Saturday, 13 October 2018

ಆತ್ಮಗತಿಯ ಮೂಲಕ ಆತ್ಮಸ್ವರೂಪದ ಪರಿಚಯ – ಆನನ್ದಮಯ ಕೋಶ (೬)

೫. ಆನನ್ದಮಯಕೋಶಃ (ಆನನ್ದಃ) –

ಹೇಗೇಗೆ ವಿಜ್ಞಾನವು ವಿಕಸಿತವಾಗುತ್ತಾ ಹೋಗುತ್ತದೆಯೋ, ಹಾಗಾಗೆಯೇ ಆತ್ಮದಲ್ಲಿ ಪ್ರಸಾದಗುಣಲಕ್ಷಣವಾದ ಶಾನ್ತಾನನ್ದವು ವಿಕಸಿತವಾಗುತ್ತಾ ಹೋಗುತ್ತದೆ. ವಿಜ್ಞಾನ ವಿಕಾಸವೀ ಆನನ್ದ ವಿಕಾಸದ ಮೂಲ ಪ್ರತಿಷ್ಠಾ ಆಗಿದೆ. ಇದೇ ಆನನ್ದಭಾವವು ಶೇಷ ನಾಲ್ಕು ಕೋಶಗಳ ಮೂಲಾಧಾರವಾಗಿದೆ. ಆನನ್ದವು ಇಲ್ಲದಿದ್ದರೆ ಯಾವುದೇ ಕರ್ಮ್ಮದಲ್ಲಿ, ಯಾವುದೇ ಭೋಗದಲ್ಲಿ ಪ್ರವೃತ್ತಿಯು ಇರುವುದಿಲ್ಲ. ಈ ಆನನ್ದದದ ಅನ್ತಃ, ಬಹಿಃ ಭೇದದಿಂದ ಎರಡು ವಿವರ್ತ್ತಗಳಾಗುತ್ತವೆ. ವಿಷಯಸಮ್ಪರ್ಕದಿಂದ ಉತ್ಪನ್ನ ತಾತ್ಕಾಲಿಕ ಆನನ್ದವು ಬಹಿರಾನನ್ದವಾಗಿದೆ, ಇದೇ ವಿಷಯಾನನ್ದ ಆಗಿದೆ, ಇದನ್ನೇ ಸಮೃದ್ಧಾನನ್ದ ಎಂದೂ ಕರೆಯಲಾಗಿದೆ. ವಿಷಯದಿಂದ ಆನನ್ದ ಉತ್ಪನ್ನವಾಗುವುದಿಲ್ಲ, ಆದರೆ ಹೇಗೆ ಶಾನ್ತ ಸರೋವರದ ಶಾನ್ತ ನೀರಿಗೆ ಕಲ್ಲನ್ನು ಹಾಕಿದರೆ ಕ್ಷಣಮಾತ್ರಕ್ಕೆ ಒಂದು ಅಲೆಯು ಉತ್ಪನ್ನವಾಗುತ್ತದೆಯೋ ಹಾಗೆಯೇ ವಿಷಯಾಗಮನದಿಂದ ಆತ್ಮಾನನ್ದದಲ್ಲಿ ಅದೇ ರೀತಿಯಲ್ಲಿ ಕ್ಷಣಮಾತ್ರಕ್ಕೆ ಒಂದು ಲಹರಿಯು ಉತ್ಪನ್ನವಾಗುತ್ತದೆ. ಕ್ಷಣೋತ್ತರದಲ್ಲಿ ಈ ಲಹರಿಯು ಶಾನ್ತವೂ ಆಗುತ್ತದೆ. ಇದೇ ಕ್ಷಣಿಕಾನನ್ದ ಅಥವಾ ಮಾತ್ರಾನನ್ದ. ಇದೇ ಆನನ್ದವು ನಮಗೆಲ್ಲ ಅನುಭವಕ್ಕೆ ಬರುತ್ತಿರುತ್ತದೆ. ಎರಡನೆಯದಾದ ಆತ್ಮಾನನ್ದವು ಸ್ವಸ್ವರೂಪದಿಂದ ಸರ್ವಥಾ ಶಾನ್ತವಾಗಿರುತ್ತದೆ. ಉಚ್ಚಾವಚಭಾವಶೂನ್ಯ, ಏಕರಸ, ಪ್ರಸಾದಗುಣಾತ್ಮಕ, ಅನುಭವಾತೀತವಾದ ಈ ಆತ್ಮಾನನ್ದವೇ ಶಾಶ್ವತವಾದ ಆನನ್ದವಾಗಿದೆ. ಐನ್ದ್ರಿಯ ವಿಷಯಾನುಗತ ಮನೋಮಯಕೋಶಾಧಿಷ್ಠಿತ ಪ್ರಜ್ಞಾನಮನವು ಕ್ಷಣಿಕಾನನ್ದ ಪ್ರವೃತ್ತಿಯ ಕಾರಣವಾಗಿದೆ ಹಾಗು ವಿಜ್ಞಾನಮಯ ಕೋಶಾಧಿಷ್ಠಿತಾ ವಿಜ್ಞಾನ-ಬುದ್ಧಿಯು ಶಾಶ್ವತಾನನ್ದದ ವಿಕಾಸದ ಪ್ರತಿಷ್ಠಾ ಆಗಿದೆ. ವಿಜ್ಞಾನಮಯ ಕೋಶಾಧಾರಭೂತ ಇದೇ ಆತ್ಮಾನನ್ದಮಯವು ‘ವಿಜ್ಞಾನಶರೀರನೇತಾ’ ಎನ್ನಿಸಿಕೊಂಡಿದೆ. ಈ ಆನನ್ದಮಯ ಆತ್ಮಾದಿಂದ ಆ ವಿಜ್ಞಾನಮಯ ಆತ್ಮವು ಪರಿಪೂರ್ಣವಾಗಿದೆ. ಯದವಚ್ಛೇದೇನ ವಿಜ್ಞಾನಮಯಕೋಶವು ವ್ಯಾಪ್ತವಾಗಿದೆಯೋ, ತದವಚ್ಛೇದೇನೈವ ಈ ಆನನ್ದಮಯಕೋಶವು ವ್ಯಾಪ್ತವಾಗಿದೆ. ಸೂಕ್ಷ್ಮದೃಷ್ಟಿಯಿಂದ ವಿಜ್ಞಾನಮಯಕೋಶದ ಪುರುಷವಿಧತಾವಾದ ಆನನ್ದಮಯಕೋಶದ ಪುರುಷವಿಧತಾದ ಮೇಲೆ ಪ್ರತಿಷ್ಠಿತವಾಗಿದೆ, ಹಾಗೂ ಸ್ಥೂಲದೃಷ್ಟಿಯಲ್ಲಿ ಆನನ್ದಮಯಕೋಶದ ಪುರುಷವಿಧತಾವು ವಿಜ್ಞಾನಮಯಕೋಶದ ಪುರುಷವಿಧತಾದ ಮೇಲೆ ಪ್ರತಿಷ್ಠಿತವಾಗಿದೆ.

ಪ್ರಿಯ (ಆಮೋದ), ಮೋದ, ಪ್ರಮೋದ, ಆನನ್ದ, ಬ್ರಹ್ಮ ಎಂಬ ಪಞ್ಚ ವಿಜ್ಞಾನಭಾವಗಳೇ ಈ ಆನನದಮಯಕೋಶದ ಸ್ವರೂಪ ರಕ್ಷಕವೆಂದು ನಂಬಲಾಗಿದೆ. ಈ ಐದರಲ್ಲಿ ಮೊದಲ ನಾಲ್ಕು ಭಾವಗಳು ವ್ಯಕ್ತವಾದರೆ, ಐದನೆಯದಾದ ಬ್ರಹ್ಮಭಾವವು ಅವ್ಯಕ್ತವಾಗಿದೆ. ವಿಜ್ಞಾನಮಯಕೋಶಾನುಗತ ವಿಜ್ಞಾನಾತ್ಮಾದ (ಬುದ್ಧಿಯ) ತಾರತಮ್ಯದಿಂದ ಒಂದೇ ಆನನ್ದವು ನಾಲ್ಕು ವಿವರ್ತ್ತವಾಗುತ್ತದೆ. ಈ ನಾಲ್ಕನ್ನೂ ನಾವು ‘ಸಮೃದ್ಧಾನನ್ದ’ ಎನ್ನಬಹುದು, ಇದರ ವಿಷಯಾನನ್ದ ರೂಪವು ಪೂರ್ವದಲ್ಲಿ ಸ್ವಷ್ಟೀಕರಿಸಲಾಗಿದೆ. ಐದನೆಯದಾದ ಬ್ರಹಭಾವವೂ ಆನನ್ದವೇ ಆಗಿದೆ. ಆದರೆ ಇದು ಶಾನ್ತಿ-ಪ್ರತಿಷ್ಠಾಭಾವಾತ್ಮಕವಾಗುತ್ತಾ ವಿಷಯಾನನ್ದ ಮರ್ಯ್ಯಾದೆಯಿಂದ ಬಹಿರ್ಭೂತವಾಗಿದೆ. ಸಮೃದ್ಧಿಭಾವ ವಿರಹಿತವಾಗುವುದರಿಂದ ಸಮೃದ್ಧಿ ಸೂಚಕ (ಟುನದಿಸಮೃದ್ಧೌ) ಆನನ್ದ ಶಬ್ದದಿಂದ ಈ ಶಾನ್ತಾನನ್ದದ ಅಭಿನಯವಾಗದೆ ಕೇವಲ ಶಾನ್ತಿಪ್ರತಿಷ್ಠಾ-ಸೂಚಕ ‘ಬ್ರಹ್ಮ’ ಶಬ್ದದಿಂದಲೇ ಇದರ ಉಲ್ಲೇಖವಾಗಿದೆ. ಹೇಗೆ ಸೌರಹಿರಣ್ಯಮಯ ವಿಜ್ಞಾನಮಯ ಪುರುಷವು ಸ್ವವಿಭೂತಿಯ ಸಮ್ಬನ್ಧದಿಂದ ಸೂರ್ಯ್ಯ-ರೋದಸೀ ತ್ರಿಲೋಕೀ-ತದ್ಗತ ಅನ್ಯ ಪೃಥಿವ್ಯಾದಿ ಪದಾರ್ಥಗಳಲ್ಲಿ ವ್ಯಾಪ್ತವಾಗಿರುತ್ತದೆಯೋ ಹಾಗೆಯೇ ವಿಜ್ಞಾನ ಸಮ್ಬನ್ಧದಿಂದ ಆತ್ಮವು ಅದೇ ರೀತಿಯಲ್ಲಿ ಶರೀರ-ನೀರು-ಪುತ್ರ-ಅನುಚರ-ದ್ರವ್ಯ ಇತ್ಯಾದಿಗಳಲ್ಲಿ ವ್ಯಾಪ್ತವಾಗುತ್ತದೆ. ಇದೇ ಆಧಾರದ ಮೇಲೆ ‘ಯಾವದ್ವಿತ್ತಂ ತಾವದಾತ್ಮಾ’ ಎಂಬ ಸಿದ್ಧಾನ್ತವು ಪ್ರತಿಷ್ಠಿತವಾಗಿದೆ. ಈ ವಿಜ್ಞಾನಾತ್ಮವಿತ್ತದ ಅನ್ತರ್ವಿತ್ತ, ಬಹಿರ್ವಿತ್ತ ಎಂಬೆರಡು ವಿವರ್ತ್ತಗಳಿವೆ. ಮುಂದುವರೆದು ಪ್ರತಿಯೊಂದೂ ಗೌಣ, ಮುಖ್ಯ ಭೇದಗಳಿಂದ ಎರಡೆರಡು ವಿವರ್ತ್ತಗಳಾಗುತ್ತವೆ.

ಇನ್ದ್ರಿಯವರ್ಗ, ಪಞ್ಚಪ್ರಾಣ, ಪಞ್ಚಭೂತಾತ್ಮಕ ಶರೀರ ಇತ್ಯಾದಿ ಭೋಗಾಯತನ ಹಾಗೂ (ಅನ್ನಮಯಕೋಶದ) ಭೋಗಸಾಧನ ಪರ್ವಗಳು ಮುಖ್ಯ ಅನ್ತರ್ವಿತ್ತವಾಗಿವೆ ಹಾಗೂ ಪುತ್ರ-ಕನ್ಯಾ-ಸ್ತ್ರೀ-ಸ್ವಬನ್ಧುಬನ್ಧವ, ಎಂಬ ಗೌಣ ಅನ್ತರ್ವಿತ್ತವಾಗಿದೆ.

ಪಶು, ಅನುಚರ, ಆವಾಸಭೂಮಿ, ಕೋಶಸ್ಥದ್ರವ್ಯ, ಭೋಗ್ಯ ಅನ್ನಸಮ್ಪತ್ತಿ, ಇತ್ಯಾದಿ ಯಾವುದು ಇನ್ನೂ ಹೆಚ್ಚೆಚ್ಚು ಪರಿಗ್ರಹದಿಂದ ದೈನಿಕ ರೂಪದಲ್ಲಿ ಉಪಯೋಗವಾಗುತ್ತವೆಯೋ, ಅವು ಮುಖ್ಯವಾದ ಬಹಿರ್ವಿತ್ತವಾಗಿವೆ ಹಾಗೂ ಉದ್ಯಾನ, ಸರೋವರ, ಮಾರ್ಗ, ಪರಿಚಿತ ಸಹಯೋಗೀ ಇತ್ಯಾದಿ ಪರಿಗ್ರಹವು, ಹೇಗೇಗೆ ಎಂದೆಂದು ಬೇಕಾಗುತ್ತದೆಯೋ ಹಾಗಾಗಿ ಅಂದಂದು ಮಾತ್ರ ಉಪಯೋಗಕ್ಕೆ ಬರುತ್ತವೆಯೋ, ಅವು ಗೌಣ ಬಹಿರ್ವಿತ್ತವಾಗಿವೆ.


ವಿಜ್ಞಾನಾತ್ಮ ವಿಭೂತಿಗೆ ಸಮ್ಬನ್ಧಿತ ಈ ನಾಲ್ಕು ಅನ್ತರ್ಬಹಿರ್ವಿತ್ತಗಳೇ ಪ್ರಿಯಾದಿ ನಾಲ್ಕು ವಿಜ್ಞಾನ ಭಾವಗಳ ಪ್ರವರ್ತ್ತಕವಾಗುತ್ತವೆ. ಇವುಗಳಲ್ಲಿ ಮುಖ್ಯ ಅನ್ತರ್ವಿತ್ತದ ‘ಪ್ರಿಯ’ ಭಾವದೊಂದಿಗೆ ಸಮ್ಬನ್ಧವಿದೆ, ಹಾಗಾಗಿ ಇದನ್ನು ‘ಶಿರಃ’ ಎಂದು ಹೇಳಬಹುದು. ಗೌಣ ಅನ್ತರ್ವಿತ್ತದ ‘ಆನನ್ದ’ ಭಾವದೊಂದಿಗೆ ಸಮ್ಬನ್ಧವಿದೆ, ಹಾಗಾಗಿ ಇದನ್ನು ‘ಆತ್ಮಾ’ ಎಂದೂ ಹೇಳಬಹುದು. ಮುಖ್ಯ ಬಹಿರ್ವಿತ್ತದ ‘ಪ್ರಮೋದ’ದೊಂದಿಗೆ ಸಮ್ಬನ್ಧವಿದೆ, ಎಂಬುದೇ ಉತ್ತರಪಕ್ಷವು. ಗೌಣ ಬಹಿರ್ವಿತ್ತದ ಮೋದದೊಂದಿಗೆ ಸಮ್ಬನ್ಧವಿದೆ, ಎಂಬುದೇ ದಕ್ಷಿಣಪಕ್ಷವು.

ಇನ್ದ್ರಿಯವರ್ಗಾದಿ ಸಮಷ್ಟಿರೂಪ ಅನ್ನಮಯ ಕೋಶಾತ್ಮಕ ಮುಖ್ಯ ಅನ್ತರ್ವಿತ್ತವೇ ಆತ್ಮಪೂರ್ಣತೆಯ ಪ್ರತಿಷ್ಠಾ ಆಗಿದೆ, ಹಾಗಾಗಿ ‘ಪ್ರಿಯ’ (ಆಮೋದ) ಎಂಬ ಅನ್ವರ್ಥವನ್ನು ಪಡೆಯುತ್ತದೆ. ಪುತ್ರ-ಕನ್ಯಾದಿ ಗೌಣ ಅನ್ತರ್ವಿತ್ತವೇ ಆಧ್ಯಾತ್ಮ ಸಂಸ್ಥಾದ ಲೌಕಿಕ ಸಮೃದ್ಧಿಯಾಗಿದೆ, ಹಾಗಾಗಿ ಇದನ್ನು ಆನನ್ದ ಎಂದು ಕರೆಯುವುದು ಅನ್ವರ್ಥವಾಗಿದೆ. ಪಶ್ವನುಚರಾದಿ ಮುಖ್ಯ ಬಹಿರ್ವಿತ್ತಗಳೇ ವಿಶೇಷ ಸಾಧಕವಾಗುತ್ತಾ ಪ್ರಕೃಷ್ಟ-ಹರ್ಷಲಕ್ಷಣ ಪ್ರಮೋದಭಾವದ ಸಮರ್ಥಕವಾಗುತ್ತವೆ ಹಾಗೂ ಉದ್ಯಾನ-ಸರೋವರಾದಿ ಗೌಣ ಬಹಿರ್ವಿತ್ತಗಳು ಸಾಮಾನ್ಯತಃ ಹರ್ಷದ (ಆತ್ಮಪ್ರಸಾದದ) ಕಾರಣವಾಗುತ್ತಾ ಮೋದಾತ್ಮಕವಾಗುತ್ತಿರುತ್ತವೆ. ನಾಲ್ಕರಲ್ಲೂ ಮುಖ್ಯವಿತ್ತ ಮುಖ್ಯಲಕ್ಷಣ (ಅನ್ನಮಯಕೋಶ ಲಕ್ಷಣ) ಅನ್ತರ್ವಿತ್ತವಾಗಿದೆ, ಹಾಗಾಗಿ ಇದನ್ನು ಆನನ್ದಮಯ ಪುರುಷದ ಶಿರ ಎನ್ನಬಹುದು. ಗೌಣಬಹಿರ್ವಿತ್ತವೇ ಆತ್ಮಾನನ್ದದ ಇಹಲೋಕದ ವಿಭೂತಿಯ ಪರಿಚಾಯಕವಾಗಿದೆ, ಇದೇ ಇದರ ಪ್ರಜಾಪತಿತ್ವವು. ಈ ಪ್ರಾಜಾಪತ್ಯ ಭಾವಾಪೇಕ್ಷಯಿಂದ ಗೌಣ-ಅನ್ತರ್ವಿತ್ತಾನುಗತ ಆನನ್ದವನ್ನು ಆನನ್ದಮಯ ಕೋಶದ ಆತ್ಮಾ ಎನ್ನಬಹುದು. ಮುಖ್ಯ ಬಹಿರ್ವಿತ್ತವು ವಿಶೇಷರೂಪದಿಂದ ಭೋಗ್ಯವಾಗಿದೆ, ಭೋಗ್ಯವೇ ಅನ್ನವಾಗಿದೆ, ಇದೇ ಸೋಮವಾಗಿದೆ, ಇದು ಉತ್ತರದಿಕ್ಸ್ಥವಾಗಿದೆ. ಇದೇ ಸಮ್ಬನ್ಧದಿಂದ ತದ್ರೂಪ ಪ್ರಮೋದವನ್ನು ಆನನ್ದಮಯಕೋಶದ ಉತ್ತರಪಕ್ಷ ಎಂದು ನಂಬಬಹುದು. ಗೌಣ ಬಹಿರ್ವಿತ್ತವು ಸಾಮಾನ್ಯ ಭೋಗ್ಯವಾಗಿದೆ, ಇದರೊಂದಿಗೆ ಅನ್ಯ ಅನ್ನಾದಗಳೊಂದಿಗೂ ಸಮ್ಬನ್ಧವಿರುತ್ತದೆ. ಇದೇ ಅನ್ನಾದಾಗ್ನಿಯ ಸಮ್ಬನ್ಧದಿಂದ ತದನುಗತ ದಕ್ಷಿಣಾ ದಿಕ್ಕಿನ ಅಪೇಕ್ಷೆಯಿಂದ ಗೌಣ ಬಹಿರ್ವಿತ್ತ ಜನಿತ ಮೋದವನ್ನು ಆನನ್ದಮಯ ಪುರುಷದ ದಕ್ಷಿಣಪಕ್ಷ ಎಂದು ನಂಬಬಹುದು. ಐದನೆಯದಾದ ಶಾನ್ತಿ-ಪ್ರತಿಷ್ಠಾ ಲಕ್ಷಣ ನಿತ್ಯ ವಿಜ್ಞಾನಾನದ ರಸೈಕಮೂರ್ತ್ತಿ ಬ್ರಹ್ಮಭಾವವೇ ಈ ಆನನ್ದಮಯದ ಪುಚ್ಛಪ್ರತಿಷ್ಠಾ ಆಗಿದೆ. ಆನನ್ದಮಯಕೋಶದ ಇದೇ ಸ್ವರೂಪದ ಸ್ಪಷ್ಟೀಕರಣವು  ನಿಮ್ನಲಿಖಿತ ಶಬ್ದಗಳಲ್ಲಿದೆ –

೧ – “ತಸ್ಮಾದ್ವಾ ಏತಸ್ಮಾದ್ವಿಜ್ಞಾನಮಯಾದನ್ಯೋಽನ್ತರ ಆತ್ಮಾಽಽನನ್ದಮಯಃ | ತೇನೈಷಪೂರ್ಣಃ | ಸ ವಾ ಏಷ ಪುರುಷವಿಧ ಏವ | ತಸ್ಯ ಪುರುಷವಿಧತಾಮನ್ವಯಂ ಪುರುಷವಿಧಃ | ತಸ್ಯ ಪ್ರಿಯಮೇವ ಶಿರಃ, ಮೋದೋ ದಕ್ಷಿಣಃ ಪಕ್ಷಃ, ಪ್ರಮೋದ ಉತ್ತರಃ ಪಕ್ಷಃ, ಆನನ್ದ ಆತ್ಮಾ, ಬ್ರಹ್ಮ ಪುಚ್ಛಂ ಪ್ರತಿಷ್ಠಾ |”

೨ – “ಆನನ್ದೋ ಬ್ರಹ್ಮೇತಿ ವ್ಯಜಾನಾತ್ | ಆನನ್ದಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯನ್ತೇ, ಆನನ್ದೇನ ಜಾತಾನಿ ಜೀವನ್ತಿ, ಆನನ್ದಂ ಪ್ರಯನ್ತ್ಯಭಿಸಂವಿಶನ್ತಿ | ಸೈಷಾ ಭಾರ್ಗವೀ ವಾರುಣೀ ವಿಧ್ಯಾ | ಪರಮೇ ವ್ಯೋಮನ್ ಪ್ರತಿಷ್ಠಿತಾ | ಯ ಏವಂ ವೇದ, ಪ್ರತಿತಿಷ್ಠತಿ, ಅನ್ನವಾನನ್ನಾದೋ ಭವತಿ, ಮಹಾನ್ ಭವತಿ ಪ್ರಜಯಾ, ಪಶುಭಿರ್ಬ್ರಹ್ಮವರ್ಚಸೇನ | ಮಹಾನ್ ಕೀರ್ತ್ಯಾ |”

೩ – ಅಸನ್ನೇವ ಸ ಭವತಿ, ಅಸದ್ ಬ್ರಹ್ಮೇತಿ ವೇದ ಚೇತ್ |
ಅಸ್ತಿ ಬ್ರಹ್ಮೇತಿ ಚೇದ್ವೇದ, ಸನ್ತಮೇನ ತತೋ ವಿದುಃ ||
ತಸ್ಯೈಷ ಏವ ಶಾರೀರಾತ್ಮಾ, ಯಃ ಪೂರ್ವಸ್ಯ |”

ಇಲ್ಲಿಯ ತನಕ ಪಂಚಕೋಶಗಳ ಸ್ಥೂಲ ಪರಿಚಯ ಮಾಡಿಕೊಡಲಾಗಿದೆ. ಇಷ್ಟೇ ಅಲ್ಲ, ಇದಕ್ಕೆ ಇನ್ನೂ ವಿಶದವಾದ ವೈಜ್ಞಾನಿಕ ವಿವೇಚನೆಯೂ ಇದೆ. ಅದನ್ನು ಜಿಜ್ಞಾಸುಗಳು ವಿಶದೀಕರಿಸಿಕೊಳ್ಳಲು ವಿನಂತಿ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

No comments:

Post a comment