Thursday, 25 October 2018

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಪ್ರಪದಪ್ರತಿಷ್ಠ ಕರ್ಮ್ಮಾತ್ಮಾ (೭)

೭. ಪ್ರಪದಪ್ರತಿಷ್ಠ ಕರ್ಮ್ಮಾತ್ಮಾ –

ಉಕ್ತ ಲಕ್ಷಣವಾದ ಪಾರ್ಥಿವ ಇರಾಮಯ ಕರ್ಮ್ಮಾತ್ಮವು ಎರಡು ರೀತಿಯಲ್ಲಿ ನಮ್ಮ ಅಧ್ಯಾತ್ಮಸಂಸ್ಥಾದಲ್ಲಿ ಪ್ರತಿಷ್ಠಿತವಾಗುತ್ತದೆ. ಪ್ರಾತಿಸ್ವಿಕ ರೂಪದಿಂದ ಪ್ರವಿಷ್ಟವಾಗುವ ಭೂತಾತ್ಮವು (ಕರ್ಮ್ಮಾತ್ಮವು) ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆ, ಹಾಗೆಯೇ ಇದು ಪ್ರತಿಯೊಂದು ಪ್ರಾಣಿಯಲ್ಲಿಯೂ ಭಿನ್ನ ಭಿನ್ನವಾಗಿರುತ್ತದೆ. ಇದೇ ಪ್ರಾಧಾನಿಕರ ಪ್ರತಿಶರೀರಭಿನ್ನ ಜೀವಾತ್ಮವಾದವಾಗಿದೆ. ಈ ಪಾರ್ಥಿವ ಭೂತಾತ್ಮವು ಔಪಪಾತಿಕ ರೂಪದಿಂದ ಶುಕ್ರಶೋಣಿತದ ದಾಮ್ಪತ್ಯಭಾವದಲ್ಲಿ ಬಂದು ಕಾಲಾನ್ತರದಲ್ಲಿ ಸ್ಥೂಲಶರೀರ ಧಾರಣೆ ಮಾಡುತ್ತಾ ಭೂಮಿಷ್ಠವಾಗುತ್ತದೆ. ಇದರಲ್ಲಿ ಸಜಾತೀಯಾಕರ್ಷಣದಿಂದ ಪುನಃ ಇರಾಮಯ ಪಾರ್ಥಿವ ರಸವು ಪ್ರವಿಷ್ಟವಾಗುತ್ತದೆ. ಈ ಆಗನ್ತುಕ ಇರಾರಸವು ಪ್ರಾಣಿಮಾತ್ರದಲ್ಲಿ ಸಮಾನವಾಗಿರುತ್ತದೆ. ಪಾರ್ಥಿವ ಇರಾಮಯ ಔಪಪಾತಿಕ ಆತ್ಮವು ಅನ್ತರ್ಯ್ಯಾಮ ಸಮ್ಬನ್ಧದಿಂದ ಶುಕ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಇದರ ಪ್ರಭವಸ್ಥಾನವು ಅನ್ನವಾಗಿದೆ, ಯೋನಿಸ್ಥಾನವು ಪುರುಷವಾಗಿದೆ, ಪ್ರತಿಷ್ಠಾಸ್ಥಾನವು ಶುಕ್ರವಾಗಿದೆ, ಆಶಯವು ಸರ್ವಶರೀರವಾಗಿದೆ.


ಭೂಮಿಷ್ಠವಾದ ಅನನ್ತರ ಈ ಪಾರ್ಥಿವಪ್ರಾಣದೇವತೆಯು ಅಗ್ನಿ-ಪ್ರಧಾನತೆಯ ಕಾರಣದಿಂದ ನವಜಾತ ಶಿಶುವಿನ ದಕ್ಷಿಣ ಪ್ರಪದದಿಂದ (ದಕ್ಷಿಣ ಪಾದದ ಮೇಲ್ಭಾಗದಿಂದ) ಪ್ರವಿಷ್ಟವಾಗುತ್ತದೆ. ಪಾರ್ಥಿವ ಚೈತನ್ಯವು ಮೊತ್ತಮೊದಲು ಶಿಶುವಿನ ಪ್ರಪದಸ್ಥಾನದಲ್ಲಿಯೇ ಪ್ರವೇಶ ಮಾಡುತ್ತದೆ. ಇದರ ಪ್ರತ್ಯಕ್ಷ ಪ್ರಮಾಣವು ಏನೆಂದರೆ, ನವಜಾತ ಶಿಶುವು ಮೊತ್ತಮೊದಲು ಪಾದಾಗ್ರಭಾಗಗಳನ್ನೇ ಸಕ್ರಿಯಗೊಳಿಸಿಕೊಳ್ಳುವುದು. ಪ್ರಪದ ಸ್ಥಾನದಿಂದ ಮೇಲಕ್ಕೆ ಬರುತ್ತಾ ಉರುಸ್ಥಾನಕ್ಕೆ (ತೊಡೆಯತ್ತ) ಬರುತ್ತದೆ. ಆದ್ದರಿಂದ ಪಾದಾನನ್ತರ ಉರುದ್ವಯದಲ್ಲಿ ಗತಿಯ ಉದ್ರೇಕವಾಗುತ್ತದೆ. ಅದರಿಂದ ಹೃದಯಕ್ಕೆ ಬರುತ್ತಾ ಜಾಟರಾಗ್ನಿ-ಸಮತುಲಿತ ಉದರಕ್ಕೆ ಹೋಗುತ್ತದೆ. ಇಲ್ಲಿಂದಲೇ ಬುಭುಕ್ಷೆಯು (ಹಸಿವೆಯು) ತೀವ್ರವಾಗಲು ಆರಂಭಿಸುತ್ತದೆ. ಇದೇ ಬುಭುಕ್ಷಾವೃದ್ಧಿಯು ಆಯತನವೃದ್ಧಿಯ ಕಾರಣವಾಗುತ್ತದೆ. ಉಕ್ಥ-ಅರ್ಕ-ಅಶೀತಿ ಲಕ್ಷಣ ಅನ್ನೋರ್ಕಪ್ರಾಣಾನುಗ್ರಹಾತ್ಮಕ ಯಜ್ಞವೇ ಆಯತನವೃದ್ಧ್ಯದ ಕಾರಣವಾಗಿದೆ, ಹಾಗೂ ಈ ಯಜ್ಞದ ಮೂಲಪ್ರತಿಷ್ಠೆಯು ‘ಅಶನಾಯಾ’ (ಬುಭುಕ್ಷಾ) ಬಲವೆಂದೇ ನಂಬಲಾಗಿದೆ. ಉದರಸ್ಥಾನದ ಅನನ್ತರ ಅದೇ ಪಾರ್ಥಿವರಸಾತ್ಮಕ ಚಿತ್-ಪ್ರಾಣವು ಕಣ್ಠದೇಶಸ್ಥ ತೇಜೋನಾಡೀ ಮುಖೇನ (ಉಪನಿಷತ್ತು ಇದನ್ನು ‘ಉದಾನ’ ಎಂದೂ ವ್ಯವಹೃತಗೊಳಿಸಿದೆ) ಊರ್ಧ್ವಸ್ಥಾನಗಳಿಗೆ (ವಾಕ್-ಪ್ರಾಣ-ಚಕ್ಷುಃ-ಶ್ರೋತ್ರಾದಿಗಳಿಗೆ) ವ್ಯಾಪ್ತವಾಗುತ್ತದೆ. ಇರಾಮಯ ಹಿರಣ್ಮಯಾತ್ಮವು (ಪಾರ್ಥಿವಕರ್ಮ್ಮಾತ್ಮಾವು) ಶರೀರದೊಂದಿಗೆ ಉತ್ಪನ್ನವಾಗುತ್ತಾ ಎಲ್ಲಿ ‘ಉತ್ಪತ್ತಿಸೃಷ್ಟ’ ಇದೆಯೋ, ಅಲ್ಲಿ ಇದೇ ಇರಾಮಯ ಪಾರ್ಥಿವ ಪ್ರತಿಷ್ಠಾತತ್ತ್ವವು ಶರೀರೋತ್ಪತ್ಯನನ್ತರ ಉತ್ಪನ್ನವಾಗುತ್ತಾ ‘ಉತ್ಪನ್ನಸೃಷ್ಟ’ ಆಗಿದೆ. ಅದು ಅನ್ತರ್ಯ್ಯಾಮ ಸಮ್ಬನ್ಧದಿಂದ ಪ್ರತಿಷ್ಠಿತವಾಗಿದ್ದರೆ, ಇದು ಬಹಿರ್ಯ್ಯಾಮ ಸಮ್ಬನ್ಧದಿಂದ ಪ್ರತಿಷ್ಠಿತವಾಗಿರುತ್ತದೆ. ಇದನ್ನು ‘ವಿಭೂತಿ’ ಸಮ್ಬನ್ಧವೆಂದೂ ಹೇಳಬಹುದು. ಇದರ ಪ್ರಭವಸ್ಥಾನವು ಪಾರ್ಥಿವ ಗಾಯತ್ರ ಪ್ರಾಣವಾಗಿದೆ, ಯೋನಿಯು ದಕ್ಷಿಣ ಪ್ರಪದವಾಗಿದೆ, ಹೃದಯಲ್ಲಿ ಪ್ರತಿಷ್ಠಾ, ಆಶಯವು ಸರ್ವಾಙ್ಗಶರೀರವು. ಈ ರೀತಿ ಪಾರ್ಥಿವಪುರುಷನ ಕರ್ಮ್ಮಾತ್ಮವು, ಪ್ರತಿಷ್ಠಾತ್ಮಾ, ರೂಪದಿಂದ ನಮ್ಮ ಆಧ್ಯಾತ್ಮಿಕ ಸಂಸ್ಥಾದಲ್ಲಿ ಎರಡು ಪ್ರಕಾರದಿಂದ ಉಪಭೋಗವಾಗುತ್ತಿದೆ.

ಮುಂದಿನ ಲೇಖನದಲ್ಲಿ  ಕರಾರವಿನ್ದೇನ ಪದಾರವಿನ್ದಮ್.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment