Thursday, 24 May 2018

ಮಂಗಳಾರತಿಯನ್ನು ಎರಡು ಕೈಗಳಿಂದಲೇ ತೆಗೆದುಕೊಳ್ಳಬೇಕು ಎಂಬುದಕ್ಕೆ ಶಾಸ್ತ್ರಾಧಾರ


FAKE || ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ಸಂಶಯ: || FAKE

ಇದು ಶಿವನು ಪಾರ್ವತಿಗೆ ಹೇಳಿದ್ದಂತೆ. ಒಂದೇ ಕೈಯಲ್ಲಿ ಯಾರು ಆರತಿ ತೆಗೆದುಕೊಳ್ಳುತ್ತಾರೋ ಅವರು ಶಿವ ದ್ರೋಹಿ ಎಂದು!

ಶಿವ ಇಷ್ಟು ಕೆಳ ಮಟ್ಟದ ಹೇಳಿಕೆ ಕೊಡುತ್ತಾನೆ ಎಂದರೆ ಶ್ಲೋಕವೇ ಪ್ರಕ್ಷಿಪ್ತ.

ಅಲ್ಲಾ ರೀ ಎರಡು ಹಸ್ತದಲ್ಲಿ ಮಂಗಳಾರತಿ ತೆಗೆದುಕೊಂಡರೆ ಶಿವದ್ರೋಹೀ ಆಗುತ್ತಾನೆ ಎಂದು ಭಕ್ತವತ್ಸಲ, ಕರುಣಾಕರ, ಬೋಳರಾಮೇಶ್ವರ, ಆಶುತೋಶನಾದ ಶಿವನು ಹೇಳಲು ಸಾಧ್ಯವೇ? ಕಿಂಚಿತ್ ಕೈ ಬಳಕೆಯ ವ್ಯತ್ಯಾಸದಿಂದ ಶಿವದ್ರೋಹವಾಗಲು ಸಾಧ್ಯವೇ? ಇದು ನ್ಯಾಯಸಮ್ಮತವೇ, ನೈತಿಕತೆಯೇ, ಸತ್ಯವೇ? ರೀತಿ ಸುಳ್ಳು ಹೇಳುವುದರ ಹಿಂದೆ ಒಂದು ಷಡ್ಯಂತ್ರ ಅಡಗಿದೆ. ನಮಗೆಲ್ಲ ತಿಳಿದಿರುವಂತೆ ಸ್ಮಾರ್ತ ಪ್ರಧಾನ ಮಠಗಳಲ್ಲಿ ಎರಡೂ ಹಸ್ತಗಳಿಂದ ಗುರುಗಳೇ ಮಂಗಳಾರತಿಯನ್ನು ಮುಖಕ್ಕೆ ಬರುವಂತೆ ತೆಗೆದುಕೊಳ್ಳುತ್ತಾರೆ. ಕ್ರಮವನ್ನು ವಿರೋಧಿಸುವ ಸಲುವಾಗಿಯೇ ನಾಚಿಕೆಗೆಟ್ಟ ಕೆಲ ಪಾಖಂಡಿಗಳು ಮೇಲ್ಕಂಡ ಶ್ಲೋಕವನ್ನು ಬರೆದಿರುವುದು.

ಅಗ್ನಿಕಾರ್ಯ, ಅಗ್ನಿಮುಖ ಪ್ರಕ್ರಿಯೆಗಳು ತಿಳಿದಿದ್ದಲ್ಲಿ ಇಂತಹಾ ಪ್ರಶ್ನೆಗಳೇ ಬರುತ್ತಿರಲಿಲ್ಲ. ಹೆಸರಿಗೆ ಬ್ರಾಹ್ಮಣ ಎಂದು ಬೀಗಿದರೆ ಸಾಲದು. ಅಧ್ಯಯನ, ಸಾಧನೆಗಳೂ ಬೇಕು. ಒಂದು ವೇಳೆ ಅಗ್ನಿಕಾರ್ಯ ಎಂಬ ಪ್ರಕ್ರಿಯೆ ಇದೆ ಎಂದು ತಿಳಿದು, ಅದರಲ್ಲಿ ಅಗ್ನಿಯನ್ನು ವಟುವು ಉಪಾಸನೆ ಮಾಡಿ ತೇಜಸಾ ಮಾ ಸಮನಜ್ಮಿ ಎಂದು ಭಾರಿ ಸಮ್ಮುಖಗೊಳಿಸುವ ಪ್ರಕ್ರಿಯೆ ಇದೆ. ಅದನ್ನು ಪ್ರಾದೇಶಿಕ ಆಚರಣೆಯಲ್ಲಿ ತಲೆಗೆ, ಮುಖಕ್ಕೆ, ಹೃದಯಕ್ಕೆ ಎಂದು ವಿಭಾಗಿಸಿದ್ದಾರೆ.

ಆಶ್ವಲಾಯನರಾದರೋ ತಮ್ಮ ಗೃಹ್ಯ ಸೂತ್ರದಲ್ಲಿ (-೨೧-,) ರೀತಿ ಹೇಳಿದ್ದಾರೆ:-

ಸಮಿಧಂ ಆಧಾಯ ಅಗ್ನಿಂ ಉಪಸ್ಪೃಶ್ಯ ಮುಖಂ ನಿಮಾರ್ಷ್ಟಿ ತ್ರಿಸ್ ತೇಜಸಾ ಮಾ ಸಮನಜ್ಮಿ ಇತಿತೇಜಸಾ ಹ್ಯೇವ ಆತ್ಮಾನಂ ಸಮನಕ್ತಿ ಇತಿ ವಿಜ್ಞಾಯತೇ ||

ಅಗ್ನಿಕಾರ್ಯ ಪ್ರಕ್ರಿಯೆಯಲ್ಲಿ ಅಗ್ನಿಯ ಶಾಖವನ್ನು ಸ್ವೀಕರಿಸಲು ಎರಡೂ ಹಸ್ತದ ಬಳಕೆ ಇದೆ. ಹಾಗೇ ಕೆಲ ವಿಶಿಷ್ಟವಾದ ಅಗ್ನಿಮುಖ ಪ್ರಯೋಗದಲ್ಲೂ

ಪ್ರಾಙ್ಮುಖಾಗ್ನಿಂ ಸಮ್ಮುಖೋ ಭವ
  
ಎಂಬ ನಿರ್ವಚನಗಳಿವೆ. ವೇದೋಕ್ತ ಯಜ್ಞ ಪ್ರಕ್ರಿಯೆಗಳ ಸಾರಂಶವೇ ಪೂಜಾ ಪುನಸ್ಕಾರಗಳು. ಯಜ್ಞ ಯಾಗಾದಿಗಳಲ್ಲಿ ಬರುವ ಕೆಲ ವಿಚಾರಗಳೇ ಸ್ಥೂಲವಾಗಿ ಪೂಜಾದಿಗಳಲ್ಲೂ ಬರುವುದು. ಹಾಗಾಗಿ ಶ್ರೌತಸೂತ್ರಾಧಾರಿತವಾಗಿ ಮಂಗಳಾರತಿಯನ್ನು ಎರಡೂ ಕೈಗಳಿಂದಲೇ ತೆಗೆದುಕೊಳ್ಳಬೇಕು. ಇದು ಅಭಿವೃದ್ಧಿಯನ್ನು, ದೇವರ ಕಲಾ ಸಂಪರ್ಕವನ್ನು, ಅಗ್ನಿಯ ಕಿರಣವನ್ನು ದೇಹ ಮನಸ್ಸುಗಳ ಶ್ರೇಯೋಭಿವೃದ್ಧಿ ಬಯಸುವವರಿಗೆ ಮಾತ್ರ ಅನ್ವಯಿಸುತ್ತದೆ. ಶಾಸ್ತ್ರ ಜ್ಞಾನವಿಲ್ಲದೆ, ಶಾಸ್ತ್ರವನ್ನು ತಿದ್ದುವವರು, ವಿತಂಡ ವಾದ ಮಾಡುವವರು ಎಡಗೈ ಅಥವಾ ಬಲಗೈ ಅಥವಾ ಸ್ಪೂನಿನಲ್ಲಿ ಬೇಕಾದರೆ ಊಟವನ್ನೂ ಮಾಡಲಿ ಅಥವಾ ಮಂಗಳಾರತಿಯನ್ನೂ ತೆಗೆದುಕೊಳ್ಳಲಿ ಚಿಂತೆಯಿಲ್ಲ.

ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿರುವ ಆಶ್ವಲಾಯನರು ಹೇಳಿದ್ದನ್ನು ಬಿಟ್ಟು ಯಾರೋ ತಲೆ ಕೆಟ್ಟ ಧರ್ಮದ್ರೋಹಿಗಳು ಪ್ರಸಾರ ಮಾಡುವ ಅಧಾರ್ಮಿಕ ವಿಚಾರಗಳನ್ನು ಪುರಸ್ಕರಿಸಿಯೇ ಅಧಃಪತನಕ್ಕೆ ಇಳಿಯುವುದಲ್ಲದೆ ವೇದ ದೇವ ಋಷಿ ನಿಂದನೆಯನ್ನು ಮಾಡುತ್ತಾರೆ. ಕೊನೆಗೆ ನನಗೆ ಏಕೆ ಹೀಗಾಯಿತು? ನನಗೇಕೆ ಮದುವೆಯಾಗಲಿಲ್ಲ? ನನಗೇಕೆ ಮಕ್ಕಳಾಗಲಿಲ್ಲ? ಇದಕ್ಕೆಲ್ಲ ಬ್ರಾಹ್ಮಣ ಸಮಾಜವೇ ಕಾರಣವೆಂದು ಬಾಯಿಬಡಿದುಕೊಳ್ಳುತ್ತಾರೆ. ಮೊದಲು ತಾವು ಮಾಡುತ್ತಿರುವ ಧರ್ಮದ್ರೋಹ, ವೇದನಿಂದೆ, ಋಷಿದ್ರೋಹ, ಗುರುದ್ರೋಹಗಳನ್ನು ಬಿಡಲಿ, ನಂತರ ಬ್ರಾಹ್ಮಣ್ಯದ ಬಗ್ಗೆ ಮಾತನಾಡಲಿ!

ಜೈ ಹಿಂದ್.

No comments:

Post a comment