Sunday, 2 September 2018

ಮಹಾಭಾರತದ ದ್ರೋಣ ಪರ್ವದಲ್ಲಿ ಅಶ್ವತ್ಥಾಮ-ವ್ಯಾಸರ ಸಂವಾದಮಹಾಭಾರತದ ದ್ರೋಣ ಪರ್ವದಲ್ಲಿ ಅಶ್ವತ್ಥಾಮ (ದ್ರೋಣನ ಮಗ) ಮತ್ತು ವೇದವ್ಯಾಸರ ನಡುವಿನ ಒಂದು ಸಂವಾದ ಸಿಗುತ್ತದೆ. ಪೂರ್ಣ ದ್ರೋಣ ಪರ್ವವನ್ನು ಕೆಳಗಿನ ಕೊಂಡಿಯಲ್ಲಿ ಓದಬಹುದು:

ಅವರ ಸಂವಾದದ ಸಾರಾಂಶವು ಇಂತಿದೆ:

ಕೃಷ್ಣಾರ್ಜುನರ ಮೇಲೆ ಯಾವುದೇ ಪ್ರಬಲ ಶಸ್ತ್ರಾಸ್ತ್ರಗಳ ಪ್ರಯೋಗವೂ ನಿಷ್ಫಲವಾಗುತ್ತಿದ್ದುದರಿಂದ ಅಶ್ವತ್ಥಾಮನು ಹತಾಶನಾಗಿದ್ದನು. ಆ ವೇಳೆಗೆ ವೇದವ್ಯಾಸರ ಆಗಮನವಾಗುತ್ತದೆ. ದ್ರೋಣ ಪುತ್ರನಾದ ಅಶ್ವತ್ಥಾಮನು ವ್ಯಾಸರಲ್ಲಿ ಇದರ ಬಗ್ಗೆ ಕೇಳುತ್ತಾನೆ. ಆಗ ವೇದವ್ಯಾಸರು ಹಿಂದೊಮ್ಮೆ ಕೃಷ್ಣಾರ್ಜುನರು ಯಾವುದೇ ಪ್ರಬಲ ಶಸ್ತ್ರಾಸ್ತ್ರಗಳು ತಮ್ಮ ಮೇಲೆ ನಿಷ್ಫಲವಾಗಲಿ ಎಂದು ರುದ್ರನಿಂದ ವರವನ್ನು ಪಡೆದಿರುತ್ತಾರೆ ಎಂಬುದನ್ನು ಜ್ಞಾಪಿಸಿದರು.

ಈ ಪ್ರಕರಣದ ಶ್ಲೋಕಗಳ ಆಂಗ್ಲ ಅನುವಾದವು ಇಲ್ಲಿದೆ:

ಮೇಲಿನ ಸಂವಾದವನ್ನು ಕ್ಷೇಮೇಂದ್ರ (೧೧ನೇ ಶತಮಾನ) ತನ್ನ ಭಾರತಮಂಜರಿಯಲ್ಲಿ ಸಂಕ್ಷೇಪಿಸಿದ್ದಾರೆ. ಮಹಾಭಾರತದಲ್ಲಿನ ಶ್ಲೋಕದ ಸಾಲುಗಳಂತೆಯೇ ಇವರೂ ಪ್ರತಿಪಾದಿಸುತ್ತಾ ಹೋಗುತ್ತಾರೆ. ಅದರ ಪ್ರತಿ ಇಲ್ಲಿದೆ:

ಅಸ್ತ್ರೇಣಾಕ್ಷೌಹಿಣೀಂ ದಗ್ಧಾಂ ವಹ್ನಿವ್ಯಾಪ್ತೋ ಧನಂಜಯಃ |
ದೃಷ್ಟ್ವಾ ಪ್ರಾದುಶ್ಚಕಾರೋಗ್ರಂ ಬ್ರಹ್ಮಾಸ್ತ್ರಂ ತತ್ಪ್ರಶಾನ್ತಯೇ || ೭.೭೮೮ ||
ಅಸ್ತ್ರೇ ತಿರೋಹಿತೇ ತಸ್ಮಿನ್ವಿಮುಕ್ತೌ ಕೇಶವಾರ್ಜುನೌ |
ದೃಷ್ಟ್ವಾ ದ್ರೋಣಸುತಃ ಕ್ರುದ್ಧೋ ಧಿಗಸ್ತ್ರಾಣೀತ್ಯಭಾಷತ || ೭.೭೮೯ ||
ಅತ್ರಾನ್ತರೇ ಜ್ಞಾನಸಹಸ್ರರಶ್ಮಿರಪಾರವೇದಾಮೃತಸಿನ್ಧುಸೇತುಃ |
ಸರಸ್ವತೀಮಾನಸರಾಜಹಂಸಃ ಕೃಷ್ಣೋಽಪ್ಯಕೃಷ್ಣೋ ಮುನಿರಾಜಗಾಮ || ೭.೭೯೦ ||
ರಥಂ ಸಮುತ್ಸೃಜ್ಯ ತಮುಗ್ರಕರ್ಮಾ ಪ್ರಣಮ್ಯ ಪಪ್ರಚ್ಛ ಗುರೋಸ್ತನೂಜಃ |
ಅಸ್ತ್ರಾಣಿ ದಿವ್ಯಾನ್ಯಫಲಾನಿ ಕಸ್ಮಾತ್ಪಾರ್ಥೇ ಸಕೃಷ್ಣೋ ಭಗವನ್ಗತಾನಿ || ೭.೭೯೧ ||
ಪೃಷ್ಟಃ ಕೋಪಾಕುಲೇನೇತಿ ತಮುವಾಚ ಮುನೀಶ್ವರಃ |
ವೀರೌ ಕೃಷ್ಣಾರ್ಜುನವೇತೌ ನರನಾರಾಯಣಾವೃಷೀ || ೭.೭೯೨ ||
ಷಷ್ಟಿಂ ವರ್ಷಸಹಸ್ರಾಣಿ ತಪಃ ಕೃತ್ವಾ ಪಿನಾಕಿನಮ್ |
ನಾರಾಯಣಸ್ತೋಷಯಿತ್ವಾ ಲೇಭೇ ತತ್ತುಲ್ಯತಾಂ ಪುರಾ || ೭.೭೯೩ ||
ಸ ಏಷ ದುರ್ಜಯಃ ಕೃಷ್ಣಃ ಸ್ವಯಂ ಲಿಙ್ಗಾರ್ಚನವ್ರತಃ |
ಕೃಷ್ಣಾರ್ಜುನರೆಂಬ ಯೋಧರೀರ್ವರು ನರ-ನಾರಾಯಣ ಋಷಿಗಳೇ ಆಗಿದ್ದಾರೆ. ನಾರಾಯಣ ಋಷಿಯು ೬೦,೦೦೦ ವರ್ಷ ಪಿನಾಕಿಯನ್ನುದ್ದೇಶಿಸಿ ತಪಸ್ಸನ್ನಾಚರಿಸಿದನು. ಪುರಾತನ ಕಾಲದಲ್ಲಿ  ರುದ್ರನನ್ನು ಸಂತುಷ್ಟಗೊಳಿಸಿ, ನಾರಾಯಣ ಋಷಿಯು ರುದ್ರ ಸಾಮೀಪ್ಯ ಮತ್ತು ಸಾರೂಪ್ಯವನ್ನು ಪಡೆದನು. ಲಿಂಗಾರ್ಚನೆಯ ಫಲದಿಂದಲೇ ಕೃಷ್ಣನು ದುರ್ಜೇಯನಾಗಿದ್ದಾನೆ.

ದ್ರೋಣೇ ತ್ವಮಪಿ ರುದ್ರಾಂಶಸ್ತಸ್ಮಾನ್ಮಾ ವಿಕ್ರಿಯಾಂ ಗಮಃ || ೭.೭೯೪ ||
ಏತದ್ವ್ಯಾಸವಚಃ ಶ್ರುತ್ವಾ ಶಾನ್ತಮನ್ಯುರ್ಗುರೋಃ ಸುತಃ |
ಧಿಯೋ ರುದ್ರಂ ನಮಸ್ಕೃತ್ಯ ದೇವೌ ಕೃಷ್ಣಾವಮನ್ಯತ || ೭.೭೯೫ ||

ಎಲೈ ಅಶ್ವತ್ಥಾಮನೇ, ನೀನೂ ರುದ್ರಾಂಶ ಸಂಭೂತನೇ ಹಾಗಾಗಿ ವಿಚಲಿತನಾಗಬೇಡ. ವ್ಯಾಸರ ಈ ಮಾತನು ಕೇಳಿ ಗುರುಸುತನು ಶಾಂತನಾದನು. ಆಂತರ್ಯದಲ್ಲಿ ಬುದ್ಧಿಯಿಂದಲೇ ರುದ್ರನನ್ನು ನಮಿಸಿ, ಕೃಷ್ಣಾರ್ಜುನರನ್ನು ದೇವ ಸಮಾನರೆಂದು ಉದ್ಯುಕ್ತನಾದ.

ತಾನು ಸಂಹರಿಸುವುದರ ಒಳಗೇ ಯಾವ ಶಕ್ತಿಯು ಶತ್ರುಭಂಜನ ಮಾಡುತ್ತಿತ್ತು ಎಂಬ ಸಂಶಯವನ್ನು ಅರ್ಜುನನು ವ್ಯಾಸರಲ್ಲಿ ಪ್ರಶ್ನಿಸುವುದರೊಂದಿಗೆ ದ್ರೋಣ ಪರ್ವವು ಮುಕ್ತಾಯವಾಗುತ್ತದೆ. ಅದಕ್ಕೆ ಪ್ರತ್ಯುತ್ತರ ರೂಪದಲ್ಲಿ ವ್ಯಾಸರು ಅದು ರುದ್ರನಲ್ಲದೆ ಮತ್ತಾರೂ ಅಲ್ಲ ಎಂದು ಸುದೀರ್ಘವಾದ  ರುದ್ರಸ್ತುತಿಯನ್ನೇ ಕೊಡುತ್ತಾರೆ. ಈ ವಿಚಾರಗಳನ್ನು ಆಂಗ್ಲ ಭಾಷಾಂತರದಲ್ಲಿ http://www.sacred-texts.com/hin/m07/m07198.htm ಇಲ್ಲಿ ಓದಬಹುದು. ವೇದವ್ಯಾಸರು – ಓ ಪಾರ್ಥಾ - ಈ ಸಂವಾದದಲ್ಲಿ ದೇವರ ದೇವನಲ್ಲಿ ಭಕ್ತಿಪೂರ್ವಕವಾಗಿ, ದಿವ್ಯ, ಪ್ರಖ್ಯಾತ, ದೀರ್ಘಾಯುಷ್ಯದಾಯಕ, ಸುಪವಿತ್ರವಾದ ವೇದ ಮಾನ್ಯ ಶತ-ರುದ್ರೀಯ ಮಂತ್ರಗಳನ್ನು ವಿವರಿಸಲಾಗಿದೆ. ಆದ್ದರಿಂದ ಕೆಲ ಮುತ್ಸದ್ದಿಗಳು ಶತ-ರುದ್ರೀಯ ಮಂತ್ರಗಳು ರುದ್ರನಿಗೆ ಸಂಬಂಧಪಡದವು ಇನ್ನಾವುದೋ ದೇವತೆಗೆ ಸಂಬಂಧಿಸಿದ್ದೆಂದು ಆಧಾರರಹಿತವಾದಂತಹಾ ವಾದ ಮಾಡುವುದರಲ್ಲಿ ಹುರುಳಿಲ್ಲ. ಇದಕ್ಕೆ ವೇದವ್ಯಾಸರ ವಚನಗಳೇ ಸಾಕ್ಷಿ. ಇದು ಶತರುದ್ರೀಯಂ ಮಂತ್ರಗಳು ಏಕಮೇವ ಶಿವನನ್ನು ಕುರಿತು ಹೇಳಿದ್ದು ಎಂದು ಪ್ರತಿಪಾದಿಸುವ ಮಹಾಭಾರತದ ಒಂದು ದೃಷ್ಟಾಂತ.

ಕ್ಷೇಮೇಂದ್ರ ಮತ್ತವನ ಕೃತಿಗಳ ಬಗ್ಗೆ ಹೆಚ್ಚು ತಿಳಿಯಲು ಕೆಳಕಂಡ ಕೊಂಡಿ ಸಂಪರ್ಕಿಸಬಹುದು:

ಶ್ರೀ ಅಪ್ಪಯ್ಯ ದೀಕ್ಷಿತರು ತಮ್ಮ ‘ಬ್ರಹ್ಮತರ್ಕ ಸ್ತವ’ದಲ್ಲಿ ದ್ರೋಣ ಪರ್ವದ ಈ ಅಶ್ವತ್ಥಾಮ ಮತ್ತು ವ್ಯಾಸರ ಸಂವಾದವನ್ನು ಉಲ್ಲೇಖಿಸಿದ್ದಾರೆ. ಹಾಗೇ ತಮ್ಮ ‘ಮಹಾಭಾರತ ಸಾರ ಸಂಗ್ರಹ ಸ್ತೋತ್ರ’ದಲ್ಲಿ ದ್ರೋಣ ಪರ್ವದ ಈ ಶ್ಲೋಕಗಳಲ್ಲದೆ ಮಹಾಭಾರತದ ಇನ್ನೂ ಹಲವು ಭಾಗದಲ್ಲಿನ ಆಯ್ದು ವಿಚಾರಗಳನ್ನು ಉಲ್ಲೇಖಿಸಿ ತ್ರಿಮೂರ್ತಿಗಳಲ್ಲಿ ಶಿವನ ಸ್ಥಾನವನ್ನು ತುರೀಯವೆಂದು ಸಾಧಿಸಿ ತೋರಿಸಿದ್ದಾರೆ.
ಮಹಾಭಾರತದ ಬೋ.ರಿ. ಪ್ರಕಟಣೆಯಲ್ಲಿ ಕಂಡುಬರುವ ಶ್ಲೋಕಗಳೇ ಕುಂಭಕೋಣಂ ಪ್ರಕಟಣೆಯಲ್ಲೂ ಕಂಡುಬರುತ್ತದೆ (ಇದು ದಾಕ್ಷಿಣ್ಯಾತ್ಯ ಪಾಠವೆಂದು ಮಧ್ವರಿಂದಲೂ ಅನುಮೋದಿಸಲ್ಪಟ್ಟಿದೆ).

https://sanskritdocuments.org/mirrors/mahabharata/mbhK/mahabharata-k-07-sa.html ಇಲ್ಲಿ 7-202-85x (4807) ಎಂಬ ಕಡತದಲ್ಲಿ ಮತ್ಪ್ರಸಾದಾನ್ಮನುಷ್ಯೇಷು …. ಇತಿ ಶ್ರೀಮನ್ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಪರ್ವಣಿ ಪಂಚದಶ ದಿವಸ ಯುದ್ಧೇ ದ್ವ್ಯಧಿಕ ದ್ವಿಶತತಮೋಽಧ್ಯಾಯಃ || 202 || ಎಂಬಲ್ಲಿಗೆ ಮುಕ್ತಾಯವಾಗುವ ಶ್ಲೋಕಗಳನ್ನು ಗಮನಿಸಿ.

ಈ ಪ್ರಕಟಣೆಯ ಆರಂಭದಲ್ಲಿ sanskritdocuments ಸೈಟಿನಲ್ಲಿ, ಕೆಳಕಂಡ ಮಾಹಿತಿ ಇದೆ:
ಈ ಅಂತರ್ಜಾಲ ಆವೃತ್ತಿಯು ಮಹಾಭಾರತದ ‘ದಕ್ಷಿಣ ಪಾಠ’ವನ್ನು ಆಧರಿಸಿದೆ. ಕೃಷ್ಣಾಚಾರ್ಯ (೧೯೦೬-೧೯೧೪) ಇವರಿಂದ ಸಂಪಾದಿಸಲ್ಪಟ್ಟಿದೆ. ಪ್ರೊ. ಶ್ರೀನಿವಾಸ ವರಖೇಡಿ ಇವರು ತಮ್ಮ ಸಂಶೋಧನಾ ಗುಂಪಿನಲ್ಲಿ ಪ್ರೋ. ಕೆ.ವಿ. ರಾಮಕೃಷ್ಣಮಾಚಾರ್ಯಲು, ಪ್ರೋ. ಅಂಬ ಕುಲಕರ್ಣಿ, ಪ್ರೊ. ಪ್ರಹ್ಲಾದಾಚಾರ್, ಮತ್ತು ಎಂ.ಎಸ್.ಪಿ. ಬೆಂಗಳೂರು ಇದರ ಹಲವು ಸದಸ್ಯರ ಸಹಾಯದಿಂದ ಈ ಕೆಲಸವನ್ನು ಕೈಗೊಳ್ಳಲಾಗಿತ್ತು.

[ಡಾ. ಶ್ರೀನಿವಾಸ್ ವರಖೇಡಿ (ಈಗಿನ ಡೀನ್ ಮತ್ತು ನಿರ್ದೇಶಕರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು)  ಮತ್ತು ಶ್ರೀ ಪ್ರಹ್ಲಾದಾಚಾರ್ (ಶ್ರೀ ವ್ಯಾಸರಾಜ ಮಠ (ಸೋಸಲೆ)ಯ ಪೀಠಾಧಿಪತಿಗಳಾಗಿದ್ದವರು) ಇವರೀರ್ವರು ಮಧ್ವ ಪಂಥದ ಪ್ರಖ್ಯಾತ ವಿದ್ವಾಂಸರು.]

ದ್ರೋಣ ಪರ್ವದ ಮೇಲೆ ವಿವರಿಸಲ್ಪಟ್ಟ ಮಾಹಿತಿಯು ತಿಕ್ಕಣ ಸೋಮಯಾಜಿ (೧೩ನೇ ಶತಮಾನ) ಇವರು ಆಂಧ್ರಭಾರತಮು ಎಂಬ ಕೃತಿಯಲ್ಲೂ ಹಾಗೆಯೇ ಉಲ್ಲೇಖಿಸಿದ್ದಾರೆ. ಆ ಪುಸ್ತಕವನ್ನು ಓದಿದರೆ ಶ್ಲೋಕ ಸಾಮ್ಯತೆಯು ಸ್ಪಷ್ಟವಾಗುತ್ತದೆ.

ಈ ಸಂಕಲನದಿಂದ ಹೊರಬರುವ ನಿರ್ಣಗಳು ಇಂತಿವೆ:

೧. ದ್ರೋಣಪರ್ವದ ವ್ಯಾಸರು ಹಾಗೂ ಅಶ್ವತ್ಥಾಮರ ಸಂಭಾಷಣೆಯಲ್ಲಿ ಅರ್ಜುನನೂ ಇದ್ದು ಅದು ಮೂಲ ಮಹಾಭಾರತ ಪ್ರಕಟಣೆ, ಕ್ಷೇಮೇಂದ್ರನ (೧೧ನೇ ಶತಮಾನ) ಸಂಕ್ಷಿಪ್ತ ಪ್ರಕಟಣೆ, ಆನಂದಭಾರತಮು (೧೨೦೫-೧೨೮೮) ಪುನರ್ವಚನ ಹಾಗೂ ಮಧ್ವರು ಅನುಮೋದಿಸುವ  ಕುಂಭಕೋಣಂ ಆವೃತ್ತಿಯಲ್ಲಿಯೂ ಕಂಡುಬರುತ್ತದೆ.

೨. ಶ್ರೀ ಅಪ್ಪಯ್ಯ ದೀಕ್ಷಿತರೂ ಈ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.

೩. ವೇದವ್ಯಾಸರು ಕೃಷ್ಣನು ಸದಾ ಶಿವಲಿಂಗಾರ್ಚನೆಯನ್ನು ಮಾಡುತ್ತಿದ್ದನೆಂದು ಉಲ್ಲೇಖಿಸಿದ್ದಾರೆ. ಕ್ಷೇಮೇಂದ್ರನು ಕೃಷ್ಣನು ಲಿಂಗಾರ್ಚನವ್ರತಃ ಎಂದಿದ್ದಾನೆ.

೪. ಅರ್ಜುನನ ಸಂಭಾಷಣೆಯಲ್ಲಿಯೂ ಶಿವಲಿಂಗದ ಅರ್ಚನೆಯ ಮಹತ್ವವನ್ನು ಸಾರುವ ವಾಕ್ಯಗಳು ವ್ಯಾಸರಿಂದಲೂ ನೀಡಲ್ಪಟ್ಟಿದೆ.

೫. ಶಿವನು ‘ವೈಷ್ಣವೋತ್ತಮ’ನೆಂದು ಭಾಗವತದಲ್ಲಿ ಹೇಳಿದ್ದಾಗ್ಯೂ, ಕೃಷ್ಣನು ‘ಶೈವೋತ್ತಮ’ನೆಂದು ಮಹಾಭಾರತದಲ್ಲಿ ಹೇಳಿದೆ. ಶಿವನಿಗೆ ಕೃಷ್ಣನು ಅಚ್ಚುಮೆಚ್ಚು.

೬. ಆದ್ದರಿಂದ ಲಭ್ಯ ದ್ರೋಣ ಪರ್ವದ ಶ್ಲೋಕಗಳಲ್ಲಿ ವ್ಯತ್ಯಾಸಗಳಾಗಲೀ ತಿದ್ದುಪಡಿಗಳಾಗಲೀ ಎಲ್ಲೂ ಇಲ್ಲ. ಏಕೆಂದರೆ ಓರ್ವ ಮಧ್ವ ವಿದ್ವಾಂಸನು ಕೆಲ ಸಮಯದ ಹಿಂದೆ ಒಂದು ವಾಕ್ಯ ಹೇಳಿದ್ದನು – ಈಗ ಜನರಿಗೆ ಎಲ್ಲವಕ್ಕೂ ಪ್ರಕ್ಷಿಪ್ತ / ತಿದ್ದಲ್ಪಟ್ಟಿದೆ ಎಂದು ಹೇಳುವ ಪರಿಪಾಠ ಶುರುವಾಗಿದೆ. ಹಾಗಾಗಿ ಅದು ಸುಳ್ಳು ಎಂದು ಸಾಬೀತಾಯಿತು.

೭. ಶಿವಲಿಂಗಾರ್ಚನೆಗೆ ಶ್ರುತಿ ಪ್ರಮಾಣವಂತೂ ಇದ್ದೇ ಇದೆ. ಈ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ದ್ರೋಣ ಪರ್ವದ ಭಾಗಗಳು ಶ್ರುತಿ ಪ್ರಮಾಣಕ್ಕೆ ಪೂರಕವಾಗಿ ವಿವಾದಾತೀತವಾದ ಸ್ಮೃತಿ ಪ್ರಮಾಣವನ್ನೂ ಒದಗಿಸುತ್ತದೆ.

|| ಓಂ ತತ್ ಸತ್ ||

No comments:

Post a comment