಪರೋ ಯತ್ | ಕಿಮಾವರೀವಃ ಕುಹಕಸ್ಯ ಶರ್ಮನ್ನಂಭಃ ಕಿಮಾಸೀದ್ ಗಹನ ಗಭೀರಂ ||
ಇದರಲ್ಲಿರುವ ಅನ್ಯ ವಾದಗಳು ಸದಸದ್‍ವಾದ, ರಜೋವಾದ, ವ್ಯೋಮವಾದ, ಅಪರವಾದ, ಅಂಭೋವಾದ. ಇದಲ್ಲದೆ
ಅಪಶ್ಯಂ ಗೋಪಾಮನಿಪದ್ಯಮಾನ ಮಾ ಚ ಪರಾ ಚ ಪಥಿಭಿಶ್ಚರಂತಮ್ | ಸ ಸಧ್ರೀಚಿಃ ಸ ವಿಷೂಚಿರ್ವಸಾನ ಆ ವರೀವರ್ತಿ ಭುವನೇಷ್ವಂತಃ | (ಋಕ್ ಸಂ. ೧-೧೬೪-೩೧, ೧೦-೧೭೭-೩; ವಾಜ. ಯಜು. ೩೭-೧೭; ಅಥರ್ವ ೯-೧೦-೧೧)

(೬) ವಯ, ವಯುನ, ವಯೋನಾಧದ ವಿಸ್ತೃತ ವರ್ಣನೆಯು ಪಂ. ಮಧುಸೂದನ್ ಓಝಾರವರ ಪುಸ್ತಕ ಆವರಣವಾದದಲ್ಲಿದೆ. ಇದು ಜೋಧಪುರ ವಿಶ್ವವಿದ್ಯಾಲಯ, ರಾಜಸ್ಥಾನದಿಂದ ಪ್ರಕಾಶಿಸಲ್ಪಟ್ಟಿದೆ. ಅವರ ಇತರೆ ಪುಸ್ತಕಗಳು ದಶವಾದ ರಹಸ್ಯ, ಬ್ರಹ್ಮವಿನಯ, ಛನ್ದ ಸಮೀಕ್ಷಾ ಇತ್ಯಾದಿಗಳೂ ಇವೆ.
ವಯ = ವೀ ಗತಿ ವ್ಯಾಪ್ತಿ ಪಜನ ಕ್ರಾಂತಿ ಅಸನ ಖಾದನೇಷು (ಪಾ. ಧಾತು ೨-೪೧)
ವೀ + ಅಸುನ್ = ವಯಸ್
ನಿಘಂಟುವಿನಲ್ಲಿ (೨-೭-೭) ವಯಃ ಅನ್ನದ ಹೆಸರಾಗಿದೆ. ದೇವರಾಜ ಯಜ್ವಾ ಇವರ ಅಭಿಪ್ರಾಯದಂತೆ ಕಾರಕ ಭೇದದಿಂದ ಎಲ್ಲ ಅರ್ಥಗಳೂ ಬರುತ್ತವೆ ಧನ, ಅನ್ನ, ಬಾಲ್ಯಾದಿ ಅವಸ್ಥಾ, ವರ್ಷ, ಜೀವನ, ಖಗ, ಜಾತಿ ಮತ್ತು ಯೌವನ ವಯೇ ಧನೇಽನ್ನೇ ಬಾಲ್ಯಾದೌ ವತ್ಸರೋ ಜೀವಿತೇ ಖಗೇ |
ಜಾತೌ ಚ ಯವ್ವನೇ ಚೈವ ಸಾಂತಂ ಕ್ಲೀವಮುದಾಹೃತಮ್ || (ವಾಙ್ಮಯಾರ್ಣವ ೫೦೬೧)
ಸಾಯಣರು ಅನ್ನ-ಅಶ್ವ ಸಂಬಂಧದಿಂದ ಇದರ ಅರ್ಥ ರಜ್ಜು-ರಶ್ಮಿ-ವಲ್ಗಾ ಹಾಗೂ ಬಹುವಚನ (ವಿಃ, ವೀ, ವಯಃ) ಎಂದು ವೇತ್ತಾರಃ, ಮರುತಾದಿ ಅರ್ಥ ಮಾಡಿದ್ದಾರೆ. ವಯನ ಕ್ರಿಯೆಯಿಂದ ಮಾಡಲ್ಪಟ್ಟ ವಸ್ತ್ರದಂತೆ ಅವಯವಗಳ ಪರಸ್ಪರ ಸಂಬಂಧವೂ ವಯ ಎಂದೇ ಆಗುತ್ತದೆ. ಅದರಲ್ಲೂ ಪ್ರಾಣಶಕ್ತಿಯ ಪ್ರಯೋಗವಾಗುತ್ತದೆ. ಆದ್ದರಿಂದ ವಯ, ವಯುನ, ವಯೋನಾಧ ಎಲ್ಲವೂ ಪ್ರಾಣವಾಗಿವೆ ಪ್ರಾಣೋ ವೈ ವಯಃ (ಐತರೇಯ ಬ್ರಾಹ್ಮಣ. ೧-೨೮)
ಪ್ರಾಣೋ ವೈ ದೇವಾಃ ವಯೋನಾಧಾಃ | ಪ್ರಾಣೈರ್ಹೀದ ಸರ್ವಂ ವಯುನಂ ನದ್ಧಮ್ | ಅಥೋ ಛಂದಾಂಸಿ ವೈ ದೇವಾ ವಯೋನಾಧಾಃ | ಛನ್ದೋಭಿರ್ಹೀದಂ ಸರ್ವಂ ವಯುನಂ ನದ್ಧಮ್ (ಶತಪಥ ಬ್ರಾಹ್ಮಣ. ೮-೨-೨೮) |
ವಯಕ್ಕೆ ಸಂಬಂಧಿಸಿದ ೧೯ ಪ್ರಕಾರದ ಛನ್ದಸ್ಸುಗಳಿವೆ
ಮೂರ್ಧಾವಯಃ, ಪ್ರಜಾಪತಿಛಂದಃ, ಕ್ಷತ್ರವಯೋ ಮಯಂದಂ ಛಂದಃ ..... (ಯಜು. ೧೪-೯,೧೦) |
ಪಶವೋ ವೈ ವಯಾಂಸಿ (ಶತಪಥ ೯-೩-೩-೭) |
ಪಶವೋ ವೈ ವಯಸ್ಯಾ ಇಷ್ಟಕಾ (ತೈತ್ತಿರೀಯ ಸಂ. ೫-೩-೧-೩)
ವಯೋ ವೈ ವಾಮದೇವ್ಯ ಸಾಮ (ಜೈಮಿನೀಯ ಉಪ. ಬ್ರಾಹ್ಮಣ ೧-೧೩೯)
ಪ್ರಾಣಾ ವಾವ ತೇಷಾಂ ದೇವಾನಾಂ ವಾಮಂ-ವನನೀಯಂ-ವಸು ಆಸೀತ್ (ಜೈ. ೧-೧೪೨)
ತಕ್ಷನ್ ಪಿತೃಭ್ಯಾಮೃಭವೋ ಯುವದ್ ವಯಃ (ಋಕ್. ೧-೧೧೧-೧) |
ಆ ನೋ ಯಜ್ಞಾಯ ತಕ್ಷತ ಋಭುಮದ್ ವಯಃ (ಋಕ್. ೧-೧೧೧-೨)
ಅಮೀ ಚ ವಿಶ್ವೇ ಅಮೃತಾಸ ಆ ವಯೋ ಹವ್ಯ ದೇವೇಷ್ವಾ ವಯಃ (ಋಕ್. ೧-೧೨೭-೮)
ಅಥಾ ದಧಾತೇ ಬೃಹದುಕ್ಥ್ಯಂ ವಯ ಉಪಸ್ತುತ್ಯಂ ಬೃಹದ್ ವಯಃ (ಋಕ್. ೧-೧೩೬-೨) |
ಗಮನ್ನ ಇಂದ್ರಃ ಸಖ್ಯಾ ವಯಶ್ಚ (ಋಕ್. ೧-೧೭೮-೨)
ಉಪಯಾಮ ಗೃಹೀತೋಽಸಿ ಇಂದ್ರಾಯ ತ್ವಾ ಬೃಹದ್ವತೇ ವಯಸ್ವತ ಉಕ್ಥಾವ್ಯಂ ಗೃಹ್ಣಾಮಿ (ಯಜು. ೭-೨೨)
ಇಂಧಾನಸ್ತ್ವಾ ಶತಂ ಹಿ ಮಾ ದ್ಯುಮಂತಂ ಸಮಿಧೀಮಹಿ |
ವಯಸ್ವಂತೋ ವಸಸ್ಕೃತಂ ಸಹಸ್ವಂತಃ ಸಹಸ್ಕೃತಂ || (ಯಜು. ೩-೧೮)
ವಯಾಂಸಿ ತದ್ ವ್ಯಾಕರಣಂ ವಿಚಿತ್ರಮ್, ಮನುರ್ಮನೀಷಾ ಮನುಜೋ ನಿವಾಸಃ | (ಶ್ರೀಮದ್ ಭಾಗವತ ೨-೧-೩೬)
ವಯುನ ದೇವರಾಜ ಯಜ್ವಾ ಮತ ಅಜ ಗತಿ ಕ್ಷೇಪಣಯೋಃ (ಪಾಣಿ, ಧಾತು ೧-೧೩೯) + ಔಣಾದಿಕ ಉನನ್ ಪ್ರತ್ಯಯ | ಯಾಸ್ಕ ಮತ ವೀ ಧಾತುವಿನಿಂದ, ವಯ ಎಂಬ ತರಹ. ಇದರರ್ಥ ಪ್ರಾಣ, ಧೂಮ, ಅನ್ನ, ವೀರ್ಯ, ಪಶು ಇತ್ಯಾದಿ. ನಿಘಂಟುವಿನಲ್ಲಿ ಪ್ರಶಸ್ಯ (೩-೮-೧೦) ಸಾಯಣ ಭಾಷ್ಯ ಋಕ್ (೧-೯೨-೬) ಇದರಲ್ಲಿ ಪ್ರಾಣಿಗಳ ಜ್ಞಾನ, (೧-೧೪೪-೫) ಇಲ್ಲಿ ಪ್ರಜ್ಞಾನ, ಅನುಷ್ಠಾನ ವಿಷಯ, (೨-೧೯-೮) ಇಲ್ಲಿ ಮಾರ್ಗ ಹಾಗೂ (೩-೫-೬) ಇಲ್ಲಿ ಜ್ಞಾತವ್ಯ ಪದಾರ್ಥ ಎಂಬ ಅರ್ಥ ಮಾಡುತ್ತಾರೆ.
ವಯೋನಾಧ = ಮರ್ಯಾದಾ ತಥಾ ವಾಮಮ್ = ವಯದೊಂದಿಗೆ ವಯುನದ ಪ್ರಯೋಗ
ಕಾ ಮರ್ಯಾದಾ ವಯುನಾ ಕದ್ಧ ವಾಮಮಚ್ಛಾ ಗಮೇಮ ರಘವೋ ನ ವಾಜಮ್ |
ಕದಾ ನೋ ದೇವೀರಮೃತಸ್ಯ ಪತ್ನೀಃ ಸೂರೋ ವರ್ಣೇನ ತತನನ್ನುಷಾಸಃ || (ಋಕ್. ೪-೫-೧೩)
ವಯೋನಾಧ ಯಾ ನಾಹ ವಯಃ + ಣಹ ಬಂಧನೇ (ಪಾಣಿನಿ ೪-೫೫) + ಅಣ್ | ಹ ಬದಲಿಗೆ ಧ ಛನ್ದಸ ಪ್ರಯೋಗವಿದೆ. ವಯವನ್ನು ಬಂಧಿಸುವುದು ವನೋನಾಧ. ಯಜುರ್ವೇದ (೧೪-೭) ಇಲ್ಲಿ ೫ ಬಾರಿ ವಯೋನಾಧದ ಪ್ರಯೋಗವಿದೆ. ಅಲ್ಲಿ ಇದರರ್ಥವು ಸೀಮಾ ಭಾವೋತ್ಪನ್ನ ಮಾಡುವ ದೇವ.

(೭) ಛನ್ದಸ್ಸಿನ ವೈದಿಕ ನಿರ್ವಚನ -
(ಕ) ಯಶ್ಛಂದೋಭಿಶ್ಚನ್ನಃ ತಸ್ಮಾತ್ ಛಂದಾಂಸೀ ವ್ಯಾಚಕ್ಷ್ಯತೇ (ದೈವತ ಬ್ರಾಹ್ಮಣ. ೩-೧೯)
ಛಂದಾಂಸಿ ಛನ್ದಯಂತೀತಿ ವಾ (ದೈವತ ಬ್ರಾಹ್ಮಣ. ೩-೩೦)
(ಖ) ತದ್ ಯದ್ ಏನಾನ್ ಛನ್ದಾಂಸಿ ಮೃತ್ಯೋಃ ಪಾಪ್ಮನೋಽಛಾದಯಂಸ್ತಚ್ಛನ್ದಸಾಂ ಛನ್ದಸ್ತ್ವಮ್, ಏನಾನ್ = ದೇವಾನ್ | (ಜೈಮಿನೀಯ ಬ್ರಾಹ್ಮಣ. ಉಪ. ೧-೨೮೪)
(ಗ) ತಾನಿ ಅಸ್ಮಾ (ಅಸ್ಮೈ = ಪ್ರಜಾಪತಯೇ) ಅಚ್ಛದಯಂ ಸ್ತಾನಿ ಯದ್ ಅಸ್ಮಾ ಅಚ್ಛದಯನ್ ತಸ್ಮಾತ್ ಛಂದಾಂಸಿ | (ಶತಪಥ ಬ್ರಾಹ್ಮಣ. ೮-೫-೨-೧)
(ಘ) ದೇವಾಃ ಅಸುರಾನ್ ಹತ್ವಾ ಮೃತ್ಯೋಃ ಅಬಿಭಯುಃ, ತೇ ಛಂದಾಂಸಿ ಅಪಶ್ಯನ್, ತಾನಿ ಪ್ರಾವಿಶನ್, ತೇಭ್ಯಃ ಯದ್ ಯದ್ ಅಚ್ಛದಯ ತೇನ ಆತ್ಮಾನಮ್ ಅಚ್ಛಾದಯಂತ ತತ್ ಛನ್ದಸಾಂ ಛನ್ದಸ್ತ್ವಮ್ | (ಮೈತ್ರಾಯಣೀ ಬ್ರಾಹ್ಮಣ. ೩-೪-೭)
(ಙ) ಯತ್ ಛನ್ದೋಭಿಶ್ಛನ್ನಃ ತಸ್ಮಾಚ್ಛಂದಾಂಸಿ ಇತ್ಯಾಚಕ್ಷತೇ | (ಐತರೇಯ ಆರಣ್ಯಕ. ೨-೧-೬)
(ಚ) ತೇ ಛನ್ದೋಭಿಃ ಆತ್ಮಾನಂ ಛಾದಯಿತ್ವಾ ಉಪಯಾನ್ ತತ್ ಛನ್ದಸಾಂ ಛನ್ದಸ್ತ್ವಮ್ | (ತೈ.ಸಂ. ೫-೬-೬-೧)

(೮) ಮಧುಸೂದನ ಓಝಾರವರ ಬ್ರಹ್ಮ-ಸಮನ್ವಯದ ಅವ್ಯಯ ಅನುವಾಕದಲ್ಲಿ-
ಯತೋ ವಸ್ತು ವ್ಯವಚ್ಛಿತಿ ಶ್ಛಂದ ಆಯತನಂ ಚ ತತ್ |
ದೇಶ ಆಯಾಮ ವಿಸ್ತರೌ ದಿಕ್ಕಾಲೌ ಛನ್ದಸಿ ಸ್ಫುಟಾಃ || ೩೮೩ ||
ಅಕ್ಷರೋಪಾಧಿ ವಶತೋಽವಚ್ಛಿನ್ನಂ ಭವದವ್ಯಯಮ್ | ಪ್ರತ್ಯಕ್ಷಂ ಭವತಿಚ್ಛಂದಶ್ಛಂದೋಭಿಶ್ಛಂದನಂ ಚ ತತ್ | ಪ್ರಾಣಾನಾಮಮೃತಾನಾಂ ತತ್ ಛನ್ದನಂ ಪ್ರಾಣತೋಽನ್ಯತಃ || ೩೮೫ ||

(೯) ಕೇವಲ ಭಾಗವತ ಪುರಾಣವನ್ನು ನೋಡಿದರೆ ಸಾಕು ಛನ್ದಸ್ಸಿನ ಎಲ್ಲ ರೂಪಗಳೂ ಸಿಗುತ್ತವೆ-
೧. ಛಂದಾಂಸಿ ಅನಂತಸ್ಯ ಶಿರಃ ಗೃಣಂತಿ (೨-೧-೩೧)
೨. ವಾಚಾಂ ಬಹ್ವೇ ಮುಖಂ ಕ್ಷೇತ್ರಂ ಛನ್ದಸಾಂ ಸಪ್ತ ಧಾತವಃ (೨-೭-೧೧)
೩. ಛಂದಃ ಸುಪರ್ಣೈಃ ಋಷಯೋ ವಿವಿಕ್ತೇ (೩-೫-೪೦)
೪. ಛಂದಾಂಸಿ ಯಸ್ಯ ತ್ವಚಿ ಬರ್ಹಿ ರೋಮ (೩-೧೩-೩೫)
೫. ತಾರ್ಕ್ಷ್ಯೇಣ ಸ್ತೋತ್ರ ವಾಜಿನಾ (೪-೭-೧೯)
೬. ಗರುಡೋ ಭಗವಾನ್ ಸ್ತೋತ್ರ-ಸ್ತೋಮಶ್ಛಂದೋಮಯಃ (೬-೮-೨೯)
೭. ಛನ್ದೋಮಯಂ ಯದಜಯಾರ್ಪಿತ ಷೋಡಶಾರಂ ಸಂಸಾರ ಚಕ್ರಮ್ (೭-೯-೨೧,೨೨)
೮. ಯತ್ರ ಹಯಾಃ ಛನ್ದೋನಾಮಾನಃ ಸಪ್ತ (೮-೩-೩೧)
೯. ಖೇಭ್ಯಮಯಂ ಛಂದಾಂಸಿ ಋಷಯಃ (೮-೩-೩೯)
೧೦. ಛಂದಾಂಸಿ ಸಾಕ್ಷಾತ್ ತತ್ರ ಸಪ್ತ ಧಾತವಃ ತ್ರಯೀಮಯಾತ್ಮನ್ (೮-೭-೨೮)
೧೧. ಛನ್ದೋಮಯೋ ದೇವ ಋಷಿಃ ಪುರಾಣಃ (೮-೭-೩೦) ಪುರಾಣ = ಪುರದಲ್ಲಿ ಗತಿಶೀಲ ಪ್ರಾಣ
೧೨. ಯಸ್ಯ ಛನ್ದೋಮಯೋ ಬ್ರಹ್ಮದೇಹಃ ಆವಪನಂ ವಿಭೋ (೧೦-೮೦-೪೫)
೧೩. ಯದ್ಯಸೌ ಛನ್ದಸಾಂ ಲೋಕಮ್ ಆರೋಕ್ಷ್ಯನ್ ಬ್ರಹ್ಮವಿಷ್ಟಪಮ್ (೧೧-೧೭-೩೧)
ವಾಯುಪುರಾಣ (ಅಧ್ಯಾಯ ೫೨), ಬ್ರಹ್ಮಾಂಡ ಪುರಾಣ (ಪೂರ್ವ ೨೨), ವಿಷ್ಣು ಪುರಾಣ (೨/೮-೧೦) ಹಾಗೂ ಮತ್ಸ್ಯ ಪುರಾಣ ಇತ್ಯಾದಿಯೂ ನೋಡಬಹುದು. ವೈದಿಕ ಪ್ರಯೋಗ-
೧. ಛಂದಾಂಸಿ ವೈ ಬ್ರಜೋ ಗೋಸ್ಥಾನಃ | (ತೈ.ಬ್ರಾಹ್ಮಣ ೩-೨-೯-೩)
೨. ಅನ್ನಂ ವಾವ ಪಶವಃ ತಾನ್ಯಸ್ಮಾ (ಪ್ರಜಾಪತಯೇ) | ಅಚ್ಛದಯಂಸ್ತಾನಿ ಯದಸ್ಮಾ ಅಚ್ಛದಯಂಸ್ತಸ್ಮಾಚ್ಛಂದಾಂಸಿ | (ಶತಪಥ ೮-೫-೨-೧)
೩. ಪ್ರಜಾಪತೇರ್ವಾ ಏತಾನ್ಯಂಗಾನಿ ಯಚ್ಛಂದಾಂಸಿ (ಐ.ಬ್ರಾಹ್ಮಣ ೨-೧೮)
೪. ಶ್ರಿಯೋ ಛನ್ದೋ ನ ಸ್ಮಯತೇ ವಿಭಾತೀ (ಋಕ್, ೧-೯೨-೬)
೫. ಛಂದಾಂಸಿ ವಾ ಅಸ್ಯ (ಅಗ್ನೇಃ) ಸಪ್ತ ಧಾಮ ಪ್ರಿಯಾಣಿ | (ಮಾಧ್ಯಂದಿನ ಸಂ. ೧೭-೭೯ರ ವ್ಯಾಖ್ಯೆ ಶತಪಥ ೮-೨-೩-೪೪ರಲ್ಲಿದೆ)
೬. ಅಗ್ನೇರ್ವೈ ಪ್ರಿಯಾ ತನೂ ಛಂದಾಂಸಿ (ತೈ.ಸಂ. ೫-೨-೧)
೭. ಛಂದಾಂಸಿ ಜಜ್ಞಿರೇ ತಸ್ಮಾತ್ (ಪುರುಷ ಸೂಕ್ತ ೭)

(೧೦) ವಾಕ್ಕಿನ ಪರಿಮಾಣ ಛನ್ದ ಯದಕ್ಷರ ಪರಿಮಾಣಂ ತಚ್ಛಂದಃ (ಋಕ್ ಸರ್ವಾನುಕ್ರಮಾಣಿ ೨-೬)
ಛನ್ದೋಽಕ್ಷರ ಸಂಖ್ಯಾವಚ್ಛೇದಕಮುಚ್ಯತೇ (ಅಥರ್ವವೇದದ ಬೃಹತ್ ಸರ್ವಾನುಕ್ರಮಾಣಿ ೧)
ಅಕ್ಷರೇಣ ಮಿಮತೇ ಸಪ್ತವಾಣೀಃ (ಋಕ್, ೧-೧೬೪-೨೪)
        ಇಲ್ಲಿ ವಾಕ್ಕಿನ ಅರ್ಥವು ಲಿಖಿತ ಅಥವಾ ಉಚ್ಚರಿತ ಶಬ್ದ, ಶಬ್ದದಿಂದ ಗಮಿಸಲ್ಪಟ್ಟಿರುವ ಆಕಾಶವೂ ಹೌದು. ಆದ್ದರಿಂದ ಆಕಾಶದ ಗುಣವು ಶಬ್ದವೆಂದು ಹೇಳಲ್ಪಡುತ್ತದೆ. ಧ್ವನಿ, ಪ್ರಕಾಶ ಅಥವಾ ಅನ್ಯ ತರಂಗಗಳ ಎಲ್ಲಿಯವರೆಗೆ ವಿಸ್ತಾರವಿದೆಯೋ ಆ ಆಕಾಶ ಕ್ಷೇತ್ರವೂ ವಾಕ್ ಪರಿಮಾಣ ಅಥವಾ ಛನ್ದವಾಗಿದೆ.

(೧೧) ಅಗ್ನಿಯ ೭ ಜಿಹ್ವೆ (ಮೃಂಡಕೋಪನಿಷದ್)
ಕಾಲೀ ಕರಾಲೀ ಚ ಮನೋಜವಾ ಚ, ಸುಲೋಹಿತಾ ಯಾ ಚ ಸುಧೂಮ್ರವರ್ಣಾ |
ಸ್ಫುಲಿಂಗಿನೀ ವಿಶ್ವರುಚೀ ಚ ದೇವೀ, ಲೇಲಾಯಮಾನಾ ಇತಿ ಸಪ್ತಜಿಹ್ವಾಃ || (೧-೨-೪)
ಸಪ್ತಪ್ರಾಣಾಃ ಪ್ರಭವಂತಿ ತಸ್ಮಾತ್, ಸಪ್ತರ್ಚಿಷಃ ಸಮಿಧಃ ಸಪ್ತ ಹೋಮಾಃ |
ಸಪ್ತ ಇಮೇ ಲೋಕಾ ಯೇಷು ಚರಂತಿ ಪ್ರಾಣಾ, ಗುಹಾಶಯಾ ನಿಹಿತಾಃ ಸಪ್ತ ಸಪ್ತ (೨-೧-೮)

(೧೨) ವಿಸ್ತಾರಕ್ಕಾಗಿ ಪಿಂಗಲರ ಛನ್ದಶ್ಶಾಸ್ತ್ರ (ದ್ವಿತೀಯ ಅಧ್ಯಾಯ) ಚೌಖಾಂಬಾ, ದೆಹಲಿ. ವೈದಿಕ ಛನ್ದೋ ಮೀಮಾಂಸಾ ಪಂ. ಯುಧಿಷ್ಠಿರ ಮೀಮಾಂಸಕ ರಾಮಲಾಲಕಪುರ ಟ್ರಸ್ಟ್.

(೧೩) ಛಂದಃ ಸ್ವರೂಪ ಮಾ ಛಂದಃ ತತ್ ಪೃಥಿವೀ, ಅಗ್ನಿರ್ದೇವತಾ, ತೇನ ಛನ್ದಸಾ ತೇನ ಬ್ರಾಹ್ಮಣಾ ತಯಾ ದೇವತ್ಯಾ ಅಂಗಿರಸ್ವದ್ ಧ್ರುವಾಸೀದ್ | ಪ್ರಮಾಛಂದಃ, ತದಂತರಿಕ್ಷಮ್, ವಾಯುರ್ದೇವತಾ | ಪ್ರತಿಮಾ ಛಂದಃ, ತದ್ ದ್ಯೌಃ, ಸೂರ್ಯೋ ದೇವತಾ | ಅಸ್ರೀವೀಶ್ಛಂದಃ, ತದ್ ಹಿರಣ್ಯಮ್, ಇಂದ್ರೋ ದೇವತಾ | ಜಗತೀ ಛಂದಃ, ತದ್ ಗೌಃ, ಪ್ರಜಾಪತಿರ್ದೇವತಾ | ಅನುಷ್ಟುಪ್ ಛಂದಃ, ತದಾಯುಃ, ಮಿತ್ರೋ ದೇವತಾ | ಉಷ್ಣಿಕ್ ಛಂದಃ, ತಚ್ಚಕ್ಷುಃ, ಪೂಷಾ ದೇವತಾ | ವಿರಾಟ್ ಛಂದಃ, ತದಶ್ವಃ, ವರುಣಃ ದೇವತಾ | ಬೃಹತೀ ಛಂದಃ, ತತ್ ಕೃಷಿಃ, ಪರ್ಜನ್ಯೋ ದೇವತಾ | ಪಂಕ್ತಿಶ್ಛಂದಃ, ತತ್ಪುರುಷಃ, ಪರಮೇಷ್ಠೀ ದೇವತಾ (ಮೈತ್ರಾಯಣೀ ಸಂ. ೨/೧೪/೯೩-೯೭; ಕಾಠಕ ಸಂ. ೩೯/೩೯-೪೦)

(೧೪) ಜೈನ ಜ್ಯೋತಿಷದ ಮಾಪನವು ಸಜ್ಜನ ಸಿಂಹ ಲಿಶ್ಕರ ಪುಸ್ತಕ ಜೈನ್ ಆಸ್ಟ್ರಾನೋಮಿ (ಅರಿಹಂತ ಪ್ರಕಾಶನ, ಮೋತಿಲಾಲ್ ಬನಾರಸೀದಾಸ್, ದೆಹಲಿಯಿಂದ ಉಪಲಬ್ಧ) ಅಥವಾ ಲಕ್ಷ್ಮೀಚಂದ ಜೈನ ಇವರ ತಾವೋ ಆಫ್ ಜೈನ್ ಸಾಇಂಸೆಜ್ ಇದರಲ್ಲಿದೆ. ಪುರಾಣಗಳಲ್ಲಿ ಭುವಃ, ಮಹಃ, ತಪಃ, ಎಂಬ ೩ ಅಂತರಿಕ್ಷ ಲೋಕಗಳ ಮಾಪನ ಪ್ರಮಾಣವು ಯೋಜನದಲ್ಲಿದೆ.

       
(೧೫) ಬೃಹತೀ ಛನ್ದ ರೂಪ-ತೇಜೋ ವೈ ಬ್ರಹ್ಮವರ್ಚಸಂ ಗಾಯತ್ರೀ (ಐತರೇಯ ಬ್ರಾಹ್ಮಣ ೧/೫, ತಾಂಡ್ಯ ಮಹಾ ಬ್ರಾಹ್ಮಣ ೧೬/೧೪/೫, ೧೬, ೧೬/೬) ಪಾಂಕ್ತೋ ವೈ ಯಜ್ಞಃ (ತೈ. ಸಂ. ೫/೨/೩/೬, ಮೈತ್ರಾಯಣೀ ಸಂ. ೧/೪/೯) ಆಯುರ್ವಾ ಉಷ್ಣಿಕ್ (ಐತ ಬ್ರಾಹ್ಮಣ ೧/೫) ಶ್ರೀವೈ ಯಶಶ್ಛಂದಸಾಂ ಬೃಹತೀ (ತಾಂಡ್ಯ ಐತರೇಯ ಬ್ರಾಹ್ಮಣ ೧/೫) ಅನ್ನಂ ವೈ ವಿರಾಟ್, ಯಸ್ಯೈವೇಹ ಭೂಯಿಷ್ಠ-ಮನ್ನಂ ಭವತಿ | ಓಜೋ ವಾ ಇಂದ್ರಿಯಂ ವೀರ್ಯಂ ತ್ರಿಷ್ಟುಪ್ (ಐತರೇಯ ಬ್ರಾಹ್ಮಣ ೧/೫) ಗಾಯತ್ರೋ ಹಿ ಬ್ರಾಹ್ಮಣಃ (ತೈ. ಸಂ. ೫/೧/೪/೫) ತ್ರೈಷ್ಟುಭೋ ರಾಜನ್ಯಃ (ತೈ. ಸಂ. ೫/೧/೪/೫ ಜೈಮಿನೀಯ ಬ್ರಾಹ್ಮಣ ೨/೧/೨೦) ಇಂದ್ರಿಯಂ ವೀರ್ಯಂ ತ್ರಿಷ್ಟುಪ್ (ಜೈಮಿನೀಯ ಬ್ರಾಹ್ಮಣ ಉಪನಿಷದ್, ೧/೧೩೨, ೩/೨೦೬) ಜಗತಾಃ ವೈ ಪಶವಃ (ತೈ. ಸಂ. ೨/೫/೧೦/೨, ಐತರೇಯ ಬ್ರಾಹ್ಮಣ ೧/೫) ವೀರ್ಯಂ ಗಾಯತ್ರೀ (ಜೈಮಿನೀಯ ಬ್ರಾಹ್ಮಣ ೧/೩೦೯, ೩/೨೦೬) ಬ್ರಹ್ಮ ಗಾಯತ್ರೀ ಕ್ಷತ್ರಂ ತ್ರಿಷ್ಟುಪ್ (ಶತಪಥ ಬ್ರಾಹ್ಮಣ ೧/೩/೫/೭) ಗಾಯತ್ರಂ ವಾ ಅಗ್ನೇಶ್ಛಂದಃ (ಶತಪಥ ಬ್ರಾಹ್ಮಣ ೧/೩/೫/೪) ಗಾಯತ್ರೀಮೇವಾಗ್ನಯೇ ವಸುಭ್ಯಃ, ತ್ರಿಷ್ಟುಭಮಿಂದ್ರಾಯ ರುದ್ರೇಭ್ಯಃ, ಜಗತೀಂ ವಿಶ್ವೇಭ್ಯೋ ದೇವೇಭ್ಯ ಆದಿತ್ಯೇಭ್ಯಃ (ಐತರೇಯ ಆರಣ್ಯಕ ೩/೯/೧ ಸಾಯಣ ಕ್ರಮ) ಗಾಯತ್ರೀ ವೈ ಬ್ರಾಹ್ಮಣಃ ತ್ರೈಷ್ಟುಭೋ ರಾಜನ್ಯಃ ಜಗತೋ ವೈ ವೈಶ್ಯಃ (ಜೈಮಿನೀಯ ಬ್ರಾಹ್ಮಣ ೨/೧೦೨)
ಅಗ್ನೇರ್ಗಾಯತ್ರ್ಯಭವತ್ ಸಯುಗ್ವೋಷ್ಣಿಹಯಾ ಸವಿತಾ ಸಂಬಭೂವ |
ಅನುಷ್ಟುಭಾ ಸೋಮ ಉಕ್ಥೈರ್ಮಹಸ್ವಾನ್ ಬೃಹಸ್ಪತೇ ರ್ಬೃಹತೀ ವಾಚಮಾವತ್ (ಋಕ್ ೧೦/೧೩೦/೪)
ವಿರಾಣ್ ಮಿತ್ರಾವರುಣಯೋರಭಿಶ್ರೀರಿಂದ್ರಸ್ಯ ತ್ರಿಷ್ಟುಬಿಹ ಭಗೋ ಅಹ್ನಃ |
ವಿಶ್ವಾನ್ ದೇವಾನ್ ಜಗತ್ಯಾ ವಿವೇಶ ತೇನ ಚಾಕ್ಲೃಪ್ತ ಋಷಯೋ ಮನುಷ್ಯಾಃ | (ಋಕ್ ೧೦/೧೩೦/೫)
ಉಷ್ಣಿಕ್, ಅನುಷ್ಟುಪ್‍ಗಳನ್ನು ಗಾಯತ್ರೀ ಲೋಕ ಸೌರ ಮಂಡಲದಲ್ಲಿಯೇ ಎಣಿಸುವುದರಿಂದ ೩ ಛನ್ದಸ್ಸುಗಳಿಂದ ವಿಶ್ವವನ್ನು ಅಳೆಯಲಾಗಿದೆ ಗಾಯತ್ರೀ, ತ್ರಿಷ್ಟುಪ್, ಜಗತೀ
ಕತಮೇ ಏತೇ ದೇವಾ ಇತಿ, ಛಂದಾಂಸೀತಿ ಬ್ರೂಯಾದ್ ಗಾಯತ್ರೀಂ ತ್ರಿಷ್ಟುಭಂ ಜಗತೀಮಿತಿ (ತೈ. ಸಂ. ೨/೬/೯/೩,೪)
ತ್ರೀಣಿ ವೈ ಛಂದಾಂಸಿ ಯಜ್ಞಂ ವಹಂತಿ ಗಾಯತ್ರೀ ತ್ರಿಷ್ಟುಪ್ ಜಗತೀ (ಜೈಮಿನೀಯ ಬ್ರಾಹ್ಮಣ ೧/೧೨೦)
ಗಾಯತ್ರಂ ಛನ್ದೋಽನುಪ್ರಜಾಯಸ್ವ, ತ್ರೈಷ್ಟುಭಂ ಜಾಗತಮ್ ಇತ್ಯೇತಾವಂತಿ ವೈ ಛಂದಾಂಸಿ (ಕಾಠಕ ೨೬/೭)
ವಾಕ್ ಸುಪರ್ಣೀ ಛಂದಾಂಸಿ ಸೌಪರ್ಣಾನಿ ಗಾಯತ್ರೀ ತ್ರಿಷ್ಟುಪ್ ಜಗತೀ (ಮೈ. ಸಂ. ೩/೭/೩)

(೧೬) ಅತಿಚ್ಛಂದ ಅತಿಚ್ಛಂದ ಸಮುಪದದಾತಿ, ಅತಿಚ್ಛಂದಾ ವೈ ಸರ್ವಾಣಿ ಛಂದಾಂಸಿ, ಸರ್ವೇಭಿರೇವೈನಂ ಛನ್ದೋಭಿಶ್ಚಿನುತೇ | ವರ್ಷ್ಮ ಉ ವಾ ಏಷಾಂ ಛನ್ದಸಾಂ ಯದತಿಚ್ಛಂದ ಸಮುಪದಧಾತಿ ವರ್ಷ್ಮೈವೈನಂ ಸಮಾನಾನಾಂ ಕರೋತಿ (ತೈ. ಸಂ. ೫/೩/೮/೯)
ಅತಿಚ್ಛಂದೋ ವೈ ಛನ್ದಸಾಮಾಯತನಮ್ (ಗೋಪಥ ಬ್ರಾಹ್ಮಣ ಪೂರ್ವ ೫/೪)
ಅತಿವಾ ಏಷಾ ಅನ್ಯಾನಿ ಛಂದಾಂಸಿ ಯದತಿಚ್ಛಂದಾಃ (ತಾಂಡ್ಯ ಮಹಾ ಬ್ರಾಹ್ಮಣ ೫/೨/೧೧)
ಏಷಾ ವೈ ಸರ್ವಾಣಿ ಛಂದಾಂಸಿ ಯದತಿಚ್ಛಂದಾಃ (ಶತಪಥ ೩/೩/೨/೧೧)
ಶರೀರಾಣ್ಯತಿಚ್ಛಂದಾ (ಜೈಮಿನೀಯ ಬ್ರಾಹ್ಮಣ ೨/೫೮)
ಛನ್ದಸಾಂ ವೈ ಯೋ ರಸೋಽತ್ಯಕ್ಷರತ್ ಸೋಽತಿಚ್ಛಂದ ಸಾಮಃ ಯತ್ಯಕ್ಷರತ್ |
ತದತಿಚ್ಛಂದಸೋಽತಿ ಚ್ಛಂದಸ್ತ್ವಮ್ (ಐತರೇಯ ಬ್ರಾಹ್ಮಣ ೪/೩)

(೧೭) ಅನೇಕ ಪ್ರಕಾರದ ಕೃತಿ ಛನ್ದಸ್ಸುಗಳ ವರ್ಣನೆಯನ್ನು ಮಹರ್ಷಿ ವಿಶ್ವದೇವರು ಮಾಧ್ಯಂದಿನ ಸಂಹಿತ (೧೪/೯, ೧೦, ೧೨) ಇದರಲ್ಲಿ ಉಲ್ಲೇಖಿಸಿದ್ದಾರೆ. ಅದರಲ್ಲಿ ಸಮುದ್ರ (೨೬ x ೪ ಅಕ್ಷರ) ಛನ್ದದ ವ್ಯಾಖ್ಯೆಯು ಇಂತಿದೆ
ಅನಂತಾನಿ ವಾ ಅಹೋರಾತ್ರಾಣಿ ಅನಂತಾಃ ಸಿಕತಾಃ ಏವಮುಹಾಸ್ಯೈತಾ ಅಹೋರಾತ್ರೈಃ ಸಂಪನ್ನಾ ಅನ್ಯೂನಾ ಅನತಿರಿಕ್ತಾ ಉಪಹಿತಾ ಭವಂತಿ | ಅಥ ಕಸ್ಮಾತ್ ಸಮುದ್ರಿಯಂ ಛಂದಃ ಇತಿ? ಅನಂತೋ ವೈ ಸಮುದ್ರಃ ಅನಂತೋ ಹಿ ಸಿಕತಾಃ, ತಸ್ಮಾತ್ ಸಮುದ್ರಿಯಂ ಛಂದಃ | (ಶತಪಥ ಬ್ರಾಹ್ಮಣ ೭/೨/೩/೩೯)

(೧೮) ಮೂರು ಪದಾರ್ಥ ಅಗ್ನಿರ್ವಾ ಗಾಯತ್ರೀ (ಶತಪಥ ಬ್ರಾಹ್ಮಣ ೩/೪/೧/೧೯, ೬/೬/೨/೭) | ಇಂದ್ರಸ್ತ್ರಿಷ್ಟುಪ್ (ಶತಪಥ ೬/೬/೨/೭) | ಆದಿತ್ಯಾ ಜಗತೀ ಸಮಭರನ್ (ಜೈಮಿನೀಯ ಬ್ರಾಹ್ಮಣ ಉಪನಿಷದ್ ೧/೧೮/೬) |

(೧೯) ಮೂರು ವರ್ಣ ಗಾಯತ್ರೋ ವೈ ಬ್ರಾಹ್ಮಣಃ, ತ್ರೈಷ್ಟುಭೋ ವೈ ರಾಜನ್ಯಃ, ಜಗತೋ ವೈ ವೈಶ್ಯಃ (ಐತರೇಯ ಬ್ರಾಹ್ಮಣ ೧/೨೮)

(೨೦) ಮೂರು ಪದಾರ್ಥ ರೂಪ ತ್ರೀಣಿ ಛಂದಾಂಸಿ ಕವಯೋ ವಿಯೇತಿರೇ, ಪುರುರೂಪಂ ದರ್ಶನಂ ವಿಶ್ವಚಕ್ಷಸಮ್ | ಆಪೋ ವಾತಾ ಓಷಧಯಸ್ತಾನ್ಯೇಕಸ್ಮಿನ್ ಭುವನ ಅರ್ಪಿತಾನಿ (ಅಥರ್ವ ಸಂ. ೧೮/೧/೧೭)

(೨೧) ವೈಶ್ವಾನರ ಅಯಮಗ್ನಿಃ ವೈಶ್ವಾನರಃ ಯೋಽಯಮ್ ಅಂತಃ ಪುರುಷೇ .. (ಶತಪಥ ಬ್ರಾಹ್ಮಣ ೧೪/೮/೧೦/೧) ಸ ಚ ಸಃ ವೈಶ್ವಾನರಃ, ಇಮೇ ಸ ಲೋಕಾಃ, ಇಯಮೇವ ಪೃಥಿವೀ ವಿಶ್ವಮ್, ಅಗ್ನಿಃ ನರಃ ಅಂತರಿಕ್ಷಮೇವ ವಿಶ್ವಂ ವಾಯು ನರಃ, ದ್ಯೌರೇವ ವಿಶ್ವಮ್ ಆದಿತ್ಯಃ ನರಃ (ಶತಪಥ ೯/೩/೧/೩) ಪ್ರಾದೇಶಮಾತ್ರಂ ಹೀಮ ಆತ್ಮನೋಽಭಿ ಪ್ರಾಣಾಃ (ಕೌಷೀತಕಿ ಬ್ರಾಹ್ಮಣ ೨/೨)

(೨೨) ಪಾರ್ಥಿವ ಗಾಯತ್ರೀ ಗಾಯತ್ರೀ ವಾ ಇಯಂ ಪೃಥಿವೀ (ಶತಪಥ ೪/೩/೪/೯)
ತದ್ ಯದ್ ಅಸೃಜ್ಯತ ಅಕ್ಷರತ್ ತತ್, ಯದ್ ಅಕ್ಷರತ್ ತಸ್ಮಾದಕ್ಷರಮ್, ಯದಷ್ಟಕೃತ್ವಃ ಅಕ್ಷರತ್ ಸೈವ ಅಷ್ಟಾಕ್ಷರಾ ಗಾಯತ್ರೀ ಅಭವತ್ (೧೭)

(೨೩) ನಾಲ್ಕು ಆದಿತ್ಯ ಯುಗ್ಮ ಅಷ್ಟೌ ಪುತ್ರಾಸೋ ಅದಿತೇರ್ಯೇ ಜಾತಾಸ್ತನ್ವಂ ಪರಿ ದೇವಾ ಉಪ ಪ್ರೈತ್ ಸಪ್ತಭಿಃ ಪರಾ ಮಾರ್ತಾಂಡ ಮಾಸ್ಯತ್ (ಋಕ್ ೧೦/೨/೮) ತಾನನುಕ್ರಮಯಿಷ್ಯಾಮೋ ಮಿತ್ರಶ್ಚ ವರುಣಶ್ಚ, ಧಾತಾಚಾರ್ಯಮಾ ಚ, ಅಂಶಶ್ಚ ಭಗಶ್ಚ, ವಿವಸ್ವಾನಾದಿತ್ಯಶ್ಚ (ತೈತ್ತಿರೀಯ ಆರಣ್ಯಕ ೧/೧೩/೩)

(೨೪) ಸೂರ್ಯನ ಮೂರು ಮನೋತ ಜ್ಯೋತಿರ್ಗೌರಾಯುರಿತಿ ತ್ರ್ಯಹೋ ಭವತಿ, ಇಯಂ ವಾವ ಜ್ಯೋತಿ, ಅಂತರಿಕ್ಷಂ ಗೌಃ, ಅಸೌ ಆಯುಃ (ತೈತ್ತಿರೀಯ ಸಂ. ೭/೩/೬/೩)

(೨೫) ಅಷ್ಟಮೂರ್ತಿ ಶಿವ ಅಗ್ನಿಶ್ಚ ಪೃಥಿವೀ ಚ ವಾಯುಶ್ಚಾಂತರಿಕ್ಷಂ ಚಾದಿತ್ಯಾಶ್ಚ, ದ್ಯೌಶ್ಚ ಚಂದ್ರಮಾಶ್ಚ ನಕ್ಷತ್ರಾಣಿ ಚೈತೇ ವಸವಃ (ಶತಪಥ ಬ್ರಾಹ್ಮಣ ೧೧/೬/೩/೬)

(೨೬) ಮಹಾಭಾರತ ಭೀಷ್ಮಪರ್ವ ಅಧ್ಯಾಯ ೪ರ ಅನುಸಾರ ಲೋಕ ಗಾಯತ್ರೀ
ದ್ವಿವಿಧಾನೀಹ ಭೂತಾನಿ ಚರಾಣಿ ಸ್ಥಾವರಾಣಿ ಚ |
ಚರಾಣಾಂ ತ್ರಿವಿಧಾ ಯೋನಿಃ ಅಂಡ ಸ್ವೇದ ಜರಾಯುಜಾಃ || ೧೦ ||
ಜರಾಯುಜಾನಾಂ ಪ್ರವರಾ ಮಾನವಾಃ ಪಶವಶ್ಚ ಯೇ  || ೧೧ || ನಾನಾರೂಪಧರಾರಾಜನ್‍ಸ್ತೇಷಾಂ ಭೇದಾಶ್ಚತುರ್ದಶ |
ವೇದೋಕ್ತಾಃ ಪೃಥಿವೀಪಾಲ ಯೇಷು ಯಜ್ಞಾಃ ಪ್ರತಿಷ್ಠಿತಾಃ ||೧೨||
ಉದ್ಭಿಜ್ಜಾಃ ಸ್ಥಾವರಾಃ ಪ್ರೋಕ್ತಾಃ ತೇಷಾಂ ಪಂಚೈವ ಜಾತಯಃ ||೧೪|| ತೇಷಾಂ ವಿಂಶತಿರೇಕೋನಾ ಮಹಾಭೂತೇಷು ಪಂಚಕ | ಚತುರ್ವಿಂಶತಿರುದ್ಧಿಷ್ಟಾ ಗಾಯತ್ರೀ ಲೋಕ ಸಮ್ಮತಾ || ೧೫ ||

(೨೭) ಸಂವತ್ಸರಗಾಯತ್ರೀ ಚತುರ್ವಿಂಶತಿ ಗಾಯತ್ರ್ಯಾ ಅಕ್ಷರಾಣಿ, ಚತುರ್ವಿಂಶತಿಃ ಸಂವತ್ಸರ ಸ್ಯಾರ್ಧಮಾಸಾಃ, ... (ಕಾಠಕ ಸಂ. ೧೦/೭)
* * (ಸಶೇಷ) * *
 - ಹೇಮಂತ್ ಕುಮಾರ್ ಜಿ.

No comments:

Post a Comment