Sunday, 30 July 2017

ದೇಹಾಂತರ್ಗತ ನರ ಸಂಜ್ಞೆಗಳನ್ನು ವಿವರಿಸುವ ಸಾಮಗಾನ, ನಿರುಕ್ತ ಮತ್ತು ಭಾಷ್ಯ

ಮಾನವರಲ್ಲಿ ಅತೀ ಶ್ರೇಷ್ಠವಾದ ಗುಣ ಪ್ರವಾಹಗಳಲ್ಲಿ ಮಾನವೀಯ ಗುಣವೆಂಬುದು ಮುಖ್ಯವಾದುದು. ಇದು ೧೬ ಭಿನ್ನ ತತ್ವಗಳಲ್ಲಿ ಪ್ರವಹಿಸುತ್ತದೆ. ಹಾಗಾಗಿ ಈ ಸದ್ಗುಣವನ್ನು ಕೂಡಿಕೊಂಡವನೇ; ಅಂದರೆ ನಿರಂತರ ಸದುಣ ಪ್ರವಾಹಭರಿತನೇ ನರನೆನ್ನಿಸಿಕೊಳ್ಳುತ್ತಾನೆ. 
೧. ಸತ್ಯ
೨. ಧರ್ಮ
೩. ನ್ಯಾಯ
೪. ದಯೆ
೫. ಶಾಂತ
೬. ಉದಾರಿ (ಔದಾರ್ಯ)
೭. ಕ್ಷಮಾ
೮. ಶೀಲ
೯. ಶೃದ್ಧಾ
೧೦. ಸ್ನೇಹ
೧೧. ಭಕ್ತಿ
೧೨. ಭಾವಯ
೧೩. ಸೇವಾಹಿ
೧೪. ಜಿತೇಂದ್ರಿಯತ್ವ
೧೫. ತ್ಯಾಗ
೧೬. ಕರ್ತವ್ಯನಿಷ್ಠೆ

ಈ ೧೬ ಗುಣಗಳನ್ನು ಮೈಗೂಡಿಸಿಕೊಂಡವನೇ "ನರ"ನೆಂದು ಹೇಳಿಸಿಕೊಳ್ಳುತ್ತಾನೆ. ಈ ಗುಣಗಣಗಳು ಪ್ರವಾಹರೂಪದಲ್ಲಿ ಹರಿಯುತ್ತಾ ನಿರಂತರತೆ ಕಾಯ್ದುಕೊಂಡು ಬರುವುದರಿಂದ ಅದು ನರಪ್ರವಾಹ ಅನ್ನಿಸಿಕೊಳ್ಳುತ್ತದೆ. ಹಾಗಾಗಿ ಈ ನರ ಪ್ರವಾಹವೇ ಮನ ಪ್ರಚೋದಕ, ಮಂಹಿಷ್ಥ, ಋಷಾಹ, ಸೋಹಂ ವೃತ್ತಿ. ಇವುಗಳನ್ನು ಮೈಗೂಡಿಸಿಕೊಳ್ಳುವವನೇ ನರನೆನ್ನಿಸಿಕೊಳ್ಳುತ್ತಾನೆ. ಇರಿಂಬಿಠಿಯೆಂಬ ಕಣ್ವ ಶಿಷ್ಯರೊಬ್ಬರು ಈ ಮುಖದಲ್ಲಿ ಅಗಾಧ ಸಂಶೋಧನೆ ಮಾಡಿದ್ದಾರೆ. ಅವರ ಅಂಬೋಣವೇ ಈ ಮಂತ್ರದ ಭಾವಾರ್ಥವಾಗಿರುತ್ತದೆ. ಈ ವಿಚಾರದ ತಿಳುವಳಿಕೆಯಿಂದಾಗಿ ಮಾನವನಿಗೆ ಷಡ್ವೈರಿ ಬಾಧೆಯಿಂದ ಪರಿಹಾರ ಪಡೆಯಲು ಸಾಧ್ಯವೆಂದೂ, ಅದನ್ನು ಮೈಗೂಡಿಸಿಕೊಳ್ಳುವ ವಿಧಾನವನ್ನೂ ಈ ಮಂತ್ರದಲ್ಲಿ ವಿವರಿಸಿದ್ದಾರೆ. ಇದರ ಗಾನೋಪಾಸನೆಯಿಂದ ಹಲವು ನರರೋಗಗಳು, ಮಾನಸಿಕ ರೋಗಗಳು ಉಪಶಮನವಾಗಲು ಸಾಧ್ಯ.
- ಸಾಮವೇದ ಭಾಷ್ಯ ಸಂಹಿತಾ

No comments:

Post a Comment