Friday, 12 October 2018

ಆತ್ಮಗತಿಯ ಮೂಲಕ ಆತ್ಮಸ್ವರೂಪದ ಪರಿಚಯ – ವಿಜ್ಞಾನಮಯ ಕೋಶ (೫)

೪. ವಿಜ್ಞಾನಮಯಕೋಶ (ವಿಜ್ಞಾನಮ್) –

ಕಾಮ-ಕ್ರೋಧ-ಲೋಭಾದಿ ಭಾವಗಳ ಪ್ರವರ್ತ್ತಕ, ಆಹಾರ-ನಿದ್ರಾ-ಭಯ-ಮೈಥುನಾದಿಗಳ ಸಞ್ಚಾಲಕ, ಸರ್ವಪ್ರಾಣಿ ಶರೀರದಲ್ಲಿ ಸಮಾನರೂಪದಲ್ಲಿ ಪ್ರತಿಷ್ಠಿತ, ಪ್ರಜ್ಞಾನ ಎಂಬ ಹೆಸರಿನ ಚನ್ದ್ರಮನಲ್ಲಿ ಪ್ರತಿಷ್ಠಾರೂಪ, ಪ್ರಾಣಶರೀರನೇತಾ ಮನೋಮಯ ಆತ್ಮದ ಗರ್ಭದಲ್ಲಿ ನಾಲ್ಕನೇಯ ಆ ವಿಜ್ಞಾನಮಯ ಕೋಶವು ಪ್ರತಿಷ್ಠಿತವಾಗಿದೆ. ಇದು ವಿಧ್ಯಾ-ಅವಿಧ್ಯಾತ್ಮಿಕಾ ಸೌರೀ ಬುದ್ಧಿಯ ಪ್ರತಿಷ್ಠಾ ಎಂದು ನಂಬಲಾಗಿದೆ. ಬುದ್ಧಿ ತತ್ತ್ವವು ಇದೇ ವಿಜ್ಞಾನಮಯ ಕೋಶದ ಸಮ್ಬನ್ಧದಿಂದ ‘ವಿಜ್ಞಾನಾತ್ಮಾ’ ಎಂಬ ಹೆಸರಿನಿಂದ ವ್ಯವಹೃತವಾಗಿದೆ. ಈ ವಿಜ್ಞಾನಾತ್ಮವು (ಬುದ್ಧಿಯು) ಪ್ರಜ್ಞಾನಮನದಂತೆಯೇ ಪ್ರಾಣಿಗಳಲ್ಲಿ ಸಮಾನರೂಪದಿಂದ ಪ್ರತಿಷ್ಠಿತವಾಗಿರದೆ ವಿದ್ವಾನ್, ಮೂರ್ಖ, ಪಶು, ಪಕ್ಷಿ, ಕ್ರಿಮಿ, ಕೀಟ ಇತ್ಯಾದಿ ಸರ್ಗ ಭೇದದಿಂದ ತಾರತಮ್ಯ ಹೊಂದಿ ಪ್ರತಿಷ್ಠಿತವಾಗಿದೆ. ವಿಜ್ಞಾನ ತಾರತಮ್ಯವು ಉಚ್ಚ-ನೀಚ ಇತ್ಯಾದಿ ಶ್ರೇಣೀ-ವಿಭಾಗಗಳ ಮೂಲ ಪ್ರತಿಷ್ಠಾ ಆಗುತ್ತದೆ. ವಿಜ್ಞಾನವು ಪ್ರಜ್ಞಾನವತ್ ವಿಷಯಾಗಮನದ ಪ್ರತೀಕ್ಷೆ ಮಾಡದೆ ಸ್ವಯಂ ವಿಷಯಗಳ ಪ್ರತಿ ಅನುಧಾವನ ಮಾಡುತ್ತಿರುತ್ತದೆ. ವಿಜ್ಞಾನವು ಪ್ರಜ್ಞಾನವತ್ ಪರಜ್ಯೋತಿರ್ಮ್ಮಯವಾಗದೆ ಸ್ವರ್ಜೋತಿರ್ಮ್ಮಯವಾಗಿರುತ್ತದೆ. ಇದೇ ವಿಜ್ಞಾನದ ಆಧಾರ, ಮನೋಮಯ ಕೋಶದ ಆಲಮ್ಭನ, ಆತ್ಮಾನನ್ದದ ಸಮಸಮ್ಬನ್ಧಿಯೇ ಈ ನಾಲ್ಕನೆಯ ವಿಜ್ಞಾನಮಯ ಕೋಶವು. ಮನೋಮಯ ಕೋಶದ ಪ್ರತಿಷ್ಠಾ ಆಗುವುದರಿಂದಲೇ ಇದನ್ನು ‘ಮನಃಶರೀರನೇತಾ’ ಎನ್ನಲಾಗಿದೆ. ಈ ವಿಜ್ಞಾನಮಯ ಆತ್ಮದಿಂದ ಆ ಮನೋಮಯ ಆತ್ಮವು ಪರಿಪೂರ್ಣವಾಗಿದೆ. ಯದವಚ್ಛೇದೇನ ಮನೋಮಯಕೋಶವು ವ್ಯಾಪ್ತವಾಗಿದ್ದರೆ, ತದವಚ್ಛೇದೇನೈವ ಈ ವಿಜ್ಞಾನಮಯ ಕೋಶವು ವ್ಯಾಪ್ತವಾಗಿದೆ. ಇದೂ ಕೂಡ ಮನೋಮಯ ಕೋಶದಂತೆಯೇ ಸಪ್ತಪುರುಷಪುರುಷಾತ್ಮಕವಾಗಿರುತ್ತಾ ಪುರುಷವಿಧ ಆಗಿದೆ. ಸೂಕ್ಷ್ಮದೃಷ್ಟಿಯಿಂದ ವಿಜ್ಞಾನಮಯ ಕೋಶದ ಪುರುಷವಿಧತಾವು ಮನೋಮಯಕೋಶದ ಪುರುಷವಿಧತಾದ ಪ್ರತಿಷ್ಠಾ ಆಗಿದೆ, ಹಾಗೇ ಸ್ಥೂಲ ದೃಷ್ಟಿಯಿಂದ ಮನೋಮಯಕೋಶದ ಪುರುಷವಿಧತಾವು ವಿಜ್ಞಾನಮಯ ಕೋಶದ ಪುರುಷವಿಧತಾದೊಂದಿಗೆ ಪ್ರತಿಷ್ಠಾ ಆಗಿದೆ.



ಶ್ರದ್ಧಾ, ಸತ್ಯ, ಋತ, ಯೋಗ, ಮಹಃ ಎಂಬ ೫ ಮಾನಸ ಭಾವಗಳೇ ಈ ವಿಜ್ಞಾನಮಯ ಕೋಶದ ಸ್ವರೂಪ ರಕ್ಷಕರೆಂದು ನಂಬಲಾಗಿದೆ. ಸೋಮಮಯೀ ಶ್ರದ್ಧಾ ಎಂಬುದರ ವಿವರಣೆಯು ಪ್ರಸ್ತುತ ನಿಬನ್ಧದ ಪೂರ್ವಪ್ರಕರಣಗಳಲ್ಲಿ ಅನೇಕಧಾ ವಿಶ್ಲೇಷಣೆ ಆಗಿದೆ – ಇದು ಮನೋಮಯೀ ಆಗಿದೆ. ಚಾನ್ದ್ರರಸವೇ ಶ್ರದ್ಧಾ ಆಗಿದೆ, ಇದೇ ಮನೋಮಯಕೋಶದ ಮೂಲ ಪ್ರತಿಷ್ಠಾ ಆಗಿದೆ. ಮನೋಮಯೀ ಇದೇ ಶ್ರದ್ಧೆಯು ಆಧ್ಯಾತ್ಮಿಕ ವಿಜ್ಞಾನಮಯ ಕೋಶದ ಮುಖ್ಯ ಪ್ರತಿಷ್ಠಾ ಆಗಿದೆ, ಹಾಗಾಗಿ ಇದನ್ನು ವಿಜ್ಞಾನಮಯಕೋಶದ ‘ಶಿರಃ’ ಸ್ಥಾನೀಯವೆಂದು ನಂಬಲಾಗುತ್ತದೆ. ಮನೋಗತ ಸ್ನೇಹಗುಣಕ ಭೃಗುರೂಪ ಸೋಮ ಭಾಗವೇ ಋತವಾಗಿದೆ, ಇದು ಉತ್ತರದಿಂದ ಚಲಿಸಿ ದಕ್ಷಿಣದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಹಾಗಾಗಿ ಈ ಸೋಮಾತ್ಮಕ ಮನೋಮಯ ಋತವನ್ನು ವಿಜ್ಞಾನಮಯಕೋಶದ ದಕ್ಷಿಣಪಕ್ಷ ಎಂದು ನಂಬಲಾಗಿದೆ. ಮನೋಗತ ತೇಜೋಗುಣಕ ಅಙ್ಗಿರಾತ್ಮಕ ಅಗ್ನಿ ಭಾಗವೇ ಸತ್ಯವು, ಇದು ದಕ್ಷಿಣದಿಂದ ಚಲಿಸಿ ಉತ್ತರದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಹಾಗಾಗಿ ಈ ಅಗ್ನ್ಯಾತ್ಮಕ ಮನೋಮಯ ಸತ್ಯಭಾಗವನ್ನು ವಿಜ್ಞಾನಮಯಕೋಶದ ಉತ್ತರಪಕ್ಷ ಎಂದು ನಂಬಬಹುದು. ಬುದ್ಧಿಯೋಗಲಕ್ಷಣ ಆತ್ಮಯೋಗವೇ ವಿಜ್ಞಾನಮಯಕೋಶದ ಮೂಲಾಧಾರವಾಗಿದೆ, ಹಾಗಾಗಿ ಇಂತಹಾ ನಿಷ್ಕಾಮ ಕರ್ಮ್ಮ ಲಕ್ಷಣ ಯೋಗವನ್ನು (ಸಮತ್ವಯೋಗ, ಬುದ್ಧಿಯೋಗ) ಈ ವಿಜ್ಞಾನಮಯಕೋಶದ ಆತ್ಮಾ ಎನ್ನಬಹುದು. ಚಾನ್ದ್ರಪ್ರಾಣವೇ ಮಹಃ ಆಗಿದೆ, ಅದರ ಸಮ್ಬನ್ಧದಿಂದಲೇ ಚನ್ದ್ರಮನು ‘ಮಹಾನ್’ ಎಂದು ಕರೆಯಲ್ಪಟ್ಟಿದ್ದಾನೆ –

ತದ್ಯದಸ್ಯ ತನ್ನಾಮಾಕರೋತ್-ಚನ್ದ್ರಮಾಃ-ತದ್ರೂಪಮಭವತ್ ಪ್ರಜಾಪತಿ ರ್ವೈ ಚನ್ದ್ರಮಾಃ, ಪ್ರಜಾಪತಿರ್ವೈ ಮಹಾನ್ (ಶತ ೬|೯|೩|೧೬)

ಎಲ್ಲಿಯವರೆಗೆ ಮಹಚ್ಚನ್ದ್ರಲಕ್ಷಣ ಮನೋಮಯಕೋಶವು ಆಧ್ಯಾತ್ಮದಲ್ಲಿ ಪ್ರತಿಷ್ಠಿತವಾಗಿರುತ್ತದೆಯೋ, ಅಲ್ಲಿಯವರೆಗೆ ವಿಜ್ಞಾನಮಯಕೋಶವು ಸ್ವಸ್ವರೂಪದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಹಾಗಾಗಿ ಮಾನಸ ಮಹರ್ಭಾವವನ್ನು ಅವಶ್ಯವಾಗಿ ಈ ವಿಜ್ಞಾನಮಯಕೋಶದ ಪುಚ್ಛ-ಪ್ರತಿಷ್ಠಾ ಎಂದು ನಂಬಲಾಗಿದೆ. ವಿಜ್ಞಾನಮಯಕೋಶದ ಇದೇ ಸ್ವರೂಪವನ್ನು ಲಕ್ಷ್ಯದಲ್ಲಿಟ್ಟುಕೊಂಡು ಶ್ರುತಿಯು ಇಂತೆಂದಿದೆ – 

೧ – “ತಸ್ಮಾದ್ವಾ ಏತಸ್ಮಾನ್‍ಮನೋಮಯಾದನ್ಯೋಽನ್ತರ ಆತ್ಮಾ ವಿಜ್ಞಾನಮಯಃ | ತೇನೈಷ ಪೂರ್ಣಃ | ಸ ವಾ ಏಷ ಪುರುಷವಿಧ ಏವ | ತಸ್ಯ ಪುರುಷವಿಧತಾಮನು-ಅಯಂ ಪುರುಷವಿಧಃ | ತಸ್ಯ ಶ್ರದ್ಧೈವ ಶಿರಃ, ಋತಂ ದಕ್ಷಿಣಃ ಪಕ್ಷಃ, ಸತ್ಯಮುತ್ತರಃ ಪಕ್ಷಃ, ಯೋಗ ಆತ್ಮಾ, ಮಹಃ ಪುಚ್ಛಂ ಪ್ರತಿಷ್ಠಾ |”

೨ – “ವಿಜ್ಞಾನಂ ಬ್ರಹ್ಮೇತಿ ವ್ಯಜಾನಾತ್ | ವಿಜ್ಞಾನಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯನ್ತೇ | ವಿಜ್ಞಾನೇನ ಜಾತಾನಿ ಜೀವನ್ತಿ, ವಿಜ್ಞಾನಂ ಪ್ರಯನ್ತ್ಯಭಿಸಂವಿಶನ್ತಿ |”

೩ – “ವಿಜ್ಞಾನಂ ಯಜ್ಞಂ ತನುತೇ ಕರ್ಮ್ಮಾಣಿ ತನುತೇಽಪಿ ಚ |
ವಿಜ್ಞಾನಂ ದೇವಾಃ ಸರ್ವೇ ಬ್ರಹ್ಮಜ್ಯೇಷ್ಠಮುಪಾಸತೇ ||
ಶರೀರೇ ಪಾಪ್ಮನೋ ಹಿತ್ವಾ ಸರ್ವಾನ್ ಕಾಮಾನ್ ಸಮಶ್ನುತೇ |
ತಸ್ಯೈಷ ಏವ ಶಾರೀರ ಆತ್ಮಾ, ಯಃ ಪೂರ್ವಸ್ಯ ||” (ತೈ.ಉ. ೨|೪-೫) 

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ

No comments:

Post a Comment