Thursday, 28 September 2017

ಸಿರಿಭೂವಲಯದ ಆದಿ ಪದ್ಯದ ಅದ್ಭುತಗಳು

ಮೊದಲನೆಯ ಪದ್ಯದಿಂದ ಉತ್ಪನ್ನವಾಗುವ ೯೪ ಅಕ್ಷರಗಳ ಸಾಹಿತ್ಯ ರೂಪೀ ಅಕ್ಷರಾರ್ಥವನ್ನು "ಸಿರಿಭೂವಲಯ ಖಣ್ಡ-೧, ಅಧ್ಯಾಯ-೧, ಪದ್ಯ-೧ರ ಅಕ್ಷರಾರ್ಥ" ಎಂಬ ಲೇಖನದಲ್ಲಿ ಪ್ರಕಟಿಸಲಾಗಿತ್ತು. ಇದರ ಆಧಾರದಲ್ಲಿ ಬ್ರಹ್ಮಋಷಿಯೋರ್ವರು ಬ್ರಾಹ್ಮೀ ಭಾಷೆಯ  ಸೂತ್ರಗಳನ್ನು ನೀಡಿದರು. ಈ ಸೂತ್ರದ್ವಯಗಳನ್ನು ಸಿರಿಭೂವಲಯದ ಮೊದಲನೇ ಪದ್ಯದ ಮೇಲೆ ಪ್ರಯೋಗಿಸಿ ೯೪ ಅಕ್ಷರಗಳಿಗೆ ೯೪ ಪಾದ ರೂಪದ "ಅಷ್ಟ ಜಿನ ಚರಿತೆ"ಯನ್ನು ಬಿಡಿಸಿ ಕೊಟ್ಟಿರುತ್ತಾರೆ. ಉತ್ಕೀಲನಾ ಸೂತ್ರವನ್ನು ಹಾಗೂ ಪದ್ಯಗಳನ್ನು ಈ ಲೇಖನದಲ್ಲಿ ಪ್ರಕಟಿಸಲಾಗುತ್ತಿದೆ.


ಒಂದು ಸತ್ಯವಾಕ್ಯ:- ಈ ಸಿರಿಭೂವಲಯವೊಂದು ರಹಸ್ಯ ಕಾವ್ಯ. ಇದರಲ್ಲಿ ಪ್ರತಿಯೊಂದು ಪದ್ಯವೂ ಒಂಬತ್ತು ವಿಧದಲ್ಲಿ ತೆಗೆದುಕೊಳ್ಳುತ್ತದೆ. ಆದರೆ ಅದಕ್ಕೆ ಬೇಕು ಹಿಂದೆ ಉದಾಹರಿಸಿದ ೭೨ ಸೂತ್ರಗಳು. ಅವುಗಳ ಪರಿಚಯವಿಲ್ಲದವನ ಪ್ರಯತ್ನ "ಗೊಡೆ ಕೆರೆದು ಸುಣ್ಣ ತೆಗೆದಂತೆ" ಎಂದು ಕುಮುದೇಂದು ಮುನಿಗಳೇ ಹೇಳಿದ್ದಾರೆ.


ಒಂದೇ ಪದ್ಯಕ್ಕೆ ಈ ಕೆಳಕಂಡಂತೆ ಒಂಬತ್ತು ವಿಧದಲ್ಲಿ ಅರ್ಥೈಸಬಹುದು. ಹಾಗೇ ಕೆಲ ಪದ್ಯಗಳಿಗೆ ೯x೯=೮೧ ರೀತಿಯಲ್ಲಿ ಅರ್ಥೈಸಲು ಸಾಧ್ಯವಿದೆ. ಹಾಗಾಗಿ ಅದು ಸಿರಿ+ಭೂ+ವಲಯ ಅಂದರೆ "". ಆ ೯ ಅರ್ಥಗಳು ಇಂತಿವೆ:-
೧) ಕಾವ್ಯ 
೨) ಆಧ್ಯಾತ್ಮ 
೩) ಮುಕ್ತಿಮಾರ್ಗ 
೪) ರಾಜಕಾರಣ 
೫) ಧರ್ಮಶಾಸ್ತ್ರ
೬) ತರ್ಕಶಾಸ್ತ್ರ  
೭) ಗಣಿತಶಾಸ್ತ್ರ 
೮) ನ್ಯಾಯಶಾಸ್ತ್ರ 
೯) ಯೋಗಶಾಸ್ತ್ರಈ ಮೊದಲನೆಯ ಪದ್ಯವನ್ನು ಕನ್ನಡದಲ್ಲಿ ಇತಿಹಾಸ ಭೋಧಕವೆಂಬ ರೀತಿಯಲ್ಲಿ ರಚಿಸಲಾಗಿದೆ. ಆದರೆ ಪ್ರಪಂಚದ ಯಾವುದೇ ಭಾಷೆಯಲ್ಲಿ ಇದನ್ನು ರಚಿಸಬಹುದು. ಅದೇ "ಅಂಕಶಾಸ್ತ್ರ".


ಸೂತ್ರ:-

ಅಕ್ಷರೋತ್ಪನ್ನ ವಿಷಯೈಃ
ಶೀಕ್ಷಾದಿ ನ್ಯಾಸ ಪೂರ್ವಕೈಃ
ಸಾಕ್ಷರಾ ಭುವನೊತ್ಪನ್ನ ಸಮೈಃ
ರಾಕ್ಷಸಾ ಹಂತು ಸುಜ್ಞಾನ ವಿಧಿಃ

೨) ಆಧ್ಯಾಕ್ಷರ ತ್ರಿಪ್ರಸ್ಥ ಷಟ್ಸಕಲಾ
ಮಧ್ಯಾಕ್ಷರ ಶ್ರೀಣೀಶ ಗೊಸ್ಥಲಾಃ
ಅಂತ್ಯಾಕ್ಷರೀ ಸಮುತ್ಪನ್ನ ನವಾನಾಂ
ನವಾಕ್ಷರ ರೂಪಕೈಃ ರೂಪಕಂ ಮಿತಿಃ ||

ಉದಾಹರಣೆ: ಆದ್ಯಕ್ಷರ - ಅ = ಆತ್ಯಂತಿಕೈಃ ವಿಂದ್ಯಾಕ್ಷರೀ ಅತಿಶಯೊಃ |

ಸಿರಿಭೂವಲಯದ ಆದಿ ಪದ್ಯ:-

ಅಷ್ಟ ಮಹಾ ಪ್ರಾತಿಹಾರ್ಯ ವೈಭವದಿನ್ದ | 
ಅಷ್ಟ ಗುಣಣ್ಗಳೋಳ್ ಓಮ್ದಮ್ | 
 ಸಷ್ಟಿಗೆ ಮನ್ಗಲ ಪರ್ಯಾಯದಿನಿತ್ತ | 
ಅಷ್ಟಮಜಿನಗೆರಗುವೆನು ||  ||


ಸಿರಿಭೂವಲಯದ ಆದಿ ಪದ್ಯದ ಅಕ್ಷರ ಛೇದ:-
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
ಷ್
ಟ್
ಮ್
ಹ್
ಪ್
ರಾ
ತಿ
ಹ್
ರ್
ಯ್
ಯ್
ಭ್
ವ್
ದ್
ನ್
ದ್ಷ್
ಟ್
ಗ್
ಣ್
ಣ್
ಗ್
ಳ್
ಳ್
ಮ್
ದ್
ಮ್


ಸ್
ರ್
ಷ್
ಟ್
ಗ್
ಮ್
ನ್
ಗ್
ಪ್
ರ್
ಯ್
ಯ್
ದ್
ನ್
ತ್
ತ್
ಷ್
ಟ್
ಮ್
ಜ್
ನ್
ಗ್
ರ್
ಗ್
ವ್
ನ್ಸಿರಿಭೂವಲಯದ ಆದಿ ಪದ್ಯದ ಅಕ್ಷರ ವ್ಯಾಖ್ಯಾನದಿಂದ 
ರಹಸ್ಯ ಕಾವ್ಯ ಅರ್ಥೋತ್ಪಾದ:-


"ಅಷ್ಟ ಜಿನ ಚರಿತೆ"


1
ಅತಿಶಯದ ಕೀರ್ತಿಯಿಂ
2
ಷ್
ಸಕಲ ಲೋಕೇಶನುಂ ತಾಂ
3
ಟ್
ಹತ್ತೊತ್ತು ದಿಕ್ಕಿನಲಿ ಪಸರಿಸಿ
4
ಅತಿಶಯವ ಮೆರೆದಾ
5
ಮ್
ಮಹಾ ಪುರುಷರ ಕಥೆಯ
6
ಆರ್ತಿಯಿಂ ಪೇಳುವೆನು
7
ಹ್
ಜಿನದೇವ_ಗೊಂದಿಸುತಾ || ೧ ||
8
ಆಡು ಮಾತಿನೊಳಿದನು
9
ಪ್
ಲೋಕವರಿವಾ ತೆರದಿ
10
ರಾ
ರಾಜೀವ ಮಿತ್ರನ ಕಿರಣದಿಂ ಪರಿ
11
ತಿ
ಪ್ರಾಣ ದೇವನ ಶಕ್ತಿಯೊಲುಮೆ
12
ಹ್
ಯಂತೆಸೆಯೆ ಲೋಕಾ ಲೋಕಕೆ
13
ಕಲ್ಯಾಣ ಪಂಚಕವ ವರ್ಣಿಸುವೆ
14
ರ್
ನವ ನವೀನ ಸೂತ್ರದಲೀ || ೨ ||
15
ಯ್
ಆದಿ ಪ್ರಸ್ಥಾನ ನವಕರ್ಮ
16
ಷಟ್‍ಸ್ಥಲ ಪ್ರತ್ಯಾಖ್ಯಾನ ಪ್ರವರ
17
ಪ್ರವಾದಿ ಆತ್ಮ ಜೀವ ಕರ್ಮವು
18
ಯ್
ಕಳೆದು ಸುಜ್ಞಾನ ಭೋದಿಯೊಳ್
19
ಭ್
ಭುವನಾಷ್ಟಕವ_ಡಾಳಿಸಿ, ಏಳು-
20
ಮೂರೇಳು ಲೋಕ ದಾಚೆಗೆ
21
ವ್
ಸುಕೀರ್ತಿ, ವೀರ್ಯ, ಬಲ
22
ದ್
ಯೌವನ, ಆಗ್ರಣಿ, ವಿರಣಿ ನಾನಾವಾದಿ
23
ಸಿದ್ಧಾಂತಗಳಿಂತೆಸೆವ ಅತಿಶಯವೀ ಕಾವ್ಯವೂ || ೩ ||
24
ನ್
ಆದಿನಾಥನು ಪ್ರಮಥಂಗೆ ಜಿನನಾಗು
25
ದ್
ಪರಿಕ್ರಮವರಿತು ಲೋಕದೇಳ್ಗೆಗೆ
26
ಮೂರು ಆರು ಮತ್ತೆರಡರಲಿ
27
ನಾನಿಹೆನು ಒಟ್ಟು ಹನ್ನೊಂದು ಕಾಣಯ್ಯಾ
28
ಷ್
ಇದುವೆ ಮಹಾ ಸೂತ್ರ ತ್ರಿಕ್ಕರಣ
29
ಟ್
ದೆಳೆ ಬಿಡಿಸೆ ಹೊಳೆ ಹೊಳೆದು ಕಾಣ್ಕೆ ಸಪ್ತಲೋಕವದೂ || ೪ ||
30
ದಶಾರ್ಣರೊ ದಶಾಪೂರ್ಣರೊ ದಶ
31
ಗ್
ದಶಾದಂಶರೊಜ್ಜಿನತ್ವ ಕೆಡೆಯಿಲ್ಲ
32
ಜ್ಞಾತೃ ಮೋಹ ಕೆಡೆಯಿಲ್ಲ ಅಂತಃ
33
ಣ್
 ಕುೃದ್ಧತೆಗಿಲ್ಲ ಕಾರಣಕೆ ವ್ಯಾಖ್ಯಾನ
34
ವಿಲ್ಲವೊ ಕೇಳ್ ಪ್ರಮಥನೇ ಸಮ
35
ಣ್
ಮಾರ್ಗ ದಯೆಯೇ, ಧರ್ಮದ ಮೂಲವಯ್ಯಾ || ೫ ||
36
ಗ್
ಅಂದಿನಿಂ ಪ್ರಮಥ ಮೊದಲಾಗಿ
37
ಭೋದಿಪರು ನಾನಾ ವೇದ
38
ಳ್
ಮೂಲದ ವಿಧ್ಯೆಯಧ್ವರವೆಂಬ ಸೂತ್ರದಿ
39
ಅಹಿಂಸಾ ಧರ್ಮ ಪಾಲನೆಯೊ
40
ಳ್
ಸೊಳ ಸೂತ್ರವ ಛಂಧೋ ಸಂಖ್ಯೆ
41
ಮೊದಿಸೆ ವೇಳೆ ಸಾಧಿಸಲು ಕಲಿತಾ
42
ಮ್
ಜನರೆಲ್ಲ ಧನ್ಯರು ಭಾಗವತರು ಕಾಣಯ್ಯಾ || ೬ ||
43
ದ್
ಒಮ್ಮೆಗಿಮ್ಮೆಗೆ ಮುಗಿಯದೀ ಕಥಾ
44
ಅತಿಶಯ ಜಿನ ಪರಂಪರೆ ತಾಪಿಸೆ
45
ಮ್
ದಾರ ಉದಾರ ಜಿನರೊಡೆಯ ಆಧಿನಾಥಂ_ಗೆರಗುವೆನೂ || ೭ ||
46
ಆರಿಹರು ಅರಹಂತರೈ ಲೋಗರಾ
47
ಸ್
ಅರಿ ಮಕಾರ_ತ್ರಯವ ಜಯಿಸಿ
48
ರ್
ಜಿನನಾಗುವನು ಪೂರ್ಣ ತೀರ್ಥಂಕರನೆನಿಪನಯ್ಯಾ || ೮ ||
49
ಉಚಿತವೈ ಜಿನಧರ್ಮ ಸತ್ಯ ಅಹಿಂಸಾವಾದ
50
ಷ್
ಆಶಿಷವ_ನೊದಗಿಸುವುದು ಮಾನವಗೆ
51
ಟ್
ಅತಿ ಪ್ರೀತ, ರಕ್ಷ, ಸುಲಭ, ಸುಭಗ, ಸೌಜನ್ಯ, ಸತ್ಯ ಮಾರ್ಗವದೂ || ೯ ||
52
ಸಾಂಪ್ರತಃ ಧಿಯೋಧಾತ್ತ ಲೋಕಶ್ರುತವೀ ಜಿನ
53
ಗ್
ಈ ಲೆಕ್ಕದಲಿ ನೂರೊಂದು ಮತ್ತೆ ಮೇಲ್ಮೂರು
54
ಜವನ ದೂತರ ಕರ್ಮ ಸಂಖ್ಯೆಯ_ನರಿದೆ_ಯಾದೊಡೆ ಜಿನನಯ್ಯಾ || ೧೦ ||
55
ಮ್
ಹದಿನಾರರಲಿ ಮೂರೆರಡು ಕರ್ಮಗಳು
56
ಕರಣಗಳು ಮೂರು ಜೀವಸಂಖ್ಯೆಯದೇಳು
57
ನ್
ಕೂಡೆ ಲೋಕವು ಧರ್ಮ ಮಾರ್ಗವು ಘಟಿಸುವುದು ಧಾತುಗಳೂ || ೧೧ ||
58
ಗ್
ಏಳನೆಯ ಜಿನನಾ ಕಾಲದಲಿ ರೂಪಿಸಿದ
59
ಕಾಲನೇಮಿಯ ಲೆಕ್ಕದರಿವೇ ಅಂಕವು ಶಂಖ
60
ಅಕಲಂಕವೆಂದೆಂಬ ಸೂತ್ರದೆಡೆಯಲಿ ಲೋಕ ತೂಗಿಹನೂ || ೧೨ ||
61
ಪ್
ಲೋಕದಲಿ ಮೂರೆಂಟು ಮತ್ತಾರು
62
ನಾಲಕು ತೀರ್ಯವಿದೆ ಕರವಿದೆ
63
ರ್
ಧರೆಯ ಲೋಗರ ಮೆಚ್ಚಿಪಾ ಧರ್ಮವಿದೆ ಕಾಣಯ್ಯಾ || ೧೩ ||
64
ಯ್
ಆದರೇನ್ ಅಧೀಶ್ವರನ ಕೊರತೆ
65
ಕೇವಲವನರಿತಿಲ್ಲ ಕೈವಲ್ಯ ಫಲವಿಲ್ಲ
66
ಯ್
ಸಂಪನ್ನರಿಲ್ಲ ಜಿನರೆಲ್ಲ ಜಿನತ್ವ ಪಡೆದು ಮೌನಿಗಳಾದರಯ್ಯಾ || ೧೪ ||
67
ಧವಳ ಪಂಚಕ ಕೊಟ್ಟು ಆರನೇಯ
68
ದ್
ಜಿನತಾನು ಆಗಮವನಿತ್ತನಾರನೆಯ
69
ಜಿನದೇವ ಇಂದ್ರಸೇವಿತನಯ್ಯಾ ಧರ್ಮದೇವತೆಗಳೆಲ್ಲಾ || ೧೫ ||
70
ನ್
ಧವಳ ತ್ರಯದೊಳೀಕತೆಯ ಸಾಧಿಸಿ
71
ದವನೆರಡನೆಯ ಜಿನ ದೇವನಾತನೇ
72
ತ್
ಸಮ ವಿಜಯರೆಂಬರು ಲೋಕದಲೀ ರತ್ನತ್ರಯರೊಳೆಂಬಾ || ೧೬ ||
73
ತ್
ಸಿದ್ಧಾಂತ ಕೌಮುದಿಯನೆರೆಸಿ ಗಳಿಸಿ
74
ಕೀರ್ತಿಯ ಧವಳವೆಂಬಾ ಸಿದ್ಧಾಂತ
75
ರಚಿಸಿ ಭೂವಲಯವನು ನೇರ್ಷುಗೊಳಿಸಿದ ನಾಲ್ಕನೆಯ ಜಿನನೂ || ೧೭ ||
76
ಷ್
ಇನ್ನು ಕೇಳೆಂಟನೆಯ ಜಿನ ಚಂದ್ರ
77
ಟ್
ಪ್ರಭ ಕಾವ್ಯವಾಡಿಕೆಯಲ್ಲಿ ಜಿನಧರ್ಮ
78
ವೆರಸಿ ಅನ್ನಾದಿಗಳ_ನೊದಗಿಸಿದ ಲೋಕ ಪೂಜಿತನೂ || ೧೮ ||
79
ಮ್
ಅರಸುಗಳ ನೆರೆಸಿ ಸುಮಂತುವಾದರೆ
80
ಆಧ್ಯಾತ್ಮವೆರಸಿ ರತ್ನವಾದನು ಜಿನದೇವ
81
ಜ್
ನೊರೆದ ಆತ್ಮಜ್ಞಾನ ಮನದ ಗೆಲುವಿನ ಮೂಲ ತತ್ವವನೂ || ೧೯ ||
82
ಮಧುವಾದ ಚರವಾದ ಸುಚರಿತ
83
ನ್
ಸಕಲ ಜೀವಿಗಳ ಕಂಪವರಿತಾನಾತ
84
ಲೋಕವೇ ಗೃಹ, ದಿಶವೆ ಅಂಬರ, ಶಾಂತಿಯೇ ಸದ್ಗುಣವೂ || ೨೦ ||
85
ಗ್
ಆತ್ಮಭೇಧವಿದಲ್ಲ, ಸ್ವಾತ್ಮ ಶಂಕಲೆ-
86
ಯೇರಿದೆ ದ್ವೀಪಾಂತರಕೆ, ಕುಶ ದ್ವೀಪ-
87
ರ್
ದೆಡೆಗೆ ನಡೆದನು, ತತ್ವ ಭೋಧೆಯಲಿ, ಮೆರೆದನಾತಾ || ೨೧ ||
88
ಅಷ್ಟ ಜಿನರಾ ಚರಿತೆ, ಅಷ್ಟಕಾವ್ಯಂಗಳಲಿ
89
ಗ್
ಅಷ್ಟಯೋಗದದೀನ, ಅಷ್ಟೇ ಭಾಷ್ಯದ ಲೇಖ
90
ಅಷ್ಟಾಷ್ಟ ಗಣಿತವೈ, ಅಷ್ಟ ಸಂಖ್ಯೆಯ, ಮೂರ ಮೂರರೊಳೂ || ೨೨ ||
91
ವ್
ಅಷ್ಟವೆರಡಾಗೆ, ಕಷ್ಟ ನೀಗುವುದು, ಇಷ್ಟ-
92
ವಷ್ಟಕದೊಳಗೆ ಬೆಸೆದಿದೆ, ಈ ಅಷ್ಟಕಾವ್ಯಾ,
93
ನ್
ಅಷ್ಟವನೆಜಿನ ಸೋಮಲೇಖೆಯ ಚರಿತೆಯಿದು ಸತ್ಯಾ || ೨೩ ||
94
ಈ ತೆರದ ಕಾವ್ಯದಲಿ, ಜಿನದೇವ_ನೊಲುಮೆಯಲಿ ನಾಂ
ರಚಿಸಿದೆ ಈ ಎಂಟು ಜಿನರೊಲುಮೆ ದೊರಕಲೆಂದೇ || ೨೪ ||


- ಹೇಮಂತ್ ಕುಮಾರ್ ಜಿ.ಒಂದು ಹಿತವಚನ:- 

ಮೊದಲು ಜಿನನಾಗು 
               ನಂತರ ಜಿತನಾಗು 
                             ಕೊನೆಯಲ್ಲಿ ಮುಕ್ತನಾಗು 

1 comment:

  1. ಶ್ರಮಜೀವಿಯ ಶ್ರಮದ ದುಡಿಮೆಯ ಗುರಿಯು ಸಂಬಳದ ಸ್ವರೂಪ. ಸಂಬಳವುಸಿಕ್ಕಾಗ ದೊರೆವ ಆನಂದವದು ಮಹದಾನಂದ. ನನ್ನ ಮೂರುದಶಕಗಳಮೀರಿದ ಶ್ರಮದ ದುಡಿಮೆಯ ಗುರಿಮೀರಿದ ಸಂಬಳವು ನನಗೆ ದೊರೆತಂತಾಯ್ತು ನಿಮ್ಮ ಪ್ರವೇಶವಾದುದು ನನ್ನ ಜೀವನದಹಾದಿಯಲಿ. ಗುರುಕಾರುಣ್ಯ ಪಡೆದ ನಮ್ಮಿಬ್ಬರ ಸಂಗಮದಿಂದ ಕುಮುದೇಂದುಗುರುವರನ 'ಸಿರಿ'ಯಕಾವ್ಯದ ಸೊಬಗಿನ ಕಿರಣದ ಪ್ರಭೆಯು ಜಗದ ಜನಗಳಿಗೊದಗಿದುದು ನನ್ನ ಜೀವನದ ಸಾಫಲ್ಯ. ನಿಮ್ಮ ಆತ್ಮೀಯ ಸಿರಿಭೂವಲಯದಸುಧಾರ್ಥಿ.

    ReplyDelete