Sunday, 26 August 2018

ರಕ್ಷಾ ಬಂಧನ


(ಕ) ಬ್ರಾಹ್ಮಣ ಎಂಬುದರ ಅರ್ಥ – ಸ್ವಯಂ ಆಂತರ್ಯದಲ್ಲಿ ಸಂತುಷ್ಟರಾಗಿರುತ್ತಾರೋ ಅವರ ಮೇಲೆ ವಿಶ್ವಾಸ ಇಡುತ್ತೇವೆ. ಲೋಭಿ ವ್ಯಕ್ತಿಯು ಹಣ ಅಥವಾ ಅಧಿಕಾರದ ಲೋಭದಿಂದ ಯಾವುದೇ ಸುಳ್ಳನ್ನೂ ಹೇಳಬಹುದು. ಆದ್ದರಿಂದ ಬ್ರಾಹ್ಮಣರಲ್ಲೂ ಪುರೋಹಿತಿಕೆ ಎಂಬ ಕರ್ಮವು ನಿಂದನೀಯ ಎಂಬ ಮಾತಿದೆ. ಯಾರು ಸಂನ್ಯಾಸಿಯಾಗಿದ್ದರೋ ಅಂತಹಾ ಕವಿಗಳ ವಾಣಿಯನ್ನು ಜನರು ಹೆಚ್ಚು ಅನುಸರಿಸುತ್ತಾರೆ. ಉದಾ – ಶಂಕರ, ಕುಮುದೇಂದು ಮುನಿ, ಮಧ್ವ, ರಾಮಾನುಜ, ಕಬೀರ, ತುಲಸೀದಾಸ, ರಾಘವೇಂದ್ರ ಸ್ವಾಮಿಗಳು, ಇತ್ಯಾದಿ. ಯಾರು ತನ್ನಿಂದಲೇ ತನ್ನ ಆಂತರ್ಯದಲ್ಲೇ ಸಂತುಷ್ಟರಾಗಿದ್ದಾರೋ, ಅವರ ಮಾತೇ ಸಮಾಜದಲ್ಲಿ ಪ್ರಭಾವಶಾಲಿಯಾಗುತ್ತದೆ –

ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ |
ಆತ್ಮನ್ಯೇವಾತ್ಮನೇ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ || (ಗೀತಾ ೨/೫೫)
ಇಲ್ಲಿ ಜಹಾತಿ ಶಬ್ದದ ಪ್ರಯೋಗವು ಕಾಮನೆಗಳ ಹತ್ಯೆಗಾಗಿ ಉಂಟಾಗಿದೆ. ಇದೇ ಅರ್ಥದಲ್ಲಿ ಕುರಾನಿನಲ್ಲಿ ಅರಬೀ ಶಬ್ದ ಜಹಾತಿಯ ಪ್ರಯೋಗವೂ ಉಂಟಾಯಿತು. ಇದರ ಅರ್ಥವೇ ‘ಜಿಹಾದ್’ ಎಂದು! ಯಾರು ತನ್ನ ಆವರಣ (ಶರ್ಮ ಅಥವಾ ಚರ್ಮ)ದ ಆಂತರ್ಯಾದಲ್ಲಿ ಸಂತುಷ್ಟನಾಗಿರುತ್ತಾನೋ ಅವನು ಶರ್ಮನ್, ಅಂದರೆ ಬ್ರಾಹ್ಮಣನ ಉಪಾಧಿ. ಶರ್ಮದ ಅರ್ಥವು ಸುಖವೆಂದೂ ಆಗುತ್ತದೆ –ಸ್ಯಾದಾನಂದ ಥುರಾನಂ? ಶರ್ಮ್ಮಶಾತಸುಖಾನಿ ಚ | (ಅಮರಕೋಷ, ೧/೪/೨೪) = ಆನಂದ, ಶರ್ಮ, ಸುಖ ಇತ್ಯಾದಿ ಪರ್ಯಾಯವಾಚಿಯಾಗಿದೆ.

ತಸ್ಮಾ ಅಗ್ನಿರ್ಭಾರತಃ ಶರ್ಮ ಯಂ ಸತ್ (ಋಗ್ವೇದ ೪/೩೫/೪),
ಸಾಯಣ ಭಾಷ್ಯ – ಶರ್ಮ = ಸುಖ

ಸ ನಃ ಶರ್ಮಾಣಿ ವೀತಯೇಽಗ್ನಿರ್ಯಚ್ಛತು ಶಂತಮಾ (ಋಗ್ವೇದ ೩/೧೩/೪)
ಸಾಯಣ ಭಾಷ್ಯ – ಶರ್ಮಾಣಿ ಶರ್ಮ ಶಬ್ದೋ ಗೃಹವಾಚೀ, ಛಾಯಾ ಶರ್ಮೇತಿ ತನ್ನಾಮಸು ಪಾಠಾತ್ | ವಾಗ್ವೈ ಶರ್ಮ | ಅಗ್ನಿರ್ವೈ ಶರ್ಮಾಣ್ಯನ್ನಾದ್ಯಾನಿ ಯಚ್ಛತಿ (ಐತರೇಯ ಬ್ರಾಹ್ಮಣ ೨/೪೦, ೪೧) = ಈ ಅಗ್ನಿಯು ನಮ್ಮ ಶಾಂತಿಗಾಗಿ ಶರ್ಮ (ಆಶ್ರಯ, ಆವರಣ) ನೀಡಲಿ. ವಾಕ್ (ಶಬ್ದ, ಜ್ಞಾನ)ವೂ ನಮಗೆ ರಕ್ಷೆಯಾಗಿರುತ್ತದೆ; ಆದ್ದರಿಂದ ಅದೂ ಶರ್ಮ.

೪ ವರ್ಣಗಳಿಗೆ ಶರ್ಮ, ವರ್ಮ (ಕವಚದಿಂದ ರಕ್ಷಾ), ಗುಪ್ತ (ಸಂಪತ್ತಿನಿಂದ ರಕ್ಷಾ), ದಾಸ (ಕರ್ಮದಿಂದ ರಕ್ಷಾ) ಎಂದು ಇದೇ ಅರ್ಥದಲ್ಲಿ ಹೇಳುತ್ತಾರೆ –

ತತಶ್ಚ ನಾಮ ಕುರ್ವೀತ ಪಿತೈವ ದಶಮೇಽಹನಿ | ದೇವಪೂರ್ವಂ ನರಾಖ್ಯಂ  ಹಿ ಶರ್ಮವರ್ಮಾದಿ ಸಂಯುತಮ್ | ಶರ್ಮೇತಿ ಬ್ರಾಹ್ಮಣಸ್ಯೋಕ್ತಂ ವರ್ಮೇತಿ ಕ್ಷತ್ರಸಂಶ್ರಯಮ್ | ಗುಪ್ತ ದಾಸಾತ್ಮಕಂ ನಾಮ ಪ್ರಶಸ್ತಂ ವೈಶ್ಯ ಶೂದ್ರಯೋಃ (ವಿಷ್ಣು ಪುರಾಣ ೨/೧೦/೮೯)

(ಖ) ಅದೃಶ್ಯ ರಕ್ಷಾ – ಕೈಯಲ್ಲಿ ಕಟ್ಟಲ್ಪಡುವ ರಕ್ಷಾ-ಸೂತ್ರವು ನಮ್ಮ ರಕ್ಷಣೆಯನ್ನು ೪ ಸೂತ್ರದಲ್ಲಿ ಮಾಡುತ್ತದೆ –
(೧) ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಯವರೆಗಿನ ಜ್ಞಾನ ಪರಂಪರೆ
(೨) ಸಮಾಜ ಹಾಗೂ ದೇಶವನ್ನು ಒಗ್ಗೂಡಿಸುವ ಜ್ಞಾನ
(೩) ವಿವಿಧ ವ್ಯವಸಾಯಗಳ ಸಮನ್ವಯ ಹಾಗೂ ರಕ್ಷಾ
(೪) ಪ್ರಕೃತಿ ಹಾಗೂ ಮನುಷ್ಯನ ಪರಸ್ಪರ ನಿರ್ಭರತೆ = ಆಧಿದೈವಿಕ ವಿಪತ್ತಿಗಳಿಂದ ರಕ್ಷಾ.
ಯಥೋಕ್ತಾನ್ಯಪಿ ಕರ್ಮಾಣಿ ಪರಿಹಾಯ ದ್ವಿಜೋತ್ತಮಃ |
ಆತ್ಮಜ್ಞಾನೇ ಸಮೇ ಚ ಸ್ಯಾತ್ ವೇದಾಭ್ಯಾಸೇ ಚ ಯತ್ಮವಾನ್ ||೯೨||
ಏತದ್ಧಿ ಜನ್ಮಸಾಫಲ್ಯಂ ಬ್ರಾಹ್ಮಣಸ್ಯ ವಿಶೇಷತಃ |
ಪ್ರಾಪ್ಯೈತತ್ ಕೃತಕೃತ್ಯೋ ಹಿ ದ್ವಿಜೋ ಭವತಿ ನಾನ್ಯಥಾ ||೯೩||
ಪಿತೃ-ದೇವ-ಮನುಷ್ಯಾಣಾಂ ವೇದಶ್ಚಕ್ಷುಃ ಸನಾತನಮ್ |
ಅಶಕ್ಯಂ ಚಾಪ್ರಮೇಯಂ ಚ ವೇದಶಾಸ್ತ್ರಮಿತಿ ಸ್ಥಿತಿಃ || ೯೪ || (ಮನುಸ್ಮೃತಿ, ಅಧ್ಯಾಯ ೧೨)

= ಶಾಸ್ತ್ರಗಳಲ್ಲಿ ವರ್ಣಿಸಿದ ಕರ್ತವ್ಯಗಳನ್ನು ಬಿಟ್ಟು ಬ್ರಾಹ್ಮಣನು ಇಂದ್ರಿಯ-ಜಯ, ಆತ್ಮಜ್ಞಾನ ಹಾಗೂ ವೇದಾಧ್ಯಯನ ಮಾಡಬೇಕು. ಆಗಲೇ ಆತನ ಬ್ರಾಹ್ಮಣ ಜನ್ಮವು ಸಾರ್ಥಕ. ಪಿತರ, ದೇವ, ಮನುಷ್ಯ ಇವರೆಲ್ಲರ ನೇತ್ರವು ವೇದವೇ ಆಗಿದೆ. ಅದು ಸನಾತನವೂ, ಅಪೌರುಷೇಯವೂ ಆಗಿದೆ.

(ಗ) ಏಕತಾ ಸೂತ್ರ – ವೇದ ಮಂತ್ರ –

ಯದಾಬಧ್ನನ್ ದಾಕ್ಷಾಯಣಾ ಹಿರಣ್ಯಂ ಶತನೀಕಸ್ಯ ಸುಮನಸ್ಯಮಾನಾಃ |
ತತ್ತೇ ಬಧ್ನಾಮ್ಯಾಯುಷೇ ವರ್ಚಸೇ ಬಲಾಯ ದೀರ್ಘಾಯುತ್ತ್ವಾಯ ಶತಶಾರದಾಯ ||೧||

ನೈನಂ ರಕ್ಷಾಂಸಿ ನ ವಿಶಾಚಾಃ ಸಹನ್ತೇ ದೇವಾನಾಮೋಜಃ ಪ್ರಥಮಂ ಹ್ಯೇತತ್ |
ಯೋ ಬಿಭರ್ತ್ತಿ ದಾಕ್ಷಾಯಣಂ ಹಿರಣ್ಯಂ ಚ ಜೀವಿಷು ಕೃಣುತೇ ದೀರ್ಘಮಾಯುಃ ||೨||

ಅಪಾಂ ತೇಜೋ ಜ್ಯೋತಿರೋಜೋ ಬಲಂ ಚ ವನಸ್ಪತೀನಾಮುತ ವೀರ್ಯ್ಯಾಣಿ |
ಇಂದ್ರ ಇವೇನ್ದ್ರಿಯಾಣ್ಯಧಿ ಧಾರಯಾಮೋ ಅನ್ಮಿನ್ ತದ್ ದಕ್ಷಮಾಣೋ ಬಿಭರದ್ಧಿರಣ್ಯಮ್ ||೩||

ಸಮಾನಾಂ ಮಾಸಾಮೃತುಭಿಷ್ಟ್ವಾ ವಯಂ ಸಮ್ವತ್ಸರರೂಪಂ ಪಯಸಾ ಪಿಪರ್ಮಿ |
ಇನ್ದ್ರಾಗ್ನೀ ವಿಶ್ವೇ ದೇವಾಸ್ತೇಽನುಮನ್ಯನ್ತಾಮಹೃಣೀಯಮಾನಾಃ ||೪|| (ಅಥರ್ವವೇದ ೧/೩೫)

ಕೈಯಲ್ಲಿ ಸೂತ್ರ ಬಂಧನ ಮಾಡುವಾಗ ಇಲ್ಲಿನ ಮೊದಲನೇ ಮಂತ್ರವನ್ನು ಪಠಿಸಲಾಗುತ್ತದೆ.

(೧) ಆಕಾಶದಲ್ಲಿ ಸೂರ್ಯನು ತನ್ನಿಂದ ೧೦೦ ವ್ಯಾಸ ದೂರದಲ್ಲಿ ನಮ್ಮನ್ನು ಇರಿಸಿದ್ದಾನೆ (ದಾಕ್ಷಾಯನ), ಇದರ ಹಿರಣ್ಯವು (ತೇಜ ಸ್ರೋತವು) ನಮಗೆ ವರ್ಚಸ್ಸು (ಮಾನಸಿಕ ಶಕ್ತಿ), ಬಲ, ೧೦೦ ವರ್ಷದ ಆಯಸ್ಸನ್ನು ನೀಡುತ್ತದೆ.

(೨) ಯಾರಲ್ಲಿ ದೇವತೆಗಳ ಓಜವು ಈ ದಾಕ್ಷಾಯಣ ಹಿರಣ್ಯದಿಂದ ರಕ್ಷಿತವಾಗಿದೆಯೋ ಅಂತಹಾ ವ್ಯಕ್ತಿಯ ತೇಜವನ್ನು ರಾಕ್ಷಸ, ಭೂತ, ಪಿಶಾಚಗಳು ಸಹಿಸಲಾಗುವುದಿಲ್ಲ.

(೩) ಬಲಗೈಯ ಈ ಸೂತ್ರದಿಂದ ನಾವು ಜಲ, ತೇಜ, ಜ್ಯೋತಿ, ಓಜ, ಬಲಗಳನ್ನು ವನಸ್ಪತಿಯಿಂದ ಪಡೆಯುತ್ತೇವೆ.

(೪) ನಾವು ಮಾಸ (ಚಂದ್ರನಿಂದ), ಋತು, ಸಮಾದಿಂದ (ವರ್ಷ) ಸಂವತ್ಸರ ರೂಪೀ ಪಯದ ಪಾನವನ್ನು ಮಾಡುತ್ತೇವೆ. ನಮ್ಮ ಎಲ್ಲಾ ಯಜ್ಞದ ಉತ್ಪಾದನೆಗಳು ಇದೇ ಚಕ್ರದಲ್ಲಿವೆ. ಅದರಿಂದ ಆಕಾಶದ ಇಂದ್ರ ಹಾಗೂ ಪೃಥ್ವಿಯ ಅಗ್ನಿಯು ತೇಜಸ್ಸನ್ನು ಪಡೆಯುತ್ತವೆ.

ಪೌರಾಣಿಕ ಮಂತ್ರ – ಯೇನ ಬದ್ಧೋ ಬಲಿ ರಾಜಾ ದಾನವೇಂದ್ರೋ ಮಹಾಬಲಃ | ತಾನ ತ್ವಾಂ ಪ್ರತಿಬಧ್ನಾಮಿ ರಕ್ಷೇ! ಮಾ ಚಲ ಮಾ ಚಲ ||
= ಹೇಗೆ ಮಹಾಬಲಿಯು ಬಂಧನಕ್ಕೆ ಒಳಪಟ್ಟನೋ ಹಾಗೇ ನಾನು ನಿನ್ನನ್ನು ಅದೇ ಪ್ರೇಮದ ಬಂಧನದಿಂದ ಬಂಧಿಸುತ್ತೇನೆ. ಈ ಸೂತ್ರವು ನಮ್ಮ ರಕ್ಷೆಯಿಂದ ಹೊರಗಿರದಿರಲಿ.

(ಘ) ಉಪಾಕರ್ಮ – ಮನುಸ್ಮೃತಿಯ ಅನುಸಾರ ಶ್ರಾವಣ ಅಥವಾ ಭಾದ್ರಪದದಿಂದ ಆರಂಭಿಸಿ ಐದೂವರೆ ತಿಂಗಳು ಅಂದರೆ ಪೌಷ ಮಾಸದವರೆಗೆ ಉಪಾಕರ್ಮ = ವೇದ ಪಾಠ (ಅಗ್ನಿವಿಧ್ಯಾ ಪಾಠ)  ಉಚ್ಛ್ರಾಯ ಸ್ಥಿತಿಯಲ್ಲಿ ಮಾಡುತ್ತಾರೆ. ಶುಕ್ಲ ಪಕ್ಷದಲ್ಲಿ ವೇದ, ಕೃಷ್ಣ ಪಕ್ಷದಲ್ಲಿ ಸೈದ್ಧಾಂತಿಕ ಹಾಗೂ ವ್ಯಾವಹಾರಿಕ ಜ್ಞಾನ ಭಾಗವಾದ ವೇದಾಂಗ ಪಾಠ (ಮೃತ್ಯುವಿಧ್ಯಾ ಪಾಠ) ನಡೆಯುತ್ತದೆ. ಉಳಿಕೆ ತಿಂಗಳಲ್ಲಿ ಇವುಗಳ ಬಳಕೆ ಅಥವಾ ಪ್ರಯೋಗವಾಗುತ್ತದೆ.

ಶ್ರಾವಣ್ಯಾಂ ಪ್ರೋಷ್ಠಪದ್ಯಾಂ ವಾಪ್ಯುಪಾಕೃತ್ಯ ಯಥಾವಿಧಿ |
ಯುಕ್ತಶ್ಛನ್ದಾಸ್ಯಧೀಯೀತ ಮಾಸಾನ್ ವಿಪ್ರೋಽರ್ಧಪಂಚಮಾನ್ ||೯೫||
ಪುಷ್ಯೇ ತು ಛನ್ದಸಾಂ ಕುರ್ಯ್ಯಾದ್ ಬಹಿರುತ್ಸರ್ಜನಂ ದ್ವಿಜಃ |
ಮಾಘಶುಕ್ಲಸ್ಯ ವಾ ಪ್ರಾಪ್ತೇ ಪೂರ್ವಾಹ್ಣೇ ಪ್ರಥಮೇಽಹನಿ ||೯೬||
ಯಥಾಶ್ರಾಸ್ತ್ರಂ ತು ಕೃತ್ವೈವಮುತ್ಸರ್ಗಂ ಛನ್ದಸಾ ಬಹಿಃ |
ವಿರಮೇತ್ ಪಕ್ಷಿಣೀಂ ರಾತ್ರಿಂ ತದೇವೈಕಮಹರ್ನಿಶಮ್ ||೯೭||
ಅತ ಊರ್ಧ್ವಂ ತು ಛನ್ದಾಂಸಿ ಶುಕ್ಲೇಷು ನಿಯತಃ ಪಠೇತ್ |
ವೇದಾಂಗಾನ್ ಚ ಸರ್ವಾಣಿ ಕೃಷ್ಣ ಪಕ್ಷೇಷು ಸಮ್ಪಠೇತ್ ||೯೮||
(ಮನುಸ್ಮೃತಿ, ಅಧ್ಯಾಯ ೪)

ಉಪಾಕರ್ಮದ ದಿನ ಋಷಿ ತರ್ಪಣ ನಡೆಸಿ ಅಪರಾಹ್ನ ಕಾರ್ಪಾಸ ಅಥವಾ ರೇಶ್ಮೆಯ ಶುದ್ಧ ರಕ್ಷಾ ಬಂಧನ ನಡೆಯುತ್ತದೆ –

ಉಪಾಕರ್ಮ್ಮ ದಿನೇ ಪ್ರೋಕ್ತಮೃಷೀಣಾಂಚೈವ ತರ್ಪಣಮ್ |
ತತೋಽಪರಾಹ್ನ ಸಮಯೇ ‘ರಕ್ಷಾಪೋಟಲಿಕಾಂ’ ಶುಭಾಮ್ ||೧||
ಕಾರಯೇದಕ್ಷತೈಃ ಸಸ್ತೈಃ ಸಿದ್ಧಾರ್ಥೈಃ ಹೇಮಭೂಷಿತಮ್ |
ವಸ್ತ್ರೈರ್ವಿಚಿತ್ರೈಃ ಕಾರ್ಪಾಸೈಃ ಕ್ಷೋಮೈರ್ವ್ವಾ ಮಲವರ್ಜ್ಜಿತೈಃ ||೨||
ವಿಚಿತ್ರಂ ಗ್ರಥಿತಂ ಸೂತ್ರಂ ಸ್ಥಾಪಯೇತ್ ಭಾಜನೋಪರಿ | (ಭವಿಷ್ಯೋತ್ತರ ಪುರಾಣ)

(ಙ) ಸ್ವಸ್ತಿಕ-ಶಕುನ (ಶುಭ ಚಿಹ್ನೆ, ಪಕ್ಷೀ) ಇದಕ್ಕೆ ನೆಲವನ್ನು ಗೋಮಯದಿಂದ ಸಾರಿಸಿ ಅದರ ಮೇಲೆ ಸ್ವಸ್ತಿಕ ಚಿಹ್ನೆ ರಚಿಸುತ್ತಾರೆ. ಅದಕ್ಕೆ ಮಂತ್ರ –

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು || (ಯಜು ೨೫/೧೯)

ಇದು ಆಕಾಶದ ವೃತ್ತ (ಪೃಥ್ವೀ ಕಕ್ಷೆ)ಯ ೪ ದಿಕ್ಕು – ಜ್ಯೇಷ್ಠಾ ನಕ್ಷತ್ರದ ಸ್ವಾಮೀ ಇಂದ್ರ, ರೇವತಿಗೆ ಪೂಷಾ, ಶ್ರವಣಕ್ಕೆ ಗೋವಿಂದ ಅಂದರೆ ಅರಿಷ್ಟಕ್ಕೆ ನೇಮಿ ಅಥವಾ ಸೀಮಾ (ದೂರೀಕರಿಸುವ) ಮತ್ತು ಪುಷ್ಯಕ್ಕೆ ಬೃಹಸ್ಪತಿ. ಈ ಜೀವನದ ೪ ಉದ್ದೇಶ (ಪುರುಷಾರ್ಥ = ಧರ್ಮ, ಅರ್ಥ, ಕಾಮ, ಮೋಕ್ಷ) ಪೂರೈಸುತ್ತದೆ – ಸಮಾಜದ ಕ್ರಮ (ಶ್ರವಾ) ಇದರಲ್ಲಿ ಶ್ರೇಷ್ಠ ಅರ್ಥಾತ್ ವೃದ್ಧಶ್ರವಾ ಇಂದ್ರನ ರಕ್ಷೆಯಲ್ಲಿ ಧರ್ಮ ಪಾಲನೆಯಾಗುತ್ತದೆ. ವಿಶ್ವವನ್ನು ಪಡೆಯುವುದು ಅಥವ ತಿಳಿಯುವುದರಿಂದ ನಮ್ಮ ಪುಷ್ಟಿಯು ಪೂಷಾದಿಂದ ಆಗುತ್ತದೆ. ನಮ್ಮ ಇಚ್ಚೆಯು (ಕಾಮ) ಗೋವಿಂದನಿಂದ ಪೂರೈಸಲ್ಪಡುತ್ತದೆ ಹಾಗೂ ಮೋಕ್ಷವು ಜ್ಞಾನದಿಂದಾಗುತ್ತದೆ, ಅದರ ಸ್ರೋತವು ಬೃಹಸ್ಪತಿ.

(ಚ) ಶುಭ ಪಕ್ಷೀ-

ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ |
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋಽಭಿಚಾಕಶೀತಿ | (ಋಕ್ ೧/೧೬೪/೨೦)
= ಸಮಾನ ವೃಕ್ಷದ ಮೇಲೆ ೨ ಪಕ್ಷಿಗಳು ಒಟ್ಟಿಗೇ ಇರುತ್ತವೆ. ಅವೆರಡರಲ್ಲಿ ಒಂದು ಫಲಗಳ ಸ್ವಾದವನ್ನು ತಿನ್ನುತ್ತದೆ. ಇನ್ನೊಂದು ತಿನ್ನುವುದು ಕೇವಲ ಮೇಲುಸ್ತುವಾರಿ ಮಾಡುತ್ತದೆ. ಶರೀರದ ಒಳಗೆ ಇವುಗಳನ್ನು ಆತ್ಮ (ದರ್ಶಕ) ಮತ್ತು ಜೀವ (ಕರ್ತ) ಎನ್ನುತ್ತಾರೆ. ಇದನ್ನೇ ತೆಗೆದುಕೊಂಡು ಬೈಬಲ್ಲಿನಲ್ಲಿ ಆದಮ್ ಮತ್ತು ಈವ್ ಎಂದು ಬಳಸಿಕೊಂಡರು. ಎಲ್ಲಾ ಜೀವಗಳಲ್ಲಿ ಮಸ್ತಿಷ್ಕದ ಈ ೨ ಭಾಗಗಳು ನಿಯಂತ್ರಣ ಮಾಡುತ್ತವೆ – ಒಂದು ಕಾರ್ಯ ಮಾಡಿದರೆ ಮತ್ತೊಂದು ಸುಧಾರಣೆ ಮಾಡುತ್ತದೆ.

ಕನಿಕ್ರದಜ್ಜನುಷಂ ಪ್ರಬ್ರುವಾಣ ಇಯತಿ ವಾಚಮತಿರೇವ ನಾವಮ್ |
ಸುಮಂಗಲಶ್ಚ ಶಕುನೇ! ಭವಾಸಿ ಮಾ ತ್ವಾ ಕಾಚಿದಭಿಭಾ ವಿಶ್ವ್ಯಾ ವಿದತ || (ಋಕ್ ೨/೪೨/೧)
= ಹೇ ಕಪಿಂಜಲ ಶಕುನ! ತನ್ನ ಸ್ವರದಿಂದ ಭವಿಷ್ಯದ ಸೂಚನೆಯನ್ನು ನೀಡಿ ಜೀವನಕ್ಕೊಂದು ದಿಕ್ಕನ್ನು ನೀಡುತ್ತಿ. ನೀನು ಶಿಕಾರಿಗಳ ಭಯದಿಂದ ಮುಕ್ತವಾಗಿ ವಿಹರಿಸು.

ಅವ ಕ್ರಂದ ದಕ್ಷಿಣತೋ ಗೃಹಾಣಾಂ ಸುಮಂಗಲೋ ಭದ್ರವಾದೀ ಶಕುಂತೇ |
ಮಾ ನಃ ಸ್ತೇನ ಈಶತ ಮಾಘಹಂಸೋ ಬೃಹದ್ ವದೇಮ ವಿದಥೇ ಸುವೀರಾಃ || (ಋಕ್ ೨/೪೨/೩)
= ಹೇ ಶಕುನ! ಮನೆಯ ದಕ್ಷಿಣ ದಿಕ್ಕಿನಿಂದ ಶುಭಸ್ವರ ನೀಡು, ಇದರಿಂದ ನಾವು ಕಳ್ಳ ಕಾಕ ಆತಂಕವಾದಿಗಳಿಂದ ಸುರಕ್ಷಿತರಾಗಿದ್ದು ವೀರತ್ವದಿಂದ ದೊಡ್ಡದಾದ ಅಂದರೆ ಮಹತ್ತರವಾದ ಮಾತನ್ನು ಆಡುವಂತಾಗಲಿ.

ಪ್ರದಕ್ಷಿಣಿದಭಿ ಗೃಣಾಂತಿ ಕಾರವೋ ವಯೋ ವದಂತ ಋತುಥಾ ಶಕುಂತಯಃ |
ಉಭೇ ವಾಚೋ ವದತಿ ಸಾಮಗಾ ಇವ ಗಾಯತ್ರ್ಯಂ ಚ ತ್ರೈಷ್ಟುಭಂ ಚಾನು ರಾಜತಿ || (ಋಕ್ ೨/೪೩/೧)
= ಹೇ ಶಕುನ! ದಕ್ಷಿಣ ದಿಕ್ಕಿನಿಂದ (ಸಾಮ ವೇದದ) ಉದ್ಗಾತನಂತೆ ಗಾನ ಮಾಡು. ನಿನ್ನ ಸ್ವರವು ಋತು (ಕ್ಷೇತ್ರ) ಎರಡು ಪ್ರಕಾರದಿಂದ ಶುಭವಾಗಲಿ – ಗಾಯತ್ರ ಸಾಮ (೨೪ ಅಕ್ಷರದ ಮಂತ್ರ ಅಥವಾ ಮನುಷ್ಯನಿಂದ ೨೨೪ ಪಟ್ಟು ದೊಡ್ಡ ಪೃಥ್ವೀ) ಇದರ ಮೇಲೆ ಹಾಗೂ ತ್ರಿಷ್ಟುಪ್ (೪೪ ಅಕ್ಷರ, ಶನಿಯವರೆಗಿನ ಕ್ಷೇತ್ರ) ಅಂತರಿಕ್ಷವನ್ನೂ ಶುಭವಾಗುವಂತೆ ಮಾಡು.

ಉದ್ಗಾತೇವ ಶಕುನೇ ಸಾಮ ಗಾಯಸಿ ಬ್ರಹ್ಮಪುತ್ರ ಇವ ಸವನೇಷು ಶಂಸಸಿ |
ವೃಷೇವ ವಾಜೀ ಶಿಶುಮತೀರಪೀತ್ಯಾ ಸರ್ವತೋ ನಃ ಶಕುನೇ ಭದ್ರಮಾ ವದ ವಿಶ್ವತೋ ನಃ ಶಕುನೇ ಪುಣ್ಯಮಾ ವದ || (ಋಕ್ ೨/೪೩/೨)
= ಹೇ ಶಕುನ! ಉದ್ಗಾತನಂತೆ ಸಾಮದಿಂದ ನಮಗೆ ಬ್ರಹ್ಮ-ಪುತ್ರರನ್ನಾಗಿ (ಋತ್ವಿಕ್, ಜ್ಞಾನಿ) ಮಾಡು. ಕುದುರೆ ಮರಿಯು ತನ್ನ ತಾಯಿಯ ಬಳಿ ಬಂದಾಗ ಉಂಟಾಗುವ ತೆರದಿ ಪ್ರಸನ್ನತೆಯು ಉಂಟಾಗಲಿ. ನಮಗೆ ಭದ್ರ ಹಾಗೂ ಪುಣ್ಯದತ್ತ ಪ್ರೇರಣೆ ನೀಡಲಿ.

ಆವಾದಂಸ್ತ್ವಂ ಶಕುನೇ ಭದ್ರಮಾ ವದ ತೂಷ್ಣೀಮಾಸೀನಃ ಸುಮತಿಂ ಚಿಕಿದ್ಧಿ ನಃ |
ಯದುತ್ಪತನ್ ವದಸಿ ಕರ್ಕರಿರ್ಯಥಾ ಬೃಹದ್ ವದೇಮ ವಿದಥೇ ಸುವೀರಾಃ || (ಋಕ್ ೨/೪೩/೩)
= ಹೇ ಶಕುನ! ನಮಗಾಗಿ ಒಳ್ಳೆಯ ಶಬ್ದ ಹೇಳು, ಕುಳಿತುಕೊಂಡು ಸುಮತಿಯನ್ನು ಕೊಡು (ಇದರಿಂದ ಮನೆಯಲ್ಲಿ ಸ್ಥಿರತೆ ಉಂಟಾಗುತ್ತದೆ). ವಿಹರಿಸುವ ಸಮಯದಲ್ಲಿ ಕರ್ಕರಿಯಂತೆ ಮಹತ್ತರವಾದ ಮಾತನ್ನು ಹೇಳು, ಇದರಿಂದ ಜೀವನದಲ್ಲಿ ದಕ್ಷತೆಯು ಉಂಟಾಗಲಿ.

-       ಹಿಂದಿ ಮೂಲ: ಅರುಣ್ ಕುಮಾರ್ ಉಪಾಧ್ಯಾಯ, ಒಡಿಶಾ

-       ಕನ್ನಡಕ್ಕೆ ಅನುವಾದ: ಹೇಮಂತ್ ಕುಮಾರ್ ಜಿ.

No comments:

Post a Comment