Sunday, 23 September 2018

ಬ್ರಹ್ಮನ ಸ್ವಾತ್ ವಿಭೂತಿ ಹಾಗೂ ಪಿತರ ಪ್ರಾಣ ಪ್ರತಿಷ್ಠಾತ್ಮಕ ತತ್ತ್ವ

ಬ್ರಹ್ಮನ ಸ್ವಾತ್ ವಿಭೂತಿ:-


ಯಜುರ್ಬ್ರಹ್ಮವು ಬ್ರಹ್ಮಾಗ್ನಿಯಾಗಿದೆ, ಸತ್ಯಾಗ್ನಿಯಾಗಿದೆ, ಪುರುಷವೂ ಆಗಿದೆ. ಸುಬ್ರಹ್ಮವು ಸೋಮವೂ, ಸ್ತ್ರೀಯೂ ಹೌದು. ಇದೇ ಆಪೋಮಯ ಸುಬ್ರಹ್ಮ ರೂಪ ರೇತವಾಗಿರುವ ಇದು ಅಗ್ನಿಮಯ ಬ್ರಹ್ಮದಲ್ಲಿ ಮಾತರಿಶ್ವಾ ಎಂಬುದರಿಂದ ಆಹುತಿಯಾಗುತ್ತದೆ. ಇದರಿಂದಲೇ ಪ್ರಜೋತ್ಪತ್ತಿಯಾಗುತ್ತದೆ. ಯಜುರ್ಬಹ್ಮನಿಗೆ (ಇದು ಯಜುರ್ಬಹ್ಮ ವಿಜ್ಞಾನ ಭಾಷೆಯಲ್ಲಿ ಸ್ವಯಂಭೂ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ) ಪ್ರಜಾ-ಸೃಷ್ಟಿಯ ಉಪಾದಾನಭೂತ ಶುಕ್ರ-ಸಮ್ಪತ್ತಿಗಾಗಿ ಸರ್ವಪ್ರಥಮ ಇದೇ ಅಪ್ ತತ್ತ್ವವನ್ನು ಉತ್ಪನ್ನ ಮಾಡುವ ಅವಶ್ಯಕತೆ ಇರುತ್ತದೆ. ಇದೇ ವಿಜ್ಞಾನವನ್ನು ಲಕ್ಷ್ಯದಲ್ಲಿಟ್ಟುಕೊಂಡು ಮನುವು ಹೇಳುತ್ತಾನೆ –

ಸೋಽಭಿಧ್ಯಾಯ ಶರೀರಾತ್ ಸ್ವಾತ್ ಸಿಸೃಕ್ಷುರ್ವಿವಿಧಾಃ ಪ್ರಜಾಃ |
ಅಪ ಏವ ಸಸರ್ಜಾದೌ ತಾಸು ಬೀಜಮವಾಸೃಜತ್ || (ಮನುಃ)

ಸ್ವಯಮ್ಭೂ ಬ್ರಹ್ಮನ ಶರೀರರು ತ್ರಯೀಮಯವಾಗಿದೆ. ತ್ರಯೀಯ ಯಜುರ್ಭಾಗದ ಪ್ರಾಣಗರ್ಭೀತ ಭಾಗವೇ ಇದರ ಸ್ವಭಾಗವಾಗಿದೆ. ಇದೇ ನೀರಾಗಿದೆ, ಇದೇ ಆಧಾರದಲ್ಲಿ “ಸ್ವಾತ್” ಎನ್ನಲಾಗಿದೆ.

ತತ್ ಸೃಷ್ಟ್ವಾ ತದೇವಾನುಪ್ರಾವಿಶಮ್” ಎಂಬೀ ಸಿದ್ಧಾನ್ತಾನುಸಾರ ತ್ರಯೀಬ್ರಹ್ಮವು ಆಪೋಮಯ ಸುಬ್ರಹ್ಮವನ್ನು ಉತ್ಪನ್ನ ಮಾಡಿ ಅದರಲ್ಲೇ ಪ್ರವಿಷ್ಟವಾಗುತ್ತದೆ. ಇದರಿಂದಲೇ ಆಣ್ಡಸೃಷ್ಟಿಯ ಸ್ವರೂಪವು ನಿಷ್ಪನ್ನವಾಗುತ್ತದೆ.

ಪ್ರತ್ಯೇಕ ಅಣ್ಡದಲ್ಲಿ ಗರ್ಭದಲ್ಲಿ ಬಿಸಿಯು ಇದ್ದು, ನಾಲ್ಕೂ ಕಡೆ ನೀರಿರುತ್ತದೆ. ಇದೇ ಸ್ಥಿತಿ ಇಲ್ಲಿಯೂ ಇದೆ. ಗರ್ಭದಲ್ಲಿ ಬ್ರಹ್ಮಾಗ್ನಿಪ್ರಧಾನ ತ್ರಯೀಬ್ರಹ್ಮವಿದೆ. ನಾಲ್ಕೂ ಕಡೆ ಆಪೋಮಯ ಸುಬ್ರಹ್ಮಾ ವ್ಯಾಪಿಸಿದೆ. ಇದೇ ಆಧಾರದಲ್ಲಿ ಈ ಬ್ರಹ್ಮಪುರವನ್ನು ಬ್ರಹ್ಮಾಣ್ಡ (ಬ್ರಹ್ಮದ ಅಣ್ಡ) ಎನ್ನಲಾಗಿದೆ.

ಉದಾಹರಣೆಗೆ ಸ ತ್ರಯ್ಯಾವಿದ್ಯಯಾ ಸಹಾಪಃ ಪ್ರಾವಿಶತ್ ತತ್ ಆಣ್ಡಂ ಸಮವರ್ತತ” (ಶತ-೬|೧|೧)

ಇತ್ಯಾದಿ ವಚನಗಳಿಂದ ಸ್ಪಷ್ಟವಾಗುತ್ತದೆ. ಸೃಷ್ಟಿಮೂಲಭೂತ ಶುಕ್ರಮೂರ್ತ್ತಿಯು ಸ್ನೇಹ-ತೇಜ ಲಕ್ಷಣ ಭುಗ್ವಾಙ್ಗಿರೋಮಯ ಇದೇ ಅಪ್ ಬ್ರಹ್ಮದ ನಿರೂಪಣೆ ಮಾಡುತ್ತಾ ಋಷಿಗಳು ಹೇಳುತ್ತಾರೆ -

ಆಪೋ ಭೃಗ್ವಙ್ಗಿರೋರೂಪಮಾಪೋ ಭೃಗ್ವಾಙ್ಗಿರೋಮಯಮ್ |
ಅನ್ತರೈತೇ ತ್ರಯೋ ವೇದಾ ಭೃಗೂನಙ್ಗಿರಸಃ ಶ್ರಿತಾಃ || (ಅಥರ್ವವೇದ, ಗೋಪಥ ಬ್ರಾಹ್ಮಣ)

ಸಂಸೃಷ್ಟಿ ಲಕ್ಷಣವು ಸೃಷ್ಟಬ್ರಹ್ಮ (ವಿಶ್ವ)ದಲ್ಲಿ ಇವೆರಡರ ಹೊರತು ಮೂರನೇ ತತ್ತ್ವದ ಅಭಾವವಿದೆ. ಇದೇ ಅಭಿಪ್ರಾಯದಲ್ಲಿ ಮಹರ್ಷಿ ಕೌಷೀತಕಿಯು
ದ್ವಯಂ ವಾ ಇದಂ ಸರ್ವಂ ಸ್ನೇಹಶ್ಚೈವ ತೇಜಶ್ಚ |
ತದುಭಯಮಹೋರಾತ್ರಾಭ್ಯಾಂ ವ್ಯಾಪ್ತಮ್” (ಕೌ. ೧೭|೬)
ಎಂದು ಹೇಳಿದ್ದಾರೆ.

ಪಿತರ ಪ್ರಾಣ ಪ್ರತಿಷ್ಠಾತ್ಮಕ ತತ್ತ್ವ -


ಭೃಗು-ಅಙ್ಗಿರಾ ಎಂಬೆರಡು ತತ್ತ್ವಗಳು ಕ್ರಮಶಃ ಪಿತರ-ದೇವತೆಗಳ ಪ್ರತಿಷ್ಠಾ ಆಗಿದೆ. ಭಾರ್ಗವವು ಸೌಮ್ಯ ಪ್ರಾಣ ಪಿತೃ ತತ್ತ್ವದ ಪ್ರತಿಷ್ಠಾ ಆಗಿದೆ. ಆಙ್ಗಿರಸವು ಆಗ್ನೇಯ ತತ್ತ್ವ ದೇವತತ್ತ್ವದ ವಿಕಾಸ ಭೂಮಿಯಾಗಿದೆ. ಯಜುವಿನ ವಾಕ್ ಭಾಗವು ಪ್ರಧಾನ ರೂಪದಿಂದ ಭಾರ್ಗವ ಪ್ರಾಣದ ಜನಕವಾಗಿದೆ. ಪ್ರಾಣ ಭಾಗವು ಪ್ರಧಾನ ರೂಪದಲ್ಲಿ ಆಙ್ಗೀರಸ ಪ್ರಾಣದ ಪ್ರವರ್ತಕವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಙ್ಗಿರಾಗರ್ಭಿತ ಭೃಗು-ಸೋಮ ಪಿತರಪ್ರಾಣದ ಪ್ರಭಾವವಾಗಿದೆ, ಹಾಗೂ ಭೃಗು-ಗರ್ಭಿತ ಅಙ್ಗಿರೋಽಗ್ನಿ ದೇವ-ಪ್ರಾಣದ ಜನಕವಾಗಿದೆ. ಪಿತರ ಭೃಗುಪ್ರಧಾನವಾಗಿದ್ದು ಸೌಮ್ಯವಾಗಿದೆ, ದೇವತಾ ಅಙ್ಗಿರಾ ಪ್ರಧಾನವಾಗುತ್ತಾ ಆಗ್ನೇಯವಾಗಿದೆ. ಇದೇ ರೀತಿಯಲ್ಲಿ ಯಜುವಿನ ಯತ್ ಭಾಗವನ್ನು ನಾವು ದೇವ-ಪ್ರಾಣದ ಮೂಲ ಪ್ರತಿಷ್ಠಾ ಎಂದು ಹೇಳಬಹುದು, ಕಾರಣವು ಅದೇ ವಾಗಿನಿಂದ ಅಬಾತ್ಮಕ ಅಙ್ಗಿರಾರೂಪದಲ್ಲಿ ಪರಿಣತವಾಗುತ್ತದೆ. ಹಾಗೂ ‘ಜೂ’ ರೂಪ ವಾಕ್ ಭಾಗವನ್ನು ಪಿತರ-ಪ್ರಾಣದ ಮೂಲ ಪ್ರತಿಷ್ಠಾ ಎಂದು ಹೇಳಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪ್ರಾಣ-ಪ್ರಧಾನ ವಾಙ್ಮಯ ಅಗ್ನಿಯು ದೇವಸೃಷ್ಟಿಯ ಕಾರಣದಿಂದ ಹಾಗೂ ವಾಕ್-ಪ್ರಧಾನ ಪ್ರಾಣಗರ್ಭಿತ ಸೋಮವು ಪಿತೃ-ಸೃಷ್ಟಿಯ ಆರಂಭಕವಾಗಿದೆ. ಪ್ರಾಣವು ಮನಕ್ಕೆ ಹಿತವು, ವಾಕ್ ಉಪಹಿತವು. ಅಂದರೆ ಪ್ರಾಣವು ಮನದ ಮೇಲೆ ಸಾಕ್ಷಾತ್ ರೂಪದಲ್ಲಿ ಪ್ರತಿಷ್ಠಿತವಾಗಿದೆ, ವಾಕ್ ತತ್ತ್ವವು ಮನದ ಮೇಲೆ ಪರಂಪರೆಯಿಂದ ಪ್ರತಿಷ್ಠಿತವಾಗಿದೆ. ಇಂತಹಾ ಸ್ಥಿತಿಯಲ್ಲಿ ವಾಕ್ಕಿನ ಅಪೇಕ್ಷೆಯಲ್ಲಿ ಪ್ರಾಣವು ಮನದ ಅತಿ ಸನ್ನಿಕಟ ಇರುವುದು ಸ್ವತಃ ಸಿದ್ಧವಾಗಿದೆ. ಇಲ್ಲಿ ದೇವತಾವನ್ನು ನಾವು ಪ್ರಾಣಮಯವೆಂದು ಹೇಳಿದ್ದೇವೆ. ಇದೇ ಕಾರಣದಿಂದ ಪ್ರಾಣ-ಪ್ರಧಾನ ದೇವ-ತತ್ತ್ವವನ್ನು ಅನ್ತರಾತ್ಮದಲ್ಲಿ ಪ್ರತಿಷ್ಠಾಪಿಸಲು ಪ್ರಧಾನ ರೂಪದಲ್ಲಿ ಮನದ (ಭಾವದ) ಆಶ್ರಯ ಪಡೆಯಬೇಕಾಗುತ್ತದೆ. ಪಿತರತತ್ತ್ವವು ವಾಙ್ಮಯವಾಗಿದೆ. ಇದು ಮನದಿಂದ ವಿದೂರವಾಗಿದೆ. ಆದ್ದರಿಂದ ಇದನ್ನು ಆತ್ಮದಲ್ಲಿ ಪ್ರತಿಷ್ಠಿತಗೊಳಿಸಲು ವಾಕ್-ಪ್ರಪಂಚದ (ಮಂತ್ರೋಚ್ಚಾರಣರೂಪಾ ಶಬ್ದವಾಕ್) ಆಶ್ರಯ ಪಡೆಯಬೇಕಾಗುತ್ತದೆ. ಪಿತರ ವಾಕಿನಿಂದ ಪ್ರಸನ್ನರಾಗುತ್ತಾರೆ. ಇದೇ ವಿಜ್ಞಾನದ ಆಧಾರದಲ್ಲಿ ಅಭಿಯುಕ್ತರು ಹೇಳುತ್ತಾರೆ -

“ಪಿತರೋ ವಾಕ್ಯಮಿಚ್ಚಾನ್ತಿ ಭಾವಮಿಚ್ಛನ್ತಿ ದೇವತಾಃ”
ಇಲ್ಲಿಯವರೆಗಿನ ಕಥನದ ನಿಷ್ಕರ್ಷೆಯು ಏನೆಂದರೆ ಷೋಡಶೀಬರ್ಭಿತ ಯಜುರ್ಬ್ರಹ್ಮವೇ ವಾಗವಚ್ಛೇದನ ಪಿತರಪ್ರಾಣದ ಜನಕವಾಗಿದೆ. ನೇರ ಶಬ್ದಗಳಲ್ಲಿ ವಾಙ್ಮಯ ಋಷಿಯೇ ಪಿತರರ ಉಪಾದಾನವಾಗಿದೆ -

-:: ತ್ರಯೀಬ್ರಹ್ಮಾ ::-

ಛನ್ದಾಂಸಿ :-
೧. ಋಗ್ವೇದಃ ----> ವಯೋನಾಧಃ ----> ಕೇಂದ್ರಾನುಗತ ಮುಕ್ಥಚ್ಛಂದಃ
೨. ಸಾಮವೇದಃ ----> ವಯೋನಾಧಃ ----> ಪೃಷ್ಠಾನುಗತಂ ಪೃಷ್ಠ ಛನ್ದಃ

ಛನ್ದಿತಂ ವಸ್ತು:-
೩. ಯತ್-ವೇದಃ ----> ವಯಃ ---->ಗತಿಲಕ್ಷಣೋ ವಾಯುಃ-ಪ್ರಾಣಾಃ
೪. ಜೂ-ವೇದಃ ---->ವಯಃ ----> ಸ್ಥಿತಿಲಕ್ಷಣ ಆಕಾಶಃ-ವಾಕ್

ಆಪಃ ----> ಸುಬ್ರಹ್ಮಾ (ಅಥರ್ವವೇದಃ)
೧. ಸ್ನೇಹ ಲಕ್ಷಣೇ ಭೃಗುಃ ----> ಪಿತೃಪ್ರಾಣ ಪ್ರವರ್ತಕಃ
೨. ತೇಜೋಲಕ್ಷಣೋಽಙ್ಗಿರಾ ----> ದೇವಪ್ರಾಣ ಪ್ರವರ್ತಕಃ

ಆಧಾರಃ
೧. ಋಕ್ ---- ಉಕ್ಥಚ್ಛನ್ದಃ
೨. ಸಾಮ ---- ಪೃಷ್ಠಚ್ಛನ್ದಃ

ಆಧೇಯಾಃ
೩. ಯತ್ ---- ಅಗ್ನಿಃ (ಗತಿಲಕ್ಷಣೋವೇದಾಗ್ನಿಃ) -------->ಋಷಿಃ
೪. ಜೂಃ ---- ಸೋಮ (ಸ್ಥಿತಿಲಕ್ಷಣೋವೇದ ಸೋಮಃ) -------->ಮನ್ತ್ರಃ
೫. ಭೃಗುಃ ---- ಪಿತೃಸೋಮಃ (ಪಿತರಪ್ರಾಣಪ್ರವರ್ತಕಃ) -------->ಪಿತರಃ
೬. ಅಙ್ಗಿರಾಃ ---- ದೇವಾಗ್ನಿಃ (ದೇವಪ್ರಾಣತೇಜೋಲಕ್ಷಣಃ) --------> ದೇವಾಃ

- ಹೇಮಂತ್ ಕುಮಾರ್ ಜಿ. 

No comments:

Post a comment