Friday, 24 February 2017

ಆಯುರ್ವೇದ ವಿರೋಧೀ ಕೆಲ ಪ್ರಶ್ನೆಗಳಿಗೆ ಪ್ರತ್ಯುತ್ತರ
ಮಮತಾ ನಾಯ್ಕ್ ಎಂಬ ನಕಲಿ ಖಾತೆಯ ಗುಂಪೊಂದು ಇಲ್ಲ ಸಲ್ಲದ ವಿಚಾರಗಳನ್ನು ಬರೆಯುತ್ತಾ ಸಮಾಜವನ್ನು ಗೊಂದಲಮಯವಾಗಿಸಿ ತಮ್ಮ ಮತಾಂತರ ಕಾರ್ಯವನ್ನು ಸುಗಮಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಆಯುರ್ವೇದ ವಿರೋಧೀ ಪ್ರಶ್ನೆಗಳಿಗೆ ತಕ್ಕ ಉತ್ತರಗಳನ್ನು ಪ್ರಸ್ತುತಪಡಿಸಿದ್ದೇವೆ. ಅವರವರ ಯೋಗ್ಯತೆ ತಕ್ಕ ಉತ್ತರ ಸಿಗುತ್ತದೆ. ವಿಧ್ಯಾರ್ಥಿಗೆ ಪಾಠ, ವಿತಂಡಿಗೆ ವಿತಂಡ, ವಿರೋಧಿಗೆ ವಿಡಂಬನಾತ್ಮಕ ಉತ್ತರಗಳೇ ಸಾಧು. ಇಲ್ಲಿ ಸನಾತನ ವಿಧ್ಯಾ ವಿರೋಧಿಗಳ ಕುಹಕವಾದ ಆಯುರ್ವೇದದ ಪ್ರಶ್ನೆಗಳಿಗೆ ತರ್ಕ-ಮೀಮಾಂಸ-ನ್ಯಾಯ ಸಹಮತದಲ್ಲಿ ಖಂಡಿಸಲಾಗಿದೆ.1. ರ್ಯೂಮಾಟಿಕ್ ಹಾರ್ಟ್ ಫೀವರ್ ಗೆ ಆಯುರ್ವೇದದಲ್ಲಿ ಏನು ಹೆಸರು ? ಚಿಕಿತ್ಸೆ ಏನು ?ಉತ್ತರ:- ರುಮಾಟಿಕ್ ಹಾರ್ಟ್ ಫೀವರ್ ಎಂದು ನಾಮಕರಣ ಮಾಡಿದರೆ ಸಾಲದು. ಅದರ ಬಗ್ಗೆ ಸರಿಯಾಗಿ ಅಧ್ಯಯನ ಮಾಡಬೇಕು. ಬಾಯಿ ಬಡೆದುಕೊಂಡರೆ ಬೊಂಬಾಯಿಗೆ ಹೋಗಲಾಗುವುದಿಲ್ಲ. ಸರಿಯಾದ ಟ್ರೈನ್ ಹಿಡಿಬೇಕು. ಹಾಗೇ ಟ್ರೈನಿಂಗ್ ಬೇಕು. ಹೃದಯಕ್ಕೆ ಬರುವ ಸಮಸ್ಯೆಗಳಲ್ಲಿ ಕಫದುಸ್ತಿಜನ್ಯ ಹೃದ್ರೋಗಗಳೆಂಬ ವಿಭಾಗವಿದೆ. ಅಲ್ಲಿ ಕಫವೆಂದರೆ ಅವಲಂಬಕ ಕಫ. ಅದು ಹೃದಯ ಸ್ನಾಯುವಿನ ಆಂತರಿಕ ಅವಯವ ಭದ್ರತೆಗೆ ಸಹಕಾರಿ. ಈ ಕಫದುಷ್ಟಿಜನ್ಯ ಹೃದ್ರೋಗದಲ್ಲಿ ೨ ವಿಧ. ಒಂದು ಸಜ್ವರ ಹೃದ್ರೋಗ - ಇದೇ ನಿಮಗೆ ರುಮ್ಯಾಟಿಕ್ ಫೀವರ್ ಆಗಿ ಕಂಡುಬರುವುದು. ಇನ್ನೊಂದು ಹೃದಯ ವಿಶ್ರುತಿ. ಇದು ಹೈಪೆರ್ತ್ರೋಪಿ, ಕಾರ್ಡಿಯೋಮೆಗಾಲಿ ಇತ್ಯಾದಿಗೆ ಕಾರಣವಾಗುತ್ತದೆ ಎಂದು ಆಯುರ್ವೇದ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ.


ಆಕರ:- [1] Kulkarni, P. and Gogate, V., 2017. UNDERSTANDING CARDIOVASCULAR DISORDERS: AN AYURVEDIC APPROACH. Journal of Ayurveda and Integrated Medical Sciences (ISSN 2456-3110), 1(4), pp.137-141.


[2] Dhimdhime, R.S., Pawar, K.B., Kodape, D.T., Dhimdhime, S.R. and Baghel, P., 2017. CONCEPT OF INTERRELATIONSHIP BETWEEN MANAS (PSYCHE) & SHARIRA (SOMA) WSR TO AYURVEDIC TREATMENT. International Journal of Ayurveda and Pharma Research, 5(1).2. ಕನಸುಗಳಿಗೆ ಆಯುರ್ವೇದದಲ್ಲಿ ಚಿಕಿತ್ಸೆ ಇದೆ . ಇದಕ್ಕೆ ತಮ್ಮ ಸಮರ್ಥನೆ ಏನು ?ಉತ್ತರ:- ಸ್ವಪ್ನ ಸ್ವಪ್ನಾಧಿಕರಣೇ ಎಂದು ವೇದವು ಸ್ವಪ್ನ ಸ್ಥಿತಿಯನ್ನು ಎಂದೋ ವಿವರಿಸಿ ಆಗಿದೆ. ಸ್ವಪ್ನ ಸಹಜ ಸ್ಥಿತಿ. ಭೂತ ವರ್ತಮಾನ ಕಾಲಗಳಲ್ಲಿ ಬಹುಧಾ ಜೀವತೋ ಮನಃ ಎಂಬಂತೆ ಮನಸ್ಸು ಜೀವಿಸಿದ ಘಟನಾವಳಿಗಳನ್ನು ಮಿದುಳು ಮೆಲುಕು ಹಾಕುತ್ತಾ ಚಿತ್ತಭಿತ್ತಿಯಲ್ಲಿ ದಾಖಲಿಸಿಕೊಳ್ಳುತ್ತಾ ಹೋಗುತ್ತದೆ. ಕಂಪ್ಯೂಟರಿನಲ್ಲಿ ಫೈಲ್‍ಗಳನ್ನು ಆಪರೇಟಿಂಗ್ ಸಿಸ್ಟಮ್ ಸರಿಯಾಗಿ ಹೊಂದಿಸಿಕೊಳ್ಳುವಂತೆಯೇ ಪ್ರತಿ ನಿತ್ಯವೂ ನಿದ್ರೆಯಲ್ಲಿ ಹಲವು ಕ್ರಿಯೆಗಳು ನಡೆಯುತ್ತದೆ. ಆ ಸಮಯದಲ್ಲಿ ಸ್ವಪ್ನವೋ ದುಃಸ್ವಪ್ನವೋ ಬೀಳುತ್ತದೆ. ಉದಾಹರಣೆಗೆ ನಿಮ್ಮಂತಹಾ ಸಮಾಜ ವಿದ್ರೋಹಿ ಸಂಘಟನೆಗಳ ಚೇಲಾಗಳು ದಿಕ್ಕು ತಪ್ಪಿಸುವಂತಹಾ ಲೇಖನಗಳನ್ನು ಬರೆಯುತ್ತೀರಾ, ಅದನ್ನು ಓದಿ ಸಾರ್ವಜನಿಕರು ಗೊಂದಲಗೊಂಡಿರುತ್ತಾರೆ. ಇಂತಹಾ ಸಂದರ್ಭದಲ್ಲಿ ಅವರವರ ದೇಹ + ಮನಸ್ಥಿತಿಗನುಗುಣವಾಗಿ ಜನರಿಗೆ ದುಃಸ್ವಪ್ನ ಬೀಳಬಹುದು. ಮನಸ್ಸು ಮೋಹಗೊಳ್ಳುವುದು ನಾದ ತರಂಗಗಳಿಗೆ. ಹಾಗಾಗಿ ಅಂತಹಾ ನಾದೋತ್ಪನ್ನ ಚಿಕಿತ್ಸಾ ವಿಧಿಗಳನ್ನು ಋಗ್ವೇದ ಹಾಗೂ ಅಥರ್ವ ವೇದಗಳು ದುಃಸ್ವಪ್ನನಾಶನಮ್ ಎಂಬುದಾಗಿ ವಿವರಿಸಿವೆ. ಗ್ರಿಫತ್, ಮ್ಯಾಕ್ಸ್ ಮುಲ್ಲಾ, ಸಾಯನ, ದಯಾನಂದರು ಅದನ್ನು ವಿವರಿಸದಿರಬಹುದು. ಏಕೆಂದರೆ ಅವರಿಗೆ ವೇದದಲ್ಲಿರುವ ಆಯುರ್ವೇದ ಪಾಠ ಆಗಿತ್ತೋ ಇಲ್ಲವೋ ತಿಳಿದಿಲ್ಲ. ದೇಹ + ಮನ ಸಂಬಂಧ ವಿವರಿಸುವ ವೇದದಿಂದ ದೇಹಶಾಸ್ತ್ರ + ಮನಶ್ಶಾಸ್ತ್ರವನ್ನು ಸಮೀಕರಿಸಿ ಕೆಲ ಆಯುರ್ವೇದ ಸಂಶೋಧಕರು ಮನಶ್ಶಾಸ್ತ್ರದಲ್ಲಿ ಹೇಳಿರುವ ದುಃಸ್ವಪ್ನ ಬೀಳಲು ಇರಬೇಕಾದ ಕಾರಣಗಳಿಗೆ ದೇಹಶಾಸ್ತ್ರದಲ್ಲಿ ಯಾವ್ಯಾವ ರಸಗಳು ಹೇಗೇಗೆ ವ್ಯತೀರೇಕ ಹೊಂದುತ್ತವೆ ಎಂದು ಅಭ್ಯಸಿಸಿ ಅದಕ್ಕೆ ರಸಶಾಸ್ತ್ರದ ರೀತಿ ಚಿಕಿತ್ಸೆಯನ್ನು ರೂಪಿಸಿರುತ್ತಾರೆ. ದ್ರವ್ಯ ಗುಣ ವಿಜ್ಞಾನದಲ್ಲಿ ಒಂದು ಕಡೆ ಬಿಲ್ವ ಮಣಿ ಪ್ರಯೋಗವನ್ನೂ ಹೇಳಿದ್ದಾರೆ. ಸುಮ್ಮಸುಮ್ಮನೆ ಶಿವನಿಗೆ ಬಿಲ್ವಪ್ರಿಯ ಎನ್ನಲಿಲ್ಲ. ಅಯೋಗ್ಯತೆಯನ್ನು ನೀಗಿಸಿಕೊಂಡು ಯೋಗ್ಯತೆ ಪಡೆಯಲು ಒಂದಾದರೂ ಬಿಲ್ವ ಪತ್ರೆಯನ್ನು ಶಿವರಾತ್ರಿಯ ಶುಭದಿನವಿಂದು ಶಿವನ ಮುಡಿಗೇರಿಸಿ. ಶಿವಪೂಜೆ, ರುದ್ರಾಭಿಷೇಕ, ಶಿವನಾಮಸ್ಮರಣೆ ಎಲ್ಲವಕ್ಕೂ ಬಲವಿದೆ, ರೋಗನಾಶಕ ವಿಜ್ಞಾನದ ಮಹಾನ್ ಸೂತ್ರಧಾರಿಯೇ ಶಿವ. ನಾಸ್ತಿಕರಿಗೆ ಧಿಕ್ಕಾರ. ಶಿವನಿಗಿಷ್ಠವಾದ ಬಿಲ್ವದ ಮಹತ್ವವೇ ಅತ್ಯುನ್ನತವಾಗಿರುವಾಗ ಶಿವನ ಮಹತ್ವವರಿಯದೆ ಶಿವ ದೂಷಣೆ ಮಾಡುವವರಿಗೆ ದೇಹವು ಬರೇ ಶವ ಮಾತ್ರ.3. ಮೋಟರ್ ನ್ಯೂರಾನ್ ಡಿಸೀಸ್ ಗೆ ಆಯುರ್ವೇದದಲ್ಲಿ ಏನು ಹೆಸರು ? ಕಾರಣ ? ಚಿಕಿತ್ಸೆ?ಉತ್ತರ:- ಮೋಟಾರ್ ನ್ಯೂರಾನ್ ಡಿಸೀಸಿನ ಬಗ್ಗೆ ಪ್ರತಿಷ್ಠಿತ ನೇಚರ್ ಜರ್ನಲ್ಲಿಲಲ್ಲೇ ಆಯುರ್ವೇದದ ಸಸ್ಯೌಷಧಿಗಳ ಬಗ್ಗೆ ಚಿಂತನೆ ನಡೆಸಿದ್ದಾರೆ.
ಆಧಾರ:- http://www.nature.com/articles/srep41059


ನೀವು MND ಎಂದೆಲ್ಲ ದಿನಕ್ಕೊಂದು ಹೊಸ ಹೊಸ ಹೆಸರು ಕೊಟ್ಟಾ ಕ್ಷಣ ಅದನ್ನು ನಿಮಗೆ ಆಯುರ್ವೇದದ ರೀತಿ ವಿವರಿಸುವ ಅಗತ್ಯತೆ ಇರುವುದಿಲ್ಲ. ತಲೆಗೆ ಸಂಬಂಧಿಸಿದ, ಮಿದುಳು ಬಳ್ಳಿಗೆ ಸಂಬಂಧಿಸಿದ, ಮಿದುಳು ಕೋಶಗಳಿಗೆ ಸಂಬಂಧಿಸಿದ ವೇದಾಧಾರಿತ ದೇಹಶಾಸ್ತ್ರೀಯ ವಿವರಗಳಿವೆ. ಅವಕ್ಕೆ ಆಯುರ್ವೇದದಲ್ಲಿ ಚಿಕಿತ್ಸೆಗಳೂ ಇವೆ. ನಿಮಗೆ ಆ ತೊಂದರೆ ಇದ್ದರೆ ಬನ್ನಿ, ದೊಡ್ಡ ದೊಡ್ಡ ಅರ್ಥವಾಗದ ಆಂಗ್ಲ, ಗ್ರೀಕ್, ಲ್ಯಾಟೀನ್ ಶಬ್ದ ಹೇಳದೆ ಸುಮ್ಮನೆ ಬಿಟ್ಟಿ ಚಿಕಿತ್ಸೆ ಮಾಡಿ ಕಳುಹಿಸುವ. ಆಯುರ್ವೇದವನ್ನು ಆಧುನಿಕದೊಂದಿಗೆ ಕಲಬೆರಕೆ ಮಾಡಲು ಹೊರಟದ್ದೇ ತಪ್ಪು. ಆಯಾ ಶಾಸ್ತ್ರವನ್ನು ಆಯಾ ಚೌಕಟ್ಟಿನಲ್ಲೇ ಚಿಂತಿಸಬೇಕು.4. ವಾತ ದೋಷವೇ, ಪಿತ್ಥ ದೋಷವೇ, ಕಫ ದೋಷವೇ ಅಂತ ಕಂಡುಹಿಡಿಯುವುದು ಹೇಗೆ? ಇದನ್ನು ಗೆಸ್ ಮಾಡಬೇಕೇ ? ನಾಡಿ ಹಿಡಿದರೆ ಗೊತ್ತಾಗುತ್ತಾ ?ಉತ್ತರ:- ತ್ರಿದೋಷ ಕಂಡು ಹಿಡಿಯಲು ಅದರದ್ದೇ ಆದ ವಿಧಾನಗಳಿವೆ. ಯೋಗ್ಯತೆ ಇದ್ದರೆ ಬಂದು ಕನಿಷ್ಠ ೧೨ ವರ್ಷ ಕಾಲವಾದರೂ ಅದನ್ನು ಅಧ್ಯಯನ ಮಾಡಿ ಸಿದ್ಧಿಸಿಕೊಳ್ಳಿ. ಸಮಾಜ ವಿದ್ರೋಹಿ ಕೆಲಸಗಳನ್ನೇ ಮಾಡುತ್ತಾ ಕುಳಿತರೆ ಈ ಜನ್ಮವಾಗಲೀ ಅಥವಾ ಮುಂದಿನ ಜನ್ಮವಾಗಲಿ ಒಂದಲ್ಲಾ ಒಂದು ದಿನ ನಿಮಗೆ ಅದರಿಂದ ಅನುಭವಿಸಲಾಗದಂತಹಾ ರೋಗ ಉತ್ಪನ್ನವಾಗುವುದು ಶತಃಸಿದ್ಧ. ಆಗ ನಿಮಗೆ ಸಹಾಯಕ್ಕೆ ಬರುವುದು ಆಯುರ್ವೇದ ಮಾತ್ರ, ಈ ಮಾತನ್ನು ಮಮತಾ ನಾಯ್ಕ್ ಎಂಬ ಹೆಸರಿನಲ್ಲಿ ಬರೆಯುತ್ತಿರುವ ಪುಡಿಗೇಡಿಗಳು ನೆನಪಿಟ್ಟುಕೊಳ್ಳಬೇಕು!!


ನಾಡಿ ಎಂದರೇನೆಂದು ಮೊದಲು ತಿಳಿದುಕೊಳ್ಳಿ. ನಾಡಿ ಹಿಡಿದರೆ ನಿಮ್ಮ ಹಣೇಬರಹವನ್ನೇ ಓದಬಹುದು. ದೇಹದಲ್ಲಿರುವ ನಾಡಿಗಳ ಸಂಪರ್ಕ ಸೇತುವನ್ನು ಕಂಡುಹಿಡಿದು ಅದನ್ನು ಅಂಗುಷ್ಠ ಮಾತ್ರದ ಛಾಯೆಯಿಂದ ಹೇಗೆ ಮೈಂಡ್ ರೀಡಿಂಗ್ ಮಾಡಬಹುದು ಎಂದು ಅಗಸ್ತ್ಯರು ನಾಡೀಶಾಸ್ತ್ರದಲ್ಲಿ ವೈಜ್ಞಾನಿಕವಾಗಿ ಸಂಶೋಧಿಸಿಟ್ಟರು. ಆದರೆ ನಂತರ ಬರಬರುತ್ತ ಅದು ತನ್ನ ವೈಜ್ಞಾನಿಕ ಹಾಗೂ ವೈಧ್ಯಕೀಯ ಉದ್ದೇಶ ಕಳೆದುಕೊಂಡು ದುಡ್ಡಿಗಾಗಿ ಹೇಳುವ ಫಲಜ್ಯೋತಿಷ್ಯವಾಯಿತು.


ಇನ್ನೂ ಪ್ರಕಟವೇ ಆಗದಿರುವ ಅಗಾಧವಾದ ನಾಡಿಶಾಸ್ತ್ರವಿದೆ. ವೈಧಿಕ ಭೌತಶಾಸ್ತ್ರವು ಮಾನವ ದೇಹದಲ್ಲಿ ೬೪ ಲಕ್ಷ ನಾಡಿಗಳ ವಿವರಣೆ ಕೊಡುತ್ತದೆ. ವೇದಗಳು ನಾಡಿ ಮುಖೇನ ರೋಗ ನಿದಾನ ಹಾಗೂ ಚಿಕಿತ್ಸಾ ಪದ್ಧತಿಯನ್ನೂ ಹೇಳುತ್ತದೆ. ಅದು ಈಗ ಪ್ರಕಟಿತ ಆಯುರ್ವೇದ ಗ್ರಂಥಗಳಲ್ಲಿ ಸಿಗದಿರಬಹುದು. ಆದರೆ ವೇದದಲ್ಲಿರುವುದು ಜಗಜ್ಜಾಹೀರ. ಮತ್ತೆ ಕೆಲ ಪಾರಂಪರಿಕ ವೈಧ್ಯರಲ್ಲಿ ಸ್ವಲ್ಪ ಸ್ವಲ್ಪ ಉಳಿದುಕೊಂಡು ಬಂದಿದೆ. ಅದರ ಮುಂದೆ ನಿಮ್ಮ ನ್ಯೂರಾಲಾಜಿ ಶೂನ್ಯ. ಜರ್ಮನಿ ಮತ್ತಿತರೆ ದೇಶಗಳಿಂದ ಅಂದಾಜು ೩೦ ಜನ ವೈಧ್ಯರು ಅದನ್ನು ಕಲಿಯಲು ವೇದ-ವಿಜ್ಞಾನ ಮಂದಿರಕ್ಕೆ ೨೦೧೭ನೇ ಏಪ್ರಿಲಿನಲ್ಲಿ ಬರಲಿದ್ದಾರೆ. ಅವರು ನಿಮ್ಮಂತೆ ನಕಲಿ ಖಾತೆ ಹೊಂದಿ ಏನಕ್ಕೇನೋ ಬಡಬಡಿಸುವ ಬುರುಡೆ ದಾಸರಲ್ಲ. ಅತ್ಯುನ್ನತ ವೈಧ್ಯಕೀಯ ಸಂಶೋಧಕರು, ತಿಳಿದಿರಲಿ.5. ಆಯುರ್ವೇದದಲ್ಲಿ ಪಾದರಸ ಬಳಕೆ ಹೇಗೆ ಸಮರ್ಥಿಸುತ್ತೀರಿ?ಉತ್ತರ:- ಮೂಲ ವೇದದಲ್ಲಿ ಹೇಳಿರುವ ಪಾದರಸವೇ ಬೇರೆ. ಅದು ಗಿಡಮೂಲಿಕೆಗಳ ರಸದಿಂದ ತಯಾರಿಸಲ್ಪಡುವಂತಹದ್ದು. ನೀವು ಹೇಳಿದಂತೆ ಮರ್ಕ್ಯುರಿಯೇ ಆಯುರ್ವೇದದ ಪಾದರಸವಲ್ಲ. ವಿಷದಲ್ಲಿ ವಿಷತ್ವವನ್ನು ಕೊಲ್ಲುವ (ನ್ಯೂಟ್ರಲ್ ಮಾಡುವ) ವಿಧಾನಗಳನ್ನು ಆಯುರ್ವೇದದಲ್ಲಿ ಹೇಳಿದೆ. ಅದರಂತೆ ಮಾತ್ರ ಅದರ ಬಳಕೆ. ಅದನ್ನು ಬಲ್ಲವರು ವಿರಳ. ಅದಕ್ಕಾಗಿಯೇ ಸಿದ್ಧ ವೈಧ್ಯ ಪದ್ಧತಿ ಬೇರೆಯೇ ಇದೆ. ಅಲ್ಲಿ ರಸ ಸಿದ್ಧರು, ಮಣಿ ಸಿದ್ಧರು, ಲೋಹ ಸಿದ್ಧರು, ಪಾಷಾಣ ಸಿದ್ಧರು ಎಂದೆಲ್ಲ ಸಿದ್ಧರ ಹಲವು ಪಂಥಗಳೇ ಇವೆ. ಉದಾಹರಣೆಗೆ ಪಾಷಾಣ ಸಿದ್ಧರು ನಿಮಗೆ ವಿಷ ಕುಡಿಸಿಯೂ ಅದನ್ನೇ ಔಷಧವಾಗಿಸಲು ಸಮರ್ಥರು. ಲೋಹ ಸಿದ್ಧರು ನಿಮಗೆ ಮರ್ಕ್ಯೂರಿಯನ್ನೇ ಔಷಧವಾಗಿ ಕೊಡಬಲ್ಲರು. ನಾಟಕವಾಡುವ ಜನ ಬೇರೆ ಸಿದ್ಧರು ಬೇರೆ. ಇವೆಲ್ಲ ನಿಮಗೆ ಮೂಢನಂಬಿಕೆ ಎನ್ನಿಸಬಹುದು. ಅದು ನಿಮ್ಮ ಹಣೇಬರಹ. ಯಾರೂ ಏನೂ ಮಾಡೋಕಾಗಲ್ಲ.
ಆಧಾರ:- http://veda-vijnana.blogspot.in/2012/08/siddhas.html6. ಮೊಸಳೆಯ ವೀರ್ಯ , ಆನೆಯ ಲದ್ದಿ , ಕೋಳಿಯ ಹಿಚಕಿ , ನವಿಲಿನ ಕಾಲಿನಿಂದ ಏನಾದರೂ ಗುಣ ಆಗುತ್ತದೆಯೇ ?ಉತ್ತರ:- ಆನೆಯ ಲದ್ದಿಯಲ್ಲಿ ಯಾವ ರಾಸಾಯನಿಕವಿದೆ? ಕೋಳಿಯ ಹಿಕ್ಕೆಯಲ್ಲಿ ಏನೇನಿದೆ? ಮೊಸಳೆಯ ವೀರ್ಯದಲ್ಲಿ ಏನಿರಬಹುದು? ನವಿಲಿನ ಕಾಲಿನಲ್ಲಿ ಅದೇನಿದೆ? ಈ ಸಮಸ್ಯೆಗಳು ನಿಮಗೆ ಹುಟ್ಟಿದವು. ಇಲ್ಲೇನು ಆಳ್ ಇಟ್ಟಿದ್ದೀರಾ, ನೀವ್ ಕೇಳಿದ್ದಕ್ಕೆಲ್ಲ ಉತ್ತರ ಕೊಡಲು? ಇದಕ್ಕೆ ನೀವೇ ಸಂಶೋಧನೆ ಮಾಡಿ ಉತ್ತರ ಕಂಡುಕೊಳ್ಳಬೇಕು. ಯೋಗ್ಯತೆ ಇದ್ದರೆ ಅದರ ರಾಸಾಯನಿಕ ವಿಶ್ಲೇಷಣೆಯನ್ನು ನಾಲ್ಕಾರು ವರ್ಷ ಮಾಡಿ. ಅಲ್ಲಿ ಹೇಳಿರುವ ತಪ್ಪುಗಳನ್ನು ಫೇಸ್ ಬುಕ್ ವಾಲಿನಲ್ಲಲ್ಲ, ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿ. ಯಾರ್ಯಾರೋ ಏನೇನೋ ಬರೆದು ಸೇರಿಸಿ ಆಯುರ್ವೇದವನ್ನು ಗಬ್ಬೆಬ್ಬಿಸುತ್ತಿರುವ ಸಂದರ್ಭದಲ್ಲಿ ತಪ್ಪನ್ನು ತಪ್ಪೆಂದು ಸಾಧಿಸಿ ತೋರಿಸಿ. ಅದು ನಿಜವಾದ ಜಿಜ್ಞಾಸು ಲಕ್ಷಣ. ಗುರುವಿಲ್ಲದೆ ಸಿಕ್ಕ ಸಿಕ್ಕ ಬಿಟ್ಟಿ ಪುಸ್ತಕಗಳಲ್ಲಿ ಬರೆದದ್ದೇ ಆಯುರ್ವೇದ ಎಂದು ಹಝಾರದಲ್ಲಿ ಹೌಹಾರಿದರೆ ಅದನ್ನು ಆಯುರ್ವೇದದಲ್ಲಿ ಉನ್ಮಾದ ಎಂದು ಕರೆಯುತ್ತಾರೆ. ಅದಕ್ಕೂ ಸರಿಯಾದ ಚಿಕಿತ್ಸೆ ಇದೆ.

7. ರಕ್ತಷ್ಠೀವಿಸನ್ನಿಪಾತ ಅಂದರೆ ಯಾವ ರೋಗ ?ಉತ್ತರ:- ಮುಖ್ಯವಾಗಿ ಮಮತ ನಾಯ್ಕ ಎಂಬ ಅಡ್ಡೆಸರಿನ ರೋಗಿಯ ಒಂದು ಉದಾಹರಣೆ ತೆಗೆದುಕೊಳ್ಳೋಣ. [ಈ ವಿವರಣೆ ಉಳಿದವರಿಗೆ ಅನ್ವಯಿಸುವುದಿಲ್ಲ.] ಮನುಷ್ಯ ಸಹಜವಲ್ಲದ ರಸ್ತೆಯಲ್ಲಿ ಸಾಗುವ ಪ್ರಾಣಿಗಳು ತಿನ್ನುವ ಅಮೇದ್ಯವನ್ನು ತಿಂದಾಗ ನಿಮಗೆ ರಕ್ತದಲ್ಲಿ ಅದರ ದೂಷಿತಗಳು ಸೇರಿ ಅದು ದೇಹದೊಳಗಿರಲಾಗದೆ ರಕ್ತವಾಂತಿ ಮಾಡಿಕೊಳ್ಳುತ್ತಿದ್ದೀರ ಅಥವಾ ಉಗಿದಾಗ ಕಫದೊಂದಿಗೆ ರಕ್ತ ಹೋಗುತ್ತಿದೆ ಎನ್ನೋಣ. ಇದು ನಿಮಗೆ ಬಂದಿರುವ ಸನ್ನಿಪಾತ ಜ್ವರವಿರಬಹುದು. ಷ್ಠೀವನ ಎಂದರೆ ಮೇಲ್ಗಡೆಯಿಂದ ಹೊರಬರುವಂತಹದ್ದು. ಉದಾ:- ರಕ್ತಷ್ಠೀವನ ಎಂದಾಗ ಕಫದೊಂದಿಗೆ ರಕ್ತ ಅಥವಾ ಬರೇ ರಕ್ತ ವಾಂತಿ ಆಗಬಹುದು. ಅದಕ್ಕೆ ಕೂಡಲೆ ರಕ್ತ ಕ್ಯಾನ್ಸರ್ ಎನ್ನುವುದಲ್ಲ. ಏಕೆಂದರೆ ಸನ್ನಿಪಾತ ಜ್ವರದಲ್ಲಿ ಇದೂ ಒಂದು ಲಕ್ಷಣ. ರೋಗ ನಿದಾನ ಪದ್ಧತಿ ಇದೆ. ಅದರಂತೆ ಕಂಡು ಹಿಡಿಯಬೇಕು. ಇನ್ನೂ ಹಲವು ಲಕ್ಷಣಗಳಿವೆ. ಇಲ್ಲಿನ ವಿವರಣೆಗೆ ಇಷ್ಟು ಸಾಕು. ಸನ್ನಿಪಾತ ಜ್ವರದಲ್ಲೇ ೧೩ ವಿಧಗಳಿವೆ. ಇವೆಲ್ಲ ಪುಸ್ತಕದ ಬದನೇಕಾಯಿಯಿಂದ ತಿಳಿದುಕೊಳ್ಳಲಾಗುವುದಿಲ್ಲ. ಅನುಭವೀ ನಿಜ ವೈಧ್ಯರೊಂದಿಗೆ ಸಹಾಯಕರಾಗಿ ಶ್ರಮಿಸಿ ಅರ್ಥ ಮಾಡಿಕೊಳ್ಳಬೇಕು.8. ಅಮೈಟ್ರೋಫಿಕ್ ಲ್ಯಾಟರಲ್ ಸ್ಕ್ಲೇರೋಸಿಸ್, ಪ್ರೊಗ್ರೆಸ್ಸಿವ್ ಬಲ್ಬಾರ್ ಪಾಸ್ಲಿ, ಪ್ರೊಗ್ರೆಸ್ಸಿವ್ ಮಸ್ಕ್ಯೂಲರ್ ಅಟ್ರೋಫಿ ಇವುಗಳಿಗೆ ಆಯುರ್ವೇದ ಹೆಸರು ಏನು ? ಯಾಕೆ ಬರುತ್ತವೆ? ಆಯುರ್ವೇದದ ಚಿಕಿತ್ಸೆ ಏನು ?ಉತ್ತರ:- ಚರಕ ಚಿಕಿತ್ಸಾ ಸ್ಥಾನದಲ್ಲಿ ಆವರಣ ಎಂಬ ವಿಭಾಗವಿದೆ. ಅದರಲ್ಲಿ ಈ ಎಲ್ಲಾ ಸಂಯೋಗ ಭಂಗ (ಪರ್ಮ್ಯುಟೇಶನ್ ಕಾಂಬಿನೇಶನ್) ಗಳನ್ನು ವಿವರಿಸಿದೆ. ಅದರಂತೆ ಹೊಸ ಹೊಸ ರೋಗಗಳನ್ನೂ ಕಂಡು ಹಿಡಿಯಬಹುದು. ಅದು ಸ್ನಾತಕೋತ್ತರ ಅಧ್ಯಯನ ಹಾಗೂ ವೈಧ್ಯನ ಪರಿಣಿತಿಯ ಮೇಲೆ ಅವಲಂಭಿತವಾಗಿರುತ್ತದೆ. ಇನ್ನು ಚಿಕಿತ್ಸೆಗಾಗಿ ಚರಕ ಚಿಕಿತ್ಸಾ ಸ್ಥಾನ ಓದಿ ಅರ್ಥ ಮಾಡಿಕೊಳ್ಳಿರಿ.


ಆಕರ:- Clinical approach to Avarana. Article (PDF Available) in International Journal of Research in Ayurveda and Pharmacy 3(6):765-768 • December 2012 DOI: 10.7897/2277-4343.036122 comments:

  1. ವೇದಗಳನ್ನ ಅತೀ ಕೀಳಾಗಿ ಕಾಣುತ್ತಿದ್ದಾಳೆ ಅದಕ್ಕೆ ನಿಮ್ಮ ಸೈಟ್ನಲ್ಲಿ ಮಾಹಿತಿ ಕಲೆ ಹಾಕಿದೆ ಕೆಲವೆಡೆ ನಿಮ್ಮ ಮಾರ್ಗ ಧರ್ಧರ್ಶನ ಬೇಕು

    ReplyDelete
    Replies
    1. I had made an open challenge to come face to face and argue. These are neuter gender people who are funded by anti-hindus to break unity and disturb Hindu Shastras. It's totally waste of time to argue with those kind of people. One thing is for sure that they will get incurable disease and come begging to Ayurveda to get it treated. This birth or next birth, that fake ID holder has to repent and publicize Ayurveda for the Dushkrutya she/he/it is doing now.

      Delete