Sunday, 5 February 2017

"ಆದಿತ್ಯ" - ಒಂದು ವೈಜ್ಞಾನಿಕ ವಿಶ್ಲೇಷಣೆ


೧. ಸೃಷ್ಟಿಯ ಹಂತಗಳು- ವಿಶ್ವವನ್ನು ೩ ಹಂತಗಳಲ್ಲಿ ವಿಶ್ಲೇಷಿಸಬಹುದು-

(೧) ರಸ - ಅದರ ನಿಜ ಮೂಲ, ಅಂದರೆ ಸಮ ಏಕರೂಪದ ವಸ್ತು.
ಯದ್ವೈ ತತ್ಸುಕೃತಂ ರಸೋ ವೈ ಸಃ | ರಸಂ ಹ್ಯೇವಾಯಂ ಲಬ್ಧ್ವಾಽಽನನ್ದೀ ಭವತಿ | (ತೈತ್ತಿರೀಯ ಉಪನಿಷದ್ ೨/೭)

(೨) ಆರಂಭಿಕ ರೂಪವೇ ಆದಿತ್ಯ (ಆದಿ = ಆರಂಭ). ಮಧ್ಯಂತರ ರೂಪವೇ ವರಾಹ  (ಹಂದಿ ಅಥವಾ ಮೋಡ). ಅದು ಪಿತರ (ಮಾದರಿ, ಪೋಷಕರು) ಎಂದೂ ಕರೆಯಲ್ಪಡುತ್ತದೆ.

(೩) ಅಂತ್ಯ ರೂಪವು ಗೆಲಾಕ್ಸಿಗಳು. ಗೆಲಾಕ್ಸಿ ಮತ್ತು ನಕ್ಷತ್ರಗಳು ತ್ರಿಧಾಮ ಎಂದು ಕರೆಯಲ್ಪಡುತ್ತವೆ.

        ಬ್ರಹ್ಮನಿಂದಾದ (ದೇವರು) ಸೃಷ್ಟಿಯನ್ನು ಸು-ಕೃತ (ಒಳ್ಳೇ ಕೆಲಸ) ಎಂದಿದೆ. ಬೈಬಲ್ಲಿನ ಹಳೆಯ ಒಡಂಬಡಿಕೆ ಜೆನಿಸಿಸ್-೧, ಅದನ್ನು ಭಾಷಾಂತರಿಸಿ ಪ್ರತಿ ಹಂತದ ಸೃಷ್ಟಿಯಾದ ನಂತರ, ದೇವರು ಅದು ಬಹಳ ಚೆನ್ನಾಗಿದೆ, ಎಂದು ತನಗೆ ತಾನೇ ಶಹಭಾಷಗಿರಿಯನ್ನು ಕೊಟ್ಟುಕೊಳ್ಳುತ್ತಿದ್ದನು ಎಂದು ಹೇಳಿದೆ.

  ರಸವು ಪುನಃ ೩ ವಿಭಾಗವಾಗುತ್ತದೆ-

(ಅ) ವಿಶ್ವದ ರಸವು ಸರೀರ ಅಥವಾ ಸಲಿಲ - ಅಂದರೆ ತರಂಗವುಳ್ಳ ಜಲ. ಇಲ್ಲಿ, ಜಲವು ಗೆಲಾಕ್ಸಿಗಳ ನಡುವಿನ ದ್ರವ್ಯ ಹಾಗೂ ಗೆಲಕ್ಸಿಗಳೇ ತರಂಗಗಳು.

ಸಮುದ್ರಾಯ ತ್ವಾ ವಾತಾಯ ಸ್ವಾಹಾ, ಸರಿರಾಯ ತ್ವಾ ವಾತಾಯ ಸ್ವಾಹಾ | (ವಾಜಸನೇಯ ಯಜರ್ವೇದ ೩೮/೭)
ಅಯಂ ವೈ ಸರೀರೋ ಯೋಽಯಂ ವಾಯುಃ ಪವತ ಏತಸ್ಮಾದ್ವೈ ಸರೀರಾತ್ ಸರ್ವೇ ದೇವಾಃ ಸರ್ವಾಣಿ ಭೂತಾನಿ ಸಹೇರತೇ (ಶತಪಥ ಬ್ರಾಹ್ಮಣ ೧೪/೩/೩/೩)
ವಾತಸ್ಯ ಜೂತಿಂ ವರುಣಸ್ಯ ನಾಭಿಮಶ್ವಂ ಜಜ್ಞಾನಂ ಸರಿರಸ್ಯ ಮಧ್ಯೇ | (ವಾಜಸನೇಯ ಯಜರ್ವೇದ ೧೩/೪೨)
ಇಮಂ ಸಾಹಸ್ರಂ ಶತಧಾರಮುತ್ಸಂ ವ್ಯಚ್ಯಮಾನಂ ಸರಿರಸ್ಯ ಮಧ್ಯೇ | (ವಾಜಸನೇಯ ಯಜರ್ವೇದ ೧೩/೪೯)
ಸರಿರೇ ತ್ವಾ ಸದನೇ ಸಾದಯಾಮಿ (ವಾಜಸನೇಯ ಯಜರ್ವೇದ ೧೩/೫೩)
ಸರಿರಂ ಛನ್ದಃ | (ವಾಜಸನೇಯ ಯಜರ್ವೇದ ೧೫/೪)
ವಿಭ್ರಾಜಮಾನಃ ಸರಿರಸ್ಯ ಮಧ್ಯ ಉಪ ಪ್ರ ಯಾಹಿ ದಿವ್ಯಾನಿ ಧಾಮ | (ವಾಜಸನೇಯ ಯಜರ್ವೇದ ೧೫/೫೨)
ಆಪೋ ವೈ ಸರಿರಮ್ | (ಶತಪಥ ಬ್ರಾಹ್ಮಣ ೭/೫/೨/೧೮)
ಇಮೇ ವೈ ಲೋಕಾಃ ಸರಿರಮ್ | (ಶತಪಥ ಬ್ರಾಹ್ಮಣ ೭/೫/೨/೩೧, ೮/೬/೩/೨೧)
ವಾಗ್ವೈ ಸರಿರಮ್ | (ಶತಪಥ ಬ್ರಾಹ್ಮಣ ೭/೫/೨/೫೩) ವಾಗ್ವೈ ಸರಿರಂ ಛನ್ದಃ | (ಶತಪಥ ಬ್ರಾಹ್ಮಣ ೮/೫/೨/೪)
ಆಪೋ ಹ ವಾಽಇದಮಗ್ರೇ ಸಲಿಲಮೇವಾಸ | (ಶತಪಥ ಬ್ರಾಹ್ಮಣ ೧೧/೧/೬/೧)
ಆಪೋ ಹ ವಾಽಇದಮಗ್ರೇ ಸಲಿಲಮೇವಾಸೀತ್ | (ತೈತ್ತಿರೀಯ ಬ್ರಾಹ್ಮಣ ೧/೧/೩/೫)
ಆಪೋ ಹ ವಾಽಇದಮಗ್ರೇ ಮಹತ್ಸಲಿಲಮೇವಾಸೀತ್ | (ಜೈಮಿನೀಯ ಉಪನಿಷದ್ ಬ್ರಾಹ್ಮಣ ೧/೫೬/೧)
ವೇದಿರ್ವೈ ಸಲಿಲಮ್ | (ಶತಪಥ ಬ್ರಾಹ್ಮಣ ೩/೬/೨/೫)

(ಬ) ಗೆಲಾಕ್ಸಿಯ ರಸವು ಅಪ್ ಅಥವಾ ಅಂಭ (ಅಂದರೆ ಶಬ್ದವುಳ್ಳ ಜಲ).

ದ್ಯೌರ್ವಾಽಅಪಾಂ ಸದನಂ ದಿವಿ ಹ್ಯಾಪಃ ಸನ್ನಾಃ | (ಶತಪಥ ಬ್ರಾಹ್ಮಣ ೭/೫/೨/೫೬)
ಆಪೋ ಹ ವಾಽ ಇದಮಗ್ರೇ ಸಲಿಲಮೇವಾಸ | ತಾ ಅಕಾಮಯನ್ತ ಕಥಂ ತು ಪ್ರಜಾಯೇಮಹೀತಿ | (ಶತಪಥ ಬ್ರಾಹ್ಮಣ ೧೧/೧/೬/೧)
ತದ್ಯದಬ್ರವೀತ್ (ಬ್ರಹ್ಮ) ಆಭಿರ್ವಾ ಅಹಮಿದಂ ಸರ್ಮಮಾಪ್ಸ್ಯಾಮಿ ಯದಿದಂ ಕಿಂಚೇತಿ ತಸ್ಮಾದಾಪೋಽಭವಂಸ್ತದಪಾಮಪ್ತ್ವಮಾಪ್ನೋತಿ ವೈ ಸ ಸರ್ವಾನ್ ಕಾಮಾನ್ ಯಾನ್ ಕಾಮಯತೇ | (ಗೋಪಥ ಬ್ರಾಹ್ಮಣ ಪೂರ್ವ ೧/೨)
ಆಪೋ ವಾ ಅಮ್ಬಯಃ | (ಕೌಷೀತಕಿ ಬ್ರಾಹ್ಮಣ ಉಪನಿಷದ್ ೧೨/೨)
ಅಯಂ ವೈ ಲೋಕೋಽಮ್ಭಾಂಸಿ | (ತೈತ್ತಿರೀಯ ಬ್ರಾಹ್ಮಣ ೩/೮/೧೮/೧)

ನಕ್ಷತ್ರದ ವಿಶೇಷ ವಲಯದಲ್ಲಿರುವ ವಿಕಿರಣವೇ (radiation) ರುದನ (ಅಳುತ್ತಿರುವುದು). ಆದ್ದರಿಂದ ಸೌರಮಂಡಲವನ್ನೇ ರೋದಸೀ ಎಂದು ನಮೂದಿಸಿದರು. ನಕ್ಷತ್ರಗಳ ನಡುವಿನ (inter-stellar) ಆಕಾಶವೇ ಕ್ರಂದನ  (ಸದ್ದಿಲ್ಲದೆ ಅಳುವುದು). ಗೆಲಾಕ್ಸಿಯ ವಲಯವು ತತ್ಕಾರಣದಿಂದ ಕ್ರಂದಸೀ. ವಿಶ್ವದ ಆಕಾಶಕ್ಕೆ ಸನ್ಯತೀ (ದೃಢ) ಎಂದು ಸಂಬೋಧಿಸಲಾಗಿದೆ.

ಯದರೋದೀತ್ (ಪ್ರಜಾಪತಿಃ) ತದನಯೋಃ (ದ್ಯಾವಾ-ಪೃಥಿವ್ಯೋಃ) ರೋದಸ್ತ್ವಮ್ | (ತೈತ್ತಿರೀಯ ಬ್ರಾಹ್ಮಣ ೨/೨/೯/೪)
(ವಾಜಸನೇಯೀ ಯಜುರ್ವೇದ ೧೧/೪೩,೧೨/೧೦೭) ಇಮೇ ವೈ ದ್ಯಾವಾಪೃಥಿವೀ ರೋದಸೀ | (ಶತಪಥ ಬ್ರಾಹ್ಮಣ ೬/೪/೪/೨, ೬/೭/೩/೨, ೭/೩/೧/೩೦) ಇಮೇ (ದ್ಯಾವಾಪೃಥಿವ್ಯೌ) ಹ ವಾವ ರೋದಸೀ | (ಜೈಮಿನೀಯ ಉಪನಿಷದ್ ಬ್ರಾಹ್ಮಣ ೧/೩೨/೪) ದ್ಯಾವಾಪೃಥಿವೀ ವೈ ರೋದಸೀ | (ಐತರೇಯ ಬ್ರಾಹ್ಮಣ ೨/೪೧)
ಯಂ ಕ್ರನ್ದಸೀ ಅವಸಾ ತಸ್ತಭಾನೇ (ಋಗ್ವೇದ ೧೦/೧೨೧/೬, ವಾಜಸನೇಯೀ ಯಜುರ್ವೇದ ೩೨/೭, ತೈತ್ತಿರೀಯ ಸಂಹಿತಾ ೪/೧/೮/೫)
ಯಂ ಕ್ರನ್ದಸೀ ಸಂಯತೀ ವಿಹ್ವಯೇತೇ (ಋಗ್ವೇದ ೨/೧೨/೮)

(ಕ) ಸೌರಮಂಡಲದ ಜಲವು ಮರ (ಸಾಯುತ್ತಿರುವ ಅಥವಾ ಕೊಳೆಯುತ್ತಿರುವ) ಎಂದು ಕರೆಯಲ್ಪಟ್ಟಿದೆ. ಏಕೆಂದರೆ ಅದಕ್ಕೆ ಸಂಬಂಧಿತ ಸೃಷ್ಟಿಯು ಅಲ್ಪಾಯು ಉಳ್ಳದ್ದು. ಅದರ ಮೂಲವನ್ನು ಮರೀಚಿ (ಸೂರ್ಯ) ಎನ್ನಲಾಗಿದೆ.

ಏತಾ ವಾಽ ಆಪಃ ಸ್ವರಾಜೋ ಯನ್ಮರೀಚಯಃ | (ಶತಪಥ ಬ್ರಾಹ್ಮಣ ೫/೩/೪/೨೧)
ಯಃ ಕಪಾಲೇ ರಸೋ ಲಿಪ್ತ ಆಸೀತ್ತಾ ಮರೀಚಯೋ ಽಭವನ್ | (ಶತಪಥ ಬ್ರಾಹ್ಮಣ ೬/೧/೨/೨)
ಸ ಇಮಾuಲ್ಲೋಕಾನಸೃಜತ | ಅಮ್ಭೋ ಮರೀಚೀರ್ಮರಮಾಪೋಽದೋಽಮ್ಭಃ ಪರೇಣ ದಿವಂ ದ್ಯೌಃ ಪ್ರತಿಷ್ಠಾನ್ತರಿಕ್ಷಂ ಮರೀಚಯಃ ಪೃಥಿವೀ ಮರೋ ಯಾ ಅಧಸ್ತಾತ್ತಾ ಆಪಃ | (ಐತರೇಯ ಉಪನಿಷದ್ ೧/೧/೨)

೨. ಧಾಮಗಳು- ಆದ್ದರಿಂದ ವಿಶ್ವವು ೪ ಧಾಮಗಳನ್ನು (ಸ್ಥಳ) ಹೊಂದಿದ್ದು ಅದರಲ್ಲಿನ ಜಲಗಳು (ಹರಡಿದ ದ್ರವ್ಯಗಳು) ಯಾವುದೆಂದರೆ-


ಧಾಮ
ಅರ್ಥ
ಜಲ
ಪರಮ
ಸಂಪೂರ್ಣ ವಿಶ್ವ
ರಸ
ಉತ್ತಮ
೧೦೧೧ ಗೆಲಾಕ್ಸಿಗಳು
ಸರೀರ / ಸಲಿಲ
ಮಧ್ಯಮ
ಗೆಲಾಕ್ಸಿಯಲ್ಲಿನ ೧೦೧೧ ನಕ್ಷತ್ರಗಳು
ಅಪ್ / ಅಂಭ
ಅವಮ
ಸೌರಮಂಡಲ
ಮರ

ಯಾ ತೇ ಧಾಮಾನಿ ಪರಮಾಣಿ ಯಾವಮಾ ಯಾ ಮಧ್ಯಮಾ ವಿಶ್ವಕರ್ಮನ್ನುತೇಮಾ | (ಋಗ್ವೇದ ೧೦/೮೧/೪)
ಧಾಮಗಳು ಒಂದು ಸಾಂದ್ರ ಆಧಾರವನ್ನು ಹೊಂದಿವೆ. ಅದನ್ನೇ ಭೂಮಿ ಅಥವಾ ಮಾತಾ ಎಂದೂ, ಅದರ ಸುತ್ತಲಿನ ಆಕಾಶವೇ ಪಿತಾ ಎಂದು ಸಂಬೋಧಿಸಲಾಗಿದೆ. ಆದ್ದರಿಂದ ೩ ಮಾತಾ ಮತ್ತು ೩ ಪಿತಾ, ಅಥವಾ ೩ ಭೂಮಿಗಳು ಮತ್ತು ೩ ದ್ಯುಗಳು (ಆಕಾಶಗಳು) ಇವೆ.

ತಿಸ್ರೋ ಮಾತೃಸ್ತ್ರೀನ್ ಪಿತೄನ್ ಬಿಭ್ರದೇಕ ಊರ್ಧ್ವತಸ್ಥೌ ನೇಮವಗ್ಲಾಪಯನ್ತಿ |
ಮನ್ತ್ರಯನ್ತೇ ದಿವೋ ಅಮುಷ್ಯ ಪೃಷ್ಠೇ ವಿಶ್ವಮಿದಂ ವಾಚಮವಿಶ್ವಮಿನ್ವಾಮ್ || (ಋಗ್ವೇದ ೧/೧೬೪/೧೦)
ತಿಸ್ರೋ ಭೂಮೀರ್ಧಾರಯನ್ ತ್ರೀರುತ ದ್ಯೂನ್ತ್ರೀಣಿ ವ್ರತಾ ವಿದಥೇ ಅನ್ತರೇಷಾಮ್ |
ಋತೇನಾದಿತ್ಯಾ ಮಹಿ ವೋ ಮಹಿತ್ವಂ ತದರ್ಯಮನ್ ವರುಣ ಮಿತ್ರ ಚಾರು || (ಋಗ್ವೇದ ೨/೨೭/೮)

ಈ ೩ ಭೂಮಿಗಳನ್ನು ಸೂರ್ಯ ಹಾಗೂ ಚಂದ್ರ ಕಿರಣದಿಂ ಹೊಳೆಯುವ ವಲಯವೆಂದು ವ್ಯಾಖ್ಯೆ ಇದೆ -

(೧) ಭೂಮಿಯು ಸೂರ್ಯ ಹಾಗೂ ಚಂದ್ರರಿಂದ ಬೆಳಗಲ್ಪಟ್ಟಿದೆ. ಅದು ಸಮುದ್ರ, ನದಿ, ಪರ್ವತಗಳೆಲ್ಲವನ್ನೂ ಹೊಂದಿದೆ.

(೨) ಸೌರಮಂಡಲದಲ್ಲಿ ಭೂಮಿಯು ಸೂರ್ಯನಿಂದ ಪ್ರಕಾಶಿತ ನಿಗಧಿತ ವಲಯವಾಗಿದೆ. ಅದರ ಗ್ರಹಮಂಡಲವನ್ನು ನೆಪ್ಚೂನ್ ಕಕ್ಷೆಯವರೆಗೆ ೧೦೦ ಕೋಟಿ ಯೋಜನ ವಿಸ್ತಾರವುಳ್ಳ (೧ ಯೋಜನ = ಭೂಮಿಯ ಭೂಮಧ್ಯರೇಖೆಯ ವ್ಯಾಸದ ೧೦೦೦ ಭಾಗ) ಚಕ್ರಾಕಾರ ಭೂಮಿ ಎಂದು ಕರೆಯಲಾಗಿದೆ. ಯುರೇನಸ್‌ವರೆಗಿನ ಅದರ್ಧ ವಲಯವೇ ಲೋಕ (ಪ್ರಕಾಶಮಯ) ಹಾಗು ಬಾಹ್ಯ ವಲಯವೇ ಅಲೋಕ (ಕತ್ತಲೆಮಯ) ಭಾಗ (ಭಾಗವತ ಪುರಾಣ, ಸ್ಕಂಧ ೫). ಲೋಕ ಭಾಗದಲ್ಲಿನ ಗ್ರಹಗಳ ಸ್ಪಷ್ಟ ಭ್ರಮಣದಿಂದ (apparent rotation) ಉಂಟಾದ ಕ್ಷೇತ್ರಗಳನ್ನು ದ್ವೀಪ (continents) ಮತ್ತು ಮಧ್ಯಂತರ ವಲಯಗಳನ್ನು ಭೂಮಿಯ ಒಳಗಿರುವ ಸಮುದ್ರಗಳ ಹೆಸರಿನಿಂದಲೇ ಅವುಗಳನ್ನೂ ಗುರುತಿಸಲಾಗಿದೆ.

(೩) ಬಿಂದು ಒಂದರ ತರದಿ ಕಾಣ್ಬರುವ ಸೂರ್ಯ ಕಿರಣಗಳ ಅಂತಿಮ ಮಿತಿಯು ಮೂರನೇಯ ಹಾಗೂ ಬೃಹತ್ ಭೂಮಿಯನ್ನು ಪರಮೇಷ್ಠೀ ಮಂಡಲ (largest sphere) ಎನ್ನಲಾಗಿದೆ. ಇದು ಬ್ರಹ್ಮನ ಒಂದು ತೆಂಗಿನಕಾಯಿಯಾಕಾರದ (ಅಂಡಾಕಾರ) ರೂಪವಾದ್ದರಿಂದ ಬ್ರಹ್ಮಾಂಡ ಆಯಿತು. ಸೂರ್ಯ ಕಿರಣವು ತಲುಪುವ ಕೊನೆಯ ಹಂತವಾದ್ದರಿಂದ (ಸೂರ್ಯ ಸಿದ್ಧಾಂತ ೧೨/೮೨), ಇದನ್ನು ವಿಷ್ಣುವಿನ (ಸೂರ್ಯನ) ಪರಮ-ಧಾಮ (extreme step) ಎಂದಿದೆ. ಕೇಂದ್ರದಲ್ಲಿ ಸುತ್ತುತಲಿರುವ ಬಿಲ್ಲೆಯೇ (disc) ನದೀ (ಆಕಾಶ-ಗಂಗೆ).

        ವಿಷ್ಣು ಪುರಾಣದ ಮುಂದಿನ ಶ್ಲೋಕವು ಹೇಳುತ್ತದೆ- ಈ ರೀತಿಯ ಪ್ರತಿಯೊಂದು ಭೂಮಿಯಿಂದ ಆರಂಭಿಸಿ, ಅದರದರ ಆಕಾಶವು ಅದರದರ ಭೂಮಿಯಷ್ಟೇ (ಮಾನವನಿಂದಾರಂಭಿಸಿ) ವ್ಯಾಸ ಅಥವಾ ಸುತ್ತಳತೆಯನ್ನು ಹೊಂದಿರುತ್ತದೆ. ಆದ್ದರಿಂದ ಮಾನವ, ಪ್ರತಿಯೋಂದು ಭೂಮಿ, ಸೌರಮಂಡಲದ ಗ್ರಹ (ಸೂರ್ಯನ ಗುರುತ್ವ ವಲಯದಲ್ಲಿರುವ) ಹಾಗೂ ಗೆಲಾಕ್ಸಿ; ಇವುಗಳೆಲ್ಲ ಕ್ರಮವಾಗಿ ೧೦ ಪಟ್ಟು ವೃದ್ಧಿ ಹೊಂದಿರುತ್ತವೆ.

ರವಿ ಚನ್ದ್ರಮಸೋರ್ಯಾವನ್ಮಯೂಖೈರವಭಾಸ್ಯತೇ | ಸ ಸಮುದ್ರ ಸರಿಚ್ಛೈಲಾ ಪೃಥಿವೀ ತಾವತೀ ಸ್ಮೃತಾ ||
ಯಾವತ್ಪ್ರಮಾಣಾ ಪೃಥಿವೀ ವಿಸ್ತಾರ ಪರಿಮಣ್ಡಲಾತ್ | ನಭಸ್ತಾವತ್ಪ್ರಮಾಣಂ ವೈ ವ್ಯಾಸ ಮಣ್ಡಲತೋ ದ್ವಿಜ || (ವಿಷ್ಣು ಪುರಾಣ ೨/೭/೩-೪)

ಮೂರು ಧಾಮಗಳಲ್ಲಿ (ಪರಮ ಬಿಟ್ಟು) ಪ್ರತಿಯೊಂದರ ನೈಜ ಹಂತವೇ "ಆದಿತ್ಯ".  ಅಂದರೆ ಅದೇ ಆದಿಯ ಹಂತ. ವಿಶ್ವದ, ಗೆಲಾಕ್ಸಿಯ ಹಾಗೂ ಸೌರಮಂಡಲದ ಆದಿತ್ಯರು ಕ್ರಮವಾಗಿ ಅರ್ಯಮಾ, ವರುಣ ಹಾಗೂ ಮಿತ್ರ. ಈ ಹಂತಗಳನ್ನು ಈಗ ಸರಾಸರಿ ಅಂತರಿಕ್ಷದಲ್ಲಿ (intermediate spaces) ಕಾಣುತ್ತೇವೆ ಎಂದು ಋಗ್ವೇದ ೨/೨೭/೮ರಲ್ಲಿ ಆಧಾರ ಸಿಗುತ್ತದೆ.

೩. ಆದಿತ್ಯ ಅರ್ಥ ವಿಶ್ಲೇಷಣೆ- ಯಾಸ್ಕ ನಿರುಕ್ತದಲ್ಲಿ (೨/೧೩) ಆದಿತ್ಯನನ್ನು ೪ ವಿಧಗಳಲ್ಲಿ ವ್ಯಾಖ್ಯಾನಿಸಲಾಗಿದೆ-

(೧) ಯಾವುದು ರಸವನ್ನು ಸೆಳೆಯುತ್ತದೋ ಅಥವಾ ಹೀರುತ್ತದೋ ಅದು - ಆದತ್ತೇ ರಸಾನ್ |

(೨) ಯಾವುದು ಮಿನುಗುವ ನಕ್ಷತ್ರಗಳ ಜ್ಯೋತಿ ಅಥವಾ ಶಕ್ತಿಯನ್ನು ಗ್ರಹಿಸುತ್ತದೋ ಅದು - ಆದತ್ತೇ ಭಾಸಂ ಜ್ಯೋತಿಷಾನಾಮ್ |

(೩) ಯಾವುದು ಜ್ವಲಿಸುವ ನಕ್ಷತ್ರಪುಂಜದಿಂದ (ರಾಶಿ=constellations) ಬೆಳಕನ್ನು ಸ್ವೀಕರಿಸುತ್ತದೋ ಅದು - ಆದೀಪ್ತೋ ಭಾಸೇತಿ ವಾ |

(೪) ಅದಿತಿಯ ಮಕ್ಕಳು- ಸೂರ್ಯ ಮತ್ತಿತರೆ ದೇವತೆಗಳನ್ನು ಆದಿತ್ಯರು ಅಥವಾ ಆದಿತೇಯರು ಎನ್ನಲಾಗಿದೆ - ಸೂರ್ಯ ಆದಿತೇಯಮ್ (ಋಕ್ ೧೦/೮೮/೧೧). ಈ ಅರ್ಥದಲ್ಲಿ ಮಿತ್ರ, ವರುಣ, ಅರ್ಯಮಾ, ದಕ್ಷ, ಭಗ, ಅಂಶ - ಇವರೂ ಆದಿತ್ಯರೇ.

ನಿರುಕ್ತದ ಮುಂದಿನ ಸಾಲುಗಳು (೨/೧೪) ಆದಿತ್ಯನ ೭ ಪರ್ಯಾಯವಾಚಿ ಶಬ್ದಗಳನ್ನು ನೀಡಿದೆ-

(೧) ಸ್ವಃ - ಇದು ೩ ವ್ಯುತ್ಪತ್ತಿಗಳನ್ನು ಹೊಂದಿದೆ
        (ಅ) ಸು + ಅರಣ = ಯಾವುದು ಸರಾಗವಾಗಿ ಮುನ್ನಡೆಯುತ್ತದೋ ಅದು.
        (ಬ) ಸು + ಈರಣಃ = ಯಾವುದು ಕತ್ತಲೆಯನ್ನು ನಾಶ ಮಾಡುತ್ತದೋ ಅದು.
(ಕ) ಸು + ಋತಃ = ಋತ (field of influence) ಎಂದರೆ ಎಲ್ಲಿ ಬೆಳಗು, ಆಕರ್ಷಣಾ ಬಲ
             ಇತ್ಯಾದಿಗಳು ಭಾಸಕ್ಕೆ ಬರುತ್ತವೋ ಅವು.
          
(೨) ಪೃಶ್ನಿ - ಪ್ರ + ಅಶ್ನತೇ ವರ್ಣಃ = ಯಾವುದು ಬಣ್ಣಗಳನ್ನು ಹರಡಿಸುತ್ತದೋ ಅಥವಾ ಸಂಪ್ರಷ್ಟಾ - ದೃಢವಾಗಿ ಸ್ಪರ್ಷಿಸುತ್ತದೋ ಅದು.

(೩) ನಾಕ -
        (ಅ) ನೇತಾ ರಸಾನಾಮ್ - ಯಾವುದು ರಸವನ್ನು ತೆಗೆದುಕೊಳ್ಳುತ್ತದೋ ಅದು.
        (ಬ) ನೇತಾ ಭಾಸಾನಾಮ್ - ಯಾವುದು ಬೆಳಕನ್ನು ಸ್ವೀಕರಿಸುತ್ತದೋ ಅಥವಾ ನಕ್ಷತ್ರ ಪುಂಜ.
        (ಕ) ದ್ಯೌಃ - ಪ್ರಕಾಶಮಯ ಆಕಾಶವನ್ನೂ ನಾಕವೆನ್ನಲಾಗಿದೆ, ಏಕೆಂದರೆ ಇದು ದುಃಖವಿಲ್ಲದ
    ಸ್ಥಳ. ಕ = ಸುಖ = ಆನಂದ, ಅಕ = ದುಃಖ = ಸುಖದ ನ್ಯೂನತೆ. ನಾಕ - ಅಕವನ್ನು ನ
    ಅಂದರೆ ತೆಗೆಯುವುದರಿಂದ ಅದು ನಾಕ.
    ಸ ನಾಕೋ ನಾಮ ದಿವಿ ರಕ್ಷೋಹಾಗ್ನಿಃ (ಮೈತ್ರಾಯಣೀ ಸಂಹಿತಾ ೪/೧/೯)
     ರಕ್ಷಕನಾದ ಅಗ್ನಿಯನ್ನು ನಾಕ ಎನ್ನಲಾಗಿದೆ.
            ನ ವಾ ಅಮುಂ ಲೋಕಂ ಜಗ್ಮುಷೇ ಕಿಂ ಚ ನಾಕಮ್ | (ಕಾಠಕ ಸಂಹಿತಾ ೨೧/೨) = ನಾವು ನಾಕಕ್ಕೆ
            ಹೋಗಲಿಚ್ಛಿಸುತ್ತೇವೆಯೇ ಹೊರತು ಈ ಲೋಕಕ್ಕಲ್ಲ.

(೪) ಗೌ - ಯಾವುದು ಆಕಾಶದಲ್ಲಿ ಚಲಿಸುತ್ತಾ ಅಲ್ಲಿನ ರಸ್ರಗ್ರಾಹಿ ಆಗಿರುತ್ತದೋ. ಅದು ಭೂಮಿಯಿಂದ ಬಹು ದೂರ ತಲುಪುತ್ತದೆಯಾದ್ದರಿಂದ ಅದು ದ್ಯೌ ಕೂಡ ಆಗಿದೆ. ಗ್ರಹ ಹಾಗೂ ನಕ್ಷತ್ರಗಳು ಅದರಲ್ಲಿ ಚಲಿಸುತ್ತವೆ, ಆದ್ದರಿಂದ ಅದನ್ನು ಗೌ (ಆಂಗ್ಲ ಭಾಷೆಯ go ಶಬ್ದದ ಮೂಲ).

(೫) ವಿಷ್ಟಪ್ - ಯಾವುದು ರಸಗಳನ್ನು ಚುಚ್ಚುತ್ತದೋ ಅದು. ಸಾಮಾನ್ಯವಾಗಿ ಇದನ್ನು ಮರಗಳಲ್ಲಿ ಉಪಯೋಗಿಸುತ್ತಾರೆ. ಮರಗಳು ಭೂಮಿಯಿಂದ ಬೇರುಗಳ ಮುಖೇನ ರಸಗಳನ್ನು ಗ್ರಹಿಸಿ ಎಲೆಗಳಿಗೆ ಕಳುಹಿಸುತ್ತವೆ. ನದಿಗಳಲ್ಲಿರುವ ವಿದ್ಯುತ್ (current) ಕೂಡ ವಿಷ್ಟಪ ಏಕೆಂದರೆ ತ್ರಿವಿಷ್ಟಪವು (Tibet) ೩ ವಿಷ್ಟಪಗಳನ್ನು (ವಿಟಪ) ಹೊಂದಿದೆ-
        (ಅ) ಬ್ರಹ್ಮ ವಿಟಪ - ಇದು ಪೂರ್ವ ಭಾಗ. ಇಲ್ಲಿಂದ ಬ್ರಹ್ಮಪುತ್ರ ನದಿಯಿಂದ ಸಾಗರಕ್ಕೆ ನೀರು
             ಪ್ರವಹಿಸುತ್ತದೆ. ಬ್ರಹ್ಮ - ಬ್ರಹ್ಮಪುತ್ರ ನದಿಯಾಚೆಯ ಪ್ರದೇಶವನ್ನು ಬ್ರಹ್ಮ (ಬರ್ಮಾ) ದೇಶ
             ಎಂದಿದೆ. ಅದನ್ನೀಗ ಮೈಯನ್ಮಾರ್ (= ಮಹಾ + ಅಮರ = ದೇವತೆಗಳಲ್ಲಿ ಶ್ರೇಷ್ಠ = ಬ್ರಹ್ಮ)
             ಎಂದು ಕರೆಯಲಾಗುತ್ತಿದೆ.
        (ಬ) ಶಿವ ವಿಟಪ - ಕೈಲಾಸ ಶಿಖರದ ಕೇಂದ್ರ ಭಾಗವಿದು. ಶಿವನ ಜಟೆಯ ಕೂದಲಿಂದ ಇಳಿದು
             ಬಂದ ಗಂಗೆಯ ಉದ್ಭವ ಸ್ಥಾನ.
        (ಕ) ವಿಷ್ಣು ವಿಟಪ - ಇದು ಪಶ್ಚಿಮ ಭಾಗ. ಲಕ್ಷ್ಮಿಯ ಪುತ್ರಿಯಾದ (ವೈಷ್ಣೋ ದೇವೀ ಮಂದಿರ)   
             ಸಿಂಧು ನದಿಯ ಹರಿವುಳ್ಳ ಭಾಗ.

        ಸ್ವಾಯಂಭುವಿನಿಂದ (ಪೂರ್ಣ ಪ್ರಪಂಚ) ಉಂಟಾದ ಪರಮೇಷ್ಠೀ (ಗೆಲಾಕ್ಸಿ), ಸೌರ, ಚಾಂದ್ರ, ಭೂ ಎಂಬ ಸೃಷ್ಟಿ ಸಂಕೋಲೆಯನ್ನು ದಿವ್ಯ ವೃಕ್ಷ (ಗೀತಾ ೧೫/೧) ಎಂದು ಹೆಸರಿಸಲಾಗಿದೆ. ಅದನ್ನು ಅಥರ್ವ ವೇದ ೧೦/೭ರಲ್ಲಿ ಸ್ಕಂಭ ಎಂದಿದೆ. ಅರೂಪೀ ಬ್ರಹ್ಮವು ಈ ವೃಕ್ಷವನ್ನು ದಿಟ್ಟಿಸುತ್ತಾ ಸ್ಥಿರವಾಗಿ ನಿಂತಿದೆ ಎನ್ನುತ್ತದೆ-

ಊರ್ಧ್ವ ಮೂಲೋಽವಾಕ್ ಶಾಖ ಏಷೋಽಶ್ವತ್ಥಃ ಸನಾತನಃ | (ಕಠ ಉಪನಿಷದ್ ೨/೩/೧, ಗೀತಾ ೧೫/೧)
ವೃಕ್ಷ ಇವ ಸ್ತಬ್ಧೋ ದಿವಿ ತಿಷ್ಠತ್ಯೇಕಸ್ತೇನೇದಂ ಪೂರ್ಣಂ ಪುರುಷೇಣ ಸರ್ವಮ್ | (ಶ್ವೇತಾಶ್ವತರ ಉಪನಿಷದ್ ೩/೯)

(೬) ದ್ಯೌ - ಗೌ ಹಾಗೂ ವಿಷ್ಟಪ್ ಇವುಗಳನ್ನು ದ್ಯೌ ಎಂದು ಕರೆಯಲಾಗಿದೆ. ಇವು ದಿವಃ = ಬೆಳಕು ಹಾಗೂ ಶುದ್ಧಾತ್ಮಗಳನ್ನು ಹೊಂದಿರುತ್ತದೆ.

(೭) ನಭ - ಯಾವುದು ರಸ ಅಥವಾ ಕಿರಣಗಳನ್ನು ದೂರ ತೆಗೆದುಕೊಂಡು ಹೋಗುತ್ತದೋ ಅಥವಾ ರಾಶಿ ಪುಂಜ (ನೇತಾ ಭಾಸಾನಾಮ್, ಭಾಸಾನಾಮ್, ಜ್ಯೋತಿಷಾಂ ಪ್ರಣಯಃ) ಅಥವಾ, ಅದರಲ್ಲಿ ಅಕ್ಷರಗಳನ್ನು ಹಿಂದು-ಮುಂದು ಮಾಡಿದರೆ ಭನ = ಬೆಳಗಿಸಲ್ಪಡದ್ದು ಎಂಬ ವಿವರಣೆಗಳು ಸಿಗುತ್ತದೆ.
  

ತರ್ಜುಮೆ - ಹೇಮಂತ್ ಕುಮಾರ್ ಜಿ.
ಮೂಲ ಲೇಖನ - ಅರುಣ್ ಕುಮಾರ್ ಉಪಾಧ್ಯಾಯ, ಒರಿಸ್ಸಾ

No comments:

Post a Comment