Monday, 27 August 2018

ಸಿರಿಭೂವಲಯದಲ್ಲಿ ೧೧೧೧೧ ಎಂಬ ಸಂಖ್ಯೆಯ ಆಧ್ಯಾತ್ಮಗಣಿತದ ಮಹತ್ವ

ಹನ್ನೊಂದು ಸಾವಿರದೊಂದು ನೂರ್ ಹನ್ನೊಂದು
ಎನುವ ಗಣಿತ ಮುಂದೆ ಮುಂದೆ
ಚೆನ್ನಾಗಿ ಕಲಿಸುವೆ ಮುಂದೆವಿರಲೀಗ
ಅಂತ್ಯದಾ ಇನ್ನೊಂದನು ಕಲಿಯಮ್ಮ ಕಲಿಯಕ್ಕರ
|| ಸಿರಿಭೂವಲಯ ||
ಮೂಲ ಸಾಂಖ್ಯ ಸಿದ್ಧಾಂತವನ್ನು ಸೌಂದರಿ ಗಣಿತವೆಂದು ವೃಷಭನಾಥರು ತಮ್ಮ ಮಗಳಾದ ಸುಂದರಿಗೆ ಕಲಿಸುವಾಗಲಿನ ಪಾಠದ ವಾಕ್ಯವಿದು

೧೧೧೧೧ ಎಂಬ ಸಂಖ್ಯೆಯ ಗಣಿತ ಮಹತ್ವವನ್ನು ಮುಂದೆ (ಮುಂದಿನ ಖಂಡದಲ್ಲಿ) ಕಲಿಸುತ್ತೇನೆ ಎನ್ನುತ್ತಿದ್ದಾರೆ‌‌. ಈಗ ಅದಕ್ಕಿಂತ ಮುಖ್ಯವಾದ ಕಲಿಯಕ್ಕರ = ಅಜ್ಞಾನವನ್ನು ಗೆಲುವ ಅಕ್ಷರ ವಿಧ್ಯೆಯನ್ನು ಕಲಿಯಮ್ಮ ಎಂದು ೭೫೦ ಕೋಟಿ ವರ್ಷಕ್ಕೂ ಹಿಂದಿನ ವೃಷಭನಾಥ ಸೌಂದರಿ ಸಂವಾದವನ್ನು  ಪ್ರಾಸಬದ್ಧವಾಗಿ ಕಲಿಯುಗದ ಜನರಿಗೆ ಅನ್ವಯವಾಗುವಂತೆ ಸಿರಿಗನ್ನಡದಲ್ಲಿ ಕುಮುದೇಂದು ಮುನಿಗಳು  ಬೆಸೆದಿದ್ದಾರೆ.

ಈಗಿನ ಗಣಿತದ ಪ್ರಕಾರ ೧೧೧೧೧ ಎಂಬುದು ಬೆಸ ಸಂಯುಕ್ತ ಸಂಖ್ಯೆ. ಇದಕ್ಕೆ ನಾಲ್ಕು ಒಂದುಗಳು ಒಟ್ಟು ನಾಲ್ಕೊಂದು = +++: = ೪೧ ಅಂದರೆ ಧರ್ಮಾರ್ಥಕಾಮಮೋಕ್ಷಗಳನ್ನು ಅದ್ವೈತದಲ್ಲಿ ಒಂದಾಗಿಸಲು ಬೇಕಾದ ಮಾನಮಾಯಲೋಭಕ್ರೋಧ ನಾಲ್ಕನ್ನೂ ಒಂದಾಗಿಸಿ ಕಳೆಯಬೇಕು, ಅದೇ ೪೧ರ ಮಹತ್ವ. ನಂತರ ೪೧ ಎಂಬ ಎರಡಂಕಿಯನ್ನು ಟವಣೆಯಲ್ಲಿ ಒಂದನೇ ಅರೆಯಾಗಿಸಿಕೊಳ್ಳಿ. ಅದರ ಮೂಲ ಸಂಖ್ಯೆ ೧೧೧೧೧ ಇದರ ಅಂಕಿ ಗಣನೆ , ಇದಕ್ಕೆ ಮೊದಲನೇ ಅರೆಯ ಸ್ಥಾನ ಬೆಲೆಯ ಅಂಕೆ (ಬಿಡಿ, ಹತ್ತು) ೨ನ್ನು ಸೇರಿಸಲು ಅವಿಭಾಜ್ಯವಾದ ಧಾತುಗಳ ಸಂಘಟನಾ ಸೂತ್ರ ದೊರಕುವುದು. ಎಂಬ ಸಪ್ತರ್ಷಿಗಳು ಟವಣೆಯ ಎರಡನೇ ಅರೆ. ಇವೆಲ್ಲಕ್ಕೂ ಆದ್ಯಂತದಲ್ಲಾ ವ್ಯಾಪಿಸಿರುವುದು ಏಕಮೇವ ಅದ್ವಿತೀಯವಾದ ಒಂದೇ "ಓಂ"ದು, ಅದುವೇ ಟವಣೇಯ ಮೂರನೇ ಅರೆ. ಟವಣೆಯ ಮೂರರೆಗಳನು ಅಂಕಾನಾಂ ವಾಮತೋ ಗತಿಃ ಎಂಬ ಸೂತ್ರದಂತೆ ಓದಿದರೆ ೨೭೧ ಎಂಬ ಎರಡನೇ  ಅವಿಭಾಜ್ಯ ಬೆಸ ಸಂಖ್ಯೆ. ಎರಡು ಅವಿಭಾಜ್ಯ ಬೆಸ ಸಂಖ್ಯೆಗಳನ್ನು ಗುಣಿಸಲು ೪೧ x ೨೭೧ = ೧೧೧೧೧ ಬರುತ್ತದೆ. ಅವೇ ಭೌತಿಕ ಸೃಷ್ಟಿಯ ಏಕಮುಖವಾಗುವ ದ್ರವ್ಯಗಳು. ಮುಂದೆ ಇಂದ್ರಿಯಗಳು, ತನ್ಮಾತ್ರೆಗಳು ದೇಹಾತ್ಮಗಳ ವ್ಯವಹಾರ ಬೆಸೆಯುತ್ತವೆ

xxxx = ಅದ್ವೈತ.

೧೧x೧೧x = ೧೨೧ = ಆದಿಯ ಅದ್ವೈತ ದ್ವಿತೀಯವು ದ್ವೈತ ತೃತೀಯದೊಳ್ ಏಕವು ಅನೇಕಾಂತವಾಗುತ್ತಾ ++= ಪುರುಷಾರ್ಥದಿಂ ಲೋಕ ವ್ಯಾಪಾರ ನಡೆಸುತ್ತದೆ.

೧೧x೧೧೧ = ೧೨೨೧ = ಮಾಲೆಯಾಕಾರ +=. ಅಂದರೆ ೩೩ ಎಂಬ ಭೌತಿಕ ಭಾಗ. ಉಳಿದ ೬೬ ದೈವೀಕ. ಒಟ್ಟು ೩೩+೬೬=೯೯ ಸಕಲ ಲೋಕವಾಳುವ ಸಂಖ್ಯೆ. ಅದನ್ನು ಆಡಿಸುವುದು ಓಂದು. ಓಂದೆಂಬ ಚೇತನವು ಕಾಣದಂತಿರುತ್ತದೆ. ಒಟ್ಟು ೯೯+=೧೦೦  ಶಂ ತಾರಯತೀತಿ "ಶತಂ".

ವರ್ಗ: ೧೧೧೧೧ x ೧೧೧೧೧ = ೧೨೩೪೫೪೩೨೧ ಪುನಃ ಒಂದು ವಿಶೇಷವಾದ ಮಾಲಾ ಸಂಖ್ಯೆ.

ಇದು ಗಣಿತಾರ್ಥಗಳಲ್ಲಿ ಒಂದು ಬಗೆ.

ಪದ್ಯದ ಅಂತರಾರ್ಥವನ್ನು ಗ್ರಹಿಸುವ ಪ್ರಯತ್ನ ಮಾಡೋಣ. ಹನ್ನೊಂದು ಸಾವಿರದ ಒಂದು ನೂರ್ ಹನ್ನೊಂದು. ಅಂದರೆ ದಶದಿಕ್ಕು ಬಿಟ್ಟು ಆತ್ಮದಾ ದಾರಿ ೧೧ ಎಂಬುದನ್ನು ಸಾಧಿಸಿಕೊಂಡರೆ ಸಾವು ಇರದಂತಹಾ (ಸಾವಿರದ) ಓಂದು (ಓಂಗೆ ಸಂಬಂಧಪಟ್ಟದ್ದು) ತಿಳಿಯುತ್ತದೆ. ಅದಕ್ಕೆ ಸುಲಭ ಮಾರ್ಗವೇ ಹಿಂದುತ್ವದ ಒಂದು ನೂರ್ ಹನ್ನೊಂದು ೧೧೧ = ಋಣಗಳಿಂದ ಮುಕ್ತಿ‌. ಅದನ್ನೇ ಹಿಂದುತ್ವದ ಒಂದು ಕವಲಾದ ಜೈನ ಸಿದ್ಧಾಂತದಲ್ಲಿ ಋಗ್ವೈದ ಮೂಲದ ತ್ರಿರತ್ನ = ರತ್ನ ತ್ರಯ = ಸಂಮ್ಯಕ್ ದರ್ಶನ, ಸಂಮ್ಯಕ್ ಜ್ಞಾನ, ಸಂಮ್ಯಕ್ ಚಾರಿತ್ರ,  

ಆಗ ೪ನೇಯದಾದ ಸಾಮಾಜಿಕ ಋಣವನ್ನು ಬಿಡಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಅದು ಎಲ್ಲಾ ಭೌತಿಕ ೩೩ ಹಾಗೂ ದೈವೀಕ ೬೬ ಹಿಡಿತ ಸಾಧಿಸಿ ಅದ್ವೈತ ಪಡೆದರೆ ನೂರ್ = ಶತಂ ಆಗುತ್ತದೆ. ಆಗ ಒಂದು ರುದ್ರ ಅಥವಾ ಹನ್ನೊಂದು ರುದ್ರರನ್ನೂ ಮೀರಿ ಕಾಲನ ಜಯಿಸಲು ಯತ್ನಿಸಬಹುದು.

ಇದು ಗಣಿತದ ಮತ್ತು ಆಧ್ಯಾತ್ಮ ಎಂಬ ದ್ವಿಮುಖೀ ಚಿಂತನೆ. ಒಂದು ಪದ್ಯವು ೮೧ ಅರ್ಥಗಳನ್ನು ಕೊಡುತ್ತದೆ ಎಂದು ಸ್ಫುರಿತ ಜ್ಞಾನದಿಂದ  ಕಂಡುಬರುತ್ತದೆ.

- ಹೇಮಂತ್ ಕುಮಾರ್ ಜಿ.

No comments:

Post a Comment